ಹಿಂದು ಜಾಗರಣ ವೇದಿಕೆ, ಕಲಬುರಗಿ.
ಸೆ, 20 ರಂದು ಹಿಂದು ಮಹಾಗಣಪತಿ ಬೃಹತ್ ಶೋಭಾಯಾತ್ರೆ.
ಕಲಬುರಗಿ.....
ಹಿಂದು ಜಾಗರಣ ವೇದಿಕೆ ಅಡಿಯಲ್ಲಿ ನಗರದ ಐತಿಹಾಸಿಕ ಕೋಟೆಯ ಮುಂಭಾಗದಲ್ಲಿ 21 ದಿನಗಳ ಕಾಲ ಪ್ರತಿಷ್ಟಾಪನೆ ಮಾಡಿದ ಹಿಂದು ಮಹಾ ಗಣಪತಿಯ ಭವ್ಯವಾದ ಶೋಭಾಯಾತ್ರೆ ಇದೇ 20ರಂದು ಹಮ್ಮಿಕೊಳ್ಳಲಾಗಿದೆ ಎಂದು ಹಿಂದು ಜಾಗರಣ ವೇದಿಕೆ ಜಿಲ್ಲಾ ಸಂಯೋಜಕ ನಾಗೇಂದ್ರ ಕಾಬಾಡೆ ತಿಳಿಸಿದರು.
ಅವರು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯನ್ನು ನಡೆಸಿ ಮಾತನಾಡಿ, 21 ದಿನಗಳ ಕಾಲ ದಿನನಿತ್ಯ ವಿಶೇಷ ಪೂಜೆ ಮತ್ತು ಪ್ರಸಾದದ ವ್ಯವಸ್ಥೆ ಮಾಡಿ, ಹತ್ತು ಹಲವು ವಿಶೇಷ ಕಾಯ೯ಕ್ರಮ ಆಯೋಜನೆ ಮಾಡುವ ಮೂಲಕ ಸ್ವಾತಂತ್ರ್ಯ ವೀರ ಸಾವಕ೯ರ ಬಗ್ಗೆ ಜಾಗೃತಿಯ ಅರಿವಿನ ಕೆಲಸ ಹಿಂದು ಜಾಗರಣ ವೇದಿಕೆ ಮಾಡುತ್ತಿದೆ ಎಂದರು.
ಸೆ,6ರಂದು ಹಿಂದು ಮಹಾಗಣಪತಿ, ಗೆ ಸಾವಿರ ಮಾತೇಯರಿಂದ ಮಹಾಮಂಗಳಾರತಿ. ಸೆ, 8ರಂದು ಪ್ರತಿಷ್ಠಿತ ಗಣೇಶ್ ಮಂಡಳಿಗಳ ಉತ್ಸವ ಸಮಿತಿ ಸದಸ್ಯರ ಸನ್ಮಾನ.ಸೆ,11ರಂದು ವಿವಿಧ ಶಾಲಾ ಕಾಲೇಜುಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು. ಸೆ,14 ವಿಶೇಷ ಉಪನ್ಯಾಸ. ಸೆ,16 ಕಲ್ಯಾಣ ಕನಾ೯ಟಕ ಉತ್ಸವ ದಿನದ ಕುರಿತು ಉಪನ್ಯಾಸ. ಸೆ,17 ಕಲ್ಯಾಣ ಕನಾ೯ಟಕ ವಿಮೋಚನಾ ದಿನಾಚರಣೆ. ಸೆ,19 ಚಿಂತಕ ಚಕ್ರವರ್ತಿ ಸೂಲಿಬೆಲೆ ಅವರಿಂದ ವೀರ ಸಾವರ್ಕರ್ ಕುರಿತು ವಿಶೇಷ ಉಪನ್ಯಾಸ ಹಮ್ಮಿಕೊಂಡಿದ್ದು, ಸೆ,20 ರಂದು ಸಾವಿರಾರು ಹಿಂದು ಬಾಂಧವರ ಸಮ್ಮುಖದಲ್ಲಿ ಬೃಹತ್ ಶೋಭಾಯಾತ್ರೆ ನೆರವೆರಲಿದೆ ಎಂದು ತಿಳಿಸಿದರು.
ಶೋಭಾಯಾತ್ರೆ ಸಂದರ್ಭದಲ್ಲಿ ದೇಶಿಯ ಕಲಾಕಾರರ ಪ್ರದಶ೯ನ ಹಮ್ಮಿಕೊಳ್ಳಲಾಗಿದೆ. ಜೊತೆಗೆ ಡೊಳ್ಳು, ಲೇಜಿಮ್,ಬ್ಯಾಂಡ್ ಬಾಜಾ,ಡೋಲಕ್ ಸೇರಿದಂತೆ ಇತ್ಯಾದಿ ಶೋಭಾಯಾತ್ರೆ ಗೆ ಮೆರಗು ತರಲಿವೆ ಎಂದು ಹೇಳಿದ ಅವರು, ಹೆಚ್ಚಿನ ಸಂಖ್ಯೆಯಲ್ಲಿ ಎಲ್ಲಾ ಬಾಂಧವರು ಭಾಗವಹಿಸಬೇಕೆಂದು ವಿನಂತಿಸಿದರು.
ಈ ಸಂದರ್ಭದಲ್ಲಿ ಶ್ರೀಮಂತ ನವಲದಿ, ಪ್ರಶಾಂತ್ ಗುಡ್ಡಾ, ಶಿವರಾಜ ಸಂಗೋಳಗಿ, ಸಿದ್ದರಾಜ ಬಿರಾದಾರ್, ಶ್ರೀಶೈಲ ಮೂಲಗೆ ಉಪಸ್ಥಿತರಿದ್ದರು.
Post a Comment