cm. ಇಂದು. ವಿಶೇಷ

[21/09, 1:54 PM] +91 99001 58601: ಮೈಸೂರು ದಸರಾ ಮಹೋತ್ಸವ -2022ರ ಕಾರ್ಯಕ್ರಮಕ್ಕೆ ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಆಹ್ವಾನಿಸಿದರು. ಬೃಹತ್ ನೀರಾವರಿ ಸಚಿವರಾದ ಗೋವಿಂದ್ ಕಾರಜೋಳ,  ಶಾಸಕರಾದ ಎಲ್. ನಾಗೇಂದ್ರ, ವಿಧಾನಪರಿಷತ್ ಸದಸ್ಯರಾದ  ಸಿ.ಎನ್. ಮಂಜೆಗೌಡ,  ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್,  ದಸರಾ ಸ್ವಾಗತ ಉಪಸಮಿತಿ ಕಾರ್ಯಾಧ್ಯಕ್ಷರಾದ ರೂಪ ಎಂ. ಜೆ., ಕಾರ್ಯದರ್ಶಿ ಕೆ. ಕುಬೇರಪ್ಪ, ಜಿಲ್ಲಾ ಉಸ್ತುವಾರಿ ಸಚಿವರ ಆಪ್ತ ಕಾರ್ಯದರ್ಶಿ ಶ್ರೀನಿವಾಸ್ ಗೌಡ, ವಿಶೇಷ ಕರ್ತವ್ಯಾಧಿಕಾರಿ ದೊಡ್ಡನಾಗಯ್ಯ ಮತ್ತಿತರರು ಹಾಜರಿದ್ದರು.
[21/09, 2:16 PM] +91 99001 58601: ಬಿಐಇಸಿಯಲ್ಲಿ ಶಿಕ್ಷಣ ಹಾಗೂ ಕೌಶಲ್ಯ ಕುರಿತ ಏಷಿಯನ್ ಶೃಂಗಸಭೆಗೆ ಸಿಎಂ ಚಾಲನೆ
*ಶಿಕ್ಷಣದ ಕುರಿತು ಬೆಂಗಳೂರು ಘೋಷಣೆ - ವರದಿ ಸಲ್ಲಿಸಲು ಮುಖ್ಯಮಂತ್ರಿಗಳ ಸಲಹೆ*
ಬೆಂಗಳೂರು, ಸೆಪ್ಟೆಂಬರ್ 21: ಮುಂದಿನ ಪೀಳಿಗೆಯ ಒಳಿತನ್ನು  ಡೈಡ್ಯಾಕ್ಟಿಕ್  ಶೃಂಗಸಭೆ ಒಳಗೊಂಡಿದ್ದು  ಪರಿಹಾರವನ್ನು ಒದಗಿಸುವ ವೇದಿಕೆಯಾಗಬೇಕು. ಕಾರ್ಯಾಗಾರಾದ ವರದಿಯನ್ನು ಶಿಕ್ಷಣದ ಕುರಿತ ಬೆಂಗಳೂರು ಘೋಷಣೆ ಎಂದು ಕರೆಯುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗಳು ಸಲಹೆ ನೀಡಿದರು. 
ಅವರು ಇಂದು ಇಂಡಿಯಾ ಡೈಡ್ಯಾಕ್ಟಿಕ್ ಅಸೋಸಿಯೇಷನ್ ಆಯೋಜಿಸಿದ್ದ ಶಿಕ್ಷಣ ಮತ್ತು ಕೌಶಲ್ಯ ಕುರಿತ ಏಷಿಯನ್ ಶೃಂಗ ಸಭೆಯನ್ನು  ಉದ್ಘಾಟಿಸಿ ಮಾತನಾಡಿದರು. 
ಈ ಸಭೆಯಲ್ಲಿ ವ್ಯಕ್ತವಾದ ಅಭಿಪ್ರಾಯ ಹಾಗೂ  ಪರಿಹಾರಗಳನ್ನು ಅನುಷ್ಠಾನಕ್ಕೆ  ತರಲು ಸರ್ಕಾರ ಸಿದ್ದವಿದೆ ಎಂದರು. 
*ಶೈಕ್ಷಣಿಕ ವ್ಯವಸ್ಥೆ ಸಹಜ ಕಲಿಕೆಗೆ ಪೂರಕವಾಗಿರಬೇಕು*
ಶಿಕ್ಷಣ ನೀತಿ, ಕಲಿಸುವ ವಿಧಾನ ಬದಲಾಗಿದೆ. ಬದಲಾವಣೆ ಸರಿಯಾದ ದಿಕ್ಕಿನಲ್ಲಿರಬೇಕು ಹಾಗೂ ಉತ್ತಮ ಶಿಕ್ಷಣ ವ್ಯವಸ್ಥೆ ರೂಪಿಸುವಂತಿರಬೇಕು. ಶಿಕ್ಷಣ ಯಾವುದೇ ಪದವಿ ಪಡೆದಾಕ್ಷಣ ಮುಕ್ತಾಯವಾಗುವುದಿಲ್ಲ. ಅವೆಲ್ಲಾ ಕೆಲವು ಮೈಲಿಯುಗಳಷ್ಟೇ. ನಾವು ಜೀವನಪೂರ್ತಿ ವಿದ್ಯಾರ್ಥಿಗಳೇ.  ಮಕ್ಕಳಲ್ಲಿ ಅಗಾಧವಾದ ಕಲಿಕಾ ಸಾಮರ್ಥ್ಯವಿರುತ್ತದೆ. 
ಶೈಕ್ಷಣಿಕ ವ್ಯವಸ್ಥೆ ಸಹಜ ಕಲಿಕೆಗೆ ಪೂರಕವಾಗಿರಬೇಕು. ಯಾವಾಗ ಎಷ್ಟು ಕಲಿಸಬೇಕು ಎನ್ನುವ ಬಗ್ಗೆ ಸ್ಪಷ್ಟತೆ ಇರಬೇಕು. ನೂತನ ತಂತ್ರಜ್ಞಾನ ಹಾಗೂ ವಿಧಾನಗಳಿಂದ  ಎರಡು ಸಾಧ್ಯತೆಗಳಿವೆ. ವಿದ್ಯಾರ್ಥಿಗಳು ಬೇಗನೆ ಹೊಂದಿಕೊಂಡು ಕಲಿತುಕೊಳ್ಳಬಹುದು ಮತ್ತೊಂದು ವಿದ್ಯಾರ್ಥಿಗಳಿಗೆ ಈ ಪರಿಕಲ್ಪನೆಯನ್ನು ದೃಶ್ಯ ಮಾಧ್ಯಮ ಮುಖಾಂತರ ಕಲಿಯಬಹುದು. ಇದರಿಂದ  ವಿಶ್ಲೇಷಣಾ ಸಾಮರ್ಥ್ಯ ಕಡಿಮೆಯಾಗಬಹುದು. ಮಕ್ಕಳು ಸಹಜವಾಗಿ , ಸರಳವಾಗಿ ಕಲಿಯುವುದರ ಜೊತೆಗೆ ಅದನ್ನು ಖುಷಿಯಿಂದ ಕಲಿಯಬೇಕು. ಮಕ್ಕಳ ಮಟ್ಟದಲ್ಲಿ ಆಲೋಚಿಸಿ ನೀತಿ ನಿರೂಪಿಸಬೇಕು ಎಂದರು. 

*ನೈಜ ಪರಿಹಾರ ನೀಡುವತ್ತ ಎಲ್ಲಾ ತಂತ್ರಜ್ಞಾನ ಒತ್ತು ನೀಡಬೇಕು*
ಉನ್ನತ ಶಿಕ್ಷಣ ಇನ್ನಷ್ಟು ಸವಾಲುಗಳನ್ನು  ಎಸೆಯುತ್ತದೆ. ಯಾವುದೇ ವಿದ್ಯಾರ್ಥಿಗೆ ಇದು  ಬದಲಾವಣೆಯ ಘಟ್ಟ. ಈ ನಿಟ್ಟಿನಲ್ಲಿ ಉನ್ನತ ಶಿಕ್ಷಣದ ಜವಾಬ್ದಾರಿ ಹೆಚ್ಚಿದೆ. ವಿದ್ಯಾರ್ಥಿ ತನ್ನ ವೃತ್ತಿಯನ್ನು ಆಯ್ಕೆ ಮಾಡಿ ಅದರಲ್ಲಿ ಯಶಸ್ವಿಯಾಗಲು ಉನ್ನತ ಶಿಕ್ಷಣ ಸಹಕಾರಿಯಾಗಿದೆ. ಪರಿಹಾರಗಳು ನೈಜ ಪರಿಹಾರವನ್ನು ಒದಗಿಸಬೇಕು. ಪ್ರತಿ ದಿನ ಹೊಸ ಆಪ್ ಗಳು ಹೊರಬರುತ್ತಿದ್ದರೂ ಬಹಳ ಸ್ಥಳೀಯವಾಗಿ ಹಾಗೂ ಜಾಗತಿಕವಾಗಿ ಪರಿಣಾಮಕಾರಿಯಾಗಿಲ್ಲ. ನೈಜ ಪರಿಹಾರ ನೀಡುವತ್ತ ಎಲ್ಲಾ ತಂತ್ರಜ್ಞಾನ ಒತ್ತು ನೀಡಬೇಕು ಎಂದರು. 

*ವಿದ್ಯಾರ್ಥಿ ಕೇಂದ್ರಿತ ಯೋಜನೆಗಳು*
ಕರ್ನಾಟಕ ಶಿಕ್ಷಣದಲ್ಲಿ ಮುಂಚೂಣಿಯಲ್ಲಿರುವ ರಾಜ್ಯ. ಅತ್ಯುತ್ತಮ ಶಿಕ್ಷಣ ಸಂಸ್ಥೆಗಳು ನಮ್ಮಲ್ಲಿವೆ. ಮಹಾರಾಜರ ಕಾಲದಿಂದಲೂ ಪ್ರಾಥಮಿಕ, ಉನ್ನತ ಹಾಗು ಕಾಲೇಜು ಶಿಕ್ಷಣದಲ್ಲಿ ಅತ್ಯುತ್ತಮ ಸಂಸ್ಥೆಗಳು ನಮ್ಮ ರಾಜ್ಯದಲ್ಲಿವೆ. ಜ್ಞಾನ ಮತ್ತು ಧ್ಯಾನವನ್ನು ಶಿಕ್ಷಣದಲ್ಲಿ ನಮ್ಮ ಹಿರಿಯರು ಸೇರ್ಪಡೆ ಮಾಡಿದ್ದಾರೆ. ಧ್ಯಾನ ಉತ್ತಮ ಆಲೋಚನೆಗಳನ್ನು ಹಾಗೂ ಜ್ಞಾನ, ವಿಶ್ವವನ್ನು ಎದುರಿಸುವ  ಸಾಮರ್ಥ್ಯವನ್ನು ಒದಗಿಸುತ್ತದೆ ಎಂದರು. ತಂತ್ರಜ್ಞಾನ, ತಾಂತ್ರಿಕ ಶಿಕ್ಷಣದಲ್ಲಿ ರಾಜ್ಯ ಎಂದೂ ಹಿಂದುಳಿದಿಲ್ಲ. 400 ಆರ್.ಅಂಡ್ ಡಿ ಕೇಂದ್ರಗಳು ಬೆಂಗಳೂರಿನಲ್ಲಿವೆ. ಅದು ನಮ್ಮ ಜ್ಞಾನದ ಶಕ್ತಿ. ತಾಂತ್ರಿಕ ಶಿಕ್ಷಣ ದ ಖಾಸಗೀಕರಣ ಮೊದಲು ಆಗಿದ್ದು ಕರ್ನಾಟಕದಲ್ಲಿ.ನಮ್ಮ ಸರ್ಕಾರ ಹಲವು ಪ್ರಮುಖ ನಿರ್ಧಾರಗಳನ್ನು ಕೈಗೊಂಡಿದೆ. ಏಳು ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳನ್ನು ಐಐಟಿ ಮಾದರಿ ಯಲ್ಲಿ ಮೇಲ್ದರ್ಜೆಗೇರಿಸಲಾಗುತ್ತಿದೆ. ಮುಂದಿನ ವರ್ಷ ಐಐಟಿ ಮಾದರಿಯ ಕೆಐಟಿ ಸಂಸ್ಥೆಗಳು  ರಾಜ್ಯ ದಲ್ಲಿರಲಿವೆ. ಎಂಟು ವಿಶೇಷ ವಿಶ್ವವಿದ್ಯಾಲಯಗಳನ್ನು ಸ್ಥಾಪನೆ ಮಾಡಲಾಗುತ್ತಿದೆ.  ಈ ಎಲ್ಲಾ ಯೋಜನೆಗಳು ವಿದ್ಯಾರ್ಥಿ ಕೇಂದ್ರಿತವಾಗಿವೆ. ಶಿಕ್ಷಣ ಪದವಿಯೊಂದಿಗೆ ಮುಕ್ತಾಯವಾಗಬಾರದು. ಸಮಾಜದ ಸಂಸ್ಕೃತಿ ಹಾಗೂ ಉದ್ಯೋಗ ಪ್ರಪಂಚದೊಂದಿಗೆ ಸರಾಗವಾಗಿ ಬೆರೆಯುವಂತಿರಬೇಕು. ಸಮಾಜದಿಂದ ಬಂದಿದ್ದು, ಸಮಾಜಕ್ಕೆ ಹಿಂತಿರುಗಬೇಕು.ಶಿಕ್ಷಣ,  ಸುಸ್ಥಿರ, ನವೀಕರಿಸಬಹುದಾದ   ವ್ಯವಸ್ಥೆಯಾಗಬೇಕು ಎಂದು ಮುಖ್ಯಮಂತ್ರಿಗಳು ಅಭಿಪ್ರಾಯ ಪಟ್ಟರು.
[21/09, 2:25 PM] +91 99001 58601: ಮಾಜಿ ಪ್ರಧಾನಿಗಳು ಹಾಗೂ ರಾಜ್ಯಸಭಾ ಸದಸ್ಯರಾದ ಎಚ್‌. ಡಿ. ದೇವೇಗೌಡ ಅವರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಇಂದು ಅವರ ಪದ್ಮನಾಭ ನಗರದ ನಿವಾಸದಲ್ಲಿ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು. ಸಂದರ್ಭದಲ್ಲಿ ಸಚಿವರಾದ ಆರ್‌. ಅಶೋಕ್, ವಿ.‌ಸೋಮಣ್ಣ, ಬೈರತಿ ಬಸವರಾಜ್, ಮುನಿರತ್ನ, ಗೋಪಾಲಯ್ಯ ಜೆ.ಸಿ. ಮಾಧುಸ್ವಾಮಿಯವರು ಹಾಜರಿದ್ದರು.
[21/09, 4:42 PM] +91 99001 58601: *ಮಾಜಿ ಪ್ರಧಾನಿಗಳ ಆರೋಗ್ಯ ವಿಚಾರಿಸಿದ ಸಿಎಂ ಬೊಮ್ಮಾಯಿ*
ಬೆಂಗಳೂರು, ಸೆಪ್ಟೆಂಬರ್ 21: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು  ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಅವರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದರು.
ನಂತರ ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ‘ದೇವೇಗೌಡರ ಆರೋಗ್ಯದಲ್ಲಿ ಸಾಕಷ್ಟು ಸುಧಾರಣೆಯಾಗಿದೆ. ಬಹಳ ಆತ್ಮೀಯವಾಗಿ, ಲವಲವಿಕೆಯಿಂದ ಮಾತನಾಡಿದ್ದಾರೆ. ಸಾಕಷ್ಟು ಹಳೆಯ ವಿಚಾರಗಳನ್ನು ಮೆಲಕು ಹಾಕಿದರಲ್ಲದೆ ರಾಜ್ಯಕ್ಕೆ ಒಳ್ಳೆಯದು ಮಾಡಬೇಕೆಂಬ ನಿಟ್ಟಿನಲ್ಲಿ ಅವರ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಅವರ ಆರೋಗ್ಯ ಚೆನ್ನಾಗಿರಲಿ,  ನೂರ್ಕಾಲ ಚೆನ್ನಾಗಿ ಬಾಳಲಿ. ರಾಜ್ಯಕ್ಕೆ ಅವರಿಂದ ಇನ್ನಷ್ಟು ಮಾರ್ಗದರ್ಶನ ಸಿಗುವಂತಾಗಲಿ  ಎಂದು ತಿಳಿಸಿದರು
[21/09, 9:26 PM] +91 99001 58601: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಮ್ಮುಖದಲ್ಲಿ ಮೆ. ಸತ್ವಂ ಕನ್ಸಲ್ಟಿಂಗ್ ಸಂಸ್ಥೆಯು ಶಾಲಾ ಶಿಕ್ಷಣ ಇಲಾಖೆಯ 105 ಶಾಲೆಗಳನ್ನು ದತ್ತು ಪಡೆಯುವ ಕುರಿತು ಸರ್ಕಾರದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಶಿಕ್ಷಣ ಸಚಿವ ಬಿ.ಸಿ. ನಾಗೇಶ್, ಸ್ಟಾರ್ಟಪ್ ವಿಷನ್ ಗ್ರೂಪ್ ಅಧ್ಯಕ್ಷ ಪ್ರಶಾಂತ್ ಪ್ರಕಾಶ್, ಸತ್ವಂ ಸಂಸ್ಥೆಯ ಸಿಇಒ ಶ್ರೀಕೃಷ್ಣ ಹಾಗೂ ಸಮಗ್ರ ಶಿಕ್ಷಣ ಕರ್ನಾಟಕದ ರಾಜ್ಯ ಯೋಜನಾ ನಿರ್ದೇಶಕರಾದ ಬಿ.ಬಿ. ಕಾವೇರಿ ಅವರು ಉಪಸ್ಥಿತರಿದ್ದರು.

Post a Comment

Previous Post Next Post