ಬೆಂಗಳೂರು: ಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವ ಇಲಾಖೆಯ ಗುತ್ತಿಗೆ ನೌಕರಿಗೆ ಕರ್ತವ್ಯ ಸಂದರ್ಭದಲ್ಲಿ ಮೃತಪಡುವ ಸಿಬ್ಬಂದಿಗಳ ಕುಟುಂಬಕ್ಕೆ ೨೫ ಲ.ರೂ. ಪರಿಹಾರಧನ ಒದಗಿಸಲು ಸರ್ಕಾರದ ಗಮನಕ್ಕೆ ತರುವುದಾಗಿ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಭರವಸೆ ನೀಡಿದರು.

 ಬೆಂಗಳೂರು: ಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವ ಇಲಾಖೆಯ ಗುತ್ತಿಗೆ ನೌಕರಿಗೆ ಕರ್ತವ್ಯ ಸಂದರ್ಭದಲ್ಲಿ ಮೃತಪಡುವ ಸಿಬ್ಬಂದಿಗಳ ಕುಟುಂಬಕ್ಕೆ ೨೫ ಲ.ರೂ. ಪರಿಹಾರಧನ ಒದಗಿಸಲು ಸರ್ಕಾರದ ಗಮನಕ್ಕೆ ತರುವುದಾಗಿ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ  ಸಿ.ಎಸ್. ಷಡಾಕ್ಷರಿ ಭರವಸೆ ನೀಡಿದರು.

ರಾಜ್ಯ ಆರೋಗ್ಯ ಇಲಾಖೆ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮದ ಗುತ್ತಿಗೆ ನೌಕರರ ಸಂಘದ ವತಿಯಿಂದ ಗುರುವಾರ ಟೌನ್‌ಹಾಲ್‌ನಲ್ಲಿ ಹಮ್ಮಿಕೊಂಡ ರಾಜ್ಯಮಟ್ಟದ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.

 ಆರೋಗ್ಯ ಇಲಾಖೆಯ ಕ್ಷಯ ರೋಗ ನಿರ್ಮೂಲನಾ ಕಾರ್ಯಕ್ರಮದಡಿಯಲ್ಲಿ ಕೆಲಸ ಮಾಡುವ ಸಿಬ್ಬಂದಿಗಳ ಪರಿಶ್ರಮದಿಂದ ಕ್ಷಯ ರೋಗ ಹರಡುವಿಕೆ ತಡೆಯುವಲ್ಲಿ ಹಂತ ಹಂತವಾಗಿ ಆರೋಗ್ಯ ಇಲಾಖೆ ಯಶಸ್ವಿಯಾಗಿದೆ. ನೌಕರರು ಸೇವಾ ಭದ್ರತೆ ಸೇರಿದಂತೆ ಒಟ್ಟು ೩ ಬೇಡಿಕೆಯನ್ನು ಸರ್ಕಾರದ ಮುಂದಿಟ್ಟಿದ್ದಾರೆ. ಅದನ್ನು ಸರ್ಕಾರದ ಮುಂದಿಟ್ಟು ಸಹಕಾರಗೊಳಿಸುವತ್ತ ಪ್ರಯತ್ನಿಸಲಾಗುತ್ತದೆ. ಎಲ್ಲ ಆರೋಗ್ಯದ ಬಗ್ಗೆ ಎಚ್ಚರ ವಹಿಸುವವರ ಆರೋಗ್ಯವನ್ನು ನೋಡಿಕೊಳ್ಳುವುದು ನಮ್ಮ ಆದ್ಯ ಕರ್ತವ್ಯ ಎಂದರು.

ಸAಘದ ಅಧ್ಯಕ್ಷ ಮಹಾದೇವಪ್ಪ ಎಂ. ಮಾತನಾಡಿ, ಜಾಗತಿಕ ಮಟ್ಟದಲ್ಲಿ ಶೇ.೨೭ರಷ್ಟು ಕ್ಷಯ ರೋಗವು ಭಾರತದಲ್ಲಿ ಪತ್ತೆಯಾಗುತ್ತಿದೆ. ರಾಜ್ಯದಲ್ಲಿ ಪ್ರತಿವರ್ಷ ೧.೭೦ ಲಕ್ಷ ಮಂದಿ ಕ್ಷಯ ರೋಗಕ್ಕೆ ತುತ್ತಾಗುತ್ತಾರೆ. ಅವರಲ್ಲಿ ಶೇ.೫ರಷ್ಟು ಮಂದಿ ಸೋಂಕಿನಿAದ ಮರಣ ಹೊಂದುತ್ತಿದ್ದಾರೆ. ಕ್ಷಯ ರೋಗವನ್ನು ಪ್ರಾರಂಭಿಕ ಹಂತದಲ್ಲಿ ಪತ್ತೆ ಹಚ್ಚಿ, ಸರಿಯಾದ ಚಿಕಿತ್ಸೆ ನೀಡುವ ಮೂಲಕ ಸೋಂಕಿನಿAದ ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಿದೆ. ಪ್ರಸ್ತುತ ರಾಜ್ಯದಲ್ಲಿ ಕ್ಷಯ ರೋಗದ ಸಂಖ್ಯೆಯಲ್ಲಿ ಇಳಿಕೆಯಾಗಿದೆ ಎಂದು ಮಾಹಿತಿ ನೀಡಿದರು. 

ಕೊರೊನಾ ಸವಾಲಿನ ನಡುವೆಯೂ ಕ್ಷಯ ರೋಗವನ್ನು ನಿಯಂತ್ರಿಸುವಲ್ಲಿ ಬೆಂಗಳೂರು ನಗರ, ಬೆಳಗಾವಿ, ಉಡುಪಿ, ಉ.ಕ., ಯಾದಗಿರಿ ಜಿಲ್ಲೆ ಹಾಗೂ ಕಂಚಿನ ಪದಕಕ್ಕೆ ಬೆಂಗಳೂರು ಗ್ರಾಮಾಂತರ, ವಿಜಯಪುರ, ಚಾಮರಾಜನಗರ, ದಾವಣಗೆರೆ, ಧಾರವಾಡ, ಕೋಲಾರ, ಮಂಡ್ಯ, ಶಿವಮೊಗ್ಗ, ತುಮಕೂರು ಜಿಲ್ಲೆ ಯಶಸ್ವಿಯಾಗಿದ್ದು,

 ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಬೆಳ್ಳಿ ಹಾಗೂ ಕಂಚಿನ ಪದಕಗಳನ್ನು ಪಡೆದುಕೊಂಡಿದೆ ಎಂದು ಮಾಹಿತಿ ನೀಡಿದರು.

ಸಮ್ಮೇಳನದಲ್ಲಿ ರಾಜ್ಯದ ೧,೦೦೦ ಅಧಿಕ ಆರೋಗ್ಯ ಇಲಾಖೆಯ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗಳು ಭಾಗವಹಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿವಮೊಗ್ಗೆ ಕುಮಾರ್ ಎಸ್., ಸಂಘದ ಕಾರ್ಯಾಧ್ಯಕ್ಷ ಸುರೇಶ್ ದೊಡ್ಮನಿ, ಪ್ರ. ಕಾರ್ಯದರ್ಶಿ ಗುರುನಾಥ್ ಕಳಸಣ್ಣವರ್, ಮಾಧ್ಯಮಾ ಪ್ರತಿನಿಧಿ ಶಾವ್‌ರಾಜ್ ಉಪಸ್ಥಿತರಿದ್ದರು. 

ಬಿಬಿಎಂಪಿ ಅಶ್ವಥ್ ಎಚ್.ಕೆ. ವಂದಿಸಿದರು. ಆರೋಗ್ಯ ಇಲಾಖೆ ಶರ್ಮಿಳಾ ಕಾರ್ಯಕ್ರಮ ನಿರೂಪಿಸಿರು.

Post a Comment

Previous Post Next Post