[20/09, 3:46 PM] DL Harish: 2023 ರ ಫೆಬ್ರವರಿಯಲ್ಲಿ ಚಿಕ್ಕಮಗಳೂರು ಹಬ್ಬವನ್ನು ಆಚರಿಸಲು ತಿರ್ಮಾನಿಸಲಾಗಿದ್ದು, ಇದರ ಸಂಬಂಧವಾಗಿ ದಿನಾಂಕ 20-9-2022 ರಂದು ಬೆಂಗಳೂರಿನ ವಿಕಾಸ ಸೌಧದಲ್ಲಿ ಸಭೆ ನಡೆಯಿತು.
ನಗರಾಭಿವೃದ್ಧಿ ಸಚಿವರಾದ ಶ್ರೀ ಬಿ.ಎ.ಬಸವರಾಜ(ಬೈರತಿ), ಪ್ರವಾಸೋದ್ಯಮ ಸಚಿವರಾದ ಶ್ರೀ ಆನಂದ್ ಸಿಂಗ್, ಕೃಷಿ ಸಚಿವರಾದ ಶ್ರೀ ಬಿ.ಸಿ.ಪಾಟೀಲ, ತೋಟಗಾರಿಕೆ, ಯೋಜನೆ ಮತ್ತು ಸಾಂಖ್ಯಿಕ ಸಚಿವರಾದ ಶ್ರೀ ಮುನಿರತ್ನ, ಚಿಕ್ಕಮಗಳೂರು ಶಾಸಕರು ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾದ ಶ್ರೀ ಸಿ.ಟಿ. ರವಿ ಅವರುಗಳ ಭಾಗವಹಿಸಿದ್ದರು.
ಜಿಲ್ಲೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಚಿಕ್ಕಮಗಳೂರು ಜಿಲ್ಲೆಯು ರಾಜ್ಯದ ಪ್ರಮುಖ ಪ್ರವಾಸಿ, ಧಾರ್ಮಿಕ ಹಾಗೂ ಯಾತ್ರಾಸ್ಥಳ ವಾಗಿರುತ್ತದೆ. ತನ್ನದೇ ಆದ ವಿಶಿಷ್ಟವನ್ನು ಹೊಂದಿರುವ ಕಾಫಿ ನಾಡು ಮಲೆಗಳ ಬೀಡಾಗಿದ್ದು ಮೂರು ದಿನಗಳ ಕಾಲ ಹಬ್ಬವನ್ನು ಆಚರಿಸಲಾಗುತ್ತದೆ.
ಹೆಲಿ ಟೂರಿಸಂ, ಜಲ ಕ್ರೀಡೆ, ಜಾನುವಾರು, ಕೃಷಿ, ಹೈನುಗಾರಿಕೆ, ಆಹಾರ, ತೋಟಗಾರಿಕೆ ಮೇಳಗಳನ್ನು ನಡೆಸಲಾಗುತ್ತದೆ.
ಸಾಹಿತ್ಯ, ಕಲೆ, ಸಂಸ್ಕೃತಿಯ ಕಾರ್ಯಕ್ರಮಗಳು ನಡೆಯುತ್ತವೆ ಎಂದು ತಿಳಿಸಲಾಗಿದೆ.
[20/09, 3:56 PM] DL Harish: *ಕುಡ್ಲಾದ ಕುವರಿಗೆ NSS ರಾಷ್ಟ್ರ ಪ್ರಶಸ್ತಿ- ಸಚಿವ ಡಾ.ನಾರಾಯಣಗೌಡ ಅಭಿನಂದನೆ*
ಬೆಂಗಳೂರು, ಸೆ. 20: ಎನ್‌ಎಸ್ಎಸ್ ರಾಷ್ಟ್ರ ಪ್ರಶಸ್ತಿಗೆ ಆಯ್ಕೆಯಾಗಿರುವ ಮಂಗಳೂರಿನ ರಶ್ಮಿಯವರಿಗೆ ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ.ನಾರಾಯಣಗೌಡ ಅವರು ಅಭಿನಂದನೆ ತಿಳಿಸಿದರು.
ಕೇಂದ್ರ ಸರ್ಕಾರ ನೀಡುವ ರಾಷ್ಟ್ರೀಯ ಸೇವಾ ಯೋಜನೆಯ ಅತ್ಯುತ್ತಮ ಸ್ವಯಂಸೇವಕಿ ರಾಷ್ಟ್ರ ಪ್ರಶಸ್ತಿಗೆ ಸುರತ್ಕಲ್‌ನಾ ಗೋವಿಂದದಾಸ ಕಾಲೇಜಿನ ವಿದ್ಯಾರ್ಥಿನಿ ಕು.ರಶ್ಮಿ ಆಯ್ಕೆಯಾಗಿದ್ದಾರೆ. ಸೆಪ್ಟೆಂಬರ್ 24 ರಂದು ರಾಷ್ಟ್ರಪತಿ ಭವನದಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ.
ಎನ್‌ಎಸ್‌ಎಸ್ ಅತ್ಯುತ್ತಮ ಸ್ವಯಂ ಸೇವಕಿ ಪ್ರಶಸ್ತಿಗೆ ನಮ್ಮ ಕನ್ನಡದ ವಿದ್ಯಾರ್ಥಿನಿ ಆಯ್ಕೆಯಾಗಿರುವುದು ಸಂತಸ ತಂದಿದೆ. ರಾಜ್ಯದಲ್ಲಿರುವ ಎನ್‌ಎಸ್‌ಎಸ್ ಉತ್ತಮ ರೀತಿಯಲ್ಲಿ ಸೇವೆ ಸಲ್ಲಿಸುತ್ತಿದೆ. ಇವರಿಗೆ ಸಂದಿರುವ ರಾಷ್ಟ್ರ ಪ್ರಶಸ್ತಿ ಎನ್‌ಎಸ್‌ಎಸ್ ಕೋಶದ ಎಲ್ಲಾ ಸೇವಕ/ಸೇವಕಿಯರಿಗೆ ಪ್ರೇರಣೆಯಾಗಲಿ. ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಿನ ಪ್ರಶಸ್ತಿ ಕರ್ನಾಟಕಕ್ಕೆ ದೊರೆಯುವಂತಾಗಲಿ ಎಂದು ಸಚಿವ ಡಾ.ನಾರಾಯಣಗೌಡ ಅವರು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
[20/09, 3:56 PM] DL Harish: Complaint filed with lokayukta demanding suo moto action against civic officials who gave permission for encroachments in Bengaluru
[20/09, 3:56 PM] DL Harish: *ಸದ್ಯಕ್ಕೆ ಎನ್‌ಆರ್‌ಬಿಸಿ-5ಎ ಕಾಲುವೆ ನಿರ್ಮಾಣ ಸಾಧ್ಯ ಇಲ್ಲ ಬೇರೆ ಯೋಜನೆ ಮೂಲಕ ಆ ಪ್ರದೇಶಕ್ಕೆ ಅನುಕೂಲ: ಗೋವಿಂದ ಕಾರಜೋಳ ಸ್ಪಷ್ಟನೆ*
ಬೆಂಗಳೂರು: ಸದ್ಯಕ್ಕೆ ಎನ್‌ಆರ್‌ಬಿಸಿ - 5ಎ ಕಾಲುವೆಯನ್ನು ಮಾಡಲು ಆಗುವುದಿಲ್ಲ. ಈ ಕಾಲುವೆಯ 15 ಕಿಮೀ ಸುರಂಗ ಹಟ್ಟಿ ಚಿನ್ನದ ಗಣಿ ಪ್ರದೇಶದಲ್ಲಿ ಹಾದು ಹೋಗುತ್ತದೆ. ಅದನ್ನು ಹಟ್ಟಿ ಮೈನ್ಸ್ ಅವರು ಒಪ್ಪುವುದಿಲ್ಲ. ಅದಲ್ಲದೇ 80 ಮೀಟರ್ ಡೀಫ್ ಕಟ್ ಕೂಡ ಬರುತ್ತದೆ. ಅದಕ್ಕಾಗಿ ಈ ಕಾಲುವೆಯನ್ನು ಮಾಡುವುದು ಕಷ್ಟ ಸಾಧ್ಯ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದ್ದಾರೆ.
ವಿಧಾನಸಭೆಯ ಪ್ರಶ್ನೋತ್ತರ ಕಲಾಪದ ವೇಳೆ ಮಸ್ಕಿ ಶಾಸಕ ಬಸನಗೌಡ ತುರುವಿಹಾಳ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಅಲ್ಲಿ ವಾಟರ್ ಲೋಕೆಷನ್ ಇಲ್ಲ. ಕಾಲುವೆಯ 15 ಕಿಮೀ ಸುರಂಗ ಹಟ್ಟಿ ಚಿನ್ನದ ಗಣಿ ಪ್ರದೇಶದಲ್ಲಿ ಹೋಗುತ್ತದೆ. ಅದನ್ನು ಅವರು ಒಪ್ಪುವುದಿಲ್ಲ. 80 ಮೀಟರ್ ಡೀಫ್ ಕಟ್ ಕೂಡ ಬರುವುದರಿಂದ ಸದ್ಯದಲ್ಲಿ ಕಾಲುವೆ ನಿರ್ಮಾಣ ಮಾಡುವಂತಹ ಪರಿಸ್ಥಿತಿ ಇಲ್ಲ ಎಂದು ಸ್ಪಷ್ಟಪಡಿಸಿದರು.
ಈ ವೇಳೆ ಅಂದಿನ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರು ನೀಡಿದ್ದ ಭರವಸೆಯನ್ನು ಬಸನಗೌಡ ತುರುವಿಹಾಳ ನೆನಪಿಸಿದರು. ಆಗ ಭರವಸೆ ಕೊಟ್ಟು, ಈಗ ಮಾಡೋದಕ್ಕೆ ಆಗಲ್ಲ ಅಂದ್ರೇ ಹೇಗೆ ಎಂದು ಶಾಸಕರು ಪ್ರಶ್ನಿಸಿದರು. ಈ ವೇಳೆ ವಿಪಕ್ಷ ನಾಯಕ ಸಿದ್ದರಾಮಯ್ಯ ಮಧ್ಯಪ್ರವೇಶಿಸಿ, ಉಪಚುನಾವಣೆ ವೇಳೆ ಮಸ್ಕಿ ಭಾಗದಲ್ಲಿ ನೀರಾವರಿ ಯೋಜನೆ ಆಗ್ಬೇಕು ಎಂದು ರೈತರು ಪ್ರತಿಭಟನೆ ಮಾಡಿದ್ದರು. ಆ ಸಂದರ್ಭದಲ್ಲಿ ನಾನು ರೈತರನ್ನು ಭೇಟಿ ಮಾಡಿದ್ದೇ, ಆಗ ನಮಗೆ ಒತ್ತಾಯ ಮಾಡಿದ್ರು, ನಾನು ಅಧಿವೇಶನದಲ್ಲಿ ತರ್ತಿವಿ ಅಂತ ಹೇಳಿದ್ವಿ, ಪಾಸಿಟಿವ್ ಆಗಿ ಹೇಳಿ, ಒಂದೇ ಸಲಕ್ಕೆ ಆಗಲ್ಲ ಎಂದರೇ ಹೇಗೆ ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯ ಅವರ ಮಾತಿಗೆ ಪ್ರತಿಕ್ರಿಯಿಸಿದ ಗೋವಿಂದ ಕಾರಜೋಳ ಅವರು, ಈ ಕಾಲುವೆ ನಿರ್ಮಾಣದಿಂದ ಕೃಷ್ಣ ಮತ್ತು ತುಂಗಭದ್ರಾ ಸಬ್ ಬೆಷನ್ ಕ್ರಾಸ್ ಆಗುತ್ತದೆ. ಸಬ್ ಬೆಷನ್ ಕ್ರಾಸ್ ಆದ್ರೆ ಆಂಧ್ರ ಮತ್ತು ತೆಲಂಗಾಣದವರು ಎದ್ದು ಕೂರ್ತಾರೆ, ಇದರಿಂದ ಅಂತರಾಜ್ಯ ಸಮಸ್ಯೆ ಸೃಷ್ಟಿಯಾಗುತ್ತದೆ. ಕಾಲುವೆಯ 15 ಕಿಮೀ ಸುರಂಗ ಹಟ್ಟಿ ಚಿನ್ನದ ಗಣಿ ಪ್ರದೇಶದಲ್ಲಿ ಹೋಗುತ್ತದೆ. ಆದ್ದರಿಂದ ಮುಂದಿನ ದಿನದಲ್ಲಿ ಪರಿಶೀಲನೆ ಮಾಡಿ, ಬೇರೆ ಯೋಜನೆಯಲ್ಲಿ 5A ಕಾಲುವೆಯಲ್ಲಿ ಪ್ರದೇಶಕ್ಕೆ ಅನುಕೂಲ ಮಾಡಿಕೊಡಲು ಏನ್ ಮಾಡಬೇಕೋ ಮಾಡೋಣ ಎಂದು ಕಾರಜೋಳ ಹೇಳಿದರು.
*ತಿಗಡಿ ಹರಿನಾಲಾ ಪ್ರದೇಶದ ರಸ್ತೆಗಳ ನಿರ್ಮಾಣಕ್ಕೆ ಜಿಪಂ ಸಿಇಒಗೆ ಸೂಚಿಸ್ತೀನಿ*
ಇನ್ನು, ಕಳೆದ ಎರಡು ವರ್ಷದಿಂದ 4701ರಡಿ ತಿಗಡಿ ಹರಿನಾಲಾ ಪ್ರದೇಶದ ರಸ್ತೆಗಳ ನಿರ್ಮಾಣ ಆಗಬೇಕೆಂದು ಕೇಳಿದ್ದೆ, ಆದರೆ ಯಾವುದೇ ಕಾಮಗಾರಿ ನಡೆದಿಲ್ಲ ಎಂದು ದೊಡ್ಡನಗೌಡರು ಬಸವಂತರೇ ಅವರು ಪ್ರಸ್ತಾಪಿಸಿದ ವಿಚಾರಕ್ಕೆ ಉತ್ತರಿಸಿದ ಸಚಿವರು, ಶಾಸಕರು ಆರು ರಸ್ತೆಗಳನ್ನ ಮಾಡಿಕೊಡಲು ಕೇಳಿದ್ದಾರೆ. ಅದರಲ್ಲಿ ಗ್ರಾಮೀಣಾಭಿವೃದ್ಧಿ ಪಂಜಾಯತ್ ಇಲಾಖೆಗೆ ಬರುವ ಮೂರು ರಸ್ತೆಗಳು ಇದಾವೆ. ನಾನು ಬೆಳಗಾವಿ ಜಿಲ್ಲೆಯ ಉಸ್ತುವಾರಿ ಸಚಿವನಾಗಿ ನಮ್ಮ ಜಿಲ್ಲಾ ಪಂಚಾಯತಿ ಸಿಇಒಗಳಿಗೆ ಎನ್‌ಆರ್‌ಜಿಯಲ್ಲಿ ಮಾಡಿಕೊಡಿ ಅಂತಾ ಹೇಳ್ತೀನಿ ಎಂದರು.
ನೀರಾವರಿ ಇಲಾಖೆಗೆ ಸಂಬಂಧಿಸಿದಂತೆ ಮೂರು ರಸ್ತೆಗಳಿವೆ. ಅದಕ್ಕೂ ಕೂಡ ಅನುದಾನದ ಕೊರತೆಯಿಂದ ಮಾಡಿಲ್ಲ. ಅಧಿಕಾರಿಗಳೇನೂ ಇಟ್ಟುಕೊಂಡಿಲ್ಲ. ಅದಕ್ಕೂ ಕೂಡ ಎನ್‌ಆರ್‌ಜಿಯಲ್ಲಿ ಮಾಡಿಕೊಡಲು ಜಿಲ್ಲಾ ಪಂಚಾಯಿತಿ ಸಿಇಒಗೆ ಸೂಚನೆ ನೀಡುತ್ತೇನೆ ಎಂದರು. ಆಗ ಎನ್‌ಆರ್‌ಜಿ ಮೂಲಕ ಮಾಡುವ ರಸ್ತೆಗಳು ರಿಪೇರಿಯಾಗಲು ಸಾಧ್ಯವಿಲ್ಲ, ಅಲ್ಲಿ ಬಸ್‌ಗಳು ಓಡಾಡ್ಬೇಕು, ಹೀಗಾಗಿ 4701ರಡಿಯಲ್ಲಿ ಮಾಡಿಕೊಂಡುವಂತೆ ದೊಡ್ಡನಗೌಡರು ಮನವಿ ಮಾಡಿದರು.
ಆದರೆ, ನಮ್ಮ ಇಲಾಖೆಗೆ ಒಳಪಡುವ ಸರ್ವಿಸ್ ರೋಡ್‌ಗಳನ್ನ ಮಾಡಿಕೊಂಡಿರುತ್ತೇವೆ. ಅಲ್ಲಿ ಬಸ್, ಟ್ರಾಕ್ಟರ್ ಓಡಿಸಲು ಅವಕಾಶ ಇಲ್ಲ. ಜಿಲ್ಲಾ ಪಂಚಾಯತಿ ಅನುದಾನದಲ್ಲಿ ಮಾಡಿಸಿಕೊಡ್ತಿವಿ ಎಂದು ಗೋವಿಂದ ಕಾರಜೋಳ ಅವರು ಸ್ಪಷ್ಟಪಡಿಸಿದರು.
*ದೇವರಹಿಪ್ಪರಗಿ ಕ್ಷೇತ್ರದಲ್ಲಿ ಕಾಮಗಾರಿ ಮಾಡಲು ಸೂಚನೆ*
ದೇವರಹಿಪ್ಪರಗಿ ಕ್ಷೇತ್ರದಲ್ಲಿ ಮೂರು ವರ್ಷದಲ್ಲಿ ಒಂದು ಕಾಮಗಾರಿಯೂ ಆಗಿಲ್ಲ ಎಂಬ ಬಗ್ಗೆ ವೆಂಕಟರೆಡ್ಡಿ ಪ್ರಸ್ತಾಪಕ್ಕೆ ಉತ್ತರಿಸಿದ ಸಚಿವರು, ಮಂಜೂರಾದ ಕಾಮಗಾರಿಗಳನ್ನ ಕೂಡಲೇ ಅನುಷ್ಠಾನ ಮಾಡಲು ಅಧಿಕಾರಿಗಳಿಗೆ ಸೂಚನೆ ಕೊಡುತ್ತೇನೆ. ಕಳೆದ ಮೂರು ವರ್ಷಗಳಿಂದ ಆ ಪ್ರದೇಶದಲ್ಲಿ ಮಳೆ ಜಾಸ್ತಿಯಾಗಿರುವುದರಿಂದ ಕಾಮಗಾರಿ ಮಾಡಲು ವಿಳಂಬವಾಗಿದೆ. ಕಾಮಗಾರಿ ಮಾಡಲು ಸೂಚನೆ ಕೊಡುತ್ತೇನೆ ಎಂದು ಹೇಳಿದರು.
[20/09, 3:56 PM] DL Harish: 11,133 ಪೌರ ಕಾರ್ಮಿಕರನ್ನು ಸರ್ಕಾರಿ ನೌಕರರನ್ನಾಗಿ ಪರಿಗಣನೆ; ಸಿಎಂ, ಸಚಿವ ಸಂಪುಟಕ್ಕೆ ಗೋವಿಂದ ಕಾರಜೋಳ ಕೃತಜ್ಞತೆ
ಬೆಂಗಳೂರು: 11,133 ಮಂದಿ ಪೌರ ಕಾರ್ಮಿಕರನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಸಚಿವ ಸಂಪುಟಕ್ಕೆ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅಭಿನಂದನೆ ಸಲ್ಲಿಸಿದರು.
ವಿಧಾನಸಭೆಯಲ್ಲಿ ವಿಚಾರ ಪ್ರಸ್ತಾಪಿಸಿದ ಅವರು, ಇಡೀ ರಾಜ್ಯದಲ್ಲಿರುವ 11,133 ಪೌರ ಕಾರ್ಮಿಕರನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸಿಲಾಗಿದೆ. 11,133ರಲ್ಲಿ ನಗರಸಭೆ, ಪುರಸಭೆ, ಮತ್ತು ಪಟ್ಟಣ ಪಂಚಾಯತಿಯಲ್ಲಿ 5,533 ಪೌರ ಕಾರ್ಮಿಕರು ಮತ್ತು ಕಾರ್ಪೊರೇಷನ್‌ಗಳಿಂದ 1927 ಪೌರ ಕಾರ್ಮಿಕರು ಮತ್ತು ಬಿಬಿಎಂಪಿ ವ್ಯಾಪ್ತಿಯಲ್ಲಿ 3670 ಪೌರ ಕಾರ್ಮಿಕರನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸಲು ಸಚಿವ ಸಂಪುಟ ಸೋಮವಾರ ಒಪ್ಪಿಗೆ ಕೊಟ್ಟಿದೆ ಎಂದರು.
ರಾಜ್ಯದಲ್ಲಿ ಪೌರ ಕಾರ್ಮಿಕರ ಹೋರಾಟದ ಹಿಂದೆ ಪೌರ ಕಾರ್ಮಿಕರ ಕುಟುಂಬದಲ್ಲಿ ಜನಿಸಿದ ಬೆಂಗಳೂರಿನಲ್ಲಿ ಶಾಸಕರಾಗಿದ್ದ ಐಪಿಡಿ ಸಾಲಪ್ಪನವರು ಇದ್ದರು. ಪೌರ ಕಾರ್ಮಿಕರನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸಬೇಕು ಎಂದು ಹೋರಾಟ ಮಾಡಿದ್ದರು. ಆದರೆ, ಇದುವರೆಗೂ ಆಗಿರಲಿಲ್ಲ. ಅವರನ್ನು ಮುಖ್ಯಮಂತ್ರಿಗಳ ಬಳಿ ಪೌರ ಕಾರ್ಮಿಕರನ್ನು ಕರೆದುಕೊಂಡು ಹೋಗಿ ವಿನಂತಿ ಮಾಡಿದಾಗ ಪರಿಶೀಲನೆ ಮಾಡ್ತಿವಿ ಎಂದು ಸಕಾರಾತ್ಮಕವಾಗಿ ಸ್ಪಂದಿಸಿದ್ದರು ಎಂದರು.
ಸೋಮವಾರ 11,133 ಮಂದಿ ಪೌರ ಕಾರ್ಮಿಕರನ್ನ ಸರ್ಕಾರಿ ನೌಕರರನ್ನಾಗಿ ಪರಿಗಣಿಸಲು ಸಚಿವ ಸಂಪುಟದಲ್ಲಿ ಒಪ್ಪಿಗೆ ಪಡೆದಿದ್ದೇವೆ. ಬೆಂಗಳೂರಿಗೆ ಸೀಮಿತವಾಗಿ ಹೋರಾಟಗಳು ಆಗಬಾರದು. ನಾನು ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳಿಗೆ ಹಾಗೂ ಸಚಿವ ಸಂಪುಟ ಸದಸ್ಯರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಕಾರಜೋಳ ಹೇಳಿದರು.
[20/09, 3:56 PM] DL Harish:
*ನಾಳೆಯಿಂದ ಏಷ್ಯಾದ ಅತೀದೊಡ್ಡ ಶಿಕ್ಷಣ ಮೇಳ ಡೈಡ್ಯಾಕ್ಟ್ ಇಂಡಿಯಾ ಸಮಾವೇಶ*
*ಮೂರು ದಿನಗಳ ಸಮಾವೇಶಕ್ಕೆ ಉನ್ನತ ಶಿಕ್ಷಣ ಇಲಾಖೆ ಪ್ರಾಯೋಜಕತ್ವ*
ಬೆಂಗಳೂರು: ಶಿಕ್ಷಣ ಮತ್ತು ಕೌಶಲ್ಯ ಕ್ಷೇತ್ರದಲ್ಲಿ ಏಷ್ಯಾದ ಅತೀದೊಡ್ಡ ಮತ್ತು ಭಾರತದ ಏಕೈಕ ಸಮಾವೇಶವಾದ 'ಡೈಡ್ಯಾಕ್ಟ್ ಇಂಡಿಯಾ' ಬೆಂಗಳೂರಿನಲ್ಲಿ ಸೆ.21ರಿಂದ 23ರವರೆಗೆ ನಡೆಯಲಿದೆ. ಇದಕ್ಕೆ ರಾಜ್ಯ ಉನ್ನತ ಶಿಕ್ಷಣ ಇಲಾಖೆ ಪ್ರಾಯೋಜಕತ್ವ ನೀಡುತ್ತಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥ ನಾರಾಯಣ ಹೇಳಿದ್ದಾರೆ.
ಮಂಗಳವಾರ ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 12ನೇ ವರ್ಷದ ಈ ಸಮಾವೇಶವು
ಬೆಂಗಳೂರು ಅಂತರ ರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ (BIEC) ನಡೆಯಲಿದೆ. ಇಲ್ಲಿ ಶಿಕ್ಷಣ ಮತ್ತು ಕೌಶಲ್ಯ ಕ್ಷೇತ್ರಗಳ 4,000ಕ್ಕೂ ಹೆಚ್ಚು ನವೀನ ಉತ್ಪನ್ನ ಹಾಗೂ ಸೇವೆ ಅನಾವರಣಗೊಳ್ಳಲಿವೆ. ಮೈಕ್ರೋಸಾಫ್ಟ್, ಅಮೆಜಾನ್, ಸ್ಯಾಮ್ಸಂಗ್, ಎಚ್.ಪಿ. ಸೇರಿದಂತೆ 20 ದೇಶಗಳ 200ಕ್ಕೂ ಹೆಚ್ಚು ಪ್ರದರ್ಶಕರು ಭಾಗವಹಿಸುತ್ತಿದ್ದಾರೆ ಎಂದರು.
ಸಮಾವೇಶದಲ್ಲಿ ಯುಕೆ, ಜರ್ಮನಿ, ಆಸ್ಟ್ರೇಲಿಯಾ, ಕೆನಡಾ, ಫಿನ್ಲೆಂಡ್, ಪೋಲೆಂಡ್, ಸಿಂಗಾಪೂರ ಮುಂತಾದ ದೇಶಗಳ ಪ್ರತ್ಯೇಕ ಅಂತರರಾಷ್ಟ್ರೀಯ ಪೆವಿಲಿಯನ್ ಇರಲಿವೆ ಎಂದು ಅವರು ವಿವರಿಸಿದರು.
ಸಮಾವೇಶವು ಇಂಡಿಯಾ ಡೈಡ್ಯಾಕ್ಟಿಕ್ಸ್ ಅಸೋಸಿಯೇಷನ್ (IDA), ಕೇಂದ್ರ ಶಿಕ್ಷಣ ಇಲಾಖೆ, ನೀತಿ ಆಯೋಗ, ಕೇಂದ್ರ ಕೌಶಲ್ಯ ಮತ್ತು ಉದ್ಯಮಶೀಲತೆ ಇಲಾಖೆ ಮತ್ತು ಎಜುಕೇಶನ್ ವರ್ಲ್ಡ್ ಫೋರಂ ಸಹಯೋಗದಲ್ಲಿ ಜರುಗಲಿದೆ. ಅಖಿಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್ತು (AICTE) ಹಾಗೂ ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಪರಿಷತ್ತು (NCERT) ಈ ಸಮಾವೇಶದ ಸಹಭಾಗಿತ್ವ ವಹಿಸಿವೆ ಎಂದು ಅವರು ಮಾಹಿತಿ ನೀಡಿದರು.
"ಕರ್ನಾಟಕವು ಶಿಕ್ಷಣದಲ್ಲಿ ಮುಂಚೂಣಿಯಲ್ಲಿದೆ. ಬೆಂಗಳೂರು ವಿಶ್ವದ ನಾವೀನ್ಯತೆಯ ರಾಜಧಾನಿಗಳಲ್ಲಿ ಒಂದಾಗಿದೆ. ವಿವಿಧ ದೇಶಗಳ ಶಿಕ್ಷಣ ಸಚಿವರು, ನಿಯೋಗಗಳು ಮತ್ತು ಶಿಕ್ಷಣ ತಜ್ಞರಿಗೆ ಈ ಸಮಾವೇಶವು ಅತ್ಯಂತ ಆಸಕ್ತಿದಾಯಕವಾಗಿರಲಿದೆಎಂದು ಅಶ್ವತ್ಥ ನಾರಾಯಣ ಅಭಿಪ್ರಾಯ ಪಟ್ಟರು.
ಇಂಡಿಯಾ ಡೈಡ್ಯಾಕ್ಟಿಕ್ಸ್ ಅಸೋಸಿಯೇಷನ್ ಸಿಇಒ ಆದಿತ್ಯ ಗುಪ್ತಾ ಮಾತನಾಡಿ, ಈ ಸಮಾವೇಶವು ಶಿಕ್ಷಣ ಕ್ಷೇತ್ರದ ಆವಿಷ್ಕಾರಗಳನ್ನು ಒಂದೇ ಸೂರಿನಡಿ ತರಲಿದೆ. ಕೊರೊನಾ ಸಾಂಕ್ರಾಮಿಕದ ಸಂದರ್ಭದಲ್ಲಿ ಶಿಕ್ಷಣ ಕ್ಷೇತ್ರ ಎದುರಿಸಿದ ಅನೇಕ ಸವಾಲುಗಳಿಗೆ ಪರಿಹಾರಗಳನ್ನು ಪ್ರಸ್ತುತ ಪಡಿಸಲಿದೆ ಎಂದರು.
*ಏಷಿಯನ್ ಸಮ್ಮಿಟ್ ಆನ್ ಎಜುಕೇಶನ್ ಅಂಡ್ ಸ್ಕಿಲ್ಸ್ (ASES) ಸಮಾವೇಶ*
ಏಷಿಯನ್ ಸಮ್ಮಿಟ್ ಆನ್ ಎಜುಕೇಶನ್ ಅಂಡ್ ಸ್ಕಿಲ್ಸ್ ಸಮಾವೇಶದ 7ನೇ ಆವೃತ್ತಿಯೂ ಸೆ. 20 ಮತ್ತು 21ರಂದು ಬೆಂಗಳೂರಿನಲ್ಲಿ ನಡೆಯುತ್ತಿದೆ.
ಇದರಲ್ಲಿ ಯುಕೆ, ಬ್ರೆಜಿಲ್, ಮಲೇಶಿಯಾ, ಸೌದಿ ಅರೇಬಿಯಾ ಸೇರಿದಂತೆ 15 ದೇಶಗಳ ಶಿಕ್ಷಣ ಸಚಿವರು, ಸಚಿವರ ನಿಯೋಗಗಳು ಪಾಲ್ಗೊಳ್ಳಲಿವೆ. ಭಾರತದ 10 ರಾಜ್ಯಗಳ ಶಿಕ್ಷಣ ಸಚಿವರು ಇದರಲ್ಲಿ ಭಾಗಿಯಾಗಲಿದ್ದಾರೆ ಎಂದು ಅವರು ನುಡಿದರು.
ಎಜುಕೇಶನ್ ವರ್ಲ್ಡ್ ಫೋರಂನ ನಿರ್ದೇಶಕ ಡೊಮಿನಿಕ್ ಸವಾಜ್ ಸುದ್ದಿಗೋಷ್ಠಿಯಲ್ಲಿ ಇದ್ದರು.
*ಕಾರ್ಯಾಗಾರಗಳು/ಸಮ್ಮೇಳನಗಳು*
ಡೈಡ್ಯಾಕ್ಟ್ ಇಂಡಿಯಾ ಸಮಾವೇಶದ ಜೊತೆ ಹಲವು ಕಾರ್ಯಾಗಾರಗಳು ಹಾಗೂ ಸಮ್ಮೇಳನಗಳು ಸಹ ಜರುಗಲಿವೆ. ಇಂಟರ್ ನ್ಯಾಷನಲ್ ಎಜುಕೇಶನ್ ಅಂಡ್ ಸ್ಕಿಲ್ ಸಮ್ಮಿಟ್, ಡೈಡ್ಯಾಕ್ ಅಲೈಯನ್ಸ್ ಆಫ್ ಇಂಟರ್ ನ್ಯಾಷನಲ್ ಸ್ಕೂಲ್ಸ್ ಕಾನ್ಫರೆನ್ಸ್, ಅರ್ಲಿ ಲರ್ನಿಂಗ್ ಕಾನ್ಫರೆನ್ಸ್, ಕೆ-12 ಎಜುಕೇಶನ್ ಕಾನ್ಫರೆನ್ಸ್, ಐಡಿಎ ಕನೆಕ್ಟ್ ವರ್ಕ್ ಶಾಪ್ ಮುಂತಾದ ಕಾರ್ಯಾಗಾರಗಳು ಹಾಗೂ ಸಮ್ಮೇಳನಗಳು ಸಮಾವೇಶದ ಭಾಗವಾಗಿರಲಿವೆ.
[20/09, 3:56 PM] DL Harish: ಕಾಫಿ ಮಂಡಳಿ ರದ್ದುಪಡಿಸುವಂತೆ ಮಲೆನಾಡು ಶಾಸಕ ಎಂ.ಪಿ.ಕುಮಾರ ಸ್ವಾಮಿ ವಿಧಾನ ಸಭೆಯಲ್ಲಿ ಆಗ್ರಹ.
ಕಾಫಿನಾಡಿನ ರೈತರಿಗೆ ಉಪಯೋಗವಿಲ್ಲದ ಈಗಾಗಲೇ ಅಸ್ತಿತ್ವದಲ್ಲಿರುವ ಕಾಫಿ ಅಭಿವೃದ್ಧಿ ಮಂಡಳಿಯನ್ನು ರದ್ದುಗೊಳಿಸಬೇಕು ಎಂದು ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಹೇಳಿದ್ದಾರೆ.
ವಿಧಾನ ಸಭೆಯಲ್ಲಿಂದು ಶೂನ್ಯವೇಳೆಯಲ್ಲಿ ಈ ವಿಷಯ ಪ್ರಸ್ತಾಪಿಸಿ ಮಾತನಾಡಿದ ಅವರು,ಕಾಫಿ ಅಭಿವೃದ್ಧಿ ಮಂಡಳಿಯಿಂದ2018ರಿಂದ ಕಾಫಿ ಬೆಳೆ ರೈತರಿಗೆ ಇದುವರೆಗೂ ಯಾವುದೇ ಅತಿವೃಷ್ಟಿ ಪರಿಹಾರ ಬಂದಿಲ್ಲ, ಈ ಭಾರಿ ಮಲೆನಾಡು ಭಾಗದಲ್ಲಿ ಶೇ 33ರಷ್ಟು ಮಳೆಯಾಗಿದೆ ಎಂದು ಕೃಷಿ, ಕಂದಾಯ ಇಲಾಖೆ, ತೋಟಗಾರಿಕಾ ಇಲಾಖೆ ವರದಿ ನೀಡಿದೆ.ಆದರೆ ಕಾಫಿ ಅಭಿವೃದ್ಧಿ ಮಂಡಳಿ ಶೇ 22ರಷ್ಟು ಮಳೆಯಾಗಿದೆ ಎಂದು ವರದಿ ನೀಡಿದೆ.ಆದರೆ ಈ ಬಾರಿ ಮಲೆನಾಡು ಭಾಗದಲ್ಲಿ ಅತ್ಯಧಿಕ ಮಳೆಯಾಗಿದೆ ಈ ರೀತಿ ಸುಳ್ಳು ವರದಿ ನೀಡಿ ಜನರ ಹಾದಿ ತಪ್ಪಿಸುವುದು ಸರಿಯಲ್ಲ ಎಂದು ತಿಳಿಸಿದರು.
ಕಾಫಿ ಅಭಿವೃದ್ಧಿ ಮಂಡಳಿಯಿಂದ ಯಾವುದೇ ಉಪಯೋಗವಿಲ್ಲ,ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಮ್ಮನ್ನು ನಿರ್ಲಕ್ಷಿಸಿವೆ ಎಂಬ ಆತಂಕದಲ್ಲಿ ಬೆಳೆಗಾರರು ಇದ್ದಾರೆ. ಕಾಫಿಯಿಂದ ಈ ಹಿಂದೆ ವಾರ್ಷಿಕವಾಗಿ ವಿದೇಶಿ ವಿನಿಮಯದಿಂದ ಐದು ಸಾವಿರ ಕೋಟಿ ರೂಪಾಯಿ ಆದಾಯ ಪಡೆಯಲಾಗುತ್ತಿತು, ಪ್ರಸ್ತುತ 9 ಸಾವಿರ ಕೋಟಿ ರೂಪಾಯಿ ಆದಾಯ ಪಡೆಯಲಾಗುತ್ತದೆ ಎಂದು ಹೇಳಿದರು.
ಕಾಫಿಯನ್ನು ದೊಡ್ಡ ಉದ್ಯಮ, ವಾಣಿಜ್ಯ ಬೆಳೆಯನ್ನಾಗಿ ಪರಿಗಣಿಸಿರುವುದು ಸರಿಯಲ್ಲ. ಇದನ್ನು ಕೃಷಿ ಬೆಳೆಯನ್ನಾಗಿ ಪರಿಗಣಿಸಿದರೆ ರೈತರಿಗೆ ಸರ್ಕಾರದ ಸವಲತ್ತುಗಳು ದೊರೆಯಲಿದೆ. ಕೇಂದ್ರ ಫಸಲ್ ಬೀಮಾ ಯೋಜನೆಯ ವ್ಯಾಪ್ತಿಯಲ್ಲಿ ತರಬೇಕು ಎಂದು ಆಗ್ರಹಿಸಿದರು.
ಮಲೆನಾಡು ಭಾಗದಲ್ಲಿ ಪ್ರತಿವರ್ಷ ಹೆಚ್ಚು ಪ್ರಮಾಣದ ಮಳೆಯಾಗಿ ರೈತರು ಸಾಕಷ್ಟು ನಷ್ಟ ಅನುಭವಿಸುತ್ತಿದ್ದಾರೆ. ಚಿಕ್ಕಮಗಳೂರು, ಮಡಿಕೇರಿ, ಹಾಸನ ಜಿಲ್ಲೆಯನ್ನು ಅತಿವೃಷ್ಢಿ ಪ್ರದೇಶ ಎಂದು ಘೋಷಿಸಬೇಕು ಎಂದು ಒತ್ತಾಯಿಸಿದರು.
[20/09, 3:56 PM] DL Harish: *ಉತ್ತರ ಕನ್ನಡ ಜಿಲ್ಲೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ರಾಜ್ಯ ಸರ್ಕಾರದಿಂದ ತಾತ್ವಿಕ ಒಪ್ಪಿಗೆ:ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್*
*ಉತ್ತರ ಕನ್ನಡದ ಜನರ ಬಹುದಿನಗಳ ಬೇಡಿಕೆಗೆ ಮನ್ನಣೆ*
*ಶಿರಸಿಯಲ್ಲಿ 250 ಹಾಸಿಗೆಗಳ ಆಸ್ಪತ್ರೆ ಕಾಮಗಾರಿ ನಡೆಯುತ್ತಿದೆ*
*ಬೆಂಗಳೂರು, ಸೆಪ್ಟೆಂಬರ್ 20, ಮಂಗಳವಾರ*
ಉತ್ತರ ಕನ್ನಡ ಜಿಲ್ಲೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ನೇತೃತ್ವದ ನಮ್ಮ ಸರ್ಕಾರ ತಾತ್ವಿಕ ಒಪ್ಪಿಗೆ ನೀಡಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಪ್ರಕಟಿಸಿದರು. ಈ ಮೂಲಕ ಜಿಲ್ಲೆಯ ಜನರ ಬಹುದಿನಗಳ ಬೇಡಿಕೆಗೆ ಮನ್ನಣೆ ದೊರೆತಿದೆ.
ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲೆಯ ಜನಪ್ರತಿನಿಧಿಗಳೊಂದಿಗಿನ ಸಭೆಯಲ್ಲಿ ಪಾಲ್ಗೊಂಡ ಬಳಿಕ, ಸಚಿವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಉತ್ತರ ಕನ್ನಡ ಜಿಲ್ಲೆಗೆ ಉತ್ಕೃಷ್ಟವಾದ ಆರೋಗ್ಯ ಸೇವೆ ನೀಡಲು ರಾಜ್ಯ ಸರ್ಕಾರ ಬದ್ಧವಾಗಿದೆ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಎಲ್ಲಿ ನಿರ್ಮಿಸಬೇಕು, ಹೇಗೆ ನಿರ್ಮಾಣ ಮಾಡಬೇಕು ಎಂಬೆಲ್ಲ ವಿಚಾರಗಳ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸಲಾಗುವುದು. ಈ ಪ್ರಸ್ತಾವ ಆರ್ಥಿಕ ಇಲಾಖೆಯವರೆಗೆ ಹೋಗಿದೆ. ಇನ್ನು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಸಚಿವ ಸಂಪುಟದಲ್ಲಿ ಪ್ರಸ್ತಾವ ಇರಿಸಲಾಗುವುದು ಎಂದು ಮಾಹಿತಿ ನೀಡಿದರು.
ಕುಮಟ ಪ್ರದೇಶ ಉತ್ತರ ಕನ್ನಡ ಜಿಲ್ಲೆಯ ಮಧ್ಯಭಾಗದಲ್ಲಿದ್ದು, ಅಲ್ಲಿಯೇ ಆಸ್ಪತ್ರೆ ನಿರ್ಮಿಸುವ ಬಗ್ಗೆಯೂ ಚರ್ಚೆಯಾಗಿದೆ. *ಶಿರಸಿಯಲ್ಲಿ ಈಗಾಗಲೇ 250 ಹಾಸಿಗೆಗಳ ಸುಸಜ್ಜಿತ ಆಸ್ಪತ್ರೆ ಕಾಮಗಾರಿ* ಭರದಿಂದ ನಡೆಯುತ್ತಿದೆ. ಕಾರವಾರದಲ್ಲಿ ವೈದ್ಯಕೀಯ ಕಾಲೇಜು ಆರಂಭಿಸಿದ್ದು, ಮುಂದಿನ ವರ್ಷಕ್ಕೆ ಆ ಕಾಮಗಾರಿಯೂ ಮುಗಿಯಲಿದೆ. ಅಲ್ಲಿ ಈ ವರ್ಷವೇ 150 ವಿದ್ಯಾರ್ಥಿಗಳಿಗೆ ಬೋಧಿಸಲು ಎನ್‌ಎಂಸಿಯಿಂದ ಪರವಾನಗಿ ದೊರೆತಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಉತ್ಕೃಷ್ಟವಾದ ಆರೋಗ್ಯ ಸೇವೆ ನೀಡುವುದು, ಆರೋಗ್ಯ ಸೇವೆ ಮೇಲ್ದರ್ಜೆಗೇರಿಸುವುದು, ಸಿಬ್ಬಂದಿ ಕೊರತೆ ನೀಗಿಸುವುದು, ಉಪಕರಣಗಳ ಪೂರೈಕೆ, ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸುವ ಕುರಿತು ಸಭೆಯಲ್ಲಿ ಚರ್ಚೆ ನಡೆದಿದೆ ಎಂದು ಹೇಳಿದರು.
ಅಧಿವೇಶನ ಮುಗಿದ ಬಳಿಕ ಸಚಿವ ಡಾ.ಕೆ.ಸುಧಾಕರ್ ಉತ್ತರ ಕನ್ನಡ ಜಿಲ್ಲೆಗೆ ಭೇಟಿ ನೀಡಿ ಪರಿಶೀಲಿಸಲಿದ್ದಾರೆ.
ಸಚಿವ ಶಿವರಾಮ್ ಹೆಬ್ಬಾರ್, ಶಾಸಕರು ಸಭೆಯಲ್ಲಿದ್ದರು.
Post a Comment