ಬೆಂಗಳೂರು: ಅಮೆಜಾನ್ ಇ-ಕಾಮರ್ಸ್ ಸಂಸ್ಥೆಯು ರಾಧಾ-ಕೃಷ್ಣ ಅವರ 'ಅಶ್ಲೀಲ' ವರ್ಣಚಿತ್ರಗಳನ್ನು ಮಾರಾಟ ಮಾಡುತ್ತಿದೆ ಎಂದು ಹಿಂದೂ ಜನಜಾಗೃತಿ ಸಮಿತಿ ಶುಕ್ರವಾರ ಆರೋಪಿಸಿದೆ. ಈ ಹಿನ್ನೆಲೆಯಲ್ಲಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ಅಮೆಜಾನ್ ಅನ್ನು ಬಹಿಷ್ಕಾರ ಮಾಡಬೇಕೆಂಬ ಟ್ರೆಂಡಿಂಗ್ ಶುರು ಮಾಡಲಾಗಿದೆ.
ಅಮೆಜಾನ್ ಇ-ಕಾಮರ್ಸ್ ಸಂಸ್ಥೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಬೆಂಗಳೂರಿನ ಸುಬ್ರಮಣ್ಯ ನಗರ ಪೊಲೀಸ್ ಠಾಣೆಗೆ ಮನವಿ ಪತ್ರವನ್ನು ಸಲ್ಲಿಸಲಾಗಿದೆ. ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಈ ವರ್ಣಚಿತ್ರವೂ ಎಕ್ಸೋಟಿಕ್ ಇಂಡಿಯಾದ ವೆಬ್ ಸೈಟ್ ನಲ್ಲಿ ಲಭ್ಯವಿದೆ ಎಂದು ಸಂಸ್ಥೆ ಹೇಳಿಕೊಂಡಿದೆ.
Post a Comment