*|ಬಿಡದೆ ರಮಾಕಳತ್ರನ ದಾಸ ವರ್ಗಕೆ ನಮಿಪೆ ಅನವರತ||* ಶ್ರೀ ಜಂಬುಖಂಡಿ ವಾದಿರಾಜಾಚಾರ್ಯರ ಆರಾಧನ ಪರ್ವ ದಿನ.(ಶ್ರಾವಣ ಕೃಷ್ಣ ತ್ರಯೋದಶಿ)

*|ಬಿಡದೆ ರಮಾಕಳತ್ರನ ದಾಸ ವರ್ಗಕೆ ನಮಿಪೆ ಅನವರತ||*
 ಇಂದು ಶ್ರೀ ಜಂಬುಖಂಡಿ ವಾದಿರಾಜಾಚಾರ್ಯರ
 ಆರಾಧನ ಪರ್ವ ದಿನ.(ಶ್ರಾವಣ ಕೃಷ್ಣ ತ್ರಯೋದಶಿ)
 ✍️ಶ್ರೀ ಜಂಬುಖಂಡಿ ವಾದಿರಾಜಾಚಾರ್ಯರು ಸೋಂದಾ ಕ್ಷೇತ್ರದಲ್ಲಿ  ಒಮ್ಮೆವಾಸ್ತವ್ಯ  ಮಾಡಿದ್ದಾರೆ.
ಅಂದು ಏಕಾದಶಿ. ರಾತ್ರಿಯಲ್ಲಿ ಜಾಗರಣೆಯ ನಿಮಿತ್ತವಾಗಿ 
ಶ್ರೀವಾದಿರಾಜ ತೀರ್ಥ ಗುರುಗಳ ಸನ್ನಿಧಿಯಲ್ಲಿ ಸಕಲ ಭಕ್ತರು ನೆರೆದಿದ್ದಾರೆ.
ಭಗವಂತನ ಮಹಿಮೆಯನ್ನು ಸಾರುವ ಶ್ರೀ ಮದ್ಭಾಗವತದ ಕಥಾ ಪ್ರಸಂಗ ನಡೆದಿದೆ.
ಅವಾಗ್ಗೆ ಅಲ್ಲಿ ಪೀಠದಲ್ಲಿ ಇದ್ದ ಶ್ರೀಗಳ ಆದಿಯಾಗಿ ಸಹ 
ಎಲ್ಲಾರು ಪಾಲ್ಗೊಂಡಿದ್ದಾರೆ.
ಒಮ್ಮೆಗೆ ಆರ್ತಧ್ವನಿ,ಜೋರಾಗಿ ಅಳುವದು ಕೇಳಿಸಿತು.
ಸೋಂದಾ ಕ್ಷೇತ್ರಕ್ಕೆ ಬಂದ ಒಬ್ಬ ಭಕ್ತನಿಗೆ ಹಾವು ಕಚ್ಚಿ ಆ ವ್ಯಕ್ತಿ ಮೃತನಾಗಿದ್ದಾನೆ.ಅವನ ಬಂಧುಗಳು ಗೋಳಾಡುತ್ತಾ ಇದ್ದಾರೆ.
*ತಕ್ಷಣ ಆಚಾರ್ಯರು ಆ ಧ್ವನಿ ಯನ್ನು ಕೇಳಿ ಕೂಡಲೇ ಆ ವ್ಯಕ್ತಿಯ ಸಮೀಪಿಸಿ ವಸ್ತ್ರ ಚ್ಛಾದನ ಮಾಡಿದರು.*
ನೋಡುವವರಿಗೆಲ್ಲ ಆಶ್ಚರ್ಯ!!
*ಶ್ರೀ ಜಂಬುಖಂಡಿ ವಾದಿರಾಜ ಆಚಾರ್ಯರು ಎದ್ದು ನಿಂತು ಕೈಯಲ್ಲಿ ತುಳಸಿ ದಳವನ್ನು ಹಿಡಿದು ಸಮಗ್ರ ಶ್ರೀ ಮದ್ಭಾಗವತ ಪಾರಾಯಣ ವನ್ನು ಮುಂಜಾನೆಯವರೆಗೆ ಮುಖೋದ್ಗತವಾಗಿ ಪಠಿಸಿದರು.*
*ಶ್ರೀ ವಾದಿರಾಜ ಗುರುಗಳ ಸನ್ನಿಧಿಯಲ್ಲಿ ಆ ತುಳಸಿ ದಳವನ್ನು ಸಮರ್ಪಿಸಿ ಅವರ ಅಂತರ್ಯಾಮಿಯಾಗಿ ಇರುವ ಮಧ್ವ ವಲ್ಲಭನಾದ ಆ  ಸಿರಿ ಹಯಗ್ರೀವ ದೇವನನ್ನು ಪ್ರಾರ್ಥನೆ ಮಾಡಿ ಆ ಭಕ್ತನಿಗೆ ಜೀವದಾನ ಮಾಡೆಂದು* ಪ್ರಾರ್ಥನೆ ಮಾಡಿದರು.
*ಶ್ರೀಪ್ರಾಣಪತಿಯ ಭಕ್ತರಾದ ಆಚಾರ್ಯರು ಮಾಡಿದ ಪ್ರಾರ್ಥನೆ ವ್ಯರ್ಥ ವಾಗಲಿಲ್ಲ.*
*ಮಲಗಿರುವ ವ್ಯಕ್ತಿ ತಕ್ಷಣ ಹೇಗೆ ಏಳುವನೋ ಹಾಗೇ ಆ ಭಕ್ತ ನು ಎದ್ದು ಬಂದು ಎಲ್ಲರಿಗು ನಮಸ್ಕರಿಸಿ ದನು.*
ಆಚಾರ್ಯರ ಪಾದಕ್ಕೆ ಎರಗಿ ಧನ್ಯನಾದನು.
*ಇದೆಲ್ಲವು  ಶ್ರೀ  ಹಯವದನನ ಶ್ರೀ ವಾದಿರಾಜ ತೀರ್ಥ ಗುರುಗಳ ಹಾಗು ಶ್ರೀಭೂತರಾಜರ ಅನುಗ್ರಹದಿಂದ ಆಗಿದ್ದು..* *ಬಹಳ ವಿಶೇಷ ಅಂತ ಹೇಳಿ* ಅವರನ್ನು ಆಶೀರ್ವಾದ ಮಾಡುತ್ತಾರೆ.
*ಶ್ರೀ ವಾದಿರಾಜ ತೀರ್ಥ ಗುರುಗಳಲ್ಲಿ ಅನನ್ಯ ಭಕ್ತಿ ಇಟ್ಟವರಿವರು.*
ಪ್ರಾತಃ ಕಾಲ ಇಂತಹ ಮಹನೀಯರ ಸ್ಮರಣೆ ನಮ್ಮ ಜೀವನ ಧನ್ಯ.
ಇಂತಹ ಭಾಗವತರ ಅನುಗ್ರಹ ಸದಾ ನಮ್ಮೆಲ್ಲರ ಮೇಲಿರಲಿ ಎಂದೇ ಅವರಲ್ಲಿ ಪ್ರಾರ್ಥನೆ.
🙏ಶ್ರೀ ಕೃಷ್ಣಾರ್ಪಣ ಮಸ್ತು🙏
*ಕಂಡು ಬಹಳ ಧನ್ಯನಾದೆನು ಸಿರಿ ಮಂಗಳಾತ್ಮರ*|
*ಕಂಡು ಬಹಳ‌ಧನ್ಯನಾದೆ ಪುಂಡರೀಕಾಕ್ಷ ತೋಂಡರ ಪಾದ*||
........
*ಕೋವಿದಾಗ್ರಣಿಯು ಆದ ಶ್ರೀ ವಾದಿರಾಜಚಾರ್ಯರನ್ನ*||
..
*ಶ್ರೀಶ ಪ್ರಾಣೇಶವಿಠ್ಠಲ ಹೃದಯಾಕಾಶದಲ್ಲಿ ಸಿರಿಯು ಸಹಿತ*|
*ವಾಸವಾಗಿ ತೋರಿ ಪೊಳೆವ ಭಾಸುರ ಕೀರ್ತಿಲಿ ಮೆರೆವರನ್ನ*||
🙏ಶ್ರೀ ಕಪಿಲಾಯ ನಮಃ🙏

Post a Comment

Previous Post Next Post