ವಿದ್ಯಾವಂತ ಪತ್ನಿಗೆ (Wife) ಜೀವನಾಂಶ ಬೇಕಿಲ್ಲ. ಅದಕ್ಕೆ ಅವರು ಅರ್ಹರಾಗಿರುವುದಿಲ್ಲ ಎಂದು ಮುಂಬೈ ನಗರದ ನ್ಯಾಯಾಲಯ ಮಹತ್ತರ ಆದೇಶ

ಇಂದಿನ ಆಧುನಿಕ ಕಾಲದಲ್ಲಿ ಎಷ್ಟು ಬೇಗ ಮದುವೆ (Marriage) ಆಗುತ್ತದೆಯೋ ಅಷ್ಟೆ ಬೇಗ ವಿಚ್ಛೇದನಗಳು ಕೂಡ ನಡೆಯುತ್ತಿವೆ. ಮದುವೆಗೆ ಅರ್ಥವೇ ಹೊರಟು ಹೋಗಿದೆ. ಅದರಲ್ಲೂ ಆಸ್ತಿ ಸಲುವಾಗಿ ಮದುವೆ ಆಗುವುದು ಆನಂತರ ವಿಚ್ಛೇದನ (Divorce) ಪಡೆಯುವುದು ಇಂದು ಹೆಚ್ಚಾಗತೊಡಗಿದೆ.ವಿದ್ಯಾವಂತ ಪತ್ನಿಗೆ (Wife) ಜೀವನಾಂಶ ಬೇಕಿಲ್ಲ. ಅದಕ್ಕೆ ಅವರು ಅರ್ಹರಾಗಿರುವುದಿಲ್ಲ ಎಂದು ಮುಂಬೈ ನಗರದ ನ್ಯಾಯಾಲಯ ಮಹತ್ತರ ಆದೇಶವನ್ನು ಹೊರಡಿಸಿದೆ. ಹೌದು, ವಿದ್ಯಾವಂತ ಪತ್ನಿಗೆ ಪತಿಯ (Husband) ಜೀವನಾಂಶದ ಅವಶ್ಯಕತೆ ಇರುವುದಿಲ್ಲ. ಅವರು ತಮ್ಮ ವಿದ್ಯೆಯಿಂದ ಉತ್ತಮ ಉದ್ಯೋಗದಲ್ಲಿ ಈಗಾಗಲೇ ಇರುವುದರಿಂದ, ಅವರಿಗೆ ಬೇರೆಯವರ ಆರ್ಥಿಕ ಸಹಾಯದ (Financial Assistance) ಅಗತ್ಯ ಇರುವುದಿಲ್ಲ. ಆದ್ದರಿಂದ ವಿಚ್ಛೇದನದ ನಂತರ ಪತಿಯೂ ಆರ್ಥಿಕ ಸಬಲತೆ ಇರುವ ಪತ್ನಿಗೆ ಜೀವನಾಂಶ ನೀಡುವ ಅವಶ್ಯಕತೆ ಇರುವುದಿಲ್ಲ.

ವಿದ್ಯಾವಂತ ಪತ್ನಿಯೂ ಜೀವನಾಂಶಕ್ಕೆ ಹಕ್ಕುದಾರಳು ಆಗಿರುವುದಿಲ್ಲ ಎಂದು ಮುಂಬೈ ನಗರದ ನ್ಯಾಯಾಲಯ ಮಹತ್ತರದ ತೀರ್ಪು ನೀಡಿದೆ. ಇಷ್ಟು ದಿನ ವಿಚ್ಚೇದನ ಆದರೆ ಮುಗೀತು ಪತಿಯಿಂದ ಪತ್ನಿಗೆ ಜೀವನಾಂಶ ಬರುತ್ತಿತ್ತು. ಆದರೆ ವಿದ್ಯಾವಂತ ಮತ್ತು ಆರ್ಥಿಕ ಸ್ಥಿತಿ ಉತ್ತಮವಾಗಿದ್ದರೆ, ಅಂತಹವರಿಗೆ ಪತಿಯಿಂದ ಯಾವುದೇ ಜೀವನಾಂಶ ದೊರೆಯುವುದಿಲ್ಲ ಎಂದು ನ್ಯಾಯಾಲಯ ವಿದ್ಯಾವಂತ ಮಹಿಳೆಯರಿಗೆ ಶಾಕ್‌ ನೀಡಿದೆ.

ಏನಿದು ಪ್ರಕರಣ?
ವಾಣಿಜ್ಯ ನಗರಿ ಮುಂಬೈನಲ್ಲಿ ಮಹಿಳೆಯೊಬ್ಬರು ವಿಚ್ಚೇದನ ಪಡೆದು ಜೀವನಾಂಶವನ್ನು ಪಡೆಯಬೇಕೆಂದು ತನ್ನ ಗಂಡನ ವಿರುದ್ಧ ದಾಖಲಿಸಿದ ಕೌಟುಂಬಿಕ ಹಿಂಸಾಚಾರ ಪ್ರಕರಣದಲ್ಲಿ, ಪತ್ನಿಯೂ ದಂತವೈದ್ಯ ಆಗಿರುವುದರಿಂದ, ಇವರು ಪತಿಯಿಂದ ಜೀವನಾಂಶಕ್ಕೆ ಅರ್ಹರಾಗಿರುವುದಿಲ್ಲ ಎಂದು ಮುಂಬೈ ನಗರದ ನ್ಯಾಯಾಲಯ ಮಹತ್ತರ ತೀರ್ಪನ್ನು ಹೊರಡಿಸಿದೆ.

ಗಂಡನ ವಿರುದ್ಧ ಜೀವನಾಂಶ ಪಡೆಯಬೇಕೆಂದು ದೂರು ದಾಖಲಿಸಿದ ಮಹಿಳೆಯು ವೈದ್ಯೆ ಮತ್ತು ಮುಂಬೈನಂತಹ ಮಹಾನಗರದಲ್ಲಿ ವಾಸಿಸುತ್ತಿದ್ದಾರೆ ಎಂಬ ವಿಷಯ ನ್ಯಾಯಾಲಯಕ್ಕೆ ತಿಳಿದು ಬಂದಿದೆ. ಈ ಮಹಿಳೆಯು 2010-11ರಲ್ಲಿ ತನ್ನ ಬಿಡಿಎಸ್ ಪದವಿಯನ್ನು ಪೂರ್ಣಗೊಳಿಸಿದ್ದಾರೆ. ಇವರು ಮುಂದೆ ದಂತ ವೈದ್ಯರಾಗಿ ಕಾರ್ಯ ನಿರ್ವಹಿಸಬಹುದು. ಹಾಗೆಯೇ ಮುಂಬೈ ನಗರದಲ್ಲಿ ವಾಸ ಆಗಿರುವುದರಿಂದ ಇವರು ತಮ್ಮ ವೈದ್ಯ ವೃತ್ತಿಯಲ್ಲಿ ಕೆಲಸವನ್ನು ಸುಲಭವಾಗಿ ಪಡೆಯಬಹುದು ಎಂದು ನ್ಯಾಯಾಲಯವು ಅಭಿಪ್ರಾಯ ಪಟ್ಟಿದೆ.

Kerala: ವಿಮಾನ ದುರಂತದಲ್ಲಿ ತಮ್ಮನ್ನು ಕಾಪಾಡಿದ ಸ್ಥಳೀಯರಿಗಾಗಿ ಆಸ್ಪತ್ರೆ ಕಟ್ಟುತ್ತಿದ್ದಾರೆ ಸಂತ್ರಸ್ತರು

ಈ ಮಹಿಳೆಯು ಮಾಸಿಕ ನಿರ್ವಹಣೆಗಾಗಿ ಬರೋಬ್ಬರಿ ರೂ. 1.10 ಲಕ್ಷ ಕೇಳಿರುವ ಪ್ರಕರಣ ಇದಾಗಿದೆ. ಈ ಮಹಿಳೆಯ ಜೊತೆ 5 ಮತ್ತು 3 ವರ್ಷದ ಇಬ್ಬರು ಮಕ್ಕಳು ವಾಸವಿರುವುದರಿಂದ ಈ ಪರಿಹಾರವನ್ನು ಕೇಳಿದ್ದಾರೆ ಎನ್ನಲಾಗಿದೆ. ಇವರು 2018ರಲ್ಲಿ ಎರಡನೇ ಮಗುವಿಗೆ ಗರ್ಭಿಣಿಯಾಗಿದ್ದಾಗ, ಕುಟುಂಬವನ್ನು ಬಿಟ್ಟು ಹೊರಟು ಹೋಗಿದ್ದರು. ಅಂದಿನಿಂದ ಮಲಾಡ್‌ನಲ್ಲಿ ತನ್ನ ತವರು ಮನೆಯಲ್ಲಿ ಈ ಮಹಿಳೆ ವಾಸವಾಗಿದ್ದಾರೆ.

ಈಕೆ ನ್ಯಾಯಾಲಯದ ಮೊರೆ ಹೋಗಿದ್ದೇಕೆ
ಈ ಮಹಿಳೆಯು "ಈಗ ತನ್ನ ಪತಿ ಉತ್ತಮವಾಗಿ ಸಂಪಾದಿಸುತ್ತಿದ್ದಾರೆ. ಅವರು 3500 ಚದರ ಅಡಿಯಲ್ಲಿ ದೊಡ್ಡ ವಿಲ್ಲಾದಲ್ಲಿ ವಾಸ ಮಾಡುತ್ತಿದ್ದಾರೆ. ಅವರ ಕುಟುಂಬವು 4 ಕಾರುಗಳನ್ನು ಹೊಂದಿದೆ. ಉತ್ತಮ ಆರ್ಥಿಕ ಸ್ಥಿತಿಯನ್ನು ಹೊಂದಿದ್ದಾರೆ ಎಂದು ಮನವಿ ಪತ್ರದಲ್ಲಿ ಹೇಳಿದ್ದಾರೆ. ಆ ಮಹಿಳೆಯು ತನ್ನ ಚಿಕ್ಕ ಮಕ್ಕಳ ಜವಾಬ್ದಾರಿಯನ್ನು ಕಳೆದ ಮೂರು ವರ್ಷಗಳಿಂದ ತೆಗೆದುಕೊಂಡಿದ್ದೇನೆ. ಆ ಮಕ್ಕಳ ಎಲ್ಲಾ ಖರ್ಚುಗಳನ್ನು ತನ್ನ ಹೆತ್ತವರು ನೋಡಿಕೊಳ್ಳುತ್ತಿದ್ದಾರೆ ಎಂದು ಅವರು ಹೇಳಿದರು. ಮುಂಬೈನಲ್ಲಿ ತನಗೆ ವಸತಿಗೆ ಬಾಡಿಗೆ ನೀಡಬೇಕು" ಎಂದು ನ್ಯಾಯಾಲಯವು ಆದೇಶವನ್ನು ಹೊರಡಿಸಬೇಕೆಂದು ಒತ್ತಾಯಿಸಿದ್ದಳು.

ಕೋರ್ಟ್ ನೀಡಿದ ತೀರ್ಪಿನಲ್ಲಿ ಏನಿದೆ
ತಂದೆ-ತಾಯಿಯ ಆಸ್ತಿಯಲ್ಲಿ ಗಂಡು ಮತ್ತು ಹೆಣ್ಣು ಮಕ್ಕಳಿಗೆ ಸಮಾನ ಹಕ್ಕು ಇರುವುದರಿಂದ ಅವಳು ತನ್ನ ತವರು ಮನೆಯಲ್ಲಿ ವಾಸಿಸುವ ಹಕ್ಕನ್ನು ಹೊಂದಿದ್ದಾಳೆ ಎಂದು ನ್ಯಾಯಾಲಯ ಹೇಳಿದೆ. ವಾಸ್ತವದಲ್ಲಿ ಈ ಪ್ರಕರಣವನ್ನು ನೋಡುವುದಾದರೆ, ಈ ಮಹಿಳೆಯು ಪತಿಯ ಜೀವನಾಂಶಕ್ಕೆ ಅರ್ಹಳಲ್ಲ ಎಂದು ಹೇಳಿದೆ. ಪತಿಯೊಂದಿಗೆ ಹೊಂದಿಕೊಂಡು ಜೀವನ ನಡೆಸಲು ಆಕೆಯಿಂದ ಯಾವುದೇ ಪ್ರಯತ್ನಗಳು ನಡೆದಿಲ್ಲ. ಇದರಿಂದ ಕೂಡ ಅವರು ಪತಿಯ ಜೀವನಾಂಶಕ್ಕೆ ಅರ್ಹರಾಗಿಲ್ಲ.

Bihar Politics: ಸಿಎಂ ಸ್ಥಾನಕ್ಕೆ ನಿತೀಶ್ ಕುಮಾರ್ ರಾಜಿನಾಮೆ; ಬಿಹಾರದ ಮುಂದಿನ ಸಿಎಂ ಯಾರು?

ತದನಂತರ ನ್ಯಾಯಾಲಯವು "ಈ ಪ್ರಕರಣದಲ್ಲಿ ಮಕ್ಕಳ ನಿರ್ವಹಣೆಗಾಗಿ, ಪ್ರತಿ ತಿಂಗಳು 20,000 ರೂ. ಜೀವನಾಂಶ ಕೊಡಬೇಕು. ಈ ಮಹಿಳೆಯ ಪತಿ ಶಾಸಕರಾಗಿರುವುದರಿಂದ, ಉತ್ತಮ ಜೀವನ ನಿರ್ವಹಣೆ ಹೊದಿರುವುದರಿಂದ, ಈ ಪರಿಹಾರ ನೀಡಲೇಬೇಕು" ಎಂದು ಕೋರ್ಟ್‌ ಆದೇಶ ಹೊರಡಿಸಿದೆ.

Post a Comment

Previous Post Next Post