*ನಗರದಲ್ಲಿ ಎನ್.ಐ.ಎ ದಾಳಿ, ಅತ್ಯಂತ ಸ್ವಾಗತಾರ್ಹ ವಿಷಯ: ಸಿದ್ದಲಿಂಗ ಮಹಾಸ್ವಾಮಿಗಳು.*
ಕಲಬುರಗಿ.....
ದೇಶಾದ್ಯಂತ ಪಿ.ಎಫ್.ಐ ಸಂಘಟನೆಗಳ ಮೇಲೆ ಎನ್.ಐ.ಎ.ಅಧಿಕಾರಿಗಳು ದಾಳಿ ನಡೆಸಿದ್ದು,ಅತ್ಯಂತ ಸ್ವಾಗತಾರ್ಹ ವಿಷಯವಾಗಿದೆ ಎಂದು ಶ್ರೀ ರಾಮ ಸೇನೆಯ ರಾಜ್ಯ ಗೌರವಾಧ್ಯಕ್ಷ ಸಿದ್ದಲಿಂಗ ಮಹಾಸ್ವಾಮಿಗಳು ಹೇಳಿದ್ದಾರೆ.
ಆವರು ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ,ಕೆಲವು ದಿನಗಳಿಂದ ಉಗ್ರಗಾಮಿಗಳ ಜೊತೆಗೆ ಸಂಘಟನೆ ಮತ್ತು ಪಕ್ಷದ ಮೇಲೆ ಎನ್.ಐ.ಎ.ದಾಳಿ ನಡೆಸಿದೆ. ಈ ದಾಳಿ ಸಂದರ್ಭದಲ್ಲಿ ಪುಡಿ ರಾಜಕಾರಣಿಗಳು ಎನ್.ಐ.ಎ.ಯಿಂದ ರಕ್ಷಿಸಿಕೊಳ್ಳಲು ಪ್ರತಿಭಟನೆ ಹಾದಿ ತುಳಿದಿದ್ದು,ದೇಶಕ್ಕೆ ದೊಡ್ಡ ಮಾರಕ ಎಂದರು.
ರಾಜ್ಯ ಸರ್ಕಾರ ಯಾವುದೇ ಪ್ರತಿಭಟನೆ ಅಥವಾ ಹೋರಾಟಕ್ಕೆ ಜಗ್ಗದೆ,ಇಂತಹ ಸಂಘಟನೆಗಳಿಗೆ ತಕ್ಕ ಪಾಠ ಕಲಿಸಬೇಕೆಂದು ಹೇಳಿದರು. ಎಸ್.ಡಿ.ಪಿ.ಐ.ಮತ್ತು ಪಿ.ಎಫ್.ಐ.ದೇಶದ್ರೋಹಿ ಸಂಘಟನೆಗಳೆಂದು ಘೋಷಣೆ ಮಾಡಲು ಸಿದ್ದಲಿಂಗ ಶ್ರೀಗಳು ಸಕಾ೯ರಕ್ಕೆ ಆಗ್ರಹಿಸಿದ್ದಾರೆ.
ಭಾರತ ದೇಶದ ಹಿತದೃಷ್ಟಿಯಿಂದ ಈ ಸಂಘಟನೆಗಳನ್ನು ಸಂಪೂರ್ಣ ಬ್ಯಾನ ಮಾಡಬೇಕು ಎಂದ ಅವರು, ಇವರನ್ನು ಜೈಲಿಗೆ ಅಟ್ಟಿದರೇ ಮಾತ್ರ, ಭಾರತ ದೇಶ ದ ಪ್ರಜೆಗಳು ಸುರಕ್ಷೀತವಾಗಿರಲಿದ್ದಾರೆ ಎಂದರು.
Post a Comment