ಪಿಬತ ಭಾಗವತಂ ರಸಮಾಲಯಂ||*Day# 4,5,6,7

[31/08, 4:11 PM] vijayavitthala blr: *||ಪಿಬತ ಭಾಗವತಂ ರಸಮಾಲಯಂ||*
Day# 4
*✍️ಭಗವಂತನಾದ ಶ್ರೀ ವೇದವ್ಯಾಸ ರೂಪಿ ಪರಮಾತ್ಮನು ತಾನೇ ಸ್ವತಃ ರಚಿಸಿದ ಮಹಾನ್ ಗ್ರಂಥ.*
*ಇದು ದೇವಲೋಕದ ಅಮೃತಕ್ಕಿಂತಲು ಮಿಗಿಲು.*
*ಇದಕ್ಕೆ ಸಮನಾದದು ಯಾವುದು ಇಲ್ಲ.*
*ಸಿಹಿಯುಳ್ಳ ಪಾನೀಯ,ಕುಡಿದಾಗ ಮನಸ್ಸು ಆನಂದ ಗೊಳ್ಳಬಹುದು.*
*ಆದರೆ ಅತಿಯಾಗಿ ಕುಡಿದಾಗ ಅದರಿಂದ ಏನಾದರು ಒಂದು side effect ಆಗಿ ಚೂರು ಆರೋಗ್ಯ ವ್ಯತ್ಯಾಸವನ್ನು ಕಾಣಬಹುದು..ಆದರೆ ಈ ಭಾಗವತ ಅಮೃತ ಎಂಬ ಸಿಹಿಯಾದ ಪಾನೀಯ ಎಷ್ಟು ಬಾರಿಯಾದರು ದಿನಕ್ಕೆ ಪಾನ ಮಾಡಿರಿ.ಇದರಿಂದ ಯಾವುದೇ side effect ಇಲ್ಲ.ಇದರಿಂದ ಲಾಭವೇ ಹೊರತು ನಷ್ಟ ಇಲ್ಲವೇ ಇಲ್ಲ..*
*ಈ ಗ್ರಂಥ ಪಾರಾಯಣ ಫಲ.*👇 
*(1)ಕಾಲ ದೇಶ ಗಳಿಂದ ಮಾಡಿದ ಪಾಪಗಳನ್ನು ಸಹ ಇದು ಭಕ್ತಿಯಿಂದ ಶ್ರವಣ,ಪಠಣ  ಮನನ ಮಾಡಿದರೆ ಕಳೆದು ಹಾಕುತ್ತದೆ.*
*ಇದಕ್ಕೆ ಪರಿಕ್ಷೀತ ರಾಜ ಸಾಕ್ಷಿ.*
*(2).ನಮ್ಮ ಮನೆಯಲ್ಲಿ ಹಿಂದೆ ಯಾರಾದರು ಹಿರಿಯರು ಸತ್ತು ಹೋದಾಗ,ಅವರಿಗೆ ಸರಿಯಾದ ರೀತಿಯಲ್ಲಿ ಮೃತಕರ್ಮ ಸಂಸ್ಕಾರ ನಡೆಯದೇ ಹೋದಾಗ,ಅವರು ಪ್ರೇತವಾಗಿ ಉಳಿದರೆ,ಅದರ ನಿವಾರಣೆ ಗೋಸ್ಕರ ವಾಗಿ ಸಹ ಶ್ರೀ ಮದ್ ಭಾಗವತ ಪಾರಾಯಣ,ಶ್ರವಣವನ್ನು ಮಾಡಲು ಹೇಳುತ್ತಾರೆ.*
ಇದಕ್ಕೆ  
*ಇದರಲ್ಲಿ ಬರುವ ಗೋಕರ್ಣ ಹಾಗು ಅವನ ಸಹೋದರನ ನ ಕತೆಯೇ ಸಾಕ್ಷಿ.*
*(3).ಮೋಕ್ಷ ಸಾಧನೆಗಾಗಿ ಈ ಶ್ರೀ ಮದ್ಭಾಗವತ ಶ್ರವಣ.*
*ಇದಕ್ಕೆ ಪರಿಕ್ಷೀತ ರಾಜ ಪ್ರತ್ಯಕ್ಷವಾಗಿ ಉದಾಹರಣೆ.*
*ಶ್ರೀ ಮದ್ ಭಾಗವತ ದಲ್ಲಿ 18,೦೦೦ ಗ್ರಂಥ ಶ್ಲೋಕ ಗಳಿವೆ.*.
*ಶ್ರೀ ಮದ್ ಭಾಗವತವು ಹನ್ನೆರಡು ಸ್ಕಂಧಗಳಿಂದ ಕೂಡಿದೆ.*
*ಪರೀಕ್ಷಿತ ಮಹಾರಾಜ ಹಾಗು ಶುಕ ಮುನಿಗಳನಡುವಿನ ಸಂವಾದ ರೂಪವಾಗಿದೆ.*
*ಪ್ರತಿ ಒಂದು ಸಾವಿರ ಗ್ರಂಥಗಳಿಗು ಒಂದೊಂದು ಭಗವದ್ ರೂಪ ಇದೆ.*
*ಈ ರೀತಿಯಲ್ಲಿ 18,೦೦೦ ಗ್ರಂಥ ಶ್ಲೋಕಗಳಿಗೆ 18 ಭಗವದ್ ರೂಪ ಗಳಿವೆ.*
*ಹನ್ನೆರಡು ಸ್ಕಂಧಗಳಿಗೆ ಹನ್ನೆರಡು ಭಗವಂತನ ರೂಪಗಳು ಇವೆ.*
*ಕೇಶವ,ನಾರಾಯಣ,ಮಾಧವ,ಗೋವಿಂದ,ವಿಷ್ಣು,* *ಮಧುಸೂಧನ,ತ್ರಿವಿಕ್ರಮ, ವಾಮನ,ಶ್ರೀಧರ, ಹೃಷಿಕೇಶ*, *ಪದ್ಮನಾಭ, ಮತ್ತು ದಾಮೋದರ,ಇವೇ ಭಗವಂತನ ಆ ಹನ್ನೆರಡು ರೂಪಗಳು.*.
*ಈ ಶ್ರೀ ಮದ್ಭಾಗವತ ಶ್ರವಣ,ಪಾರಾಯಣದ ಫಲ ಗಂಗಾ ನದಿ ಸ್ನಾನಕ್ಕಿಂತಲು ಮಿಗಿಲು.*
ಗಂಗಾನದಿಯ ಸ್ನಾನ *ಮಿಂದವರ ಪಾಪವನ್ನು ತೊಳೆದರೆ,*
*ಶ್ರೀ ಮದ್ ಭಾಗವತ ಸಂಸಾರದ ಜಿಡ್ಡು ನಾಶಪಡಿಸಿ ನಮಗೆಲ್ಲ ಪಾಪವನ್ನು ಲೇಪನ ವಿಲ್ಲದಂತೆ ಮಾಡುವದು.*.
*ಗಂಗಾನದಿಯನ್ನು  ನಮ್ಮ ಅವಶ್ಯಕತೆ ಬೇಕಾದಷ್ಟು ಶೇಖರಣೆ ಮಾಡಲು ಒಂದು ಪಾತ್ರೆ ಬೇಕು.*
ಆದರೆ 
*ಈ ಭಾಗವತಕ್ಕೆ ಸಂಗ್ರಹ ಮಾಡಲು ನಮ್ಮ ತಲೆ ಎನ್ನುವ ಪಾತ್ರೆ ಮಾತ್ರ ಸಾಕು.*
*ಗಂಗಾ ನದಿಯಲ್ಲಿ  ಇಡೀ ದೇಹವನ್ನು ಮುಳುಗಿದಾಗ ಮಾತ್ರ ಸ್ನಾನ ಮಾಡಿದ ಫಲ ಬರುತ್ತದೆ.*
ಆದರೆ 
*ನಿತ್ಯದಲ್ಲಿ ಈ ಭಾಗವತ ಇಡೀ ಗ್ರಂಥದ,ಎಲ್ಲಾ ಶ್ಲೋಕಗಳನ್ನು ಪಾರಾಯಣ ಮಾಡಲು ಆಗದಿದ್ದರೆ,ಕೊನೆಗೆ ಒಂದು ಶ್ಲೋಕವಾದರು ಹೇಳುವದು.ಅದು ಸಹ ಆಗದಿದ್ದರೆ*
ಕೊನೆಯಲ್ಲಿ 
*ಶ್ಲೋಕದ ಕಾಲುಭಾಗ ವಾದರು ಸರಿ,ಕಿವಿಗೊಟ್ಟು ಭಕ್ತಿ ಇಂದ ಕೇಳಿದರೆ,ಸಾವಿರ ಗೋದಾನದ ಫಲ ಬರುತ್ತದೆ.*
*ಶ್ರೀಹರಿಯ ಪ್ರೀತಿ ಎಂಬ ಉಡುಗೊರೆ ನಮಗೆ ಸಿಗುತ್ತದೆ.*.
*ಬರಿಯ ಕಾಲುಭಾಗದಷ್ಟು ಶ್ರವಣ ಮಾಡಿದರೆ ನಮಗೆ ಕಾವಲು ಕಾಯುವ, ನಮ್ಮನ್ನು ರಕ್ಷಣೆ ಮಾಡುವ,ನಮ್ಮ ಕುಲವನ್ನು ಉದ್ದಾರ ಮಾಡುವ ಈ ಭಾಗವತಕ್ಕೆ ಎಣೆಯುಂಟೆ??..*
*ಗಂಗಾ ಸ್ನಾನ ಸಂಕಲ್ಪ ಪೂರ್ವಕವಾಗಿ ಮಾಡಿದರೆ ಮಾತ್ರ ಫಲ.*
*ಅದಕ್ಕೆ ಮೋಕ್ಷ ನೀಡಲು ಸಾಧ್ಯವಿಲ್ಲ.*.
*ಆದರೆ  ಶ್ರೀ ಮದ್ಭಾಗವತ ಹಾಗಲ್ಲ ನಮಗೆ ಮೋಕ್ಷವನ್ನು ಸಹ ಕೊಡುತ್ತದೆ.*.
*ಶ್ರೀ ಮದ್ ಭಾಗವತ ವನ್ನು ರಚಿಸಿದವರು ಶ್ರೀ ವೇದವ್ಯಾಸರು.*
*ರಚನೆಯನ್ನು ಮಾಡಿದ ಸ್ಥಳ ಶಮ್ಯಾಪ್ರಾಸ*.
*(ಸರಸ್ವತಿ  ಮತ್ತು ಅಲಕನಂದಾ(ಗಂಗಾದೇವಿ ಇನ್ನೊಂದು ಹೆಸರು) ನದೀ ಸಂಗಮದ ಸ್ಥಳ.*)
*ಇದನ್ನು ಶ್ರೀವೇದವ್ಯಾಸ ರಿಂದ ಕೇಳಿದವರು ಗಂಗಾಧರ ನಾದ ಶ್ರೀಶುಕ ಮುನಿಗಳು..*.
*ಅವರು ಉಪದೇಶ ಮಾಡಿದ್ದು ಪರೀಕ್ಷಿತ ರಾಜನಿಗೆ ಗಂಗಾನದಿಯ ತಟದಲ್ಲಿ.*
*ಹಾಗಾಗಿ ಪರಮ ಪವಿತ್ರ ವಾದುದು ಈ ಭಾಗವತ ಪುರಾಣ.*.
*ಇದನ್ನು ಯಾರು ಹೇಳುವರೊ,* ಮತ್ತು 
*ಯಾರು ಕೇಳುವರೊ*,
ಮತ್ತು 
*ಯಾರು ಹೇಳಿಸುವರೊ*, *ಈ ಮೂವರನ್ನು ಪಾವನಗೊಳಿಸಿ ಉದ್ದಾರ ಮಾಡುತ್ತದೆ.*
*ಇಂತಹ ಪರಮ ಮಂಗಳಕರವಾದ ಭಾಗವತ ವನ್ನು ವಿಶೇಷವಾಗಿ ಪಾರಾಯಣ , ಮತ್ತು ಶ್ರವಣವನ್ನು ಮಾಡೋಣ.*
*ಭಗವಂತನ ಅನುಗ್ರಹಕ್ಕೆ ಪಾತ್ರರಾಗಲು ಪ್ರಯತ್ನ ಪಡೋಣ.*
🙏ಶ್ರೀ ಕೃಷ್ಣಾರ್ಪಣ ಮಸ್ತು🙏
*ಹಾಳು ಹರಟೆಯಾಡಿ ಮನವ* |
*|ಬೀಳು ಮಾಡಿ ಕೊಳ್ಳಲು ಬೇಡಿ|*
*|ಏಳು ದಿನದ ಕಥೆಯು ಕೇಳಿ|*
*|ಏಳಿರೋ ವೈಕುಂಠಕೆ|*

✍️ಅ.ವಿಜಯವಿಠ್ಠಲ🙏
[01/09, 7:01 AM] vijayavitthala blr: *||ಪಿಬತ ಭಾಗವತಂ ರಸಮಾಲಯಂ||*
Day#5
 *ಶ್ರೀ ಕೃಷ್ಣ ಪರಮಾತ್ಮ ಪರಂಧಾಮಕ್ಕೆ ಹೋದ ಮೇಲೆ 30 ವರ್ಷಗಳ ಕಾಲದ ಮೇಲೆ ಪರೀಕ್ಷಿತ ಮಹಾರಾಜ  ಶುಕ ಮಹರ್ಷಿಗಳಿಂದಈ ಭಾಗವತ ಶ್ರವಣವನ್ನು ಮಾಡಿದ್ದಾರೆ.*
ಪರೀಕ್ಷೀತ ಮಹಾರಾಜ ಪಾಂಡವರ ಮೊಮ್ಮಗ.(ಅಭಿಮನ್ಯು ಮತ್ತು ಉತ್ತರಾದೇವಿಯ ಪುತ್ರ).
ಇವನ ಆಳ್ವಿಕೆ ಕಾಲದಲ್ಲಿ ಕಲಿ ಪ್ರವೇಶ ಆಗಿರಲಿಲ್ಲ.
*ಗರ್ಭದಲ್ಲಿ ಇದ್ದಾಗಲೇ ಭಗವಂತನನ್ನು ಕಂಡ ಪುಣ್ಯಾತ್ಮ.*
ಇಂತಹ ರಾಜ ಏಕೆ ಅಧರ್ಮಕಾರ್ಯವನ್ನು ಮಾಡಿದ??
ಏಕೆಂದರೆ ಒಂದು ತಪ್ಪು ಮಾಡಿದ್ದ.
ಒಂದು ಸಾರಿ ಅವನು ಬೇಟೆ ಆಡಲು ಕಾಡಿಗೆ ಹೋಗಿದ್ದಾಗ ಬಾಯಾರಿಕೆ ಆಗಿ ಒಂದು ಆಶ್ರಮಕ್ಕೆ ಹೋಗಿದ್ದಾನೆ.ಅದು ಶಮೀಕ ಋಷಿಗಳ ಆಶ್ರಮ. *ಕುಡಿಯಲು ನೀರನ್ನು ಕೇಳಿದ. ಅವರು ಕೊಡಲಿಲ್ಲ. ಅವರು ಧ್ಯಾನಮಗ್ನರಾಗಿ ಕುಳಿತಿದ್ದರು.*.
*ನಾನು ನೀರು ಕೇಳಿದರು ಋಷಿಗಳು ಕೊಡಲಿಲ್ಲ ಎಂದು ಕೋಪದಿಂದ ಅಲ್ಲಿ  ಸತ್ತು ಬಿದ್ದಿದ್ದ ಒಂದು ಹಾವನ್ನು ತೆಗೆದು ಅವರ ಕೊರಳಿಗೆ ಹಾಕಿ  ಹೋಗಿ ಬಿಟ್ಟ.ಶಮೀಕ ಮಹರ್ಷಿಗಳು ಧರ್ಮದ ಪ್ರತೀಕ.ಅವರು ಭಗವಂತನ ಧ್ಯಾನಾವಸ್ಥೆಯಲ್ಲಿ ಇದ್ದ ಕಾರಣ ಅವನಿಗೆ ನೀರು ಕೊಡಲಿಲ್ಲ. ರಾಜನು ಇನ್ನೊಂದು ಬಾರಿ ಕೇಳಲಿಲ್ಲ*.
*ರಾಜನಾದ ತನಗೆ ಕುಡಿಯಲು ನೀರನ್ನು ಶಮೀಕ ಋಷಿಗಳು ಕೊಡಲಿಲ್ಲ ಎನ್ನುವ ಕೋಪದಿಂದ ಸತ್ತ ಹಾವನ್ನು ಅವರ ಕೊರಳಿಗೆ ಹಾಕಿ ಹೋಗುತ್ತಾನೆ.*
(ಅಂದು ಬೇಟೆಯಾಡಲು ಪರೀಕ್ಷೀತ ಮಹಾರಾಜ ಹೊರಟಾಗ ತನ್ನ ಅಲಂಕಾರ ಗೃಹದಲ್ಲಿ ಇದ್ದ ಜರಾಸಂಧನ ಕಿರೀಟವನ್ನು ಧರಿಸಿ ಬೇಟೆ ಗಾಗಿ ಹೊರಟಿದ್ದ.}
*{ದುಷ್ಟ ನಾದ ಜರಾಸಂದನ ಕಿರೀಟ ಧರಿಸಿದ ಕಾರಣದಿಂದಾಗಿ ಒಂದು ಕ್ಷಣ ಶಮೀಕರ ಮೇಲೆ ದ್ವೇಷ, ಸಿಟ್ಟು ಬಂದು ಮಾಡಬಾರದ ಕೆಲಸ ಮಾಡಿ ಮುಂದೆ ಅದು ಅವನ ಅವನತಿಗೆ ಕಾರಣವಾಯಿತು.*}
*ದುಷ್ಟ ಜನರ ವಸ್ತುಗಳ ಬಳಕೆ ನಮ್ಮ ಅವನತಿಗೆ ಕಾರಣವಾಗುತ್ತದೆ ಅಂದರೆ ಇನ್ನೂ ಅವರ ಸಂಗ..*
*ಯೋಚಿಸಲು ಸಾಧ್ಯವಿಲ್ಲ.*
ಹಾಗಾಗಾದಿರಲಿ ನಮ್ಮ ಬದುಕು...
 ರಾಜನು ಹೊರಟು ಹೋದ ಮೇಲೆ ಅವರ ಮಗನಾದ ಶೃಂಗಿ ಅಲ್ಲಿಗೆ ಬಂದ.ಬಾಲ್ಯದಲ್ಲಿ ಗಾಯತ್ರಿ ಮಂತ್ರ ಸಿದ್ಧಿಯನ್ನು ಪಡೆದ ಋಷಿ ಪುತ್ರ.
ತನ್ನ ತಂದೆಯ ಕೊರಳ ಮೇಲೆ ಸತ್ತ ಹಾವು ಹಾಕಿರುವದನ್ನು ಕಂಡು ಕೋಪದಿಂದ ಶಪಿಸಿದ.
*"ಯಾವ ಸತ್ತ ಹಾವನ್ನು ನನ್ನ ತಂದೆಗೆ ಹಾಕಿದವನು ಯಾರೇ ಆಗಿರಲಿ. ಏಳುದಿನದ ನಂತರ ಅದೇ ಹಾವಿನ ರಾಜನಾದ ತಕ್ಷಕ ನಿಂದಲೇ ಸಾಯಲಿ" ಅಂತ..* .
*ಋಷಿ ಮುನಿಗಳಂತಹ  ಹರಿಯ ಭಕ್ತರಿಗೆ ,ಜ್ಞಾನಿ ಶ್ರೇಷ್ಠ ರಿಗೆ ಮಾಡುವ ಅವಮಾನ ನಮ್ಮ ಮರಣಕ್ಕೆ ಕಾರಣ ಅಂತ ಇಲ್ಲಿ ತೋರಿಸಿಕೊಡುತ್ತದೆ.*
ತನ್ನ ತಪ್ಪನ್ನು ತಿಳಿದುಕೊಂಡ ರಾಜನು ತಾನು ಪ್ರಾಣಾಹುತಿ ಮಾಡಿಕೊಳ್ಳಲು ನಿರ್ಧಾರ ಮಾಡುತ್ತಾನೆ.ಶೃಂಗಿಯ ಶಾಪದ ವಿಚಾರದ ವಿಷಯವನ್ನು ಪರಿಕ್ಷೀತ ಮಹಾರಾಜ ತಿಳಿದು  ಪಶ್ಚಾತಾಪ ಪಟ್ಟು!! 
*ನಾನು ಪಾಂಡವರ ಮೊಮ್ಮಗನಾಗಿ ಚಕ್ರವರ್ತಿ ಆಗಿ ಮಾಡಿದ ಕಾರ್ಯವೇನು??*
*ನಮ್ಮ ಹಿರಿಯರು ಅರಣ್ಯ ವಾಸದಲ್ಲಿ ಇದ್ದರು ಸಹ ನಿತ್ಯ ಸಾವಿರಾರು ಋಷಿ ಗಳಿಗೆ ಪ್ರತಿದಿನ ಭಿಕ್ಷೆ ನೀಡುತ್ತಾ ಇದ್ದರು.*
*ಧ್ಯಾನ ಮಗ್ನರಾದ ಋಷಿಗಳ ಕೊರಳಿಗೆ ಹಾವನ್ನು ಹಾಕಿ ಎಂತಹ ತಪ್ಪು ಮಾಡಿದೆ??.ಒಂದು ವೇಳೆ ಅವರು ಧ್ಯಾನ ಮಗ್ನರಾಗಿಲ್ಲ ದಿದ್ದರೆ ಹೌಹಾರಿ ಬಿಡುತ್ತಾ ಇದ್ದರು.*.
ಅದಕ್ಕೆ ಸರಿಯಾದ ಶಿಕ್ಷೆ ಆಗಿದೆ ಅಂತ ಯೋಚಿಸಿ ರಾಜ್ಯವನ್ನು ತನ್ನ ಮಗನಾದ *ಜನಮೇಜರಾಯನಿಗೆ ಒಪ್ಪಿಸಿ  ಗಂಗಾ ನದೀ ತೀರದಲ್ಲಿ ಪ್ರಾಯೋಪವೇಶಕ್ಕೆ ಕುಳಿತ..*.
*ಅವನ ಬಳಿಗೆ ಸಕಲ ಋಷಿ ಸಮೂಹವೇ ಬಂದಿತು..*
*ತನ್ನ ಜೀವನದ ಉದ್ದಕ್ಕೂ ಋಷಿ ಮುನಿಗಳನ್ನು ಯಜ್ಞ ಗಳಿಂದ ಆಧರಿಸಿದ್ದ. ಹಾಗಾಗಿ ಅಂತ್ಯ ಕಾಲಕ್ಕೆ ಅವರ ಸಮಾಗಮವಾಯಿತು ಅವನಿಗೆ..*.
*"ಬದುಕಿರುವವರೆಗು ಎಂತಹ ಧರ್ಮ ಕಾರ್ಯಗಳನ್ನು ಮಾಡುವೆವೋ ಅಂತ್ಯಕಾಲದಲ್ಲಿ ಅದೇ ನಮಗೆ ಕಾಪಾಡುವುದು ಅನ್ನುವದು ಇಲ್ಲಿ ತೋರಿಸುತ್ತದೆ."*
ಹೀಗೆ ಶ್ರೀ ಮದ್ ಭಾಗವತ ಧರ್ಮದ ಸೂಕ್ಷ್ಮ ವಿಷಯಗಳ ಬಗ್ಗೆ ಬೆಳಕು ಚೆಲ್ಲುತ್ತದೆ.
*ಅದೇ ಸಮಯದಲ್ಲಿ ಸದಾ ಸರ್ಪಭೂಷಣನಾದ ರುದ್ರಾಂಶ ಸಂಭೂತರಾದ ಶ್ರೀಶುಕ ಮುನಿಗಳು ಶ್ರೀ ವೇದವ್ಯಾಸ ದೇವರ ಅಪ್ಪಣೆಯಂತೆ* ಅಲ್ಲಿಗೆ ಬಂದು ಭಾಗವತ ವನ್ನು ಉಪದೇಶಿಸಿದರು.
ಎಂತಹ ವಿಚಿತ್ರ.!!
*ಹಾವಿನಿಂದಲೇ ಮರಣ ಅಂತಹ ಶಾಪ ರಾಜನಿಗೆ.*
*ಅದೇ ನಾಗಾಭರಣ ನಾದ ರುದ್ರಾಂಶ ಸಂಭೂತರಾದ ಶ್ರೀಶುಕ ಮುನಿಗಳಿಂದ ಭಗವಂತನ ಮಹಿಮೆ ತಿಳಿಯುವ ಭಾಗ್ಯ..*
*ನೋಡಿ ಇಲ್ಲಿ ಶಾಪ ಪರಿಕ್ಷೀತ ಮಹಾರಾಜನಿಗೆ ವರವಾಯಿತು..*.
*ಶ್ರೀ ಮದ್ಭಾಗವತವನ್ನು ಕೇಳಿ ಅಲ್ಪಾಯುವಾದ ರಾಜ ಅನಾಯಾಸವಾದ ಮರಣವನ್ನು ಪಡೆದ.*
*ತಕ್ಷಕ ಕಚ್ಚಿದ್ದು ಗೊತ್ತಿಲ್ಲ ಅವನಿಗೆ.ಶುಕ ಮುನಿಗಳಿಗೆ ನಮಸ್ಕಾರ ಮಾಡಿ ಅವರನ್ನು ಕೊಟ್ಟು ಕಳುಹಿಸಿದ್ದು ಮಾತ್ರ ನೆನಪು.*
*ಆಮೇಲೆ ಎಚ್ಚರಿಕೆಆಗಿದ್ದು  ಪರಮಾತ್ಮನ ಪಾದ ಮೂಲ ವನ್ನು ಸೇರಿದಾಗ.*
*ಇದು ಶ್ರೀ ಮದ್ಭಾಗವತ ಶ್ರವಣದಿಂದ ಬಂದ ಫಲ.*
ಇಂತಹ  ಶ್ರೀ ಮದ್ಭಾಗವತವನ್ನು ನಿತ್ಯ ವು ಕೇಳಬೇಕು.
*ಈ ಶ್ರೀ ಮದ್ಭಾಗವತವನ್ನು ಪ್ರತಿದಿನ ಎಷ್ಟು ಆದರೆ ಅಷ್ಟು..ಒಂದು ಶ್ಲೋಕ ವಾದರೆ ಒಂದು ಶ್ಲೋಕ.* 
*ಅರ್ಧ ಆದರೆ ಅರ್ಧ.*.
*ಕೊನೆಗೆ ಒಂದು ಪಾದವಾದರೆ ಒಂದು ಪಾದ ನಿತ್ಯ ಭಾಗವತವನ್ನು ಪಾರಾಯಣ ಮಾಡಬೇಕು.*
🙏ಶ್ರೀ ಕೃಷ್ಣಾರ್ಪಣ ಮಸ್ತು🙏
*ಹಾಳು ಹರಟೆಯಾಡಿ ಮನವ* |
*|ಬೀಳು ಮಾಡಿ ಕೊಳ್ಳಲು ಬೇಡಿ|*
*|ಏಳು ದಿನದ ಕಥೆಯು ಕೇಳಿ*|
*|ಏಳಿರೋ ವೈಕುಂಠಕೆ|*
🙏ಶ್ರೀ ಕಪಿಲಾಯ ನಮಃ🙏
[01/09, 7:03 AM] vijayavitthala blr: *||ಪಿಬತ ಭಾಗವತಂ ರಸಮಾಲಯಂ||*

[02/09, 6:25 AM] vijayavitthala blr: *||ಪಿಬತ ಭಾಗವತಂ ರಸಮಾಲಯಂ*||Day 6
✍ಒಂದು ಸಲ ಶ್ರೀನಾರದ ಮಹರ್ಷಿಗಳು ಸಂಚಾರ ಮಾಡುತ್ತಾ ಭೂಲೋಕಕ್ಕೆ ಬರುತ್ತಾರೆ. ಅನೇಕ ಪುಣ್ಯ ಕ್ಷೇತ್ರದ ದರುಶನ ಮಾಡಿ ಎಲ್ಲಾ ಕಡೆ ಕಲಿಯ ಪ್ರಭಾವ ಇರುವುದು ಅವರಿಗೆ ಕಾಣುತ್ತದೆ.
*ಎಲ್ಲಾ ಕಡೆ ಸತ್ಯ, ಶೌಚ,ದಯೆ ಯಾವುದು ಇಲ್ಲ. ಜನರು ತಮ್ಮ ಉದರ ಪೋಷಣೆಗೆ ಸುಳ್ಳು ಮೋಸದ ಹಾದಿಯನ್ನು ಹಿಡಿದು ದುಷ್ಟ ಕಾರ್ಯಗಳನ್ನು ಮಾಡುವ ದೃಶ್ಯಗಳನ್ನು ಎಲ್ಲಾ ಕಡೆ ನೋಡಿ ಬಹಳ ವ್ಯಥೆ ಪಡುತ್ತಾರೆ.*
*ಇನ್ನೂ ಕಲಿಯುಗ ಆರಂಭವಾಗಿ 260 ವರ್ಷಕ್ಕೆ ಕಲಿಯ ಪ್ರಾಬಲ್ಯವನ್ನು ನೋಡಿ ಬೇಸರವಾಗುತ್ತದೆ.*
ಕಲಿಯುಗ ಒಟ್ಟು 4,,32,000ವರ್ಷ.
*ನಂತರ ಸಂಚಾರ ಮಾಡುತ್ತಾ ಶ್ರೀ ಕೃಷ್ಣ ಪರಮಾತ್ಮ ತಿರುಗಾಡಿದ ಭೂಮಿ ಯಾದ ಬೃಂದಾವನ ಕ್ಕೆ ಬರುತ್ತಾರೆ.*
ಅಲ್ಲಿ ಒಬ್ಬ ತರುಣಿ ಅಳುತ್ತಿದ್ದಳು.
ಅವಳ ಎದುರುಗಡೆ ಇಬ್ಬರು ವೃದ್ದರು ದೀರ್ಘಶ್ವಾಸವನ್ನು ಬಿಡುತ್ತಾ ಮಲಗಿದ್ದರು.
ಆ ಯುವತಿಯು ಅವರನ್ನು ಶುಶ್ರೂಷಾ ಮಾಡಿ ಎಬ್ಬಿಸುವ ಪ್ರಯತ್ನ ಮಾಡುತ್ತಾ ಇದ್ದಳು.ಆದರೆ ಅವರುಏಳಲಿಲ್ಲ.ಅವಾಗ ಆ ಸ್ತ್ರೀಯು ನಾರದರ ಬಳಿ ಬಂದು 
*ಮಹರ್ಷಿಗಳೆ!! ಒಂದು ಕ್ಷಣ ನಿಲ್ಲಿರಿ.ನನ್ನ ದುಃಖ ವನ್ನು ಶಾಂತಮಾಡಿರಿ* ಅಂತ ಕೇಳುತ್ತಾಳೆ.
ಅದನ್ನು ಕೇಳಿ ಶ್ರೀನಾರದರು *ಯಾರು ನೀನು? ಇಲ್ಲಿ ಮಲಗಿದ್ದವರು ಯಾರು*?ಎಂದು ಕೇಳಿದಾಗ
*ಅವಾಗ ಆ ಸ್ತ್ರೀಯು ನನ್ನ ಹೆಸರು ಭಕ್ತಿ ಅಂತ.ಇವರು ನನ್ನ ಮಕ್ಕಳು, ಜ್ಞಾನ, ವೈರಾಗ್ಯ ಅಂತ ಅವರಿಬ್ಬರ ಹೆಸರು..ದ್ರಾವಿಡ ದೇಶ ದಲ್ಲಿ ಹುಟ್ಟಿದ ನಾನು ಕರ್ನಾಟಕದಲ್ಲಿ ಬೆಳೆದೆ.ಸ್ವಲ್ಪ ಮಹಾರಾಷ್ಟ್ರ ದಲ್ಲಿ ಬೆಳೆದೆ.ನಂತರ ಗುಜ್ಜರ್ ದೇಶ ಹೋದಾಗಮುದುಕಿಯಾದೆ.ಕಾಲಯೋಗದಿಂದ ನನ್ನ ಮಕ್ಕಳು ಜೀರ್ಣರಾಗಿರುವರು.ನಾನು ಸಹ ಕಲಿಯ ಪ್ರಭಾವದಿಂದಾಗಿ ಮುದುಕಿಯಾದೆ.ಆದರೆ ಈ ಬೃಂದಾವನ ಯಮುನಾ ತೀರಕ್ಕೆ ಬಂದ ತಕ್ಷಣ ಯುವತಿ ಆದೆ.ನನ್ನ ಮಕ್ಕಳು ಮಾತ್ರ ಮುದುಕರಾಗಿಯೇಇರುವರು.ಲೋಕದಲ್ಲಿ ತಾಯಿಯು ಮುದುಕಿಯಾಗಿ ಮಕ್ಕಳು ಯೌವ್ವನಭರಿತ ರಾಗಿ ಇರುವದು ನೀತಿ.ಇಲ್ಲಿ ಅದು ವಿರುದ್ಧ ವಾಗಿದೆ. ಇದರಿಂದ ಬಹುದುಃಖಿತಳಾಗಿದ್ದೇನೆ.ದಯವಿಟ್ಟು ನನ್ನ ಮಕ್ಕಳ ವೃದ್ಧಾಪ್ಯ ಹೋಗಲಾಡಿಸಿ ಮತ್ತು ಇದಕ್ಕೆ ಪರಿಹಾರವನ್ನು ಸೂಚಿಸಿ ಅಂತ ಕೇಳಿಕೊಳ್ಳುವಳು.*
ಅದಕ್ಕೆ ನಾರದರು 
*"ಇದು ಭಯಂಕರವಾದ ಕಲಿಯುಗ.ಸತ್ಯ ,ತಪಸ್ಸು,ಶೌಚ,ದಯೆ,ದಾನ ಎಲ್ಲಾ ಕಲಿಯ ಪ್ರಾಬಲ್ಯ ದಿಂದ ನಷ್ಟ ವಾಗಿದೆ.ಹಾಗಾಗಿ ನಿಮಗೆ ಈ ಮುದಿತನ ಬಂದಿದೆ"*.ಮತ್ತು 
*"ಈ ಬೃಂದಾವನ ಬಂದ ಕಾರಣ ನಿನಗೆ ತಾರುಣ್ಯಬಂದಿತು"* ಅಂತ ಹೇಳುತ್ತಾರೆ
ಅದಕ್ಕೆ ಭಕ್ತಿ ಎಂಬ ಹೆಸರಿನ
ತರುಣಿಯು 
*ನನ್ನ ಮಕ್ಕಳನ್ನು ಎಬ್ಬಿಸಿ* ಅಂತ ಕೇಳಿದಾಗ
*ಶ್ರೀನಾರದರು ಜ್ಞಾನ, ವೈರಾಗ್ಯ, ಅಂತ ಕೂಗಿದರು.ವೇದ,ವೇದಾಂತ ಗೀತೆಗಳ ಪಾರಾಯಣ ಮಾಡಿದರು.ಆಗ ಅವರಿಬ್ಬರು ಬಹಳ ಕಷ್ಟ ಪಟ್ಟು ಒಂದು ಕಡೆಯಿಂದ ಮತ್ತೊಂದು ಕಡೆ ತಿರುಗಿ ಮಲಗಿದರು.ಏಳಲು ಸಾಧ್ಯ ವಾಗಲಿಲ್ಲ..*.
ಈ ವಿಚಿತ್ರ ವನ್ನು ಕಂಡು ಶ್ರೀನಾರದರು ಆಶ್ಚರ್ಯಕರವಾಗಿ *ಭಗವಂತನ ಧ್ಯಾನ* ಮಾಡಲು ಅವಾಗ್ಗೆ ಅಶರೀರವಾಣಿಯಾಗಿ
*ನಿನ್ನ ಈ ಪ್ರಯತ್ನ ಸಫಲವಾಗುವದು.ಅದಕ್ಕೆ ಒಂದು ಸತ್ಕರ್ಮವನ್ನ ಮಾಡು ಅಂತ  ಅವರಿಗೆ ಅಜ್ಞಾಪಿಸಲು,*
 *ಸತ್ಕರ್ಮ ಅಂದರೆ ಏನು ಮಾಡಬೇಕು??* ಅಂತ ಯೋಚಿಸಿ ಬದರಿಕಾಶ್ರಮಕ್ಕೆ ಹೋಗಲು ಅಲ್ಲಿ ಸನಕಾದಿ ಮುನಿಗಳನ್ನು ನೋಡುತ್ತಾರೆ. ಅವರು ಸಹ ಶ್ರೀಬ್ರಹ್ಮದೇವರ ಮಕ್ಕಳು. ಅವರಿಗೆ ನಮಸ್ಕರಿಸಿ ನಡೆದ ವಿಷಯ ಎಲ್ಲಾ ತಿಳಿಸಿದಾಗ, ಅದಕ್ಕೆ ಮುನಿಗಳು *ಚಿಂತಿಸುವದು ಬೇಡ.ಅವರಿಗೆ ಮೊದಲಿನ ರೂಪ ತಾರುಣ್ಯ ಬರುತ್ತದೆ.ಶ್ರೀ ಮದ್ಭಾಗವತ ಸಪ್ತಾಹ ಮಾಡಿಸಿದರೆ ಅವರಿಗೆ ಅಭಿವೃದ್ಧಿ ಆಗುವದು* ಅಂತ ಹೇಳುತ್ತಾರೆ..
*ಸತ್ಕರ್ಮ ಅಂದರೆ ಜ್ಞಾನ ಯಜ್ಞ.ಶ್ರೀಶುಕ ಮಹರ್ಷಿಗಳು ಪಾನ ಮಾಡಿರುವ ಭಗವಂತನ ಚರಿತ್ರೆ ಗುಣವನ್ನು ಸಾರುವ ಶ್ರೀ ಮದ್ಭಾಗವತ ಪ್ರವಚನ ಮಾಡಬೇಕು..ಶ್ರೀ ಮದ್ ಭಾಗವತದಲ್ಲಿ ವೇದ,ಉಪನಿಷತ್ತು, ಮಹಾಭಾರತ ಎಲ್ಲಾದರ ಸಾರ,ಬ್ರಹ್ಮ ಸೂತ್ರದ ಸಮಗ್ರ ಅರ್ಥ ಅದರಲ್ಲಿ ಅಡಗಿದೆ..*.
*ಇದು ವಿಶೇಷ ವಾದ ಹಣ್ಣಿನಿಂದ ಸಿದ್ದ ಪಡಿಸಿದ ರಸಾಯನ. ಆದ್ದರಿಂದ ಇದನ್ನು ಪಾನ ಮಾಡಿರಿ..* ಅಂತ ಹೇಳಿ ತಾವು ಶ್ರೀನಾರದರ ಜೊತೆಯಲ್ಲಿ ಗಂಗಾನದಿಯ ತಟದಲ್ಲಿ ಬಂದು 
*ಯಾರಿಗೆ ಆಸಕ್ತಿ ಇದೆ ಅವರೆಲ್ಲರೂ ಇಂತಹ ಕಡೆ ಬರಬೇಕು ಅಂತ ಘೋಷಿಸಿದರು.*
*ಭೂಲೋಕ,ದೇವಲೋಕ, ಸತ್ಯಲೋಕದಲ್ಲಿ ಇರುವ ಎಲ್ಲಾ,ವಿಷ್ಣು ಭಕ್ತರು,ಸಕಲ ಋಷಿಗಳು,ಮುಖ್ಯವಾಗಿ*
*ಭೃಗು, ವಸಿಷ್ಠ, ಚ್ಯವನರು,ಮೇಧಾ,ದೇವಲ,ಪರುಶುರಾಮ,ವಿಶ್ವಾಮಿತ್ರ, ಮಾರ್ಕಂಡೇಯ ಅತ್ರಿ,ಪಿಪ್ಪಲರು ಅಲ್ಲದೇ ಅನೇಕ ಋಷಿಗಳು ಮತ್ತು ಶ್ರೀ ವೇದವ್ಯಾಸರು ಸಹ ತಮ್ಮ ಪರಿವಾರ ಸಮೇತವಾಗಿ ಬಂದಿದ್ದರು.*
*ಇವಾಗ ನಾವು ಸಹ ಮನೆಯಲ್ಲಿ ಅಥವಾ ಬೇರೆ ಕಡೆ ಶ್ರೀ ಮದ್ ಭಾಗವತವನ್ನು ಪ್ರವಚನ ಮಾಡಿದಾಗ ಇವರೆಲ್ಲರೂ ಬಂದಿರುತ್ತಾರೆ.* 
*ನಮ್ಮ ಕಣ್ಣಿಗೆ ಕಾಣುವದಿಲ್ಲ.ಅವರ ಕಣ್ಣಿಗೆ ನಾವು ಕಾಣುತ್ತೇವೆ.*
*ಶ್ರೀ ಮದ್ ಭಾಗವತ ಹೇಳುವ ಸಮಯದಲ್ಲಿ ಒಂದು ಮಣೆಯನ್ನು ಹಾಕಿರುತ್ತಾರೆ.ಅಲ್ಲಿ ಶ್ರೀಮುಖ್ಯ ಪ್ರಾಣದೇವರು ಬಂದು ಕುಳಿತು ಭಾಗವತವನ್ನು ಕೇಳುವರು ಅಂತ ನಂಬಿಕೆ.*
*ಮುಖ್ಯ ಪ್ರಾಣ ದೇವರು ಇದ್ದ ಕಡೆ ದುಷ್ಟ ಶಕ್ತಿಗಳ ಆಟ ಎಲ್ಲಿ??*
 ಅವರವರ ಪರಿವಾರ ದೊಡನೆ ಅವರೆಲ್ಲರೂ ಬಂದಿದ್ದರು.
*ಶ್ರೀ ಮದ್ ಭಾಗವತ ಪ್ರವಚನ ನಡೆದಿದ್ದು ಹರಿದ್ವಾರ ಕ್ಷೇತ್ರದಲ್ಲಿ..*.
*ಏತಕ್ಕೆ ಎಂದರೆ,ಯಮುನಾ ತೀರದ ಬೃಂದಾವನ ಕ್ಷೇತ್ರದಲ್ಲಿ ಭಕ್ತಿ ಎಂಬುವ ತರುಣಿ,ಜ್ಞಾನ ಮತ್ತು ವೈರಾಗ್ಯ ಎನ್ನುವ ತನ್ನ ಇಬ್ಬರು ಮಕ್ಕಳು ಮುದುಕರಾಗಿ ಬಿದ್ದಿದ್ದರು..ಅವರಿಗೆ ಚೈತನ್ಯ ಬರಲಿ ಅಂತ ಶ್ರೀ ಮದ್ಭಾಗವತ ವನ್ನು ಹರಿದ್ವಾರದಲ್ಲಿ ಸಪ್ತಾಹಮಾಡಿ ಅದರಮಹಿಮೆಯನ್ನು ತಿಳಿಸುತ್ತಾರೆ.*
*ಇತ್ತ ಯಮುನಾ ನದಿ ತಟದಲ್ಲಿ ಮಲಗಿದ್ದ ಜ್ಞಾನ, ಮತ್ತು ವೈರಾಗ್ಯ ಇವರಿಬ್ಬರಿಗೂ ಎಚ್ಚರಿಕೆ ಆಗಿದೆ.*
*ನವ ಚೈತನ್ಯ ಬಂದಿದೆ.ಆಮೇಲೆ ಆ ಮೂರು ಜನರು ತಾರುಣ್ಯವನ್ನು ಹೊಂದಿ ಶ್ರೀ ಕೃಷ್ಣ, ಮುರಾರಿ ಗೋವಿಂದ,ನಾರಾಯಣ,ಮಧುಸೂಧನ ಅಂತ ಭಜನೆ ಮಾಡುತ್ತಾ ನರ್ತನ ಮಾಡುತ್ತಾ, ಕುಣಿಯುತ್ತಾ ಕುಣಿಯುತ್ತಾ ಗಂಗಾತೀರಕ್ಕೆ ಬರುತ್ತಾರೆ..*..ಬಂದು ಅಲ್ಲಿ ಇದ್ದ ಎಲ್ಲಾರಿಗು ನಮಸ್ಕಾರಮಾಡುತ್ತಾರೆ.ಎಲ್ರಿಗು ಆಶ್ಚರ್ಯಕರ. ಮತ್ತು ಆನಂದವಾಗಿದೆ.
ಶ್ರೀ ಮದ್ಭಾಗವತ ಸಪ್ತಾಹ ಮುಗಿದ ಮೇಲೆ 
*ಭಕ್ತಿ ಅನ್ನುವ ತರುಣಿ  ಕೇಳುತ್ತಾಳೆ.*
*"ನಾನು ಎಲ್ಲಿ ವಾಸ ಮಾಡಬೇಕು?ಅಂತ.*
ಅದಕ್ಕೆ ಅಲ್ಲಿ ನೆರೆದ ಮಹರ್ಷಿಗಳು ಹೇಳುತ್ತಾರೆ.
*"ನೀನು ಯಾರು ಯಾರು ವಿಷ್ಣು ಭಕ್ತರು ಇದ್ದಾರೋ ಅವರ ಮನಸ್ಸಿನ ಒಳಗೆ ಶಾಶ್ವತವಾಗಿ ನೆಲೆಸು"* ಎಂದು ಹೇಳುತ್ತಾರೆ.
*ಈ ರೀತಿ ಅಶಕ್ತತೆ ಇಂದ ಮಲಗಿದ್ದವರನ್ನು ಸಹ ಶ್ರೀ ಮದ್ಭಾಗವತ ಎಬ್ಬಿಸಿ ಅವರಿಗೆ ಶಕ್ತಿಯನ್ನು ಕೊಟ್ಟಂತಹುದು ಇದು..ಇದನ್ನು ಶ್ರವಣ ಪಾರಾಯಣ ಮಾಡಿದರೆ ನಮಗೆ ಸಹ ಉತ್ತಮ ವಾದ ಚೈತನ್ಯ, ಉಂಟಾಗುತ್ತದೆ. ಜ್ಞಾನ ಭಕ್ತಿ, ವೈರಾಗ್ಯ ಬರುತ್ತದೆ.*.
🙏ಶ್ರೀ ಕೃಷ್ಣಾರ್ಪಣ ಮಸ್ತು🙏
*ಹಾಳು ಹರಟೆಯಾಡಿ ಮನವ* |
*|ಬೀಳು ಮಾಡಿ ಕೊಳ್ಳಲು ಬೇಡಿ*
*|ಏಳು ದಿನದ ಕಥೆಯು ಕೇಳಿ|*
*|ಏಳಿರೋ ವೈಕುಂಠಕೆ|*
🙏ಶ್ರೀ ಕೃಷ್ಣಾಯ ನಮಃ🙏
[02/09, 6:29 AM] vijayavitthala blr: *||ಪಿಬತ ಭಾಗವತಂ ರಸಮಾಲಯಂ*||Day 6

[03/09, 5:26 AM] vijayavitthala blr: *||ಪಿಬತ ಭಾಗವತಂ ರಸಮಾಲಯಂ*|| Day 7
  ✍ಪರೀಕ್ಷಿತ ಮಹಾರಾಜ ಮಗನಿಗೆ ರಾಜ್ಯ ಒಪ್ಪಿಸಿ ಮಂತ್ರಿ ಗಳನ್ನು ಕರೆದು ಸರಿಯಾಗಿ ನೋಡಿಕೊಳ್ಳಲು ಹೇಳಿ ತನ್ನ ರಾಜ್ಯ,ಕೋಶ,ಹೆಂಡತಿ,ಮಕ್ಕಳು, ಪ್ರಜೆಗಳು,ಎಲ್ಲಾ ರನ್ನು ಹಾಗು ಅವರ ಮೇಲಿನ ಅಭಿಮಾನ ತ್ಯಾಗ ಮಾಡಿಗಂಗಾ ತೀರಕ್ಕೆ ಬಂದಿದ್ದಾನೆ.ಪರೀಕ್ಷಿತ ರಾಜ ಅಲ್ಲಿ ಬರುವ ಕಾರಣವೇನೆಂದರೆ 
*ಮರಣ ಆಗುವ ವಾದರೆ ಗಂಗಾತೀರದಲ್ಲಿ ಆಗಬೇಕು* ಇದಕ್ಕಿಂತ ಪ್ರಾಶಸ್ತ್ಯ ಸ್ಥಳ ಬೇರೆ ಇಲ್ಲ.ಗಂಗಾ ನದಿ ಅಂದರೆ ಪರಮಾತ್ಮನ ಪಾದವನ್ನು ತೊಳೆದ ನೀರು.
*ತುಳಸಿ ಸಹಿತವಾಗಿ ಹರಿದುಕೊಂಡು ಬರುವಂತಹ ಪಾದೋದಕವೇ ಗಂಗಾನದಿ.*
ಯಾಕೆ ಗಂಗಾನದಿಗೆ ಇಷ್ಟು ಮಹತ್ವ ಅಂದರೆ
*ಭಗವಂತ ಶ್ರೀವಾಮನ ರೂಪಿ ಯಾಗಿ ಅವತಾರ ತಾಳಿ ಬಲಿ ಚಕ್ರವರ್ತಿ ಮಾಡುವ ಯಾಗಕ್ಕೆ ಹೋಗಿದ್ದಾನೆ.ಅವನ ಬಳಿ ಮೂರು ಪಾದ ದಷ್ಟು ಭೂಮಿಯನ್ನು ಬೇಡಿ ತ್ರಿವಿಕ್ರಮ ನಾಗಿ ಬೆಳೆದು ನಿಂತಿದ್ದಾನೆ.*
*ಅವಾಗ ತ್ರಿವಿಕ್ರಮ ರೂಪಿ ಪರಮಾತ್ಮನ ಅಂಗುಷ್ಟದ ನಖ ಬ್ರಹ್ಮಾಂಡದ ಕಟಾಹಕ್ಕೆ ತಗುಲಿತು.ಆ ಬ್ರಹ್ಮಾಂಡದ ಕಟಾಹ ದಪ್ಪ ಎಷ್ಟು ಇತ್ತು ಅಂದರೆ ನೂರು ಕೋಟಿ ಯೋಜನೆ ದಪ್ಪ ಇತ್ತು.ಅಂತಹ ಬ್ರಹ್ಮಾಂಡದ ಕಟಾಹ ದೊಳಗಿಂದ ನೀರು ಬಂದಿದ್ದು ನೋಡಿ ಶ್ರೀಬ್ರಹ್ಮ ದೇವರು ಅದನ್ನು ಕಮಂಡಲುವಿನಲ್ಲಿ ಹಿಡಿದು ಶ್ರೀತ್ರಿವಿಕ್ರಮ ರೂಪಿ ಪರಮಾತ್ಮನ ಪಾದವನ್ನು ತೊಳೆದಿದ್ದಾರೆ.ಅದೇ ಗಂಗಾ ನದಿ.*
ಆಮೇಲೆ ಗಂಗೆ ಸಾವಿರಾರು ವರ್ಷಗಳ ಕಾಲ ಸತ್ಯಲೋಕದಲ್ಲಿ ಇದ್ದು ನಂತರ ಶ್ರೀಶಿಂಶುಮಾರದೇವನ ಲೋಕಕ್ಕೆ ಬರುತ್ತಾಳೆ.
*ಅಲ್ಲಿ ಪರಮಾತ್ಮ ಚೇಳಿನ ಆಕಾರದಲ್ಲಿ ಇದ್ದಾನೆ.ಅಲ್ಲಿ ಚೇಳಿನ ಬಾಲದ ಕೊನೆಯಲ್ಲಿ ಇರುವ ಧ್ರುವಮಹಾರಾಜರು ಅದನ್ನು ತೆಗೆದುಕೊಂಡು ಇದು ಪರಮಾತ್ಮನ ಪಾದೋದಕ, ಶ್ರೀತ್ರಿವಿಕ್ರಮ ರೂಪಿ ಪರಮಾತ್ಮನ ಪಾದವನ್ನು ತೊಳೆದದ್ದು ಅಂತ ಹೇಳಿ ಭಕ್ತಿ ಇಂದ ಅದನ್ನು ಪ್ರೋಕ್ಷಣೆ ಮಾಡಿಕೊಳ್ಳುವರು.*
ಆ ನಂತರ ಅಲ್ಲಿ ಇಂದ *ಸಪ್ತರ್ಷಿಗಳ ಲೋಕಕ್ಕೆ ಗಂಗಾದೇವಿ ಬರುತ್ತಾಳೆ..*. *ಅಲ್ಲಿ ಸಹ ಸಪ್ತರ್ಷಿಗಳು ಪ್ರೋಕ್ಷಣೆ ಮಾಡಿಕೊಂಡು ಧರಿಸಿದ್ದಾರೆ.ಆ ನಂತರ ಚಂದ್ರ ಮಂಡಲಕ್ಕೆ ಬಂದು ಆ ನಂತರ ಮೇರು ಪರ್ವತಕ್ಕೆ ಬರುತ್ತಾಳೆ...*
*ಅಲ್ಲಿ ನಾಲ್ಕು ದಿಕ್ಕಿನಲ್ಲಿ ಇಳಿಯುತ್ತಾಳೆ.*
*ಪೂರ್ವ ದಿಕ್ಕಿನಲ್ಲಿ ಸೀತಾ,ದಕ್ಷಿಣ ದಿಕ್ಕಿನಲ್ಲಿ ಅಲಕಾನಂದ,ಪಶ್ಚಿಮ ದಿಕ್ಕಿನಲ್ಲಿ ಚಕ್ಷು ಮತ್ತು ಉತ್ತರದಲ್ಲಿ ಭದ್ರ* ಅಂತ ನಾಮದಿಂದ ಕರೆಸಿಕೊಂಡು ಹರಿದು ಹೋಗುತ್ತಾಳೆ.
*ಅಲಕನಂದಾ ನದಿಯಾಗಿ ಹರಿದು ಗಂಧಮಾದನ ಪರ್ವತಕ್ಕೆ ಬಂದು ಅಲ್ಲಿಂದ ಮಾನಸ ಸರೋವರ ಕ್ಕೆಬರುತ್ತಾಳೆ.ಅಲ್ಲಿ ತುಂಬಿ ಹರಿದಾಗ ಸರಯೂ ನದಿ ಅಂತ ಕರೆಸಿಕೊಂಡು ಹಿಮಾಲಯ ಪರ್ವತಕ್ಕೆ ಬರುತ್ತಾಳೆ*.ಅಲ್ಲಿ ಸಹ ಹರಿದಾಗ ಅವಳನ್ನು ಹಿಮವಂತನ ಪುತ್ರಿ ಅಂತ ಸಹ ಕರೆಯುತ್ತಾರೆ.ಆ ನಂತರ ದೇವತೆಗಳು ಬಂದು ನಮಗೆಲ್ಲ ಬೇಕು ನೀನು ಅಂತ ಹೇಳಿ ನಮ್ಮ ಲೋಕಕ್ಕೆ ಬಾ ಅಂತ ಕರೆದುಕೊಂಡು ಹೋಗುತ್ತಾರೆ.
*ಆ ನಂತರ ಸಗರ ಚಕ್ರವರ್ತಿಯ ಅರವತ್ತು ಸಾವಿರ ಮಕ್ಕಳು .ಶ್ರೀಕಪಿಲ ರೂಪಿ ಪರಮಾತ್ಮನಿಗೆ ಅಪಹಾಸ್ಯ, ಮಾಡಿದ ಪರಿಣಾಮವಾಗಿ ಸುಟ್ಟು ಭಸ್ಮ ವಾಗಿದ್ದರು.*
ಅವರಿಗೆ ಸದ್ಗತಿ  ಆಗಲು ಗಂಗೆ ಭೂಲೋಕಕ್ಕೆ ಹರಿದು ಬರಬೇಕು ಅದಕ್ಕೆ ಭಗೀರಥ ಮಹಾರಾಜ ತಪಸ್ಸು ಮಾಡಿ ಗಂಗಾದೇವಿ ಯನ್ನು ಭೂಲೋಕಕ್ಕೆ ಕರೆಸಿಕೊಂಡ.
*ಜೇಷ್ಠ ಶುದ್ದ ದಶಮಿ ಮಂಗಳವಾರ ದಿನ ಹಸ್ತ ನಕ್ಷತ್ರ ದಲ್ಲಿ ಗಂಗಾದೇವಿಯು ಸ್ವರ್ಗದಿಂದ ಭೂಲೋಕಕ್ಕೆ ಇಳಿದು ಬಂದಳು.ಗಂಗೆಯು ಬರುವ ರಭಸವನ್ನು ನೋಡಿ ತನ್ನ ಜಟೆಯಲ್ಲಿ ಬಂಧಿಸಿ ದವರು ಶ್ರೀರುದ್ರ ದೇವರು..ನಂತರ  ಭಗೀರಥ ಅವರ ಬಳಿ ಪ್ರಾರ್ಥನೆ ಮಾಡಿದಾಗ ಶ್ರೀರುದ್ರ ದೇವರ ಜಟೆಇಂದ ಗಂಗಾದೇವಿ ಭೂಲೋಕಕ್ಕೆ ಬರುತ್ತಾಳೆ..ಬರುವಾಗ ಜಹ್ನು ಋಷಿಗಳ ಆಶ್ರಮ ವನ್ನು ಕೊಚ್ಚಿ ಕೊಂಡು ಹೋಗುವುದನ್ನು ಕಂಡು ಋಷಿಗಳು ಸಂಪೂರ್ಣ ಪಾನ ಮಾಡುತ್ತಾರೆ..*.
ಮತ್ತೆ ಭಗೀರಥ ಅವರನ್ನು ಒಲಿಸಿಕೊಂಡು ಅವರ ಕಿವಿಯಿಂದ ಗಂಗಾದೇವಿ ಹೊರಬರುತ್ತಾಳೆ.
*ಹಾಗೆ ಬಂದ ಕಾರಣದಿಂದ ಭಾಗೀರಥಿ, ಜಾಹ್ನವಿ ಅಂತ* ಹೆಸರು ಬಂತು.
*ಸಮುದ್ರ ದ್ವಾರ ಪಾತಾಳ ಲೋಕವನ್ನು ಹೋಗಿ ಸಗರ ಮಹಾರಾಜನ ಮಕ್ಕಳಿಗೆ ಉದ್ದಾರ ಮಾಡಿದಳು.ಹೀಗೆ ಗಂಗೆಗೆ ತ್ರಿಪಥಗಾ ಅಂತ ಹೆಸರು ಬಂದಿತು.ದೇವಲೋಕದಿಂದಭೂಲೋಕಕ್ಕೆ,ಭೂಲೋಕದಿಂದ ಪಾತಾಳ ಲೋಕಕ್ಕೆ ಹರಿದು ಕೊಂಡು ಬಂದಳು.ಹೀಗೆ ಅಂತರಿಕ್ಷ, ಭೂಮಿ ಮತ್ತು ಪಾತಾಳ ಲೋಕವನ್ನು ಹರಿದು ಬಂದ ಕಾರಣ ತ್ರಿಪಥಗಾ ಅಂತ ಹೆಸರಿನಲ್ಲಿಕರೆಯಲ್ಪಟ್ಟಳು..*.
*ದೇವಲೋಕದಲ್ಲಿ ಹರಿಯುವಾಗ ಮಂದಾಕಿನಿ,ಭೂಮಿಯಲ್ಲಿ ಹರಿಯುವಾಗ ಭಾಗೀರಥಿ,ಪಾತಾಳ ಲೋಕಕ್ಕೆ ಹರಿದು ಹೋದಾಗ ಅದೇ ಗಂಗಾದೇವಿ ಗೆ ಭೋಗವತಿ ಅಂತ ಹೆಸರು ಬಂತು.ಅಂದರೆ ಗಂಗಾದೇವಿಯು* 
*ಮೇಲಿನ ಲೋಕದಲ್ಲಿ ಇದ್ದರು ಕೆಳಗೆ ಕೆಳಗೆ ಇಳಿಯುತ್ತಾ ಬಂದು ಪಾತಾಳ ಲೋಕವನ್ನು ಸೇರಿ ಯಾರು ಎಷ್ಟು ಕೆಳಮಟ್ಟದಲ್ಲಿ ಇದ್ದರು ಸಹ ಉದ್ದಾರ ಮಾಡುತ್ತೀ ತಾಯಿ ನೀನು* ಅಂತ ವರ್ಣನೆಯನ್ನು ಮಾಡುತ್ತಾರೆ.ಸ್ನಾನ ಮಾಡುವಾಗ ನಿತ್ಯ ಗಂಗಾದೇವಿಯ ಸ್ಮರಣೆ, ನಿತ್ಯ ಗಂಗಾಪೂಜೆ ಅವಶ್ಯಕ.
 ಗಂಗಾದೇವಿಯ ಜನನ,ಮತ್ತು ಗಂಗೆಯ ಮಹತ್ವ ತಿಳಿದ ಪರಿಕ್ಷೀತ ರಾಜ ಆ ತಟದಲ್ಲಿ ಒಂದು ಕಂಭ ನೆಡಸಿ ಅದರ ಮೇಲೆ ಕೂಡಲಿಕ್ಕೆ ಭವನವನ್ನು ನಿರ್ಮಿಸಿ ಕೊಂಡು ಕುಳಿತಿದ್ದಾನೆ.
ರಾಜನಿಗೆ ಶಾಪ ಬಂದ ವಿಷಯ ಸಕಲರಿಗು ತಿಳಿಯಿತು.
ಸಾವಿರಾರು ಋಷಿಗಳು ರಾಜನನ್ನು ಮಾತನಾಡಿಸಲು ಬರುತ್ತಾರೆ. ಎಲ್ಲಾ ಋಷಿಗಳ ಸಮೂಹವೇ ಅಲ್ಲಿ ಬಂದಿದೆ.
ಅತ್ರಿ ಋಷಿಗಳು, ಚ್ಯವನರು,ವಸಿಷ್ಠ ರು ಪರಾಶರರು,ಹೀಗೆ ಇನ್ನೂ ಅನೇಕ ಋಷಿಗಳು ಆಗಮನ ವಾಗಿದೆ.ಆ ಋಷಿಗಳ ಸ್ಮರಣೆ ಮಾಡಿದರೆ ನಮ್ಮ ಜೀವನ ಧನ್ಯ.
ಬಂದಂತಹ ಜ್ಞಾನಿಗಳಿಗೆ ರಾಜನು ಕೈಜೋಡಿಸಿ👏 *"ಬರುವುದು ಬಂದೀದ್ದೀರಿ.ಇನ್ನೂ ಏಳು ದಿವಸ ಇಲ್ಲಿ ಇದ್ದು ತತ್ವ ವಿಚಾರ ಮಾಡುತ್ತಾ ಇರಿ.ತಕ್ಷಕ ಸರ್ಪ ಬಂದು ಕಚ್ಚಿದಾಗ ಕೂಡಲೆ ನೀವೆಲ್ಲರು ಶ್ರೀವಿಷ್ಣುವಿನ ನಾಮವನ್ನು ಹೇಳುತ್ತಾ ನನ್ನ ಕಿವಿಗೆ ಭಗವಂತನ ನಾಮ ಕೇಳುವ ಹಾಗೇ ಮಾಡಿ..* ಎಂದು ವಿನೀತನಾಗಿ ಕೇಳಿಕೊಂಡಾಗ ಸಕಲರು ಆಗಲಿ ಅಂತ ಒಪ್ಪಿಕೊಂಡರು.
ಆ ಸಮಯಕ್ಕೆ ಸರಿಯಾಗಿ ಚಿಕ್ಕ ವಯಸ್ಸಿನ ತರಹ ಕಾಣುವ ಒಬ್ಬ ಋಷಿಗಳು ಬಂದರು. ಮೈಮೇಲೆ ವಸ್ತ್ರ ಇಲ್ಲ.ತಲೆ ಕೂದಲು ಎಲ್ಲಾ ಕೆದರಿ ಹೋಗಿದೆ. ನೋಡಲು ಹುಚ್ಚರ ತರಹ ಕಾಣಿಸುತ್ತಾ ಇದ್ದಾರೆ ಜನ ಸಾಮಾನ್ಯರಿಗೆ.
*ಈ ವೇಷದಲ್ಲಿ ಬಂದಂತವರು ಶ್ರೀಶುಕ ಮುನಿಗಳು. ಸಾಕ್ಷಾತ್ ಶ್ರೀ ವೇದವ್ಯಾಸ ದೇವರ ಮಕ್ಕಳು.*
ಯಾವಾಗಲೂ ಭಗವಂತನ ಚಿಂತನೆ ಯಲ್ಲಿ ಇರುತ್ತಿದ್ದ ಕಾರಣ ಅವಧೂತರಂತೆ ಕಾಣಿಸುತ್ತಾ ಇದ್ದಾರೆ.ಶ್ರೀ ಶುಕ ಮುನಿಗಳು ಅಲ್ಲಿಗೆ ಬಂದ ತಕ್ಷಣ ಅವರಿಗೆ ಉನ್ನತ ಆಸನವನ್ನು ಕೊಟ್ಟು, ರಾಜನು ನಮಸ್ಕರಿಸಿ ಅವರಿಗೆ ಕೈ ಮುಗಿದು ಹೇಳುತ್ತಾನೆ.
*ಸ್ವಾಮಿ!! ಶ್ರೀ ಕೃಷ್ಣ ಪರಮಾತ್ಮ ಪಾಂಡವರ ಮೇಲೆ ಇರುವ ಪ್ರೀತಿ ಇಂದ ಪಾಂಡವರ ವಂಶದ ಕುಡಿಯಾದ ನನ್ನ ಮೇಲೆ ಅನುಗ್ರಹ ವಿಶೇಷವಾಗಿ ಮಾಡಿದ್ದಾನೆ.ಯಾಕೆಂದರೆ* 
*ಸಾಮಾನ್ಯ ಜನರಿಗೆ ಸಹ ನಿಮ್ಮ ದರುಶನ ಭಾಗ್ಯ ಸಿಗದು.ಅಂತಹುದರಲ್ಲಿ ಇನ್ನೂ ಏಳು ದಿನಗಳಲ್ಲಿ ಸಾಯಲು ಹೊರಟಿರುವ ನನಗೆ ನಿಮ್ಮ ದರುಶನ ಯಾವುದೊ ಪುಣ್ಯ ದಿಂದ ಲಭಿಸಿದೆ ಅಂತ ಹೇಳಿ* ಅವರ ಪಾದಕ್ಕೆ ಎರಗಿ
*ಮಹರ್ಷಿಗಳೇ!! ಮರಣ ಸಮೀಪಿಸಿದಾಗ ಮನುಷ್ಯ ಏನು ಮಾಡಬೇಕು??*
*ಏನು ಜಪ ಮಾಡಬೇಕು??* ಅಂತ ಅವರ ಬಳಿ ಕೇಳುತ್ತಾನೆ.
ಅದಕ್ಕೆ ಉತ್ತರ ವಾಗಿ *ಶ್ರೀಶುಕಮುನಿಗಳು ಹೇಳುತ್ತಾರೆ*.
*"ಹೇ!! ರಾಜನ್ !!ನಾನು ನಿನಗೆ ಶ್ರೀ ಮದ್ಭಾಗವತವನ್ನು ಹೇಳುತ್ತೇನೆ.ಅದನ್ನು ಕೇಳು".*
*ನಂತರ ಮರಣವನ್ನು ಸಮೀಪಿಸಿದಾಗ ಭಗವಂತನ ವಿರಾಟ್ ರೂಪವನ್ನು ಧ್ಯಾನ ಮಾಡು ಅಂತ ಹೇಳಿದ್ದಾರೆ.*
ಅದಕ್ಕೆ ರಾಜ ಹೇಳುವನು..
*ಸ್ವಾಮಿ!! ನನಗೆ ಇರುವ ಆಯುಸ್ಸು ಏಳುದಿನ ಮಾತ್ರ.ನೀವು ಈ ಅಲ್ಪ ಸಮಯದಲ್ಲಿ ಶ್ರೀ ಮದ್ಭಾಗವತವನ್ನು ಹೇಳಿದರೆ ಹೇಗೆ??*
ಅಂತ ಕೇಳುತ್ತಾನೆ..
*ಅದಕ್ಕೆ ಶುಕ ಮುನಿಗಳು*
*ರಾಜನ್! ಕೇಳು. ಮನುಷ್ಯ ನಿಗೆ ತನ್ನ ಮೈಮೇಲೆ ಎಚ್ಚರಿಕೆ ಇಲ್ಲದಿದ್ದರೆ*,ಅಥವಾ 
*ನನಗೆ ಮರಣ ಬರುತ್ತದೆ ಅನ್ನುವ ಜ್ಞಾನ ವೇ ಇಲ್ಲ ದಿದ್ದರೆ ಸದಾ ಭೋಗ ಜೀವನವನ್ನು ನಡೆಸುವವನಿಗೆ ಈ ಭೂಮಿಯ ಮೇಲೆ ಎಷ್ಟು ದಿವಸ ಇದ್ದರೆ ಏನು??ಮನುಷ್ಯರು,ಒಂದಲ್ಲ ಒಂದಿನ ದೇಹವನ್ನು,ಮತ್ತು ಈ ಲೋಕವನ್ನು ಬಿಟ್ಟು ಹೋಗಲೇಬೇಕು.ಸಾಧನೆ ಗಾಗಿ ಬಂದಿರತಕ್ಕಂತಹ ಈ ದೇಹ ಶಾಶ್ವತ ವಲ್ಲ ಎಂದು ಗೊತ್ತಿದ್ದವರಿಗೆ ಒಂದು ಮುಹೂರ್ತ ಇದ್ದರು ಸಾಕು.*
*ಖಟ್ವಾಂಗ ಎಂಬಂತಹ ರಾಜ ಒಂದೇ ಒಂದು ಮುಹೂರ್ತ ತನ್ನ ಆಯುಸ್ಸು ಇದೆ ಎಂದು ತಿಳಿದುಕೊಂಡು ಪರಮಾತ್ಮನಲ್ಲಿ ಮನಸ್ಸಿಟ್ಟು ಮುಕ್ತಿ ಯನ್ನು ಪಡೆದಿದ್ದಾನೆ.*
*ಹೇ !!ರಾಜ ನಿನಗಾದರು ಏಳು ದಿನಗಳ ಸಮಯವಿದೆ.ಏನು ಚಿಂತೆಯನ್ನುಮಾಡಬೇಡ.ನಾನು ನಿನಗೆ ಭಾಗವತವನ್ನು ಹೇಳುತ್ತೇನೆ ಅಂತ ಹೇಳಿ*
ಅದನ್ನು ಹೇಳಲು ಪ್ರಾರಂಭಿಸಿದರು.
ಇಲ್ಲಿ ಗೆ ಭಾಗವತದ ಪ್ರಥಮ ಸ್ಕಂದ ಮುಗಿಯಿತು.
ಮುಂದಿನ ಭಾಗ ನಾಳೆ..
🙏ಶ್ರೀ ಕೃಷ್ಣಾರ್ಪಣ ಮಸ್ತು🙏
*ಹಾಳು ಹರಟೆಯಾಡಿ ಮನವ* |
*|ಬೀಳು ಮಾಡಿ ಕೊಳ್ಳಲು ಬೇಡಿ||ಏಳು ದಿನದ ಕಥೆಯು ಕೇಳಿ|ಏಳಿರೋ ವೈಕುಂಠಕೆ|*
🙏ಶ್ರೀ‌ಕಪಿಲಾಯ ನಮಃ🙏

Post a Comment

Previous Post Next Post