[26/08, 11:43 AM] Kpcc official: #BJPBrashtotsava ಧಾರಾವಾಹಿಯು ದಿನಕ್ಕೊಂದು ಎಪಿಸೋಡ್‌ನಂತೆ ಹೊರಬರುತ್ತಿದೆ.
ಕೊಡಗಿನಲ್ಲಿ ಬಿಜೆಪಿಯ ಅಕ್ರಮದ ಮೊಟ್ಟೆ ಒಡೆದು ಭ್ರಷ್ಟಾಚಾರದ 'ಮರಿ' ಹೊರಬಂದಿದೆ.
ಅಧಿಕಾರಿ ಲಂಚ ಪಡೆದು ಸಿಕ್ಕಿಬಿದ್ದರು, ಶಾಸಕ ಬೋಪಯ್ಯ ಆ ಅಧಿಕಾರಿಯಿಂದಲೇ ಲಂಚ ಪಡೆದರು!
ಭ್ರಷ್ಟಾಚಾರದ ಆಟ ಚೆನ್ನಾಗಿದೆ!
@BSBommai ಅವರೇ, ನಿಮ್ಮ ಪಾರದರ್ಶಕ ತನಿಖೆ ಯಾವಾಗ?
[26/08, 12:19 PM] Kpcc official: ಗೃಹಸಚಿವ @JnanendraAraga ಸೇರಿ ವಿವಿಐಪಿಗಳಿಗೆ BDA ನಿವೇಶನ ನೀಡಿಕೆ ಅಕ್ರಮ ಎಂದು ಸುಪ್ರೀಂ ಕೋರ್ಟ್ ಗುಡುಗಿದೆ.
ಆಯುಕ್ತರಿಗೆ ವರ್ಗಾವಣೆ ಆದೇಶವಾಗಿದೆ.
ಗೃಹ ಸಚಿವರಿಗೆ?
ಅಭಿವೃದ್ಧಿಯಲ್ಲಿ ಬೆಂಗಳೂರನ್ನು 'ಜಾಗತಿಕ ನಗರ' ಮಾಡಬೇಕಿದ್ದ BDA, ಬಿಜೆಪಿ ಆಡಳಿತದಲ್ಲಿ 'ಭ್ರಷ್ಟರ ಡೆವೆಲಪ್ಮೆಂಟ್ ಅಥಾರಿಟಿ' ಆಗಿದೆ.
#BjpBrashtotsava
[26/08, 2:23 PM] Kpcc official: ಶ್ರೀ ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಮೈಸೂರಿನ ಹುಣಸೂರಿಗೆ ಶುಕ್ರವಾರ ಆಗಮಿಸಿದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರಿಗೆ ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳಿಂದ ಅದ್ದೂರಿ ಸ್ವಾಗತ...
[26/08, 2:23 PM] Kpcc official: *ಡಿ.ಕೆ. ಶಿವಕುಮಾರ್ ಅವರು ಬೆಂಗಳೂರಿನಲ್ಲಿ ಶುಕ್ರವಾರ ನೀಡಿದ ಮಾಧ್ಯಮ ಪ್ರತಿಕ್ರಿಯೆ:*
‘ರಣದೀಪ್ ಸಿಂಗ್ ಸುರ್ಜೆವಾಲ ಅವರು ರಾಜ್ಯಕ್ಕೆ ಆಗಮಿಸುತ್ತಿದ್ದು, ಭಾರತ ಜೋಡೋ ಪಾದಯಾತ್ರೆ ಸಭೆಗಳು ಇದೇ ತಿಂಗಳು 28, 29 ರಂದು ನಡೆಯಲಿವೆ. ಶಾಸಕಾಂಗ ಸಭೆ ಹಾಗೂ ಪದಾಧಿಕಾರಿಗಳ ಸಭೆ ಮಾಡುತ್ತೇವೆ. ಈ ಸಭೆಯಲ್ಲಿ ಯಾರಿಗೆ ಏನೆಲ್ಲಾ ಜವಾಬ್ದಾರಿ ವಹಿಸಬೇಕು, ಯಾವ ರೀತಿ ಯಾತ್ರೆ ಮಾಡಬೇಕು, ಅಧಿವೇಶನದ ನಡುವೆ ಇದರ ತಯಾರಿ ಬಗ್ಗೆ ಚರ್ಚೆ ಮಾಡುತ್ತೇವೆ. ನಂತರ ಸೆ.1 ರಂದು ದಿಗ್ವಿಜಯ್ ಸಿಂಗ್ ಹಾಗೂ ಜೈರಾಮ್ ರಮೇಶ್ ಅವರ ಜತೆ ಬ್ಲಾಕ್ ಅಧ್ಯಕ್ಷರು, ಪದಾಧಿಕಾರಿಗಳ ಜತೆ ಸಭೆ ಮಾಡಲಿದ್ದೇವೆ.’
ಬಿಜೆಪಿಯವರು ಗಣೇಶೋತ್ಸವದ ಹೆಸರಲ್ಲಿ ಸಾರ್ವಕರ್ ಅವರ ಫೋಟೋ ಹಂಚುತ್ತಿರುವ ವಿಚಾರವಾಗಿ ಕೇಳಿದ ಪ್ರಶ್ನೆಗೆ, ‘ಈ ರಾಜ್ಯದಲ್ಲಿ ಬಿಜೆಪಿಗೆ ಅಭಿವೃದ್ಧಿ ಮಂತ್ರ ಹೇಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಗಲಾಟೆ ಮಾಡಿಸಿ, ಸಮಾಜವನ್ನು ಒಡೆಯಲು ಮುಂದಾಗಿದ್ದಾರೆ. ವಿಘ್ನಕ್ಕೆ ನಾಯಕ ವಿನಾಯಕ. ವಿಘ್ನ ನಿವಾರಕನಿಗೂ ಸಾರ್ವಕರ್ ಗೂ ಏನು ಸಂಬಂಧ? ಅವರ ಪಕ್ಷ, ಅವರ ವಿಚಾರಧಾರೆಗಳನ್ನು ಅವರೇ ಹಾಳು ಮಾಡಿಕೊಳ್ಳುತ್ತಿದ್ದಾರೆ.’
ಬಿಡಿಎ ವಿಚಾರವಾಗಿ ಪತ್ರಿಕೆಗಳಲ್ಲಿ ನೋಡಿದ್ದೇನೆ. ರಾಜಕೀಯ ಒತ್ತಡ ಇಲ್ಲದೆ ಯಾವುದೇ ಅಧಿಕಾರಿ ಏನನ್ನೂ ಮಾಡಲು ಸಾಧ್ಯವಿಲ್ಲ. ಇದರ ಫಲಾನುಭವಿಗಳು ಮೊದಲು ನೈತಿಕ ಹೊಣೆ ಹೋರಬೇಕು. ಕೂಡಲೇ ಫಲಾನುಭವಿಗಳು, ಸರ್ಕಾರ ದುರುಪಯೋಗ ಮಾಡಿಕೊಂಡಿರುವವರು ರಾಜೀನಾಮೆ ನೀಡಬೇಕು. ಬೊಮ್ಮಾಯಿ ಅವರು ಈ ಸಮಸ್ಯೆ ದೊಡ್ಡದಾಗಿ ಮಾಡಿಕೊಳ್ಳುವ ಮುನ್ನ ಫಲಾನುಭವಿಗಳನ್ನು ಸಂಪುಟದಿಂದ ಕೈ ಬಿಡುವುದು ಸೂಕ್ತ.
ಸೆ. 12 ರಿಂದ ಅಧಿವೇಶನ ಕರೆದಿದ್ದು, ನಿಮ್ಮ ಪಕ್ಷದ ಕಾರ್ಯತಂತ್ರ ಏನು ಎಂದು ಕೇಳಿದಾಗ, ‘ಆ ಬಗ್ಗೆ ಈಗ ಮಾಧ್ಯಮಗಳ ಮುಂದೆ ಚರ್ಚೆ ಮಾಡುವುದಿಲ್ಲ. ನಮ್ಮ ಪಕ್ಷದ ನಾಯಕರ ಜತೆ ಚರ್ಚೆ ಮಾಡಿ ನಮ್ಮ ಕಾರ್ಯಯೋಜನೆ ತಿಳಿಸುತ್ತೇವೆ’ ಎಂದರು.
[26/08, 2:25 PM] Kpcc official: #BSYMukthaBJP ಅಧ್ಯಾಯ ಮುಗಿದಿದೆ ಎಂದುಕೊಳ್ಳುತ್ತಿರುವಾಗಲೇ ಯಡಿಯೂರಪ್ಪ ಪುನಃ ದೆಹಲಿಗೆ ಹೊರಟಿದ್ದಾರೆ.
ಯತ್ನಾಳ್ ಹೇಳಿದಂತೆ #TirupatiAgreement
ನಂತರ ಮತ್ತೇನೋ ಹೊಸ ರಾಜಕೀಯ ಬದಲಾವಣೆ ಆಗುವಂತಿದೆ.
@BSYBJP ದೆಹಲಿ ಭೇಟಿಯ ಮರ್ಮವೇನು?
[26/08, 2:25 PM] Kpcc official: #BjpBrashtotsava ಅಧ್ಯಾಯ ಅಂತಿಮ ಹಂತಕ್ಕೆ ಬಂದಂತಿದೆ.
'ನಷ್ಟ'ವಾಗುವುದು ಯಾರ ಮಾನ ಎಂದು ಗೊತ್ತಿದ್ದೂ,
ಈ ಭ್ರಷ್ಟ ಸರ್ಕಾರ ಕೇಸ್ ದಾಖಲಿಸುವ ಧೈರ್ಯ ತೋರುತ್ತಾ?
'ಮನಿ'ರತ್ನ ಮಾನನಷ್ಟ ಮೊಕದ್ದಮೆ ಹೂಡುತ್ತಾರಾ?
ದಾಖಲೆ ಇದ್ದರೆ ಬಹಿರಂಗಪಡಿಸಲಿ ಎನ್ನುತ್ತಿದ್ದ @BSBommai ಈಗ ಏನು ಹೇಳುತ್ತಾರೆ?
[26/08, 4:21 PM] Kpcc official: ಬಿಜೆಪಿ ಕಮಿಷನ್ 40% ರಿಂದ 50% ಗೆ ಏರಿಕೆಯಾಗಿದೆ.
ರಸ್ತೆ ಕಾಮಗಾರಿಯಲ್ಲಿ 50% ಕಮಿಷನ್ ಕಳೆದರೆ ಗುತ್ತಿಗೆದಾರನಿಗೆ ಕಾಮಗಾರಿ ನಡೆಸಲು ಉಳಿಯುವುದೇನು?
ಕೇವಲ 'ಮರಳು' ಮಾತ್ರ.
ಹಾಗಾಗಿ ಜನತೆಗೆ ಉಳಿಯುವುದು 'ಮರಳಿ'ನ ರಸ್ತೆಗಳು ಮಾತ್ರ.
ಮಳೆ ಬಂದರೆ 'ಮರಳು' ಮಾಯ. ರಸ್ತೆಯೂ ಮಾಯ.
ಜನರ ಪ್ರಾಣ < 50% ಕಮಿಷನ್
#BJPBrashtotsava
[26/08, 4:21 PM] Kpcc official: ಈ ಬಿಜೆಪಿ ಸರ್ಕಾರದ ಕಮಿಷನ್ 'ಪಾಪದ ಕೊಡ' ತುಂಬಿದ್ದರೂ ಇನ್ನೂ ಬುದ್ದಿ ಬಂದಿಲ್ಲ.
ಶಾಸಕರನ್ನು 'ಕುರಿ'ಗಳಂತೆ ಹೈಜಾಕ್ ಮಾಡಿ ರಚಿಸಿರುವ ಸರ್ಕಾರ, ಗುತ್ತಿಗೆದಾರರ ಸಂಘದಲ್ಲೂ 'ಆಪರೇಷನ್ ಕಮಲ' ಮಾಡಲು ಯತ್ನಿಸಿ #BJPBrashtotsava ಪ್ರಕರಣಗಳನ್ನು ಮುಚ್ಚಿ ಹಾಕಬೇಕೆಂದಿದೆ.
[26/08, 6:10 PM] Kpcc official: ಬೆಂಗಳೂರಿನ ಮೇಲಿನ 'ಹಿಡಿತ'ಕ್ಕೆ ಬಿಜೆಪಿ ಸಚಿವ ಸೋಮಣ್ಣ & ಅಶೋಕ್ ನಡುವೆ
ಬಹಿರಂಗ ಗುದ್ದಾಟ.
ಬೆಂಗಳೂರಿನಲ್ಲಿ ನಡೆಯುವುದು ಕೇವಲ 'ಒಬ್ಬರ' ಮಾತು ಮಾತ್ರ ಎಂಬುದು ಸೋಮಣ್ಣನವರ ಅಳಲು. ಅಲ್ಲಿಗೆ ಸಿಎಂ @BSBommai ಮಾತಿಗೂ ಬೆಲೆಯಿಲ್ಲ ಎಂದಾಯಿತು
ಈ #BJPvsBJP ಗುದ್ದಾಟ ಬೆಂಗಳೂರಿನ 'ಅಭಿವೃದ್ಧಿಗೋ' ಅಥವಾ ತಮ್ಮ'ಕಮಿಷನ್' ಅಭಿವೃದ್ಧಿಗೋ?
[26/08, 6:42 PM] Kpcc official: *ಹುಣಸೂರಿನಲ್ಲಿ ಶುಕ್ರವಾರ ಕೆಂಪೇಗೌಡ ಜಯಂತಿಯಲ್ಲಿ ಡಿ.ಕೆ. ಶಿವಕುಮಾರ್ ಅವರ ಮಾತುಗಳು:*
ಇಂದು ನಾವು ನೀವೆಲ್ಲರೂ 513 ವರ್ಷಗಳ ಹಿಂದೆ ಜನಸಿದ ನಾಡಪ್ರಭು ಕೆಂಪೇಗೌಡರ ಜಯಂತಿ ಕಾರ್ಯಕ್ರಮ ಆಚರಿಸಿ, ಅವರನ್ನು ಸ್ಮರಿಸುತ್ತಿದ್ದೇವೆ.
ನಾನು ಆಗಾಗ್ಗೆ ಒಂದು ಮಾತು ಹೇಳುತ್ತಿರುತ್ತೇನೆ. ಮನುಷ್ಯನ ಹುಟ್ಟು ಆಕಸ್ಮಿಕ, ಸಾವು, ಅನುವಾರ್ಯ. ಜನನ ಉಚಿತ, ಮರಣ ಖಚಿತ. ಈ ಹುಟ್ಟು ಸಾವಿನ ನಡುವೆ ನಾವು ಏನು ಸಾಧಿಸುತ್ತೇವೆ ಎಂಬುದು ಮುಖ್ಯ. ಅದೇ ರೀತಿ ನಾವು ಇಂದು ಕೆಂಪೇಗೌಡರನ್ನು ನೆನೆಸಿಕೊಳ್ಳುತ್ತಿದ್ದೇವೆ.
ಕಾರಣ, ಅವರು ಮಾಡಿದ ಜನಪರ ಕಾರ್ಯಕ್ರಮ, ಸಮಾಜ ಹಾಗೂ ಎಲ್ಲ ವರ್ಗದ ಜನರಿಗೆ ಕೊಟ್ಟಿರುವ ಕಾರ್ಯಕ್ರಮ ಹಾಗೂ ಬೆಂಗಳೂರು ಕಟ್ಟಿರುವುದನ್ನು ಸ್ಮರಿಸುತ್ತಿದ್ದೇವೆ.
ಹುಟ್ಟು ನಮ್ಮದಲ್ಲ, ಸಾವು ನಮ್ಮದಲ್ಲ, ಭೂಮಿ, ಪ್ರಕೃತಿ ನಮ್ಮದಲ್ಲ. ನಾವು ಮಾಡುವ ಕೆಲಸ ಹಾಗೂ ಸಾಧನೆ ನಮ್ಮದಾಗಿ ಉಳಿದುಕೊಳ್ಳುತ್ತದೆ. ಅದೇ ಕಾರಣಕ್ಕೆ ನಾವಿಂದು ಕೆಂಪೇಗೌಡರನ್ನು ಸ್ಮರಿಸಿಕೊಳ್ಳುತ್ತಿದ್ದೇವೆ. ಅವರಿಂದಾಗಿ ಇಂದು ಬೆಂಗಳೂರು ವಿಶ್ವ ಭೂಪಟದಲ್ಲಿ ಕಾಣಿಸಿಕೊಳ್ಳುತ್ತಿದೆ.
ನಾನು ಆಗಾಗ್ಗೆ ನಾವೆಲ್ಲರೂ ಬೆಂಗಳೂರು ಕಟ್ಟಿದ ಕೆಪೇಗೌಡರು, ವಿಧಾನಸೌಧ ಕಟ್ಟಿದ ಕೆಂಗಲ್ ಹನುಮಂತಯ್ಯ, ಬೆಂಗಳೂರನ್ನು ವಿಶ್ವ ಮಟ್ಟಕ್ಕೆ ತೆಗೆದುಕೊಂಡು ಹೋದ ಎಸ್.ಎಂ ಕೃಷ್ಣ ಅವರನ್ನು ಸದಾ ಸ್ಮರಿಸಬೇಕು ಎಂದು ಹೇಳುತ್ತಿರುತ್ತೇನೆ.
ನೀವೆಲ್ಲರೂ ಒಕ್ಕಲಿಗರಾಗಿದ್ದು, ನೀವು ಈ ಭೂಮಿಯನ್ನು ಉತ್ತು ಬಿತ್ತು ಬೆಳೆ ಬೆಳೆದು ಸಮಾಜವನ್ನು ಕಾಪಾಡುವ ಅವಕಾಶ ಸಿಕ್ಕಿದೆ. ಈ ಜಾತಿ ವಿಶ್ವಕ್ಕೆ ಸೀಮಿತವಾದ ಜಾತಿ. ಸಮಾಜದಲ್ಲಿ ನಾಲ್ಕು ವರ್ಗ ಆಧಾರಸ್ತಂಭವಾಗಿರುತ್ತವೆ. ಅವುಗಳೆಂದರೆ ಕಾರ್ಮಿಕ, ಸೈನಿಕ, ಕೃಷಿಕ ಹಾಗೂ ಶಿಕ್ಷಕ. ಈ ನಾಲ್ವರು ಇಲ್ಲದಿದ್ದರೆ ಸಮಾಜ ಬೆಳೆಸಲು ಸಾಧ್ಯವಿಲ್ಲ. ಪ್ರಜಾಪ್ರಭುತ್ವದಲ್ಲಿ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಹಾಗೂ ಪತ್ರಿಕಾರಂಗ ಇರುವಂತೆ ಈ ನಾಲ್ಕು ವರ್ಗ ಈ ನಾಲ್ವರು ಪ್ರಮುಖ ಪಾತ್ರ ವಹಿಸುತ್ತಾರೆ.
ಒಕ್ಕಲಿಗರಿಗೆ ಈ ಗೌರವ ಸಿಕ್ಕಿದ್ದು, ಎಲ್ಲ ಜಾತಿ ಹಾಗೂ ಧರ್ಮದವರನ್ನು ಒಟ್ಟಾಗಿ ತೆಗೆದುಕೊಂಡು ಹೋಗುವ ಜವಾಬ್ದಾರಿ ಇದೆ. ಈ ಕೆಂಪೇಗೌಡ ಜಯಂತಿ ಕೇವಲ ಒಕ್ಕಲಿಗರಿಗೆ ಮಾತ್ರ ಸೀಮಿತವಾಗಬಾರದು. ಎಲ್ಲ ಜಾತಿ, ಧರ್ಮದವರಿಗೂ ಸಲ್ಲಬೇಕು.
ನೀವೆಲ್ಲರೂ ಪಕ್ಷಾತೀತವಾಗಿ ಬಂದು ನನ್ನನ್ನು ಆಹ್ವಾನಿಸಿದ್ದೀರಿ. ಈ ಪವಿತ್ರವಾದ ಕಾರ್ಯಕ್ರಮದಲ್ಲಿ ನಾನು ನಿಮ್ಮನ್ನು ಭೇಟಿ ಮಾಡುತ್ತಿರುವುದು ನನ್ನ ಭಾಗ್ಯ. ಪುರಂದರ ದಾಸರು ಇದು ಭಾಗ್ಯ, ಇದು ಭಾಗ್ಯ, ಇದು ಭಾಗ್ಯವಯ್ಯ, ಪದುಭನಾಭನ ಪಾದ ಭಜನೆ ಪರಮ ಸುಖವಯ್ಯ ಎಂದು ಹೇಳಿದ್ದಾರೆ. ಆ ರೀತಿ ನಿಮ್ಮ ಜತೆ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ನಿಮ್ಮ ಜತೆ ನಾನು ಇದ್ದೇನೆ ಎಂದು ಹೇಳುತ್ತಿರುವುದು ನನ್ನ ಭಾಗ್ಯ.
ನಿಮ್ಮ ಆಶೀರ್ವಾದ ನನಗೆ ಅವಶ್ಯಕವಾಗಿದೆ. ನಾನು ಕಷ್ಟಕಾಲದಲ್ಲಿದ್ದಾಗ ಮೈಸೂರು ಹಾಗೂ ಹುಣಸೂರಿನ ಜನತೆ ಪ್ರಾರ್ಥನೆ ಮಾಡಿ, ಹೋರಾಟ ಮಾಡಿದ್ದರು. ಇದನ್ನು ನಾನು ಮರೆಯಲು ಸಾಧ್ಯವಿಲ್ಲ. ನೀವು ದೊಡ್ಡ ಶಕ್ತಿ ಕೊಟ್ಟಿದ್ದೀರಿ. ಜಾತಿ ಧರ್ಮ ನೋಡದೆ ನನಗೆ ಬೆಂಬಲ ಕೊಟ್ಟಿದ್ದೀರಿ. ನೀರು, ಗಾಳಿ, ಫಲಪುಷ್ಟ, ಪ್ರಾಣಿ ಪಕ್ಷಿಗಳಿಗೆ ಜಾತಿ ಇಲ್ಲ. ಆದರೆ ಮನುಷ್ಯರು ಮಾತ್ರ ಜಾತಿ ಹೊಂದಿದ್ದೇವೆ. ಕಷ್ಟಕಾಲದಲ್ಲಿ ಪಕ್ಷಭೇದ ಮರೆತು ಬಿಜೆಪಿ, ಜನತಾ ದಳ, ಕಾಂಗ್ರೆಸ್ ಹಾಗೂ ಸಾಮಾನ್ಯ ಜನ ನನಗೆ ಆಶೀರ್ವಾದ ನೀಡಿದ್ದಾರೆ. ಮುಂದೆ ಹೆಜ್ಜೆ ಹಾಕಲು, ನನ್ನ ಜವಾಬ್ದಾರಿ ನಿಭಾಯಿಸಲು ನಿಮ್ಮ ಆಶೀರ್ವಾದ ಬೇಕಿದೆ. ನಾನು ನಿಮ್ಮ ಸೇವೆ ಮಾಡುತ್ತಾನೆ. ಎಲ್ಲರನ್ನು ಒಟ್ಟಾಗಿ ತೆಗೆದುಕೊಂಡು ಹೋಗುತ್ತೇನೆ. ನಿಮ್ಮ ಅಭಿಮಾನಕ್ಕೆ ಧನ್ಯವಾದಗಳು.
[26/08, 7:53 PM] Kpcc official: ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಬೆಂಗಳೂರಿನಲ್ಲಿ ಶುಕ್ರವಾರ ಸಂಜೆ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು. ಎಐಸಿಸಿ ಕಾರ್ಯದರ್ಶಿ ಅಭಿಷೇಕ್ ದತ್, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ಶಾಸಕರಾದ ಶರತ್ ಬಚ್ಚೇಗೌಡ, ವೆಂಕಟರಮಣಯ್ಯ ಉಪಸ್ಥಿತರಿದ್ದರು.
[26/08, 8:30 PM] Kpcc official: *ಡಿ.ಕೆ. ಶಿವಕುಮಾರ್ ಅವರು ಬೆಂಗಳೂರಿನಲ್ಲಿ ಶುಕ್ರವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ್ದು..:*
50 ವರ್ಷಗಳ ಕಾಲ ಕಾಂಗ್ರೆಸ್ ಪಕ್ಷದಲ್ಲಿ ಹಾಗೂ ಕಾಂಗ್ರೆಸ್ ಸರ್ಕಾರದಲ್ಲಿ ಎಲ್ಲ ಅಧಿಕಾರ ಅನುಭವಿಸಿದ ಗುಲಾಂ ನಬಿ ಅಜಾದ್ ಅವರು ಪಕ್ಷಕ್ಕೆ ಶಕ್ತಿ ತುಂಬುವ ಕಾಲದಲ್ಲಿ ಉಪಕಾರ ಸ್ಮರಣೆ ಮರೆತಿರುವುದು ಖಂಡನೀಯ. ದೇಶ ಕಷ್ಟ ಕಾಲದಲ್ಲಿರುವಾಗ, ದೇಶವನ್ನು ಒಂದುಗೂಡಿಸಿ ದೇಶದಲ್ಲಿ ಐಕ್ಯತೆ, ಸಮಗ್ರತೆ, ಶಾಂತಿ ತರಲು ನಾವೆಲ್ಲ ಹೋರಾಟ ಮಾಡುವಾಗ ಅವರು ತಮ್ಮ ಜವಾಬ್ದಾರಿಯಿಂದ ಹಿಂದೆ ಸರಿದಿದ್ದಾರೆ. ಆ ಮೂಲಕ ಎತ್ತ ತಾಯಿಗೆ ದ್ರೋಹ ಬಗೆದಿದ್ದಾರೆ.
ರಾಜಸ್ಥಾನದ ಉದಯಪುರದಲ್ಲಿ ನಡೆದ ಚಿಂತನಾ ಶಿಬಿರದಲ್ಲಿ 600 ಜನ ನಾಯಕರು ಚರ್ಚೆ ಮಾಡಿ ಭಾರತವನ್ನು ಯಾವ ರೀತಿ ಉಳಿಸಬೇಕು, ಮುಂದೆ ತೆಗೆದುಕೊಂಡು ಹೋಗಬೇಕು ಎಂದು ತೀರ್ಮಾನಿಸಲಾಗಿತ್ತು. ಆ ಸಭೆಯಲ್ಲಿ ಗುಲಾಂ ನಬಿ ಅಜಾದ್ ಅವರ ಪಾತ್ರವೂ ಪ್ರಮುಖವಾಗಿತ್ತು. ಆದರೆ ಅವರು ಇಂದು ರಾಜೀನಾಮೆ ನೀಡಿದ್ದಾರೆ. ರಾಜೀನಾಮೆ ನೀಡಿರುವ ಅಜಾದ್ ಅವರು ಐದು ಪುಟಗಳ ಪತ್ರ ಬರೆದಿದ್ದು, ಅದರಲ್ಲಿ ಅನೇಕ ವಿಚಾರ ಪ್ರಸ್ತಾಪಿಸಿದ್ದಾರೆ.
ಅವರು 1977ರಿಂದ ಇಲ್ಲಿಯವರೆಗೂ 50 ವರ್ಷಗಳಲ್ಲಿ ಅವರು ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ರಾಜಕಾರಣ ಆರಂಭಿಸಿದ್ದು, ಎಲ್ಲ ಪ್ರಮುಖ ವಿಭಾಗದಲ್ಲಿ ಕೆಲಸ ಮಾಡಿ, ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಜತೆಗೆ 20 ವರ್ಷಗಳ ಕಾಲ ಮಂತ್ರಿಯಾಗಿ, ಮುಖ್ಯಮಂತ್ರಿಯಾಗಿ, ರಾಜ್ಯ ಸಭೆ ಹಾಗೂ ಲೋಕಸಭೆ ಸದಸ್ಯರಾಗಿ ಅಧಿಕಾರ ಅನುಭವಿಸಿದ್ದಾರೆ. ಇಷ್ಟಾದರೂ ಇಂದು ರಾಜೀನಾಮೆ ತೀರ್ಮಾನ ಮಾಡಿದ್ದಾರೆ. ಅವರಿಗೆ ಏನೆಂದು ಹೇಳಬೇಕೋ ಮಾಧ್ಯಮದವರೇ ವಿಶ್ಲೇಷಿಸಬೇಕು.
ಅವರು ತಮ್ಮ ಪತ್ರದಲ್ಲಿ ಹೇಳಿರುವ ಹಲವು ವಿಚಾರಗಳನ್ನು ಬೂತ್ ಮಟ್ಟದಿಂದ ರಾಷ್ಟ್ರಮಟ್ಟದವರೆಗೆ ಜಾರಿಗೊಳಿಸಲು ಪಕ್ಷದಲ್ಲಿ ಅವರಿಗೆ ಅವಕಾಶವಿತ್ತು. ಕಾಂಗ್ರೆಸ್ ಪಕ್ಷ ಅವರ 50 ವರ್ಷಗಳ ರಾಜಕೀಯ ಜೀವನದಲ್ಲಿ 40ಕ್ಕೂ ಹೆಚ್ಚು ವರ್ಷಗಳ ಕಾಲ ಅಧಿಕಾರ ನೀಡಿದೆ. ಅವರಿಗೆ ಇಷ್ಟು ಅಧಿಕಾರ ಕೊಟ್ಟಿದ್ದು ಕಾಂಗ್ರೆಸ್ ಪಕ್ಷವೋ, ಬೇರೆ ಪಕ್ಷವೋ? ಅವರಿಗೆ ರಾಜಕೀಯದಲ್ಲಿ ಇಷ್ಟು ದೊಡ್ಡ ಹೆಸರು ಬರಬೇಕಾದರೆ ಅದು ಕಾಂಗ್ರೆಸ್ ಪಕ್ಷ, ನೆಹರೂ, ಗಾಂಧಿ ಕುಟುಂಬ ಕಾರಣ.
ಅಜಾದ್ ಅವರು ಇಂದಿರಾ ಗಾಂಧಿ, ರಾಜೀವ್ ಗಾಂಧಿ ಅವರ ಕಾಲದಲ್ಲಿ ಅಧಿಕಾರ ಅನುಭವಿಸಿದರು. ನಂತರ ನರಸಿಂಹ ರಾವ್ ಅವರ ಸರ್ಕಾರ ಹಾಗೂ ಮನಮೋಹನ್ ಸಿಂಗ್ ಅವರ ಕಾಲದಲ್ಲಿ ಅವರಿಗೆ ಅಧಿಕಾರ ನೀಡಿತ್ತು. ನಂತರ ಕಾಂಗ್ರೆಸ್ ಪಕ್ಷ ವಿರೋಧ ಪಕ್ಷದಲ್ಲಿದ್ದಾಗಲೂ ಅವರಿಗೆ 7 ವರ್ಷಗಳ ಕಾಲ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಸ್ಥಾನದ ಅಧಿಕಾರ ನೀಡಿತ್ತು. ಪಕ್ಷದಲ್ಲಿ ಯಾರಿಗೂ ಅಧಿಕಾರ ಇಲ್ಲದಿದ್ದಾಗಲೂ ಅವರು ಸಾಂವಿಧಾನಿಕ ಹುದ್ದೆ ಅಲಂಕರಿಸಿದ್ದರು. ಇಷ್ಟೇಲ್ಲಾ ಅಧಿಕಾರ ಅನುಭವಿಸಿ ಈಗ ಕಾಂಗ್ರೆಸ್ ಪಕ್ಷ ಸರಿ ಇಲ್ಲ, ರಾಹುಲ್ ಗಾಂಧಿ ತೀರ್ಮಾನ ಸರಿ ಇಲ್ಲ ಎಂದು ಹೇಳಿದ್ದಾರೆ. ರಾಹುಲ್ ಗಾಂಧಿ ರಾಜೀನಾಮೆ ಕೊಟ್ಟಾಗಲೇ ಅಜಾದ್ ಅವರು ಯಾಕೆ ಪ್ರಶ್ನಿಸಲಿಲ್ಲ? ಅದನ್ನು ತಡೆಯಲಿಲ್ಲ? ಇವಾಗ ಯಾಕೆ ಮಾತನಾಡುತ್ತಿದ್ದಾರೆ?
ನಿಮಗೆ ಹಿಂದೆಯೇ ಅಸಮಾಧಾನ ಇದ್ದಿದ್ದರೆ ಆಗಲೇ ಪಕ್ಷ ಬಿಟ್ಟು ಹೋಗಬೇಕಿತ್ತಲ್ಲವೇ? ಇಲ್ಲಿಯವರೆಗೂ ಯಾಕೆ ಸುಮ್ಮನಿದ್ದಿರಿ?
2013ರಿಂದ ಪಕ್ಷದ ಪ್ರತಿ ನಿರ್ಧಾರದಲ್ಲೂ ನಿಮ್ಮ ಅಭಿಪ್ರಾಯ ಇತ್ತು. ನಿಮಗೆ ಸಿಗಬೇಕಾದ ಎಲ್ಲ ಅಧಿಕಾರವನ್ನು ಕಾಂಗ್ರೆಸ್ ಪಕ್ಷ ನೀಡಿತ್ತು. ಇದರ ಹೊರತಾಗಿ ನಿಮಗೆ ಯಾವ ಹುದ್ದೆ ಬಾಕಿ ಇತ್ತು. ದಯವಿಟ್ಟು ಹೇಳಿ. ನೀವು ಯುವಕರ ಬಗ್ಗೆ ಮಾತನಾಡುತ್ತೀರಿ. 50 ವರ್ಷಗಳ ಹಿಂದೆ ಯುವ ಕಾಂಗ್ರೆಸ್ ಸಂಘಟಿಸಿದ್ದಿರಿ. ಬಹಳ ಸಂತೋಷ. ಈಗಿನ ಯುವಕರ ಆಲೋಚನೆ ಬದಲಾಗುತ್ತಿದೆ. ಕಾಲ ಬದಲಾಗಿದೆ. ಜಗತ್ತು ಬದಲಾಗಿದೆ. ತಂತ್ರಜ್ಞಾನ ಕಾಲಘಟ್ಟದಲ್ಲಿ ಇಂದಿನ ಯುವ ಪೀಳಿಗೆ ಇದೆ. ಇಂತಹ ಸಮಯದಲ್ಲಿ ತಮ್ಮ ಅನುಭವ ಹಂಚಿಕೊಂಡು ಭಾರತ ಉಳಿಸಬೇಕಾದವರು ಈ ರೀತಿ ಮಾಡುತ್ತಿರುವುದು ನಿಮ್ಮ ಹಿರಿತನಕ್ಕೆ ಗೌರವ ತರುವುದಿಲ್ಲ.
ಭಾರತ್ ಜೋಡೋ ಕಾರ್ಯಕ್ರಮ ಮಾಡಬೇಕು ಎಂದು ಹೇಳಿದವರು ನಮ್ಮಂತಹ ನಾಯಕರಿಗೆ ಮಾದರಿಯಾಗಿ ಇರಬೇಕಾಗಿತ್ತು, ಮಾರ್ಗದರ್ಶನ ನೀಡಬೇಕಾಗಿತ್ತು. ನಿಮಗೆ ಅಸಮಾಧಾನ ಇದ್ದರೆ ಅದನ್ನು ಚರ್ಚೆ ಮಾಡಬಹುದಿತ್ತು. ಆದರೆ ಸೋನಿಯಾ ಗಾಂಧಿ ಅವರು ಅನಾರೋಗ್ಯದಿಂದಾಗಿ ವಿದೇಶಕ್ಕೆ ಹೋಗಿರುವಾಗ ಈ ನಿರ್ಧಾರಕ್ಕೆ ಬಂದಿರುವುದು ಖಂಡನೀಯ.
ಅಜಾದ್ ಅವರೇ ನಿಮ್ಮಂತಹವರು, ನಮ್ಮಂತಹವರು ಕಾಂಗ್ರೆಸ್ ಪಕ್ಷ ಮುಳುಗಿಸಲು ಸಾಧ್ಯವಿಲ್ಲ. ಕಾಂಗ್ರೆಸ್ ನಿಮ್ಮ ಹಾಗೂ ನಮ್ಮಂತಹ ಸಾವಿರಾರು ನಾಯಕರನ್ನು ಹುಟ್ಟು ಹಾಕಿದೆ. ಹಲವರು ಬರುತ್ತಾರೆ, ಹೋಗುತ್ತಾರೆ. ಯಾರೂ ಪಕ್ಷ ಮುಳುಗಿಸಲು ಸಾಧ್ಯವಿಲ್ಲ. ಕಾಂಗ್ರೆಸ್ ಪಕ್ಷ ಇರುವವರೆಗೂ ದೇಶ ಒಗ್ಗಟ್ಟಾಗಿರುತ್ತದೆ. ಗಾಂಧಿ ಕುಟುಂಬ ಇಲ್ಲದಿದ್ದರೆ ಕಾಂಗ್ರೆಸ್ ಪಕ್ಷ ಒಗ್ಗಟ್ಟಾಗಿರಲು ಸಾಧ್ಯವಿಲ್ಲ. ನಾವೆಲ್ಲರೂ ಪಕ್ಷದ ಸಣ್ಣ ಕೆಲಸಗಾರರು. ನಾವೆಲ್ಲರೂ ನಮ್ಮ ಸ್ಥಾನ ಅರಿತುಕೊಳ್ಳಬೇಕಿದೆ. ನಾವು ನಮ್ಮ ಸ್ವಾರ್ಥ ಬಿಟ್ಟು, ದೇಶ ಕಷ್ಟ ಕಾಲದಲ್ಲಿ ಇರುವಾಗ ಯುವಕರಿಗೆ ಮಾರ್ಗದರ್ಶನ ನೀಡಬೇಕು. ಸಂಕಲ್ಪ ಶಿಬಿರದಲ್ಲಿ ಸೋನಿಯಾ ಗಾಂಧಿ ಅವರು ಪಕ್ಷ ನಿಮಗೆ ಎಲ್ಲ ಅಧಿಕಾರ ನೀಡಿದ್ದು, ಈಗ ನೀವು ಕಾಂಗ್ರೆಸ್ ಪಕ್ಷಕ್ಕೆ ಋಣ ತೀರಿಸಬೇಕು ಎಂದು ಹೇಳಿದ್ದರು. ಇಂತಹ ಸಮಯದಲ್ಲಿ ಈ ರೀತಿ ನಡೆದಿರುವುದು ದುರಾದೃಷ್ಟ. ನೀವು ಎಲ್ಲರಿಗೂ ಮಾದರಿಯಾಗಬಹುದಾಗಿತ್ತು. ಆದರೆ ನಿಮ್ಮ ಈ ನಡವಳಿಕೆಯಿಂದ ಕೆಟ್ಟ ಉದಾಹರಣೆಯಾಗಿ ಉಳಿಯಲಿದ್ದೀರಿ. ಕಾಂಗ್ರೆಸ್ ಪಕ್ಷದ ಹೊರತಾಗಿ ಎಲ್ಲ ದೊಡ್ಡ ನಾಯಕರು ಶೂನ್ಯವೇ.
ಕಾಂಗ್ರೆಸ್ ಪಕ್ಷಕ್ಕೆ ಏಳು ಬೀಳು ಸಹಜ. ಇಂತಹ ಅನೇಕ ಸ್ಥಿತಿಯನ್ನು ಪಕ್ಷ ಕಂಡಿದೆ. ಇಂತಹ ದುರ್ಘಟನೆ ನಡೆದರೂ ಕಾಂಗ್ರೆಸ್ ಪಕ್ಷ ಬಲಿಷ್ಠವಾಗಿ ಬೆಳೆಯಲಿದೆ. ಯುವಕರು ಮುಂದೆ ಬಂದು ದೇಶದಲ್ಲಿ ಐಕ್ಯತೆ ಪ್ರದರ್ಶಿಸುತ್ತಾರೆ. ಈ ದೇಶಕ್ಕೆ ಕಾಂಗ್ರೆಸ್ ಪಕ್ಷ ಅನಿವಾರ್ಯ.
ಅಜಾದ್ ಅವರ ತೀರ್ಮಾನದಿಂದ ಕೆ ಎಚ್ ಮುನಿಯಪ್ಪ, ವೀರಪ್ಪ ಮೋಯ್ಲಿ ಸೇರಿದಂತೆ ಬೇರೆ ನಾಯಕರು ಪ್ರಭಾವಿತರಾಗುವರೇ ಎಂಬ ಪ್ರಶ್ನೆಗೆ, ‘ಯಾವುದೇ ರಾಜ್ಯ ನಾಯಕರು ಈ ರೀತಿ ಮಾಡುವುದಿಲ್ಲ. ಒಂದು ವೇಳೆ ಮಾಡಿದರೆ, ಕಾಂಗ್ರೆಸ್ ಪಕ್ಷದ ಹೊರತಾಗಿ ಅವರು ಶೂನ್ಯವಾಗುತ್ತಾರೆ. ಮುನಿಯಪ್ಪ, ಮೋಯ್ಲಿ ಅವರ ಹಿರಿತನವನ್ನು ಕಾಂಗ್ರೆಸ್ ಪಕ್ಷ ಗೌರವಿಸಲಿದೆ ಎಂದು ಅವರಿಗೆ ಅರಿವಿದೆ. ಅವರು ಸಾಕಷ್ಟು ಸಲಹೆ ನೀಡಿದ್ದಾರೆ. ಏನೇ ಭಿನ್ನಾಭಿಪ್ರಾಯ ಇದ್ದರೂ ಇಂತಹ ತೀರ್ಮಾನ ಕೈಗೊಳ್ಳುವುದಿಲ್ಲ. ಇದು ಕಾಂಗ್ರೆಸ್ ಪಕ್ಷಕ್ಕೆ ದುಷ್ಪರಿಣಾಮ ಬೀರುವುದಿಲ್ಲ. ಬದಲಿಗೆ ಕಾಂಗ್ರೆಸ್ ಬಲಿಷ್ಠವಾಗಿ ಬೆಳೆಯಲಿದೆ’ ಎಂದು ತಿಳಿಸಿದರು.
ರಾಹುಲ್ ಗಾಂಧಿ ಅವರ ನಾಯಕತ್ವದ ಬಗ್ಗೆ ಪ್ರಶ್ನಿಸಿದ್ದಾರೆ ಎಂಬ ವಿಚಾರ ಕೇಳಿದಾಗ, ‘ಅವರು ನಾಯಕತ್ವ ಎಲ್ಲಿ ತೆಗೆದುಕೊಂಡಿದ್ದಾರೆ. ಪ್ರಧಾನಮಂತ್ರಿ ಆಗುವ ಅವಕಾಶವನ್ನೇ ಅವರು ಕೈಬಿಟ್ಟರು. ನಾವೆಲ್ಲರೂ ಒತ್ತಾಯಿಸಿದರೂ ಅವರು ಉಪಪ್ರಧಾನಿ ಹಾಗೂ ಮಂತ್ರಿ ಸ್ಥಾನ ವಹಿಸಲಿಲ್ಲ. ಪಕ್ಷ ಅವರ ನೇತೃತ್ವದಲ್ಲಿ ಸೋತಾಗ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದರು. ನಾವೆಲ್ಲರೂ ಎಷ್ಟೇ ಬೇಡಿಕೊಂಡರೂ ಅವರು ಒಪ್ಪಲಿಲ್ಲ. ಹೀಗಾಗಿ ಸೋನಿಯಾ ಗಾಂಧಿ ಅವರಿಗೆ ಅಧ್ಯಕ್ಷರಾಗುವಂತೆ ಮನವಿ ಮಾಡಿಕೊಂಡೆವು. ಇಂದಿಗೂ ಅವರು ಪಕ್ಷದ ಕಾರ್ಯಕರ್ತನಂತೆ ಕೆಲಸ ಮಾಡುತ್ತಿದ್ದಾರೆ. ದೇಶದ 3500 ಕಿ.ಮೀ ದೂರ ಪಾದಯಾತ್ರೆ ಮಾಡಿ ದೇಶ ಒಗ್ಗೂಡಿಸಲು ಬಯಸುತ್ತಿದ್ದಾರೆ. ಇದಕ್ಕಾಗಿ ಭಾರತ ಜೋಡೋ ಕಾರ್ಯಕ್ರಮ ಹಮ್ಮಿಕೊಂಡಿದೆ’ ಎಂದು ಉತ್ತರಿಸಿದರು.
ಗಾಂಧಿ ಕುಟುಂಬ ಹೊರತಾಗಿ ಬೇರೆಯವರಿಗೆ ಎಐಸಿಸಿ ಅಧ್ಯಕ್ಷ ಸ್ಥಾನ ನೀಡಬೇಕು, ಅದರಲ್ಲಿ ಖರ್ಗೆ ಅವರ ಹೆಸರು ಇದೆಯಂತೆ ಎಂಬ ಪ್ರಶ್ನೆಗೆ, ‘ಗಾಂಧಿ ಕುಟುಂಬ ಹೊರತಾಗಿ ಕಾಂಗ್ರೆಸ್ ಪಕ್ಷ ಒಗ್ಗಟ್ಟಾಗಿರುವುದಿಲ್ಲ.ಇದನ್ನು ನಾವು ಈ ಹಿಂದೆಯೂ ನೋಡಿದ್ದೇವೆ. ಗಾಂಧಿ ಕುಟುಂಬ ಪಕ್ಷದ ಜವಾಬ್ದಾರಿ ಹೊತ್ತುಕೊಳ್ಳಲಿದೆ ಎಂಬ ನಮ್ಮ ಭರವಸೆ ಹುಸಿ ಮಾಡುವುದಿಲ್ಲ ಎಂದು ಭಾವಿಸಿದ್ದೇವೆ. ನಾವೆಲ್ಲರೂ ಅವರ ಬೆನ್ನಿಗೆ ನಿಲ್ಲುತ್ತೇವೆ’ ಎಂದರು.
Post a Comment