KPCC ಸರ್ಕಾರ ಕ್ಕೆ ಎಚ್ಚರಿಕೆ, ಮಳೆ ಪೀಡಿತ ಪ್ರದೇಶ ಗಳಲ್ಲಿ ಸಮೀಕ್ಷೆ

[31/08, 1:04 PM] Kpcc official: ಸರ್ಕಾರಿ ಭೂಮಿ ಒತ್ತುವರಿ ಮಾಡಿ ಮನೆಯಲ್ಲ, ಅರಮನೆಯನ್ನೇ ನಿರ್ಮಿಸಿರುವ ಸಚಿವ ಆನಂದ್ ಸಿಂಗ್ ವಿರುದ್ಧ ಕಾನೂನು ಕೆಲಸ ಮಾಡ್ತಿಲ್ಲ ಏಕೆ?

@BSBommai ಅವರೇ,
◆ಕೂಡಲೇ ಸರ್ವೆ ನಡೆಸಿ, ಒತ್ತುವರಿ ತೆರವುಗೊಳಿಸಿ.
◆ಧ್ವನಿ ಎತ್ತಿದ ವ್ಯಕ್ತಿಗೆ ರಕ್ಷಣೆ ನೀಡಿ
◆ಅಕ್ರಮ ನಡೆಸಿದ ಸಚಿವರನ್ನು ವಜಾಗೊಳಿಸಿ.

ನಿಮ್ಮ 'ಪಾರದರ್ಶಕ' ಆಡಳಿತವನ್ನು ತೋರಿಸಿ.
[31/08, 1:18 PM] Kpcc official: ರೈತರ ಆತ್ಮಹತ್ಯೆಯಲ್ಲಿ ಕರ್ನಾಟಕಕ್ಕೆ 2ನೇ ಸ್ಥಾನ, ಇದು ಬೊಮ್ಮಾಯಿ ಮಾಡೆಲ್ ಸಾಧನೆ!

ಅತಿವೃಷ್ಟಿ, ಕೋವಿಡ್‌ನಂತಹ ಕ್ಲಿಷ್ಟ ಸಂದರ್ಭದಲ್ಲಿ ರೈತರನ್ನು ಕಡೆಗಣಿಸಿದ ಪರಿಣಾಮವಿದು.

ಬೆಲೆ ಏರಿಕೆಯ ಹೊರೆ ಹೊರಿಸಿದ ಡಬಲ್ ಇಂಜಿನ್ ಸರ್ಕಾರಗಳೇ ಈ ಸಾವುಗಳಿಗೆ ಹೊಣೆ.

ರೈತರಿಗೆ ಕಾಂಗ್ರೆಸ್ ಕೃಷಿ ಭಾಗ್ಯ ಕೊಟ್ಟರೆ, ಬಿಜೆಪಿ ಸಾವಿನ ಭಾಗ್ಯ ಕೊಟ್ಟಿದೆ.
[31/08, 4:06 PM] Kpcc official: ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹಾಗೂ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸದಸ್ಯ ಡಿ ಕೆ ಸುರೇಶ್ ಅವರು ಗಣೇಶ ಚತುರ್ಥಿ ನಿಮಿತ್ತದ ಕೌಟುಂಬಿಕ ವಾಡಿಕೆಯಂತೆ ಕನಕಪುರದ ದೊಡ್ಡಆಲಹಳ್ಳಿಯಲ್ಲಿ ತಮ್ಮ ಪೂರ್ವಿಕರ ಸಮಾಧಿಗೆ ಬುಧವಾರ ಪೂಜೆ ಸಲ್ಲಿಸಿದರು.
ಡಿ ಕೆ ಶಿವಕುಮಾರ್ ಅವರು ಇದೇ ಸಂದರ್ಭದಲ್ಲಿ ಮಾಧ್ಯಮಗಳ ಜತೆ ಮಾತನಾಡಿದರು.
[31/08, 4:31 PM] Kpcc official: ಮಳೆ ಅನಾಹುತದಿಂದ ಕನಕಪುರ ತಾಲೂಕಿನ ಮುಳ್ಳಳ್ಳಿ ಗ್ರಾಮದ ಬಳಿ ಅರ್ಕಾವತಿ ಸೇತುವೆ ಕೊಚ್ಚಿ ಹೋಗಿದ್ದು, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಬುಧವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
[31/08, 4:44 PM] Kpcc official: '@BSBommai ಅವರ ಆಡಳಿತದ ಒಂದು ವರ್ಷದಲ್ಲಿ ಕರ್ನಾಟಕವನ್ನು ನಂ1 ರಾಜ್ಯವಾಗಿಸುವಲ್ಲಿ ಸಾಕಷ್ಟು ಪ್ರಯತ್ನ ಮಾಡಿದ್ದಾರೆ!
ಅದು 'ನಕಾರಾತ್ಮಕ ವಿಷಯಗಳಲ್ಲಿ' ಎಂಬುದು ವಿಷಾದನೀಯ.

ಆಡಳಿತದ ವಿರುದ್ಧದ ಪೋಸ್ಟ್‌ಗಳನ್ನೇ 'ಸೈಬರ್ ಕ್ರೈಮ್' ಎಂದು ಪರಿಗಣಿಸುವ ಸರ್ಕಾರ ಅಸಲಿ ಸೈಬರ್ ಕ್ರೈಮ್‌ನ್ನ ಮರೆತಿರುವುದರ ಪರಿಣಾಮ ಬೆಂಗಳೂರು ನಂ1 ಸ್ಥಾನಕ್ಕೇರಿದೆ.
[31/08, 4:44 PM] Kpcc official: '@BSBommai ಅವರು 'ಯುಪಿ ಮಾಡೆಲ್' ಜಪಿಸುತ್ತಿದ್ದರ ಪರಿಣಾಮ ಕರ್ನಾಟಕವೂ ಉತ್ತರ ಪ್ರದೇಶದಂತಾಗುತ್ತಿದೆ.

ಕಳೆದ ಒಂದು ವರ್ಷದಲ್ಲಿ ರಾಜ್ಯದಲ್ಲಿ ಮಹಿಳೆಯರ ವಿರುದ್ಧದ ಅಪರಾಧ ಪ್ರಕರಣಗಳು ಏರಿಕೆಯಾಗಿವೆ, ಅದರಲ್ಲೂ ಬೆಂಗಳೂರಿನದ್ದು ಸಿಂಹಪಾಲು.
ಗಾರ್ಡನ್ ಸಿಟಿಯನ್ನು ಕ್ರೈಮ್ ಸಿಟಿಯನ್ನಾಗಿಸಿದ್ದು ಬೊಮ್ಮಾಯಿಯವರ ಒಂದು ವರ್ಷದ ಸಾಧನೆಯೇ?
[31/08, 6:10 PM] Kpcc official: *ಕನಕಪುರದಲ್ಲಿ ಡಿ.ಕೆ. ಶಿವಕುಮಾರ್ ಅವರ ಮಾಧ್ಯಮ ಪ್ರತಿಕ್ರಿಯೆ:*
6
ಗೌರಿ ಹಾಗೂ ಗಣೇಶ ಹಬ್ಬದ ಸಂದರ್ಭದಲ್ಲಿ ನಮ್ಮ ಹಿರಿಯರಿಗೆ ಪೂಜೆ ಮಾಡುವ ಪದ್ಧತಿಯನ್ನು ನಾವು ಪಾಲಿಸಿಕೊಂಡು ಬಂದಿದ್ದೇವೆ. ನಮ್ಮ ಅಜ್ಜಿ ತೀರಿಕೊಂಡಿರುವ ಹಿನ್ನೆಲೆಯಲ್ಲಿ ಈ ವರ್ಷ ನಮ್ಮ ಮನೆಯಲ್ಲಿ ಗೌರಿ ಗಣೇಶ ಹಬ್ಬ ಆಚರಣೆ ಮಾಡುತ್ತಿಲ್ಲ. ಆದರೆ ನಮ್ಮ ಹಿರಿಯರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥನೆ ಮಾಡುವುದು ನಮ್ಮ ಕರ್ತವ್ಯವಾಗಿದೆ. ಹೀಗಾಗಿ ನಾನು, ಸುರೇಶ್ ಹಾಗೂ ಸ್ನೇಹಿತರು ಇಲ್ಲಿಗೆ ಬಂದು ಪೂಜೆ ಸಲ್ಲಿಸುತ್ತಿದ್ದೇವೆ.'
ಪ್ರವಾಹ ಸ್ಥಳಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸಂತ್ರಸ್ತರು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡ ಕುರಿತು ಕೇಳಿದ ಪ್ರಶ್ನೆಗೆ, 'ನನ್ನ 40 ವರ್ಷಗಳ ಅನುಭವದಲ್ಲಿ ಇಂತಹ ಮಹಾಮಳೆಯನ್ನು ನೋಡಿರಲಿಲ್ಲ. ಉತ್ತರ ಕರ್ನಾಟಕದ ಕೆಲವು ಭಾಗಗಳಲ್ಲಿ ನದಿ ತುಂಬಿ ಹರಿದು ಪ್ರವಾಹ ಸ್ಥಿತಿ ನಿರ್ಮಾಣವಾಗಿದ್ದನ್ನು ನಾನು ನೋಡಿದ್ದೇನೆ. ಆದರೆ ರಾತ್ರಿಯಿಡಿ ಸುರಿದ ಮನೆಗೆ ಇಲ್ಲಿನ ಮನೆಗಳಿಗೆ ನೀರು ಬಗ್ಗೆ ಅಪಾರ ಪ್ರಮಾಣದಲ್ಲಿ ನಷ್ಟವಾಗಿದೆ. ಜನರ ಬಟ್ಟೆ ಬಿಟ್ಟರೆ ಉಳಿದಂತೆ ಆಹಾರ ಪದಾರ್ಥಗಳು, ಸಾಮಗ್ರಿಗಳು ನಿರುಪಾಲಾಗಿವೆ. ಮನೆಗಳಲ್ಲಿ ಸುಮಾರು ಎರಡು ಅಡಿಗಳಷ್ಟು ಕೆಸರು ತುಂಬಿಕೊಂಡಿದ್ದು, ಜನರ ಆರೋಗ್ಯದ ಮೇಲೆ ತೀವ್ರವಾದ ಪರಿಣಾಮ ಬೀರುವ ಆತಂಕ ಕಾಡುತ್ತಿದೆ. ಈ ವಿಚಾರವಾಗಿ ನಾನು ಅಧಿಕಾರಿಗಳ ಜೊತೆ ಮಾತನಾಡಿದ್ದು ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸುವಂತೆ ಸೂಚಿಸಿದ್ದೇನೆ. ಈ ಸಂತ್ರಸ್ತರಿಗೆ ಸರ್ಕಾರ ಕೂಡಲೇ ಪರಿಹಾರಗಳನ್ನು ನೀಡಬೇಕು. 50,000 ದಿಂದ 10 15 ಲಕ್ಷದಷ್ಟು ಹಲವು ಮನೆಗಳಿಗೆ ಹಾನಿಯಾಗಿದೆ. ರೇಷ್ಮೆ ಕೈಗಾರಿಕೆ ಯಂತ್ರಗಳಿಗೂ ಸಾಕಷ್ಟು ನಷ್ಟವಾಗಿದ್ದು, 50 ಲಕ್ಷದಿಂದ 5 ಕೋಟಿ ವರೆಗೂ ಪ್ರತಿಯೊಬ್ಬರಿಗೂ ನಷ್ಟವಾಗಿದೆ. ಈ ಕೈಗಾರಿಕೆಗಳು ಇಡೀ ಕಾರ್ಖಾನೆ ವ್ಯವಸ್ಥೆಯನ್ನೇ ಹೊಸದಾಗಿ ಆರಂಭಿಸಬೇಕಿದೆ. ಈ ಕೂಡಲೇ ಸರ್ಕಾರ ಈ ವಿಚಾರವಾಗಿ ಸಮೀಕ್ಷೆ ನಡೆಸಬೇಕು. ಸಂತ್ರಸ್ತರಿಗೆ ಸರಿಯಾದ ರೀತಿಯಲ್ಲಿ ಪರಿಹಾರ ನೀಡಬೇಕು. ಸರ್ಕಾರ ಪ್ರತಿ ಕುಟುಂಬಕ್ಕೆ 10,000 ನೀಡುವುದಾಗಿ ತಿಳಿಸಿದೆ. ಈ ಮೊತ್ತ ಕೆಲ ದಿನ ಅಥವಾ ಒಂದು ತಿಂಗಳ ಊಟಕ್ಕೆ ಸರಿ ಹೋಗಬಹುದು. ಅವರ ಪುನರ್ವಸತಿ ಹಾಗೂ ಜೀವನ ಸರಿಪಡಿಸಿಕೊಳ್ಳಲು ಸರ್ಕಾರ ಬೆನ್ನೆಲುಬಾಗಬೇಕು' ಎಂದು ಆಗ್ರಹಿಸಿದರು.

ಜಿಲ್ಲಾ ಮಂತ್ರಿಗಳ ಭೇಟಿ ವಿಚಾರವಾಗಿ ಕೇಳಿದ ಪ್ರಶ್ನೆಗೆ, ' ಜಿಲ್ಲಾ ಮಂತ್ರಿಗಳು ಬಹಳ ದೊಡ್ಡವರು. ಅವರು ಜಿಲ್ಲಾ ಉಸ್ತುವಾರಿ ಸಚಿವರಾದ ನಂತರ ರಾಮನಗರ ಜಿಲ್ಲೆಯನ್ನು ಸ್ವಚ್ಛಗೊಳಿಸುವುದಾಗಿ ಹೇಳಿದ್ದರು. ಅವರು ಈಗ ಈ ಸಂತ್ರಸ್ತರ ಮನೆ ಹಾಗೂ ಪ್ರದೇಶಗಳನ್ನು ಸ್ವಚ್ಛಗೊಳಿಸಿ ಕೊಡಬೇಕು ಎಂದು ಈ ಹಬ್ಬದ ದಿನದಂದು ಕೂಡ ಅವರಿಗೆ ಕೈ ಮುಗಿದು ಕೇಳಿಕೊಳ್ಳುತ್ತೇನೆ. ಸಚಿವರು ಈ ಭಾಗದ ಜನರಿಗೆ ಪರಿಹಾರ ಕೊಡಿಸಿ ಅವರ ಆರೋಗ್ಯವನ್ನು ರಕ್ಷಿಸಲಿ' ಎಂದು ಉತ್ತರಿಸಿದರು.

ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಗಣಪತಿ ಪೆಂಡಲ್ ಗೆ ಅನುಮತಿ ನೀಡಿರುವ ವಿಚಾರವಾಗಿ ಕೇಳಿದ ಪ್ರಶ್ನೆಗೆ, 'ನ್ಯಾಯಾಲಯದ ವಿಚಾರವಾಗಿ ರಾಜಕೀಯ ಮಾಡುವುದಿಲ್ಲ. ರಾಜ್ಯದಲ್ಲಿ ಶಾಂತಿ ಕಾಪಾಡಬೇಕು. ನ್ಯಾಯಾಲಯದ ಆದೇಶವನ್ನು ನಾವು ಪ್ರಶ್ನಿಸುವುದಿಲ್ಲ. ಸರ್ಕಾರ ಹಾಳಾಗುತ್ತಿರುವ ರಾಜ್ಯದ ಘನತೆಯನ್ನು ಕಾಪಾಡುವುದರ ಬಗ್ಗೆ ಗಮನ ಹರಿಸಬೇಕು' ಎಂದರು.

ಭಾರತ ಐಕ್ಯತಾ ಯಾತ್ರೆ ಕುರಿತು ಕೇಳಿದ ಪ್ರಶ್ನೆಗೆ, 'ಹೀಗಾದರೆ ಗುಂಡ್ಲುಪೇಟೆಯಿಂದ ರಾಜ್ಯದಲ್ಲಿ ಆರಂಭವಾಗಿ ರಾಯಚೂರಿನ ವರೆಗೂ ಸಾಗಲಿದೆ. ರಾಜ್ಯದ ಎಲ್ಲಾ ಕ್ಷೇತ್ರದ ಜನರು ಕೂಡ ಒಂದೊಂದು ದಿನ ಈ ಪಾದಯಾತ್ರೆಯಲ್ಲಿ ಭಾಗವಹಿಸಬೇಕು ಎಂದು ಹೇಳಿದ್ದೇನೆ. ನಮ್ಮ ಕ್ಷೇತ್ರದಿಂದಲೂ ಜನ ಈ ಪಾದಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ. ನಾನು ಕೂಡ ಈ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕುತ್ತಿದ್ದೇನೆ' ಎಂದು ತಿಳಿಸಿದರು.
[31/08, 6:12 PM] Kpcc official: ಮಳೆ ಅನಾಹುತದಿಂದ ಹಾನಿಯಾಗಿರುವ ಕನಕಪುರದ ನಲ್ಲಳ್ಳಿ ಸಮೀಪದ ಸೂರ್ಯ ರೈತ ಪೈಲಟ್ ಯೋಜನೆ ಸ್ಥಳಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಬುಧವಾರ ಭೇಟಿ ನೀಡಿ ಪರಿಶೀಲಿಸಿದರು.
[31/08, 6:13 PM] Kpcc official: ಕನಕಪುರದ ಕೆಲವು ಪ್ರದೇಶಗಳು ಮಳೆ ಹಾನಿಗೆ ಒಳಗಾಗಿರುವುದರ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹಾಗೂ ಸಂಸದ ಡಿ ಕೆ ಸುರೇಶ್ ಅವರು ಲೋಕೋಪಯೋಗಿ ಮತ್ತು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳ ಜತೆ ಬುಧವಾರ ಚರ್ಚೆ ನಡೆಸಿದರು.
[31/08, 6:47 PM] Kpcc official: ಬಿಬಿಎಂಪಿಯಲ್ಲಿ ಕಮಿಷನ್ ದರ 40% ನಿಂದ 50% ಏರಿಕೆಯಾಗಿರುವುದರಿಂದ ಆಗುವ ಪ್ರಯೋಜನಗಳು.

◆ ಬೆಂಗಳೂರಿನಲ್ಲಿ ಮೀನುಗಾರಿಕೆ ನಡೆಸಬಹುದು!

◆ ಬೆಂಗಳೂರಿನ ರಸ್ತೆಗಳಲ್ಲಿ ದೋಣಿಗಳನ್ನು ಚಲಾಯಿಸಬಹುದು!

◆ ಹೌಸ್‌ಬೋಟ್ ಮೂಲಕ ಪ್ರವಾಸೋದ್ಯವನ್ನು ಉತ್ತೇಜಿಸಬಹುದು!

◆ ಖರ್ಚಿಲ್ಲದೆ ರಸ್ತೆಗುಂಡಿಗಳನ್ನು ಮಳೆ ನೀರಿನ ಮೂಲಕ ಮುಚ್ಚಬಹುದು!

Post a Comment

Previous Post Next Post