ವಿಮ್ಸ್ ನಲ್ಲಿ ರೋಗಿಗಳ ಸಾವು, ನಾರಾ ಭರತ್ ರೆಡ್ಡಿ ಖಂಡನೆ

 ವಿಮ್ಸ್ ನಲ್ಲಿ ರೋಗಿಗಳ ಸಾವು, ನಾರಾ ಭರತ್ ರೆಡ್ಡಿ ಖಂಡನೆ


ಬಳ್ಳಾರಿ: ಇಲ್ಲಿನ ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (ವಿಮ್ಸ್) ಬುಧವಾರ ಬೆಳಿಗ್ಗೆ ವಿದ್ಯುತ್ ಕೈಕೊಟ್ಟು, ಜನರೇಟರ್ ವ್ಯವಸ್ಥೆ ಇಲ್ಲದೇ ತೀವ್ರ ನಿಗಾ ಘಟಕದಲ್ಲಿ ದಾಖಲಾಗಿದ್ದ (ಐಸಿಯು)  ಮೂವರು ಮೃತಪಟ್ಟಿದ್ದು, ಇದು ಸಂಬಂಧಿಸಿದ ವಿಮ್ಸ್ ನ  ಆಡಳಿತಾಧಿಕಾರಿಗಳ ಬೇಜವಾಬ್ದಾರಿ ಹಾಗೂ ಅಸಮರ್ಥತೆ ಕಾರಣ ಎಂಬುದು ಸಾಬೀತಾಗಿದೆ, ತಪ್ಪಿತಸ್ಥರು ಯಾರೇ ಇರಲಿ ಕ್ರಮಕ್ಕೆ ಮುಂದಾಗಬೇಕು ಎಂದು ಜಿ.ಪಂ.ಮಾಜಿ ಸದಸ್ಯ ನಾರಾ ಭರತ್ ರೆಡ್ಡಿ ಒತ್ತಾಯಿಸಿದ್ದಾರೆ

ಪ್ರತಿದಿನ ಸಾವಿರಾರು ಸಂಖ್ಯೆಯಲ್ಲಿ ರೋಗಿಗಳು ದಾಖಲಾಗುವ  ಈ ಸರ್ಕಾರಿ ಆಸ್ಪತ್ರೆಯಲ್ಲಿ ನಾಲ್ಕು ಗಂಟೆಗಳ ಕಾಲ ವಿದ್ಯುತ್ ವ್ಯತ್ಯಯ ಮತ್ತು ಅದಕ್ಕೆ ಪರ್ಯಾಯವಾಗಿರುವ ಜನರೇಟರ್ ಕೆಲಸ ಮಾಡಿಲ್ಲ ಅಂದರೆ,  ಇದು ಆರೋಗ್ಯ ಇಲಾಖೆಗೆ ನಾಚಿಕೆಗೇಡಿನ ಸಂಗತಿ,  ಇದರಿಂದ ತೀವ್ರ  ನಿಗಾ ಘಟಕದಲ್ಲಿದ್ದ ಮೂವರು  ಮೃತರಾಗಿದ್ದು,  ಈ ಕುರಿತು ವಿಮ್ಸ್ ಅಧಿಕಾರಿಗಳು ಸಹ ಯಾವುದೇ ಉತ್ತರ ನೀಡುತ್ತಿಲ್ಲ, ಅಂದರೆ  ಇಲ್ಲಿರುವ ಅಧಿಕಾರಿಗಳ  ಕಾರ್ಯವೈಖರಿ ಮತ್ತು ಇವರನ್ನು ಗಮನಿಸಬೇಕಾದ ಆರೋಗ್ಯ ಇಲಾಖೆ ಮಂತ್ರಿಗಳು ಸೇರಿ ಜನಸಾಮಾನ್ಯರ ಪ್ರಾಣದ ಜೋತೆ ಚೆಲ್ಲಾಟವಾಡುತ್ತಿದ್ದಾರೆ ಎಂಬುವುದು ಕಾಣುತ್ತಿದೆ.

ಸರ್ಕಾರದಿಂದ ಕೋಟ್ಯಾಂತರ ರೂ. ಹಣವನ್ನು ಮಂಜೂರು ಮಾಡಿಸಿ ತಂದು,   ಐಸಿಯುನಲ್ಲಿದ ಜನರೇಟರ್ ಅನ್ನು ಸಹ ವ್ಯವಾಸ್ಥಿತವಾಗಿ ನಿಭಾಯಿಸುತ್ತಿಲ್ಲ, ಅಂದರೆ ಇಲ್ಲಿಯೂ ಶೇ.40 ಸರ್ಕಾರ ಕೈವಾಡ ಇದೆ ಎನ್ನುವುದು ಸ್ಪಷ್ಟವಾಗಿದೆ.

ಈ ಘಟನೆ ಸಂಬಂಧ ಯಾರು ತಪ್ಪಿತಸ್ಥ ರೋ ಅವರನ್ನು ಕೂಡಲೇ ಅಮಾನತು ಮಾಡಿ ಅವರಿಗೆ ತಕ್ಕ ಶಿಕ್ಷೆಯಾಗಬೇಕು ಹಾಗೂ ಮೃತರಾದವಾರಿಗೆ ಪರಿಹಾರ ನೀಡಬೇಕು ಮತ್ತು ಇಂತಹಾ ಘಟನೆಗಳು ಮರುಕಳಿಸದಂತೆ ನೊಡಿಕೋಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

Post a Comment

Previous Post Next Post