ಬ್ಲ್ಯಾಕ್‌ಮನಿ ವಾಪಸ್ ತರ್ತೀನಿ ಅಂದಿದೀರ.. ಪೆಟ್ರೋಲ್ ಗ್ಯಾಸ್ ಬೆಲೆ ಅಗದಿ ಕಮ್ಮಿ ಮಾಡ್ತೀನಿ ಅಂದಿದೀರ. ಬುಲೆಟ್ ಟ್ರೈನು ಬರತ್ತೆ ಅಂದಿದೀರ. ಹದಿನೈದು ಲಕ್ಷ ಅಕೌಂಟಿಗೆ ಹಾಕ್ತೀನಿ ಅಂದಿದೀರ( ಅಂತೆ).
ಇಂಥ ಹಲವಾರು ಭರವಸೆ ನೀಡಿ ಪ್ರಧಾನಿ ಆಗಿದೀರ. ಪ್ರಧಾನಿ ಆದಮೇಲೂ ಹಲವಾರು ಹಲವಾರು ಭಾರಿ ಕನಸು ಬಿತ್ತಿದ್ದೀರ.
ಆದ್ರೆ ಇದ್ಯಾವುದೂ ನೀವು ಪ್ರಧಾನಿ ಆಗಿ 8 ವರ್ಷ ಆದ್ರೂ ಇನ್ನೂ ಆಗಿಲ್ಲ.
ಜನ್ಮದಿನದ ದಿನ ನಿಮಗೆ ಬೇಜಾರಾದ್ರೂ ಓಕೆ... ಕೇಳಿಸ್ಕೊಂಡು ಬಿಡಿ.
ಇದೆಲ್ಲ ಮಾಡೋ ತನಕ ನಿಮ್ಮನ್ನ ಪ್ರಧಾನಿ ಪಟ್ಟದಿಂದ ಇಳಿಯೋಕೆ ಬಿಡಲ್ಲ. ಅದ್ ಹೇಗೆ ಇಳೀತೀರಿ ನೋಡೇ ಬಿಡ್ತೀವಿ. ಇನ್ನು ಹತ್ತು ವರ್ಷ ಆದ್ರೂ ಸರಿ ನೀವು ಇದೆಲ್ಲ ಮಾಡದೇ ಸೀಟಿಂದ ಕೆಳಗಿಳಿಯೋ ಹಾಗಿಲ್ಲ ಅಷ್ಟೆ.
ಹ್ಯಾಪಿ ಬರ್ತ್ ಡೇ ಮೋದಿ ಜಿ.❤
Post a Comment