*||ಪಿಬತ ಭಾಗವತಂ ರಸಮಾಲಯಂ||*ಸಕಲರಿಗು ಹರಿದಿನದ ನಮಸ್ಕಾರ🙏 ಗಳು.Day 10.

[06/09, 7:19 PM] vijayavitthala blr: *||ಪಿಬತ ಭಾಗವತಂ ರಸಮಾಲಯಂ||*
ಸಕಲರಿಗು ಹರಿದಿನದ ನಮಸ್ಕಾರ🙏 ಗಳು.
Day 10.
✍ನಿನ್ನೆಯ ದಿನ ಭಗವಂತನ ಉಪಾಸನೆ ಹೇಗೆ ಮಾಡಬೇಕೆಂದು ಶುಕಮುನಿಗಳು ಪರೀಕ್ಷಿತ ರಾಜನಿಗೆ ವಿವರವಾಗಿ ಹೇಳುತ್ತಾರೆ.
ಪರೀಕ್ಷಿತ ರಾಜ ಶುಕಮುನಿಗಳ ಬಳಿ ಕೇಳುತ್ತಾನೆ.
*ಭಗವಂತನ ಕುರಿತಾದ ಧ್ಯಾನ ಯಾವ ರೀತಿ ಮಾಡಬೇಕು??* ಎಂದಾಗ
ಅದಕ್ಕೆ ಶುಕಮುನಿಗಳು ಹೇಳುತ್ತಾರೆ.
*"ಮೊದಲು ಶುದ್ದವಾದ ಪರಿಸರದಲ್ಲಿ ಉತ್ತಮವಾದ ಆಸನವನ್ನು ಹಾಕಿಕೊಂಡು ಕುಳಿತುಕೊಳ್ಳಲು ಬೇಕು.ಪ್ರಾಣಾಯಾಮದಿಂದ ಮತ್ತು ನಮ್ಮ ಒಳಗಡೆ ಇದ್ದು ಶ್ವಾಸ,ಕಾರ್ಯವನ್ನು ಮಾಡುತ್ತಾ ಇರುವ ಮುಖ್ಯ ಪ್ರಾಣದೇವರಲ್ಲಿ ಪ್ರಾರ್ಥನೆ ಮಾಡುತ್ತಾ ನಮ್ಮ ಶ್ವಾಸವನ್ನು ಬಿಗಿ ಹಿಡಿಯಬೇಕು.*
*ಉಸಿರಿನ ಬಿಗಿ ಹಿಡಿತದಿಂದ ನಮ್ಮ ಮನಸ್ಸು ನಿಗ್ರಹ ವಾಗುತ್ತದೆ.*
*ಒಂದು ಕ್ಷಣ ಉಸಿರು ಹಿಡಿದಾಗ ನಮ್ಮ ಮನಸ್ಸಿನ ಒಳಗಡೆ ಯಾವುದೇ ಲೌಕಿಕ ಚಿಂತನೆ ಗಳು ಬರುವುದಿಲ್ಲ. ಆ ಸಮಯದಲ್ಲಿ ಭಗವಂತನ ರೂಪವನ್ನು ಚಿಂತನೆ ಮಾಡಿದಾಗ ಅದು ನಮ್ಮ ಮನಸ್ಸಿನ ಒಳಗಡೆ ಹಾಗೇ ಇರುತ್ತದೆ.*
*ಇದು ಒಂದು ದಿನಕ್ಕೆ ಬರುವ ದಿಲ್ಲ.ನಿರಂತರವಾಗಿ ಅಭ್ಯಾಸ ಮಾಡಬೇಕು.*
*ಈ ಕಲಿಯುಗದಲ್ಲಿ ಭಗವಂತನ ನಾಮ ಸ್ಮರಣೆ ಮಾಡಲು ನೂರೆಂಟು ಅಡ್ಡಿ ಆತಂಕಗಳು.ಅನೇಕ ವಿಘ್ನಗಳು.*
*ಸಮಯವಿದ್ದಾಗ ಭಗವಂತನ ಸ್ಮರಣೆ ಮಾಡಲು ಮನಸ್ಸು ಇಲ್ಲ.*
*ಮನಸ್ಸು ಇದೆ ಆದರೆ ಸ್ಮರಣೆ ಮಾಡಲು ಸಮಯ ಇಲ್ಲ.* *ಏನೋ ಒಂದು ಕಾರಣ ಮುಂದೂಡಲು.ನಮಗೆ ಸದಾ ಭಗವಂತನ ಧ್ಯಾನ ಮಾಡಬೇಕು ಅಂದರೆ ಮೊದಲು ಪರಮಾತ್ಮನ ಪಾದದಿಂದ ಆರಂಭವಾಗಿ ಅವನ ಶಿರ ಪರ್ಯಂತರವಾಗಿ ಧ್ಯಾನ ಮಾಡಬೇಕು.* 
ಇದು ನಿತ್ಯ ಆಗಬೇಕು.. ಹೊರತಾಗಿ ಅಂತ್ಯಕಾಲದಲ್ಲಿ ಮಾಡುತ್ತೇವೆ ಅಂದರೆ ಕೈಲಾಗದ ಕೆಲಸ.
*ಇದಕ್ಕೆ ಮೊದಲ ಹೆಜ್ಜೆ ಶ್ರವಣ.ಸಾಧ್ಯ ವಾದಷ್ಟು ಸಮಯ ಸಿಕ್ಕಿತು ಅಂದರೆ ಭಗವಂತನ ಕತೆ ಗಳನ್ನು ಅವನ ಮಹಿಮೆಯನ್ನು ಕೇಳಿ.ನಂತರ ಮನನ ಮಾಡಿಕೊಂಡು ಅವನ ಗುಣ ಕೀರ್ತನೆ ಮಾಡಬೇಕು. ನಂತರ ಸ್ಮರಣೆ ಮಾಡಬೇಕು. ಹೀಗೆ ಮಾಡಿದಾಗ ಮಾತ್ರ ಭಗವಂತನ ಸ್ಮರಣೆ, ಧ್ಯಾನ ನಮಗೆ ಅಂತ್ಯಕಾಲದಲ್ಲಿ ಬರಲು ಸಾಧ್ಯ.ಇಲ್ಲವೆಂದರೆ ಇಲ್ಲ.*
*ಮನುಷ್ಯ ಜನ್ಮ ಬಂದಾಗ ಪ್ರಮುಖವಾಗಿ ಮಾಡುವ ಕೆಲಸದಲ್ಲಿ ಭಗವಂತನ ನಾಮ ಸ್ಮರಣೆ ಕೂಡ ಬಹು ಮುಖ್ಯವಾದ ಕೆಲಸ.*
*"ನಾರಾಯಣನ ನೆನೆ ಮನವೆ ನಾರಾಯಣನ ನೆನೆ"*
*ಯಾವತ್ತಿಗೂ ಜ್ಞಾನ ದಿಂದ ಕರ್ಮಗಳನ್ನು ಆಚರಣೆ ಮಾಡಬೇಕು.*
*ಮೊದಲು ಅವನ ಕುರಿತಾದ ಮಹಿಮೆ ಶ್ರವಣ,ನಂತರ ಮನನ,ನಂತರ ನಿರಂತರವಾಗಿ ಅವನ ಧ್ಯಾನ ಮಾಡಬೇಕು.*
*ಅಂತ್ಯಕಾಲದಲ್ಲಿ ಭಗವಂತನ ನಾಮ ಸ್ಮರಣೆ ಮಾಡುವದು ಈ ಜನ್ಮದ ಪರಮ ಲಾಭ.*. 
*ಮರಣ ಕಾಲ ಸಮೀಪ ವಾದಾಗ ಭಗವಂತನ ವಿರಾಟ್ ರೂಪವನ್ನು ಮಾಡಬೇಕು.*
ಅದರ ಚಿಂತನೆ👇👇
*ಸಂಪುಟಾಕಾರವಾಗಿರ ತಕ್ಕಂತಹ ಐವತ್ತು ಕೋಟಿ ಯೋಜನ ವಿಸ್ತೀರ್ಣದ ಇಡೀ ಬ್ರಹ್ಮಾಂಡದಲ್ಲಿ ಪರಮಾತ್ಮನು ವ್ಯಾಪಿಸಿದ್ದಾನೆ..*

*ಅವನ ಪಾದದ ಬುಡದಲ್ಲಿ (೧)ಪಾತಾಳವು,*
*೨)ಅಗ್ರಭಾಗಗಳಲ್ಲಿ ರಸಾತಲವು,*
*೩)ಕಾಲಿನ ಗಂಟಿನಲ್ಲಿ ಮಹಾತಲವೂ*,
*೪),ಕಣ ಕಾಲಿನಲ್ಲಿ ತಲಾತಲವು,* *೫)ಮೊಣಕಾಲಿನಲ್ಲಿ ಸುತಲವು,* 
*೬)ತೊಡೆಗಳಲ್ಲಿ ವಿತಲವು, ೭)ಅತಲವು,* *೮)ಕಟಿಪ್ರದೇಶದಲ್ಲಿ ಭೂಲೋಕವು*,
*೯)ನಾಭಿಯಲ್ಲಿ ಅಂತರಿಕ್ಷ ಲೋಕವು*,
*೧೦)ಎದೆ ಯಲ್ಲಿ ಜ್ಯೋತಿ ಲೋಕವು*, 
*೧೧)ಕುತ್ತಿಗೆ ಯಲ್ಲಿ ಮಹರ್ಲೋಕವು*,
*೧೨)ಮುಖದಲ್ಲಿ ಜನಲೋಕವು*,
*೧೩)ಹಣೆಯಲ್ಲಿ ತಪೋಲೋಕವು* *೧೪)ಶಿರಸ್ಸಿನಲ್ಲಿ ಸತ್ಯಲೋಕವು.*
*ಹೀಗೆ ಪಾದ ಮೂಲದಿಂದ ಹಿಡಿದು ತಲೆಯ ತನಕ ಎಲ್ಲಾ ಹದಿನಾಲ್ಕು ಲೋಕಗಳು ಭಗವಂತನ ಅವಯವದಲ್ಲಿ ಆಶ್ರಯಿಸಿ ಕೊಂಡಿದೆ.ಇದೇ ಪರಮಾತ್ಮನ ವಿರಾಡ್ರೂಪ.*
*ಇದು ಎಲ್ಲಾ ದೇವತೆಗಳಿಗೆ,ಸಪ್ತ ದ್ವೀಪ, ಸಮುದ್ರ, ನದಿ,ಮತ್ತು ಹದಿನಾಲ್ಕು ಲೋಕಗಳಿಗೆ ಆಶ್ರಯ ಸ್ಥಾನ ವಾಗಿದೆ*.
*ಮರಣಕಾಲದಲ್ಲಿ ಇದರ ಚಿಂತನೆ ಮಾಡಬೇಕು. ಸಕಲ ಚೇತನಾಚೇತನ ಪ್ರಪಂಚಕ್ಕೆ ಆಶ್ರಯನಾದ ಆ ಪರಮಾತ್ಮನ ವಿರಾಡ್ರೂಪವನ್ನು ಧ್ಯಾನ ಮಾಡಬೇಕು.*
ಮುಂದೆ ವೈರಾಗ್ಯ ಬಗ್ಗೆ ಹೇಳುತ್ತಾರೆ. ನಂತರ ನೋಡೋಣ.
 *ಈ ಶ್ರೀಮದ್ಭಾಗವತಕ್ಕೆ ಪ್ರತಿಪಾದ್ಯನಾಗಿರ ತಕ್ಕಂತಹವನು ಶ್ರೀವಾಸುದೇವ ರೂಪಿ ಪರಮಾತ್ಮ..ಅವನು ಸರ್ವಜ್ಞ ನಾಗಿದ್ದಾನೆ.ಶ್ರೀಬ್ರಹ್ಮ ದೇವರಿಗೆ ವೇದವನ್ನು ಉಪದೇಶ ಮಾಡಿದ್ದಾನೆ.*
*ನಮಗೆ ಬರುವ ತಾಪಗಳನ್ನು ಪರಿಹಾರ ಮಾಡತಕ್ಕವನು ಒಬ್ಬನೇ ಅವನೇ ಭಗವಂತ.*
*ಅವನು ಮಂಗಳಪ್ರದ*.
*ಅಂತಹಶ್ರೀ‌ಮದ್ ಭಾಗವತ ವನ್ನು ನಿತ್ಯ ಶ್ರವಣ, ಪಠಣ ಮಾಡೋಣ*
ಮುಂದಿನ ಭಾಗ ನಾಳೆ..
🙏ಶ್ರೀ ಕೃಷ್ಣಾರ್ಪಣ ಮಸ್ತು🙏
*ಹಾಳು ಹರಟೆಯಾಡಿ ಮನವ* |
*|ಬೀಳು ಮಾಡಿ ಕೊಳ್ಳಲು ಬೇಡಿ||ಏಳು ದಿನದ ಕಥೆಯು ಕೇಳಿ|ಏಳಿರೋ ವೈಕುಂಠಕೆ|*
🙏ಶ್ರೀ ಕಪಿಲಾಯ ನಮಃ🙏
[06/09, 7:22 PM] vijayavitthala blr: *||ಪಿಬತ ಭಾಗವತಂ ರಸಮಾಲಯಂ||*

🙏ಶ್ರೀ ಕಪಿಲಾಯ ನಮಃ🙏[07/09, 4:02 AM] vijayavitthala blr: *||ಬಿಡದೆ ರಮಾಕಳತ್ರನ ದಾಸ ವರ್ಗಕೆ ನಮಿಪೆ ಅನವರತ||*
*ಇಂದು ಬಾಗಲಕೋಟೆಯ ಶ್ರೀ ಪ್ರಸನ್ನ ವೆಂಕಟ ದಾಸರ ಆರಾಧನೆಯ ಪುಣ್ಯ ದಿನ.*
ಕಾಖಂಡಕಿ ಮನೆತನದ,ಕಾಶ್ಯಪ ಗೋತ್ರದ ಶ್ರೀ ನರಸಪ್ಪಯ್ಯ ನವರು ಹಾಗು ಶ್ರೀ ಮತಿ ಲಕ್ಷ್ಮೀ ಬಾಯಿಯವರ ಎರಡನೆಯ ಮಗನಾಗಿ ನಮ್ಮ ಕಥಾನಾಯಕರ ಜನನ.
ಶ್ರೀನಿವಾಸ ಅವರ ಮನೆತನದ ದೈವ ಹಾಗಾಗಿ ಮಗುವಿಗೆ ವೆಂಕಟೇಶ ಎಂದು ನಾಮಕರಣ ಮಾಡಿದರು.
ವೆಂಕಟೇಶ ಜನಿಸಿದ ಕೆಲ ದಿನಗಳಲ್ಲಿ ತಂದೆ ತಾಯಿ ಇಬ್ಬರು ವೈಕುಂಠ ವಾಸಿಗಳಾಗುತ್ತಾರೆ.
ಮನೆಯ ಜವಾಬ್ದಾರಿ ಅವರ ಅಣ್ಣನವರ ಮೇಲೆ ಬೀಳುತ್ತದೆ. ಹಾಗಾಗಿಇವರ ಕಡೆ ಅವರ ಲಕ್ಷ ಬೀಳುವದಿಲ್ಲ.
ಕೇವಲ ವೆಂಕಟೇಶ ಸ್ತೋತ್ರ ಬಿಟ್ಟರೆ ಬೇರೆ ಮಂತ್ರ ಗೊತ್ತಿಲ್ಲ.
ಸಮಾಜದ ಜನರು ಇವನೊಬ್ಬ ನತದೃಷ್ಟ,ಇವನು ಹುಟ್ಟಿ ತಂದೆ ತಾಯಿಯರನ್ನು ಬೇಗನೆ ಕಳುಹಿಸಿದ ಅನ್ನುವ ನಿಂದನೆ ಚುಚ್ಚು ಮಾತುಗಳು ನಮ್ಮ ವೆಂಕಟೇಶನಿಗೆ.
ಹೀಗಾಗಿ ಯಾರಿಂದಲೂ ಕಳಕಳಿಯ ಮಾತುಗಳು,ಆದರ ಪ್ರೀತಿ, ಸಿಗಲಿಲ್ಲ.
ಅಣ್ಣನ ಕೈ ಹಿಡಿದು ಬಂದ ಅತ್ತಿಗೆ ಸಹ ಅದೇ ಮನೋಭಾವ.
ತಬ್ಬಲಿ ಅನ್ನುವ ಕರುಣಾ ಇಲ್ಲದೆ ದರ್ಪದಿಂದ ಕೆಲಸ ಹೇಳಿ ಮಾಡಿಸುವ ಮನೋಭಾವ.
ಉದಯಕ್ಕೆ ಎದ್ದು ದನ ಕರುಗಳನ್ನು ಹೊಡೆದು ಕೊಂಡು ಹೋಗಿ,ಅಲ್ಲಿ ಘಟಪ್ರಭಾ ನದಿಯಲ್ಲಿ ಸ್ನಾನ,ಸಂಧ್ಯಾವಂದನೆ, ಮತ್ತು ಜೊತೆಯಲ್ಲಿ ಅಣ್ಣ ಹಾಗು ಅತ್ತಿಗೆಯ ಬಟ್ಟೆಗಳನ್ನು ಒಗೆದುಕೊಂಡು ಬರುವ ಕಾರ್ಯ.
ಹೀಗೆ ದಿನಗಳು ಸಾಗಿದವು.
ನಿತ್ಯ ಭಗವಂತನಿಗೆಗ ಪ್ರಾರ್ಥನೆ *ಸ್ವಾಮಿ! ಈ ನನ್ನ ಕಷ್ಟ ಜೀವನವನ್ನು ನೀನು ನೋಡಿಯು ನೋಡಲಾರದವನಂತೆ ಯಾಕೆ ಇದ್ದೀ?.ಅನುಗ್ರಹ ಮಾಡು ಅಂತ* ಅವನಲ್ಲಿ ಪ್ರಾರ್ಥನೆ ಮಾಡುತ್ತಾ ಇರುತ್ತಾರೆ.
ದಯಾಳು ಪರಮಾತ್ಮ ಇವರನ್ನು ಪರೀಕ್ಷೆ ಮಾಡಲು ಒಂದು ಘಟನೆಯನ್ನು ನಿರ್ಮಾಣ ಮಾಡುತ್ತಾನೆ.
ಒಂದು ದಿನ ವೆಂಕಣ್ಣ ದನಗಳನ್ನು ಮೇಯಿಸಿಕೊಂಡು ಮಧ್ಯಾಹ್ನದ ಸಮಯದಲ್ಲಿ ಮನೆಗೆ ಬಂದ.ಬಿಸಿಲಿನ ತಾಪದಿಂದ ಬಹಳ ಬಾಯಾರಿಕೆ ಆಗಿರುತ್ತದೆ.
*ವೈನಿ!!.... ಬಹಳ ಬಾಯಾರಿಕೆ ಆಗ್ಯಾದಾ,ಕುಡಿಲಕ್ಕೆ ಸ್ವಲ್ಪ ಮಜ್ಜಿಗೆ ಕೊಡ್ರಿ ಅಂತ* ಕೇಳುತ್ತಾನೆ.
ಅವನ ದುರ್ದೈವ !!
ಮಜ್ಜಿಗೆ ಇಲ್ಲ ಅಂತ ಹೇಳದೆ ಅವನ ವೈನಿ ಬಹಳ ಬಿರುಮಾತುಗಳನ್ನು ಆಡುತ್ತಾಳೆ..
*ಏನೋ!!! ವೆಂಕ್ಯಾ ಇವಾಗ ಕುಡಿಲಿಕ್ಕೆ  ತಣ್ಣಂದು ಮಜ್ಜಿಗೆ ಬೇಕು,ಅಂತೀ. ಆಮೇಲೆ ಹೆಂಡತಿ ಬೇಕೇನು?* ಅಂತ ನಿಷ್ಟೂರವಾದ ಮಾತು ಬರುತ್ತದೆ.
*ಯಾಕ !!ವೈನಿ. ಹಂಗ ಯಾಕ ಹೇಳುತ್ತಿರಿ. ಮನೆಯಲ್ಲಿ ಆಕಳ ಸಾಕಷ್ಟು ಅವ.ಇಷ್ಟು ಹಾಲು ಕೊಡುತ್ತವೆ. ಒಂಚೂರು ಮಜ್ಜಿಗೆ ಮನೆಯಲ್ಲಿ ಇಲ್ಲವೇನು..?? ಅಂತ ಕೇಳಿದಾಗ*
ಅವರ ವೈನಿ ಇನ್ನೂ ಬಹಳ ಬಿರುಸು ಮಾತುಗಳನ್ನು ಆಡಿ
*ಮಜ್ಜಿಗೆಯನ್ನು ತಂದು ಅವನ ಮುಂದೆಯೆ ಕಲಗಚ್ಚುಗೆ ಹಾಕುತ್ತಾಳೆ*.ಅದನ್ನು ಕಂಡು *ಹಾಗೇ ಯಾಕೆ ಮಾಡಿದ್ದರಿ ವೈನಿ? ಕಲಗಚ್ಚುವಿಗೆ ಯಾಕ ಮಜ್ಜಿಗೆ ಹಾಕಿದ್ದು* ಅಂತ ಕೇಳಿದಾಗ
 ಅದಕ್ಕೆ ಅವರ ವೈನಿ
*ಕಲಗಚ್ಚುಗೆ ಹಾಕಿದರೆ ಕುಡಿದು ಅವು ಹಾಲು ಅದರು ಕೊಡುತಾವಾ..ನಿಂಗ ಕೊಟ್ಟರ ಏನು ಉಪಯೋಗ?? ನಿನ್ನ ಸೇವೆ ಮಾಡಿ ನಂಗ ಸಾಕ್ಯಾಗ್ಯದ,ಹಾಲು ಮಜ್ಜಿಗೆ ಕುಡಿದು ಅರಾಮ ಇರಬೇಕು ಅಂತ ಅಂದುಕೊಂಡಿಯೇನು??*.ಹೀಗೆ ಮಾತನಾಡಿ ದಾಗ
ಮನಸ್ಸು ಬೇಸರವಾಗಿ ಅವರು ಹೇಳುತ್ತಾರೆ. *ವೈನಿ!ನಾನು ಮನೆ ಬಿಟ್ಟು ತಿರುಪತಿ ಗೆ ಹೋಗ್ತೀನಿ. ಅಣ್ಣ ಊರಿನಲ್ಲಿ ಇಲ್ಲ. ಬಂದ ಮೇಲೆ ಹೇಳ್ರಿ* ಅಂತ ಹೇಳುತ್ತಾನೆ.
*ಹೋದರೆ ಹೋಗು!! ಅಂಜಿಕೆ ತೋರಿಸಬೇಡ.*.
*ಅದೇನು ನಿಮ್ಮಪ್ಪನ ಮನೆ ಏನು??* ಅಂತ ವೈನಿ ಅಂದರು ಸಹ, ಅವರಿಗೆ ನಮಸ್ಕರಿಸಿ 
*ಜಗತ್ತಿನ ತಂದೆ ಅವನು ಅವನ ಮನೆಗೆ ಹೋಗಿ ಅವನಿಗೆ ನನ್ನ ಕಷ್ಟ ಹೇಳಿಕೊಂಡು ದಾರಿ ತೋರಿಸು ಸ್ವಾಮಿ ಅಂತ ಕೇಳುತೀನಿ ಅಂತ ಅಂದುಕೊಂಡು* ಮನೆ ಬಿಟ್ಟು ತಿರುಪತಿ ಗೆ ಹೊರಟಿದ್ದ ಯಾತ್ರೆ ಮಾಡುವವರ ಜೊತೆಯಲ್ಲಿ ತಾನು ಹೊರಡುವನು.
ತಿರುಪತಿ ಸೇರಿದ ಮೇಲೆ ಸ್ವಾಮಿ ಪುಷ್ಕರಣಿ ಸ್ನಾನ,ವರಾಹ ದೇವರ ದರುಶನ, ನಂತರ ಜನರ ಗದ್ದಲದ ನಡುವೆ ಶ್ರೀನಿವಾಸನ ದರುಶನ ಮಾಡುತ್ತಾರೆ.
ಅವನ ಮುಂದೆ ಸಾಷ್ಟಾಂಗ ನಮಸ್ಕಾರ ಮಾಡಿ 
*ದೇವಾ! ನನ್ನಂಥ ಅನಾಥ ನನ್ನು ಯಾಕೆ ಹುಟ್ಟಿಸಿದಿ!! ನನ್ನ ಉದ್ದಾರ ಮಾಡು* ಅಂತ ಕೇಳಿಕೊಂಡಾಗ..
*ಶ್ರೀನಿವಾಸದೇವರು ಪ್ರತ್ಯಕ್ಷವಾಗಿ ಅವರ ನಾಲಿಗೆಯ ಮೇಲೆ  ಪ್ರಸನ್ನ ವೆಂಕಟ ಅಂತ ಬೀಜಾಕ್ಷರಗಳನ್ನು ಬರೆದು ಇನ್ನೂ ಮುಂದೆ ಪ್ರಸನ್ನ ವೆಂಕಟ ಎಂಬ ಹೆಸರಿನಿಂದ ಹರಿದಾಸನಾಗು ಎಂದು ಅಜ್ಞಾಪಿಸುವ..*
*ಸಾಕ್ಷಾತ್ ಭಗವಂತ ನಿಂದ ಅಂಕಿತ ಪಡೆದ ಮಹಾನುಭಾವರು.*.
ಭಗವಂತನ ದಿವ್ಯ ರೂಪವನ್ನು ಕಂಡು ದಾಸರು 
*ದೇವಾ!! ದಯಾನಿಧೆ!!* *ಪ್ರಭೋ! ನನ್ನ ತಪ್ಪು ಗಳನ್ನು ನೋಡದೇ ಬಂದೆಯಾ* ಅಂತ ಹೇಳಿ ಭಕ್ತಿ ಯಿಂದ
*ತಪ್ಪು ನೋಡದೇ ಬಂದೆಯಾ |ಎನ್ನಯ ತಂದೆ*
*ಅಪ್ಪ ತಿರುವೆಂಗಳೇಶ ನಿರ್ದೋಷನೆ||* ಅನ್ನು ವ ಪದವನ್ನು ರಚನೆಯನ್ನು ಮಾಡುತ್ತಾರೆ.
*ಸಣ್ಣ ವಯಸ್ಸಿನಲ್ಲಿ ಯಾವುದೇ ಕಠಿಣ ತಪಸ್ಸು ಇಲ್ಲದೇ ಪರಮಾತ್ಮನನ್ನು ಸಾಕ್ಷಾತ್ಕಾರ ಮಾಡಿಕೊಂಡ ಮಹಾನುಭಾವರು..*.
ಭಗವಂತನ ಅನುಗ್ರಹದಿಂದ ಅನೇಕ ಕೃತಿಗಳನ್ನು ರಚನೆಯನ್ನು ಮಾಡಿದ್ದಾರೆ.ತಿರುಗಿ ತಮ್ಮ ಊರಿಗೆ ಬರುವ ಸಮಯದಲ್ಲಿ ಅಲ್ಲಿನ ಅರ್ಚಕರಿಗೆ ಸ್ವಾಮಿ ಸ್ವಪ್ನದಲ್ಲಿ ಬಂದು ಹೇಳುತ್ತಾನೆ.
*"ನನ್ನ ಗರ್ಭಗುಡಿಯಲ್ಲಿ ಒಂದು ಗಂಟಿದೆ.ಅದರಲ್ಲಿ ನನ್ನ ಪ್ರತಿಮೆ, ಜೊತೆಯಲ್ಲಿ ಶ್ರೀದೇವಿ, ಭೂದೇವಿ ಸಹಿತವಾಗಿ ಇದ್ದೇನೆ.ಮತ್ತು ಒಂದು  ತಾಳ, ಗೋಪಾಳ ಬುಟ್ಟಿ  ಹಾಗು ತಂಬೂರಿ ಯನ್ನು ಅವನಿಗೆ ಕೊಡತಕ್ಕದ್ದು.ನನ್ನ ದಾಸ ಅವನು. ಪ್ರಸನ್ನ ವೆಂಕಟ ಎನ್ನುವ ಅಂಕಿತವನ್ನು ಕೊಟ್ಟಿದ್ದೇನೆ.ವಿಶೇಷವಾಗಿ ಮರ್ಯಾದೆಯಿಂದ ಅವನನ್ನು ಸತ್ಕಾರ ಮಾಡಿ ಕಳುಹಿಸಿ"* ಅಂತ ಅಜ್ಞಾಪಿಸಲು ಅದೇ ರೀತಿ ಯಲ್ಲಿ ಮಾಡುತ್ತಾರೆ.
ನಂತರ ಬಾಗಲಕೋಟೆ ಬಂದಾಗ ಅವರ ವೈನಿಗೆ ನಮಸ್ಕಾರ🙏 ಮಾಡುತ್ತಾರೆ. *ನೀವೆ ನನ್ನ ಗುರು.ಅಂದು ನೀವು ಮಜ್ಜಿಗೆ ಕೊಟ್ಟಿದ್ದರೆ ನಾ ಕುಡಿದು ಇಲ್ಲಿ ಇರುತ್ತಿದ್ದೆ. ನಂಗ ಭಗವಂತನ ಅನುಗ್ರಹ ಆಗುತ್ತಾ ಇರಲಿಲ್ಲ. ಮಜ್ಜಿಗೆ ಕೊಡದೇ ಇದ್ದರಿಂದ ಅವನ ಅನುಗ್ರಹ ವಾಯಿತು* ಎಂದು ಹೇಳುತ್ತಾರೆ.
ಅನೇಕ ಕೃತಿಗಳನ್ನು ರಚನೆಯನ್ನು ಮಾಡಿ ಭಗವಂತನ ಅನುಗ್ರಹದಿಂದ ಅನೇಕ ಮಹಿಮೆಯನ್ನು ಅವರು ತೋರಿದ್ದಾರೆ.
*ರುದ್ರಾಂಶರು ಅನ್ನುವದು ಅನೇಕ ಜ್ಞಾನಿಗಳ ವಾಣಿ.*
*ಅಂದು ಭಾದ್ರಪದ ಶುದ್ಧ ಏಕಾದಶಿ. ದಾಸರು ಶ್ರೀ ಹರಿಯ ಧ್ಯಾನ ದಲ್ಲಿ ಮೈಮರೆತು ಕುಳಿತಾಗ..* *ಬಾಲಕೃಷ್ಣನ ರೂಪದಲ್ಲಿ ಭಗವಂತ ಬಂದಿದ್ದಾನೆ.ಅವನ ಕಾಲ್ಗೆಜ್ಜೆಯ ನಾದ,ಕೊಳಲ ಧನಿ ಅವನ ಸುಂದರ ರೂಪವನ್ನು ಕಂಡು ದಾಸರು*👇
*ದಾರೋ ನೀ ಚಿನ್ನ ದಾರೋ*
*ಕಾರು ರಾತ್ರಿ ಯೊಳೆಮ್ಮಗಾರಕ್ಕೆ ಬಂದವ ದಾರೋ||*
ಅಂತ ಈ ಪದ್ಯವನ್ನು ರಚಿಸಿ ತಮ್ಮ ಪ್ರಾಣವನ್ನು ಅವನ ಪಾದಗಳಲ್ಲಿ ಸಮರ್ಪಣೆ ಮಾಡಿದ್ದಾರೆ.
*ನವ ವಿಧ ಭಕ್ತಿ ಯಲ್ಲಿ ಆತ್ಮ ನಿವೇದನೆ ಸಹ ಬರುತ್ತದೆ.*.
ಈ ಪ್ರಕಾರ ದಾಸರು ದೇಹತ್ಯಾಗ ಮಾಡಿದ ದಿನದಂದು ಅಂದಿನಿಂದ ಇಂದಿನವರೆಗು ದಾಸರ ವಂಶಸ್ಥರು, ಬಂಧುಗಳು,,ದಾಸರ ಭಕ್ತರು ದಶಮಿ ದಿವಸ ಪೂರ್ವ ಆರಾಧನೆ, ದ್ವಾದಶಿ ಮಧ್ಯ ಹಾಗು ಉತ್ತರ ಆರಾಧನಾ ಮಾಡುತ್ತಾರೆ. ಇಂದಿಗೂ ಬಾಗಲಕೋಟೆಯಲ್ಲಿ.
*ಇಂದಿಗೂ ಅವರ ಮನೆಯಲ್ಲಿ ದಾಸರ ತಂಬೂರಿ, ತಾಳ ಗೋಪಳ ಬುಟ್ಟಿ ಹಾಗು ಅವರು ಪೂಜೆ ಮಾಡಿದ ಪ್ರತಿಮೆಗಳನ್ನು ಸಹ ನೋಡಬಹುದು..*.
ಇವರ ಚರಿತ್ರೆ ಇಂದ ನಮಗೆ ತಿಳಿದು ಬರುವದು 
 ಇಷ್ಟೇ..
*ಜೀವನದಲ್ಲಿ ಕಷ್ಟ ಗಳು ಬರುವದು ಸ್ವಾಭಾವಿಕ. ಎಂತಹ ಕಠಿಣ ಪರಿಸ್ಥಿತಿ ಬಂದರು ಸಹ ಭಗವಂತ ಹೊರತಾಗಿ ಇನ್ನಿತರರು ಇಲ್ಲ ನೀನೆ ಗತಿ ಕೃಷ್ಣ ಅಂತ ಅವನಲ್ಲಿ ಶರಣಾಗತನಾದರೇ,ಅವಾಗ ಅವನು ನಮ್ಮ ರಕ್ಷಣೆ ಭಾರ ಹೊರುವನು..*.
*ಎಲ್ಲಾ ಹರಿದಾಸರು ಭಗವಂತನಿಗೆ ಶರಣುಹೋದವರು.ಹಾಗಾಗಿ ತನ್ನ ಭಕ್ತರಿಗೆ ತಾನೇ ಒಲಿದು ಬಂದ ಸ್ವಾಮಿ.*
*ಇಂತಹ ಪುಣ್ಯ ದಿನದಲ್ಲಿ ಶ್ರೀ ಪ್ರಸನ್ನ ವೆಂಕಟ ದಾಸರ ಸ್ಮರಣೆ ಮಾಡುತ್ತಾ ಅವರ ಅಂತರ್ಯಾಮಿ ಯಾದ ನಮ್ಮ ಎಲ್ಲರ ದೈವ ಆ ಶ್ರೀನಿವಾಸ ನಿಗೆ ಅವನ ಪ್ರೇರಣೆಯಿಂದ ಎರಡು ನುಡಿಗಳನ್ನು ಬರೆದು ನನ್ನ ಅಳಿಲು ಸೇವೆ ಯನ್ನು ಸಮರ್ಪಣೆ ಮಾಡುತ್ತೇನೆ.*
🙏ಶ್ರೀ ಕೃಷ್ಣಾರ್ಪಣ ಮಸ್ತು🙏
*ನಿನ್ನವ ನಿನ್ನವ ಶ್ರೀನಿವಾಸ|*
*ನಾ ಅನ್ಯವ ಅರಿಯೆನೋ* *ಶ್ರೀನಿವಾಸ|*
*ಅಯ್ಯಾ ಮನ್ನಿಸೊ ತಾಯ್ತಂದೆ ಶ್ರೀನಿವಾಸ|*
*ಪ್ರಸನ್ನ ವೆಂಕಟಾದ್ರಿ ಶ್ರೀನಿವಾಸ||*
🙏ಶ್ರೀ ಕಪಿಲಾಯ ನಮಃ🙏
[07/09, 4:06 AM] vijayavitthala blr: *||ಬಿಡದೆ ರಮಾಕಳತ್ರನ ದಾಸ ವರ್ಗಕೆ ನಮಿಪೆ ಅನವರತ||*

Post a Comment

Previous Post Next Post