ಕಳೆದ ಒಂದು ದಶಕದಲ್ಲಿ ಶಿಷ್ಯ-ಶಿಕ್ಷಕರ ಅನುಪಾತದಲ್ಲಿ ಇಳಿಕೆಗೆ ದೇಶ ಸಾಕ್ಷಿಯಾಗಿದೆ: ಸರ್ಕಾರ

 ಸೆಪ್ಟೆಂಬರ್ 05, 2022

,


4:56PM

ಕಳೆದ ಒಂದು ದಶಕದಲ್ಲಿ ಶಿಷ್ಯ-ಶಿಕ್ಷಕರ ಅನುಪಾತದಲ್ಲಿ ಇಳಿಕೆಗೆ ದೇಶ ಸಾಕ್ಷಿಯಾಗಿದೆ: ಸರ್ಕಾರ

ಕಳೆದ ಒಂದು ದಶಕದಲ್ಲಿ ವಿದ್ಯಾರ್ಥಿ-ಶಿಕ್ಷಕರ ಅನುಪಾತದಲ್ಲಿ ದೇಶವು ಗಣನೀಯ ಇಳಿಕೆಗೆ ಸಾಕ್ಷಿಯಾಗಿದೆ. ಶಿಕ್ಷಣ ಸಚಿವಾಲಯದ ಪ್ರಕಾರ ಪ್ರಾಥಮಿಕ ಶಾಲೆಗಳಲ್ಲಿ 2010-11ರಲ್ಲಿ 43 ಇದ್ದ ಶಿಷ್ಯ ಶಿಕ್ಷಕರ ಅನುಪಾತ 2020-21ರಲ್ಲಿ 26.3ಕ್ಕೆ ಇಳಿದಿದೆ.


 ಉನ್ನತ ಪ್ರಾಥಮಿಕ ಶಾಲೆಗಳಲ್ಲಿ, ಶಿಷ್ಯ-ಶಿಕ್ಷಕರ ಅನುಪಾತವು 2010-11 ರಲ್ಲಿ 33 ರಿಂದ 2020-21 ರಲ್ಲಿ 18.9 ಕ್ಕೆ ಇಳಿದಿದೆ. ಶಿಕ್ಷಣದ ವಿವಿಧ ಹಂತಗಳಲ್ಲಿನ ಶಿಷ್ಯ ಶಿಕ್ಷಕರ ಅನುಪಾತವು ವಿವಿಧ ತರಗತಿಗಳಿಗೆ ದಾಖಲಾದ ಮಕ್ಕಳಿಗೆ ಕಲಿಸಲು ಸಾಕಷ್ಟು ಸಂಖ್ಯೆಯ ಶಿಕ್ಷಕರ ಲಭ್ಯತೆಯನ್ನು ತೋರಿಸುತ್ತದೆ. ಶಾಲೆಗಳಲ್ಲಿ ಶಿಕ್ಷಕರ ಸಂಖ್ಯೆ ಹೆಚ್ಚಳವು ಶಿಕ್ಷಣದ ಕೇಂದ್ರೀಕೃತ ವಿತರಣೆಗೆ ಕೊಡುಗೆ ನೀಡುತ್ತಿದೆ.

Post a Comment

Previous Post Next Post