[20/08, 4:17 PM] Kpcc official: *ರಾಜೀವ್ ಗಾಂಧಿ ಹಾಗೂ ಡಿ. ದೇವರಾಜ ಅರಸು ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನಾಯಕರ ಮಾತುಗಳು:*
*ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ:*
ಇಡೀ ದೇಶದಲ್ಲಿ ಕಾಂಗ್ರೆಸ್ ಇಂದು ದಿವಂಗತ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಜನ್ಮದಿನ ಆಚರಿಸುತ್ತಿದೆ. ಆ.20ರಂದು ರಾಜೀವ್ ಗಾಂಧಿ ಹಾಗೂ ದೇವರಾಜ ಅರಸು ಅವರ ಜನ್ಮದಿನ. ಈ ಇಬ್ಬರು ನಾಯಕರು ಜನ್ಮದಿನ ಒಂದೇ ದಿನ ಆಗಿದ್ದು, ಒಟ್ಟಿಗೆ ಜನ್ಮದಿನ ಆಚರಿಸುತ್ತಿದ್ದೇವೆ. ಆ ಮೂಲಕ ಅವರ ಸ್ಮರಣೆ ಮಾಡುತ್ತಿದ್ದೇವೆ.
ರಾಜೀವ್ ಗಾಂಧಿ ಅವರು ಚಿಕ್ಕ ವಯಸ್ಸಿನಲ್ಲಿ ಈ ಬೃಹತ್ ರಾಷ್ಟ್ರದ ಪ್ರಧಾನಿ ಆದರು. ಅವರು ಪ್ರಧಾನಿಯಾಗಿ ಈ ದೇಶವನ್ನು 21ನೇ ಶತಮಾನಕ್ಕೆ ವಿಜ್ಞಾನ, ತಂತ್ರಜ್ಞಾನ, ಸಂಪರ್ಕ ಕ್ಷೇತ್ರಗಳಲ್ಲಿ ಜಗತ್ತಿನ ಇತರೆ ರಾಷ್ಟ್ರಗಳ ಮಟ್ಟಕ್ಕೆ ನಿಲ್ಲಲು ತೀರ್ಮಾನಿಸಿ ಇವುಗಳ ಬೆಳವಣಿಗೆಗೆ ಕ್ರಾಂತಿ ಮಾಡಿದರು. ಇಡೀ ಜಗತ್ತು ಭಾರತದತ್ತ ತಿರುಗಿ ನೋಡುವಂತೆ ಮಾಡಿದರು. ಅವರಿಗೆ ಯುವಕರಲ್ಲಿ ಅಪಾರವಾದ ಭರವಸೆ ಇತ್ತು. ಅಂಬೇಡ್ಕರ್ ಅವರು ಒಂದು ಮಾತು ಹೇಳಿದ್ದರು. ಇತಿಹಾಸ ಗೊತ್ತಿಲ್ಲದವರು ಇತಿಹಾಸ ನಿರ್ಮಿಸಲು ಸಾಧ್ಯವಿಲ್ಲ ಎಂದು. ಇತಿಹಾಸ ತಿಳಿದವರು ಭವಿಷ್ಯ ರೂಪಿಸಲು ಸಾಧ್ಯವಿಲ್ಲ. ಹೀಗಾಗಿ ಬಿಜೆಪಿಯವರು ಇತಿಹಾಸ ತಿರುಚಲು ಹೊರಟಿದ್ದಾರೆ.
ಕುವೆಂಪು, ಅಂಬೇಡ್ಕರ್, ಕನಕದಾಸರು, ಭಗತ್ ಸಿಂಗ್, ನಾರಾಯಣ ಗುರು ಸೇರಿದಂತೆ ಅನೇಕ ಮಹಾನ್ ವ್ಯಕ್ತಿಗಳ ಚರಿತ್ರೆ ಬದಲಿಸಲು ಪ್ರಯತ್ನಿಸುತ್ತಿದ್ದಾರೆ. ಹೀಗಾಗಿ ನಮ್ಮ ಯುವಕರು ಚರಿತ್ರೆ ತಿಳಿದುಕೊಳ್ಳಬೇಕಾದದ್ದು ಅವಶ್ಯಕ, ಆಗ ಮಾತ್ರ ನೀವು ಭವಿಷ್ಯದಲ್ಲಿ ಸರಿಯಾದ ತೀರ್ಮಾನ ಮಾಡಲು ಸಾಧ್ಯ. ಪಟ್ಟಭದ್ರಶಕ್ತಿಗಳು ಯುವಕರನ್ನು ಜಾತಿ, ಧರ್ಮದ ಹೆಸರಲ್ಲಿ ದಾರಿ ತಪ್ಪಿಸಿ ನೀಚಕೆಲಸ ಮಾಡುತ್ತಿದ್ದಾರೆ. ಅದಕ್ಕಾಗಿ ನಮ್ಮ ವಿದ್ಯಾರ್ಥಿಗಳು ಇತಿಹಾಸವನ್ನು ಅರ್ಥ ಮಾಡಿಕೊಳ್ಳಬೇಕು. ಆ ಮೂಲಕ ಭವಿಷ್ಯ ರೂಪಿಸಿ, ದೇಶಕ್ಕೆ ಭವಿಷ್ಯ ನೀಡಬೇಕು. ಅದಕ್ಕಾಗಿ ರಾಜೀವ್ ಗಾಂಧಿ ಅವರು ಯುವಕರಿಗೆ ಮತದಾನದ ಹಕ್ಕನ್ನು 21 ವರ್ಷದಿಂದ 18 ವರ್ಷಕ್ಕೆ ಇಳಿಸಿದರು.
ದೇಶದ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಿ ಅವರು ಒಳ್ಳೆಯ ತೀರ್ಮಾನ ಮಾಡಬೇಕು ಎಂದು ಮತದಾನದ ಹಕ್ಕು ನೀಡಿದರು. ಇದನ್ನು ಪ್ರತಿಯೊಬ್ಬ ಯುವಕ ಯುವತಿಯರು ಅರ್ಥ ಮಾಡಿಕೊಳ್ಳಬೇಕು.
ರಾಜೀವ್ ಗಾಂಧಿ ಅವರು ಸಂವಿಧಾನಕ್ಕೆ 73 ಹಾಗೂ 74ನೇ ತಿದ್ದುಪಡಿ ತಂದರು. ಇದನ್ನು ತರುವ ಮುನ್ನ ಮಹಿಳೆಯರಿಗೆ ಸಂವಿಧಾನ ಬದ್ಧ ರಾಜಕೀಯ ಮೀಸಲಾತಿ ಇರಲಿಲ್ಲ. ಹಿಂದುಳಿದವರಿಗೆ ರಾಜಕೀಯ ಮೀಸಲಾತಿ ಇರಲಿಲ್ಲ. ಪ್ರಜಾಪ್ರಭುತ್ವ ಬಲಗೊಳಿಸಬೇಕು, ಜನ ಪಾಲುದಾರರಾಗಬೇಕು ಎಂದು ಈ ತಿದ್ದುಪಡಿ ತಂದರು. ಯಾರಿಗೆ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಿರಲಿಲ್ಲ, ಅವರು ಕೂಡ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಭಾಗವಹಿಸಲು ತಿದ್ದುಪಡಿ ತಂದರು. ಅದನ್ನು ಜಾರಿ ಕೊಟ್ಟವರು ನರಸಿಂಹರಾವ್ ಅವರು.
ಈ ತಿಂದ್ದುಪಡಿ ಆಗುವವರೆಗೂ ಹಿಂದುಳಿದವರಿಗೆ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಮೀಸಲಾತಿ ಇರಲಿಲ್ಲ. 94-95ನೇ ರಲ್ಲಿ ತಾಲೂಕು ಪಂಚಾಯ್ತಿ, ಪಾಲಿಕೆ, ನಗರ ಸಭೆ ಚುವನಾವಣೆಯಲ್ಲಿ ಮೀಸಲಾತಿ ಸಿಕ್ಕಿತು. 33% ಹಿಂದುಳಿದವರಿಗೆ ಮೀಸಲಾತಿ ಮೊದಲ ಬಾರಿಗೆ ನೀಡಲಾಯಿತು. ಬಿಸಿಎಂಎ ಅವರಿಗೆ 26.4% ಹಾಗೂ ಬಿಸಿಎಂಬಿ ಅವರಿಗೆ 6.6% ಒಟ್ಟು 33% ರಷ್ಟು ಮೀಸಲಾತಿ ನೀಡಿದರು.
ಇದನ್ನು ಜನರಿಗೆ ತಿಳಿಸಬೇಕು. ಬಿಜೆಪಿಯವರಿಗೆ ಹಿಂದುಳಿದವರು, ಮಹಿಳೆಯರಿಗೆ ಮೀಸಲಾತಿ ನೀಡುವ ಇಚ್ಛಾಶಕ್ತಿ ಬದ್ಧತೆ ಇಲ್ಲ. ಈ ಮೀಸಲಾಯಿ ವಿರುದ್ಧ ಬಿಜೆಪಿ ಉಪಾಧ್ಯಕ್ಷರಾಗಿದ್ದ ರಾಮಾಜೋಷಿಸ್ ಅವರು ನ್ಯಾಯಾಲಯದ ಮೆಟ್ಟಿಲೇರಿದ್ದರು. ಆಗ ಇದ್ದ ಮಹಾ ವೀರರಾದ ಯಡಿಯೂರಪ್ಪ, ಈಶ್ವರಪ್ಪ ಅವರು ಇವರನ್ನು ತಡೆದಿದ್ದರಾ? ಈ ತಿದ್ದುಪಡಿಯನ್ನು ಸುಪ್ರೀಂ ಕೋರ್ಟ್ ನಲ್ಲಿ ವಿರೋಧಿಸಿದರು. ಅದೃಷ್ಟವಶಾತ್ ಈ ಅರ್ತಿ ವಜಾಗೊಂಡಿತು. ಹೀಗಾಗಿ ಮೀಸಲಾತಿ ಉಲಿಯಿತು. ಈಗ ಮತ್ತೆ ಅಪಾಯ ಎದುರಾಗಿದೆ.
ಸುಪ್ರೀಂ ಕೋರ್ಟ್ ಮಹಾರಾಷ್ಟ್ರ ಹಾಗೂ ಮಧ್ಯಪ್ರದೇಶ ಕೊಟ್ಟ ಮೀಸಲಾತಿಯನ್ನು ಒಡೆದುಹಾಕಿದ್ದಾರೆ. ಈಗ ಸುಪ್ರೀಂ ಕೋಟ್ ಹಿಂದುಳಿದ ಮೀಸಲಾತಿ ನೀಡುವಾಗ ಮೂರು ಪರೀಕ್ಷೆ ಮಾಡಿಲ್ಲ, ನಿಮಗೆ ಹಿಂದುಳಿದವರ ಬಗ್ಗೆ ಅಂಕಿ ಅಂಶ ಇಲ್ಲ ಎಂದರು. ಇದೇ ಕಾರಣಕ್ಕೆ ನಾವು ಜಾತಿ ಗಣತಿ ಮಾಡಿದ್ದೆವು. ಅದನ್ನು ಕುಮಾರಸ್ವಾಮಿ ಹಾಗೂ ಬಿಜೆಪಿ ಒಪ್ಪಲಿಲ್ಲ. ಇದನ್ನು ಕುಮಾರಸ್ವಾಮಿ ಬಿಜೆಪಿ ಹೇಗೆ ವಿರೋಧಿಸಿದೆ ಎಂದು ಜನರಿಗೆ ಹೇಳಬೇಕು. ಅವರು ಮೀಸಲಾತಿಗೆ ಸಾಮಾಜಿಕ ನ್ಯಾಯಕ್ಕೆ ಹೇಗೆ ವಿರುದ್ಧವಿದ್ದಾರೆ ಎಂದು ತಿಳಿಸಬೇಕು. ಮಂಡಲ್ ಕಮಿಷನ್ ವಿರೋಧಿಸಿದ್ದು ಯಾರು? ಇದೇ ಬಿಜೆಪಿಯವರು.
ಇವರಿಗೆ ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುವ ಯಾವ ನೈತಿಕತೆ ಇದೆ. ಇಂದು ಹಿಂದುಳಿದವರು, ಮಹಿಳೆಯರು, ಅಲ್ಪಸಂಖ್ಯಾತರಿಗೆ ರಾಜಕೀಯ ಮೀಸಲಾತಿ ಕೊಟ್ಟಿದ್ದು, ಅದು ಮುಂದುವರಿಯಬೇಕು ಎಂಬ ಬದ್ಧತೆ ಇರುವುದು ಕಾಂಗ್ರೆಸ್ ಗೆ ಮಾತ್ರ.
ಸರ್ವಪಕ್ಷ ಸಭೆ ಕರೆದಿದ್ದಾಗ ಹಿಂದುಳಿದ ವರ್ಗಗಳ ಆಯೋಗದ ವರದಿಯನ್ನು ಸುಪ್ರೀಂ ಕೋರ್ಟ್ ಗೆ ನೀಡಿ ಎಂದರೆ ಅವರು ಭಕ್ತವತ್ಸಲ ಸಮಿತಿ ಮಾಡಿದರು. ಅವರು ಸಮೀಕ್ಷೆ ಮಾಡದೇ 2 ತಿಂಗಳಲ್ಲಿ ವರದಿ ಕೊಟ್ಟರು. ಒಂದು ವೇಳೆ ಇದು ಸುಪ್ರೀಂ ಕೋರ್ಟ್ ನಲ್ಲಿ ಮಾನ್ಯತೆ ಪಡೆಯದಿದ್ದರೆ ಹಿಂದುಳಿದವರಿಗೆ ಮೀಸಲಾತಿ ಇರುವುದಿಲ್ಲ. ಇದೆಲ್ಲವನ್ನು ನೀವು ಆಲೋಚಿಸಬೇಕು. ರಾಜೀವ್ ಗಾಂಧಿ ಅವರು ಕೊಟ್ಟ ಈ ಕೊಡುಗೆ ಅಪಾರವಾದುದು.
ನರೇದ್ರ ಮೋದಿ ಅವರು ಮನ್ ಕಿ ಬಾತ್ ಮಾತನಾಡುತ್ತಾರೆ. ಸಂಸತ್ತಿನಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡುವ ವಿಚಾರದಲ್ಲಿ ಒತ್ತಡ ಹಾಕಬೇಕು.
ರಾಜೀವ್ ಗಾಂಧಿ ಅವರ ಈ ಕೊಡುಗೆ ಸ್ಮರಿಸುವುದೇ ಅವರಿಗೆ ನಾವು ಸಲ್ಲಿಸುವ ನಮನ.ಯ ದೇವರಾಜ ಅರಸು ಅವರು 1972ರಲ್ಲಿ ಮುಖ್ಯಮಂತ್ರಿಯಾದರು. ಅವರು ಈ ಅವಕಾಶ ಬಳಸಿಕೊಂಡು ಹಿಂದುಳಿದವರಿಗೆ, ಶಿಕ್ಷಣ ಹಾಗೂ ಉದ್ಯೋಗದಲ್ಲಿ ಮೀಸಲಾತಿ ನೀಡಿದರು. ಆವನೂರು ಆಯೋಗ ರಚಿಸಿ 1977ರಲ್ಲಿ ಅನುಮತಿ ನೀಡಿದರು. 1951ರಲ್ಲಿ ಮೊದಲನೇ ಸಂವಿಧಾನ ತಿದ್ದುಪಡಿ ಆಗಿದ್ದು, ಹಿಂದುಳಿದ ಜಾತಿಯವರಿಗೆ ಮೀಸಲಾತಿ ನೀಡುವ ಉದ್ದೇಶದಿಂದ. 1959ರವರೆಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಮೀಸಲಾತಿ ಇತ್ತು. ರಾಜ್ಯದಲ್ಲಿ ಮೀಸಲಾತಿ ಸಿಕ್ಕಿದ್ದು 1977ರಲ್ಲಿ. ಹಿಂದುಳಿದವರು ಇದೆಲ್ಲವನ್ನು ತಿಳಿದುಕೊಳ್ಳಬೇಕು. 26 ವರ್ಷ ಹಿಂದುಳಿದ ವರ್ಗದವರಿಗೆ ಮೀಸಲಾತಿ ಇರಲಿಲ್ಲ. ಹೀಗಾಗಿ ಅರಸು ಅವರನ್ನು ಸಾಮಾಜಿಕ ನ್ಯಾಯದ ಹರಿಕಾರ ಎಂದು ಕರೆಯುತ್ತಾರೆ.
ಕೇವಲ ಹಿಂದುಳಿದವರಿಗೆ ಮಾತ್ರವಲ್ಲ, ಉಳುವವನೆ ಭೂಮಿಯ ಒಡೆಯ ಎಂದು ಮಾಡಿದರು. ಆದರೆ ಈಗ ಉಳ್ಳವನೇ ಭೂಮಿಯ ಒಡೆಯ ಎಂದು ಮಾಡಿದ್ದಾರೆ. ಇವರಿಗೆ ಬಡವರ ಬಗ್ಗೆ ಕಾಳಜಿ ಇದೆಯಾ? ಮಲಹೊರುವ ಪದ್ಧತಿ, ಜೀತ ಪದ್ಧತಿ ತಪ್ಪಿಸಿದ್ದು ಯಾರು? ಇದನ್ನು ಬಿಜೆಪಿಯವರು ಮಾಡಿದ್ದರಾ? ಇದರ ವಿರುದ್ಧ ಇದ್ದವರು ಬಿಜೆಪಿಯವರು. ಬದಲಾವಣೆ ಆಗಬೇಕಾದರೆ, ಸಾಮಾಜಿಕ, ಆರ್ಥಿಕ ಚಲಾವಣೆ ಆಗಬೇಕಾದರೆ, ಸಾಮಾಜಿಕ ಆರ್ಥಿಕ ಪ್ರಭುತ್ವ ಇರಬೇಕು ಎಂದು ಅಂಬೇಡ್ಕರ್ ಹೇಳಿದ್ದರು. ಇದರಲ್ಲಿ ನಂಬಿಕೆ ಇಟ್ಟುಕೊಂಡಿರುವವರು ಕಾಂಗ್ರೆಸ್ ನವರು, ಇದಕ್ಕೆ ವಿರುದ್ಧ ಇರುವವರು ಬಿಜೆಪಿಯವರು. ಹೀಗಾಗಿ ಬಡವರು, ಹಿಂದುಳಿದವರ ಬಗ್ಗೆ ಮಾತನಾಡುವ ನೈತಿಕತೆ ಬಿಜೆಪಿಯವರಿಗೆ ಇದೆಯಾ?
ಇಂದು ಪ್ರಜಾಪ್ರಭುತ್ವ ಹಾಗೂ ಸಂವಿಧಾನಕ್ಕೆ ಅಪಯಾ ಎದುರಾಗಿದೆ. ಸಂವಿಧಾನ ಉಳಿದರೆ ನಾವು ಉಳಿಯುತ್ತೇವೆ, ಉಳಿಯಲಿಲ್ಲ ಎಂದರೆ ನಾವು ಉಳಿಯುವುದಿಲ್ಲ. ಪ್ರಜಾಪ್ರಭುತ್ವ ಇದ್ದರೆ ಮಾತ್ರ ಕಟ್ಟಕಡೆಯ ವ್ಯಕ್ತಿಗೂ ಹಕ್ಕು ಗೌರವ ಸಿಗುತ್ತದೆ. ಇದಕ್ಕೆ ಬದ್ಧವಾಗಿರುವುದು ಕಾಂಗ್ರೆಸ್, ವಿರೋಧಿಸುವವರು ಬಿಜೆಪಿ.
*ಎಐಸಿಸಿ ವಕ್ತಾರ ಪವನ್ ಖೇರಾ:*
ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ನಮ್ಮ ನಾಯಕರಾದ ರಾಜೀವ್ ಗಾಂಧಿ ಅವರಿಗೆ ನಮಿಸುತ್ತಿರುವ ಅವಕಾಶ ಸಿಕ್ಕಿರುವುದು ನನ್ನ ಅದೃಷ್ಟ. ರಾಜೀವ್ ಗಾಂಧಿ ಅವರು ಕೇವಲ 5 ವರ್ಷಗಳ ಕಾಲ ದೇಶದ ಪ್ರಧಾನ ಮಂತ್ರಿಯಾದರೂ ರಾಷ್ಟ್ರ ನಿರ್ಮಾಣಕ್ಕೆ ಅವರು ಕೊಟ್ಟ ಕೊಡುಗೆ ಅನನ್ಯವಾದುದು. ರಾಜೀವ್ ಗಾಂಧಿ ಅವರು ಕೊಟ್ಟ ಕೊಡುಗೆಯನ್ನು ಅಲ್ಪವಧಿಯಲ್ಲಿ ನೀಡಲು ಯಾರಿಂದಲೂ ಸಾಧ್ಯವಿಲ್ಲ. ಅವರು ಇನ್ನಷ್ಟು ವರ್ಷಗಳ ಕಾಲ ಪ್ರಧಾನಿಯಾಗಿದ್ದರೆ ದೇಶ ಅಬೂತಪೂರ್ವ ಬದಲಾವಣೆಯನ್ನು ಕಾಣುತ್ತಿತ್ತು. ದುರಾದೃಷ್ಟವಶಾತ್ ನಾವು ಅವರನ್ನು ಕಳೆದುಕೊಂಡೆವು.
ಅವರ ಕೊಡುಗೆಯಿಂದ ಇಂದು ದೇಶದಲ್ಲಿ ಕಂಪ್ಯೂಟರ್, ಮೊಬೈಲ್, ದೂರಸಂಪರ್ಕ ಕ್ಷೇತ್ರ ದೊಡ್ಡ ಸಾದನೆ ಸಾಧಿಸಿದೆ. ರಾಜೀವ್ ಗಾಂಧಿ ಅವರಿಗೆ ಮೃತ್ಯು ಹಾರದ ರೂಪದಲ್ಲಿ ಬಂದಿತ್ತು. ಇದು ರಾಜೀವ್ ಗಾಂಧಿ ಅವರು ದೇಶದ ಮಗ ಎಂಬುದಕ್ಕೆ ಸಾಕ್ಷಿ. ಅವರ ಮಾರ್ಗದರ್ಶನದಲ್ಲಿ ನಾವು ಸಾಗಬೇಕು. ದೇಶವನ್ನು ಕಟ್ಟಬೇಕು.
*ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಈಶ್ವರ್ ಖಂಡ್ರೆ:*
ಸ್ವರ್ಗೀಯ ರಾಜೀವ್ ಗಾಂಧಿ ಹಾಗೂ ದೇವರಾಜ ಅರಸು ಅವರನ್ನು ಇಂದು ನಾವೆಲ್ಲರೂ ಸ್ಮರಿಸುತ್ತಿದ್ದೇವೆ. ನಮ್ಮೆಲ್ಲರ ಅಚ್ಚುಮೆಚ್ಚಿನ ನಾಯಕ, ದೇಶ ಕಂಡ ಅಪರೂಪದ ರಾಜಕಾರಣಿ, ಅತ್ಯಂತ ಸ್ಪುರದ್ರೂಪಿ ನಾಯಕ, ಅತಿ ಚಿಕ್ಕ ವಯಸ್ಸಿನಲ್ಲಿ ದೇಶದ ಪ್ರಧಾನಿಯಾಗಿ ರಾಜೀವ್ ಗಾಂಧಇ ಅವರ ಕೊಟ್ಟ ಕೊಡುಗೆ ಯಾರೂ ಮರೆಯಲು ಸಾಧ್ಯವಿಲ್ಲ.
ಇಂದು ಜಗತ್ತಿನಲ್ಲಿ ನಾವು ತಲೆ ಎತ್ತಿ ಮೆರೆಯುತ್ತಿದ್ದೇವೆ, ಆಧುನಿಕ ಭಾರತ ನಿರ್ಮಾಣ ಮಾಡಿದ ಶ್ರೇಯ ರಾಜೀವ್ ಗಾಂಧಿ ಅವರಿಗೆ ಸಲ್ಲುತ್ತದೆ. ನಾವು ಇಂದು ಬಳಸುತ್ತಿರುವ ಮೊಬೈಲ್ ಗೆ ರಾಜೀವ್ ಗಾಂಧಿ ಅವರ ದೂರಸಂಪರ್ಕ ಕ್ಷೇತ್ರದ ಕ್ರಾಂತಿ ಕಾರಣ. ಇಂದು 116 ಕೋಟಿ ಜನರ ಬಳಿ ಮೊಬೈಲ್ ಇದೆ ಎಂದಾದರೆ ಅದಕ್ಕೆ ರಾಜೀವ್ ಗಾಂಧಿ ಅವರು ಕಾರಣ.
ಇಂದು ಜಗತ್ತು ನಮ್ಮ ಅಂಗೈಯಲ್ಲಿ ಸಿಗುವಂತೆ ಆಗಿದೆ. ರಾಜಕೀಯ ವಿರೋಧಿಗಳು ಕಾಂಗ್ರೆಸ್ ಏನು ಮಾಡಿದೆ ಎಂದು ಕೇಳುತ್ತಾರೆ. ರಾಜೀವ್ ಗಾಂಧಿ ಅವರ ಕಾಲದಲ್ಲಿ ದೇಶವನ್ನು 21ನೇ ಶತಮಾನಕ್ಕೆ ಕರೆತರಲು ಹಳ್ಳಿ ಹಳ್ಳಿಯಲ್ಲಿ ಟೆಲಿಫೋನ್ ಸಂಪರ್ಕ ಕೊಟ್ಟರು. ಈ ಕೀರ್ತಿ ಸಲ್ಲುವುದು ರಾಜೀವ್ ಗಾಂಧಿ ಅವರಿಗೆ. ಇನ್ನು ದೃಶ್ಯ ಮಾಧ್ಯಮ, ಸ್ಯಾಟಲೈಟ್ ಟೆಲಿವಿಷನ್ ಸೇರಿದಂತೆ ಆಧುನಿಕ ಯುಗದಲ್ಲಿ, ವಿಜ್ಞಾನ ತಂತ್ರಜ್ಞಾನದಲ್ಲಿ ಸಾಧನೆ ಮಾಡಿದ್ದು ರಾಜೀವ್ ಗಾಂಧಿ ಹಾಗೂ ಕಾಂಗ್ರೆಸ್.
ಯುವ ಶಕ್ತಿ ಅಣುಶಕ್ತಿಯಂತೆ ಪ್ರಬಲ ಶಕ್ತಿ. ಅದರ ಸದ್ಬಳಕೆ ಆಗಬೇಕು ಎಂದು ರಾಜೀವ್ ಗಾಂಧಿ ಕನಸು ಕಟ್ಟಿದರು. ಇನ್ನು ಮಹಾತ್ಮ ಗಾಂಧಿ ಅವರ ಕನಸಿನಂತೆ ಗ್ರಾಮೀಣ ಅಭಿವೃದ್ಧಿಗೆ ಆದ್ಯತೆ ನೀಡಿದರು. ಪಂಚಾಯತ್ ರಾಜ್ ವ್ಯವಸ್ಥೆಗೆ ಸಂವಿಧಾನಿಕ ತಿದ್ದುಪಡಿ ತಂದು ಸ್ಥಳೀಯರಿಗೆ ಅಧಿಕಾರ ಕೊಟ್ಟರು.
ರಾಜೀವ್ ಗಾಂಧಿ ಅವರ ವಿದೇಶಾಂಗ ನೀತಿ ಮೂಲಕ ಎಳ್ಲ ರಾಷ್ಟ್ರಗಳ ಜತೆಗೆ ಉತ್ತಮ ಸಂಬಂಧ ಸಾಧಿಸಿದರು. ನಂತರ ದೇಶಕ್ಕಾಗಿ ಹುತಾತ್ಮರಾದರು. ಇಂತಹವರ ವಿರುದ್ಧ ವಿರೋಧಿಗಳು ಸುಳ್ಳಿನ ಮೂಲಕ ಅಪಪ್ರಚಾರ ಮಾಡುತ್ತಿದ್ದಾರೆ.
ಇನ್ನು ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರು ಸಾಮಾಜಿಕ ನ್ಯಾಯದ ಹರಿಕಾರರು. ಅವರು ಮುಖ್ಯಮಂತ್ರಿಯಾಗಿ ಕ್ರಾಂತಿಕಾರಕ ಭೂಸುಧಾರಣಾ ಕಾಯ್ದೆ, ಮಲ ಹೋರುವ ಪದ್ಧತಿ ನಿಷೇಧ ಕಾಯ್ದೆ, ಎಲ್ಲ ಭಾಷೆ, ಧರ್ಮದವರಿಗೆ ಸಾಮಾಜಿಕ ಕಾರ್ಯ, ಬಡತನ ನಿರ್ಮೂಲನೆಗೆ ಇಂದಿರಾ ಗಾಂಧಿ ಅವರ ಜತೆ ಜೊತೆ 20 ವರ್ಷಗಳ ಕಾರ್ಯಕ್ರಮ ನೀಡಿದರು. ಇಂದು ರಾಜ್ಯ ಇಷ್ಟು ಅಭಿವೃದ್ಧಿ ಆಗಲು ದೇವರಾಜ ಅರಸು ಅವರು ಕಾರಣ. ಅವರು ಬೆಳೆಸಿದ ಅನೇಕ ನಾಯಕರು ದೊಡ್ಡ ಹುದ್ದೆ ಅಲಂಕರಿಸಿದ್ದಾರೆ. ಇಂತಹ ನಾಯಕರ ಜಯಂತಿಯನ್ನು ನಾವು ಇಂದು ಆಚರಿಸುತ್ತಿದ್ದು. ಅವರ ಹಾದಿ, ಮಾರ್ಗದರ್ಶನದಲ್ಲಿ ನಾವು ನಡೆಯಬೇಕು.
ಇಂದು ಆರ್ಥಿಕತೆ ಕುಸಿದಿದೆ, ನಿರುದ್ಯೋಗ ಸಮಸ್ಯೆ, ದ್ವೇಷ ರಾಜಕಾರಣ, ರೈತರು ಕಷ್ಟದಲ್ಲಿದ್ದಾರೆ, ಅನೇಕ ಅಯಾಯ ಆಗುತ್ತಿದ್ದು ಒಡೆದು ಆಳುವ ನೀತಿ ಅನುಸರಿಸಲಾಗುತ್ತಿದ್ದು, ಧರ್ಮ ಸಂಘರ್ಷ ಆಗುತ್ತಿದೆ. ಸಿದ್ದರಾಮಯ್ಯ ಅವರು ಪ್ರವಾಸದ ಸಮಯದಲ್ಲಿ ಅವರ ಧ್ವನಿ ಹತ್ತಿಕ್ಕುವ ಪ್ರಯತ್ನ ಮಾಡಿದ್ದಾರೆ. ಇದರ ವಿರುದ್ಧ ನಾವು ಹೋರಾಟ ಮಾಡಿ ನಮ್ಮ ನಾಯಕರ ಆದರ್ಶ ಕಾಪಾಡೋಣ.
*ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸಲೀಂ ಅಹ್ಮದ್:*
ರಾಜೀವ್ ಗಾಂಧಿ ಅವರು ಅಪರೂಪದ ರಾಜಕಾರಣಿ. ಸದಾ ಯುವಕರ ಬಗ್ಗೆ ಚಿಂತಿಸುತ್ತಿದ್ದ ಧೀಮಂತ ನಾಯಕ, ಈ ದೇಶವನ್ನು 21ನೇ ಶತಮಾನಕ್ಕೆ ಕೊಂಡೊಯ್ಯುವ ಕನಸು ಕಂಡಿದ್ದ ನಾಯಕ. ಈ ದೇಶ ಅಭಿವೃದ್ಧಿ ಆಗಬೇಕಾದರೆ ಬಲಿಷ್ಟವಾಗಬೇಕಾದರೆ ಯುವಕರು, ಮಹಿಳೆಯರಿಗೆ ಶಕ್ತಿ ತುಂಬಬೇಕು ಎಂದು ನಂಬಿದ್ದರು. 18 ವರ್ಷದ ಯುವಕರಿಗೆ ಮತದಾನದ ಹಕ್ಕು ಕೊಟ್ಟರು. ಆ ಮೂಲಕ ಜನಪ್ರತಿನಿಧಿಗಳ ಆಯ್ಕೆ ಶಕ್ತಿ ಕೊಟ್ಟರು. ಸಂಪರ್ಕ ಕ್ರಾಂತಿ ತಂದರು.
ರಾಜೀವ್ ಗಾಂಧಿ ಅವರ ಅಕಾಲಿಕ ನಿಧನ ಇಡೀ ಪ್ರಪಂಚದಲ್ಲಿ ತಲ್ಲಣ ಸೃಷ್ಟಿಸಿತು. ಈ ದೇಶದ ಐಕ್ಯತೆ ಹಾಗೂ ಭದ್ರತೆಗೆ ಪ್ರಾಣ ಬಿಟ್ಟರು. ಅವರ ಜೀವನ ನಮಗೆ ಮಾರ್ಗದರ್ಶನವಾಗಿದೆ. ಸದಾ ಬಡವರ ಬಗ್ಗೆ ಚಿಂತನೆ ಮಾಡುತ್ತಿದ್ದರು. ಇಡೀ ಪ್ರಪಂಚದಲ್ಲಿ ಸಣ್ಣ ವಯಸ್ಸಿನಲ್ಲಿ ದೊಡ್ಡ ಸಾಧನೆ ಮಾಡಿದ್ದಾರೆ. ಅವರ ನೇನಪು , ಆದರ್ಶ, ವಿಚಾರ, ನಮ್ಮ ಮನಸ್ಸಿನಲ್ಲಿ ಸದಾ ಇರುತ್ತದೆ.
ಇನ್ನು ದೇವರಾಜ ಅರಸು ಅವರು ಉಳುವವನೇ ಭೂಮಿಯ ಒಡೆಯ ಎಂಬ ಜನಪರ ಕಾರ್ಯಕ್ರಮ ಕೊಟ್ಟರು. ಇಂದು ನಾವು ಈ ಇಬ್ಬರು ನಾಯಕರನ್ನು ಸ್ಮರಿಸುತ್ತಿದ್ದು, ಅವರ ವಿಚಾರಧಾರೆ ಮೇಲೆ ನಾವು ನಡೆಯೋಣ ಎಂದು ಆಶಿಸುತ್ತೇನೆ.
*ಮಾಜಿ ಸಚಿವ ಹೆಚ್.ಎಂ ರೇವಣ್ಣ:*
ಈ ರಾಷ್ಟ್ರವನ್ನು 21ನೇ ಶತಮಾನಕ್ಕೆ ಕೊಂಡೊಯ್ಯಲು ದೂರದೃಷ್ಟಿ ಇಟ್ಟುಕೊಂಡು ಅನೇಕ ಕೊಡುಗೆ ಕೊಟ್ಟ ರಾಜೀವ್ ಗಾಂಧಿ ಅವರನ್ನು ನಾವು ಸ್ಮರಿಸುತ್ತಿದ್ದೇವೆ. ಅವರು ಅತಿ ಕಿರಿಯ ವಯಸ್ಸಿಗೆ ದೇಶದ ಪ್ರಧಾನಿಮಂತ್ರಿಯಾದಾಗ ಅನೇಕರು ವಿವಿಧ ಬಗೆಯ ಟೀಕೆ ಮಾಡಿದರು. ಆದರೆ ಅವರು ಕೊಟ್ಟ ಅನೇಕ ಕಾರ್ಯಕ್ರಮಗಳು ದೇಶದ ಉನ್ನತೀಕರಣಕ್ಕೆ ಕಾರಣವಾಗಿವೆ.
ಇಂದಿನ ಮೋಟಾರ್ ವಾಹನ ಕ್ಷೇತ್ರದಲ್ಲಿನ ಬದಲಾವಣೆ, ದೂರಸಂಪರ್ಕದಲ್ಲಿ ಆಗಿರುವ ಬದಲಾವಣೆ ಇಂದಿಗೂ ಯುವಕರಿಗೆ ಮಾದರಿಯಾಗಿವೆ. ಅವರು ಯುವಕರು, ಮಹಿಳೆಯರನ್ನು ರಾಜಕೀಯದಲ್ಲಿ ಕರೆ ತರಲು ಆಸಕ್ತಿ ಹೊಂದಿದ್ದರು.
ಇಂದು ದೇಶ ವಿಶ್ವಮಟ್ಟದಲ್ಲಿ ಬೆಳೆಯಬೇಕಾದರೆ ದೇಶ ಆಳಿದ ಎಲ್ಲ ಪ್ರಧಾನಮಂತ್ರಿಗಳು ಒಂದೊಂದು ರೀತಿಯ ಕೊಡುಗೆ ನೀಡಿದ್ದಾರೆ. ಇಂದಿರಾ ಗಾಂಧಿ ಅವರು ದೇಶಕ್ಕೆ ಆರ್ಥಿಕ ಸ್ವಾತಂತ್ರ್ಯವನ್ನು ತಂದುಕೊಟ್ಟರು. ಅದೇ ರೀತಿ ಕರ್ನಾಟಕದಲ್ಲಿ ಸಾಮಾಜಿಕ ನ್ಯಾಯ ಹಾಗೂ ಸಮ ಸಮಾಜಕ್ಕೆ ಕಾರಣಕರ್ತರಾದವರು ದೇವರಾಜ ಅರಸು ಅವರು.
ಈ ರಾಜ್ಯದಲ್ಲಿ ಸಾಮಾಜಿಕ ನ್ಯಾಯಕ್ಕೆ ಒಥ್ತುಕೊಟ್ಟು, ಎಲ್ಲ ಸಮಾಜದವರು ರಾಜಕೀಯಕ್ಕೆ ಬರುವಂತೆ ಮಾಡಿದವರು ದೇವರಾಜ ಅರಸು ಅವರು. ಉಳುವವನೆ ಭೂಮಿಯ ಒಡೆಯ ಸೇರಿದಂತೆ ಅನೇಕ ಜನಪರ ಕಾರ್ಯಕ್ರಮ ನೀಡಿದರು.
ವೀರಪ್ಪ ಮೋಯ್ಲಿ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ರಾಜೀವ್ ಗಾಂಧಿ ಅವರು ರಾಜ್ಯಕ್ಕೆ ಬಂದಾಗ ನಾನು, ರಾಮಲಿಂಗಾ ರೆಡ್ಡಿ, ಬಿ.ಕೆ. ಹರಿಪ್ರಸಾದ್, ಜಾರ್ಜ್ ಅವರು ಎಲ್ಲರೂ ಸೇರಿ ಕೆಲಸ ಮಾಡಿದ್ದೆವು. ಇನ್ನು ದೇವರಾಜ ಅರಸು ಅವರು ಆನೆಗುಂದಿಯಲ್ಲಿ ಬೆಂಗಳೂರಿನ ಮೊದಲ ನಗರಸಭಾ ಚುನಾವಣೆ ಆರಂಭಿಸಿದ್ದರು. ಇಂತಹ ಕೆಲಸ ಮಾಡಿದ್ದು, ಕಾಂಗ್ರೆಸ್ ಹಾಗೂ ದೇವರಾಜ ಅರಸು ಅವರು.
[20/08, 4:18 PM] Kpcc official: *ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹಾಗೂ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಡಿ.ಕೆ. ಶಿವಕುಮಾರ್ ಅವರ ಮಾತುಗಳು:*
ಇಂದು ರಾಜ್ಯ ಹಾಗೂ ದೇಶದ ಪಾಲಿಗೆ ಪವಿತ್ರ ದಿನ. ಧೀಮಂತ ನಾಯಕರನ್ನು ಕೊಟ್ಟ ದಿನ. 20 ವರ್ಷಗಳ ಹಿಂದೆ ಅರಮನೆ ಮೈದಾನದಲ್ಲಿ ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ ಸೇರಿದಂತೆ ಭಾರತ ಕ್ರಿಕೆಟ್ ತಂಡದ ಸದಸ್ಯರನ್ನು ಕರೆಸಿ ರಾಜೀವ್ ಯುವ ಸಂಘಟನೆಯನ್ನು ಸರ್ಕಾರದ ಪರವಾಗಿ ಆರಂಭಿಸಿದ್ದೆವು.
ದೇವರಾಜ ಅರಸು ಹಾಗೂ ರಾಜೀವ್ ಗಾಂಧಿ ಅವರು ಈ ದೇಶ ಹಾಗೂ ರಾಜ್ಯಕ್ಕೆ ನೀಡಿರುವ ಕೊಡುಗೆಗಳನ್ನು ಮೆಲಕು ಹಾಕುತ್ತಿದ್ದೇವೆ.
ರಾಜೀವ್ ಗಾಂಧಿ ಅವರಿಗೆ ಬಹಳ ಚಿಕ್ಕ ವಯಸ್ಸಿನಲ್ಲೇ ಪ್ರಧಾನ ಮಂತ್ರಿ ಸ್ಥಾನ ಆಕಸ್ಮಿಕವಾಗಿ ಸಿಕ್ಕಿತು. ಅವರಿಗೆ ಬೆಂಗಳೂರಿನಲ್ಲೇ ಎಐಸಿಸಿ ಪ್ರಧಾನ ಕಾರ್ಯದರ್ಶಿ ಹುದ್ದೆ ಸಿಗುವ ಮೂಲಕ ರಾಜಕೀಯ ಬದುಕು ಆರಂಭವಾಯಿತು. ಆಗ ನಾವು ಯುವ ಕಾಂಗ್ರೆಸ್ ಪದಾಧಿಕಾರಿಗಳಾಗಿದ್ದೆವು.
73 ಹಾಗೂ 74 ನೇ ತಿದ್ದುಪಡಿ ಬಗ್ಗೆ ಹಲವರು ಮಾತನಾಡಿದ್ದಾರೆ. ಆಗ ನಾನು ಜಿಲ್ಲಾ ಪಂಚಾಯ್ತಿ ಸದಸ್ಯನಾಗಿದ್ದೆ. ಜಯಪ್ರಕಾಶ್ ನಾರಾಯಣ್ ಅವರ ಹೆಸರಿನ ತರಬೇತಿ ಕೇಂದ್ರದಲ್ಲಿ ದಕ್ಷಿಣ ಭಾರತದ ಎಲ್ಲ ಜಿಲ್ಲಾ ಪಂಚಾಯ್ತಿ, ತಾಲೂಕು ಪಂಚಾಯ್ತಿ ಹಾಗೂ ಪಾಲಿಕೆ ಸದಸ್ಯರುಗಳನ್ನು ಕರೆಸಿದ್ದರು. ಆಗಷ್ಟೇ ರಾಜ್ಯಪಾಲರ ಆಡಳಿತ ಹೇರಲಾಗಿತ್ತು. ಪಕ್ಷಾತೀತವಾಗಿ ಎಲ್ಲರನ್ನು ಕರೆಯಲಾಗಿತ್ತು.
ರಾಜ್ಯದಲ್ಲಿನ ವ್ಯವಸ್ಥೆ ಅಧ್ಯಯನ ಮಾಡಲು ರಾಜೀವ್ ಗಾಂಧಿ ಅವರು ಆಗಮಿಸಿದ್ದರು. ಆಗ ನಾನು ನಮ್ಮಲ್ಲಿ ಈಗಾಗಲೇ ಈ ವ್ಯವಸ್ಥೆ ಇದೆ. ಆದರೆ ಈ ತಿದ್ದುಪಡಿ ಅಗತ್ಯವೇನು ಎಂದು ಪ್ರಶ್ನೆ ಮಾಡಿದ್ದೆ. ಆಗ ಅವರು ಹೇಳಿದರು. ಈಗ ವಿದ್ಯಾರ್ಥಿ ಚುನಾವಣೆ ನಿಲ್ಲಿಸಲಾಗಿದೆ. ಈಗ ಪಂಚಾಯ್ತಿಯಿಂದ ಪಾರ್ಲಿಮೆಂಟ್ ವರೆಗೂ ನಾಯಕರುಗಳು ಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಈ ನಾಯಕರನ್ನು ತಯಾರು ಮಾಡಲು ಈ ತಿದ್ದುಪಡಿ ಅಗತ್ಯ. ನಾಯಕರನ್ನು ಸೃಷ್ಟಿಸುವವನು ನಿಜವಾದ ನಾಯಕನೇ ಹೊರತು, ಹಿಂಬಾಲಕರನ್ನು ಸೃಷ್ಟಿಸುವವರಲ್ಲ ಎಂದು ತಿಳಿಸಿದರು.
ಆಗ ನನಗೆ, ವಿನಯ್ ಕುಮಾರ್ ಸೊರಕೆ, ರೇವಣ್ಣ, ರಾಮಲಿಂಗಾರೆಡ್ಡಿ ಸೇರಿದಂತೆ 65 ಯುವ ನಾಯಕರಿಗೆ ಟಿಕೆಟ್ ಕೊಟ್ಟರು. ಅದರಿಂದ ನಾವು ಇಲ್ಲಿಯವರೆಗೂ ಬೆಳೆದಿದ್ದೇವೆ.
ಮಹಿಳೆಯರಿಗೆ ಶೇ. 50 ರಷ್ಟು ಮೀಸಲಾತಿ ನೀಡುವ ಚರ್ಚೆ ಆರಂಭವಾಗಿದೆ. ಈಗಾಗಲೇ ಸೋನಿಯಾ ಗಾಂಧಿ ಅವರು ಶೇ.33 ರಷ್ಟು ಮೀಸಲಾತಿ ನಿರ್ಣಯ ತಂದಿದ್ದು, ಬಿಜೆಪಿಯವರು ಈ ವಿಚಾರವನ್ನು ಪ್ರಣಾಳಿಕೆಯಲ್ಲಿ ತಿಳಿಸಿದ್ದಾರೆ. ಹೀಗಾಗಿ ಮೀಸಲಾತಿ ತರಲೇಬೇಕಾದ ಅನಿವಾರ್ಯತೆ ಎದುರಾಗಿದೆ. ಹೀಗಾಗಿ ಮಹಿಳೆಯರಲ್ಲಿ ನಾಯಕತ್ವ ಗುಣ ಬೆಳೆಸುವ ಕೆಲಸ ಆಗಬೇಕು.
ಮತದಾನದ ವಯಸ್ಸು ಇಳಿಕೆ ಮಾಡುವ ವಿಚಾರ ಸಂಸತ್ತಿನಲ್ಲಿ ಚರ್ಚೆಯಾಗುತ್ತಿದ್ದಾಗ ಬಿಜೆಪಿಯವರು ಸಾಕಷ್ಟು ವಿರೋಧ ವ್ಯಕ್ತಪಡಿಸಿದ್ದರು. ಅಲ್ಲಿ ರಾಜೀವ್ ಗಾಂಧಿ ಅವರು ಮಾಡಿದ ಭಾಷಣ ಓದಬೇಕು. ಆಗ ಅವರು ಹೇಳಿದರು, ನಾವು 16 ವರ್ಷದ ಯುವಕರನ್ನು ಸೇನೆಗೆ ಆಯ್ಕೆ ಮಾಡಿ ಗಡಿಯಲ್ಲಿ ದೇಶದ ಗಡಿ ಕಾಯಲು ಬಂದೂಕು ಕೊಟ್ಟಿರುವಾಗ, ಈ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವ ವಿಚಾರದಲ್ಲಿ ಅವರನ್ನು ನಂಬಬಾರದೆ? ನನಗೆ ನಮ್ಮ ಯುವಕರ ಮೇಲೆ ನಂಬಿಕೆ ಇದೆ ಎಂದರು.
ಇಂದು ನಾವು ಟೆಲಿಫೋನ್ ಹಾಗೂ ಸಾಮಾಜಿಕ ಜಾಲತಾಣಗಳನ್ನು ಪರಿಣಾಮಕಾರಿಯಾಗಿ ಬಳಕೆ ಮಾಡಿಕೊಳ್ಳುತ್ತಿದ್ದೇವೆ. ನಮ್ಮ ಸ್ವಾತಂತ್ರ್ಯ ನಡಿಗೆ ಕಾರ್ಯಕ್ರಮವನ್ನು 2.73 ಕೋಟಿ ಜನ ಮೊಬೈಲ್ ನಲ್ಲಿ ನೋಡಿದ್ದಾರೆ. ಇದು ಸಾಧ್ಯವಾಗಿದ್ದು ಹೇಗೆ? ರಾಜೀವ್ ಗಾಂಧಿ ಅವರ ಟೆಲಿಕಾಂ ಕ್ರಾಂತಿಯಿಂದ.
ಅಮೆರಿಕದ ಅವಳಿ ಕಟ್ಟಡದ ಮೇಲೆ ದಾಳಿ ನಡೆದಾಗ ಸಲೀಂ ಅಹ್ಮದ್ ಅವರು ಅಮೆರಿಕದಲ್ಲಿದ್ದರು. ಅದು ಆದ ಕೆಲವೇ ನಿಮಿಷಗಳಲ್ಲಿ ಟಿವಿಗಳಲ್ಲಿ ಸುದ್ದಿ ಪ್ರಸಾರವಾಗಿತ್ತು. ಪ್ರಸಾರ ವ್ಯವಸ್ಥೆಗೆ ಮೂಲ ಕಾರಣ ರಾಜೀವ್ ಗಾಂಧಿ ಅವರು.
ಬೊಮ್ಮಾಯಿ ಅವರು ನೆಹರೂ ಫೋಟೋ ತೆಗೆದು ಹಾಕಿ ದೊಡ್ಡ ಸಾಧನೆ ಮಾಡಿರುವುದಾಗಿ ಬಿಜೆಪಿಯವರಿಂದ ಪ್ರಮಾಣಪತ್ರ ಪಡೆಯುತ್ತಿದ್ದಾರೆ. ಈ ದೇಶದ ಇತಿಹಾಸವನ್ನು ನಿಮ್ಮ ಪಕ್ಷದವರಿಂದ ಬದಲಿಸಲು ಸಾಧ್ಯವಿಲ್ಲ. ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ನೆಹರೂ ಅವರು ಎಂಟು ವರ್ಷಗಳ ಕಾಲ ಜೈಲು ವಾಸ ಅನುಭವಿಸಿದ್ದರು. ನಿಮ್ಮ ಪಕ್ಷದ ಯಾವುದಾದರೂ ನಾಯಕ ಜೈಲುವಾಸ ಅನುಭವಿಸಿದ್ದರೇ? ಇಂದಿರಾ ಗಾಂಧಿ ಅವರು ಜೈಲು ವಾಸ ಅನುಭವಿಸಿರಲಿಲ್ಲವೇ? ಅವರು ಈ ದೇಶದ ಐಕ್ಯತೆ, ಸಮಗ್ರತೆ ಶಾಂತಿಗಾಗಿ 33 ಗುಂಡುಗಳನ್ನು ತಿಂದು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದರು. ನಂತರ ರಾಜೀವ್ ಗಾಂಧಿ ಅವರು ಪ್ರಧಾನಮಂತ್ರಿಯಾದರು. ಅವರು ಕೂಡ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದರು.
ರಾಜೀವ್ ಅವರು ಪ್ರಾಣತ್ಯಾಗ ಮಾಡಿದ ನಂತರ ಸೋನಿಯಾ ಗಾಂಧಿ ಅವರಿಗೆ ಈ ಪಕ್ಷದ ನೇತೃತ್ವ ವಹಿಸಿಕೊಳ್ಳುವಂತೆ ಮನವಿ ಮಾಡಿದರು. ಆಗ ಅವರು ನರಸಿಂಹರಾವ್ ಅವರನ್ನು ಪ್ರಧಾನಿ ಮಾಡಿದರು. ನಂತರ ಯುಪಿಎ ಅಧಿಕಾರಕ್ಕೆ ಬಂದಾಗ 10 ವರ್ಷ ಪ್ರಧಾನಮಂತ್ರಿ ಆಗುವ ಅವಕಾಶವಿತ್ತು. ಆದರೂ ತ್ಯಾಗ ಮಾಡಿದರು. ಇಂತಹ ತ್ಯಾಗ ಬಲಿದಾನ ಮಾಡಿದ ಕುಟುಂಬದ ಇತಿಹಾಸ ಕಿತ್ತುಹಾಕಲು ಹೊರಟಿದ್ದೀರಲ್ಲಾ ಇದು ನಿಮ್ಮಿಂದ ಸಾಧ್ಯವಿಲ್ಲ ಬೊಮ್ಮಾಯಿ ಅವರೇ.
ಇಂದು ನಾವೆಲ್ಲರೂ ದೇವರಾಜ ಅರಸು ಅವರನ್ನು ಸ್ಮರಿಸುತ್ತಿದ್ದೇವೆ. ಅವರು ರಾಜ್ಯದಲ್ಲಿ ಮಾಡಿದ ಭೂ ಸುಧಾರಣಾ ಕಾಯ್ದೆ ಆಧರಿಸಿ ಇಂದಿರಾ ಗಾಂಧಿ ಅವರು ದೇಶದಲ್ಲಿ ಬಡವರಿಗೆ ಭೂಮಿ ಹಂಚಲು ನಿರ್ಧರಿಸಿದರು. ಆಗ ರಾಜ್ಯದಲ್ಲಿ 8 ಲಕ್ಷ ಜನರಿಗೆ ಭೂಮಿ ಹಂಚಲಾಯಿತು. ಬ್ಯಾಂಕ್ ಗಳ ರಾಷ್ಟ್ರೀಕರಣ ಮಾಡುವ ಮೂಲಕ ದೇಶದ ಆರ್ಥಿಕತೆಗೆ ಉತ್ತೇಜನ ತುಂಬಿದರು. ಇಂದು ದೊಡ್ಡ ಉದ್ದಿಮೆದಾರರಿಗೆ ಕೋಟ್ಯಂತರ ರೂಪಾಯಿಯಿಂದ ರೈತರವರೆಗೂ ಎಲ್ಲರಿಗೂ ಸಾಲಸೌಲಭ್ಯ ಸಿಗುತ್ತಿದೆ ಎಂದರೆ ಅದಕ್ಕೆ ಕಾರಣ ಬ್ಯಾಂಕುಗಳ ರಾಷ್ಟ್ರೀಕರಣ.
ರಾಜೀವ್ ಗಾಂಧಿ ಅವರು ಪ್ರಧಾನಿಯಾಗಿದ್ದ ಸಮಯದಲ್ಲಿ ವಿಧಾನಸೌಧದಲ್ಲಿ ಸಾರ್ಕ್ ಸಭೆ ಮಾಡಿದರು. ಆದರೆ ಇಂದು ಭಾರತ ದೇಶ ಶ್ರೀಲಂಕಾ, ಪಾಕಿಸ್ತಾನ, ಚೀನಾ, ಬಾಂಗ್ಲಾದೇಶಗಳ ನಡುವಣ ಸಂಬಂಧ ಹೇಗಿದೆ? ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಒಗ್ಗಟ್ಟಿನಿಂದ ಬದುಕುತ್ತಿದ್ದ ನೆರೆ ರಾಷ್ಟ್ರಗಳ ಬಾಂದವ್ಯವೂ ಚೂರಾಗಿದೆ. ದೇಶದೊಳಗೆ ಸಮಾಜಗಳು ಕೂಡ ಚೂರಾಗಿವೆ.
ಬಿಬಿಎಂಪಿ ಚುನಾವಣೆ ಅವಧಿ ಮುಗಿದು 2 ವರ್ಷ ಆಗಿದೆ. ಬಿಜೆಪಿಯವರಿಗೆ ಗೆಲ್ಲುವ ವಿಶ್ವಾಸ ಇದ್ದಿದ್ದರೆ ಅವರು ಚುನಾವಣೆ ಮಾಡುತ್ತಿದ್ದರು. ಈಗ ತರಾತುರಿಯಲ್ಲಿ ಮೀಸಲಾತಿ ಮಾಡಿಕೊಂಡಿದ್ದಾರೆ. ಡಬಲ್ ಇಂಜಿನ್ ಸರ್ಕಾರ, ಉತ್ತಮ ಆಡಳಿತ, ಯೋಜನೆ ನೀಡಿದ್ದರೆ ಚುನಾವಣೆ ಮಾಡಬೇಕಿತ್ತು.
ಇನ್ನು ಈ ಸರಕಾರದ ಕಮಿಷನ್ ವಿಚಾರವಾಗಿ ಗುತ್ತಿಗೆದಾರರ ಸಂಘದ ಅಧ್ಯಕ್ಷರೇ ಪ್ರಧಾನಿಗೆ ಪತ್ರ ಬರೆದರು. ಇನ್ನು ಯುವಕರ ನಿರುದ್ಯೋಗದ ಸಮಸ್ಯೆ ಹೆಚ್ಚಾಗಿದೆ. ಸರ್ಕಾರಿ ಶಾಲೆಗಳನ್ನು ಮಾರಾಟಕ್ಕೆ ಇಟ್ಟಿದ್ದಾರೆ. ನಾವು ಕಟ್ಟಿ ಬೆಳೆಸಿದ್ದನ್ನು ಅವರು ಮಾರುತ್ತಿದ್ದಾರೆ. ಇಂತಹ ಅನೇಕ ಆಸ್ತಿಗಳನ್ನು ಕಾಂಗ್ರೆಸ್ ಕಟ್ಟಿದೆ. ಬಿಜೆಪಿ ಸರ್ಕಾರ ಇಂತಹ ಆಸ್ತಿಗಳನ್ನು ನಿರ್ಮಿಸುವ ಬದಲು ಮಾರಾಟ ಮಾಡಲು ಹೊರಟಿದೆ.
ಕಳೆದ ಬಾರಿ ಪಾಲಿಕೆ ಆಸ್ತಿಗಳನ್ನು ಅಡ ಇಟ್ಟಿದ್ದರು. ನಾವು ಬಂದ ನಂತರ ಅವುಗಳನ್ನು ಬಿಡಿಸಿಕೊಂಡಿದ್ದೆವು. ಈಗ ಮಾರಾಟ ಮಾಡುತ್ತಿದ್ದಾರೆ. ಬಿಜೆಪಿ ಬಂದ ನಂತರ ವಿಮಾನ, ರೈಲು, ಬಂದರು, ಬಿಹೆಚ್ ಎಲ್, ಬ್ಯಾಂಕುಗಳು, ಬಿಇಎಲ್ ಎಲ್ಲವನ್ನು ಮಾರಾಟ ಮಾಡುತ್ತಿದ್ದಾರೆ. ಇದು ನಿಮ್ಮ ನೀತಿಯೇ?
ಇಂದಿರಾ ಗಾಂಧಿ ಅವರು ಜಾಗತಿಕ ಮಟ್ಟದಲ್ಲಿ ಅತ್ಯುತ್ತಮ ಸಂಬಂಧ ಹೊಂದಿದ್ದರು. ಆದರೆ ನೀವು ಬೇರೆ ದೇಶಕ್ಕೆ ಹೊಗಿ ಅಲ್ಲಿ ಚುನಾವಣೆಯಲ್ಲಿ ಪ್ರಚಾರ ಮಾಡುತ್ತೀರಿ. ನಿಮಗೂ ಅದಕ್ಕೂ ಏನು ಸಂಬಂಧ? ಇದೇನಾ ನಿಮ್ಮ ಅಂತಾರಾಷ್ಟ್ರೀಯ ನೀತಿ? ಕಾಂಗ್ರೆಸ್ ನ ಅವಧಿಯಲ್ಲಿ ಭಾರತ ಎಂದಾದರೂ ಬೇರೆ ದೇಶಗಳ ರಾಜಕೀಯದಲ್ಲಿ ಹಸ್ತಕ್ಷೇಪ ಮಾಡಿತ್ತೇ? ಇಲ್ಲ. ಗಾಂಧಿಜಿ, ನೆಹರು, ಇಂದಿರಾ ಗಾಂಧಿ ಅವರ ವಿದೇಶಾಂಗ ನೀತಿಯಿಂದ ಬಲಿಷ್ಠ ರಾಷ್ಟ್ರವಾಗಿತ್ತು.
ದೇವರಾಜ ಅರಸು ಅವರು ಕೂಡ ಯುವಕರಿಗೆ ಆದ್ಯತೆ ನೀಡಿದರು. ಅವರ ಚಿಂತನೆಯೇ ರಾಜೀವ್ ಗಾಂಧಿ ಅವರ ಚಿಂತನೆ ಆಗಿತ್ತು. ನೀವೆಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಿ, ನಿನ್ನೆ ಬಿಜೆಪಿ ನಾಯಕರೊಬ್ಬರು ಸಿಕ್ಕಿದ್ದರು. ನಮ್ಮ ಪಕ್ಷ ಆಂತರಿಕ ಸಮೀಕ್ಷೆಯಲ್ಲಿ 66ಕ್ಕಿಂತ ಹೆಚ್ಚು ಸ್ಥಾನ ಗೆಲ್ಲುವ ವಿಶ್ವಾಸವಿಲ್ಲ ಎಂದು ಹೇಳುತ್ತಿದ್ದರು. ನೀವು ವಿಧಾನಸೌಧದಲ್ಲಿ ಕಾಂಗ್ರೆಸ್ ಹೆಸರು ಹೇಳಿಕೊಡು ಜನಸೇವೆ ಮಾಡಬೇಕು. ಇದು ನಿಮ್ಮ ಸಂಕಲ್ಪ ಆಗಬೇಕು.
ಬಿಜೆಪಿಯವರು ದೇಶವನ್ನು ಇಬ್ಭಾಗ ಮಾಡುತ್ತಿದ್ದು, ರಾಹುಲ್ ಗಾಂಧಿ ಅವರು ಭಾರತ್ ಜೋಡೋ ಕಾರ್ಯಕ್ರಮದ ಮೂಲಕ ದೇಶವನ್ನು ಒಗ್ಗೂಡಿಸಲು ಮುಂದಾಗಿದ್ದಾರೆ. ಈ ಕಾರ್ಯಕ್ರಮದ ಭಾಗವಾಗಿ ಅವರು ರಾಜ್ಯದಲ್ಲಿ 21 ದಿನಗಳ ಕಾಲ ಪಾದಯಾತ್ರೆ ಮಾಡಲಿದ್ದು, ಒಂದೊಂದು ಜಿಲ್ಲೆಗೆ ಒಂದೊಂದು ದಿನ ನಿಗದಿ ಮಾಡಲಿದ್ದು, ಆ ಜಿಲ್ಲೆಯವರು ರಾಹುಲ್ ಗಾಂಧಿ ಅವರ ಜತೆ ಹೆಜ್ಜೆ ಹಾಕಬೇಕು.
*ಮಾಧ್ಯಮ ಪ್ರತಿಕ್ರಿಯೆ:*
ಸಿದ್ದರಾಮಯ್ಯ ಅವರ ವಿರುದ್ಧದ ಪ್ರತಿಭಟನೆ ವಿಚಾರವಾಗಿ ಮಾಧ್ಯಮದವರು ಪ್ರಶ್ನೆ ಕೇಳಿದಾಗ, ‘ಸಿದ್ದರಾಮಯ್ಯ ಅವರು ಕೇವಲ ನಮ್ಮ ಪಕ್ಷದ ನಾಯಕರಲ್ಲ. ಅವರಿಗೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿಧಾನದ ಹಕ್ಕಿನಲ್ಲಿ ವಿರೋಧ ಪಕ್ಷದ ನಾಯಕ ಸ್ಥಾನ ನೀಡಲಾಗಿದೆ. ಅವರ ಯಾವುದಾದರೂ ಹೇಳಿಕೆ ಸರಿ ಇಲ್ಲ ಎನಿಸಿದ್ದಲ್ಲಿ ಅದನ್ನು ಟೀಕೆ ಮಾಡಬಹುದು. ಇದು ಪ್ರಜಾಪ್ರಭುತ್ವದ ಭಾಗ. ಆದರೆ ನೆರೆ, ಪ್ರಕೃತಿ ವಿಕೋಪ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕರು ಸರ್ಕಾರದ ಕಣ್ಣು ತೆರೆಸಲು ಹಾನಿ ಪ್ರದೇಶಕ್ಕೆ ಭೇಟಿ ನೀಡುವುದು ಅವರ ಕರ್ತವ್ಯ. ಅವರು ಅದನ್ನು ಮಾಡಿದ್ದಾರೆ’ ಎಂದು ತಿಳಿಸಿದರು.
[20/08, 4:41 PM] Kpcc official: ಹೆಣ್ಣುಮಕ್ಕಳನ್ನು ಶಿಕ್ಷಣದತ್ತ ಕರೆತರುವುದೇ ಸವಾಲು ಎಂಬಂತ ಸ್ಥಿತಿ ಇರುವಾಗ 'ಹೇಗಾದರೂ ಬರಲಿ, ಶಿಕ್ಷಣ ಪಡೆಯಲಿ' ಎನ್ನುವಂತಿರಬೇಕಿತ್ತು ಸರ್ಕಾರ.
ಆದರೆ #ಶಿಕ್ಷಣವಿರೋಧಿಬಿಜೆಪಿ ಯ ಕೊಳಕು ರಾಜಕೀಯ ಹಿತಾಸಕ್ತಿಗೆ ಹೆಣ್ಣುಮಕ್ಕಳು ಶಿಕ್ಷಣವಂಚಿತರಾಗುವ ಸ್ಥಿತಿ ಒದಗಿದೆ.
ಭ್ರಷ್ಟ ಸರ್ಕಾರ ಕಿತ್ತುಕೊಂಡಿದ್ದು ಹಿಜಾಬ್‌ನಲ್ಲ, ಮಕ್ಕಳ ಶಿಕ್ಷಣವನ್ನ.
[20/08, 4:41 PM] Kpcc official: ಬಿಜೆಪಿ ಹೇಳುವ ಸುಳ್ಳುಗಳಿಗೆ 'ಸತ್ಯ'ವೇ ಕಂಗೆಟ್ಟು ದೇಶ ಬಿಟ್ಟು ಓಡಿ ಹೋಗಲಿದೆ!
ಕಾರಿಗೆ ಮೊಟ್ಟೆ ಎಸೆದವರು ಕಾಂಗ್ರೆಸ್‌ನವರು ಎಂಬ ಕಟ್ಟುಕತೆ ಸೃಷ್ಟಿಸುವ ಮುನ್ನ ಉತ್ತರಿಸಿ.
ಈ ವ್ಯಕ್ತಿಯೊಂದಿಗೆ ಅಪ್ಪಚ್ಚು ರಂಜನ್ ಅವರಿಗೆ ಏನು ಕೆಲಸ?
ಸ್ಥಳೀಯ ಕಾಂಗ್ರೆಸ್ ಮುಖಂಡರಿಗೇ ಪರಿಚಯವಿಲ್ಲದ ಆತ ಕಾಂಗ್ರೆಸ್ ಕಾರ್ಯಕರ್ತನಾಗುವುದು ಹೇಗೆ?
[20/08, 4:41 PM] Kpcc official: ಪಠ್ಯಪುಸ್ತಕ ಮುದ್ರಣಕ್ಕೆ 200 ಕೋಟಿ ಖರ್ಚು, ಆದರೆ ಮಕ್ಕಳ ಉಪಯೋಗಕ್ಕಿಲ್ಲ.
ಈ ತಿದ್ದೋಲೆಗಳನ್ನು ಮಕ್ಕಳಿಗೆ ವಿತರಿಸುತ್ತಿಲ್ಲ, ಮಕ್ಕಳು ಅಭ್ಯಾಸ ಮಾಡುವುದು ಹೇಗೆ?
ಪಠ್ಯ ಪರಿಷ್ಕರಣೆ ಎಂಬ ಮೂರ್ಖತನಕ್ಕೆ ಜನತೆಯ 200 ಕೋಟಿ ಹಣ ಹಾಗೂ ರಾಜ್ಯದ ಮಕ್ಕಳ ಶಿಕ್ಷಣ ಬಲಿಯಾಗಿದೆ.
ಶಿಕ್ಷಣಕ್ಕೆ ಶಿಕ್ಷೆ ಕೊಟ್ಟಿದು ಯಾರ ಲಾಭಕ್ಕಾಗಿ ಮುಖ್ಯಮಂತ್ರಿಗಳೇ?
[20/08, 4:42 PM] Kpcc official: ಹೆಣ್ಣುಮಕ್ಕಳನ್ನು ಶಿಕ್ಷಣದತ್ತ ಕರೆತರುವುದೇ ಸವಾಲು ಎಂಬಂತ ಸ್ಥಿತಿ ಇರುವಾಗ 'ಹೇಗಾದರೂ ಬರಲಿ, ಶಿಕ್ಷಣ ಪಡೆಯಲಿ' ಎನ್ನುವಂತಿರಬೇಕಿತ್ತು ಸರ್ಕಾರ.
ಆದರೆ #ಶಿಕ್ಷಣವಿರೋಧಿಬಿಜೆಪಿ ಯ ಕೊಳಕು ರಾಜಕೀಯ ಹಿತಾಸಕ್ತಿಗೆ ಹೆಣ್ಣುಮಕ್ಕಳು ಶಿಕ್ಷಣವಂಚಿತರಾಗುವ ಸ್ಥಿತಿ ಒದಗಿದೆ.
ಭ್ರಷ್ಟ ಸರ್ಕಾರ ಕಿತ್ತುಕೊಂಡಿದ್ದು ಹಿಜಾಬ್‌ನಲ್ಲ, ಮಕ್ಕಳ ಶಿಕ್ಷಣವನ್ನ.
[20/08, 4:45 PM] Kpcc official: ಬೆಂಗಳೂರಿನ ವಿಜಯನಗರದ ಆದಿಚುಂಚನಗಿರಿ ಸಭಾಭವನದಲ್ಲಿ ಉತ್ತರ ಕನ್ನಡ ಜಿಲ್ಲೆ ಒಕ್ಕಲಿಗರ ಸಂಘ ಶನಿವಾರ ಏರ್ಪಡಿಸಿದ್ದ ಒಕ್ಕಲಿಗರ ಜಾಗೃತಿ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಭಾಗವಹಿಸಿದ್ದರು.
Post a Comment