*|ಪಿಬತ ಭಾಗವತಂ ರಸಮಾಲಯಂ||*Day 12....13

[08/09, 10:37 AM] vijayavitthala blr: *|ಪಿಬತ ಭಾಗವತಂ ರಸಮಾಲಯಂ||*
Day 12.
ದ್ವೀತಿಯ ಸ್ಕಂದ ದಲ್ಲಿ ಬರುವ ಭಗವಂತನ ವಿರಾಟ್ ರೂಪದ ವರ್ಣನೆಯನ್ನು ಶ್ರೀ ಶುಕಮುನಿಗಳು ಪರೀಕ್ಷಿತ ಮಹಾರಾಜನಿಗೆ ಹೇಳುತ್ತಾರೆ.
ನಿನ್ನೆಯ ದಿನ ಭಗವಂತನ ದೇಹದಲ್ಲಿ ಆಶ್ರಯಗೊಂಡಂತಹ ಹದಿನಾಲ್ಕು ಲೋಕಗಳ ಬಗ್ಗೆ ತಿಳಿದುಕೊಳ್ಳುವ ಪ್ರಯತ್ನ ಮಾಡಿದ್ದೇವೆ.
*ಅವನ ಪಾದದಿಂದ ಆರಂಭ ಮಾಡಿ ಶಿರಸ್ಸುವರೆಗೆ ಹದಿನಾಲ್ಕು ಲೋಕಗಳನ್ನು ಪರಮಾತ್ಮನು ಹೊಂದಿದ್ದಾನೆ..*
ಭಗವಂತನ ವಿರಾಟ್ ರೂಪದ ಬಗ್ಗೆ ಇನ್ನೂ ಹೆಚ್ಚಿನ ವಿಷಯವನ್ನು, ಅವನ ದೇಹದಿಂದ ಹುಟ್ಟಿದ ದೇವತೆಗಳ ಬಗ್ಗೆ, ಅವನ ದೇಹದ ವರ್ಣನೆ ,ಅಲ್ಲಿ ಯಾವ ದಿಕ್ಕಿನಲ್ಲಿ ಯಾವ ಯಾವ ದೇವತೆಗಳು ಅವನ ಉಪಾಸನೆ ಹೇಗೆ ಮಾಡುವರು ಅನ್ನುವದರ ಬಗ್ಗೆ ವಿಸ್ತಾರವಾದ ವಿವರಣೆ ತಿಳಿಸುವ ಪ್ರಯತ್ನ..
ಅದನ್ನು
*ಶ್ರೀಮೊದಲಕಲ್ಲು ಶೇಷದಾಸರು ತಮ್ಮ  ಜ್ಞಾನ ಯಜ್ಞ ಸುಳಾದಿ ಯಲ್ಲಿ* ಪರಮಾತ್ಮನ ರೂಪಚಿಂತನೆ ಬಗ್ಗೆ ಹೇಳಿದ್ದಾರೆ.
ಇದರ ಬಗ್ಗೆ ಸ್ವಲ್ಪ ತಿಳಿಯೋಣ. 
||ತ್ರಿವಿಡಿ ತಾಳ.||
*ಮೇಲು ಭಾಗದಲ್ಲಿ ಶಿರಸ್ಸಿನಲ್ಲಿಗೆ*
*ದ್ವಿದಶಾಂ|ಗುಲಿ ಮೇಲೆ ದ್ವಿದಶ ದಳಯುಕ್ತ|*
*ಕೀಲಾಜಲವುಂಟು ಚಂದ್ರಪ್ರಕಾಶದಂತೆ|* *ಮೂಲರೂಪನಾದ ವಾಸು*
*ದೇವನ|ಆಲಯವೆನಿಪುದು* *ಮುಕ್ತಾ ಮುಕ್ತಾರಿಂದ| ವಾಲಗಗೊಳುತಿಪ್ಪ ಸರ್ವ ಸಾಕ್ಷಿಯಾಗಿ|||*
*✍️*ಪರಮಾತ್ಮನ ಶಿರಸ್ಸಿನ ಮೇಲೆ ಕಿರೀಟ ಇರುವಲ್ಲಿ ೧೨ ದಳದ ಕಮಲವಿದೆ..*
*ಅಂದರೆ ನಮ್ಮ ತಲೆಯ ಮೇಲೆ ನಮ್ಮ ಹಸ್ತವನ್ನು ನೇರವಾಗಿ ಇಟ್ಟುಕೊಂಡಾಗ ಕಿರುಬೆರಳಿನ ಮೇಲಿನದು. ಅಲ್ಲಿ ಹನ್ನೆರಡು ದಳದ ಕಮಲವಿದೆ.*
*ಇದೆ ವೈಕುಂಠಲೋಕ.* *ಶ್ರೀವಾಸುದೇವ ನಾಮಕ ಭಗವಂತ ಮುಕ್ತಾಮುಕ್ತರಿಗೆ ನಿಯಾಮಕನಾಗಿದ್ದಾನೆ.*
********
||ಅಟ್ಟತಾಳ||
*ಸತ್ಯಲೋಕವು ಶೀರ್ಷದಲ್ಲಿ ಇಪ್ಪದು ಕೇಳಿ|*
*ಸತ್ಯಲೋಕಾಧಿಪನು ಸಹಸ್ರ ರೂಪನ್ನ|*
*ಭಕ್ತಿಯಿಂದಲಿ ಭಜಿಪ ಸಾಸಿರ|*
*ಕೇಸರ ಯುಕ್ತವಾದ ಕಮಲ* *ಮಧ್ಯದಿ ಪೊಳೆವನ್ನ|*
*ಕೃತ್ತಿವಾಸನು ಮೊದಲಾದ ಗೀರ್ವಾಣರು| ಭೃತ್ಯರಾಗಿ ಸೇವೆ ಮಾಳ್ಪರು ಕ್ರಮದಿಂದ||*
......
*✍️ಪರಮಾತ್ಮನ ಶಿರಸ್ಸಿನಲ್ಲಿ ಸಾವಿರದಳದ ಕಮಲವಿದೆ.*
*ಇದೆ ಸತ್ಯಲೋಕ.* *ಶ್ರೀಪುರುಷನಾಮಕ ಭಗವಂತ ಇಲ್ಲಿ ನಿಯಾಮಕ. ಈ ಪರಮಾತ್ಮನನ್ನು ಬ್ರಹ್ಮಾದಿ, ಋಜುಗಳು ಪೂಜೆ ಮಾಡುತ್ತಾರೆ. ಪ್ರತಿಯೊಂದು ದಳಕ್ಕೂ ಭಗವಂತನ ಒಂದೊಂದು ವಿಶ್ವಾದಿ ರೂಪಗಳಿವೆ.*
*ಹುಬ್ಬಿನ ಮದ್ಯದಲ್ಲಿ 2 ದಳದ ಕಮಲ ಇದೆ.*
*ಇದೇ ತಪೋಲೋಕ..*
*ಇಲ್ಲಿ ಶ್ರೀಬ್ರಹ್ಮ ಮತ್ತು ಶ್ರೀ ವಾಯು ದೇವರುಗಳು ಮತ್ತು ಶ್ರೀ ಗರುಡ ದೇವರು ನಿಯಾಮಕರು. ಶ್ರೀ ಕೃಷ್ಣ ಪರಮಾತ್ಮನು ಇಲ್ಲಿ ಸಜ್ಜನರಿಂದ ಪೂಜೆಗೊಳ್ಳುತ್ತಾನೆ.*
*ಪರಮಾತ್ಮನ ಕಿರುನಾಲಿಗೆಯಲ್ಲಿ 16 ದಳದ ಕಮಲ ಇದೆ.*
*ಇದೇ ಜನಾಲೋಕ.*
*ಇಲ್ಲಿ ವಿಶೇಷವಾಗಿ ಶ್ರೀ ಲಕ್ಷ್ಮಿ ನಾರಾಯಣರನ್ನು ಪೂಜೆ ಮಾಡುತ್ತಾರೆ.*
*ಪರಮಾತ್ಮನ ಉರುಸ್ಸು(ವಕ್ಷಸ್ಥಳ ,ಎದೆ)ದಲ್ಲಿ 12 ದಳದ ಕಮಲ ಇದೆ. ಇದೇಮಹರ್ಲೋಕ. ಇಲ್ಲಿ ಶ್ರೀ ಮಹರುದ್ರದೇವರು ವಿಶೇಷವಾಗಿ ಶ್ರೀನರಸಿಂಹದೇವರನ್ನು ವಿಶೇಷವಾಗಿ ಪೂಜಿಸುತ್ತಾರೆ.*
*ಪರಮಾತ್ಮನ ಹೃದಯದಲ್ಲಿ ಇರುವುದೇ ಸ್ವರ್ಗ ಲೋಕ.*
*ಇಲ್ಲಿ 8 ದಳದ ಕಮಲಗಳು ಇವೆ. ಇಲ್ಲಿ ಮೂಲೇಶ ನಾಮಕ ಶ್ರೀನಾರಾಯಣ, ಆತನ ಪಾದಮೂಲದಲ್ಲಿ ಮುಖ್ಯಪ್ರಾಣ ದೇವರು ನಿರಂತರ ಪೂಜೆ ಮಾಡುತ್ತಿರುತ್ತಾರೆ.*
 *ಪೂರ್ವದಿಕ್ಕಿನಲ್ಲಿ ಪುಷ್ಕರಾಧ್ಯರು, ದಕ್ಷಿಣದಿಕ್ಕಿನಲ್ಲಿ ಋಷಿಗಳು, ಪಶ್ಚಿಮದಿಕ್ಕಿನಲ್ಲಿ ಪಿತೃಗಳು ಮತ್ತು ಉತ್ತರದ ದಿಕ್ಕಿನಲ್ಲಿ ಗಂಧರ್ವರು, ಊರ್ಧ್ವದಿಕ್ಕಿನಲ್ಲಿ ರುದ್ರಾದಿಗಳು ಬಂದು ಪರಮಾತ್ಮನನ್ನು ಸೇವಿಸುತ್ತಾರೆ.*
*ಇಲ್ಲೇ ಚಂದ್ರಮಂಡಲ. ಸೂರ್ಯಮಂಡಲ, ಇಲ್ಲಿ ಶ್ರೀಭೂದುರ್ಗಾ ಸಮೇತನಾದ ಶ್ರೀ ಪ್ರಾಜ್ನ್ಯನಾಮಕ ಪರಮಾತ್ಮ ಆಗ್ರೆಶ ಎಂಬ ನಾಮದಿಂದ ಇದ್ದಾನೆ ಎಂದು ಚಿಂತಿಸಬೇಕು.*
*ನಾವು ಬಿಂಬ ಮೂರ್ತಿ ಚಿಂತನೆ ಮಾಡುವಾಗ ಇದನ್ನೇ ಮಾಡಬೇಕು.*
*ಪರಮಾತ್ಮನ ನಾಭಿಯಲ್ಲಿ 6 ದಳದ ಕಮಲ ಇದೆ.* *ಭುವರ್ಲೋಕ ನಿಯಾಮಕ ಶ್ರೀಗಣಪತಿ ಅಂತರ್ಗತ ಶ್ರೀವಿಶ್ವಂಭರ.ಮತ್ತು ಶ್ರೀವರಾಹರೂಪ ದಿಂದ ಈ ಭೂಮಂಡಲವನ್ನೇ ತಂದ ಪರಮಾತ್ಮ.*
*ಇಲ್ಲಿ ಶ್ರೀವಿಶ್ವಂಭರ, ಶ್ರೀ ಕೃಷ್ಣನ ಷಣ್ಮಹಿಶಿಯರು ಇದ್ದಾರೆ.ಶ್ರೀಪ್ರದ್ಯುಮ್ನ ರೂಪ ಇಲ್ಲಿ ನಿಂತಿದೆ.*
*ನಾಭಿಯಕೆಳಗೆ 4 ದಳದ ಕಮಲ.ಇಲ್ಲಿ ಭೂಲೋಕ. ಇಲ್ಲಿ ವೇದಾಭಿಮಾನಿಗಳು ಬೃಹಸ್ಪತಿ, ಬುಧ, ಚಂದ್ರ, ಶನೀಶ್ವರ, ಸಪ್ತಮರುತ್ತುಗಳು ಇಲ್ಲಿ ಇದ್ದಾರೆ. ಇವರಿಗೆಲ್ಲ ಶ್ರೀಅನಿರುದ್ಧರೂಪದಿಂದ ಪರಮಾತ್ಮ ದರ್ಶನ ಕೊಡುತ್ತಾನೆ.* 
*ಪರಮಾತ್ಮನ ತೊಡೆಗಳಿಂದ ಹಿಡಿದು ಪಾದದವರೆಗಿನ ಲೋಕಗಳಲ್ಲಿ ಅತಳ, ವಿತಳ, ಸುತಳ, ತಳಾತಳ, ಮಹಾತಳ, ರಸತಾಳ, ಪಾತಾಳ,ಲೋಕಗಳು* 
*ಇಲ್ಲಿಪರಮಾತ್ಮನ ವಿಶೇಷವಾದ ಶ್ರೀಅನಿರುದ್ಧ, ಶ್ರೀಪ್ರದ್ಯುಮ್ನ, ಶ್ರೀಸಂಕರ್ಷಣ, ಶ್ರೀವಾಸುದೇವ, ಶ್ರೀನಾರಾಯಣ, ಹಾಗು ಶ್ರೀವಾಮನ ರೂಪಗಳು.*
*ಹೀಗೆ ಪರಮಾತ್ಮನ 14 ಲೋಕಗಳಿಗೆ ಆಧಾರವಾದ ವಿರಾಟ್ ರೂಪ   ಚಿಂತನೆ ನಮಗೆ ಅನಂತ ಪುಣ್ಯಗಳನ್ನು ಕೊಡುತ್ತದೆ.*
*ಪ್ರಾತಃ ಕಾಲದಲ್ಲಿ ಅವಶ್ಯಕ ಚಿಂತನೆ ಇದನ್ನು ಮಾಡಲೇಬೇಕು.*
*ಇಡೀ ಬ್ರಹ್ಮಾಂಡವನ್ನು ಶ್ರೀಶೇಷದೇವರು ಧರಿಸಿದ್ದಾರೆ.ಅವರನ್ನು ಕೂರ್ಮರೂಪದ ಶ್ರೀವಾಯುದೇವರು ಹೊತ್ತಿರುವರು.*
*ಶ್ರೀ ಮುಖ್ಯಪ್ರಾಣದೇವರನ್ನು ಶ್ರೀಲಕ್ಷ್ಮೀದೇವಿಯು. , ಶ್ರೀಲಕ್ಷ್ಮಿದೇವಿಯನ್ನು ಕೂರ್ಮರೂಪದಿಂದ ಶ್ರೀವಿಷ್ಣುಪರಮಾತ್ಮ ಹೊತ್ತಿದ್ದಾನೆ.*
*ಪ್ರತಿಯೊಬ್ಬ ಜೀವಿಯನ್ನು ಪರಮಾತ್ಮ ಹೀಗೆ  ಜಗತ್ತನ್ನು ಹೊತ್ತಿದ್ದಾನೆ ಎಂದು ಚಿಂತನೆ ಮಾಡಬೇಕು. ಮತ್ತು ಪ್ರತಿಯೊಬ್ಬ ಮನುಷ್ಯರು ಈ ವಿರಾಟ್ರೂಪವನ್ನು ಚಿಂತಿಸಬೇಕು.*
ಮುಂದೆ  ದಾಸರು ಹೇಳುತ್ತಾರೆ.
👇👇
*ಧಾರಿತ್ರಿಯೊಳಗೆ ಇದ ತಿಳಿದ ಮನುಜನು|*
*ಮೃತ್ಯು ರೂಪವಾದ ಸಂಸಾರ ದೂರನು|*
*ಪಾರತ್ರಿಕವಾದ ಸುಖದಿ ನಿತ್ಯನು ಕಾಣೋ||*
....
*ಕರ್ತೃನೆನಿಪ ಗುರು ವಿಜಯವಿಠ್ಠಲ ರೇಯಾ| ಸತ್ಯವಾದ ಪದವಿ ಐದಿಪ ಶೀಘ್ರದಿ||*
***"
🙏ಶ್ರೀ ಕೃಷ್ಣಾರ್ಪಣ ಮಸ್ತು🙏
*ಆಗದೆನೆಗೆ ಅಬುಜನಾಭ| ಭಾಗವತವ ಕೇಳೆ ನಾನು|*
*ಹ್ಯಾಂಗ ನಾ ನಿನ್ನ ದಾಸನಾಗುವೆನು| ಭವ ನೀಗುವೆನು||*
🙏ಶ್ರೀಕಪಿಲಾಯ ನಮಃ🙏
[08/09, 10:42 AM] vijayavitthala blr: *|ಪಿಬತ ಭಾಗವತಂ ರಸಮಾಲಯಂ||*

[09/09, 6:07 AM] vijayavitthala blr: *|ಪಿಬತ ಭಾಗವತಂ ರಸಮಾಲಯಂ||*
Day 13
✍ನಿನ್ನೆಯ ದಿನ ಶ್ರೀಶುಕಮುನಿಗಳು ಪರಿಕ್ಷೀತ ರಾಜನಿಗೆ ಭಗವಂತನ ರೂಪವನ್ನು ವರ್ಣನೆ ಮಾಡುತ್ತಾ ಆ ನಂತರ ವೈರಾಗ್ಯ ವೆಂದರೇನು??ಹೇಗಿರಬೇಕು ಅಂತ ಹೇಳಿದ್ದಾರೆ.
ಮುಂದೆ ಹೇಳುತ್ತಾರೆ.
*ಎಷ್ಟು ದಿನ ನಮ್ಮ ಆಯಸ್ಸು ಕಳೆದಿದ್ದೇವೆ ಎನ್ನುವುದಕ್ಕಿಂತ ಎಷ್ಟು ದಿನ ನಾವು ಭಗವಂತನ ನಾಮ ಸ್ಮರಣೆ, ಮತ್ತು ಅವನ ಹಾಗು ಅವನ ಭಕುತರ ಸೇವೆಗೆ ಆ ಆಯುಸ್ಸು ಮತ್ತು ಕಳೆದ ದಿನಗಳು ಮತ್ತು ಸಮಯ ಉಪಯೋಗ ಮಾಡಿಕೊಂಡು ಇದ್ದೇವೆ ಎನ್ನುವದು ನಿಜವಾದ ಸಾಧನೆ.*
*ಅನೇಕ ವರ್ಷಗಳು ಹದ್ದು ಬದುಕಿದಂತೆ ಬದುಕಿ ಭಗವಂತನ ನಾಮ ಸ್ಮರಣೆ,ಅವನ ಸೇವೆ ಮಾಡದೇ ದಿನ, ವಾರ, ತಿಂಗಳು,  ವರ್ಷಗಳನ್ನು ಕಳೆಯುತ್ತಾ ಇದ್ದರೆ ಬದುಕಿದ್ದು ಪ್ರಯೋಜನ ಇಲ್ಲ.ಆದರು ಸಹ ಯಾವಾಗಲಾದರು ಒಮ್ಮೆ ನಮ್ಮ ಮನಸ್ಸಿನ ಒಳಗಡೆ ಭಗವಂತನ ಬಗ್ಗೆ ಕಿಂಚಿತ್ತೂ ಎಚ್ಚರಿಕೆ ಬಂದಾಗ ಅವನ ಸೇವೆ ಅವನ ಸ್ಮರಣೆ ಬಂದಾಗ ಸಮಯ ಅತಿ ಕಡಿಮೆ ಇದ್ದರು ಸಹ ಉತ್ತಮ ಕಾರ್ಯಗಳನ್ನು ಮಾಡಲು ವಿನಿಯೋಗ ಮಾಡಿಕೊಳ್ಳಲು ಬಹುದು ಎಂದು ಹೇಳುತ್ತಾರೆ.*
ಒಂದು ದೃಷ್ಟಾಂತ ಇಲ್ಲಿ ನೆನಪಿಗೆ ಕೊಡಬಹುದು..
 ಒಮ್ಮೆ ಶ್ರೀಮಾರ್ಕಂಡೇಯ ಮುನಿಗಳ ಆಶ್ರಮಕ್ಕೆ *ಶ್ರೀಪರಾಶರ ಮುನಿಗಳು ಬಂದಿದ್ದಾರೆ.ಏಳು ವರುಷದ ಬಾಲಕರು ಅವರು.*
*ಶ್ರೀಮಾರ್ಕಂಡೇಯ ಮುನಿಗಳು ಅವಾಗಲೇ ವಯೋ ವೃದ್ದರು.ಭಗವಂತನ ಅನುಗ್ರಹ ದಿಂದ ಅವರಿಗೆ ಇದ್ದ ಅಲ್ಪ ಆಯುಸ್ಸು ಕಳೆದು ಸಪ್ತಕಲ್ಪಗಳ ಕಾಲ ಆಯುಸ್ಸು ಪಡೆದವರು.ಅಲ್ಲದೇ ಭಗವಂತನ ಅನುಗ್ರಹದಿಂದ ಪ್ರಳಯ ಕಾಲದಲ್ಲಿ ಅವನ ದಿವ್ಯವಾದ ರೂಪ ವೈಭವವನ್ನು ನೋಡಿ ಆನಂದಪಟ್ಟವರು*.
*ಇಂತಹವರು ಶ್ರೀಪರಾಶರ ಮುನಿಗಳಿಗೆ ಸಾಷ್ಟಾಂಗ ನಮಸ್ಕಾರಮಾಡುತ್ತಾರೆ..*
ನೋಡುವವರಿಗೆ ವಿಚಿತ್ರ ಎನಿಸುವದು*.
*ವಯೋವೃದ್ದರಾದ ಶ್ರೀಮಾರ್ಕಂಡೇಯ ಮುನಿಗಳು ಬಾಲಕ ಪರಾಶರ ಮುನಿಗಳಿಗೆ ಎರಗಿ ಸಾಷ್ಟಾಂಗ ನಮಸ್ಕಾರ ಮಾಡುವದು  ಅಲ್ಲಿದ್ದವರಿಗೆ ವಿಚಿತ್ರ ವಾಗಿ ತೋರುವುದು.*
ಆಗ ಅವರು ಹೇಳುತ್ತಾರೆ. *ಅರಿಯದವರಿಗೆ ನಾನು ಹಿರಿಯನೆಂದು ತೋರಬಹುದು.ಜ್ಞಾನಿಗಳ ದೃಷ್ಟಿ ಯಲ್ಲಿ ನಾನು ಹಿರಿಯನಲ್ಲ.ಪರಾಶರರು ಹಿರಿಯರು".*
*ಕ್ಷಣ, ದಿನ ಕಳೆದರೆ ಸಾಕು ಆಯುಸ್ಸು ಬೆಳೆಯುತ್ತದೆ ಅಂತ ನಮ್ಮ ಭಾವನೆ. ಅದು ಎಷ್ಟು ನಿಜ.??*
*ಎಷ್ಟು ಕ್ಷಣಗಳು,ದಿನಗಳು, ನಾವು ಶ್ರೀಹರಿಯ ಸ್ಮರಣೆ ಯನ್ನು ಮಾಡುತ್ತಾ ಕಳೆದಿದ್ದೇವೆಯೋ ಆ ಕ್ಷಣ ಮತ್ತು ದಿನಗಳು ಅದನ್ನು ಜ್ಞಾನಿಗಳು ಕಲೆಹಾಕಿ ನಮ್ಮ ಆಯುಸ್ಸುಪರಿಗಣನೆಗೆ ತೆಗೆದುಕೊಳ್ಳುವರು.*
*ಶ್ರೀಹರಿಯ ಸ್ಮರಣೆ ಇಲ್ಲದ ಕ್ಷಣಗಳು ದಿನಗಳು ಬರಡು ಕ್ಷಣಗಳು.ಅಗಮ್ಯ ಮಹಿಮನಾದ ಭಗವಂತನ ನಾಮ ಮಹಿಮೆ ಮತ್ತು ಅವನ ಕುರಿತಾದ ಅತೀ ಅಲ್ಪ ಜ್ಞಾನ ಮುಂದೆ ಈ ದೀರ್ಘವಾದ ಆಯುಸ್ಸು ಏನೇನು ಬೆಲೆ ಇಲ್ಲ.*
*ಶ್ರೀಹರಿಯ ಸ್ಮರಣೆ ಇಂದ ಕಳೆದ ಕ್ಷಣಗಳು ಮಾತ್ರ ಸರ್ವಾರ್ಥಪ್ರದವಾಗುತ್ತವೆ.ಇದರಲ್ಲಿ ಯಾವುದೇ ಸಂದೇಹ ಇಲ್ಲ.ಬರಡಾದ ಕ್ಷಣಗಳನ್ನು ಜ್ಞಾನಿಗಳು ನಮ್ಮ ಆಯುಸ್ಸು ನಲ್ಲಿ ಪರಿಗಣನೆಗೆ ತೆಗೆದುಕೊಳ್ಳುವದಿಲ್ಲ.*
*ಈ ಅನುಸಂಧಾನ ಇಟ್ಟು ಕೊಂಡು ಬದುಕುವವನ ಬದುಕು ಬಂಗಾರದ ಬದುಕು.ಅವನೇ ವಯಸ್ಸಿನಲ್ಲಿ ಅಧಿಕ.ಅವನೇ ಎಲ್ಲರಿಗೂ ಹಿರಿಯ.ಶ್ರೀಹರಿಯ ಸೇವಕನಾದ ಅವನು ಸ್ವಯಂ ಹಿರಿಯ.ಅವನು ಗೌರವಕ್ಕೆ ಅರ್ಹನಾಗುತ್ತಾನೆ.*
*ಅಂತಹವರಿಗೆ ಮಾಡುವ ಅವಮಾನ,ನಿಂದನೆ,ನಮಗೆ ನೂರಾರು,ನೀಚ ಯೋನಿ ಗಳಿಗೆ,ಸಾವಿರಾರು ಬೇನೆಗಳಿಗೆ ಕಾರಣವಾಗುತ್ತದೆ.*
(ಇದಕ್ಕೆ ನಾವು ಅನೇಕ ಹರಿದಾಸರ ಜೀವನ ಚರಿತ್ರೆಯನ್ನು ನೋಡಬಹುದು)
*"ಪ್ರಕೃತ ಏಳು ವರ್ಷದ ನಿಮ್ಮ ಆಯುಸ್ಸು ನಲ್ಲಿ ನೀವು ಪ್ರತಿ ಕ್ಷಣವು ಬರಡಾಗಿಲ್ಲ.ಭಗವಂತನ ನಾಮ ಸ್ಮರಣೆ ಮಾಡುತ್ತಾ ಇದ್ದೀರಿ.ನಿಮ್ಮ ಆಯುಸ್ಸು ಸಫಲವಾಗಿದೆ.ಜ್ಞಾನಿಗಳು ದೃಷ್ಟಿ ಯಲ್ಲಿ ನೀವು ಹಿರಿಯರು.ನಾವು ಆಲಸಿಗಳು.ಸಾವಿರಾರು ವರ್ಷ ಬಾಳಿದರು ಹರಿಯನ್ನು ನೆನೆಯದೇ ಬಹಳ ವ್ಯರ್ಥವಾಗಿ ಕಾಲವನ್ನು ಕಳೆದಿದ್ದೇವೆ. ನಾವು ಭಗವಂತನ ನಾಮ ಸ್ಮರಣೆ ಅವನ ಸೇವೆ ಮಾಡಿದ ಕ್ಷಣಗಳ ಎಣಿಕೆಯನ್ನು ಮಾಡಿದರೆ ಐದು ವರ್ಷವಾದರು ತುಂಬುತ್ತದೆ ಇಲ್ಲವೋ ಗೊತ್ತಿಲ್ಲ. ಹೀಗಾಗಿ ನೀವೇ ಹಿರಿಯರು. ಹಾಗಾಗಿ ಭಕ್ತಿ ಯಿಂದ ನಿಮಗೆ ನಮಸ್ಕಾರ ಮಾಡಿದ್ದು ಹೊರತಾಗಿ ವ್ಯವಹಾರ ಕ್ಕಾಗಿ ಅಲ್ಲ"* ಅಂತ ಶ್ರೀಮಾರ್ಕಂಡೇಯ ಮುನಿಗಳು ಶ್ರೀಪರಾಶರ ಮುನಿಗಳ ಬಳಿ ಅರಿಕೆ ಮಾಡಿಕೊಳ್ಳುವ ರು.
  *ಶ್ರೀಮಾರ್ಕಂಡೇಯರು  ಭಗವಂತನ ರೂಪವನ್ನು ಕಂಡವರು.ಅವನಿಂದ ಸಪ್ತ ಕಲ್ಪಗಳ ಆಯುಸ್ಸು ಪಡೆದ ಅವರೇ ಹಾಗೇ ಹೇಳಿರಬೇಕಾದರೆ...*
*ಆ ಮಾತನ್ನು ಪರಿಗಣನೆಗೆ ತೆಗೆದುಕೊಂಡರೆ ನಮ್ಮ ಆಯುಸ್ಸು ಒಂದು ಗಂಟೆ ಅಥವಾ ಒಂದು ದಿನವು ಆಗಿರಲು ಸಾಧ್ಯ ವಿಲ್ಲ.ಇದು ಸ್ಪಷ್ಟವಾಗಿ ಕಾಣುತ್ತದೆ.*
ಮುಂದಿನ ಭಾಗ ನಾಳೆ..
🙏ಶ್ರೀ ಕೃಷ್ಣಾರ್ಪಣ ಮಸ್ತು🙏
*ಹಾಳು ಹರಟೆಯಾಡಿ ಮನವ |
|ಬೀಳು ಮಾಡಿ ಕೊಳ್ಳಲು ಬೇಡಿ|
|ಏಳು ದಿನದ ಕಥೆಯು ಕೇಳಿ|
|ಏಳಿರೋ ವೈಕುಂಠಕೆ||
🙏ಶ್ರೀ ಕಪಿಲಾಯ ನಮಃ🙏
[09/09, 7:05 AM] vijayavitthala blr: *|ಪಿಬತ ಭಾಗವತಂ ರಸಮಾಲಯಂ||*

Post a Comment

Previous Post Next Post