ಐಎಸ್ ನಂಟು | ಇಬ್ಬರು ಶಂಕಿತ ರ ಬಂಧನ - ರಾಜ್ಯದಲ್ಲಿ ಭಯೋತ್ಪಾದಕ ಕೃತ್ಯಕ್ಕೆ ಭಾರೀ ಸಂಚು

 ಐಎಸ್ ಜತೆ ನಂಟು | ಇಬ್ಬರು ಶಂಕಿತ ಉಗ್ರರ ಬಂಧನ

ನಡೆದಿತ್ತು ರಾಜ್ಯದಲ್ಲಿ ಭಯೋತ್ಪಾದಕ ಕೃತ್ಯಕ್ಕೆ ತಯಾರಿ 

ಭಾರೀ ಸೋಟ ಸಂಚು

ಶಿವಮೊಗ್ಗ: ಇಸ್ಲಾಮಿಕ್ ಸ್ಟೇಟ್(ಐಎಸ್) ಭಯೋತ್ಪಾದಕ ಸಂಘಟನೆ ಜತೆ ನಂಟು ಹೊಂದಿರುವ ಆರೋಪದಲ್ಲಿ ಇಬ್ಬರು ಶಂಕಿತ ಉಗ್ರರನ್ನು ಇಲ್ಲಿನ ಪೊಲೀಸರು ಬಂಸಿದ್ದಾರೆ. ಬಂತರನ್ನು ಶಿವಮೊಗ್ಗದ ಸಯ್ಯದ್ ಯಾಸಿನ್ ಯಾನೆ ಬೈಲು ಹಾಗೂ ಮಂಗಳೂರಿನ ಮಾಜ್ ಮುನೀರ್ ಅಹ್ಮದ್ ಎಂದು ಗುರುತಿಸಲಾಗಿದೆ.

ಪ್ರಕರಣ ಸಂಬಂಧ ಗ್ರಾಮಾಂತರ ಪೊಲೀಸರು ಮೂವರ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ಇಬ್ಬರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ಸೆಪ್ಟೆಂಬರ್ 29ರವರೆಗೆ ವಿಚಾರಣೆಗೆ ಪೊಲೀಸ್ ವಶಕ್ಕೆ ಪಡೆಯಲಾಗಿದೆ.

ಶಿವಮೊಗ್ಗದಲ್ಲಿ ಭಯೋತ್ಪಾದಕ ಕೃತ್ಯ ನಡೆಸಲು ಸಂಚು ರೂಪಿಸಿರುವ ಖಚಿತ ಮಾಹಿತಿ ಮೇರೆಗೆ ಗ್ರಾಮಾಂತರ ಪೊಲೀಸರು ಕಾಯರ್ಾಚರಣೆ ನಡೆಸಿ ಸಿದ್ದೇಶ್ವರ ನಗರದ ಸಯ್ಯದ್ ಯಾಸಿನ್ ಅಲಿಯಾಸ್ ಬೈಲು(21) ಹಾಗೂ ಮಂಗಳೂರಿನ ಮಾಜ್ ಮುನೀರ್ ಅಹ್ಮದ್(22)ನನ್ನು ಬಂಸಿದ್ದಾರೆ. ತೀರ್ಥಹಳ್ಳಿ ತಾಲೂಕು ಸೊಪ್ಪುಗುಡ್ಡೆ ನಿವಾಸಿ ಶಾರಿಕ್ ತಲೆಮರೆಸಿಕೊಂಡಿದ್ದಾನೆ.

ಭಯೋತ್ಪಾದಕ ಕೃತ್ಯ ಸಂಚಿನ ಮಾಹಿತಿ ಮೇರೆಗೆ ಭದ್ರಾವತಿ ವಿಭಾಗದ ಎಎಸ್ಪಿ, ಐಎಎಸ್ ಅಕಾರಿ ಜಿತೇಂದ್ರಕುಮಾರ್ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆರೋಪಿಗಳು ರಾಷ್ಟ್ರಧ್ವಜವನ್ನು ಕೂಡ ಸುಟ್ಟಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಇನ್ನು ಸಯ್ಯದ್ ಯಾಸಿನ್ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಪದವಿ ಪಡೆದಿದ್ದಾನೆ. ಅಂತೆಯೇ ಮಂಗಳೂರಿನ ಮುನೀರ್ ಅಹ್ಮದ್ ಎಂಟೆಕ್ ಪದವೀಧರ. ಇಬ್ಬರೂ ಬಾಂಬ್ ತಯಾರಿಕೆಯ ತರಬೇತಿ ಪಡೆದಿದ್ದರು ಎನ್ನಲಾಗುತ್ತಿದೆ. ದೇಶದ ಐಕ್ಯತೆ, ಸಾರ್ವಜನಿಕರ ಪ್ರಾಣಕ್ಕೆ ಕುತ್ತು ತರುವ ಸೋಟಕಗಳನ್ನು ಇವರುಗಳು ಹೊಂದಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಘಟನೆ ಸಂಬಂಧ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಉಗ್ರ ಸಂಘಟನೆಗಳ ಜೊತೆ ಸಂಪರ್ಕದ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಕಾರಿ ಬಿ.ಎಂ. ಲಕ್ಷ್ಮೀಪ್ರಸಾದ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.


ಬಾಕ್ಸ್:

ಸಾವರ್ಕರ್ ಫ್ಲೆಕ್ಸ್ ಗಲಾಟೆಯಿಂದ ಬಯಲು

ನಗರದ ಅಮೀರ್ ಅಹ್ಮದ್ ವೃತ್ತದಲ್ಲಿ ಆಗಸ್ಟ್ 15ರ ಸ್ವಾತಂತ್ರ್ಯ ದಿನದಂದು ವೀರ ಸಾವರ್ಕರ್ ಫ್ಲೆಕ್ಸ್ ಅಳವಡಿಸಲಾಗಿತ್ತು. ಇದನ್ನು ಎಸ್ಡಿಪಿಐ ಕಾರ್ಯಕರ್ತರು ಆಕ್ಷೇಪಿಸಿದ್ದರು. ಕೊನೆಗೆ ನಗರದಲ್ಲಿ ಪ್ರಕ್ಷ್ಯುಬ್ಧ ಪರಿಸ್ಥಿತಿ ನಿಮರ್ಾಣವಾಗಿ 144ನೇ ಸೆಕ್ಷನ್ ಹೇರಲಾಗಿತ್ತು.

ಫ್ಲೆಕ್ಸ್ ವಿಚಾರಕ್ಕೆ ನಡೆದ ಗಲಾಟೆ ಬಳಿಕ ಗಾಂ ಬಜಾರ್ನಲ್ಲಿ ಪ್ರೇಮ್ಸಿಂಗ್ ಎಂಬ ಯುವಕನಿಗೆ ಇರಿಯಲಾಗಿತ್ತು. ಇರಿತ ಪ್ರಕರಣದಲ್ಲಿ ಎಸ್ಡಿಪಿಐ ಕಾರ್ಯಕರ್ತರನ್ನು ಬಂಸಲಾಗಿತ್ತು. ಬಂತ ಜಬೀ ಮೊಬೈಲ್ಗಳನ್ನು ವಶಕ್ಕೆ ಪಡೆದು ತನಿಖೆ ನಡೆಸಿದಾಗ ಹಲವು ದೇಶ ವಿರೋ ಸಂಘಟನೆಗಳ ಜೊತೆ ಸಂಪರ್ಕ ಹೊಂದಿರುವುದು ಬೆಳಕಿಗೆ ಬಂದಿತ್ತು. ಅದರ ಮುಂದುವರಿದ ಭಾಗ ಶಂಕಿತ ಉಗ್ರರ ಬಂಧನವಾಗಿದೆ.


ಬಾಕ್ಸ್

ಲಷ್ಕರೆ, ತಾಲಿಬಾನ್ ಪರ ಗೋಡೆ ಬರಹದಲ್ಲಿ ಬಂತ

ಮಂಗಳೂರು: ಶಿವಮೊಗದಲ್ಲಿ ಬಂತನಾಗಿರುವ ಮಾಜ್ ಮುನೀರ್ ಅಹ್ಮದ್ 2020ರ ನವೆಂಬರ್ನಲ್ಲಿ ಮಂಗಳೂರಿನಲ್ಲಿ ಲಷ್ಕರ್ ಇ ತೋಯಿಬಾ ಮತ್ತು ತಾಲಿಬಾನ್ ಉಗ್ರ ಸಂಘಟನೆ ಪರ ಗೋಡೆ ಬರಹ ಪ್ರಕರಣದಲ್ಲಿ ಆರೋಪಿಯಾಗಿದ್ದಾನೆ.

ಮಹಮ್ಮದ್ ಶಾರೀಕ್ (23) ಕೂಡ ಮಂಗಳೂರಿನ ಗೋಡೆ ಬರಹ ಪ್ರಕರಣದಲ್ಲಿ ಆರೋಪಿಯಾಗಿದ್ದಾನೆ. ಮಹಮ್ಮದ್ ಶಾರೀಕ್ ಬಂಧನ ಆಗಬೇಕಿದೆ. ಮಾಜ್ ಮುನೀರ್ ಅಹ್ಮದ್ ನಗರ ಹೊರವಲಯದ ಮುಡಿಪು ಬಳಿಯ ಖಾಸಗಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಅಂತಿಮ ವರ್ಷ ಎಂಟೆಕ್ ವ್ಯಾಸಂಗ ಮಾಡುತ್ತಿದ್ದಾನೆ. ಮಹಮ್ಮದ್ ಶಾರೀಕ್  ಸೇಲ್ಸ್ಮ್ಯಾನ್ ಆಗಿದ್ದ.

ಇವರು ತೀರ್ಥಹಳ್ಳಿ ಮೂಲದವರು. ಇದೀಗ ಐಎನ್ ಉಗ್ರ ಸಂಘಟನೆ ನಂಟಿನ ಹಿನ್ನೆಲೆಯಲ್ಲಿ  ಮಾಜ್ ಎರಡನೇ ಸಲ ಬಂತನಾಗಿದ್ದು, ವಿದೇಶದಲ್ಲಿರುವ ತೀರ್ಥಹಳ್ಳಿಯ ಅರಾಫತ್ ಅಲಿ ಸೂಚನೆಯಂತೆ ಮಂಗಳೂರಿನಲ್ಲಿ ಗೋಡೆ ಬರಹ ಬರೆದಿದ್ದ. ಈತ ಮಂಗಳೂರಿನ ಆರ್ಯಸಮಾಜ ರಸ್ತೆಯ ವಸತಿ ಸಮುಚ್ಛಯದಲ್ಲಿ ತಂದೆ, ತಾಯಿ ಜತೆ ವಾಸ್ತವ್ಯವಿದ್ದು, ಎಂಜಿನಿಯರಿಂಗ್ ಕಲಿಕೆ ಜತೆಗೆ ಆಹಾರ ಡೆಲಿವರಿ ಕೆಲಸ ಮಾಡುತ್ತಿದ್ದ.

2020 ನ.27ರಂದು ಕದ್ರಿ ಠಾಣೆಯ ಬಳಿ ಸಕರ್ೀಟ್ ಹೌಸ್ ರಸ್ತೆಯ ಅಪಾಟರ್್ಮೆಂಟ್ನ ಗೋಡೆ ಬರಹದಲ್ಲಿ `ಇಲ್ಲಿನ ಸಂಘಿಗಳು ಮತ್ತು ಮನುವಾದಿಗಳ ಜತೆ ವ್ಯವಹರಿಸಲು ಲಷ್ಕರ್ ಮತ್ತು ತಾಲಿಬಾನಿಗಳನ್ನು ಬರುವಂತೆ ಮಾಡಬೇಡಿ. ಲಷ್ಕರ್ ಜಿಂದಾಬಾದ್, ತಾಲಿಬಾನ್ ಜಿಂದಾಬಾದ್' ಎಂದು ಇಂಗ್ಲಿಷ್ನಲ್ಲಿ ಬರೆಯಲಾಗಿತ್ತು. ಈ ಗೋಡೆ ಬರಹ ಪ್ರಕರಣದಿಂದ ಆತಂಕ ಉಂಟಾಗುತ್ತಿದ್ದಂತೆ ಪೊಲೀಸರು ಆರೋಪಿಗಳನ್ನು 2020ರ ಡಿಸೆಂಬರ್ನಲ್ಲಿ ಬಂಸಿ ವಿಚಾರಣೆ ನಡೆಸಿದ್ದರು.

ಮಹಮ್ಮದ್ ಶಾರೀಕ್ ಉಗ್ರ ಸಂಘಟನೆ ಪ್ರಚೋದಿಸುವ ವಾಟ್ಸಾಪ್ ಗ್ರೂಪ್ ಅಡ್ಮಿನ್ ಆಗಿದ್ದ. ಮಾಜ್ ಜಿಲ್ಲಾ ಸೆಷನ್ ಕೋಟರ್್ನಿಂದ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ. ಶಾರೀಕ್ಗೆ ಒಂಭತ್ತು ತಿಂಗಳಲ್ಲಿ ಹೈಕೋಟರ್್ನಿಂದ ಜಾಮೀನು ದೊರೆತು ಬಿಡುಗಡೆಯಾಗಿದ್ದ. ಇವರಿಬ್ಬರ ಜತೆ ತೀರ್ಥಹಳ್ಳಿಯ ಬಟ್ಟೆ ವ್ಯಾಪಾರಿ  ಸಾದತ್ ಹುಸೇನ್ನನ್ನೂ ಬಂಸಲಾಗಿತ್ತು.

ಮಾಜ್ ನಾಪತ್ತೆಯಾಗಿದ್ದಾನೆ ಎಂದು ಮಂಗಳೂರಿನ ಕದ್ರಿ ಪೊಲೀಸ್ ಠಾಣೆಯಲ್ಲಿ ಆತನ ಪೋಷಕರು ದೂರು ನೀಡಿದ್ದರು. ಪುತ್ರನನ್ನು ಪತ್ತೆಮಾಡಿ ಕೊಡುವಂತೆ ಉಚ್ಛ ನ್ಯಾಯಾಲಯಕ್ಕೂ ಹೇಬಿಯಸ್ ಕಾರ್ಪಸ್ ಅಜರ್ಿ ಸಲ್ಲಿಸಿದ್ದರು ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ತಿಳಿಸಿದ್ದಾರೆ.


=

Post a Comment

Previous Post Next Post