[01/09, 11:49 AM] Deepak Karade. CM. Media. office: ಬೆಂಗಳೂರು, ಸೆಪ್ಟೆಂಬರ್ 02: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ ಪ್ರತಿಮೆಯ ಲೋಕಾರ್ಪಣೆಗೆ ಪೂರ್ವಭಾವಿಯಾಗಿ ಇಂದು ಉದ್ಘಾಟನಾ ಅಭಿಯಾನಕ್ಕೆ ಚಾಲನೆ ನೀಡಿದರು.
ಸಚಿವರಾದ ಡಾ: ಸಿ.ಎನ್.ಅಶ್ವತ್ಥ್ ನಾರಾಯಣ್, ಆರ್.ಅಶೋಕ್, ಡಾ:ಕೆ.ಸುಧಾಕರ್, ಎಸ್.ತಿ.ಸೋಮಶೇಖರ್ , ಮುನಿರತ್ನ, ಸಂಸದ ಡಿ.ವಿ.ಸದಾನಂದಗೌಡ, ಜಗ್ಗೇಶ್, ಬಿ.ಡಿ.ಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್, ವಿಧಾನ ಪರಿಷತ್ ಸದಸ್ಯ ವೈ.ಎ. ನಾರಾಯಣಸ್ವಾಮಿ ಮೊದಲಾದವರು ಉಪಸ್ಥಿತರಿದ್ದರು.
[01/09, 1:36 PM] Deepak Karade. CM. Media. office: ಇಂದು ಮಾನ್ಯ ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ ಅವರು ಬೆಂಗಳೂರಿನಲ್ಲಿ ಸುರಿದ ಭಾರೀ ಮಳೆ ಹಾಗೂ ಪ್ರವಾಹದಿಂದ ಸಂಭವಿಸಿದ ಹಾನಿಯ ಪ್ರದೇಶಗಳ ವೀಕ್ಷಣೆ.
ಬೆಂಗಳೂರು, ಸೆಪ್ಟಂಬರ್ 01: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಬೆಂಗಳೂರಿನಲ್ಲಿ ಪ್ರವಾಹದಿಂದ ಹಾನಿಯಾದ ಪ್ರದೇಶಗಳಿಗೆ ಭೇಟಿ ನೀಡುವರು.
ಅವರು ಇಂದು 3.15 ಕ್ಕೆ ತಮ್ಮ ರೇಸ್ ಕೋರ್ಸ್ ರಸ್ತೆಯ ಮನೆಯಿಂದ ನೇರವಾಗಿ ಮಾರತಹಳ್ಳಿ ಮುಖ್ಯರಸ್ತೆಯ ಬಳಿ ಇರುವ ಡಿಎನ್‍ಎ ಅಪಾರ್ಟ್‍ಮೆಂಟ್ ಬಳಿ ತೆರಳಿ ಪ್ರವಾಹದಿಂದ ಸಂಭವಿಸಿದ ಹಾನಿಯ ಕುರಿತು ವೀಕ್ಷಣೆ ಮಾಡುವರು. ನಂತರ ವರ್ತೂರು ಕೊಡಿ ಬಳಿ ಇರುವ ಕೊಲಂಬಿಯಾ ಆಸ್ಪ್ರತೆಯ ಬಳಿಯ ಸುತ್ತಮುತ್ತಲಿನ ಮಳೆಹಾನಿ ಪ್ರದೇಶಗಳ ವೀಕ್ಷಣೆ ಮಾಡುವರು. ಅಲ್ಲಿಂದ ಶಾಂತಿನಿಕೇತನ ಲೇಔಟ್ ಬಳಿ ಇರುವ ಆರ್.ಪಿ. ಲೇಔಟ್ ಮಳೆಹಾನಿ ಪ್ರದೇಶಗಳ ವೀಕ್ಷಣೆ ಮಾಡುವರು. ಇಕೋ ಸ್ಪೇಸ್ ಪ್ರದೇಶದ ಪ್ರವಾಹ ಪ್ರದೇಶ, ಕರಿಯಮ್ಮನ ಅಗ್ರಹಾರ ಲೇಔಟ್‍ನ ಹಿಂಭಾಗದ ಸಾಕ್ರ ಆಸ್ಪತ್ರೆಯ ಬಳಿ ಒಳಚರಂಡಿ ವೀಕ್ಷಣೆ, ನಂತರ ಎಸ್.ಬಿ.ಆರ್. ಪ್ಯಾಲೇಸ್ ಚೌಲ್ಟ್ರಿ ಯಲ್ಲಿ ಅಧಿಕಾರಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳೊಂದಿಗೆ ಪ್ರವಾಹದಿಂದ ಸಂಭವಿಸಿದ ಹಾನಿಯ ಕುರಿತು ಹಾಗೂ ಪರಿಹಾರ ಕ್ರಮಗಳ ಕುರಿತು ಸಭೆ ನಡೆಸಿ ಹಿಂದಿರುಗುವರು.
Post a Comment