[04/09, 7:43 PM] vijayavitthala blr: *||ಪಿಬತ ಭಾಗವತಂ ರಸಮಾಲಯಂ||*Day8

[04/09, 7:43 PM] vijayavitthala blr: *||ಪಿಬತ ಭಾಗವತಂ ರಸಮಾಲಯಂ||*
Day8
*✍ನಿನ್ನೆಯ ದಿನ ಪರಿಕ್ಷೀತ ಮಹಾರಾಜ ಗಂಗಾ ನದಿ ತಟದಲ್ಲಿ ಕುಳಿತಾಗ ಸಮಸ್ತ ಋಷಿಗಳು,ಅತ್ರಿ,ವಸಿಷ್ಠ ವಾಮದೇವ,ವೇದವ್ಯಾಸರು, ನಾರದರು ಮೊದಲಾದ ದೇವರ್ಷಿಗಳು,ಬ್ರಹ್ಮರ್ಷಿಗಳ,ರಾಜರ್ಷಿಗಳು,ಅವರ ಜೊತೆಯಲ್ಲಿ ಅವರ ಪರಿವಾರ,ಶಿಷ್ಯರು ಮತ್ತು ಅವರ ಪರಿವಾರ.. ಹೀಗೆ ಸಮಸ್ತರು ಬಂದಿದ್ದಾರೆ.*
ಬಂದಂತಹ ಸಕಲರಿಗು ಪರಿಕ್ಷೀತ ಮಹಾರಾಜ ಸತ್ಕಾರ ಮಾಡುತ್ತಾನೆ.
ನಂತರ ಅವರಲ್ಲಿ ಕರ ಜೋಡಿಸಿ ಬಿನ್ನಹ ಮಾಡಿಕೊಳ್ಳುತ್ತಾನೆ.
*ಮಹಾನುಭಾವ ರಾದಂತಹ ಸಕಲ ಋಷಿಗಳ ಸಮೂಹಕ್ಕೆ ನನ್ನ ಶಿರ ಸಾಷ್ಟಾಂಗ ನಮಸ್ಕಾರ ಗಳು.*
*ನಿಜವಾಗಿಯೂ ನಾನು ಪುಣ್ಯ ವಂತ.ಇಷ್ಟು ಜನ  ಬಂದು ಇಲ್ಲಿ ನೆರೆದಿದ್ದೀರಿ.ನಾನು ಧನ್ಯ.ಮತ್ತು ಇದೆಲ್ಲಾ ಶ್ರೀ ಕೃಷ್ಣ ಪರಮಾತ್ಮನ ಅನುಗ್ರಹ ಇರಬೇಕು.ನನಗೆ ಬಂದ ಋಷಿಪುತ್ರನ ಶಾಪ ಲೌಕಿಕದ ಕಡೆ ವಿಮುಖನನ್ನಾಗಿ ಮಾಡಿ ವೈರಾಗ್ಯದ ಕಡೆ ಮುಖವನ್ನು ಮಾಡಿದೆ.ಅದರ ನಿಮಿತ್ತ ವಾಗಿ ಶ್ರೀ ಹರಿಯಲ್ಲಿ ನನ್ನ ಮನಸ್ಸು ಹೋಗಿದೆ.*
*ಈಗ ನೀವುಗಳು ಯಾರು ನನ್ನ ಬಿಟ್ಟು ಹೋಗಬೇಡಿ.ವಿಪ್ರರ ಶಾಪದಂತೆ ಏಳುದಿನಗಳಲ್ಲಿ ನನಗೆ ಮರಣವಿದೆ.ಆದರೆ ನನದೊಂದು ವಿನಂತಿ.ಇಷ್ಟು ದಿನ ರಾಜ್ಯದ ಆಳ್ವಿಕೆಯ ಕಡೆ ಗಮನಕೊಟ್ಟು ಭಗವಂತನಿಗೆ ಪ್ರೀತಿಪಾತ್ರವಾದ ಯಾವುದೇ ಸಾಧನೆ ಮಾಡಿಲ್ಲ.*
*ನೀವು ಈ ಏಳುದಿನಗಳ ಕಾಲ ಸದಾ ಹರಿನಾಮ ಸ್ಮರಣೆ, ಅವನ‌ಕೀರ್ತನೆ ಮಾಡಿ.ಅದನ್ನು ಕೇಳುತ್ತಾ ನಾನು ಪ್ರಾಣಬಿಡುವೆನು.*.
*ಮುಂದೆ ಯಾವುದೇ ಜನ್ಮ ಬರಲಿ.ಆ ಜನ್ಮದಲ್ಲಿ ಭಗವಂತನ ಭಕ್ತರಿಗೆ ನನ್ನ ಇಂದ ಯಾವುದೇ ತರಹದ ದುಷ್ಟ ಕಾರ್ಯಗಳನ್ನು ಮಾಡದೇ ಇರುವ ಹಾಗೇ ಬುದ್ದಿ ಬರಲಿ.ಸದಾ ಭಗವಂತನ ನಾಮ ಸ್ಮರಣೆ, ಶ್ರವಣ ಮಾಡುವ ಬುದ್ದಿ ಬರಲಿ.ನೀವೆಲ್ಲರು. ಆಶೀರ್ವಾದ ಮಾಡಿ ಎಂದು ಕೇಳಿಕೊಂಡಿದ್ದಾನೆ*.
ತನ್ನ ರಾಜ ವಸ್ತ್ರಗಳನ್ನು ಪರಿತ್ಯಾಗ ಮಾಡಿ ಕೃಷ್ಣಾಜಿನ ವಸ್ತ್ರಗಳನ್ನು ಧರಿಸಿ ಧರ್ಬೆಯ ಆಸನದ ಮೇಲೆ ಕುಳಿತಾಗ
ಅದನ್ನು ನೋಡಿದ ಆಗಸದಲ್ಲಿ ನೆರೆದಿದ್ದ ಸಮಸ್ತ ದೇವತೆಗಳು ಪುಷ್ಪ ವೃಷ್ಟಿಯನ್ನು ಮಾಡುತ್ತಾರೆ.
ನೆರೆದಿದ್ದ ಸಮಸ್ತ ಋಷಿಗಳು *ರಾಜನಿಗೆ ಹೇ ರಾಜನ್! ನಿನ್ನ ಈ ವೈರಾಗ್ಯ ಶ್ರೀಹರಿಯ ಇಚ್ಛೆ ಇಂದ ಬಂದಿದೆ.ಎಲ್ಲವು ಅವನಿಗೆ ಪ್ರೀತಿಯಾಗಿದೆ.ನೀನು ಈ ದೇಹವನ್ನು ಬಿಟ್ಟು ಹೋಗುವವರೆಗು ನಾವಿಲ್ಲಿ ಇದ್ದು ನಿನ್ನ ಆಶಯದಂತೆ ಭಗವಂತನ ನಾಮ ಸ್ಮರಣೆ ಮಾಡುವೆವು ಎಂದು ಹೇಳುತ್ತಾರೆ.*
ಆ ಸಮಯದಲ್ಲಿ ಭಗವಂತನ ಆಜ್ಞೆಯಂತೆ ರುದ್ರಾಂಶರಾದ ಶ್ರೀ ಶುಕ ಮಹರ್ಷಿಗಳು ಅಲ್ಲಿ ಬರುತ್ತಾರೆ. 
*ನೋಡಲು ಹದಿನಾರು ವರ್ಷದ ಬಾಲಕನಂತೆ ಕಾಣುತ್ತಾ ಇದ್ದಾರೆ.ತಲೆ ಕೂದಲುಕೆದರಿಹೋಗಿದೆ.ನೋಡುವ ಜನರಿಗೆ ಹುಚ್ಚ ರಂತೆ ಕಾಣಿಸುತ್ತಾ ಇದ್ದಾರೆ.*
ಬಂದಂತಹ ಶುಕಮುನಿಗಳ ಪಾದಕ್ಕೆ ತನ್ನ ಶಿರಸ್ಸನ್ನು ಅವರ ಪಾದಕ್ಕೆ ಇಟ್ಟು ಅವರಿಗೆ ನಮಸ್ಕಾರ ಮಾಡುತ್ತಾನೆ.
*ಇಷ್ಟು ದಿನ ರಾಜ್ಯ ಆಳುವಾಗ ನಿಮ್ಮ ದರುಶನವಾಗಲಿಲ್ಲ.ಇಂದು ಎಲ್ಲವನ್ನೂ ಪರಿತ್ಯಾಗ ಮಾಡಿ ಬಂದು ಕುಳಿತಾಗ ನಿಮ್ಮಂತಹ ಜ್ಞಾನಿಗಳ ಸಂಗಮ ದರುಶನ ವಾಗಿದೆ.ದಯವಿಟ್ಟು ಏಳುದಿನಗಳ ಕಾಲ ತಾವು ಇಲ್ಲಿಯೇ ಇದ್ದು ಭಗವಂತನ ನಾಮಸ್ಮರಣೆ,ಕೀರ್ತನೆಗಳನ್ನು ಅವನ ಕತೆಯನ್ನು ಹೇಳಬೇಕು ಎಂದು ಪ್ರಾರ್ಥನೆ ಮಾಡುತ್ತಾನೆ.ನಿಶ್ಚಿತವಾಗಿಯು ಸಾಯುವ ಮನುಷ್ಯ ಸಾಯುವುದಕ್ಕೆ ಮುಂಚೆಯೇ, ಏನನ್ನೂ ಕೇಳಬೇಕು, ಜಪಿಸಲೇ ಬೇಕು, ಇದನ್ನು ತಿಳಿಸಿ* ಅಂತ ಪರಿಕ್ಷೀತರಾಜ ಶ್ರೀಶುಕ ಮುನಿಗಳ ಬಳಿ ಕೇಳಿದಾಗ 
ಅವರು ಕೊಟ್ಟ ಉತ್ತರ.
*"ಶ್ರೀ ಮದ್ ಭಾಗವತ ಶ್ರವಣ.ಇದು ಪ್ರತಿಯೊಬ್ಬ ಜೀವನಿಗೆ ಸಹ ಅವಶ್ಯಕ ಬೇಕು.ಯಾಕೆಂದರೆ ಎಲ್ಲರು ಸಾಯುವವರೇ.ಆದ್ದರಿಂದ ಶ್ರೀ ಮದ್ ಭಾಗವತ ಪ್ರತಿಯೊಬ್ಬ ರಿಗು ಕಡ್ಡಾಯ.*
ಎಂದು ಹೇಳುತ್ತಾರೆ.
*ಹಾಗಾದರೆ ಈ ಕಲಿಯುಗದಲ್ಲಿ ಮುಕ್ತಿಗೆ ಹೋಗತಕ್ಕಂತಹ ಅಪೇಕ್ಷಿತ ಉಳ್ಳ ಜೀವಿಯು ಮಾಡಬೇಕಾದ ಕರ್ತವ್ಯ ಏನು?? ಮತ್ತು ಯಾವ ಸಾಧನೆ ಮಾಡಬೇಕು??*
ಎಂದು ಕೇಳುತ್ತಾನೆ.
ಅದಕ್ಕೆ ಶುಕ ಮುನಿಗಳು *ರಾಜನೇ! ಭಗವಂತನ ನಾಮ ಸ್ಮರಣೆ ಮಾಡಲೇಬೇಕು.*
*ಮೊದಲು ಅವನ ಬಗ್ಗೆ ನಮಗೆ ತಿಳಿಯದೇ ಇದ್ದರು ಅಥವಾ ತಿಳಿದರು ಸಹ ಹರಿಕಥಾ ಶ್ರವಣ ಮಾಡಬೇಕು.ಸದಾ ಹರಿನಾಮ ಸ್ಮರಣೆ, ಕೀರ್ತನೆ ಮಾಡಬೇಕು. ಅವನ ಗುಣಗಳನ್ನು ಕೊಂಡಾಡಬೇಕು.*
*ಇಂತಹ ಭಗವಂತನ ಮಹಿಮೆಯನ್ನು ಕೇಳುತ್ತಾ ಸದಾ ಮನನ ಮಾಡುತ್ತ ಇರಬೇಕು.ನಮ್ಮ ಅಂತ್ಯಕಾಲದಲ್ಲಿ ಅವನ ನಾಮ ಸ್ಮರಣೆ ಮಾಡುತ್ತಾ ಪ್ರಾಣವನ್ನು ಬಿಡಬೇಕು ಎಂದು ಹೇಳುತ್ತಾರೆ.*
ಮತ್ತೆ ರಾಜನು ಕೇಳುತ್ತಾನೆ.
*ಇವಾಗ ನನಗೆ ಇರುವ ಸಮಯ ಬಹಳ ಕಡಿಮೆ. ಇಷ್ಟು ದಿನ ರಾಜ್ಯಭಾರ,ಸತಿ ಸುತಮಿತ್ರಭಾಂದವ,ಇವರನ್ನು ಹೊಂದಿ ವ್ಯರ್ಥವಾಗಿ ಕಾಲ ಕಳೆದು ಹೋಗಿದೆ.ಮುಂದಿನ ದಾರಿ ಏನು?ಎಂದಾಗ*
ಅದಕ್ಕೆ ಶುಕಮುನಿಗಳು
*ರಾಜ! ನಿನಗೆ ಶಾಪ ಬಂದಿದ್ದು ಏಳು ದಿನಗಳ ನಂತರ ಹೊರತಾಗಿ ಈ ಕ್ಷಣವಲ್ಲ ತಾನೇ.ಇನ್ನೂ ಸಮಯವಿದೆ.*
*ಖಟ್ವಾಂಗ ಎಂಬ ರಾಜ ದೇವತೆಗಳ ಪರವಾಗಿ ದಾನವರ ಜೊತೆಯಲ್ಲಿ ಹೋರಾಟ ಮಾಡಿ ಅವರಿಗೆ ಜಯವನ್ನು ತಂದಾಗ ಅವರು ವರವನ್ನು  ಕೊಡುವೆವು  ಕೇಳು ಎಂದಾಗ ಅದಕ್ಕೆ ರಾಜನು ತನ್ನ ಆಯಸ್ಸು ಎಷ್ಟು ಇದೇ ಎಂದು ಕೇಳಿದಾಗ ಅದಕ್ಕೆ ಅವರು ಒಂದು ಮಹೂರ್ತ ಇದೆ ಅಂತ ಹೇಳುತ್ತಾರೆ. ಒಂದು ಮಹೂರ್ತ ಎಂದರೆ 48ನಿಮಿಷಗಳ ಕಾಲ.*
ಆಗ ಖಟ್ವಾಂಗ ರಾಜ *ಮರು ಮಾತನಾಡದೇ ರಾಜ್ಯ ತ್ಯಾಗ ಮಾಡಿ ಹಿಮಾಲಯ ಪರ್ವತಕ್ಕೆ ಹೋಗಿ ಉಳಿದ ಕಾಲದಲ್ಲಿ ಭಗವಂತನ ನಾಮ ಸ್ಮರಣೆ ಮಾಡುತ್ತಾ ದೇಹವನ್ನು ತ್ಯಾಗ ಮಾಡಿದ್ದಾನೆ.*
*ಅದರಂತೆ ನಿನಗೆ ಸಮಯ ಬಹಳ ಇದೆ.ಅದಕ್ಕೆ ಸಂತೋಷಪಡು. ಚಿಂತಿಸುವ ಅಗತ್ಯವಿಲ್ಲ. ಪರಮ ಮಂಗಳಕರವಾದ ಭಾಗವತ ವನ್ನು ಕೇಳು.ಇದು ಅಂತ್ಯಕಾಲದಲ್ಲಿ ನಿನಗೆ ಹರಿಯನಾಮ ಸ್ಮರಣೆ ಬರುವದು ಎಂದು ಹೇಳುತ್ತಾರೆ.*
 🙏ಶ್ರೀ ಕೃಷ್ಣಾರ್ಪಣ ಮಸ್ತು🙏
*ಹಾಳು ಹರಟೆಯಾಡಿ ಮನವ* |
*|ಬೀಳು ಮಾಡಿ ಕೊಳ್ಳಲು ಬೇಡಿ||ಏಳು ದಿನದ ಕಥೆಯು ಕೇಳಿ|ಏಳಿರೋ ವೈಕುಂಠಕೆ|*
🙏ಶ್ರೀ ಕಪಿಲಾಯ ನಮಃ🙏

Post a Comment

Previous Post Next Post