ಹಿಂದುಗಳ ಧಾರ್ಮಿಕ ಭಾವನೆಗೆ ಧಕ್ಕೆ ತಂದಿರುವ ಆರೋಪಕ್ಕೆ ಒಳಗಾಗಿರುವ ಸ್ಟ್ಯಾಂಡಪ್ ಕಾಮಿಡಿಯನ್ ಮುನಾವರ್ ಫಾರೂಕಿಗೆ ಮುಖಭಂಗ, jp ನಗರ್ show ರದ್ದು

ಬೆಂಗಳೂರು: ಹಿಂದುಗಳ ಧಾರ್ಮಿಕ ಭಾವನೆಗೆ ಧಕ್ಕೆ ತಂದಿರುವ ಆರೋಪಕ್ಕೆ ಒಳಗಾಗಿರುವ ಸ್ಟ್ಯಾಂಡಪ್ ಕಾಮಿಡಿಯನ್ ಮುನಾವರ್ ಫಾರೂಕಿಗೆ ಮುಖಭಂಗ ಆದಂತಾಗಿದೆ. ತೆಲಂಗಾಣದಲ್ಲಿ ಈತನ ಶೋಗೆ ಏರ್ಪಾಟಾಗಿದ್ದ ವೇದಿಕೆಗೆ ಶಾಸಕರೊಬ್ಬರು ಬೆಂಕಿ ಇಡಲು ಹೋಗಿದ್ದರೆ, ಇತ್ತ ಬೆಂಗಳೂರಿನಲ್ಲಿ ಇಂದು ನಡೆಯಲಿದ್ದ ಈತನ ಶೋ ರದ್ದುಗೊಂಡಿದೆ.

ತೆಲಂಗಾಣದ ಶಿಲ್ಪಕಲಾ ವೇದಿಕೆಯಲ್ಲಿ ಸ್ಟ್ಯಾಂಡಪ್​ ಕಾಮಿಡಿಯನ್​ ಮುನಾವರ್ ಫಾರೂಕಿ ಶನಿವಾರ ಕಾಮಿಡಿ ಪ್ರದರ್ಶನ ನೀಡಲಿದ್ದು, ಇಂದು ಆ ವೇದಿಕೆಗೆ ಬೆಂಕಿ ಇಡುವುದಾಗಿ ಹೇಳಿ ತೆಲಂಗಾಣದ ಘೋಷಾಮಹಲ್ ಬಿಜೆಪಿ ಶಾಸಕ ರಾಜಾ ಸಿಂಗ್ ಹೊರಟಿದ್ದರು. ಈ ಸಂದರ್ಭದಲ್ಲಿ ಹೈದರಾಬಾದ್ ಪೊಲೀಸರು ಶಾಸಕರನ್ನು ವಶಕ್ಕೆ ಪಡೆದಿದ್ದಾರೆ.

ಮತ್ತೊಂದೆಡೆ ಬೆಂಗಳೂರಿನ ಜೆ.ಪಿ.ನಗರದ ಎಂಎಲ್​ಆರ್​ ಕನ್ವೆನ್ಷನ್​ ಹಾಲ್​ನಲ್ಲಿ ಇಂದು ಮುನಾವರ್ ಫಾರೂಕಿ ಕಾರ್ಯಕ್ರಮ ಆಯೋಜನೆಗೊಂಡಿದ್ದು, ಬುಕ್​ ಮೈಶೋನಲ್ಲಿ ಇದರ ಆನ್​ಲೈನ್​ ಟಿಕೆಟ್ ಬುಕಿಂಗ್ ನಡೆಯುತ್ತಿತ್ತು. ಇಂದು ಮಧ್ಯಾಹ್ನ 3 ಗಂಟೆಗೆ ಇದ್ದ ಈ ಕಾರ್ಯಕ್ರಮ ಅದಾಗಲೇ ರದ್ದುಗೊಂಡಿದೆ. ಈ ಶೋ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ವಿರೋಧ ಕೂಡ ವ್ಯಕ್ತವಾಗಿತ್ತು.

ಕಾಮಿಡಿಯನ್​ ಮುನಾವರ್ ಫಾರೂಕಿಯ ಕಾರ್ಯಕ್ರಮಕ್ಕೆ ಅನುಮತಿ ಪಡೆದಿರಲಿಲ್ಲ. ಹೀಗಾಗಿ ಅದನ್ನು ರದ್ದು ಮಾಡಲಾಗಿದೆ ಎಂದು ಬೆಂಗಳೂರಿನ ದಕ್ಷಿಣ ವಿಭಾಗದ ಡಿಸಿಪಿ ಕೃಷ್ಣಕಾಂತ್ ತಿಳಿಸಿದ್ದಾರೆ.

Post a Comment

Previous Post Next Post