ಬೆಂಗಳೂರು ನಗರ ಜಿಲ್ಲಾಧಿಕಾರಿಯಾಗಿದ್ದ ಮಂಜುನಾಥ್ ಅವರನ್ನು ಜುಲೈ 4 ರಂದು ಅರೆಸ್ಟ್ ಮಾಡಲಾಗಿತ್ತು.ಈಗ ಅವರಿಗೆ ಜಾಮೀನು ದೊರೆತಿದ್ದು, 2 ತಿಂಗಳ ಬಳಿಕ ಜೈಲಿನಿಂದ ಬಿಡುಗಡೆಯಾಗುತ್ತಿದ್ಧಾರೆ.

ಬೆಂಗಳೂರು : 5 ಲಕ್ಷ ರೂ. ಲಂಚ ಪಡೆದ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಐಎಎಸ್ ಅಧಿಕಾರಿ ಮಂಜುನಾಥ್ ಗೆ ಎಸಿಬಿ ಕೋರ್ಟ್ ಷರತ್ತು ಬದ್ಧ ಜಾಮೀನು ನೀಡಿದೆ. ಲಂಚ ಪಡೆದ ಪ್ರಕರಣದಲ್ಲಿ ಬೆಂಗಳೂರು ನಗರ ಜಿಲ್ಲಾಧಿಕಾರಿಯಾಗಿದ್ದ ಮಂಜುನಾಥ್ ಅವರನ್ನು ಜುಲೈ 4 ರಂದು ಅರೆಸ್ಟ್ ಮಾಡಲಾಗಿತ್ತು.ಈಗ ಅವರಿಗೆ ಜಾಮೀನು ದೊರೆತಿದ್ದು, 2 ತಿಂಗಳ ಬಳಿಕ ಜೈಲಿನಿಂದ ಬಿಡುಗಡೆಯಾಗುತ್ತಿದ್ಧಾರೆ. ಬೆಂಗಳೂರು ನಗರ ಜಿಲ್ಲಾಧಿಕಾರಿಯಾಗಿದ್ದ ಮಂಜುನಾಥ್ ಅವರು ಆನೇಕಲ್ ತಾಲೂಕಿನ ಕೂಡ್ಲು ಗ್ರಾಮದ 38 ಗುಂಟೆ ಜಮೀನು ಸಂಬಂಧ ಆದೇಶ ಮಾಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದರು.

ಈ ಸಂಬಂಧ ಮೇ 21 ರಂದು 5 ಲಕ್ಷ ರೂ. ಲಂಚ ಪಡೆಯುವಾಗ ಎಸಿಬಿ ದಾಳಿ ನಡೆಸಿತ್ತು. ಈ ಪ್ರಕರಣದಲ್ಲಿ ಅರೇಸ್ಟ್ ಆಗಿ ಜೈಲು ಸೇರಿದ್ದ ಐಎಎಸ್ ಅಧಿಕಾರಿ ಮಂಜುನಾಥ್ ಅವರ ಜಾಮೀನು ಅರ್ಜಿ ಎಸಿಬಿ ಕೋರ್ಟ್ ಮತ್ತು ಹೈಕೋರ್ಟ್ ನಲ್ಲಿ ವಜಾ ಆಗಿತ್ತು. ಆದರೆ ಕೇಸ್ ದಾಖಲಾಗಿ ಎರಡು ತಿಂಗಳಾದ್ರು ಎಸಿಬಿ ಚಾರ್ಜ್ ಸಲ್ಲಿಸಿಲ್ಲ. ಯಾವುದೇ ಆರೋಪಿ ಕೇಸ್ ದಾಖಲಾಗಿ ಎರಡು ತಿಂಗಳಾದ್ರು ತನಿಖಾ ಸಂಸ್ಥೆ ಚಾರ್ಜ್ ಶೀಟ್ ಹಾಕದೇ ಇದ್ದರೆ ಡಿಫಾಲ್ಟ್ ನಡಿ ಜಾಮೀನು ಪಡೆಯಬಹುದು. ಇದೇ ಆಧಾರದಲ್ಲಿ ಮಂಜುನಾಥ್ ಪರ ವಕೀಲರು ಡಿಫಾಲ್ಟ್ ಬೇಲ್ ಅರ್ಜಿ ಸಲ್ಲಿಸಿದ್ದರು. ಇಂದು ಅರ್ಜಿ ವಿಚಾರಣೆ ನಡೆಸಿದ ಎಸಿಬಿ ಕೋರ್ಟ್ ಷರತ್ತುಬದ್ದ ಜಾಮೀನು ಮಂಜೂರು ಮಾಡಿದೆ.

Post a Comment

Previous Post Next Post