ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಇಂದು ಶ್ರೀ ಧರ್ಮಸ್ಥಳ ಮಂಜುನಾಥೇಶ್ವಾರ ಟ್ರಸ್ಟ್ ವತಿಯಿಂದ ನೆಲಮಂಗಲ ಬಳಿ ನಿರ್ಮಿಸಿರುವ ಕ್ಷೇಮ ವನ ಪ್ರಕೃತಿ ಚಿಕಿತ್ಸಾ ಕೇಂದ್ರವನ್ನು ಉದ್ಘಾಟಿಸಿದರು. * ಮಳೆಹಾನಿ ಪ್ರದೇಶಗಳಲ್ಲಿ ಮುಖ್ಯಮಂತ್ರಿ ಸಂಚಾರ.


[01/09, 3:21 PM] Deepak Karade. CM. Media. office: *ಕ್ಷೇಮವನ ಜೀವನದ ಸೂತ್ರವಾಗಲಿ:ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ*
ಬೆಂಗಳೂರು, ಸೆಪ್ಟೆಂಬರ್ 01 : ವನ ಎಂದರೆ ಹಸಿರು, ಸಮೃದ್ಧಿ ಹಾಗೂ ಆಮ್ಲಜನಕ. ಆಮ್ಲಜನಕ ಜೀವನದ ಸೂತ್ರ. ಅಂದರೆ ಆಮ್ಲಜನಕ. ಜೀವನದ ಸೂತ್ರ ಆಮ್ಲಜನಕ. ಈ ಕ್ಷೇಮವನ ಜೀವನದ ಸೂತ್ರವಾಗಲಿ  ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.  

ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕೇಂದ್ರದ ವತಿಯಿಂದ ನೂತನವಾಗಿ ನಿರ್ಮಿಸಿರುವ  ಪ್ರಕೃತಿ ಚಿಕಿತ್ಸಾ ಕೇಂದ್ರ ಕ್ಷೇಮವನದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

*ಚಿಕಿತ್ಸೆಯಲ್ಲಿ ಧರ್ಮವನ್ನು ಸೇರಿಸುವ ಕ್ಷೇತ್ರ ಕ್ಷೇಮವನ*
ಕ್ಷೇಮವನ ಎಂಬ ಹೆಸರಿನಲ್ಲಿಯೇ ನೆಮ್ಮದಿ ಇದೆ. ಮೊದಲು ಪತ್ರ ಬರೆಯುವಾಗ ಕ್ಷೇಮ ಎಂದು ಬರೆದೇ ಪ್ರಾರಂಭ ಮಾಡುತ್ತಿದ್ದೆವು. ಆರೋಗ್ಯ ಎಂಬುದು ಅತ್ಯಂತ ಪ್ರಮುಖ ಸಂಗತಿ ಎನ್ನುವುದನ್ನು  ನಮ್ಮ ಪೂರ್ವಜರು ಅರಿತಿದ್ದರು.  ನಾವು ಈಗ ಇದನ್ನು ತಿರುವು ಮುರುವು ಮಾಡಿದ್ದೇವೆ. ಬೇಡವಾದುದ್ದನ್ನು ದೇಹಕ್ಕೆ ಸೇರಿಸಿಕೊಂಡು ಕಷ್ಟಪಡುತ್ತಿದ್ದೇವೆ. ದೇಹದೊಳಗಿನ ವಿಷಕಾರಿ ಅಂಶಗಳನ್ನು ಹೊರತೆಗೆದು  ದೇಹ ಮತ್ತು ಮನಸ್ಸುಗಳಿಗೆ  ಆರೋಗ್ಯ ನೀಡುವ ಕೆಲಸವನ್ನು  ಕ್ಷೇಮವನ ಮಾಡಲಿದೆ.  ಕ್ಷೇಮವನ ಎನ್ನುವುದು ಅದ್ಭುತ ಕಲ್ಪನೆ. ಬಾಹ್ಯದಿಂದ ಚಿಕಿತ್ಸೆ, ಔಷಧ ನೀಡದೇ ಸಹಜ ರೀತಿಯಲ್ಲಿ ಚಿಕಿತ್ಸೆ ನೀಡಿ ವಾಸಿ ಮಾಡುವ ಕ್ಷೇತ್ರವಿದು. ಚಿಕಿತ್ಸೆಯಲ್ಲಿ ಧರ್ಮವನ್ನು ಸೇರಿಸುವ ಕ್ಷೇತ್ರ ಕ್ಷೇಮವನ ಎಂದರು. ಆರೋಗ್ಯ ಎನ್ನುವುದು ಮನಸ್ಥಿತಿಯಿಂದ ಪ್ರಾರಂಭವಾಗುತ್ತದೆ.  ಮನಸ್ಸು ಮತ್ತು ದೇಹದ ಉತ್ತಮ ಸ್ಥಿತಿಯೇ ಆರೋಗ್ಯ. ಸಂಯಮದ ಮನಸ್ಥಿತಿ ಅಗತ್ಯ. ಮನಸ್ಸು ಹತೋಟಿಯಲ್ಲಿದ್ದರೆ ಸ್ಥಿತಪ್ರಜ್ಞತೆಗೆ ದಾರಿಮಾಡಿಕೊಡುತ್ತದೆ.  ವಾಸ್ತವವಲ್ಲದ್ದನ್ನು  ದೇಹ ಮತ್ತು ಮನಸ್ಸಿನೊಳಗೆ ಬಿಟ್ಟುಕೊಳ್ಳದಿರುವುದೇ ಸ್ಥಿತಪ್ರಜ್ಞತೆ.  ಸ್ಥಿತಪ್ರಜ್ಞತೆಯ ಸ್ಥಿತಿಗೆ ಕ್ಷೇಮವನ ಕೊಂಡೊಯ್ಯುತ್ತದೆ ಎಂದು ತಿಳಿಸಿದರಲ್ಲದೇ ಮಾನವನ ಪ್ರತಿ ಅಂಗಾಂಗ ಕ್ಷೇಮವಾಗಿರಬೇಕು. ದಿನಚರಿ ಅಶಿಸ್ತಿ ನಿಂದ ಕೂಡಿದ್ದರೆ ದೇಹ ಮತ್ತು ಮನಸ್ಸು ಶಿಥಿಲಗೊಳ್ಳತ್ತದೆ. ಕ್ಷೇಮವನ ದೇಹ ಮತ್ತು ಮನಸ್ಸುಗಳನ್ನು ಸಮತೋಲನ ಕಾಯುತ್ತದೆ ಎಂದರು.  

*ತತ್ವಜ್ಞಾನ ಮತ್ತು ಆಡಳಿತ ಒಂದೇ ನಾಣ್ಯದ ಎರಡು ಮುಖಗಳು*
ಉತ್ತರ ಪ್ರದೇಶ ಮುಖ್ಯಮಂತ್ರಿಗಳಾದ ಯೋಗಿ ಆದಿತ್ಯನಾಥ್ ಅವರು ರಾಜ್ಯಕ್ಕೆ ಆಗಮಿಸಿರುವುದು ನಮಗೆ ಸಂಭ್ರಮ ಮತ್ತು ಹೆಮ್ಮೆ. ಉತ್ತರದಿಂದ ದಕ್ಷಿಣದವರೆಗೂ ಅವರು  ಮನೆ ಮಾತಾಗಿದ್ದಾರೆ. ಯೋಗಿ ಆದಿತ್ಯನಾಥ್ ಅವರು ಗುರುಗಳಾಗಿದ್ದವರು. ನಮ್ಮ ಧರ್ಮ ಮತ್ತು ಸಮಾಜದಲ್ಲಿ ಗುರುಗಳಿಗೆ ಅ ಅತ್ಯುತ್ತಮ ಸ್ಥಾನವಿದೆ. ಮೂರು ದಶಕಗಳಿಗೂ ಹೆಚ್ಚು ಕಾಲ ಸಾರ್ವಜನಿಕ ಜೀವನದಲ್ಲಿದ್ದಾರೆ. ಆದರ್ಶಪ್ರಾಯ, ಮಾದರಿಯಾಗಿ, ಸಾರ್ವಜನಿಕ ಜೀವನವನ್ನು ಅತಿ ಉನ್ನತ ಮಟ್ಟಕ್ಕೆ ಕೊಂಡೊಯ್ದಿದ್ದಾರೆ.  ನುಡಿದಂತೆ ನಡೆಯುತ್ತಾರೆ. ಗುರುಗಳು ಕೂಡ ದಕ್ಷ ಆಡಳಿತಗಾರರಾಗಬಹುದೆಂದು ಅವರು ನಿರೂಪಿಸಿದ್ದಾರೆ.   ತತ್ವಜ್ಞಾನ ಮತ್ತು ಆಡಳಿತ ಒಂದೇ ನಾಣ್ಯದ ಎರಡು ಮುಖಗಳೆಂದು ತೋರಿಸಿಕೊಟ್ಟಿದ್ದರೆ ಹಾಗೂ ಆಧ್ಯಾತ್ಮ ಮತ್ತು ಆಡಳಿತವೂ ಒಂದೇ ನಾಣ್ಯದ ಎರಡು ಮುಖಗಳೆಂದು ನಿರೂಪಸಿದ್ದಾರೆ.  ದುಷ್ಟರ ಶಿಕ್ಷೆ, ಶಿಷ್ಟರ ರಕ್ಷಣೆ ಅವರ ಆಡಳಿತದ ಪ್ರಮುಖ ಅಂಶ. ಹಲವಾರು ಸಮುದಾಯಗಳಲ್ಲಿ ವಿಶ್ವಾಸ ಮೂಡಿಸುವ ಕೆಲಸವನ್ನು ಅವರು ಮಾಡಿದ್ದಾರೆ. ಪ್ರಜಾಸತ್ತಾತ್ಮಕ, ಬಹು ಸಂಸ್ಕøತಿಯ ಭಾರತದಲ್ಲಿ ಹೊಸ ಅಧ್ಯಾಯವನ್ನು ಅವರು ಬರೆದಿದ್ದಾರೆ ಎಂದರು.  

ನಮ್ಮ ಸಮಾಜದಲ್ಲಿ ಗುರುಗಳಿಗೆ ಅತ್ಯುನ್ನತ ಸ್ಥಾನವಿದೆ.  ಸಾರ್ವಜನಿಕ ಬದುಕಿನಲ್ಲಿ 3 ದಶಕಗಳಿಂದಲೂ ಹೆಚ್ಚಿದ್ದು, ನುಡಿದಂತೆ ನಡೆಯುತ್ತಾರೆ. ಗುರುಗಳು ದಕ್ಷ ಆಡಳಿತಗಾರರಾಗಿರಬಹುದು. ತತ್ವಜ್ಞಾನ, ಆಡಳಿತಕ್ಕೆ ಸಂಬಂಧವಿಲ್ಲ. ವಿಜ್ಞಾನ ಮತ್ತು ತತ್ವಜ್ಞಾನ ನಾಣ್ಯದ ಎರಡು ಮುಖಗಳು. ಆಧ್ಯಾತ್ಮಿಕತೆ ಹಾಗೂ ಆಡಳಿತವನ್ನು ನಾಣ್ಯದ ಎರಡು ಮುಖಗಳು ತೋರಿಸಿದ್ದಾರೆ. ದುಷ್ಟರಿಗೆ ರಕ್ಷಣೆ ಇಲ್ಲ, ಶಿಷ್ಟರಿಗೆ ರಕ್ಷಣೆ ಆಗುತ್ತಿದೆ. ಬಹಳಷ್ಟು ಕಾಲದಿಂದ ಎಲ್ಲ ಸಮುದಾಯಗಳಲ್ಲಿ ವಿಶ್ವಾಸ ಮೂಡುವ ಆಡಳಿತ ತಂದಿದ್ದಾರೆ. ಎಲ್ಲ ಸಮಾಜಗಳ ರಕ್ಷಣೆ ಆಗುತ್ತಿದೆ. ಸಮಾಜದಲ್ಲಿ ಸಾಮರಸ್ಯ ಮೂಡುತ್ತಿದೆ. ಹೊಸ ಅಧ್ಯಾಯವನ್ನು ಬರೆದಿದಾರೆ. ಕನ್ನಡ ನಾಡಿಗೆ ಬಂದಿರುವುದು ಬಹಳಷ್ಟು ಸಂತೋಷವಾಗಿದೆ ಎಂದರು.  


ವೀರೆಂದ್ರ ಹೆಗ್ಗಡೆಯವರು, ಪರಿವರ್ತರಕರು. ಸಮಾಜದಲ್ಲಿರುವ ಕಂದಾಚಾರವನ್ನು ದೂರ ಮಾಡಿ, ಸಕಾರಾತ್ಮಕವಾಗಿ ಬದುಕಿಗೆ ಹೊಸ ಆಯಾಮ  ನೀಡಿದ್ದಾರೆ. ಗ್ರಾಮೀಣಾಭಿವೃಧ್ಧಿ, ಎಲ್ಲರಿಗೂ ಶುದ್ಧ ಕುಡಿಯುವ ನೀರು ದೊರೆಯಬೇಕೆಂಬ ಪರಿಕಲ್ಪನೆ  ಇಡೀ ಸಮಾಜದಲ್ಲಿ ಜಾಗೃತಿ ಮೂಡಿಸಿದೆ. ಧರ್ಮ , ಸಾಮಾಜಿಕ ಹೊಣೆಗಾರಿಕೆಯ್ನ ಕೈಗೆತ್ತಿಕೊಂಡಾಗ ಜನ ಪಾಲ್ಗೊಳ್ಳುತ್ತಾರೆ. ಜನರನ್ನು  ಫಲಾನುಭವಿಗಳನ್ನಾಗಿಸದೇ, ಪಾಲುದಾರರನ್ನಾಗಿ ಮಾಡಿದ್ದಾರೆ. ಕೆರೆಕಟ್ಟೆ, ಸ್ಮಶಾನ ಕಟ್ಟಿದ್ದಾರೆ. ಸ್ತ್ರೀಶಕ್ತಿಸಂಘಗಳಿಗೆ ಆರ್ಥಿಕ ಸಹಾಯ, ಸ್ವಾಭಿಮಾನದ ಬದುಕು ಕೊಟ್ಟಿದ್ದಾರೆ. ಧಾರವಾಡ ಮೆಡಿಕಲ್ ಕಾಲೇಜು, ಉಜಿರೆಯಲ್ಲಿ ಆಯುರ್ವೇದ ಕಾಲೇಜುಗಳನ್ನು ಕಟ್ಟಿದ್ದಾರೆ. ಕ್ಷೇಮನವದ ಮೂಲಕ ಬೆಂಗಳೂರನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದಿದ್ದಾರೆ ಎಂದರು.  


ನಿರ್ಮಲಾನಂದ ಗುರುಗಳು, ವಿದ್ಯೆಯಲ್ಲಿ, ಆಡಳಿತದಲ್ಲಿ, ಆಧ್ಯಾತ್ಮಿಕತೆಯಲ್ಲಿ ಸಾಧನೆ ಮಾಡಿದ್ದಾರೆ.  ಬಡವರಿಗೆ ವಿದ್ಯೆ ಹಾಗೂ  ಆಶ್ರಯ ನೀಡಿ  ದಕ್ಷಿಣ ಕರ್ನಾಟಕ ಜೊತೆ ಉತ್ತರ ಕರ್ನಾಟಕದಲ್ಲಿಯೂ ತಮ್ಮ  ಕಾರ್ಯಕ್ಷೇತ್ರವನ್ನು ವಿಸ್ತರಿಸಿದ್ದಾರೆ.  ಕಾನೂನಾತ್ಮಕವಾಗಿ, ತಾತ್ವಿಕವಾಗಿ, ವೈಜ್ಞಾನಿಕವಾಗಿ ಸಮಸ್ಯೆಗಳನ್ನು ನಿವಾರಣೆ ಮಾಡಿದ್ದಾರೆ ಎಂದು ತಿಳಿಸಿದರು.
[01/09, 3:21 PM] Deepak Karade. CM. Media. office: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಇಂದು ಶ್ರೀ ಧರ್ಮಸ್ಥಳ ಮಂಜುನಾಥೇಶ್ವಾರ ಟ್ರಸ್ಟ್ ವತಿಯಿಂದ ನೆಲಮಂಗಲ ಬಳಿ ನಿರ್ಮಿಸಿರುವ ಕ್ಷೇಮ ವನ ಪ್ರಕೃತಿ ಚಿಕಿತ್ಸಾ ಕೇಂದ್ರವನ್ನು ಉದ್ಘಾಟಿಸಿದರು. ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಧರ್ಮಸ್ಥಳದ ಧರ್ಮಾಧಿಕಾರಿ, ರಾಜ್ಯಸಭಾ ಸದಸ್ಯ ಡಾ. ಡಿ.ವೀರೇಂದ್ರ ಹೆಗ್ಗಡೆ, ಸಚಿವರಾದ ಡಾ. ಕೆ. ಸುಧಾಕರ್, ನಾರಾಯಣಗೌಡ ಮತ್ತು ಇತರ ಗಣ್ಯರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
[01/09, 3:31 PM] Deepak Karade. CM. Media. office: *ಬೆಂಗಳೂರು* , ಸೆಪ್ಟೆಂಬರ್ 01: *ಮಾನ್ಯ ಮುಖ್ಯಮಂತ್ರಿ ಬಸವರಾಜ* *ಬೊಮ್ಮಾಯಿ* ಅವರು ಇಂದು *ನಾಡಪ್ರಭು* *ಕೆಂಪೇಗೌಡರ 108 ಅಡಿ ಎತ್ತರದ* *ಕಂಚಿನ ಪ್ರತಿಮೆಯ* *ಲೋಕಾರ್ಪಣೆಗೆ* ಪೂರ್ವಭಾವಿಯಾಗಿ ಇಂದು   ಉದ್ಘಾಟನಾ ಅಭಿಯಾನಕ್ಕೆ ಚಾಲನೆ  ನೀಡಿ, *ಕೆಂಪೇಗೌಡ* *ಥೀಮ್ ಪಾರ್ಕ್ ನಿರ್ಮಾಣಕ್ಕೆ* ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
[01/09, 3:31 PM] Deepak Karade. CM. Media. office: ಬೆಂಗಳೂರು ಗ್ರಾ (ನೆಲಮಂಗಲ), ಸೆಪ್ಟಂಬರ್ 01: ಮಾನ್ಯ *ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ ಅವರು* ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನಗಳ ಸಂಸ್ಥೆಯ ವತಿಯಿಂದ *ನೆಲಮಂಗಲ ತಾಲ್ಲೂಕಿನ ಮಹದೇವಪುರದಲ್ಲಿ ನೂತನವಾಗಿ ನಿರ್ಮಿಸಿರುವ “ಕ್ಷೇಮವನ” ಪ್ರಕೃತಿ ಚಿಕಿತ್ಸಾ ಕೇಂದ್ರದ ಉದ್ಘಾಟನಾ ಕಾರ್ಯಕ್ರಮ*ದಲ್ಲಿ ಉತ್ತರಪ್ರದೇಶದ ಮುಖ್ಯಮಂತ್ರಿ ಸನ್ಮಾನ್ಯ ಶ್ರೀ ಯೋಗಿ ಆದಿತ್ಯನಾಥ್ ಅವರೊಂದಿಗೆ *ಪಾಲ್ಗೊಂಡು ಮಾತನಾಡಿದರು.*
[01/09, 3:31 PM] Deepak Karade. CM. Media. office: ಬೆಂಗಳೂರು ಗ್ರಾಮಾಂತರ (ನೆಲಮಂಗಲ), ಸೆಪ್ಟಂಬರ್ 01: *ಉತ್ತರಪ್ರದೇಶದ ಮುಖ್ಯಮಂತ್ರಿ ಸನ್ಮಾನ್ಯ ಶ್ರೀ ಯೋಗಿ ಆದಿತ್ಯನಾಥ್ ಅವರು* ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನಗಳ ಸಂಸ್ಥೆಯ ವತಿಯಿಂದ ನೆಲಮಂಗಲ ತಾಲ್ಲೂಕಿನ ಮಹದೇವಪುರದಲ್ಲಿ  *ನೂತನವಾಗಿ ನಿರ್ಮಿಸಿರುವ “ಕ್ಷೇಮವನ” ಪ್ರಕೃತಿ ಚಿಕಿತ್ಸಾ ಕೇಂದ್ರದ ಉದ್ಘಾಟಿಸಿ* ಕಾರ್ಯಕ್ರಮವನ್ನುದ್ದೇಶಿಸಿ   *ಮಾತನಾಡಿದರು*.
[01/09, 5:23 PM] Deepak Karade. CM. Media. office: ಉತ್ತರಪ್ರದೇಶದ  ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಹೆಚ್.ಎ. ಎಲ್ ವಿಮಾನ ನಿಲ್ದಾಣದಲ್ಲಿ ಬೀಳ್ಕೊಟ್ಟರು
[01/09, 6:10 PM] Deepak Karade. CM. Media. office: ನಾಡಪ್ರಭು ಕೆಂಪೇಗೌಡರ ‘ಪ್ರಗತಿಯ ಪ್ರತಿಮೆ’ ಏಕತೆ ಹಾಗೂ ಸಮೃದ್ಧಿಯ ಸಂಕೇತ – ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಂಗಳೂರು, ಸೆಪ್ಟೆಂಬರ್ 1 :

 ನಾಡಪ್ರಭು ಕೆಂಪೇಗೌಡರ ‘ಪ್ರಗತಿಯ ಪ್ರತಿಮೆ’ ಏಕತೆ ಹಾಗೂ ಸಮೃದ್ಧಿಯ ಸಂಕೇತವಾಗಿದ್ದು, ಅವರು ಹಾಕಿಕೊಟ್ಟ ಮಾರ್ಗದಲ್ಲಿ ಬೆಂಗಳೂರನ್ನು ಅಭಿವೃದ್ಧಿಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ ಪ್ರತಿಮೆಯ ಲೋಕಾರ್ಪಣೆಗೆ ಪೂರ್ವಭಾವಿಯಾಗಿ ಇಂದು   ಉದ್ಘಾಟನಾ ಅಭಿಯಾನಕ್ಕೆ ಚಾಲನೆ ನೀಡಿದರು.

*ಸಮಗ್ರ ದೇವನಹಳ್ಳಿಯ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್ :*
ನಾಡಪ್ರಭು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನಗರದ ಇತಿಹಾಸ ಗೊತ್ತಾಗಬೇಕು. ವಿಮಾನ ನಿಲ್ದಾಣದ 2ನೇ ಟರ್ಮಿನಲ್ ಉದ್ಘಾಟನೆಗೆ ಪ್ರಧಾನಿಯವರು ಆಗಮಿಸಲಿದ್ದಾರೆ. ಆದೇ ಸಂದರ್ಭದಲ್ಲಿ ಪ್ರಧಾನಿಯವರಿಂದಲೇ ನಾಡಪ್ರಭು ಕೆಂಪೇಗೌಡರ ಪ್ರತಿಮೆಯನ್ನು ಉದ್ಘಾಟನೆ ಮಾಡಿಸಲಾಗುವುದು. ಬೆಂಗಳೂರಿನ ಶ್ರೀಮಂತ ಇತಿಹಾಸದಲ್ಲಿ ಕೆಂಪೇಗೌಡರ ಹೆಸರು ಅಗ್ರಮಾನ್ಯವಾಗಿರಬೇಕು. ಬೆಂಗಳೂರು ನಗರದ ಒಳಭಾಗದಲ್ಲಿಯೂ ಕೆಂಪೇಗೌಡರ ಪ್ರತಿಮೆ ಇರುವ ಅವಶ್ಯಕತೆ ಇದೆ. ಕೆಂಪೇಗೌಡ ಪ್ರತಿಷ್ಠಾನಕ್ಕೆ 50 ಕೋಟಿ ರೂ. ವೆಚ್ಚದಲ್ಲಿ  ಕೆಲಸವನ್ನು ಪ್ರಾರಂಭಿಸಲಾಗಿದೆ. ದೇವನಹಳ್ಳಿಯ ಕೋಟೆಯನ್ನು ಅಭಿವೃದ್ಧಿಗೊಳಿಸಲಾಗುವುದು. ದೇವನಹಳ್ಳಿಯಲ್ಲಿ ಕೈಗಾರಿಕೆಗಳ ಅಭಿವೃದ್ಧಿಯಾಗುತ್ತಿದೆ. ಸಮಗ್ರ ದೇವನಹಳ್ಳಿಯ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್ ಮಾಡಿ, ಅತ್ಯಾಧುನಿಕ ಟೌನ್ಶಿಪ್ ಮಾಡಲಾಗುವುದು ಎಂದರು.

*ಬೆಂಗಳೂರಿನ ಸುತ್ತಲೂ ನಾಲ್ಕು ಸ್ಯಾಟಿಲೈಟ್ ಟೌನ್‍ಗಳ ನಿರ್ಮಾಣ :*
ಬೆಂಗಳೂರು ವಿಮಾನ ನಿಲ್ದಾಣಕ್ಕೆ ಮೆಟ್ರೋ ಗೆ ಚಾಲನೆ ನೀಡಲಾಗಿದೆ. ಸಬ್ ಅರ್ಬನ್ ರೈಲು, ಪಿಆರ್ ಆರ್ ರಸ್ತೆಗಳ ನಿರ್ಮಾಣ ಕಾರ್ಯಗಳಿಗೆ ಟೆಂಡರ್ ಕರೆಯಲಾಗಿದೆ. ಬೆಂಗಳೂರಿನ ಸುತ್ತಲೂ ನಾಲ್ಕು ಸ್ಯಾಟಿಲೈಟ್ ಟೌನ್‍ಗಳನ್ನು  ನಿರ್ಮಾಣ ಮಾಡಲಾಗುವುದು. ಬರುವ ದಿನಗಳಲ್ಲಿ  ಲಾಲ್‍ಬಾಗ್‍ನಲ್ಲಿಯೂ ಕೆಂಪೇಗೌಡ ಪ್ರತಿಮೆ ಸ್ಥಾಪಿಸಲಾಗುವುದು ಎಂದು ತಿಳಿಸಿದರು.

*ನಾಡಪ್ರಭು ಕೆಂಪೇಗೌಡರ ಥೀಂ ಪಾರ್ಕ್‍ಗೆ ನಿರ್ಮಾಣ:*
ನಾಡಪ್ರಭು ಕೆಂಪೇಗೌಡರ ಸೇವೆ ಸದಾಕಾಲ ಶಾಶ್ವತವಾಗಿರಿಸಲು ಸರ್ಕಾರ  ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಅಂತರರಾಷ್ಟ್ರೀಯ ವಿಮಾಣ ನಿಲ್ದಾಣದಲ್ಲಿ ಅತ್ಯಂತ ಎತ್ತರದ ನಾಡಪ್ರಭು ಕೆಂಪೇಗೌಡರ ಪ್ರತಿಮೆ ಸ್ಥಾಪಿಸಲು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ತೀರ್ಮಾನಿಸಿದ್ದರು. ಪ್ರತಿಮೆ ಜೊತೆಗೆ ಥೀಂ ಪಾರ್ಕ್‍ಗೆ ನಿರ್ಮಿಸಲಾಗುತ್ತಿದ್ದು, ಇಡೀ ರಾಜ್ಯಕ್ಕೆ ನಾಡಪ್ರಭು ಕೆಂಪೇಗೌಡರಿಂದ ಪ್ರೇರಣೆ ದೊರೆಯುವಂತಾಗಲು ಪ್ರತಿ ಜಿಲ್ಲೆ ಗ್ರಾಮಗಳಿಂದ  ಮಣ್ಣನ್ನು ಮತ್ತು ಕೆರೆಯ ನೀರನ್ನು ತಂದು ಇಲ್ಲೀ ವನ  ನಿರ್ಮಿಸುವ ಅಭಿಯಾನಕ್ಕೆ ಇಂದು ಚಾಲನೆ ನೀಡಲಾಗಿದೆ ಎಂದರು.

*ಆಧುನಿಕ ನಾಗರಿಕತೆಯ ನಿರ್ಮಾಪಕರು ಕೆಂಪೇಗೌಡರು*
ಯಾವ ದೇಶಕ್ಕೆ ಇತಿಹಾಸವಿದೆಯೋ, ಆ ದೇಶಕ್ಕೆ ಭವಿಷ್ಯವಿದೆ. ಇತಿಹಾಸವನ್ನು ಬಲ್ಲವನು ಭವಿಷ್ಯವನ್ನು ನಿರ್ಮಿಸುತ್ತಾನೆ. ಕದಂಬರು, ರಾಷ್ಟ್ರಕೂಟರು, ವಿಜಯನಗರ ಸಾಮ್ರಾಜ್ಯರು, ಹೊಯ್ಸಳ, ಇವೆಲ್ಲರೂ ತಮ್ಮ ಅವಧಿಯಲ್ಲಿ ಹಲವಾರು ಜನಕಲ್ಯಾಣ ಕೆಲಸಗಳನ್ನು ಮಾಡಿದ್ದಾರೆ. ಕರ್ನಾಟಕದ ಇತಿಹಾಸದಲ್ಲಿ ವಿಜಯನಗರ ಸಾಮ್ರಾಜ್ಯ ಸುವರ್ಣಯುಗ. ಕೆಂಪೇಗೌಡರು ಪಾಳೆಯಗಾರರಾಗಿ  ತಮ್ಮ ಆಡಳಿತಾವಧಿಯಲ್ಲಿ ಕೆರೆಕಟ್ಟೆಗಳು, ದೇವಸ್ಥಾನಗಳು, ಸಂಪಂಗಿ ಕೆರೆ, ಹಲಸೂರು ಕೆರೆ, ಕೆಂಪಾಂಬುಧಿ ಕೆರೆ ನಿರ್ಮಿಸಿದರು.  ದೇವನಹಳ್ಳಿಯಿಂದ ಮಾಗಡಿವರೆಗೂ ಕೆಂಪೇಗೌಡರ ಕೆಲಸಗಳು ಸಾಕ್ಷಿಯಾಗಿ ನಿಂತಿವೆ. ಆಧುನಿಕ ನಾಗರಿಕತೆಯನ್ನು ನಿರ್ಮಾಪಕರು ಕೆಂಪೇಗೌಡರು ಮುಂದಿನ ಜನಾಂಗಕ್ಕೆ ಎಲ್ಲ ಆಧುನಿಕ ಸೌಲಭ್ಯಗಳಿರುವ ನಗರವನ್ನು ಕಟ್ಟಬೇಕೆಂಬ ದೂರದೃಷ್ಟಿಯನ್ನು ಹೊಂದಿದ್ದರು. ಕೇವಲ ಕಟ್ಟಡಗಳಿಂದ ನಿರ್ಮಾಣವಾಗಿರುವುದು ನಗರವಲ್ಲ. ಅದರಲ್ಲಿ ಸಂಸ್ಕøತಿ, ಪರಂಪರೆ, ಸಮೃದ್ಧಿ ಇರುವ ನಾಗರಿಕತೆಯ ಚಿತ್ರವನ್ನ ನಮಗೆ ಕಟ್ಟಿಕೊಟ್ಟಿದ್ದಾರೆ.  ಪ್ರತಿ ಮನೆಯಲ್ಲಿ ಸುಖ ಶಾಂತಿ ಸಮೃದ್ಧಿಯಿಂದ ಕೂಡಿದ್ದರೆ ಮಾತ್ರ ದೇಶದ ಅಭಿವೃದ್ಧಿಯ ಮಾನದಂಡ ಎನ್ನಲಾಗಿದೆ ಎಂದು ತಿಳಿಸಿದರು.
[01/09, 6:12 PM] Deepak Karade. CM. Media. office: ಮುಖ್ಯಮಂತ್ರಿಯವರ ನಗರ ಪ್ರದಕ್ಷಿಣೆ ವಿವರ (01.09.2022)

ಭಾಗ- 1  

* ಮಳೆಹಾನಿ ಪ್ರದೇಶಗಳಲ್ಲಿ ಮುಖ್ಯಮಂತ್ರಿ ಸಂಚಾರ.

* ಮಾರತ್ತಹಳ್ಳಿ ಮುಖ್ಯರಸ್ತೆಯ ಡಿಎನ್ಎ ಅಪಾರ್ಟ್ಮೆಂಟ್ ಬಳಿ ವೀಕ್ಷಣೆ.

* 30 ಅಡಿ ಕಾಲುವೆಯನ್ನು 4 ಅಡಿ ಅಗಲಕ್ಕೆ ಒತ್ತುವರಿ.

* ಕೂಡಲೇ ತೆರವುಗೊಳಿಸುವಂತೆ ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಸೂಚನೆ

------
ಮುಖ್ಯಮಂತ್ರಿಯವರ ನಗರ ಪ್ರದಕ್ಷಿಣೆ ವಿವರ (01.09.2022)

*ಭಾಗ- 2*

ವೈಟ್‍ಫೀಲ್ಡ್ ನಲ್ಲಿ ಮಾನ್ಯ ಮುಖ್ಯಮಂತ್ರಿಗಳು ಸಾರ್ವಜನಿಕರ ಕುಂದುಕೊರತೆಗಳ ಅಹವಾಲುಗಳ ಸ್ವೀಕಾರ.

ಮುಖ್ಯಮಂತ್ರಿಯವರಿಗೆ ಮಳೆಯಿಂದ ಹಾನಿಯ ವಿವರಣೆಯನ್ನು ಸಾರ್ವಜನಿಕರು ತಿಳಿಸಿದರು.

ಈ ಸಂದರ್ಭದಲ್ಲಿ ಸಚಿವರಾದ ಡಾ ಅಶ್ವತ್ಥ್ ನಾರಾಯಣ, ಶ್ರೀ ಬಿ.ಎ.ಬಸವರಾಜ, ಶಾಸಕ ಅರವಿಂದ ಲಿಂಬಾವಳಿ, ಸತೀಶ್ ರೆಡ್ಡಿ ಹಾಗೂ ಹಿರಿಯ ಅಧಿಕಾರಿಗಳು ಇದ್ದರು.
[01/09, 6:13 PM] Deepak Karade. CM. Media. office: ವರ್ತೂರು ಕೆರೆಯ ಕೋಡಿ ವೀಕ್ಷಣೆ. ರಾಜಕಾಲುವೆ ಒತ್ತುವರಿ ತೆರವಿಗೆ ಸೂಚನೆ
[01/09, 9:22 PM] Deepak Karade. CM. Media. office: ಬೆಂಗಳೂರಿನಲ್ಲಿ ಸುರಿದ ಭಾರಿ ಮಳೆಯಿಂದ ಹಾನಿ ಉಂಟಾದ ಪ್ರದೇಶಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಭೇಟಿ ನೀಡಿ ಸಾರ್ವಜನಿಕರೊಂದಿಗೆ ಮಾತುಕತೆ ನಡೆಸಿದ ನಂತರ ಎಸ್‌ಬಿಆರ್ ಪ್ಯಾಲೇಸ್ ನಲ್ಲಿ ಅಧಿಕಾರಿಗಳ ಸಭೆ ನಡೆಸಿದರು.

ಸಚಿವರಾದ ಡಾ: ಸಿ.ಎನ್.ಅಶ್ವತ್ಥ್ ನಾರಾಯಣ್, ಬಿ.ಎ. ಬಸವರಾಜ, ಶಾಸಕ ಅರವಿಂದ ಲಿಂಬಾವಳಿ ಹಾಗೂ  ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್‌ ಸಿಂಗ್‌ ಉಪಸ್ಥಿತರಿದ್ದರು.

Post a Comment

Previous Post Next Post