*ಬೆಳ್ಳಂಬೆಳಿಗ್ಗೆ ಕಲಬುರಗಿ ನಗರದಲ್ಲಿ ಎನ್.ಐ.ಎ ದಾಳಿ,ಪಿ.ಎಫ್.ಐ.ಸಂಘಟನೆ ಅಧ್ಯಕ್ಷ ಎಜಾಜ್ ಅಲಿ ವಶಕ್ಕೆ*ಶಿರಸಿ...
ಬೆಳಗ್ಗೆ ನಸುಕಿನಲ್ಲಿ 3.30ರಿಂದಲೇ ಅಬ್ದುಲ್ ಮನೆಯ ಬಳಿ ಪೊಲೀಸರ ದಂಡೇ
ಕಲಬುರಗಿ....
ಕಲಬುರಗಿ ನಗರದ ಟಿಪ್ಪು ಸುಲ್ತಾನ ನಗರದಲ್ಲಿ ಪಿ.ಎಫ್.ಐ.ಅಧ್ಯಕ್ಷನ ಮನೆ ಮೇಲೆ ಬೆಳ್ಳಂಬೆಳಿಗ್ಗೆ ಎನ್.ಐ.ಎ.ದಾಳಿ ಮಾಡಿದೆ.
ಪಿ.ಎಫ್.ಐ ಅಧ್ಯಕ್ಷ ಮತ್ತು ಖಜಾಂಚಿ ಮನೆ, ಕಚೇರಿ ಮೇಲೆ ಅಧಿಕಾರಿಗಳು ದಾಳಿ ಮಾಡಿದ್ದು,ನಸುಕಿನ ಜಾವವೇ ದಾಳಿ ಮಾಡಿ, ಪರಿಶೀಲನೆ ನಡೆಸುತ್ತಿದ್ದಾರೆ.
ಪಿ.ಎಫ್.ಐ.ಅಧ್ಯಕ್ಷ ಎಜಾಜ್ ಹುಸೇನ್ ಮನೆ ಮೇಲೆ ದಾಳಿ ನಡೆಸಲಾಗಿದೆ. ಈ ಮಧ್ಯೆ ಎನ್.ಐ.ಎ.ಹಾಗೂ ಬಿಜೆಪಿ ಸಕಾ೯ರ ವಿರುದ್ಧ ಪಿಎಫ್ ಐ ಕಾಯ೯ಕತ೯ರು ಪ್ರತಿಭಟನೆ ನಡೆಸಿದ್ದಾರೆ.
ಎಜಾಜ್ ಅಲಿ,ಯನ್ನು ವಶಕ್ಕೆ ಕರೆದೊಯ್ಯುವ ಸಂದರ್ಭದಲ್ಲಿ ಕಾಯ೯ಕತ೯ರು ಪ್ರತಿಭಟನೆ ಮಾಡಿದ್ದಾರೆ.ಈ ಮಧ್ಯೆಯೂ ಎಜಾಜ್ ಅಲಿಯನ್ನು ಪೋಲಿಸರು ಬಂಧನ ಮಾಡಿ,ವಶಕ್ಕೆ ತೆಗಗದುಕೊಂಡು ಹೋಗಿದ್ದಾರೆ.
ಪೋಲಿಸರು ಕರೆದೊಯ್ಯುವ ಸಂದರ್ಭದಲ್ಲಿ ಎಜಾಜ್ ಅಲಿ ಅವರ ಕಾಯ೯ಕತ೯ರಿಗೆ ಕೈ ಬಿಸಿ ತೆರಳಿದ್ದಾನೆ.
ಪಿಎಫ್ಐ ಸಂಘಟನೆಯ ರಾಜ್ಯ ಸದಸ್ಯ ಶಾಹೀದ್ ನಾಸಿರ್ ಮನೆ ಮೇಲೂ ಇದೇ ವೇಳೆ ದಾಳಿ ಮಾಡಲಾಗಿದೆ. ಎನ್.ಐ.ಎ.ದಾಳಿ ವೇಳೆ ಪಿಎಫ್ ಐ ಸಂಘಟನೆ ಖಜಾಂಚಿ ಹಾಗೂ ರಾಜ್ಯ ಸದಸ್ಯ ನಾಪತ್ತೆ ಯಾಗಿದ್ದಾರೆ.ಹೀಗಾಗಿ ಶಾಹೀದ್ ನಾಸಿರ್ ಮನೆಯ ಶೋಧ ಕಾರ್ಯ ಅಧಿಕಾರಿಗಳು ನಡೆಸುತ್ತಿದ್ದಾರೆ.
ಹಲವು ಮಹತ್ವದ ದಾಖಲೆಗಳನ್ನು ಎನ್.ಐ.ಎ.ಪೋಲಿಸರು ವಶಕ್ಕೆ ಪಡೆದುಕೊಂಡಿದ್ದಾರೆ. ಇನ್ನೂ ಪಿಎಫ್ ಐ ಅಧ್ಯಕ್ಷ ಎಜಾಜ್ ಅಲಿ ಮನೆ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ಎಜಾಜ್ ಮನೆಯಲ್ಲಿ 14 ಲಕ್ಷ ನಗದು ಹಣ ಪತ್ತೆಯಾಗಿದೆ.
ಪಿಎಫ ಐ ಸಂಘಟನೆಗೆ ಸಂಬಂಧಿಸಿದಂತೆ ಹಲವು ದಾಖಲಾತಿಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.ಈ ಸಂದರ್ಭದಲ್ಲಿ ಎಜಾಜ್ ಅಲಿ ಸಂಬಂಧ ಪಟ್ಟ ಹಲವು ಆಸ್ತಿ ಪತ್ರಗಳು ಪತ್ತೆಯಾಗಿದ್ದು,ಪಿಎಫ್ ಐ ಸಂಘಟನೆಗೆ ಸಂಬಂಧಿಸಿದಂತೆ ಮುಂದಿನ ಹೋರಾಟದ ಕಾಯ೯ಕ್ರಮಗಳ ಬಗ್ಗೆ ರೂಪಿಸಿರುವ ದಾಖಲಾತಿ ಪತ್ತೆಯಾಗಿದ್ದು,ಶೋಧ ಕಾರ್ಯ ಮುಂದುವರಿದಿದೆ.
[ಶಿರಸಿ : ರಾಜ್ಯದ ಹಲವು ಕಡೆ ದಾಳಿ ನಡೆದಂತೆ ಇಲ್ಲಿನ ಟಿಪ್ಪು ನಗರದಲ್ಲಿದ್ದ ಎಸ್ಡಿಪಿಐ ಕಾರ್ಯಕರ್ತನೋರ್ವನ್ನು ಬಂಧಿಸಿದ ಘಟನೆ ಗುರುವಾರ ಬೆಳಗ್ಗೆ ನಡೆದಿದೆ.
ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಅಧಿಕಾರಿಗಳು ದಾಳಿ ನಡೆಸಿದ್ದು, ಎಸ್ಡಿಪಿಐ ಮುಖಂಡ ಅಜೀಜ್ ಅಬ್ದುಲ್ ಶುಕುರ್ ಹೊನ್ನಾವರ್ (45) ಎಂಬಾತನನ್ನು ಬಂಧಿಸಲಾಗಿದೆ.
ಬೆಳಗ್ಗೆ ನಸುಕಿನಲ್ಲಿ 3.30ರಿಂದಲೇ ಅಬ್ದುಲ್ ಮನೆಯ ಬಳಿ ಪೊಲೀಸರ ದಂಡೇ ನೆರೆದಿತ್ತು. ಸುಮಾರು 6 ಗಂಟೆಯ ವೇಳೆಗೆ ಈತನ ಮನೆಗೆ ಅಧಿಕಾರಿಗಳು ತೆರಳಿದ್ದು ಒಂದು ಲ್ಯಾಪ್ ಟಾಪ್, 2 ಮೊಬೈಲ್, ಪುಸ್ತಕಗಳು ಹಾಗೂ ಒಂದು ಸಿಡಿಯನ್ನು ಜಪ್ತಿ ಮಾಡಿದ್ದಾರೆ ಎಂಬ ಮಾಹಿತಿ ದೊರೆತಿದೆ.
ಅಬ್ದುಲ್ ಜೊತೆ ಅಲ್ಲೇ ಸಮೀಪದಲ್ಲಿದ್ದ ಆತನ ತಮ್ಮನ ಮನೆಯ ಮೇಲೂ ಶೋಧ ನಡೆದಿದೆ. ಆದರೆ ಆತ ಮನೆಯಲ್ಲಿ ಇಲ್ಲದ ಕಾರಣ ಅಬ್ದುಲ್ ಬಂಧನ ಮಾತ್ರ ಆಗಿದೆ ಎಂದು ಮೂಲಗಳು ತಿಳಿಸಿವೆ.
Post a Comment