ಹಾಸ್ಯನಟ ರಾಜು ಶ್ರೀವಾಸ್ತವ್‌ ನಿಧನ ಹೊಂದಿದ್ದಾರೆ. ಅವರಿಗೆ 58 ವರ್ಷ ವಯಸ್ಸಾಗಿತ್ತು.

  ಜನ್ ನಪ್ರಿಯ ಹಾಸ್ಯನಟ ರಾಜು ಶ್ರೀವಾಸ್ತವ್‌ ನಿಧನ ಹೊಂದಿದ್ದಾರೆ. ಅವರಿಗೆ 58 ವರ್ಷ ವಯಸ್ಸಾಗಿತ್ತು. ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಆಗಸ್ಟ್ 10 ರಂದು ರಾಜು ಶ್ರೀವಾಸ್ತವ್‌ಗೆ ಎದೆನೋವಿನ ಸಮಸ್ಯೆ ಕಾಣಿಸಿಕೊಂಡ ಕಾರಣ ಅವರನ್ನು ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತುಅಲ್ಲಿಂದ ಅವರ ಆರೋಗ್ಯ ಸ್ಥಿತಿ ಗಂಭೀರವಾಗುತ್ತಲೇ ಸಾಗಿತ್ತು. ಕೊನೆಗೆ ಸೆಪ್ಟೆಂಬರ್ 21 ರಂದು ಮುಂಜಾನೆ ಅವರು ಕೊನೆ ಉಸಿರೆಳೆದಿದ್ದಾರೆ.


ಆಸ್ಪತ್ರೆಗೆ ದಾಖಲಾದ ಬಳಿಕ ಸತತ 15 ದಿನಗಳ ಕಾಲ ಅವರನ್ನು ವೆಂಟಿಲೇಟರ್ ನಲ್ಲಿ ಇಡಲಾಗಿತ್ತು. ಬಳಿಕ ಅವರ ಆರೋಗ್ಯದಲ್ಲಿ ತುಸು ಚೇತರಿಕೆ ಬಂದ ಕಾರಣ ವೆಂಟಿಲೇಟರ್ ತೆಗೆದಿದ್ದರು, ಬಳಿಕ ಮತ್ತೆ ತೀವ್ರ ಜ್ವರ ಹಾಗೂ ಉಸಿರಾಟದ ಸಮಸ್ಯೆ ಎದುರಾಗಿ ಅವರನ್ನು ಮತ್ತೆ ಜೀವರಕ್ಷಕ ಸಾಧನಗಳನ್ನು ಅಳವಡಿಸಲಾಗಿತ್ತು. ಹಾಗಿದ್ದರೂ ರಾಜು ಶ್ರೀವಾತ್ಸವ್ ಉಸಿರು ಉಳಿಯಲಿಲ್ಲ.


ಸತ್ಯ ಪ್ರಕಾಶ್ ಶ್ರೀವಾಸ್ತವ್ ಹೆಸರಿನ ಇವರು ರಾಜು ಶ್ರೀವಾಸ್ತವ್ ಎಂದೇ ಪರಿಚಿತರು, 1988 ರಿಂದಲೂ ಹಿಂದಿ ಸಿನಿಮಾಗಳಲ್ಲಿ ಸಣ್ಣ-ಪುಟ್ಟ ಪಾತ್ರಗಳನ್ನು ಮಾಡುತ್ತಲೇ ಬಂದಿದ್ದರು. ಆದರೆ ಹಿಂದಿ ಸಿನಿಮಾಗಳಲ್ಲಿ ಪ್ರಮುಖ ಹಾಸ್ಯನಟನಾಗಿ ಗುರುತಿಸಿಕೊಳ್ಳಲಾಗಿರಲಿಲ್ಲ. ಆದರೆ ಸ್ಟಾಂಡಪ್‌ ಕಾಮಿಡಿ ಹಾಗೂ ಕೆಲವು ಹಾಸ್ಯ ಶೋಗಳಿಂದ ರಾಜು ದೊಡ್ಡ ಹೆಸರುಗಳಿಸಿದರು.


ಕಪಿಲ್ ಶರ್ಮಾಗೆ ಮುನ್ನ ರಾಜು ಶ್ರೀವಾಸ್ತವ್ ಹಿಂದಿ ಭಾಗದ ನಂಬರ್ 1 ಹಾಸ್ಯಕಲಾವಿದರಾಗಿ ಮಿಂಚಿದರು. 'ದಿ ಗ್ರೇಟ್ ಇಂಡಿಯನ್ ಲಾಫ್ಟರ್ ಚಾಲೆಂಜ್', 'ಕಾಮಿಡಿ ಸರ್ಕಸ್', 'ಕಾಮಿಡಿ ಕಾ ಮಹಾ ಮುಕಾಬ್ಲಾ', 'ಲಾಫ್ ಲಾಫ್ ಲಾಫ್'ಗಳಲ್ಲಿ ಸ್ಪರ್ಧಿಯಾಗಿ ಭಾಗವಹಿಸಿ ಟಿವಿ ಮೂಲಕ ಕೋಟ್ಯಂತರ ಜನರನ್ನು ನಕ್ಕು ನಲಿಸಿದ್ದ ರಾಜು ಶ್ರೀವಾಸ್ತವ್, 'ನಚ್ ಬಲಿಯೆ' ಹಾಗೂ 'ಬಿಗ್ ಬಾಸ್' ಗಳಲ್ಲಿಯೂ ಸ್ಪರ್ಧಿಯಾಗಿ ಭಾಗವಹಿಸಿದ್ದರು.


'ತೇಜಾಬ್', 'ಬಾಜಿಗರ್', 'ಮೇನೆ ಪ್ಯಾರ್ ಕಿಯಾ', ಬಾಂಬೆ ಟು ಗೋವಾ' ಇನ್ನೂ ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ರಾಜು ಶ್ರೀವಾಸ್ತವ್ ನಟಿಸಿದ್ದಾರೆ. ಕಪಿಲ್ ಶರ್ಮಾ, ಭಾರತಿ ಸಿಂಗ್, ಸುನಿಲ್ ಗ್ರೋವರ್ ಇವರುಗಳಿಗಿಂತಲೂ ಮೊದಲೇ ಕಮಿಡಿಯನ್ ಆಗಿ ದೊಡ್ಡ ಹೆಸರು ಮಾಡಿದ್ದರು ರಾಜು ಶ್ರೀವಾಸ್ತವ್.

.

Post a Comment

Previous Post Next Post