[09/09, 1:19 PM] Kpcc official: ಕರ್ನಾಟಕದಲ್ಲಿ ಭಾರತ ಐಕ್ಯತಾ ಯಾತ್ರೆ ಕುರಿತ ವೆಬ್ ಸೈಟ್ (www.bharathaikyatayatre.in) ಅನ್ನು ಕೆಪಿಸಿಸಿ ಕಚೇರಿಯಲ್ಲಿ ಶುಕ್ರವಾರ ಉದ್ಘಾಟಿಸಲಾಯಿತು. ವೆಬ್ ಸೈಟ್ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ಮಳೆ ಅನಾಹುತದಿಂದ ರಾಜ್ಯದ ಜನರ ಅದರಲ್ಲೂ ವಿಶೇಷವಾಗಿ ಬೆಂಗಳೂರಿಗರ ಸಂಕಷ್ಟ ಹಾಗೂ ಪರಿಹಾರದ ಬಗ್ಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಮಾಜಿ ಡಿಸಿಎಂ ಡಾ. ಜಿ. ಪರಮೇಶ್ವರ, ಮಾಜಿ ಸಚಿವರಾದ ಕೆ ಜೆ ಜಾರ್ಜ್, ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ ಕೆ ಹರಿಪ್ರಸಾದ್ ಅವರು ಜಂಟಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು. ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸಲೀಮ್ ಅಹ್ಮದ್, ಧ್ರುವನಾರಾಯಣ್, ಸಂವಹನ ಮತ್ತು ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥ ಪ್ರಿಯಾಂಕ್ ಖರ್ಗೆ, ಮಾಜಿ ಸಚಿವ ಅಲ್ಲಮ್ ವೀರಭದ್ರಪ್ಪ, ರಾಜ್ಯಸಭೆ ಮಾಜಿ ಸದಸ್ಯ ಪ್ರೊ. ರಾಜೀವ್ ಗೌಡ ಮತ್ತಿತರರು ಉಪಸ್ಥಿತರಿದ್ದರು.
[09/09, 1:37 PM] Kpcc official: ವಿಜಯನಗರ ಜಿಲ್ಲೆ ಹೊಸಪೇಟೆಯ ಮಾಜಿ ಶಾಸಕ ಗವಿಯಪ್ಪ ಅವರು ತಮ್ಮ ಅಪಾರ ಬೆಂಬಲಿಗರ ಜತೆ ಬಿಜೆಪಿ ತೊರೆದು ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಶುಕ್ರವಾರ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ ಕೆ ಹರಿಪ್ರಸಾದ್, ಮಾಜಿ ಡಿಸಿಎಂ ಡಾ ಜಿ ಪರಮೇಶ್ವರ, ಮಾಜಿ ಸಚಿವ ಅಲ್ಲಮ್ ವೀರಭದ್ರಪ್ಪ, ಮಾಜಿ ಸಂಸದ ವಿ ಎಸ್ ಉಗ್ರಪ್ಪ ಮತ್ತಿತರರ ಮುಖಂಡರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
[09/09, 2:54 PM] Kpcc official: *ಜಂಟಿ ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ನಾಯಕರ ಮಾತುಗಳು:*
*ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ:*
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಬೆಂಗಳೂರಿನ ಸ್ವರೂಪವನ್ನು ಬದಲಿಸಲು ಪರಮೇಶ್ವರ್, ರಾಮಲಿಂಗಾ ರೆಡ್ಡಿ, ಕೆ.ಜೆ ಜಾರ್ಜ್ ಅವರು ಸಾಕಷ್ಟು ಶ್ರಮಿಸಿದ್ದರು. ಒಂದು ಕಾಲದಲ್ಲಿ ಐಟಿ ರಾಜಧಾನಿ ಹಾಗೂ ಹಸಿರು ನಗರ ಎಂದು ಖ್ಯಾತಿ ಪಡೆದಿದ್ದ ಬೆಂಗಳೂರು, ಇಂದು ಪ್ರವಾಹ ಪೀಡಿತ ನಗರವಾಗಿದೆ. ಇದಕ್ಕೆ ಕಾರಣ ದ್ರೋಹಿಗಳ ಜನತಾ ಪಕ್ಷ ಬಿಜೆಪಿ.
ಕಳೆದ 16 ವರ್ಷಗಳ ಅಧಿಯಲ್ಲಿ 11 ವರ್ಷಗಳ ಕಾಲ ಬಿಜೆಪಿ ಆಡಳಿತ ನಡೆಸಿದೆ. ಈಗ ಬೆಂಗಳೂರಿನಲ್ಲಿ 3 ಬಿಜೆಪಿಯ ಸಂಸದರಿದ್ದು, ಈ ಕ್ಷೇತ್ರಗಳ 4 ವಿಧಾನಸಭಾ ಕ್ಷೇತ್ರಗಳು ಸಂಪೂರ್ಣವಾಗಿ ಪ್ರವಾಹಕ್ಕೆ ತುತ್ತಾಗಿವೆ. ಬೆಂಗಳೂರಿನ ಇತಿಹಾಸದಲ್ಲಿ ಬೋಟ್ ಮೂಲಕ ಜನ ಸಾಗಿದ ಇತಿಹಾಸ ಇರಲಿಲ್ಲ. ಇದಕ್ಕೆ ಕಾರಣ ಬೊಮ್ಮಾಯಿ ಅವರ ನೇತೃತ್ವದ 40% ಕಮಿಷನ್ ಸರ್ಕಾರ ಕಾರಣ.
ರಾಜ ಕಾಲುವೆಗಳಲ್ಲಿ ಕಸ ಎತ್ತದೇ ಇರುವುದು, ಅನಧಿಕೃತ ಒತ್ತುವರಿ ತೆರವು ಮಾಡದೇ ಇರುವುದು, ಕೆರೆಗಳ ನಡುವೆ ಸಂಪರ್ಕ ಸಾಧಿಸದೇ ಇರುವುದು ಈ ಪ್ರವಾಹ ಪರಿಸ್ಥಿತಿಗೆ ಕಾರಣವಾಗಿದೆ.
ಹೀಗಾಗಿ ಕಾಂಗ್ರೆಸ್ ಪಕ್ಷ ವಿಷನ್ ಬೆಂಗಳೂರು ಹಾಗೂ ಉತ್ತ ಬೆಂಗಳೂರಿಗೆ ಒಂದು ಯೋಜನೆಯನ್ನು ಹೊಂದಿದೆ. ಇದಕ್ಕಾಗಿ ಒಂದು ಸಮಿತಿ ರಚಿಸಲಾಗಿದ್ದು, ಈ ಸಮಿತಿ 20 ದಿನಗಳ ಒಳಗಾಗಿ ವರದಿ ಸಲ್ಲಿಸಬೇಕು. ಈ ಸಮಿತಿ ನಾಗರೀಕ ಸಮಾಜದ ಪ್ರತಿನಿಧಿಗಳು ಸೇರಿದಂತೆ ಎಲ್ಲ ವರ್ಗದ ಜನರಿಂದ ಅಭಿಪ್ರಾಯ ಸಂಗ್ರಹಿಸಲಿದೆ.
ಇದರ ಜತೆಗೆ ನಾವು ಸರ್ಕಾರದ ಮುಂದೆ 7 ಪ್ರಮುಖ ಬೇಡಿಕೆಗಳನ್ನು ಇಡುತ್ತಿದ್ದೇವೆ.
1 ಸರ್ಕಾರ ಪ್ರವಾಹ ಹಾಗೂ ರಸ್ತೆಗುಂಡಿ ವಿಚಾರವಾಗಿ ಒಂದು ವಾರದ ಒಳಗಾಗಿ ಶ್ವೇತಪತ್ರ ಹೊರಡಿಸುವುದು. ಇದರಿಂದ ದುರಾಡಳಿತ, ಭ್ರಷ್ಟಾಚಾರ, ಮೂಲಸೌಕರ್ಯಗಳ ದುಸ್ಥಿತಿಯನ್ನು ಜನರ ಮುಂದೆ ಇಡಬಹುದು.
2 ಸರ್ವಪಕ್ಷ ಸಭೆ ಕರೆದು, ಎಲ್ಲ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ನಾಗರೀಕ ಸಮಾಜ, ವಿವಿಧ ವರ್ಗಘಲ ಜನರ ಅಭಿಪ್ರಾಯ ಪಡೆಯಬೇಕು.
3 ಸರ್ವಪಕ್ಷ ಪ್ರವಾಹ ಸಮಿತಿ ರಚಿಸಿ, ಮನೆ ಹಾನಿಯಾಗಿದ್ದರೆ 5 ಲಕ್ಷದಿಂದ 25 ಲಕ್ಷದವರೆಗೂ ಪರಿಹಾರ, ವಾಹನ ಹಾನಿಗೆ ಪ್ರತ್ಯೇಕ ಪರಿಹಾರ ನೀಡಿ. ನಗರದ ಮೂಲಭೂತ ಸೌಕರ್ಯ ಮರುಸ್ಥಾಪಿಸಬೇಕು.
4 ಪ್ರವಾಹ ಸಂದರ್ಭದಲ್ಲಿ ಜನರನ್ನು ಸ್ಥಳಾಂತರಿಸಲು ರಾಷ್ಟ್ರೀಯ ವಿಪತ್ತು ನಿರ್ವಹಣೆ ಪಡೆ ಸಹಾಯ ಪಡೆಯಲಿಲ್ಲ ಏಕೆ? ಇನ್ನಾದರೂ ಜನರನ್ನು ಸುರಕ್ಷಿತ ಕ್ಷೇತ್ರಗಳಿಗೆ ಸ್ಥಳಾಂತರಿಸಬೇಕು.
5 ಆರೋಗ್ಯ ಶಿಬಿರ ಮಾಡಿ ಅನಾರೋಗ್ಯ ಹರೆಡುವುದನ್ನು ತಡೆಯಿರಿ
6 ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸ್ವಚ್ಛಕಾರ್ಯ ಮಾಡಬೇಕು.
7 ಕೂಡಲೇ ಸಹಾಯವಾಣಿ ಸ್ಥಾಪಿಸಿ ಪ್ರವಾಹ ಪೀಡಿತ ಜನರ ಸಮಸ್ಯೆ ಆಲಿಸಬೇಕು.
ಬಿಜೆಪಿ ಸರ್ಕಾರ ಏನು ಮಾಡುತ್ತಿದೆ. ಕಾಂಗ್ರೆಸ್ ಸಮಿತಿಯು ಬೆಂಗಳೂರಿನ ಭವಿಷ್ಯಕ್ಕೆ ಉತ್ತಮ ಯೋಜನೆಗಳನ್ನು ರೂಪಿಸಲಿದ್ದು, ಮುಂದೆ ಪಾಲಿಕೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮೊದಲ ಆದ್ಯತೆಯಲ್ಲಿ ಈ ಯೋಜನೆಗಳನ್ನು ಆರು ತಿಂಗಳ ಒಳಗಾಗಿ ಪೂರ್ಣಗೊಳಿಸಲಿದೆ.
*ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ:*
ನಿನ್ನೆ ನಾನು ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿದೆ. ಅನೇಕ ಬಡವಾಣೆಗಳಲ್ಲಿ ನೀವು ಮನೆಗೆ ನುಗ್ಗಿದ್ದು ಜನ ಕಷ್ಟಕ್ಕೆ ಸಿಲುಕಿದ್ದಾರೆ. ಈ ಪ್ರದೇಶಗಳಲ್ಲಿ ಒಬ್ಬರೂ ವಾಸಿಸುತ್ತಿಲ್ಲ. 5-6 ಅಡಿ ನಿಂತಿತ್ತು. ಬೆಂಗಳೂರಿನ ಇತಿಹಾಸದಲ್ಲಿ ದೋಣಿಯಲ್ಲಿ ಸಾಗುವ ಪರಿಸ್ಥಿತಿ ಯಾವಾಗಲೂ ನಿರ್ಮಾಣವಾಗಿರಲಿಲ್ಲ. ಈಗ ಇದು ಸಾಧ್ಯವಾಗಿದೆ.
ಬೊಮ್ಮಾಯಿ ಅವರು ಬೆಂಗಳೂರಿನಲ್ಲಿ ಆಗಿರುವ ಅನಾಹುತಕ್ಕೆ ಹಿಂದಿನ ಸರ್ಕಾರ ಕಾರಣ ಎಂದಿದ್ದಾರೆ. ಇದಕ್ಕೆ ನಾವು ಹೇಗೆ ಕಾರಣ? ಪ್ರವಾಹ ಬಂದರೆ ಅದರಿಂದಾಗುವ ದುಷ್ಪರಿಣಾಮ ಎದುರಿಸಲು ಕಳೆದ 3 ವರ್ಷಗಳಿಂದ ಈ ಸರ್ಕಾರ ಕೈಗೊಂಡಿರುವ ಕ್ರಮಗಳನ್ನು ಮುಖ್ಯಮಂತ್ರಿಗಳು ತಿಳಿಸಬೇಕು.
2006ರಿಂದ 2022ರವರೆಗೆ 16 ವರ್ಷಗಳ ಅವಧಿಯಲ್ಲಿ ಬಿಜೆಪಿ ಹೆಚ್ಚು ಆಡಳಿತ ನಡೆಸಿದೆ. ಕೆರೆಗಳ ಹೂಳು ಎತ್ತದೇ ಇರುವುದು, ಕೆರೆಗಳ ಸಂಪರ್ಕ ಇಲ್ಲದಿರುವುದು, ರಾಜಕಾಲುವೆ ಒತ್ತುವರಿ ತೆರವು ಹಾಗೂ ಸ್ವಚ್ಛಗೊಳಿಸದೇ ಇರುವುದು ಈ ಪ್ರವಾಹಕ್ಕೆ ಪ್ರಮುಖ ಕಾರಣ. ನಮ್ಮ ಸರ್ಕಾರ ಇದ್ದಾಗ ಸಮೀಕ್ಷೆ ನಡೆಸಿ, ಒತ್ತುವರಿ ಪ್ರದೇಶ ಗುರುತಿಸಲಾಗಿತ್ತು. ಆಗ ಒಟ್ಟು 1953 ಒತ್ತುವರಿ ಪ್ರದೇಶಗಳಿದ್ದವು. ಅದರಲ್ಲಿ 1300 ಒತ್ತುವರಿ ತೆರವುಗೊಳಿಸಿದ್ದೆವು. ಇನ್ನು 653 ಒತ್ತುವರಿ ತೆರೆವಾಗಿರಲಿಲ್ಲ. ಅಷ್ಟರಲ್ಲಿ ಸರ್ಕಾರ ಪತನವಾಯಿತು. ನಂತರ ಕುಮಾರಸ್ವಾಮಿ ಹಾಗೂ ಬಿಜೆಪಿ ಸರ್ಕಾರ ಬಂದಿತ್ತು. ಇವರು ಒತ್ತುವರಿ ತೆರವು ಕಾರ್ಯ, ಕೆರೆ ಹೂಳು ಎತ್ತುವ ಕೆಲಸ ಮಾಡಲಿಲ್ಲ ಯಾಕೆ? ಈ ಕಾರಣಕ್ಕೆ ಇಂದು ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ.
ಈಗ ಇದಕ್ಕೆ ಕಾರಣ ಯಾರು? ಹೆಚ್ಚು ಅಧಿಕಾರ ಮಾಡಿರುವವರು ಬಿಜೆಪಿಯವರೇ. ಪ್ರವಾಹ ಪೀಡಿತ ಕ್ಷೇತ್ರಗಳಲ್ಲಿ ಇರುವ ಶಾಸಕರೂ ಬಿಜೆಪಿಯವರೆ. ಇವರೆಲ್ಲ ಎಷ್ಟು ವರ್ಷಗಳಿಂದ ಶಾಸಕರಾಗಿದ್ದಾರೆ? ಇವರೆಲ್ಲ ಏನು ಮಾಡುತ್ತಿದ್ದಾರೆ? ಈಗ ಇವರು ಜವಾಬ್ದಾರಿಯಿಂದ ನುಣುಚಿಕೊಳ್ಳಲು ಕಾಂಗ್ರೆಸ್ ಕಡೆ ಬೆಟ್ಟು ಮಾಡುತ್ತಿದ್ದಾರೆ. ಇವರು ಹಣ ಬಿಡುಗಡೆ ಮಾಡಿರುವುದಾಗಿ ಹೇಳುತ್ತಾರೆ. ಆದರೆ ಕಾರ್ಯ ಯೋಜನೆ ಅನುಷ್ಠಾನ ಮಾಡಿಲ್ಲ. ಇಂತಹ ಕೆಟ್ಟ ಪರಿಸ್ಥಿತಿಗೆ ಬಿಜೆಪಿ ಕಾರಣ. ಬಿಜೆಪಿಯ 3 ಸಂಸದರಿದ್ದಾರೆ. ಅವರ ಕೆಲಸ ಏನು? ಶಾಸಕರ ಕೆಲಸ ಏನು? ಕಳೆದ ಬಾರಿ 100 ಪಾಲಿಕೆ ಸದಸ್ಯರಿದ್ದರು ಅವರ ಕೆಲಸ ಏನು? ನಮ್ಮ ಮೇಲೆ ಆರೋಪ ಹೊರಿಸಿ ನಿಮ್ಮ ಲೋಪ ಮುಚ್ಚಿಕೊಳ್ಳುತ್ತಿರುವುದನ್ನು ಬೆಂಗಳೂರಿನ ಜನ ಕ್ಷಮಿಸುವುದಿಲ್ಲ.
ಈ ಸರ್ಕಾರಕ್ಕೆ ಯಾವುದೇ ದೂರದೃಷ್ಟಿ ಇಲ್ಲ. ಹೀಗಾಗಿ ನಮ್ಮ ಪಕ್ಷ ಒಂದು ಸಮಿತಿ ಮಾಡಿದೆ. ಪ್ರವಾಹದಿಂದ ಆಗಿರುವ ನಷ್ಟಗಳಿಗೆ ಪರಿಹಾರ ನೀಡುವವರು ಯಾರು? ಪ್ರವಾಹದಿಂದ ಒಂದು ಹುಡುಗಿ ಸತ್ತಿದ್ದರೂ ಇದುವರೆಗೂ ಪರಿಹಾರ ನೀಡಿಲ್ಲ. ನಾನು ಕಮಿಷನರ್ ಕರೆ ಮಾಡಿದಾಗ ವಿದ್ಯುತ್ ಸಂಸ್ಥೆ ನೀಡಬೇಕು ಎಂದು ಸಬೂಬು ಹೇಳುತ್ತಾರೆ. ಈ ಸರ್ಕಾರದ ನಿರ್ಲಕ್ಷ್ಯ ಬೇಜವಾಬ್ದಾರಿತನ, ಭ್ರಷ್ಟಾಚಾರದಿಂದ ನಗರದಲ್ಲಿ ಇಂದು ನರಕ ಪರಿಸ್ಥಿತಿ ಸೃಷ್ಟಿಯಾಗಿದೆ. ಜನ ಹೊಟೇಲ್ ಗಳಲ್ಲಿ ವಾಸ ಮಾಡುತ್ತಿದ್ದಾರೆ. ಅನೇಕರಿಗೆ ಆಹಾರ ಇಲ್ಲವಾಗಿದೆ. ಇದಕ್ಕೆಲ್ಲ ಬಿಜೆಪಿ ನೇರ ಹೊಣೆ. ಪ್ರವಾಹ ಪರಿಸ್ಥಿತಿ ಕುರಿತು ಸರ್ಕಾರ ಶ್ವೇತಪತ್ರ ಹೊರಡಿಸಲಿ. ಅಧಿವೇಶನದಲ್ಲಿ ನಾನು ಈ ವಿಚಾರ ಪ್ರಸ್ತಾಪಿಸುತ್ತೇನೆ, ಸರ್ಕಾರದ ಗಮನ ಸೆಳೆಯುತ್ತೇನೆ. ಅವರ ವೈಫಲ್ಯ, ಬೇಜವಾಬ್ದಾರಿತನವನ್ನು ತೋರಿಸುತ್ತೇನೆ
ಇವರು ಜನರ ರಕ್ಷಿಸದಿದ್ದರೆ ಅಧಿಕಾರದಲ್ಲಿ ಯಾಕೆ ಇರಬೇಕು? ನಾವು ವಿಧಾನಸೌಧದ ಒಳಗೆ ಹಾಗೂ ಹೊರಗೆ ಇವರ ಭ್ರಷ್ಟಾಚಾರ ಹಾಗೂ ವೈಫಲ್ಯದ ವಿರುದ್ಧ ಹೋರಾಡುತ್ತೇವೆ. ಸರ್ಕಾರ ಕೂಡಲೇ ಜನರ ಕಷ್ಟಗಳಿಗೆ ಸ್ಪಂದಿಸಬೇಕು. ಇಲ್ಲದಿದ್ದರೆ ನಾವು ಹೋರಾಟ ಮಾಡಬೇಕಾಗುತ್ತದೆ.
*ಮಾಜಿ ಉಪಮುಖ್ಯಮಂತ್ರಿ ಪರಮೇಶ್ವರ್:*
ನಾನು ಬೆಂಗಳೂರು ಉಸ್ತುವಾರಿ ಸಚಿವನಾಗಿ ಕೆಲಸ ಮಾಡಿದ್ದೇನೆ. ಈ ಪ್ರವಾಹ ಯಾಕೆ ಆಗಿದೆ ಎಂಬ ಕಾರಣ ಹೊಸದಾಗಿ ಕಂಡುಹಿಡಿಯಬೇಕಿಲ್ಲ. ಕಾರಣ ಈ ಸಮಸ್ಯೆಗೆ ಕಾರಣ ಏನು ಎಂಬುದು ತಿಳಿದಿದೆ. ಪ್ರತಿ ವರ್ಷ ಹೆಚ್ಚು ಮಳೆ ಬಂದಾಗ ಯಾವ ಭಾಗದಲ್ಲಿ ಪ್ರವಾಹ ಆಗುತ್ತೆ ಎಂಬುದು ತಿಳಿಯುತ್ತದೆ.
ಇದಕ್ಕೆ ಮೂಲ ಕಾರಣ, ಬೆಂಗಳೂರಿನಲ್ಲಿ 350ಕ್ಕೂ ಹೆಚ್ಚು ಕೆರೆಗಳಿದ್ದವು. ಈಗ 44 ಕೆರೆ ಉಳಿದಿವೆ. ಕೆರೆಯಿಂದ ಕೆರೆಗೆ ಹರಿಯುವ ನೀರು ಕಾಲುವೆಗೆ ಚರಂಡಿ ನೀರು ಬಿಡುತ್ತಿದ್ದೆವೆ. ಇದರಿಂದ ಕಸ ಕಟ್ಟಿ ಸೇರಿಕೊಂಡಿವೆ. ನಂತರ ಈ ಮಾರ್ಗದಲ್ಲಿ ಕಟ್ಟಡ ನಿರ್ಮಾಣವಾಗಿದೆ. ನಂತರ ಇದನ್ನು ನಾವು ತೆರವುಗೊಳಿಸಲು ಮುಂದಾದೆವು.
ನಮ್ಮ ಸರ್ಕಾರ ಇದ್ದ ಸಮಯದಲ್ಲಿ ನಾವು ಒತ್ತುವರಿ ತೆರವು ಮಾಡಲು ಪ್ರಯತ್ನಿಸಿದ್ದೇವೆ. ಆದರೆ ನಂತರದ ಸರ್ಕಾರಗಳು ಇದನ್ನು ಮುಂದುವರಿಸಬೇಕಿತ್ತು. ನಾವು ಸಚಿವರಾಗಿದ್ದಾಗ ಮಳೆ ಬರುವ ಮುನ್ನ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲು ಸಭೆ ಮಾಡುತ್ತಿದ್ದೆವು. ಅಧಿಕಾರಿಗಳಿಗೆ ಸೂಚನೆ ನೀಡುತ್ತಿದ್ದೆವು. ಈ ಸರ್ಕಾರ ತಹ ಯಾವುದೇ ಪ್ರಯತ್ನ ಮಾಡಿಲ್ಲ. ಕಾಲುವೆಯಲ್ಲಿ ನೀರು ಹರಿದಿದ್ದರೆ ಪ್ರವಾಹ ಆಗುತ್ತಿರಲಿಲ್ಲ. ಈ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ.
ಇನ್ನು ಪರಿಹಾರ ನೀಡುವ ವಿಚಾರದಲ್ಲಿ ಸರ್ಕಾರಕ್ಕೆ ಒಂದು ಪ್ರಶ್ನೆ ಕೇಳುತ್ತೇನೆ. ಸರ್ಕಾರ ಸರ್ವಪಕ್ಷ ಸಭೆ ಕರೆಯುತ್ತಿಲ್ಲ ಯಾಕೆ? ಬೇರೆ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದರೆ ನಾವು ಜವಾಬ್ದಾರಿ ಹಂಚಿಕೊಂಡು ಸಲಹೆ ನೀಡುತ್ತಿದ್ದೆವು.
ಇನ್ನು ಹೊಸದಾಗಿ 110 ಹಳ್ಳಿಗಳನ್ನು ಸೇರಿಸಿಕೊಂಡಿದ್ದರು. ಇಲ್ಲಿಯವರೆಗೂ ಸರಿಯಾದ ಚರಂಡಿ, ರಸ್ತೆ ಇಲ್ಲವಾಗಿದೆ. ಅಲ್ಲಿನ ನೀರು ಹೇಗೆ ಹೋಗಬೇಕು ಎಂಬುದರ ಬಗ್ಗೆ ಸರಿಯಾದ ಯೋಜನೆ ರೂಪಿಸಿಲ್ಲ.
ಸರ್ಕಾರ ಕೂಡಲೇ ಎಲ್ಲೆಲ್ಲಿ ರಾಜಕಾಲುವೆ ಒತ್ತುವರಿಯಾಗಿದೆ. ಅಲ್ಲಿ ತೆರವುಗೊಳಿಸಬೇಕು. ಕಾಲುವೆಗಳ ಪುನರ್ ವಿನ್ಯಾಸ ಆಗಬೇಕು. ನೈಸರ್ಗಿಕ ಕಾಲುವೆ ಈಗ ಮಾಯವಾಗಿದ್ದು, ವೈಜ್ಞಾನಿಕ ರೀತಿಯಲ್ಲಿ ಕಾಲುವೆ ನಿರ್ಮಾಣ. ಕಾಲುವೆಗಳ ವ್ಯವಸ್ಥಿತ ಡೀಸಿಂಟಿಂಗ್ ಆಗಬೇಕು. ವಾರ್ಷಿಕ ನಿರ್ವಹಣೆಗೆ ಸಂಸ್ಥೆ ನಿರ್ಮಾಣ ಮಾಡಬೇಕು. ಬೆಂಗಳೂರಿಗೆ ಬರುತ್ತಿರುವ ಕೆಟ್ಟ ಹೆಸರು ತಪ್ಪಿಸಬೇಕು. ಐಟಿ ಕಂಪನಿಗಳು ಈ ಸಮಸ್ಯೆ ಬಗ್ಗೆ ಎಚ್ಚರಿಕೆ ನೀಡುತ್ತಿದ್ದಾರೆ. ಬೆಂಗಳೂರಿಗೆ ಬರುತ್ತಿದ್ದ ಬಂಡವಾಳ ನಿಂತಿದೆ. ಬ್ರ್ಯಾಂಡ್ ಬೆಂಗಳೂರು ಹಾಳಾಗುತ್ತಿದೆ. ಇದಕ್ಕೆಲ್ಲ ಸರ್ಕಾರ ಹೊಣೆಯಾಗಿದೆ.
*ಮಾಜಿ ಸಚಿವ ಕೆ.ಜೆ ಜಾರ್ಜ್*
ಬೆಂಗಳೂರು ಕೆರೆಗಳ ನಗರ, ಈ ಹಿಂದೆ ಅವುಗಳ ನಡುವೆ ಒಂದಕ್ಕೊಂದು ಸಂಪರ್ಕ ಇತ್ತು. ನಮ್ಮ ಸರ್ಕಾರ 400 ಕಿ.ಮೀ ಸ್ಟ್ರೋಂ ವಾಟರ್ ಡ್ರೈನ್ ನಿರ್ಮಾಣ ಮಾಡಿತ್ತು. ಈ ಸರ್ಕಾರ ಮಾಡಿಲ್ಲ. ಕೇವಲ ಅನುದಾನ ನೀಡಿದ್ದೇವೆ ಎಂದು ಹೇಳುತ್ತಾರೆ. ಆದರೆ ಕೆಲಸ ಮಾಡಿಲ್ಲ. ರಾಜಕಾಲುವೆ ಒತ್ತುವರಿ ತೆರವುಗೊಳಿಸಲು ನಾವು ಸರ್ವ ಪ್ರಯತ್ನ ಮಾಡಿದ್ದೆವು. ನಾವು ಬಡವರ ಮನೆ ಹೊಡೆದು ಹಾಕಿದಾಗ ಪರ್ಯಾಯ ವ್ಯವವಸ್ಥೆಗೆ ಮುಂದಾಗಿದ್ದೆವು. ಆದರೆ ಈ ಸರ್ಕಾರ ಈ ಬಗ್ಗೆ ಆಸಕ್ತಿ ತೋರಲಿಲ್ಲ.
ಬೆಂಗಳೂರಿಗೆ ಉಸ್ತುವಾರಿ ಸಚಿವರು ಇರಬೇಕು. ಹಿಂದೆ ಪ್ರವಾಹ ಎದುರಾದಾಗ ನಮ್ಮ ಸಚಿವರು, ಮೇಯರ್ ಗಳು ಸಹಾಯವಾಣಿ ಮುಂದೆ ನಿಂತಿರುತ್ತಿದ್ದರು. ಎಲ್ಲ ರಾಜುಕಾಲುವೆ ಡೀಸಿಲ್ಟಿಂಗ್ ಮಾಡಬೇಕು. ಇದಕ್ಕೆ ಸುದೀರ್ಘ ಅವಧಿಗೆ ಟೆಂಡರ್ ನೀಡಬೇಕು.
ಸಿದ್ದರಾಮಯ್ಯ ಅವರು ಇದ್ದಾಗ 2300 ಕೋಟಿ ನೀಡಿ ಮೂಲಸೌಕರ್ಯ ವ್ಯವಸ್ಥೆ ಕಲ್ಪಿಸಲಾಗಿದ್ದು. ಕೊಳಚೆ ನೀರು ಹಾಗೂ ಮಳೆ ನೀರು ಪ್ರತ್ಯೇಕವಾಗಿ ಹೋಗಲು ನಮ್ಮ ಸರ್ಕಾರ ಶೇ.75ರಷ್ಟು ಕೆಲಸ ಮಾಡಿತ್ತು. ಕಳೆದ ಮೂರು ವರ್ಷದಲ್ಲಿ ಕೋವಿಡ್ ಹೆಸರಲ್ಲಿ ನಿರ್ಲಕ್ಷ್ಯ ಮಾಡಿದೆ. ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದ್ದು, ನಮ್ಮ ಮೇಲೆ ಆರೋಪ ಮಾಡುತ್ತಿದೆ. ಈ ವಿಚಾರವಾಗಿ ಶ್ವೇತಪತ್ರ ಹೊರಡಿಸಬೇಕು.
ಇಂದು ಬೆಂಗಳೂರಿನ ಘನತೆ ಉಳಿಸಬೇಕು. ಎಲ್ಲರೂ ಸೇರಿ ಇದನ್ನು ಉಳಿಸಬೇಕು.
*ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ:*
ದೇಶದ ಪ್ರಮುಖ ನಗರಗಳ ಪೈಕಿ ಬೆಂಗಳೂರು ಕೂಡ ಒಂದು. ಈ ಹಿಂದೆ ಬೇರೆ ದೇಶದಿಂದ ಬರುವ ನಾಯಕರು ಮೊದಲು ದೆಹಲಿಗೆ ಹೋಗಿ ನಂತರ ಬೇರೆ ನಗರಗಳಿಗೆ ಹೋಗುತ್ತಿದ್ದರು. ಆದರೆ ಕಳೆದ 15-20 ವರ್ಷಗಳಿಂದ ಮೊದಲು ಬೆಂಗಳೂರಿಗೆ ಬಂದು ನಂತರ ಬೇರೆ ನಗರಗಳಿಗೆ ಹೋಗುತ್ತಿದ್ದರು. ಆ ಮಟ್ಟಿಗೆ ಬೆಂಗಳೂರಿನ ಖ್ಯಾತಿ ವಿಶ್ವ ಮಟ್ಟದಲ್ಲಿ ಹಬ್ಬಿತ್ತು. ನಮ್ಮ ನಗರಕ್ಕೆ ಅನೇಕ ಬಿರುದುಗಳಿವೆ. ಸಿಲಿಕಾನ್ ಸಿಟಿ, ಗ್ರೀನ್ ಸಿಟಿ, ಗಾರ್ಡನ್ ಸಿಟಿ, ಎಜುಕೇಶನ್ ಹಬ್ ಎಂದೆಲ್ಲಾ ಕರೆಯಲಾಗುತ್ತಿತ್ತು.
1947ರಿಂದ ಕಾಂಗ್ರೆಸ್ ಸರ್ಕಾರಗಳು ನಿರಂತರ ಪರಿಶ್ರಮದಿಂದ ಬೆಂಗಳೂರನ್ನು ಈ ಮಟ್ಟಕ್ಕೆ ಬೆಳೆಸಿತ್ತು. ಕುಡಿಯುವ ನೀರಿಗಾಗಿ ಹಲವು ಹಂತದ ಕಾವೇರಿ ಯೋಜನೆ, ರಾಜಕಾಲುವೆಗಳ ನಿರ್ಮಾಣ, ಮೇಲ್ಸೇತುವೆಗಳು, ರಿಂಗ್ ರಸ್ತೆಗಳು, ಟೆಂಡರ್ ಶ್ಯೂರ್ ಸೇರಿದಂತೆ ಹತ್ತು ಹಲವು ಯೋಜನೆಗಳ ಮೂಲಕ ಬೆಂಗಳೂರು ನಗರ ನಿರ್ಮಾಣ ಮಾಡಿದ್ದೆವು. ಇದರಿಂದ ಬ್ರ್ಯಾಂಡ್ ಬೆಂಗಳೂರು ಎಂಬ ಹೆಗ್ಗಲಿಕೆ ಬಂದಿತು. ಬಿಜೆಪಿ ಸರ್ಕಾರ ಬಂದ ನಂತರ ಅವೈಜ್ಞಾನಿಕ ರೀತಿಯಲ್ಲಿ ಬೆಂಗಳೂರು ಸುತ್ತಮುತ್ತಲ ಪ್ರದೇಶವನ್ನು ಪಾಲಿಕೆ ವ್ಯಾಪ್ತಿಗೆ ಸೇರಿಸಿದರು. ಯಾವುದೇ ಅಭಿವೃದ್ಧಿ ಮಾಡಲಿಲ್ಲ. ನಮ್ಮ ಸರ್ಕಾರ ಬಂದ ನಂತರ ಅಭಿವೃದ್ಧಿ ಯೋಜನೆ ಕಾಮಗಾರಿ ಮಾಡಿದೆವು. ನಂತರ ಬಂದ ಸರ್ಕಾರ ಏನೂ ಮಾಡಲಿಲ್ಲ.
ಕಾಂಗ್ರೆಸ್ ಸರ್ಕಾರ ಬಿಡುಗಡೆ ಮಾಡಿದ ಅನುದಾನ ಹೊರತಾಗಿ ಬೇರೆ ಯಾವುದೇ ಹಣವನ್ನು ಈ ಸರ್ಕಾರ ಬಿಡುಗಡೆ ಮಾಡಿಲ್ಲ. ಹಿಂದಿನ ಸರ್ಕಾರ ಮಾಡಿದ್ದನ್ನು ಇವರು ಹಾಳು ಮಾಡುತ್ತಿದ್ದಾರೆ. ಈಗ ನಾವು ಮತ್ತೆ ಮರುನಿರ್ಮಾಣ ಮಾಡಬೇಕಿದೆ.
ಪಕ್ಷದವತಿಯಿಂದ ಈಗ ಸಮಿತಿ ಮಾಡಿದ್ದು, ನಾವು ಜನರ ಅಭಿಪ್ರಾಯ ಸಂಗ್ರಹಿಸುತ್ತೇವೆ.
[09/09, 4:29 PM] Kpcc official: *ಜಂಟಿ ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಮಾತುಗಳು:*
*ಬೆಂಗಳೂರು:*
‘ಸೆಪ್ಟೆಂಬರ್ 30 ರಿಂದ ಕರ್ನಾಟಕದಲ್ಲಿ ಭಾರತ ಐಕ್ಯತಾ ಯಾತ್ರೆ ಆರಂಭವಾಗಲಿದೆ. ಈಗಾಗಲೇ ರಾಹುಲ್ ಗಾಂಧಿ ಅವರು ಕನ್ಯಾಕುಮಾರಿಯಿಂದ ಪಾದಯಾತ್ರೆ ಆರಂಭಿಸಿದ್ದಾರೆ.
ರಾಜ್ಯ ಯಾತ್ರೆ ಸಂದರ್ಭದಲ್ಲಿ ದಸರಾ ವೇಳೆ 2 ದಿನ ವಿಶ್ರಾಂತಿ ನೀಡಲಾಗುವುದು. ರಾಜ್ಯದ ಯಾತ್ರೆಯಲ್ಲಿ ಆಸಕ್ತಿ ಇರುವವರಿಗೆ ನಡೆಯಲು ಅವಕಾಶ ಕಲ್ಪಿಸಿಕೊಡಲಿದ್ದೇವೆ. ಕೆಲವರು 1 ದಿನ ನಡೆದರೆ, ಮತ್ತೆ ಕೆಲವರು 21 ದಿನ ನಡೆಯಬಹುದು. ಹೀಗಾಗಿ ನಾವು ಪಕ್ಷಾತೀತವಾಗಿ ಎಲ್ಲರಿಗೂ ಮುಕ್ತ ಅವಕಾಶ ಮಾಡಿಕೊಡಲು ಆನ್ ಲೈನ್ ನೋಂದಣಿ ಆರಂಭಿಸುತ್ತಿದ್ದೇವೆ. ಈ ಯಾತ್ರಿಗಳಿಗೆ ವಾಸ್ತವ್ಯ, ಆಹಾರ ಸೌಕರ್ಯ ಕಲ್ಪಿಸಲು ಸಿದ್ಧತೆ ಮಾಡಿಕೊಳ್ಳ ಬೇಕಾಗುತ್ತದೆ. ಹೀಗಾಗಿ ನೋಂದಣಿ ಪ್ರಕ್ರಿಯೆ ಆರಂಭಿಸಿದ್ದೇವೆ. ಪ್ರದೇಶ ಯಾತ್ರಿಗಳ ಜತೆಗೆ ಸ್ವಯಂ ಇಚ್ಛೆ ಯಾತ್ರಿಗಳು ಹಾಗೂ ಡಿಜಿಟಲ್ ಯಾತ್ರಿಗಳಿಗೆ ಅವಕಾಶ ಮಾಡಿಕೊಡಲು ನಿರ್ಧರಿಸಿದ್ದೇವೆ. ಹೀಗಾಗಿ ಇಂದು ಈ ಯಾತ್ರೆಗೆ ಸಂಬಂಧಿಸಿದ ಜಾಲತಾಣ ಉದ್ಘಾಟಿಸುತ್ತಿದ್ದೇವೆ.
ರಾಜ್ಯದಲ್ಲಿ ಎಲ್ಲ ವರ್ಗಗಳ ಜನರ ಮಧ್ಯೆ ಸಾಮರಸ್ಯ ಕಲ್ಪಿಸಿ ನಮ್ಮ ನಾಡನ್ನು ಸರ್ವಜನಾಂಗದ ಶಾಂತಿ ತೋಟವಾಗಿ ಮಾಡಿ ದೇಶದಲ್ಲಿ ಶಾಂತಿ ಕಾಪಾಡುವುದು, ರಾಜ್ಯದಲ್ಲಿ ನಿರುದ್ಯೋಗ ಸಮಸ್ಯೆ ನಿವಾರಿಸಿ ಯುವಕರಿಗೆ ಉದ್ಯೋಗ ಕಲ್ಪಿಸಲು, ಅಗತ್ಯ ವಸ್ತುಗಳ ಬೆಲೆ ಏರಿಕೆ ಮತ್ತು ಆದಾಯ ಕುಸಿತದ ವಿರುದ್ಧ, ರಾಜ್ಯವನ್ನು ಭ್ರಷ್ಟಾಚಾರದಿಂದ ಮುಕ್ತಗೊಳಿಸಲು ಉತ್ತಮ ಆಡಳಿತಕ್ಕೆ, ದೇಶ ಹಾಗೂ ರಾಜ್ಯದ ರೈತರು, ಕಾರ್ಮಿಕರ ಬದುಕು ಸುಧಾರಿಸುವ ನಿಟ್ಟಿನಲ್ಲಿ ಈ ಯಾತ್ರೆ ಮಾಡುತ್ತಿದ್ದೇವೆ.
ಕರ್ನಾಟಕದಲ್ಲಿ ನಡೆಯಲಿರುವ ಭಾರತ ಐಕ್ಯತಾ ಯಾತ್ರೆ ಸಮಯದಲ್ಲಿ ಮಧ್ಯಾಹ್ನ ಬಿಡುವಿನ ವೇಳೆ ನಿರುದ್ಯೋಗಿ ಯುವಕರಿಗೆ ರಾಹುಲ್ ಗಾಂಧಿ ಅವರ ಜತೆ ಸಂವಾದ ಮಾಡಲು ಅವಕಾಶ ಮಾಡಿಕೊಡಲಾಗುವುದು. ಇವರ ಜತೆಗೆ ಮಹಿಳೆಯರು, ಕಾರ್ಮಿಕರು, ಸಂಘ ಸಂಸ್ಥೆಗಳು, ಎರಡು ಕಡೆ ರೈತರು, ಪರಿಶಿಷ್ಟರು, ನಾಗರೀಕ ಸಮಾಜದವರು, ಅಲ್ಪಸಂಖ್ಯಾತರು, ಶ್ರಮಿಕರಿಗೂ ಸಂವಾದಕ್ಕೆ ಒಂದೊಂದು ದಿನ ಅವಕಾಶ ಕಲ್ಪಿಸುತ್ತೇವೆ.
ರಾಹುಲ್ ಗಾಂಧಿ ಅವರು ಮೊದಲ ಬಾರಿ ರಾಜ್ಯಕ್ಕೆ ಬಂದಾಗ ಬಿಳಿಗಿರಿರಂಗನ ಬೆಟ್ಟದಲ್ಲಿ ಬುಡಕಟ್ಟು ಜನರನ್ನು ಭೇಟಿ ಮಾಡಿದ್ದರು. ಅಲ್ಲಿನ ಜನರ ಸಮಸ್ಯೆ ತಿಳಿದು ಫಾರೆಸ್ಟ್ ಸೆಟ್ಲಮೆಂಟ್ ಕಾಯ್ದೆ ತಂದರು. ಹೀಗಾಗಿ 21 ದಿನಗಳ ಕಾಲ ಮಧ್ಯಾಹ್ನ ಬಿಡುವಿನ ವೇಳೆಯಲ್ಲಿ ಒಂದೊಂದು ವರ್ಗದವರಿಗೆ ಭೇಟಿ ಅವಕಾಶ ಮಾಡಿಕೊಡುತ್ತೇವೆ.
ಸ್ವಾತಂತ್ರ್ಯ ನಡಿಗೆ ಸಮಯದಲ್ಲಿ 1 ಲಕ್ಷಕ್ಕೂ ಹೆಚ್ಚು ಜನ ನೋಂದಣಿ ಮಾಡಿಕೊಂಡಿದ್ದು, ಅದರಲ್ಲಿ 35 ವರ್ಷಕ್ಕಿಂತ ಕಡಿಮೆ ವಯೋಮಾನದವರು 76 ಸಾವಿರ ಜನ ಇದ್ದರು. ಹೀಗಾಗಿ ಯುವಕರಿಗೆ ಭಾರತ ಐಕ್ಯತಾ ಯಾತ್ರೆಯಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಡಲು ನೋಂದಣಿ ಆರಂಭಿಸಿದ್ದೇವೆ. ನೀವು ಕೂಡ ನೋಂದಣಿ ಮಾಡಿಕೊಂಡು ಪಾದಯಾತ್ರೆಯಲ್ಲಿ ಭಾಗವಹಿಸಿ.
*ಬೆಂಗಳೂರಿನ ಜನರ ಅಭಿಪ್ರಾಯ ಸಂಗ್ರಹಿಸಲು ವಿಶೇಷ ಸಮಿತಿ ರಚನೆ:*
ರಾಮಲಿಂಗಾರೆಡ್ಡಿ ಅವರ ನೇತೃತ್ವದಲ್ಲಿ ಕೃಷ್ಣ ಭೈರೇಗೌಡ, ಪದ್ಮಾವತಿ ಅವರು ಸೇರಿದಂತೆ ನಗರದ ಪ್ರಮುಖ ನಾಯಕರನ್ನು ಒಳಗೊಂಡ ಸಮಿತಿ ರಚಿಸಲಾಗಿದ್ದು, ಈ ಸಮಿತಿ 15 ದಿನಗಳ ಒಳಗೆ ಬೆಂಗಳೂರು ನಾಗರೀಕರಿಂದ ಆನ್ ಲೈನ್ ಮೂಲಕ ಅಭಿಪ್ರಾಯ ಸಂಗ್ರಹಿಸಲಿದೆ. ಬೆಂಗಳೂರಿನ ಜನರ ಧ್ವನಿ ಕಾಂಗ್ರೆಸ್ ಧ್ವನಿಯಾಗಬೇಕು ಎಂದು ಈ ಕ್ರಮ ಕೈಗೊಳ್ಳಲಾಗಿದೆ.
ಇನ್ನು ಪ್ರವಾಹ ಪೀಡಿತ ಪ್ರದೇಶಗಳ ಜನರಿಗೆ ಸೂಕ್ತ ಪರಿಹಾರ ಸಿಗುವಂತೆ ಮಾಡಲು ಸರ್ವಪಕ್ಷ ಪರಿಹಾರ ಸಮಿತಿ ರಚನೆಯಾಗಬೇಕು. ಇದರಲ್ಲಿ ನಾಗರೀಕ ಸಮಾಜದ ಪ್ರತಿನಿಧಿಗಳು ಇರುತ್ತಾರೆ.
ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಮನೆ ಹಾನಿಯಾಗಿದ್ದರೆ ಅವರಿಗೆ 5 ಲಕ್ಷದಿಂದ 125 ಲಕ್ಷದವರೆಗೂ ಪರಿಹಾರ ನೀಡಬೇಕು. ಪ್ರವಾಹದಿಂದ ಜನ ಪೀಠೋಪಕರಣದಿಂದ ಹಿಡಿದು ಬಟ್ಟೆ, ವಾಹನ ಎಲ್ಲವನ್ನೂ ಕಳೆದುಕೊಂಡಿದ್ದು, ಇವರಿಗೆ ಸೂಕ್ತ ಪರಿಹಾರ ನೀಡಬೇಕು.
ಸರ್ಕಾರ ಕೂಡಲೇ ಆರೋಗ್ಯ ಶಿಬಿರ ಆಯೋಜಿಸಬೇಕು. ಜತೆಗೆ ಸಹಾಯವಾಣಿ ವ್ಯವಸ್ಥೆ ಕಲ್ಪಿಸಬೇಕು. ಸರ್ಕಾರ ಕೂಡಲೇ ಈ ಆಗ್ರಹಗಳನ್ನು ಪರಿಗಣಿಸಬೇಕು.’
*ಪ್ರಶ್ನೋತ್ತರ:*
ಮಳೆ ಅನಾಹುತದ ಹಿಂದೆ ಮಾಧ್ಯಮಗಳು ಹಾಗೂ ಕಾಂಗ್ರೆಸ್ ಪಿತೂರಿ ಇದೆ ಎಂಬ ಸಂಸದ ತೇಜಸ್ವಿ ಸೂರ್ಯ ಅವರ ಹೇಳಿಕೆ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ನೀವು ನಿಮ್ಮ ಕ್ಯಾಮೇರಾಗಳಲ್ಲಿ ಏನೆಲ್ಲಾ ತೋರಿಸಿದ್ದೀರೋ ಅವುಗಳೇ ಸತ್ಯ. ಬ್ರ್ಯಾಂಡ್ ಬೆಂಗಳೂರು ಎಂಬುದನ್ನು ನಾನು ಮಾಡಿಲ್ಲ. ಈಗ ಬಿಜೆಪಿಯಲ್ಲಿರುವ ಎಸ್.ಎಂ. ಕೃಷ್ಣ, ಮೋಹನ್ ದಾಸ್ ಪೈ, ಕಿರಣ್ ಮಜೂಮ್ದಾರ್ ಹಾಗೂ ದೇಶಕ್ಕೆ ಶೇ. 39 ರಷ್ಟು ಐಟಿ ತೆರಿಗೆ ಪಾವತಿಸಿರುತ್ತಿರುವ ಉದ್ಯಮಿಗಳು ಮಾಡಿದ್ದಾರೆ. ಅಟಲ್ ಬಿಹಾರಿ ವಾಜಪೇಯಿ ಅವರು ಬೆಂಗಳೂರಿಗೆ ಬಂದಾಗ ವಿಶ್ವದ ನಾಯಕರು ಈಗ ಮೊದಲು ಬೆಂಗಳೂರಿಗೆ ಬಂದು ನಂತರ ಬೇರೆ ನಗರಗಳಿಗೆ ಹೋಗುತ್ತಾರೆ ಎಂದು ಹೊಗಳಿದ್ದರು. ಇದನ್ನು ನಾವು ಹೇಳಿಲ್ಲ, ಅಟಲ್ ಬಿಹಾರಿ ವಾಜಪೇಯಿ ಅವರೇ ಹೇಳಿದ್ದಾರೆ. ಈಗ ಆ ಘನತೆ ಕುಸಿಯುತ್ತಿದೆ. ನಾವು ಬೆಂಗಳೂರಿನ ಘನತೆ ಹೆಚ್ಚಿಸುವ ಪರವಾಗಿದ್ದೇವೆಯೇ ಹೊರತು, ಅದನ್ನು ಹಾಳುಮಾಡಲು ಅಲ್ಲ. ಈಗ ಸದ್ಯಕ್ಕೆ ಬೆಂಗಳೂರಿನ ಎಲ್ಲ ವರ್ಗದ ಜನರ ಧ್ವನಿ ಆಲಿಸಲು ಸಮಿತಿ ರಚಿಸಿದ್ದು, ನಾವು ನಮ್ಮ ನಗರವನ್ನು ರಕ್ಷಿಸುವ ಬಗ್ಗೆ ಗಮನ ಹರಿಸುತ್ತಿದ್ದೇವೆ’ ಎಂದು ಹೇಳಿದರು.
ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಪ್ರವಾಹ ಸಮಯದಲ್ಲಿ ಬಂದು ಸಂಚಾರಿ ದಟ್ಟಣೆ ವಿಚಾರವಾಗಿ ಮಾತನಾಡಿರುವ ಬಗ್ಗೆ ಕೇಳಿದಾಗ, ‘ಪ್ರಧಾನ ಮಂತ್ರಿಗಳು ಬಂದು ಉಪನಗರ ರೈಲು ವಿಚಾರವಾಗಿ ಗಡವು ನೀಡಿ ಹೋದರು. ಇದಕ್ಕಾಗಿ ಅವರು ಬಿಡುಗಡೆ ಮಾಡಿರುವ ಅನುದಾನ ಎಷ್ಟು? ಈ ಯೋಜನೆ ಕಾಮಗಾರಿ ಆರಂಭವಾಗಿದೆಯೇ? ಖಾಲಿ ಪಾತ್ರೆಗಳು ಹೆಚ್ಚು ಶಬ್ಧ ಮಾಡುವಂತೆ ಅವರು ಕೇವಲ ಘೋಷಣೆಗಳನ್ನು ಮಾತ್ರ ಮಾಡುತ್ತಾರೆ’ ಎಂದು ಹರಿಹಾಯ್ದರು.
[09/09, 5:36 PM] Kpcc official: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದ ಸದಸ್ಯ ಡಿ.ಕೆ. ಸುರೇಶ್ ಅವರು ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಅವರನ್ನು ಬೆಂಗಳೂರಿನಲ್ಲಿ ಶುಕ್ರವಾರ ಭೇಟಿ ಮಾಡಿ, ಇತ್ತೀಚಿನ ಮಳೆಯಿಂದ ಪ್ರವಾಹ ಪರಿಸ್ಥಿತಿ ಏರ್ಪಟ್ಟು, ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡು, ಜನರ ತೀವ್ರ ಸಂಕಷ್ಟಕ್ಕೆ ಸಾಕ್ಷಿಯಾದ ರಾಮನಗರ, ಚನ್ನಪಟ್ಟಣ, ಮಂಡ್ಯ ಬಳಿಯ ಬೆಂಗಳೂರು ಮೈಸೂರು ದಶಪಥ ಹೆದ್ದಾರಿಯ ಅವೈಜ್ಞಾನಿಕ ಕಾಮಗಾರಿಯನ್ನು ಸರಿಪಡಿಸುವಂತೆ, ಕನಕಪುರ ಸಮೀಪ ಅರ್ಕಾವತಿ ನದಿಗೆ ಪರ್ಯಾಯ ಸೇತುವೆ ನಿರ್ಮಾಣ ಹಾಗೂ ಕನಕಪುರ ನಗರ ಸಮಗ್ರ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸಿದರು. ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ್ ಉಪಸ್ಥಿತರಿದ್ದರು.
Post a Comment