*||ಪಿಬತ ಭಾಗವತಂ ರಸಮಾಲಯಂ||*Day 21,22,23

*||ಪಿಬತ ಭಾಗವತಂ ರಸಮಾಲಯಂ||*
Day#23
✍ನಿನ್ನೆಯ ದಿನ ಲೋಕ ಕಂಟಕರಾದ ಹಿರಣ್ಯಾಕ್ಷ ಮತ್ತು ಹಿರಣ್ಯ ಕಶಿಪು ಜನನವಾದ ಬಗ್ಗೆ ತಿಳಿದು ಕೊಂಡೆವು.ಅವರ ಜನನವಾಗಲು ಆದ ಕಾರಣವೇನು ಎಂಬುದನ್ನು ಶ್ರೀಶುಕಮುನಿಗಳು ಪರೀಕ್ಷಿತ ರಾಜನಿಗೆ ಹೇಳುತ್ತಾರೆ.
ಒಮ್ಮೆ ವೈಕುಂಠ ಲೋಕಕ್ಕೆ ಶ್ರೀಬ್ರಹ್ಮ ದೇವರ ಮಾನಸ ಪುತ್ರರಾದ,ಸದಾ ಭಗವಂತನ ಧ್ಯಾನ, ಚಿಂತನೆಯಲ್ಲಿ ಇರುವ, ಅವನ ಭಕ್ತರಾದ ಸನಕಾದಿ ಮುನಿಗಳು ಪರಮಾತ್ಮನ ದರುಶನ ಮಾಡಲು ಹೋಗಿದ್ದಾರೆ.ನೋಡಲು ಐದು ವರುಷದ ಬಾಲಕರಂತೆ ರೂಪ ಅವರದ್ದು. ವೈಕುಂಠ ದಲ್ಲಿ ಇರುವ ಆರು ಪ್ರಾಕಾರ ಗಳನ್ನು ದಾಟಿದ್ದಾರೆ.ಏಳನೆಯ ಪ್ರಾಕಾರಕ್ಕೆ ಬಂದಿದ್ದಾರೆ.ಅಲ್ಲಿ ಜಯ ವಿಜಯರೆಂಬುವರು ಇಬ್ಬರು ದ್ವಾರಪಾಲಕರು. ಅವರಿಗೆ ಒಳಗಡೆ ಬಿಡದೆ ಅಡ್ಡಿಯನ್ನು ಉಂಟು ಮಾಡುತ್ತಾರೆ.*ಒಳಗಡೆ ಹೋಗಬೇಕು* ಎನ್ನುವ ಋಷಿಗಳ ಮಾತನ್ನು ಕೇಳದೆ ಬಂಗಾರದ ಬೆತ್ತವನ್ನು ಅಡ್ಡ ಹಿಡಿದು ತಡೆ ಹಾಕುತ್ತಾರೆ..
ಇದರಿಂದಾಗಿ ಸನಕಾದಿ ಋಷಿಗಳಿಗೆ ಕೋಪಬರುತ್ತದೆ.
*"ಪರಮಾತ್ಮನ ಲೋಕದಲ್ಲಿ ಇದ್ದುಕೊಂಡು ದೈತ್ಯರಂತೆ ವರ್ತನೆ ಮಾಡುವ ನೀವು ಭೂಲೋಕದಲ್ಲಿ ದೈತ್ಯರಾಗಿ ಜನಿಸಿ.ಮತ್ತುಸದಾ ಕಾಲ ಪರಮಾತ್ಮನ ದ್ವೇಷ ಮಾಡುತ್ತಾ ಅಸುರ ಯೋನಿಯಲ್ಲಿ ಹುಟ್ಟಿ* ಅಂತ ಶಾಪ ಕೊಡುತ್ತಾರೆ."
ಆ ಶಾಪವನ್ನು ಜಯ ವಿಜಯರು ಸ್ವೀಕಾರ ಮಾಡುತ್ತಾರೆ.
*ಸನಕಾದಿ ಮುನಿಗಳು ಮೊದಲನೆಯ ಬಾರಿಗೆ ವೈಕುಂಠಕ್ಕೆ ಬಂದದ್ದು ಅಲ್ಲ.ಹಿಂದೆ ಅನೇಕ ಬಾರಿ ಬಂದದ್ದು ಉಂಟು.ಅವಾಗ ಏನು ಪ್ರತಿರೋಧ ತೋರದೆ ಅವರಿಗೆ ಒಳಗೆ ಬಿಟ್ಟವರಿಗೆ ಆ ದಿನ ಅವರು ತೋರಿದ ವರ್ತನೆ ಬಲು ವಿಚಿತ್ರ*. ಭಗವಂತನ ಸಂಕಲ್ಪಕ್ಕೆ ವಿರುದ್ಧ ಹೋಗುವವರು ಯಾರು ಇಲ್ಲ.
*"ಭಗವಂತನ ದರುಶನ ಮಾಡಲು ಬಂದಂತಹ ಅವನ ಭಕ್ತರಿಗೆ ಮಾಡುವ ಅವಮಾನ ಹೇಗೆ ಅಧಃಪತನಕ್ಕೆ ಕಾರಣ ಎನ್ನುವುದು"ಇಲ್ಲಿ ನೋಡಬಹುದು*.
ಜಯ ವಿಜಯರಿಗೆ ಅವರ ಪರಿಚಯ ಇದ್ದಿಲ್ಲವೇ?ಇತ್ತು.
*ಎಲ್ಲರಿಗಿಂತ ಮೊದಲು ಹುಟ್ಟಿದವರು ಸನಕಾದಿ ಮುನಿಗಳು.ಯಾವಾಗಲೂ ಅವರಿಗೆ ನಮಸ್ಕರಿಸಿ ಒಳಗಡೆ ಬಿಡುತ್ತಾ ಇದ್ದ ಜಯ ವಿಜಯರು ಆದಿನ ಒಳಗಡೆ ಬಿಡಲಿಲ್ಲ.* 
ಜಯ ವಿಜಯರು ಸಾಮಾನ್ಯರಲ್ಲ.ದೇವತೆಗಳು.
ಜ್ಞಾನಿಗಳು. 
*ಅಂತಹವರಿಗೆ ಅಸುರಾವೇಶ ಬಂದು ಭಗವಂತನ ದರುಶನಕ್ಕೆ ಬಂದ ಸನಕಾದಿಗಳನ್ನು ಸಣ್ಣವರು ಇವರು ಎಂದು ತಡೆದು,ಅವರ ರೂಪವನ್ನು ನೋಡಿ ಅಪಹಾಸ್ಯ ಮಾಡುತ್ತಾರೆ.*
*"ದೈತ್ಯರಂತೆ ವರ್ತನೆಯನ್ನು ಮಾಡಿದ್ದಕ್ಕಾಗಿ ದೈತ್ಯ ಯೋನಿಗಳಲ್ಲಿ ಜನನವಾಗುವಂತೆ ಶಾಪ ಋಷಿಗಳಿಂದ.*
*"ಯಾರು ಯಾವ ವರ್ತನೆ ತೋರುವರೋ ಅದಕ್ಕೆ ತಕ್ಕಂತೆ ಫಲ ಭಗವಂತ ಕೊಡುವನು.*
*ತನ್ನ ದ್ವಾರಪಾಲಕರು ಇವರು ಅವರ ಶಾಪವನ್ನು ತಾನು ಉಪಸಂಹಾರ ಮಾಡಬಹುದಿತ್ತು. ಆದರೆ ಭಗವಂತ ಹಾಗೇ ಮಾಡಲಿಲ್ಲ.ಭಗವಂತ ದೇವತೆಗಳ ಪಕ್ಷವೆಂದು ದೈತ್ಯ ರು, ಹೇಳುತ್ತಾರೆ.*
 *"ತನ್ನ ಭಕ್ತರಿಗೆ ಅವಮಾನ ಯಾರೇ ಮಾಡಲಿ ಅವರಿಗೆ ಶಿಕ್ಷೆ ತಪ್ಪದು ಎನ್ನುವುದು ಅವನ ನೀತಿ".*
ಭಕ್ತಪರಾಧೀನ ಅವನು.
ಹೊರಗಡೆ ನಡೆದ ಗದ್ದಲ ಕೇಳಿ ಭಗವಂತನು ಶೇಷನ ಮೇಲೆ ಮಲಗಿದ್ದ. ಎಲ್ಲಾ ಗೊತ್ತು. ಸತ್ಯ ಸಂಕಲ್ಪ ಅವನು.ಅವನ ಇಚ್ಛೆ ಯಂತೆ ಪ್ರತಿಯೊಂದು ಕಾರ್ಯ ನಡೆಯುತ್ತದೆ.
ಹೊರಗಡೆಬಂದು ನೋಡುತ್ತಾನೆ. 
ಶಾಪಗ್ರಸ್ತರಾಗಿ ಜಯ ವಿಜಯರು ತಲೆ ತಗ್ಗಿಸಿಕೊಂಡು ನಿಂತಿದ್ದಾರೆ.ತಕ್ಷಣ ಭಗವಂತ ಸನಕಾದಿಗಳ ಬಳಿ ಸಾರಿ ಕ್ಷಮೆ ಕೇಳುತ್ತಾ ಇದ್ದಾನೆ.
ಅವನ ಲೀಲೆ ಬಹು ವಿಚಿತ್ರ.
*"ಇವರು ಮಾಡಿದಂತಹ ತಪ್ಪಿಗೆ ನಾನು ನಿಮ್ಮಲ್ಲಿ ಕ್ಷಮೆ ಕೇಳುತ್ತೇನೆ.ಏಕೆಂದರೆ ನೀವು ಬ್ರಾಹ್ಮಣರು,ಋಷಿಗಳು.ಪರಮಾತ್ಮನ ಕಥೆಯನ್ನು ಕೇಳಿದರೆ ಸಕಲ ಪಾಪಗಳು ಸಹ ಪರಿಹಾರ ಮಾಡುತ್ತದೆ ಅಂತ ಬಲ್ಲವರು ಹೇಳುತ್ತಾರೆ. ಎಂತಹವರಾದರು ಭಗವಂತನ ಕಥೆ ಯನ್ನು ಕೇಳಿದರೆ ಪಾವನರಾಗುವರು.*
*ಅಂತಹ ಭಗವಂತನ ಕಥೆ ಯನ್ನು ಹೇಳುವ ನಿಮಗೆ ನನ್ನ ಕಡೆಯವರಿಂದ ಅವಮಾನ ವಾಗಿದೆ ಕ್ಷಮಿಸಿ.* 
*ನಿಮ್ಮಿಂದಲೇ ನನಗೆ ಕೀರ್ತಿ.* *ನನ್ನ ಕೀರ್ತಿಯನ್ನು ಜಗತ್ತಿನ ಎಲ್ಲ ಕಡೆ ಸಾರುವಂತಹವರು ನೀವು.ನಿಮ್ಮ ಶಾಪವನ್ನು ನಾನು ಅನುಮೋದನೆ ಮಾಡಿದ್ದೇನೆ.ಹಿಂದೆ ಭೃಗು ಋಷಿಗಳು ಬಂದು ಸುಮ್ಮನೆ ಮಲಗಿದ್ದ ನನ್ನ ಎದೆಗೆ ಒದ್ದಾಗಲು ಅವರ ಪಾದವನ್ನು ತೊಳೆದು ಆದರ ಮಾಡಿದ್ದೇನೆ.*
*ಜಯ ವಿಜಯರು ಇದನ್ನು ತಿಳಿಯದೇ ನನ್ನ ಭಕ್ತರಾದ ನಿಮಗೆ ಈ ತಪ್ಪನ್ನು ಮಾಡಿದ್ದಾರೆ. ಅವರಿಗೆ ಕ್ಷಮೆ ಮಾಡಿ* ಎಂದು ಕೇಳಿ ಅವರಿಗೆ ಸತ್ಕಾರ ಮಾಡಿ ಕಳುಹಿಸಿ ಕೊಡುವ.
ನಂತರದಲ್ಲಿ ಅವರಿಗೆ ಹೇಳುತ್ತಾನೆ.
*"ಈಗ ಈ ಶಾಪವನ್ನು ನಾನು ಅನುಮೋದನೆ ಮಾಡುತ್ತೇನೆ. ನೀವು ಏಳು ಜನ್ಮ ನನ್ನ ಭಕ್ತ ರಾಗಿ ಅವತಾರ ಮಾಡುವಿರಾ??ಅಥವಾ ಮೂರು ಜನ್ಮಗಳಲ್ಲಿ ಅಸುರ ಕುಲದಲ್ಲಿ ಹುಟ್ಟಿ ನನ್ನ ದ್ವೇಷ ಮಾಡಿ ನನ್ನ ಕೈಯಲ್ಲಿ ಹತರಾಗಿ ಇಲ್ಲಿ ಬಂದು ಸೇರುವಿರಿ.ಯಾವುದು ಬೇಕು?*? ಎಂದಾಗ 
*ಅವರು ಅಸುರರಾಗಿ ಮೂರು ಜನ್ಮ ತಾಳುತ್ತೇವೆ ಎಂದು ಹೇಳುತ್ತಾರೆ*.
ಅವಾಗ ಅವರು ಭಗವಂತನಿಗೆ ಕ್ಷಮೆ ಯನ್ನು ಕೇಳಿ 
*ಎಲ್ಲಿ ಹುಟ್ಟಬೇಕು? ಎಂದಾಗ "ಸಂಧ್ಯಾಕಾಲದಲ್ಲಿ ಗರ್ಭಧಾರಣೆ ಮಾಡಿದ ದಿತಿಯ ಗರ್ಭದಲ್ಲಿ ಜನನವಾಗಲಿ" ಎಂದು ಭಗವಂತ ಹೇಳಿದ್ದಾನೆ.*
ಹೀಗೆ ಅವರಿಬ್ಬರ ಜನನ ವಾಗಿದೆ..
ಮುಂದಿನ ಭಾಗ ನಾಳೆ..
🙏ಶ್ರೀ ಕೃಷ್ಣಾರ್ಪಣ ಮಸ್ತು🙏
ಹಾಳು ಹರಟೆಯಾಡಿ ಮನವ |
|ಬೀಳು ಮಾಡಿ ಕೊಳ್ಳಲು ಬೇಡಿ|
|ಏಳು ದಿನದ ಕಥೆಯು ಕೇಳಿ|
|ಏಳಿರೋ ವೈಕುಂಠಕೆ||

🙏ಶ್ರೀ ಕಪಿಲಾಯ ನಮಃ🙏[17/09, 8:13 PM] vijayavitthala blr: *||ಪಿಬತ ಭಾಗವತಂ ರಸಮಾಲಯಂ||*
Day 21
ನಿನ್ನೆಯ ದಿನ ಶ್ರೀ ಆದಿ ವರಾಹ ರೂಪಿ ಪರಮಾತ್ಮನು ಬ್ರಹ್ಮ ದೇವನ ಪುತ್ರನಾದ ಆದಿ ಹಿರಣ್ಯಾಕ್ಷ್ಯನನ್ನು ಸಂಹಾರ ಮಾಡಿದ ಬಗ್ಗೆ ತಿಳಿದುಕೊಂಡೆವು.
ನಂತರ ಶ್ರೀಶುಕಮುನಿಗಳು ಹೇಳುತ್ತಾರೆ.
"ರಾಜನೇ! ಕೇಳು.ಒಂದು ದಿನ ಸಂಧ್ಯಾಕಾಲದಲ್ಲಿ ಸೂರ್ಯಾಸ್ತವಾಗುವ ಸಮಯ.ಕಶ್ಯಪ ಋಷಿಗಳು ತಮ್ಮ ಆಹ್ನಿಕವನ್ನೆಲ್ಲ ಮುಗಿಸಿ ಅಗ್ನಿಹೋತ್ರ ಹೋಮವನ್ನು ಮಾಡಿ ಭಗವಂತನ ಧ್ಯಾನ ಮಾಡುತ್ತಾ ಕುಳಿತಿದ್ದಾರೆ.ಅವಾಗ ಅವರ ಪತ್ನಿಯಾದ ದಿತಿದೇವಿಯು ಅವರ ಬಳಿ ಬಂದು ಪ್ರಾರ್ಥನೆ ಮಾಡಿಕೊಳ್ಳುವಳು.
ಈ ಸಮಯದಲ್ಲಿ ನಿಮ್ಮ ಜೊತೆಯಲ್ಲಿ ಏಕಾಂತ ವಾಗಿರಬೇಕೆಂದು ಆಸೆಯಾಗಿದೆ.ಅದನ್ನು ಪೂರೈಕೆ ಮಾಡಿ ಎನ್ನಲು
ಅದಕ್ಕೆ ಕಶ್ಯಪರು 
*ದಿತಿದೇವಿ!ಇದು ಸಂಧ್ಯಾಕಾಲ.,ಇದನ್ನು ಘೋರತಮಾ ವೇಳಾ ಎಂದು ಕರೆಯುತ್ತಾರೆ.ಶ್ರೀರುದ್ರ ದೇವರು ವೃಷಭಾರೂಡರಾಗಿ ತಮ್ಮ ಭೂತಗಣಗಳೊಡನೆ ಸಂಚಾರ ಮಾಡುತ್ತಾ ಇರುತ್ತಾರೆ.ನೀನು ಏನು ಈ ಸಮಯದಲ್ಲಿ ಪತಿಯ ಸಂಗವನ್ನು ಬಯಸುವ ಈ ಕೋರಿಕೆ ತಪ್ಪು. ಬೇಡವೆಂದು ಹೇಳುತ್ತಾರೆ.
ನಂತರ ದಿತಿದೇವಿಯು ಅವರ ಉಪದೇಶವನ್ನು ಕೇಳದೇ ಹಠಮಾಡಲು ದೈವೇಚ್ಚೇ ಹೇಗಿದೆಯೋ ಹಾಗೇ ಆಗಲಿ ಎಂದು ಕಶ್ಯಪರು ಅವಳ ಆಶೆಯನ್ನು ಪೂರೈಕೆ ಮಾಡಿದ್ದಾರೆ.
ಆ ನಂತರ ತಮ್ಮ ಮುಂದಿನ ಕಾರ್ಯದಲ್ಲಿ ಅವರು ಮಗ್ನರಾಗಿದ್ದಾರೆ.
ನಂತರ ದಿತಿದೇವಿಗೆ ನಾಚಿಕೆ ಆಗಿದೆ.ಕಶ್ಯಪ ರ ಬಳಿ ಬಂದು ತಲೆ ತಗ್ಗಿಸಿ ನಿಂತು ಕೊಂಡು ಹೇಳುವಳು.
"ನೀವು ಅವಾಗ ಏನು ಉಪದೇಶ ಮಾಡಿದಿರಿ.ಸಂಧ್ಯಾ ಸಮಯದಲ್ಲಿ ಪತಿಯ ಸಂಗವನ್ನು ಮಾಡಬಾರದು ಎಂದು.ಒಂದು ವೇಳೆ ಮಾಡಿದರೆ,ಗರ್ಭವನ್ನು ಧರಿಸಿದರೆ ಅದನ್ನು ಸಂಹಾರ ಮಾಡುತ್ತಾರಂತೆ ರುದ್ರ ದೇವರು.ಇದು ಭಗವಂತನ ಆಜ್ಞೆ ಅವರಿಗೆ*. ಇವಾಗ ನನಗೆ ಗರ್ಭಧಾರಣೆ ಆಗಿ ಹೋದರೆ ನನ್ನ ಗತಿ ಏನು ಎಂದು ಪೇಚಾಡಿ ರುದ್ರ ದೇವರ ಬಳಿ ಪ್ರಾರ್ಥನೆ ಮಾಡಿಕೊಳ್ಳುವಳು.
ಅವಾಗ ಕಶ್ಯಪಮುನಿಗಳು ಹೇಳುತ್ತಾರೆ. 
*"ನೀನು ರುದ್ರದೇವರನ್ನು ಪ್ರಾರ್ಥನೆ ಮಾಡಿದ್ದರಿಂದ ನಿನ್ನನ್ನು ಆಗಲಿ ,ಮುಂದೆ ನಿನ್ನ ಗರ್ಭದಲ್ಲಿ ಬರುವ ಶಿಶುವಿಗೆ ಆಗಲಿ ಅವರು ಸಂಹಾರ ಮಾಡುವದಿಲ್ಲ. ಆದರೆ ಸಂಧ್ಯಾ ಕಾಲದಲ್ಲಿ ಈ ತರಹದ ಕಾರ್ಯವನ್ನು ಮಾಡಿದ್ದರ ಫಲವಾಗಿ ನಿನಗೆ ಆಗುವ ಪರಿಣಾಮ ವನ್ನು ಕೇಳು.ನಿನಗೆ ಮನೋನಿಗ್ರಹ,ಇಂದ್ರಿಯ ನಿಗ್ರಹ ಎರಡು ಇರಲಿಲ್ಲ. ಮತ್ತು ನಿನಗೆ ಗರ್ಭದಲ್ಲಿ ಎರಡು ಅವಳಿ ಜವಳಿ ಮಕ್ಕಳು ಜನಿಸುವರು.ಅವರು ಮೂರು ಲೋಕಕ್ಕೆ ಕಂಟಕ ರಾಗಿರುವಂತಹವರು.ಮತ್ತು ಅವರು ಪರಮಾತ್ಮನ ಕೈಯಲ್ಲಿ ಮರಣ ಹೊಂದುವರು.ಇದು ಸಂಧ್ಯಾಕಾಲದಲ್ಲಿ ನೀನು ಅಪೇಕ್ಷಿತ ಮಾಡಿದ ಫಲ"* ಎಂದು ಹೇಳುತ್ತಾರೆ. ಆಗ ದಿತಿದೇವಿ ಪಶ್ಚಾತ್ತಾಪ ಪಡುತ್ತಾಳೆ.ಮತ್ತೆ ಕಶ್ಯಪ ಮುನಿಗಳು ಹೇಳುತ್ತಾರೆ. *ದೇವಿ!!ಚಿಂತಿಸುವ ಅಗತ್ಯವಿಲ್ಲ.ಇಬ್ಬರು ಮಕ್ಕಳು ನೀಚರು ಮತ್ತು ಲೋಕ ಕಂಟಕರ ಜನನವಾದರು ಕೂಡ ಇಡೀ ಲೋಕವು ಅವರನ್ನು ನಿಂದನೆ ಮಾಡಿದರು ಸಹ ಅವರಲ್ಲಿ ಒಬ್ಬ ನಿಗೆ ಪರಮ ಭಾಗವತನಾದ ಭಗವದ್ಭಕ್ತನಾದ ಮೊಮ್ಮಗ ನಿನಗೆ ಹುಟ್ಟುತ್ತಾನೆ.ಅವನಿಗೆ ಇಡೀ ಜಗತ್ತಿನಲ್ಲಿ ಪ್ರತಿಯೊಬ್ಬರೂ  ,ಎಲ್ಲಾ ಲೋಕದವರು ಅವನ ಗುಣಗಾನವನ್ನು ನಿರಂತರವಾಗಿ ಮಾಡುತ್ತಾರೆ." ಎಂದು ಸಮಾಧಾನ ಪಡಿಸಿದರು.*
ನಂತರ ದಿತಿದೇವಿ ಗರ್ಭಿಣಿ ಆಗಿದ್ದಾಳೆ.ಬಹಳ ವರ್ಷವಾದರು ಇನ್ನೂ ಪ್ರಸವವಾಗಿಲ್ಲ.ನಂತರದಲ್ಲಿ ಇಬ್ಬರು ಮಕ್ಕಳಿಗೆ ಜನ್ಮ ನೀಡುತ್ತಾಳೆ.ಅವರೇ ಹಿರಣ್ಯ ಕಶ್ಯಿಪು,ಮತ್ತು ಹಿರಣ್ಯಾಕ್ಷ. ಅಣ್ಣ ತಮ್ಮಂದಿರು.
ಅವರಿಬ್ಬರೂ ಹೇಗೆ ದಿತಿದೇವಿ ಯಲ್ಲಿ ಜನಿಸಿದರು ಎನ್ನುವದರ ಬಗ್ಗೆ ಮುಂದೆ ನೋಡೋಣ.
 ಮುಂದಿನ ಭಾಗ ನಾಳೆ..
🙏ಶ್ರೀ ಕೃಷ್ಣಾರ್ಪಣ ಮಸ್ತು🙏
ಹಾಳು ಹರಟೆಯಾಡಿ ಮನವ |
|ಬೀಳು ಮಾಡಿ ಕೊಳ್ಳಲು ಬೇಡಿ|
|ಏಳು ದಿನದ ಕಥೆಯು ಕೇಳಿ|
|ಏಳಿರೋ ವೈಕುಂಠಕೆ

🙏ಶ್ರೀ ಕಪಿಲಾಯ ನಮಃ🙏
[17/09, 8:15 PM] vijayavitthala blr: *||ಪಿಬತ ಭಾಗವತಂ ರಸಮಾಲಯಂ||*

[18/09, 5:20 AM] vijayavitthala blr: *||ಪಿಬತ ಭಾಗವತಂ ರಸಮಾಲಯಂ||*
Day#22
ನಿನ್ನೆಯ ದಿನ ದಿತಿದೇವಿಯು  ತಪ್ಪು ತಿಳಿದು ತನ್ನ  ಪತಿ ಯಾದ ಕಶ್ಯಪ ಮುನಿಗಳ ಬಳಿ ಕ್ಷಮೆ ಯಾಚಿಸಿ ದಾಗ
ಅದಕ್ಕೆ ಮುನಿಗಳು ಹೇಳುತ್ತಾರೆ.
*"ದಿತಿದೇವಿಯೇ ಕೇಳು.ನೀನು ನಿನ್ನ ದೋಷವನ್ನು ವಿಮರ್ಶಿಸಿ ತಿಳಿದೆ.ಶ್ರೀ ಹರಿಯಲ್ಲಿ ಶ್ರೀ ರುದ್ರ ದೇವರಲ್ಲಿ ಮತ್ತು ಪತಿಯಾದ ನನ್ನಲ್ಲಿ ಯಥಾಯೋಗ್ಯ ಭಕ್ತಿ ಯನ್ನು ತೋರಿಸಿದ ಕಾರಣದಿಂದಾಗಿ ನಿನ್ನ ಮಗನ ಮಕ್ಕಳಲ್ಲಿ ಒಬ್ಬನು ಮಾತ್ರ ಸಜ್ಜನ ಸಮ್ಮತನಾದವನು ಹುಟ್ಟುವನು.ಅವನು ಶ್ರೀಹರಿಯ ಕೀರ್ತಿ ಯನ್ನು ಜಗತ್ತಿನ ಎಲ್ಲ ಕಡೆ ಪ್ರಚಾರ ಮಾಡುವನು.ಸಜ್ಜನರು ಅವನ‌ ಜೊತೆಯಲ್ಲಿ ಶ್ರೀಹರಿಯ ಕೀರ್ತನೆ ಯನ್ನು ಜಗತ್ತಿನಲ್ಲಿ ಎಲ್ಲಾ ಕಡೆ ಮಾಡುವರು.ನಿನ್ನ ಮಗನಾಗಿ ಹುಟ್ಟುವವ ಒಬ್ಬ ಸುಜೀವಿ.ಆದರು ದುಷ್ಟ ಜೀವಿಯ ಸಹವಾಸದಿಂದ ಬಣ್ಣವು ಕೆಟ್ಟ ಚಿನ್ನದ ಹಾಗೆ ದುಷ್ಟ ನಾಗುವನು.*
*ಆದರು ಸ್ವರೂಪ ದಿಂದ ಯೋಗ್ಯನಾದ ಜೀವಿಯು ನಿನ್ನ ಮೊಮ್ಮಗನ ಪ್ರಭಾವದಿಂದಾಗಿ ಸದ್ಗತಿಯನ್ನು ಹೊಂದುವನು.ಅಯೊಗ್ಯ ಜೀವಿಯು ನಿತ್ಯ ನರಕದಲ್ಲಿ ಬಿದ್ದು ಹೊರಳುವನು.ನಿನ್ನ ಮೊಮ್ಮಗನು ಭಗವಂತನ ಭಕ್ತರಲ್ಲಿ ದ್ವೇಷ, ಮತ್ಸರ ಇಲ್ಲದವನು,ಮೊದಲಾದ ಸದ್ಗುಣಗಳನ್ನು ಹೊಂದಿರುವ ವನು. ಸಜ್ಜನರು ಸಹ ಅವನಂತೆ ತಾವು ಬಾಳಬೇಕೆಂದು,ಅವನಂತೆ ಸಜ್ಜನ ಗುಣಗಳನ್ನು ಹೊಂದಬೇಕೆಂದು ಆಶಿಸುವರು.*
*ನಿನ್ನ ಮೊಮ್ಮಗನು ಶ್ರೀ ಹರಿಯಲ್ಲಿ ವಿಶ್ವಾಸವನ್ನು  ಇಡುವವನು ಮತ್ತು ಅವನ ಸರ್ವೋತ್ತಮ ವನ್ನು ಎಲ್ಲಾ ಕಡೆ ಸಾರುವವನು ಆಗುವನು.*
*ಸಜ್ಜನರ ತಾಪವನ್ನು ಪರಿಹಾರ ಮಾಡುವಂತವನು ಮತ್ತು ಸಾಕ್ಷಾತ್ಆಗಿ ಭಗವಂತನ ದರುಶನ ಮಾಡತಕ್ಕವನು ಮತ್ತು ಅವನಿಂದ ಪ್ರೀಯನಾದವನು ಆಗುವನು.ಇಂತಹ ನಿನ್ನ ಮೊಮ್ಮಗ ಪರಮ ಧನ್ಯನು..*
ಎಂದು ಸಮಾಧಾನ ಮಾಡಿ ಹೇಳುತ್ತಾರೆ.
*ಇಂತಹ ಪರಮ ಭಾಗವತರಾದ  ಶ್ರೀಪ್ರಹ್ಲಾದ ರಾಜರು ಮುಂದೆ ಶ್ರೀ ವ್ಯಾಸರಾಯ ಗುರುಗಳು ಮತ್ತು ಮಂಚಾಲೆ ಪ್ರಭುಗಳಾಗಿ ನಮ್ಮೆಲ್ಲರ ಉದ್ದಾರಕ್ಕೆ ಅವತಾರ ಮಾಡಿದರು.*
*ಭಗವಂತನಿಂದ ಸಕಲ ದೇವತೆಗಳಿಂದ ಕಶ್ಯಪರಿಂದ,ಮುಂತಾದ ದೊಡ್ಡ ಜ್ಞಾನಿಗಳಿಂದ ಹೊಗಳಿಸಿಕೊಂಡ,ಪರಮ ಭಾಗವತರಾದ,ಜ್ಞಾನಿಗಳಾದ ಶ್ರೀ ಪ್ರಹ್ಲಾದ ರಾಜರ ಅನುಗ್ರಹ,ಕೃಪಾ ಕಟಾಕ್ಷ ಸದಾ ನಮ್ಮೆಲ್ಲರ ಮೇಲಿರಲಿ.*
ಮುಂದಿನ ಭಾಗ ನಾಳೆ.
🙏ಶ್ರೀ ಕೃಷ್ಣಾರ್ಪಣ ಮಸ್ತು🙏
ಹಾಳು ಹರಟೆಯಾಡಿ ಮನವ |
|ಬೀಳು ಮಾಡಿ ಕೊಳ್ಳಲು ಬೇಡಿ|
|ಏಳು ದಿನದ ಕಥೆಯು ಕೇಳಿ|ಏಳಿರೋ ವೈಕುಂಠಕೆ|
🙏ಶ್ರೀ ಕಪಿಲಾಯ ನಮಃ🙏
✍️ಅ.ವಿಜಯ ವಿಠ್ಠಲ
[18/09, 5:25 AM] vijayavitthala blr: *||ಪಿಬತ ಭಾಗವತಂ ರಸಮಾಲಯಂ||*

Post a Comment

Previous Post Next Post