ನ್ನೆ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ವಾಡಿಕೆಯೆಂಬಂತೆ ಕಾಶ್ಮೀರ ವಿಚಾರವನ್ನ ಎತ್ತಿ ಟರ್ಕಿ ಅಧ್ಯಕ್ಷ ರೀಸಿಪ್ ತಾಯಿಪ್ ಎರ್ಡೋಗನ್ ತಮ್ಮ ಮೊಂಡು ಬುದ್ದಿ ಪ್ರದರ್ಶನ ಮಾಡಿದ್ರು. ಇದರ ಬೆನ್ನಲ್ಲೇ ಭಾರತದ ವಿದೇಶಾಂಗ ಸಚಿವ ಎಸ್ ಜೈ ಶಂಕರ್ ಟರ್ಕಿ ವಿದೇಶಾಂಗ ಸಚಿವ ಮೆವ್ಲುಟ್ ಕವಶೊಗ್ಲು ಜೊತೆಗೆ ಭಾರತ ಹಾಗೂ ಟರ್ಕಿಯ ದ್ವಿಪಕ್ಷೀಯ ಸಂಬಂಧದ ಬಗ್ಗೆ ಮಾತನಾಡಿದ್ದಾರೆ.ಈ ವೇಳೆ ಟರ್ಕಿಗೆ ತಲೆನೋವಾಗಿರೋ ವಿವಾದಿತ ಸೈಪ್ರೆಸ್ ವಿಚಾರದ ಬಗ್ಗೆ ಕೂಡ ಡಿಸ್ಕಸ್ ಮಾಡಲಾಗಿದೆ. ಈ ಕುರಿತು ಟ್ವೀಟ್ ಮಾಡಿರೋ ಜೈ ಶಂಕರ್ ಟರ್ಕಿ ಜೊತೆಗೆ ಯುಕ್ರೇನ್ ಬಿಕ್ಕಟ್ಟು, ಜಿ-20 ಗುಂಪಿನ ಸಹಕಾರದ ಜೊತೆಗೆ ಸೈಪ್ರಸ್ ವಿಚಾರವಾಗಿ ಕೂಡ ಮಾತನಾಡಿದ್ದೀವಿ ಅಂತ ಹೇಳಿದ್ದಾರೆ. ಈ ಮೂಲಕ ಕಾಶ್ಮೀರ ವಿಚಾರವನ್ನ ಎತ್ತಿದ್ರೆ ನಾವು ನಿಮ್ಮ ಬುಡಕ್ಕೂ ಬೆಂಕಿ ಹಚ್ಚೋದು ಗ್ಯಾರಂಟಿ ಅನ್ನೋ ಸ್ಪಷ್ಟ ಸಂದೇಶವನ್ನ ಜೈ ಶಂಕರ್ ಟರ್ಕಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಅಂದ್ಹಾಗೆ ಈ ಸೈಪ್ರೆಸ್ ವಿವಾದ ಏನು? ಟರ್ಕಿಗೂ ಅದಕ್ಕೂ ಇರೋ ಸಂಘರ್ಷವೇನು? ಗ್ರೀಕ್ ಕೂಡ ಇದರಲ್ಲಿ ಇಂಪಾರ್ಟೆಂಟ್ ರೋಲ್ ವಹಿಸ್ತಿರೋದು ಯಾಕೆ ಎಲ್ಲವನ್ನೂ ನಾವು ಶೀಘ್ರದಲ್ಲೇ ವರದಿ .....
Post a Comment