ಕಾಂಗ್ರೆಸ್, ಇಂದು ವಿಶೇಷ

[16/09, 1:27 PM] Kpcc official: ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿ ಶುಕ್ರವಾರ ನಡೆದ ಕೆಪಿಸಿಸಿ ಪದಾಧಿಕಾರಿಗಳು ಹಾಗೂ ಸಂಯೋಜಕರ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಮಾಜಿ ಸಿಎಂ ವೀರಪ್ಪ ಮೊಯ್ಲಿ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ ಕೆ ಹರಿಪ್ರಸಾದ್, ಎಐಸಿಸಿ ಕಾರ್ಯದರ್ಶಿ ಅಭಿಷೇಕ್ ದತ್, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಮ್ ಅಹ್ಮದ್, ಮಾಜಿ ಸಚಿವರಾದ ರಮನಾಥ್ ರೈ, ಎಚ್ ಆಂಜನೇಯ ಮತ್ತಿತರರು ಭಾಗವಹಿಸಿದ್ದರು.
[16/09, 1:48 PM] Kpcc official: *ಡಿ.ಕೆ. ಶಿವಕುಮಾರ್ ಅವರ ಮಾಧ್ಯಮ ಪ್ರತಿಕ್ರಿಯೆ*

ಜಾರಿ ನಿರ್ದೇಶನಾಲಯ ಹಾಗೂ ಸಿಬಿಐ ಅಧಿಕಾರಿಗಳು ದಿನನಿತ್ಯ ನನಗೆ ಹಾಗೂ ನನ್ನ ಸ್ನೇಹಿತರನ್ನು ವಿಚಾರಣೆಗೆ ಕರೆಯುತ್ತಿದ್ದಾರೆ. ಸಿಬಿಐನವರು ನನ್ನ ಮೇಲೆ ಎಫ್ಐಆರ್ ದಾಖಲಿಸಿದ್ದಾರೆ. ಆದರೆ ಇಡಿ ಅವರು ಏನು ಎಫ್ಐಆರ್ ದಾಖಲಿಸಿದ್ದಾರೆ ಎಂದು ಗೊತ್ತಿಲ್ಲ.

ನಿನ್ನೆಯೂ ಕೆಲವರನ್ನು ಕರೆದು ನನ್ನ ಬಗ್ಗೆ ವಿಚಾರಣೆ ಮಾಡಿದ್ದಾರೆ. ಸೋಮವಾರ ಬರುವಂತೆ ಇಡಿಯವರು ನನ್ನನ್ನು ವಿಚಾರಣೆಗೆ ಕರೆದಿದ್ದಾರೆ. ಭಾರತ ಐಕ್ಯತಾ ಯಾತ್ರೆಗೆ ಪೂರ್ವಸಿದ್ಧತೆ ಹಾಗೂ ಅಧಿವೇಶನ ನಡೆಯುತ್ತಿದ್ದು, ನನಗೆ ನನ್ನದೇ ಆದ ಜವಾಬ್ದಾರಿಗಳಿವೆ. ಹೀಗಾಗಿ ನಮ್ಮ ವಕೀಲರ ಜತೆ ಮಾತನಾಡುತ್ತೇನೆ. ಸಿಬಿಐನಲ್ಲಿ ಅಕ್ರಮ ಆಸ್ತಿ ಸಂಪಾದನೆ ಪ್ರಕರಣದಲ್ಲಿ ಎಫ್ಐಆರ್ ದಾಖಲಿಸಿದ್ದು, ಇಡಿಯವರು ಯಾವ ಪ್ರಕರಣ ದಾಖಲಿಸಿದ್ದಾರೋ ಗೊತ್ತಿಲ್ಲ. ಇಡೀ ರಾಜ್ಯದಲ್ಲಿ ಕೇವಲ ನನ್ನ ವಿರುದ್ಧದ ಪ್ರಕರಣದ ವಿಚಾರಣೆಯನ್ನು ಮಾತ್ರ ಯಡಿಯೂರಪ್ಪನವರ ಸರ್ಕಾರ ಸಿಬಿಐಗೆ ವಹಿಸಿದೆ. ಅಡ್ವೊಕೇಟ್ ಜನರಲ್ ಅವರು ಈ ಪ್ರಕರಣ ಸಿಬಿಐಗೆ ಸೂಕ್ತವಲ್ಲ ಎಂದು ಹೇಳಿದ್ದರೂ ಸಿಬಿಐಗೆ ನೀಡಿದ್ದಾರೆ. ಈ ಪ್ರಕರಣದ ವಿಚಾರವಾಗಿ ನಾನು ಹೈಕೋರ್ಟ್ ಮೆಟ್ಟಿಲೇರಿದ್ದೇನೆ.

ನಾನು ಅವರ ತನಿಖೆಗೆ ಎಲ್ಲ ಸಹಕಾರ ನೀಡುತ್ತೇನೆ. ನನ್ನ ಜತೆ ವ್ಯಾಪಾರ, ವ್ಯವಹಾರ ಮಾಡಿದವರಿಗೆ ಕಿರುಕುಳ ನೀಡಲಾಗುತ್ತಿದ್ದು, ನಮ್ಮ ಕಾರ್ಯಕರ್ತರು ವಿಚಲಿತರಾಗಿದ್ದಾರೆ. ನಾನು ಕಾನೂನು ಬಾಹೀರವಾಗಿ ಯಾವುದೇ ಅಪರಾಧ ಮಾಡಿಲ್ಲ. ಕಾನೂನು ಇದೆ ನೋಡೋಣ ಏನಾಗುತ್ತದೆ ಎಂದು.

ಕಳೆದ ಒಂದು ವಾರದಿಂದ ನಾನು ಯಾತ್ರೆಯ ಎಲ್ಲ ಜಿಲ್ಲೆಗಳ ಪ್ರವಾಸ ಮಾಡುತ್ತಿದ್ದು, ಪಕ್ಷದ ಸಭೆ ಕಾರಣ ಬೆಂಗಳೂರಿಗೆ ಬಂದಿದ್ದೇನೆ. ನಾಳೆ ಮತ್ತೆ ಮಂಡ್ಯ ಹಾಗೂ ಮೈಸೂರು ಪ್ರವಾಸ ಮಾಡಲಿದ್ದೇನೆ.
[16/09, 2:21 PM] Kpcc official: *ಕೆಪಿಸಿಸಿ ಸಂವಹನ ವಿಭಾಗದ ಮುಖ್ಯಸ್ಥ ಪ್ರಿಯಾಂಕ್ ಖರ್ಗೆ ಅವರ ಪತ್ರಿಕಾಗೋಷ್ಠಿ ಮುಖ್ಯಾಂಶಗಳು*

ಮತಾಂತರ ನಿಷೇಧ ವಿಧೇಯಕ ಸ್ವಾತಂತ್ರ್ಯ ನೀಡುವ ವಿಧೇಯಕವಲ್ಲ, ಬದಲಿಗೆ ಧಾರ್ಮಿಕ ಸ್ವಾತ್ತಂತ್ರ್ಯದ ಹಕ್ಕುಗಳನ್ನು ಕಸಿಯುವ ವಿಧೇಯಕವಾಗಿದೆ. ಈ ಮಸೂದೆ ಅಸಂವಿಧಾನಿಕವಾಗಿದ್ದು, ಸಂವಿಧಾನದ ಪರಿಚ್ಛೇದ 25ರಿಂದ 28ರವರೆಗೂ ಧರ್ಮದ ಆಚರಣೆ ಮತ್ತು ಪ್ರಚಾರದ ಹಕ್ಕನ್ನು ಕಸಿಯುತ್ತದೆ.

ಸರ್ಕಾರದ ವಿಧೇಯಕದ ಉದ್ದೇಶ ಹಾಗೂ ಕಾರಣಗಳಲ್ಲಿ ಉಲ್ಲೇಖಿಸಿರುವಂತೆ, ಇತ್ತೀಚಿನ ವರ್ಷಗಳಲ್ಲಿ ರಾಜ್ಯದಾಲ್ಲಿ ಆಮಿಷ, ಒತ್ತಾಯ, ವಂಚನೆ, ಸಾಧನಗಳ ಮೂಲಕ ಮಾಡಲಾದ ಮತಾಂತರಗಳು ಹೆಚ್ಚಾಗಿರುವುದನ್ನು ಗಮನಿಸಲಾಗಿದ್ದು, ಇದು ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆ ಮಾಡಿವೆ. ಇವುಗಳನ್ನು ತಡೆಗಟ್ಟಲು ಹಾಗೂ ಇಂತಹ ಕೃತ್ಯಗಳನ್ನು ಮಾಡುವವರಿಗೆ ಶಿಕ್ಷಿಸಲು ರಾಜ್ಯದಲ್ಲಿ ಯಾವುದೇ ಶಾಸನಗಳಿಲ್ಲ. ಹೀಗಾಗಿ ಈ ಕಾಯ್ದೆ ತರಲಾಗುತ್ತಿದೆ ಎಂದು ವಿವರಿಸಿದ್ದಾರೆ.

ಇಲ್ಲಿ ಸರ್ಕಾರ ಬಲವಂತದ ಮತಾಂತರದ ಪ್ರಕರಣ ಹೆಚ್ಚಾಗುತ್ತಿದೆ ಎಂದು ತಿಳಿಸಿದ್ದು, ಸರ್ಕಾರದ ಬಳಿ ಈ ಬಲವಂತದ ಮತಾಂತರದ ಬಗ್ಗೆ ಅಂಕಿಅಂಶಗಳಿವೆಯೇ? ಕಳೆದ 3 ವರ್ಷಗಳಲ್ಲಿ ಎಷ್ಟು ಮತಾಂತರವಾಗಿದೆ ಎಂದು ಹೇಳಿದೆಯೇ? ಸದನದಲ್ಲಿ ಚರ್ಚೆ ಮಾಡುವಾಗ ಬಿಜೆಪಿ ಶಾಸಕರು ಹೊಸದುರ್ಗದಲ್ಲಿ ತಮ್ಮ ತಾಯಿಗೆ ಒತ್ತಾಯಪೂರ್ವಕವಾಗಿ ಮತಾತಂತರ ಮಾಡಲಾಗಿದೆ ಎಂದು ಹೇಳಿಕೆ ನೀಡಿದ್ದರು. ತಹಶೀಲ್ದಾರ್ ಅವರು ತನಿಖೆ ವರದಿ ನೀಡಿದಾಗ ಅದರಲ್ಲಿ ತಾಲೂಕಿನಲ್ಲಿ ಎಲ್ಲಿಯೂ ಬಲವಂತದ ಮತಾಂತರ ಆಗಿಲ್ಲ ಎಂದು ತಿಳಿಸಲಾಗಿತ್ತು.

ಆದರೆ ಸರ್ಕಾರ ಆ ತಹಶೀಲ್ದಾರರಿಗೆ ವರ್ಗಾವಣೆ ಮಾಡಿತು. 6 ತಿಂಗಳ ಹಿಂದೆ ಗೋವಿಂದ ಕಾರಜೋಳ ಅವರು ಸಮಾಜ ಕಲ್ಯಾಣ ಸಚಿವರಾಗಿದ್ದಾಗ ಅವರೇ ಪರಿಷತ್ ನಲ್ಲಿ ಮತಾಂತರಗೊಂಡವರ ಮಾಹಿತಿ ಇಲ್ಲವೆಂದು ಹೇಳಿಕೆ ನೀಡುತ್ತಾರೆ. ರಾಜ್ಯದಲ್ಲಿ ಬಲವಂತದ ಮತಾಂತರ ಹೆಚ್ಚಾಗಿದೆ ಎಂದು ಹೇಳುವ ಸರ್ಕಾರದ ಸಚಿವರೆ ಈ ಬಗ್ಗೆ ಅಂಕಿ ಅಂಶವಿಲ್ಲ ಎಂದು ಹೇಳಿದ್ದಾರೆ.

ಇನ್ನು ಈ ವಿಧೇಯಕದಲ್ಲಿ ಸೆಕ್ಷನ್ 3ರಲ್ಲಿ ತಪ್ಪು ನಿರೂಪಣೆ, ಬಲವಂತ, ವಂಚನೆ, ಮದುವೆ ವಾಗ್ದಾನದಿಂದ ಮಾಡುವ ಮತಾಂತರ ನಿಷೇಧ ಎಂದು ಹೇಳಲಾಗಿದೆ. ಆದರೆ ಕಾನೂನು ಸಚಿವರು ತಮ್ಮ ಹೇಳಿಕೆಯಲ್ಲಿ ಈ ಕಾಯ್ದೆ ಗುಜರಾತಿನಲ್ಲಿ ಜಾರಿಯಲ್ಲಿದ್ದು, ಅದನ್ನೇ ಇಲ್ಲಿ ಹಾಕಿದ್ದೇವೆ ಎಂದು ಹೇಳಿದ್ದಾರೆ. ಗುಜರಾತಿನಲ್ಲಿ ಇದೇ ಪ್ಯಾರ ಹಾಕಲಾಗಿದ್ದು, 2021ರಲ್ಲಿ ಇದಕ್ಕೆ ತಡೆಯಾಜ್ಞೆ ನೀಡಲಾಗಿದೆ. ಆಮೀಷ ಎಂದು ಹೇಳಲಾಗಿರುವ ಅಂಶಗಳು ಸರಿಯಾಗಿಲ್ಲ. ಇದು ಅಂತರ್ ಜಾತಿ ವಿವಾಹಕ್ಕೆ ಅಡ್ಡಿಯಾಗಲಿದೆ ಎಂದು ತಡೆಯಾಜ್ಞೆ ನೀಡಿದೆ. ಇದು ಸರ್ಕಾರದ ಗಮನಕ್ಕೆ ಬಂದಿಲ್ಲವೇ?

ಸೆಕ್ಷನ್ 4ನಲ್ಲಿ ಮತಾಂತರಗೊಂಡವರ ಬಗ್ಗೆ ರಕ್ತ ಸಂಬಂಧಿಗಳ ಮಾತ್ರವಲ್ಲ, ಮೂರನೇ ವ್ಯಕ್ತಿ ಕೂಡ ದೂರು ನೀಡಿದರೆ ಆ ದೂರು ದಾಖಲಾಗುತ್ತದೆ ಎಂದು ತಿಳಿಸಲಾಗಿದೆ. ಇದು ನೈತಿಕ ಪೊಲೀಸ್ ಗಿರಿಯಾಗಿದ್ದು, ಸಂವಿಧಾನ ವಿರುದ್ಧವಾಗಿದೆ. ಇದಕ್ಕೆ ಹೆಚ್ಚುವರಿಯಾಗಿ ದೂರು ಯಾರೇ ಕೊಟ್ಟರೂ ಈ ಪ್ರಕರಣವನ್ನು ಮತಾಂತರಗೊಂಡವರು ಸಾಬೀತುಪಡಿಸಬೇಕಾಗಿದೆ. ಇದು ಎಂತಹ ನ್ಯಾಯ ಹಾಗೂ ಕಾನೂನು?

ಯಾರಾದರೂ ಸ್ವಇಚ್ಛೆಯಿಂದ ಬೇರೆ ಧರ್ಮ ಪಾಲಿಸಬೇಕಾದರೆ, ಜಿಲ್ಲಾಧಿಕಾರಿಗಳು ಹಾಗೂ ಸಮಾಜ ಕಲ್ಯಾಣ ಇಲಾಖೆಗೆ ನೊಟೀಸ್ ನೀಡಿ ಅನುಮತಿ ಪಡೆಯಬೇಕೆಂದು ತಿಳಿಸಲಾಗಿದೆ. ಸಂವಿಧಾನದಲ್ಲಿ ನೀಡಲಾಗಿರುವ ಹಕ್ಕನ್ನು ಬಳಸಿಕೊಳ್ಳಲು ನಾವು ಸಚಿವಾಲಯ ಹಾಗೂ ಜಿಲ್ಲಾಧಿಕಾರಿಗಳ ಅನುಮತಿ ಯಾಕೆ ಪಡೆಯಬೇಕು? ಹಾಗಿದ್ದರೆ, ಅಂಬೇಡ್ಕರ್ ಅವರು ಈ ಹಿಂದೆ ಹಂದೂ ಧರ್ಮದಿಂದ ಬೌದ್ಧ ಧರ್ಮಕ್ಕೆ ಮತಾಂತರವಾಗಿದ್ದು, ಅವರು ಈಗ ಮತಾಂತರ ಆಗಬೇಕಿದ್ದರೆ ವರ ಅನುಮತಿ ಪಡೆಯಬೇಕಿತ್ತೇ? ಅಂಬೇಡ್ಕರ್ ಅವರು ಯಾಕೆ ಆ ನಿರ್ಧಾರ ತೆಗೆದುಕೊಂಡರು? ಯಾವ ಧರ್ಮದಲ್ಲಿ ನಮ್ಮ ಸಮಾಜದವರಿಗೆ ಗೌರವ, ಘನತೆ, ಸಮಾನತೆ ಇಲ್ಲವೋ, ಪ್ರಾಣಿಗಳಿಗಿಂತ ಮನುಷ್ಯರನ್ನು ಕೀಳಾಗಿ ನೋಡುತ್ತಾರೆ ಎಂದು ಬೌದ್ಧ ಧರ್ಮ ಸ್ವೀಕರಿಸಿದರು.

ಅಂಬೇಡ್ಕರ್ ಅವರು 1935ರಲ್ಲಿ ಧರ್ಮಗಳು ಮಾನವನಿಗಾಗಿ ಇರಬೇಕೇ ಹೊರತು ಧರ್ಮಕ್ಕಾಗಿ ಮಾನವ ಇರಬಾರದು ಎಂದು ಹೇಳುತ್ತಾರೆ. ನೀವು ಮನುಷ್ಯರಾಗಿ ಗೌರವ ಪಡೆಯಬೇಕಾದರೆ, ಶಕ್ತಿಶಾಲಿಯಾಗಿ ಸಂಘಟಿತರಾಗಬೇಕಾದರೆ, ಸಮಾನತೆ ಪಡೆಯಬೇಕಾದರೆ ಮತಾಂತರವಾಗಬೇಕು. ನಿಮ್ಮನ್ನು ಮನುಷ್ಯರಂತೆ ಕಾಣದ, ಸಮಾನತೆ, ಗೌರವ ನೀಡಿದ ಧರ್ಮದಲ್ಲಿ ನೀವು ಯಾಕೆ ಇರಬೇಕು ಎಂದು ಕೇಳುತ್ತಾರೆ.

2021ರಲ್ಲಿ ತುಂಮಕೂರು ಸಂಸದರಿಗೆ ಹಳ್ಳಿಗೆ ಪ್ರವೇಶ ನೀಡಿಲ್ಲ. ಇದು ಧರ್ಮವೇ? ಹೀಗಿರುವಾಗ ಈ ಮಸೂದೆ ಯಾಕೆ ತಂದಿದ್ದಾರೆ? ಈ ಸರ್ಕಾರ ಬಸವಣ್ಣನವರ ಕೆಲಸವನ್ನು ತಪ್ಪು ಎಂದು ಹೇಳಲು ಹೊರಟಿದೆಯೇ? ಈ ಬಗ್ಗೆ ಸರ್ಕಾರ ಸ್ಪಷ್ಟನೆ ನೀಡಬೇಕು. ಇದು ಸರ್ಕಾರ ಪ್ರತಿಯೊಬ್ಬರ ಜೀವನದಲ್ಲಿ ಹಸ್ತಕ್ಷೇಪ ಮಾಡುವ ಮಸೂದೆ.

ಈ ಮಸೂದೆ ಬಗ್ಗೆ ಸುಪ್ರೀಂ ಕೋರ್ಟ್ ನ್ಯಾಯಾಧೀಶರಾದ ಎ.ಪಿ ಶಾ ಅವರು, ‘ಈ ಕಾಯ್ದೆ ಸಂವಿಧಾನಿಕ ಹಕ್ಕನ್ನು ಕಿತ್ತುಕೊಳ್ಳುವ ಹುನ್ನಾರವಿದೆ. ಇದರ ದುರ್ಬಳಕೆಯಿಂದ ಜನರನ್ನು ಶೋಷಣೆ ಮಾಡುವ ಪ್ರಯತ್ನವಾಗಿದೆ’ ಎಂದು ತಿಳಿಸಿದ್ದಾರೆ.

ಇನ್ನು ಮತ್ತೋರ್ವ ಸುಪ್ರೀಂ ಕೋರ್ಟ್ ನ್ಯಾಯಾಧೀಶರಾದ ಮದನ್ ಬಿ ಲೋಕೂರ್ ಅವರು, ‘ಈ ಕಾಯ್ದೆಯಲ್ಲಿ ಸಂವಿಧಾನದ ಆಶಯ ಎತ್ತಿ ಹಿಡಿಯುವುದು ಅಸಾಧ್ಯ. ಇದರಿಂದ ಸಂವಿಧಾನದ ಹಕ್ಕನ್ನು ಕಸಿಯುತ್ತದೆ. ಈ ಕಾಯ್ದೆಯಲ್ಲಿ ಮತಾಂತರದ ಬಗ್ಗೆ ಮಾತ್ರ ಪ್ರಸ್ತಾಪ ಮಾಡಲಾಗಿದ್ದು, ಮರುಮತಾಂತರದ ಬಗ್ಗೆ ಮಾತನಾಡಿಲ್ಲ’ ಎಂದು ಪ್ರಶ್ನಿಸುತ್ತಾರೆ.

ಸುಪ್ರೀಂ ಕೋರ್ಟ್ ನ್ಯಾಯಾಧೀಶರಾದ ದೀಪಕ್ ಗುಪ್ತಾ ಅವರು, ‘ಈ ಮಸೂದೆ ಅಸಂವಿಧಾನಿಕವಾಗಿದ್ದು, ಪ್ರತಿಯೊಬ್ಬ ವ್ಯಕ್ತಿಯ ಧಾರ್ಮಿಕ ಹಕ್ಕನ್ನು ಕಸಿಯುತ್ತಿದ್ದು, ಪ್ರತಿಯೊಬ್ಬರ ನಂಬಿಕೆ ವಿಚಾರದಲ್ಲಿ ಸರ್ಕಾರ ಯಾಕೆ ಹಸ್ತಕ್ಷೇಪಕ್ಕೆ ಮುಂದಾಗಿದೆ?’ ಎಂದು ಪ್ರಶ್ನಿಸಿದ್ದಾರೆ.

ಈ ಮಸೂದೆಯಲ್ಲಿ ಯಾರಾದರೂ ಸ್ವಇಚ್ಛೆಯಿಂದ ಮತಾಂತರ ಆಗಬೇಕಾದರೆ ಎರಡು ಅರ್ಜಿ ಸಲ್ಲಿಸಬೇಕು. ಒಂದು ಮತಾಂತರವಾಗುವ ಮುನ್ನ. ಮತ್ತೊಂದು ಮತಾಂತರ ಆದ ನಂತರ. ಇದರಲ್ಲಿ ಹೆಸರು, ಲಿಂಗ, ವಯಸ್ಸು, ತಂದೆ ತಾಯಿ ಹೆಸರು, ಆದಾಯ ಮಾಹಿತಿ ನೀಡಬೇಕು. ನಂತರ ಅವರು ಸಾರ್ವಜಿನಕ ನೊಟೀಸ್ ಬೋರ್ಡ್ ನಲ್ಲಿ ಹಾಕುತ್ತಾರೆ. ಈ ಮಾಹಿತಿ ಸಾರ್ವಜನಿಕವಾಗಿ ಪ್ರಕಟಿಸುವುದು ಕಾನೂನು ಬಾಹೀರ. ನಮ್ಮ ರಾಜ್ಯದಲ್ಲಿ ಕಾನೂನು ಇಲಾಖೆ ಸತ್ತಿದೆ.

ಹಾದಿಯಾ ಪ್ರಕರಣದಲ್ಲಿ ಖಾಸಗಿಕರಣದ ಹಕ್ಕು ನೀಡಿದೆ. ನಮ್ಮ ವೈಯಕ್ತಿಕ ಮಾಹಿತಿಯನ್ನು ಸಾರ್ವಜನಿಕವಾಗಿ ಯಾಕೆ ಪ್ರಕಟಿಸಬೇಕು? ನಿನ್ನೆ ಕಾನೂನು ಸಚಿವರು ನಾವು ಕತ್ತೆ ಕಾಯುತ್ತಿದ್ದೇವಾ ಎಂದು ಕೇಳಿದರು. ನನ್ನ ಪ್ರಕಾರ ಅವರು ನಿಜಕ್ಕೂ ಕತ್ತೆಯನ್ನೇ ಕಾಯುತ್ತಿದ್ದಾರೆ. ಇಲ್ಲವಾಗಿದ್ದರೆ ಇದೆಲ್ಲ ಯಾಕೆ ಆಗುತ್ತಿತ್ತು. ಆನ್ ಲೈನ್ ಬೆಟ್ಟಿಂಗ ಕಾಯ್ದೆ ತಂದ ನಂತರ ಅದಕ್ಕೆ ತಡೆಯಾಜ್ಞೆ ನೀಡಲಾಗಿದೆ. ಹೌದು, ನೀವು ಕತ್ತೆ ಕಾಯುತ್ತಿದ್ದೀರಿ.

ಈ ಮಸೂದೆ ಈ ಎಲ್ಲ ಸುಪ್ರೀಂ ಕೋರ್ಟ್ ತೀರ್ಪಿನ ಉಲ್ಲಂಘನೆ ಆಗುವುದಿಲ್ಲ ಎಂದು ಸರ್ಕಾರ ಬಹಿರಂವಾಗಿ ತಿಳಿಸಬೇಕು. ಗುಜರಾತ್, ಮಹರಾಷ್ಟ್ರ, ಉತ್ತರ ಪ್ರದೇಶ, ಮಧ್ಯ ಪ್ರದೇಶ ಹಾಗೂ ಹಾದಿಯಾ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ತೀರ್ಪಿನ ಉಲ್ಲಂಘನೆ ಆಗಿಲ್ಲ ಎಂದು ಸ್ಪಷ್ಟನೆ ನೀಡಲಿ. ನಿಮ್ಮ ಬಳಿ ಬಲವಂತದ ಮತಾಂತರದ ದಾಖಲೆಗಳೇ ಇಲ್ಲ. ಕೇವಲ ಕೇಶವಕೃಪಾದ ಮನವೊಲಿಸಲು ಈ ಮಸೂದೆ ತಂದಿದ್ದಾರೆ. ಈ ಕಾನೂನಿನ ಮಾನ್ಯತೆಯನ್ನು ನಾವು ಪ್ರಶ್ನಿಸುತ್ತೇವೆ.

ಇದು 40% ಕಮಿಷನ್, ಗುತ್ತಿಗೆದಾರರ ಸಂಘ, ರುಪ್ಸಾ ಕೊಟ್ಟಿರುವ ದೂರು, ಬೆಂಗಳೂರಿನಲ್ಲಿ ಆಗುತ್ತಿರುವ ಅವಾಂತರ, ಕಲ್ಯಾಣ ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯ, ರೈತರಿಗೆ ಮಾಡುತ್ತಿರುವ ದ್ರೋಹಗಳನ್ನು ಮುಚ್ಚಿಹಾಕಲು ಇಂತಹ ಮಸೂದೆ ಮಂಡಿಸುತ್ತಿದ್ದಾರೆ. ಮುಖ್ಯಮಂತ್ರಿಗಳೇ ನಮಗೆ ಯುಪಿ ಹಾಗೂ ಮಧ್ಯಪ್ರದೇಶದ ಮಾದರಿ ತರುತ್ತಿದ್ದೀರಿ. ನಮ್ಮದು ಬುದ್ಧ, ಬಸವ, ಅಂಬೇಡ್ಕರ್ ಅವರ ನಾಡು. ಕುವೆಂಪು ಅವರ ವಿಶ್ವಮಾನವ ತತ್ವದ ಮೇಲೆ ನಡೆಯುತ್ತಿರುವ ನಾಡು. ಸರ್ವಜನಾಂಗದ ಶಾಂತಿಯ ತೋಟದಲ್ಲಿ ನಾಗ್ಪುರದ ಆರೆಸ್ಸೆಸ್ ನ ಕೆಟ್ಟ ಗೊಬ್ಬರ ಹಾಕಬೇಡಿ. ಈ ಮಸೂದೆಯನ್ನು ಹಿಂಪಡೆಯಬೇಕು. ಇಲ್ಲದಿದ್ದರೆ ನಾವು ಕಾನೂನು ಹೋರಾಟದ ಪರಿಶಈಲನೆ ಮಾಡುತ್ತೇವೆ. ನಾವು ಕೇಳಿರುವ ಪ್ರಶ್ನೆಗಳಿಗೆ ಉತ್ತರಿಸಿ.
[16/09, 4:51 PM] Kpcc official: BSY ವಿರುದ್ಧ ತನಿಖೆಗೆ ಅದೇಶವಾಗುತ್ತಲೇ ಕೇಂದ್ರ ಸಂಸದೀಯ ಸಮಿತಿಗೆ BSY ರಾಜೀನಾಮೆ ನೀಡಬೇಕು ಎಂದು ಯತ್ನಾಳ್ ಆಗ್ರಹಿಸಿದ್ದಾರೆ.

BSY ಅವರಿಗೆ ಮತ್ತೊಮ್ಮೆ ಕಣ್ಣೀರು ಹಾಕಿಸುವ ಪ್ರೊಗ್ರಾಮ್ ಇದೆಯೇ @BJP4Karnataka?

ಯತ್ನಾಳ್ ಹೇಳಿದಂತೆ ಆರೋಪ ಹೊತ್ತಿರುವ BSY & BYV ಅವರ ಪಕ್ಷದ ಹುದ್ದೆಗಳಿಗೆ ರಾಜೀನಾಮೆ ಪಡೆಯುವಿರಾ?
#BSYmuktaBJP
[16/09, 4:51 PM] Kpcc official: 371ಜೆ ವಿಶೇಷ ಕೋಶವನ್ನು ಕಲ್ಬುರ್ಗಿಗೆ ಸ್ಥಳಾಂತರ ಮಾಡುತ್ತೇವೆ -@BSBommai.

ಪ್ರತ್ಯೇಕ ಸಚಿವಾಲಯ ಸ್ಥಾಪಿಸುತ್ತೇವೆ - @BSYBJP.

ಹುಸಿ ಭರವಸೆಗಳಿಂದಲೇ ಕಾಲ ತಳ್ಳುತ್ತಿದೆ @BJP4Karnataka, ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಮರೀಚಿಕೆಯಾಗಿದೆ.

ನಿಮ್ಮ ದಮ್ಮು, ತಾಕತ್ತು ತೋರಿಸಬೇಕಿರುವುದು ಇಂತಹ ಕೆಲಸಗಳಲ್ಲಿ ಅಲ್ಲವೇ ಮುಖ್ಯಮಂತ್ರಿಗಳೇ?
[16/09, 5:43 PM] Kpcc official: ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಅಂಬೇಡ್ಕರ್ ಭವನದಲ್ಲಿ ಮಾಧ್ಯಮಗಳಿಗೆ ಶುಕ್ರವಾರ ನೀಡಿದ ಪ್ರತಿಕ್ರಿಯೆ...
[16/09, 9:48 PM] Kpcc official: *ಅಂಬೇಡ್ಕರ್ ಭವನದಲ್ಲಿ ನಡೆದ ಕೆಪಿಸಿಸಿ ಪದಾಧಿಕಾರಿಗಳು ಹಾಗೂ ಸಂಯೋಜಕರ ಸಭೆಯಲ್ಲಿ ಡಿ.ಕೆ. ಶಿವಕುಮಾರ್ ಅವರ ಮಾತಿನ ಮುಖ್ಯಾಂಶಗಳು:*

ಯಾರು ಪಕ್ಷದ ಪರವಾಗಿ ಕೆಲಸ ಮಾಡಲು ಸಾಧ್ಯವಿಲ್ಲವೋ ಅವರಿಗೆ ವಿಶ್ರಾಂತಿ ನೀಡಿ ಕೆಲಸ ಮಾಡುವವರಿಗೆ ಪಕ್ಷದಲ್ಲಿ ಅವಕಾಶ ನೀಡಲಾಗುವುದು ಎಂದು ರಾಷ್ಟ್ರೀಯ ನಾಯಕರು ಈಗಾಗಲೇ ತಿಳಿಸಿದ್ದು, ಈ ಸಂದರ್ಭದಲ್ಲಿ ನಾನದನ್ನು ನಿಮಗೆ ನೆನಪಿಸುತ್ತಿದ್ದೇನೆ. ನಮ್ಮ ಕರ್ತವ್ಯಗಳಿಗೆ ನಾವೆಲ್ಲರೂ ಹೊಣೆಗಾರರಾಗಬೇಕು.

ಕೋವಿಡ್ ಸಮಯದಲ್ಲಿ ಕೇಂದ್ರ ಸಚಿವರು ಸತ್ತಾಗ ಅವರ ಪಾರ್ಥೀವ ಶರೀರವನ್ನು ಬೆಳಗಾವಿಗೆ ತಂದು ಅಂತ್ಯಸಂಸ್ಕಾರ ಮಾಡಲಿಲ್ಲ. ಹೆಣಗಳನ್ನು ಜೆಸಿಬಿ ಮೂಲಕ ಗುಂಡಿಗೆ ಹಾಕಿದನ್ನು ನೋಡಿದ್ದೇವೆ. ತಂದೆ ಮಕ್ಕಳ ಜತೆ ಮಾತನಾಡಲು ಆಗುತ್ತಿರಲಿಲ್ಲ. ಇಂತಹ ಭಯಾನಕ ಸಂದರ್ಭದಲ್ಲಿ ನನಗೆ ಜವಾಬ್ದಾರಿ ಕೊಟ್ಟಾಗ ಈ ಪಕ್ಷ ಉಳಿದರಷ್ಟೇ ನಾನು ಉಳಿಯುತ್ತೇನೆ ಎಂದು ನಿಮ್ಮ ಕೈಯಲ್ಲಿ ಕೆಲಸ ಮಾಡಿಸಿ, ಪಕ್ಷಕ್ಕೆ ಜೀವ ತುಂಬುವ ಕೆಲಸ ಮಾಡಿದ್ದೇನೆ.

ರೈತರ ಬೆಳೆಗಳನ್ನು ಯಾರೂ ಕೊಳ್ಳುವವರು ಇರಲಿಲ್ಲ. ಸರ್ಕಾರ ರೈತರ ನೆರವಿಗೆ ಬರದಿದ್ದಾಗ, ಅವರ ಬೆಳೆ ಖರೀದಿ ಮಾಡಿದ್ದಲ್ಲದೆ, ಊಟ, ಆಹಾರ ಪದಾರ್ಥ, ಆಕ್ಸಿಜನ್, ಆಂಬುಲೆನ್ಸ್ ಎಲ್ಲ ರೀತಿಯ ಸಹಾಯವನ್ನು ಪಕ್ಷದ ಕಾರ್ಯಕರ್ತರು, ಮುಖಂಡರು ಮಾಡಿದರು. ವಲಸೆ ಕಾರ್ಮಿಕರು ತಮ್ಮ ಊರಿಗೆ ಮರಳಲು ಮೂರುಪಟ್ಟು ಹಣ ವಸೂಲಿಗೆ ಸರ್ಕಾರ ಮುಂದಾದಾಗ ನಾವು ಹೋರಾಟಕ್ಕೆ ಮುಂದಾದೆವು. ತಕ್ಷಣ ಸಿದ್ದರಾಮಯ್ಯ ಅವರಿಗೆ ಹಾಗೂ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಅವರಿಗೆ ಕರೆ ಮಾಡಿ ನಿರ್ಧಾರ ತಿಳಿಸಿ ಪಕ್ಷದ ವತಿಯಿಂದ 1 ಕೋಟಿ ಚೆಕ್ ಬರೆದು ತೆಗೆದುಕೊಂಡು ಹೋದೆ. ನಂತರ ಸರ್ಕಾರ ಬೇರೆ ದಾರಿ ಇಲ್ಲದೆ ಉಚಿತ ಬಸ್ ವ್ಯವಸ್ಥೆ ಕಲ್ಪಿಸಿತು. ನಮ್ಮ ಹೋರಾಟ ದೇಶಕ್ಕೆ ಮಾದರಿ ಆಯಿತು. ನಮ್ಮ ಕಾರ್ಯಕ್ಕೆ ಬಿಜೆಪಿಯವರಿಗೆ ಉತ್ತರ ನೀಡಲು ಆಗುತ್ತಿಲ್ಲ.

ಬಿಜೆಪಿ ಸರ್ಕಾರ ಆಕ್ಸಿಜನ್ ಪೂರೈಸಲಾಗದೇ 37 ಜನ ಸತ್ತಾಗ, ಮಂತ್ರಿಗಳು ಕೇವಲ 3 ಮಂದಿ ಸತ್ತಿದ್ದಾರೆ ಎಂದು ತಿಳಿಸಿದರು. ನಂತರ ಈ ಮೃತರ ಕುಟುಂಬಕ್ಕೆ ತಲಾ 1 ಲಕ್ಷ ಪರಿಹಾರ ನೀಡಿದೆವು. ಕಾಂಗ್ರೆಸ್ ಜನರ ಸಂಕಷ್ಟಕ್ಕೆ ನಿಲ್ಲುತ್ತದೆ. 

ರಾಹುಲ್ ಗಾಂಧಿ ಅವರು ದೇಶವನ್ನು ಒಗ್ಗೂಡಿಸಲು, ದೇಶದ ಐಕ್ಯತೆ ಕಾಪಾಡಲು ಭಾರತ ಜೋಡೋ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ. ನಾವು ಹಿಂದೆ ಚುನಾವಣೆಯಲ್ಲಿ ಸೋತಿರಬಹುದು. ನಾವೆಲ್ಲರೂ ಸೋತಿದ್ದರೂ ನಂತರ ಗೆದ್ದಿದ್ದೇವೆ. ಆದರೆ ನಮ್ಮ ಸಿದ್ಧಾಂತ, ಪಕ್ಷದ ನಿರ್ಧಾರವನ್ನು ನಾವು ಬಿಟ್ಟುಕೊಟ್ಟಿಲ್ಲ, ಬಿಟ್ಟುಕೊಡಬಾರದು.

ಈ ಪಾದಯಾತ್ರೆಯನ್ನು ಐದು ಅಂಶಗಳ ಮೇಲೆ ಮಾಡಲಾಗುತ್ತಿದೆ. ಸಮಾಜದಲ್ಲಿ ಸಾಮರಸ್ಯ ಮೂಡಿಸುವುದು, ಬೆಲೆ ಏರಿಕೆ ವಿರುದ್ಧ ಹೋರಾಡುವುದು, ನಿರುದ್ಯೋಗಿ ಯುವಕರ ಭವಿಷ್ಯ ರಕ್ಷಣೆ, ರಾಜ್ಯದಲ್ಲಿನ ಭ್ರಷ್ಟಾಚಾರದ ವಿರುದ್ಧ ಹೋರಾಡಲು ಹಾಗೂ ರೈತರು ಮತ್ತು ಕಾರ್ಮಿಕರ ಭವಿಷ್ಯ ರಕ್ಷಿಸಲು ಈ ಪಾದಯಾತ್ರೆ ಮಾಡುತ್ತಿದ್ದೇವೆ.

ಬಿಜೆಪಿಯವರು ಕಳೆದ ಚುನಾವಣೆ ಸಮಯದಲ್ಲಿ ರಾಜ್ಯದ ಜನರಿಗೆ 600 ಭರವಸೆಗಳನ್ನು ನೀಡಿದ್ದು, ಅದರಲ್ಲಿ ಶೇ.90 ರಷ್ಟು ಈಡೇರಿಲ್ಲ. ಹೀಗಾಗಿ ನಾವು ದಿನನಿತ್ಯ ಒಂದೊಂದು ಪ್ರಶ್ನೆ ಕೇಳುತ್ತಿದ್ದು, ಅವರಿಂದ ಒಂದು ದಿನವೂ ಉತ್ತರ ನೀಡಲು ಆಗಿಲ್ಲ. ಅವರಿಗೆ ನುಡಿದಂತೆ ನಡೆಯಲು ಆಗಿಲ್ಲ. ಸರ್ಕಾರಿ ಹುದ್ದೆಗಳಿಗೆ ಒಂದೊಂದು ದರ ನಿಗದಿ ಮಾಡಿದ್ದಾರೆ. ಇದೆಲ್ಲವೂ ಮಾಧ್ಯಮಗಳಲ್ಲಿ ಬಂದಿರುವ ವರದಿಗಳಾಗಿವೆ. ರಾಜ್ಯದಲ್ಲಿ ಭ್ರಷ್ಟಾಚಾರ ನಿರ್ಮೂಲನೆ ಮಾಡಿ ದಕ್ಷ ಆಡಳಿತ ನೀಡಬೇಕು.

ಬಿಜೆಪಿಯವರು ಕಾಂಗ್ರೆಸ್ ನ ಐದು ವರ್ಷದ ಆಡಳಿತದಲ್ಲಿನ ಅಕ್ರಮ ಬಯಲು ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ. ಕಳೆದ ಮೂರು ವರ್ಷಗಳಿಂದ ಅವರು ತನಿಖೆ ಯಾಕೆ ಮಾಡಲಿಲ್ಲ? ಅವರು ಯಾವುದೇ ತನಿಖೆ ಬೇಕಾದರೂ ಮಾಡಲಿ. ನಾವು ತಪ್ಪು ಮಾಡಿದ್ದರೆ ನೇಣು ಹಾಕಲು ಹಗ್ಗವನ್ನು ನಾನೆ ಕೊಡಲು ಸಿದ್ಧ. ಬಿಜೆಪಿಯ ನಾಯಕ ನನನ್ನು ತಿಹಾರ್ ಜೈಲಿಗೆ ಹೋದವನು ಎಂದು ಹೇಳುತ್ತಾನೆ. ನನ್ನ ಮೇಲೆ ಯಾವ ಹಗರಣದ ಮೇಲೆ ಪ್ರಕರಣ ದಾಖಲಾಗಿದೆ? ನನ್ನ ವಿರುದ್ಧ ಯಾವುದೇ ಲಂಚ ಅಥವಾ ಮಂಚದ ಪ್ರಕರಣವಿಲ್ಲ.

ನಾನು ಹುಟ್ಟುತ್ತಾ ಕೃಷಿಕ, ವೃತ್ತಿಪರನಾಗಿ ವ್ಯಾಪಾರಸ್ಥ, ಆಯ್ಕೆಯಲ್ಲಿ ಶಿಕ್ಷಣ ಸಂಸ್ಥೆ ಮಾಲೀಕ, ಆಸಕ್ತಿಯಲ್ಲಿ ರಾಜಕಾರಣಿಯಾಗಿದ್ದು, ನಾನು ಎಂದಿಗೂ ನನ್ನ ಆತ್ಮಸಾಕ್ಷಿಗೆ ವಿರುದ್ಧವಾಗಿ ನಡೆದುಕೊಂಡಿಲ್ಲ. ಪಕ್ಷದ ಅಧ್ಯಕ್ಷನಾಗಿ ನಿಮಗೆ ಅಗೌರವ ತರುವ ಕೆಲಸ ಮಾಡುವುದಿಲ್ಲ. ಅಂತಹ ಕೆಲಸ ಮಾಡಿದ ದಿನ ನಾನು ಅಧಿಕಾರ ತ್ಯಜಿಸುತ್ತೇನೆ. 

ಯಾರು ಏನು ಬೇಕಾದರೂ ಆಗಬಹುದು ಎಂಬುದಕ್ಕೆ ನಾನು ಒಂದು ಸಾಕ್ಷಿ. ನಿಮ್ಮೆಲ್ಲರ ಮೇಲೆ ನಂಬಿಕೆ ಇಟ್ಟು ಪಕ್ಷ ನಿಮಗೆ ಭಾರತ ಜೋಡೋ ಪಾದಯಾತ್ರೆ ಜವಾಬ್ದಾರಿ ನೀಡಿದೆ. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಸಂಯೋಜಕರನ್ನು ನೇಮಿಸಲಾಗಿದೆ. ನೀವುಗಳು ಸಭೆ ಮಾಡಬೇಕು. 

ಎಐಸಿಸಿ ಒಂದು ವಿಶೇಷ ತಂಡ ನೀಡಿದೆ. ನಾನು, ಹರಿಪ್ರಸಾದ್, ವೀರಪ್ಪ ಮೋಯ್ಲಿ ಸೇರಿದಂತೆ 16 ನಾಯಕರನ್ನು ಕರೆದು ಈ ತಂಡವನ್ನು ನೇಮಿಸಿರುವುದಾಗಿ ಸೂಚಿಸಿದ್ದಾರೆ. ಅವರು ನಿಮ್ಮ ಜತೆ ಗುರುತಿಸಿಕೊಳ್ಳುವುದಿಲ್ಲ. ನೀವು ನಾನು ಏನೆಲ್ಲಾ ಮಾಡುತ್ತಿದ್ದೇವೆ ಎಂದು ಆ ತಂಡ ಪರಿಶೀಲನೆ ಮಾಡುತ್ತಿದೆ. ನಾನು ಕೇವಲ ಸಭೆ ಸಮಾರಂಭಗಳಿಗೆ ಹೋಗುತ್ತಿದ್ದೇನೋ ಅಥವಾ ಪಕ್ಷ ಸಂಘಟನೆಗೆ ಹಳ್ಳಿ ಹಳ್ಳಿಗೆ ಹೋಗುತ್ತಿದ್ದೇನೋ ಎಂದು ಗಮನಿಸುತ್ತಿದ್ದಾರೆ. ಪ್ರತಿ ಕ್ಷೇತ್ರದ ಶಾಸಕರು, ಪರಾಜಿತ ಅಭ್ಯರ್ಥಿಗಳು, ಟಿಕೆಟ್ ಆಕಾಂಕ್ಷಿಗಳ ಕೆಲಸವನ್ನು ನೋಡುತ್ತಿದ್ದಾರೆ.

ನಮಗೆ ಪ್ರತಿ ಕ್ಷೇತ್ರವೂ ಮುಖ್ಯ. ಕೆಲವರು ನನ್ನ ಬಿಟ್ಟರೆ ನಮ್ಮ ಕ್ಷೇತ್ರದಲ್ಲಿ ಏನು ಮಾಡಲು ಸಾಧ್ಯ ಎಂದು ಭಾವಿಸಿದ್ದಾರೆ. ಅದು ಕೇವಲ ಭ್ರಮೆ. ಕೇರಳದಲ್ಲಿ ಸರಿಸುಮಾರು 13 ಹಾಲಿ ಶಾಸಕರಿಗೆ ಟಿಕೆಟ್ ನಿರಾಕರಿಸಲಾಗಿತ್ತು. ಹೀಗೆ ಪಕ್ಷದ ಹೈಕಮಾಂಡ್ ಸೂಕ್ತ ನಿರ್ಧಾರ ಕೈಗೊಳ್ಳಲಿದೆ. ಪದಾಧಿಕಾರಿಗಳು ಹಾಗೂ ಸಂಯೋಜಕರಿಂದ ನಾನು ಖಾಸಗಿಯಾಗಿ ಪತ್ರವನ್ನು ಪಡೆದುಕೊಂಡು ಯಾರು ನಿಮ್ಮ ಕ್ಷೇತ್ರದಲ್ಲಿ ನಿಂತರೆ ಗೆಲ್ಲುತ್ತಾರೆ ಎಂದು ಅಭಿಪ್ರಾಯ ಕಲೆಹಾಕಿ ಅದನ್ನು ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿ ಅವರ ಮುಂದೆ ಇಡುತ್ತೇನೆ.

ಬಿಜೆಪಿಯವರು ಸಮೀಕ್ಷೆ ಮಾಡಿದ್ದು, ಅವರ ಸೀಟುಗಳು 65 ಕ್ಕೆ ನಿಂತಿದೆ. ಹಾಗೆಂದು ನಾವು ಯಾಮಾರಬಾರದು. ನೀವು ಕೂಡ ಬೂತ್ ಮಟ್ಟದಲ್ಲಿ ಹೋಗಿ ಕೆಲಸ ಮಾಡಬೇಕು. ಈ ಪಾದಯಾತ್ರೆಗೆ ಮನೆ ಮನೆಗೂ ಹೋಗಿ ನಿಮ್ಮ ಮನೆ ಕಾರ್ಯಕ್ರಮಕ್ಕೆ ಆಹ್ವಾನಿಸುವ ರೀತಿ ಅವರನ್ನು ಕರೆಯಬೇಕು. ಪ್ರತಿ ಶಾಸಕರು 5 ಸಾವಿರ ಜನರನ್ನು ಕರೆತರಬೇಕು ಎಂದು ಸುರ್ಜೆವಾಲ ಅವರು ಹೇಳಿದ್ದಾರೆ. ರಾಹುಲ್ ಗಾಂಧಿ ಅವರ ಕಾರ್ಯಕ್ರಮಕ್ಕೆ 1 ದಿನ 5 ಸಾವಿರ ಜನರನ್ನು ಕರೆ ತರಲು ಆಗಲಿಲ್ಲ ಎಂದರೆ ಅದನ್ನು ಸ್ವೀಕರಿಸಲು ಆಗಲ್ಲ. ಪ್ರತಿ ನಿತ್ಯ ಇಬ್ಬರು ಶಾಸಕರಿಗೆ ಅವಕಾಶ ನೀಡಲಾಗಿದೆ.

ರಾಹುಲ್ ಗಾಂಧಿ ಅವರು ಬೆಳಗ್ಗೆ 7 ಗಂಟೆಗೆ ಪಾದಯಾತ್ರೆ ಆರಂಭಿಸುತ್ತಾರೆ. ಮೂರು ರೀತಿಯ ಯಾತ್ರಿಗಳಿಗೆ ನೋಂದಣಿ ಮಾಡಿಕೊಳ್ಳಲು ಅವಕಾಶ ಮಾಡಿಕೊಟ್ಟಿದ್ದು, 5 ಸಾವಿರ ಜನ ನೋಂದಣಿ ಮಾಡಿಕೊಂಡಿದ್ದಾರೆ. ಸ್ವಾತಂತ್ರ್ಯ ನಡಿಗೆ ಸಮಯದಲ್ಲಿ 1.36 ಲಕ್ಷ ಜನ ಆನ್ ಲೈನ್ ಮೂಲಕ ನೋಂದಣಿ ಮಾಡಿಕೊಂಡಿದ್ದರು. ಆ ನಡಿಗೆ ದೇಶಕ್ಕೆ ಕೊಡುಗೆಯಾಗಿತ್ತು. ಮತ್ತೆ ಆ ಕಾರ್ಯಕ್ರಮ ಮಾಡಲು ಸಾಧ್ಯವಿಲ್ಲ. 40 ಸಾವಿರ ಮಂದಿ ವಿದ್ಯಾರ್ಥಿಗಳೇ ಇದ್ದರು. ಯಾವ ಕ್ಷೇತ್ರದಿಂದ ಎಷ್ಟು ಜನ ಬಂದಿದ್ದರೂ ಎಂಬ ದಾಖಲೆಯೂ ಇದೆ. ಶಾಸಕರಿಲ್ಲದ ಕ್ಷೇತ್ರಗಳಿಂದ ಹೆಚ್ಚು ಯುವಕರು ಈ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಕಾಂಗ್ರೆಸ್ ಪಕ್ಷದ ಬಗ್ಗೆ ಜನ ಆಶಾಭಾವನೆಯಿಂದ ಇದ್ದಾರೆ ಎಂಬುದಕ್ಕೆ ಇದು ಸಾಕ್ಷಿ.

ಯುವ ಕಾಂಗ್ರೆಸ್ ಗೆ ಯುವ ಧ್ವನಿ, ಉದ್ಯೋಗ ಸೃಷ್ಟಿ ಎಂದು ಕಾರ್ಯಕ್ರಮ ರೂಪಿಸಿದ್ದೇವೆ. ಅವರು ಮೊದಲ ಹಂತದಲ್ಲಿ 41 ಸಾವಿರ ನಿರುದ್ಯೋಗಿಗಳ ಹೆಸರು ನೋಂದಣಿ ಮಾಡಿದ್ದರು. ಈಗ ಆಪ್ ಮೂಲಕ ನೋಂದಣಿ ಮಾಡಿದಾಗ 6500 ಮಂದಿ ನೋಂದಣಿ ಮಾಡಿಕೊಂಡಿದ್ದಾರೆ. ಮಹಿಳೆಯರಿಗೂ ಅವಕಾಶ ಮಾಡಿಕೊಡಬೇಕಿದೆ. ರಾಜ್ಯದಲ್ಲಿ ಪ್ರಿಯಾಂಕ ಗಾಂಧಿ ಅವರು ಕೂಡ ಹೆಜ್ಜೆ ಹಾಕಲು ಬಯಸಿದ್ದಾರೆ. ಹೀಗಾಗಿ ಮಹಿಳೆಯರಿಗೆ ಪ್ರತ್ಯೆಕ ಕಾರ್ಯಕ್ರಮ ರೂಪಿಸಲಾಗುವುದು.

ಇನ್ನು 40% ಕಮಿಷನ್ ವಿಚಾರವಾಗಿ ಪ್ರತ್ಯೇಕ ಕಾರ್ಯಕ್ರಮ ರೂಪಿಸಿದ್ದೇವೆ. ಇದುವರೆಗೂ 2444 ಮಂದಿ ದೂರು ನೀಡಲು ನೋಂದಣಿ ಮಾಡಿದ್ದಾರೆ. 

ನೀವು ನಿಮ್ಮ ಕ್ಷೇತ್ರಗಳಲ್ಲಿ ಹೋಗಿ ಜನರ ಮಧ್ಯೆ ಬೆರೆಯಬೇಕು. ಕೆಲವರು ಹೋಗಿಲ್ಲ. ನಿಮ್ಮ ಕೈಯಲ್ಲಿ ಆಗುವುದಿಲ್ಲ ಎಂದರೆ ತೊಂದರೆ ಇಲ್ಲ. ಕೆಲಸ ಮಾಡಲು ಉತ್ಸುಕರಾಗಿರುವವರು ಸಾಕಷ್ಟು ಜನರಿದ್ದಾರೆ. ಶ್ರಮ ಇಲ್ಲದೆ ಫಲ ನಿರೀಕ್ಷೆ ಮಾಡಬೇಡಿ. ನೀವು ನಿಮ್ಮ ಜಿಲ್ಲೆ ಮಟ್ಟದಲ್ಲಿ ಬೇರೆ ಬೇರೆ ಸಮಿತಿಗಳನ್ನು ಮಾಡಿಕೊಳ್ಳಿ. ನೀರು, ಊಟ, ವಾಹನ, ಸಭೆ ಆಯೋಜನೆ ಹೀಗೆ ಪ್ರತಿ ನಿತ್ಯದ ಜವಾಬ್ದಾರಿ ನೀಡಲಾಗುವುದು. ಪ್ರತಿ ನಿತ್ಯ ಕನಿಷ್ಠ 20 ಸಾವಿರ ಜನ ಹೆಜ್ಜೆ ಹಾಕಬೇಕು. ನಿಮ್ಮ ಕ್ಷೇತ್ರಗಳಲ್ಲಿನ ಸಾಂಸ್ಕೃತಿಕ ಕಲಾ ತಂಡಗಳಿದ್ದರೆ ಅವುಗಳನ್ನು ಕರೆತನ್ನಿ. ಎಲ್ಲ ಪದಾಧಿಕಾರಿಗಳ ಕೆಲಸವನ್ನು ಎಐಸಿಸಿ ಗಮನಿಸಲಿದೆ. 
ರಾಹುಲ್ ಗಾಂಧಿ ಅವರು ರಾಜ್ಯದ ಮೇಲೆ ನಂಬಿಕೆ ಇಟ್ಟಿದ್ದು, ನಾವು ಮಾದರಿಯಾಗಿ ನಿಲ್ಲಬೇಕು. ನಾವು ಮಾಡಿದ ನಂತರ ಮಹಾರಾಷ್ಟ್ರದಿಂದ ಕಾಶ್ಮೀರದವರೆಗೆ ಎಲ್ಲ ರಾಜ್ಯಗಳು ನಮ್ಮ ಮಾದರಿ ಅಳವಡಿಸಿಕೊಳ್ಳುವಂತೆ ಆಗಬೇಕು.
ರಾಹುಲ್ ಗಾಂಧಿ ಅವರು ನಮಗಾಗಿ ಸಾಕಷ್ಟು ಶ್ರಮ ವಹಿಸುತ್ತಿದ್ದಾರೆ. ಅಂತಹ ನಾಯಕನ ಕೆಳಗೆ ಕೆಲಸ ಮಾಡುತ್ತಿರುವುದು ನಮಗೆ ಹೆಮ್ಮೆ. ನಾವು ಪಕ್ಷ, ಸಂವಿಧಾನ, ರಾಷ್ಟ್ರಧ್ವಜ ರಕ್ಷಣೆ ಮಾಡಬೇಕಿದೆ.

ಅ. 2 ರಂದು ಗಾಂಧಿ ಜಯಂತಿಯಂದು ಬದನವಾಳು ಗ್ರಾಮದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ದಸರಾ ಹಬ್ಬದ ಸಮಯದಲ್ಲಿ 2 ದಿನ ಪಾದಯಾತ್ರೆಗೆ ವಿಶ್ರಾಂತಿ ನೀಡಲಾಗುವುದು.
[16/09, 9:49 PM] Kpcc official: *ಮಾಧ್ಯಮ ಪ್ರತಿಕ್ರಿಯೆ ಮುಂದುವರಿದ ಭಾಗ*

ಇಡಿ ವಿಚಾರವಾಗಿ ಕೇಳಿದ ಪ್ರಶ್ನೆಗೆ, ‘ಇಡಿಯವರು ಹೊಸದಾಗಿ ಯಾವ ಕೇಸು ದಾಖಲಿಸಿದ್ದಾರೋ ಗೊತ್ತಿಲ್ಲ. ಹೊಸ ಇಸಿಆರ್ ದಾಖಲಿಸಿದ್ದಾರೆ. ಅದರಲ್ಲಿ ಏನಿದೆಯೋ ಗೊತ್ತಿಲ್ಲ. ಸೋಮವಾರ ವಿಚಾರಣೆಗೆ ಕರೆದಿದ್ದಾರೆ. ಯಾವ ಕಾರಣಕ್ಕೆ ಡಬಲ್ ತನಿಖೆ ನಡೆಯುತ್ತಿದೆ ಎಂಬುದು ಗೊತ್ತಿಲ್ಲ. ಕಾನೂನು ತಜ್ಞರು ಹಾಗೂ ಪಕ್ಷದ ರಾಷ್ಟ್ರೀಯ ನಾಯಕರ ಜತೆ ಚರ್ಚೆ ಮಾಡಬೇಕಿದೆ’ ಎಂದು ತಿಳಿಸಿದರು.

ಪಕ್ಷದ ಅಧ್ಯಕ್ಷರ ಚುನಾವಣೆ ಕುರಿತು ಕೇಳಿದ ಪ್ರಶ್ನೆಗೆ, ‘ಪಕ್ಷದ ಅಧ್ಯಕ್ಷನಾಗಿ ನನ್ನ ಅಧಿಕಾರ ಅವಧಿ ಮುಕ್ತಾಯದ ಹಂತಕ್ಕೆ ಬಂದಿದೆ. ಹೀಗಾಗಿ ಚುನಾವಣೆ ಪ್ರಕ್ರಿಯೆ ನಡೆಯಬೇಕಿದೆ. ರಾಷ್ಟ್ರೀಯ ಅಧ್ಯಕ್ಷರ ಚುನಾವಣೆ ಮುಂದಿನ ತಿಂಗಳು ನಿಗದಿಯಾಗಿದ್ದು, ಯಾರು ಯಾವ ಸ್ಥಾನಕ್ಕೆ ಬರಬೇಕು ಎಂದು ತೀರ್ಮಾನಿಸಬೇಕಿದೆ. ಚುನಾವಣಾ ಪಿಆರ್ ಒ ನಾಚಿಯಪ್ಪನ್ ಅವರು ಚುನಾವಣಾ ಪ್ರಕ್ರಿಯೆ ನಡೆಸುತ್ತಾರೆ’ ಎಂದು ತಿಳಿಸಿದರು.

ಭಾರತ ಜೋಡೋ ಯಾತ್ರೆಯ ಸಭೆ ಕುರಿತು ಕೇಳಿದ ಪ್ರಶ್ನೆಗೆ, ‘ರಾಜ್ಯದಲ್ಲಿ ನಡೆಯಲಿರುವ ಯಾತ್ರೆಗೆ ಎಐಸಿಸಿಯ ಎಲ್ಲ ರಾಷ್ಟ್ರೀಯ ನಾಯಕರು ಆಗಮಿಸಲಿದ್ದಾರೆ. ಕೆಲವರು ಒಂದು ದಿನ ಬರುತ್ತಾರೆ. ಭಾರತ ಜೋಡೋ ಯಾತ್ರೆಯಲ್ಲಿ ಶಾಸಕರು, ಉಪಾಧ್ಯಕ್ಷರು, ಪದಾಧಿಕಾರಿಗಳಿಗೆ ಜವಾಬ್ದಾರಿ ವಹಿಸಿದ್ದು, ಎಲ್ಲರೂ ಹೊಣೆಗಾರಿಕೆ ಹೊರಬೇಕಿದೆ.

ನೀವೊಬ್ಬರೇ ಕಾಲಿಗೆ ಚಕ್ರ ಕಟ್ಟಿಕೊಂಡು ತಿರುಗುತ್ತಿದ್ದೀರಿ. ಆದರೆ ಬೇರೆ ನಾಯಕರಿಂದ ಸೂಕ್ತ ಬೆಂಬಲ ಸಿಗುತ್ತಿಲ್ಲ ಎಂಬ ಮಾತಿದೆಯಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಪಕ್ಷದ ಅಧ್ಯಕ್ಷನಾಗಿ ನನಗೆ ಬೇರೆಯವರಿಗಿಂತ ಹೆಚ್ಚು ಬೆಂಬಲ, ಸಹಕಾರ ಸಿಗುತ್ತಿದೆ. ಮಧ್ಯರಾತ್ರಿ 2 ಗಂಟೆಗೂ ಜನ ನನ್ನನ್ನು ಭೇಟಿ ಮಾಡುತ್ತಾರೆ. ಶಾಸಕರು, ಪದಾಧಿಕಾರಿಗಳು ಮುತುವರ್ಜಿಯಿಂದ ತಮ್ಮ ಜವಾಬ್ದಾರಿ ನಿಭಾಯಿಸುವಂತೆ ಈ ಸಭೆಯಲ್ಲಿ ಸೂಚಿಸಿದ್ದೇನೆ’ ಎಂದು ತಿಳಿಸಿದರು.
[16/09, 9:50 PM] Kpcc official: ಕರ್ನಾಟಕದ ಪ್ರದೇಶ ಚುನಾವಣಾಧಿಕಾರಿ (ಪಿ ಆರ್ ಒ) ಸುದರ್ಶನ್ ನಾಚಿಯಪ್ಪನ್ ಅವರು ಬೆಂಗಳೂರಿನಲ್ಲಿ ಶುಕ್ರವಾರ ನಡೆಸಿದ ರಾಜ್ಯದ ಹಿರಿಯ ಮುಖಂಡರ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ ಕೆ ಹರಿಪ್ರಸಾದ್, ಪ್ರಚಾರ ಸಮಿತಿ ಅಧ್ಯಕ್ಷ ಎಂ ಬಿ ಪಾಟೀಲ್, ಮಾಜಿ ಡಿಸಿಎಂ ಡಾ ಜಿ ಪರಮೇಶ್ವರ, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸಲೀಮ್ ಅಹ್ಮದ್, ಧ್ರುವನಾರಾಯಣ್, ಮಾಜಿ ಸಚಿವರಾದ ಎಚ್ ಕೆ ಪಾಟೀಲ್, ಆರ್ ವಿ ದೇಶಪಾಂಡೆ, ರಾಯರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.

Post a Comment

Previous Post Next Post