ಭಾರತದ ಡಿಜಿಟಲ್ ಭವಿಷ್ಯಕ್ಕೆ ಗೂಗಲ್ ಬದ್ಧ

 ಭಾರತದ ಡಿಜಿಟಲ್

ಭವಿಷ್ಯಕ್ಕೆ ಗೂಗಲ್ ಬದ್ಧ

ಹೊಸದಿಲ್ಲಿ: ಅಮೆರಿಕದಲ್ಲಿರುವ ಭಾರತದ ರಾಯಭಾರಿ ಕಚೇರಿಗೆ ಗೂಗಲ್ ಸಿಇಒ ಸುಂದರ್ ಪಿಚೈ ಮೊದಲ ಬಾರಿಗೆ ಭೇಟಿ ನೀಡಿದ್ದು, ಭಾರತದ ಡಿಜಿಟಲ್ ಭವಿಷ್ಯಕ್ಕೆ ಗೂಗಲ್ ಬದ್ಧ ಎಂದು ಹೇಳಿದ್ದಾರೆ. 

ಅಮೆರಿಕ ರಾಜಧಾನಿ ವಾಷಿಂಗ್ಟನ್ನಲ್ಲಿರುವ ಭಾರತದ ರಾಯಭಾರಿ ಕಚೇರಿಗೆ ಗೂಗಲ್ ಸಿಇಒ  ಸುಂದರ್ ಪಿಚೈ ಮೊದಲ ಬಾರಿಗೆ ಭೇಟಿ ನೀಡಿದ್ದಾರೆ. ಈ ವೇಳೆ ಭಾರತೀಯ ರಾಯಭಾರಿ ತರಂಜಿತ್ ಸಿಂಗ್ ಸಂಧು ಅವರ ಜತೆ ಹಲವಾರು ವಿಚಾರಗಳ ಬಗ್ಗೆ ಚಚರ್ೆ ನಡೆಸಿದ್ದಾರೆ. ಭಾರತಕ್ಕೆ ಗೂಗಲ್ನ ಬದ್ಧತೆಯ ಬಗ್ಗೆ ಚಚರ್ಿಸುವ ಅವಕಾಶ ಸಿಕ್ಕಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಭಾರತದ ಡಿಜಿಟಲ್ ಭವಿಷ್ಯದ ಬಗ್ಗೆ ಎದುರು ನೋಡುವುದಾಗಿಯೂ ಪಿಚೈ ಹೇಳಿದ್ದಾರೆ. 

=

Post a Comment

Previous Post Next Post