*|ಪಿಬತ ಭಾಗವತಂ ರಸಮಾಲಯಂ|||*Day14

*|ಪಿಬತ ಭಾಗವತಂ ರಸಮಾಲಯಂ|||*
Day14
ಶ್ರೀಶುಕಮುನಿಗಳು ಮುಂದುವರೆಸುತ್ತ ಪರೀಕ್ಷಿತ್ ರಾಜನಿಗೆ ಹೇಳುತ್ತಾರೆ. 
*"ಯಾವ ದಿನ ಸಜ್ಜನರು ಸೇರುತ್ತಾರೋ ಆಗ ಅವರಿಂದ ಬರುವ ಭಗವಂತನ ಕುರಿತಾದ ಮಾತುಗಳೇ ಅದೇ ಶ್ರೀಹರಿಯಕಥೆ.*
*ಪರಮಾತ್ಮನ ಕಥೆಯನ್ನು ಬಿಟ್ಟು ಒಂದೊಂದು ಕ್ಷಣ ಕಳೆಯುವುದೇ ವ್ಯರ್ಥ. ಹೀಗೆ ಬಹುಕಾಲ ಬದುಕಿದ್ದರು ವ್ಯರ್ಥ.ಮರ ಗಿಡಗಳು ಬದುಕುತ್ತವೆ. ನಾಯಿ ನರಿ ಹಂದಿಗಳು ಆಹಾರ ತಿಂದು ಮಲ ವಿಸರ್ಜನೆ ಮಾಡುವುದ್ದಿಲ್ಲವೇ..*
*ನಾವು ಮಾನವರು ಹೀಗೆ ಬದುಕಿದ್ದರೆ ಮಾನವ ಜನ್ಮದ ಬೆಲೆಯೇನು.??*
*ಶ್ರೀಹರಿಯ ಚರಿತ್ರೆ ಕೇಳದವನು ಪ್ರಾಣಿಗಳಿಗೆ ಸಮ.*
*ಶ್ರೀಹರಿಯ ಕತೆ ಕೇಳದ ಕಿವಿಗಳು ಬೆಟ್ಟದ ಮೇಲಿನ ಗುಹೆಗಳಿಗೆ ಸಮ.*
*ಭಗವಂತನ ಕುರಿತಾದ ಕೀರ್ತನೆ ಮಹಿಮೆಯನ್ನು ಹಾಡದ ನಾಲಿಗೆ ಕಪ್ಪೆಗಳಿಗೆ ಸಮ.ಶ್ರೀಹರಿಗೆ ಎರಗದ ತಲೆ ಕಲ್ಲು ಬಂಡೆ. ಶ್ರೀಹರಿಯ ಪೂಜಿಸದ ಕೈಗಳು ಹೆಣದಕೈಗಳು. ಶ್ರೀಹರಿಯ ಪ್ರತಿಮೆ ನೋಡದ ಕಣ್ಣು ನವಿಲುಗರಿಯಲ್ಲಿರುವ ಕಣ್ಣು.* 
*ಶ್ರೀಹರಿಯ ಕ್ಷೇತ್ರ ಗಳ ಯಾತ್ರೆಗಳನ್ನು ಮಾಡದ ಕಾಲು ಮರದ ಕಾಲುಗಳು. ಶ್ರೀಹರಿಯ ಮತ್ತು ಅವನ ಭಕ್ತರ ಪಾದ ಧೂಳಿಯನ್ನು ಬಯಸದವನು,ಮತ್ತು ಅದನ್ನು ಧರಿಸದವನು ಉಸಿರಾಡುವ ಹೆಣ. ಶ್ರೀಹರಿಯ ಕಥೆಯನ್ನು ಕೇಳುವಾಗ ಅಥವಾ ಓದುವಾಗ ಏಕಾಗ್ರತೆ ಇಲ್ಲದ ಮನಸ್ಸು ಕಲ್ಲು ಎಂದು ಶ್ರೀಪರೀಕ್ಷಿತ್ ರಾಜರಿಗೆ ಶ್ರೀಶುಕಮುನಿಗಳು ವಿವರಿಸಿ ಹೇಳುತ್ತಾರೆ.*
ಮುಂದಿನ ಭಾಗ ನಾಳೆ.
🙏ಶ್ರೀ ಕೃಷ್ಣಾರ್ಪಣ ಮಸ್ತು🙏
*ಹಾಳು ಹರಟೆಯಾಡಿ ಮನವ |*
*|ಬೀಳು ಮಾಡಿ ಕೊಳ್ಳಲು ಬೇಡಿ|*
*|ಏಳು ದಿನದ ಕಥೆಯು ಕೇಳಿ|ಏಳಿರೋ ವೈಕುಂಠಕೆ|*
🙏ಶ್ರೀ ಕಪಿಲಾಯ ನಮಃ🙏

Post a Comment

Previous Post Next Post