*|ಪಿಬತ ಭಾಗವತಂ ರಸಮಾಲಯಂ|||*Day14.15

[10/09, 5:23 AM] vijayavitthala blr: *|ಪಿಬತ ಭಾಗವತಂ ರಸಮಾಲಯಂ|||*
Day14
ಶ್ರೀಶುಕಮುನಿಗಳು ಮುಂದುವರೆಸುತ್ತ ಪರೀಕ್ಷಿತ್ ರಾಜನಿಗೆ ಹೇಳುತ್ತಾರೆ. 
*"ಯಾವ ದಿನ ಸಜ್ಜನರು ಸೇರುತ್ತಾರೋ ಆಗ ಅವರಿಂದ ಬರುವ ಭಗವಂತನ ಕುರಿತಾದ ಮಾತುಗಳೇ ಅದೇ ಶ್ರೀಹರಿಯಕಥೆ.*
*ಪರಮಾತ್ಮನ ಕಥೆಯನ್ನು ಬಿಟ್ಟು ಒಂದೊಂದು ಕ್ಷಣ ಕಳೆಯುವುದೇ ವ್ಯರ್ಥ. ಹೀಗೆ ಬಹುಕಾಲ ಬದುಕಿದ್ದರು ವ್ಯರ್ಥ.ಮರ ಗಿಡಗಳು ಬದುಕುತ್ತವೆ. ನಾಯಿ ನರಿ ಹಂದಿಗಳು ಆಹಾರ ತಿಂದು ಮಲ ವಿಸರ್ಜನೆ ಮಾಡುವುದ್ದಿಲ್ಲವೇ..*
*ನಾವು ಮಾನವರು ಹೀಗೆ ಬದುಕಿದ್ದರೆ ಮಾನವ ಜನ್ಮದ ಬೆಲೆಯೇನು.??*
*ಶ್ರೀಹರಿಯ ಚರಿತ್ರೆ ಕೇಳದವನು ಪ್ರಾಣಿಗಳಿಗೆ ಸಮ.*
*ಶ್ರೀಹರಿಯ ಕತೆ ಕೇಳದ ಕಿವಿಗಳು ಬೆಟ್ಟದ ಮೇಲಿನ ಗುಹೆಗಳಿಗೆ ಸಮ.*
*ಭಗವಂತನ ಕುರಿತಾದ ಕೀರ್ತನೆ ಮಹಿಮೆಯನ್ನು ಹಾಡದ ನಾಲಿಗೆ ಕಪ್ಪೆಗಳಿಗೆ ಸಮ.ಶ್ರೀಹರಿಗೆ ಎರಗದ ತಲೆ ಕಲ್ಲು ಬಂಡೆ. ಶ್ರೀಹರಿಯ ಪೂಜಿಸದ ಕೈಗಳು ಹೆಣದಕೈಗಳು. ಶ್ರೀಹರಿಯ ಪ್ರತಿಮೆ ನೋಡದ ಕಣ್ಣು ನವಿಲುಗರಿಯಲ್ಲಿರುವ ಕಣ್ಣು.* 
*ಶ್ರೀಹರಿಯ ಕ್ಷೇತ್ರ ಗಳ ಯಾತ್ರೆಗಳನ್ನು ಮಾಡದ ಕಾಲು ಮರದ ಕಾಲುಗಳು. ಶ್ರೀಹರಿಯ ಮತ್ತು ಅವನ ಭಕ್ತರ ಪಾದ ಧೂಳಿಯನ್ನು ಬಯಸದವನು,ಮತ್ತು ಅದನ್ನು ಧರಿಸದವನು ಉಸಿರಾಡುವ ಹೆಣ. ಶ್ರೀಹರಿಯ ಕಥೆಯನ್ನು ಕೇಳುವಾಗ ಅಥವಾ ಓದುವಾಗ ಏಕಾಗ್ರತೆ ಇಲ್ಲದ ಮನಸ್ಸು ಕಲ್ಲು ಎಂದು ಶ್ರೀಪರೀಕ್ಷಿತ್ ರಾಜರಿಗೆ ಶ್ರೀಶುಕಮುನಿಗಳು ವಿವರಿಸಿ ಹೇಳುತ್ತಾರೆ.*
ಮುಂದಿನ ಭಾಗ ನಾಳೆ.
🙏ಶ್ರೀ ಕೃಷ್ಣಾರ್ಪಣ ಮಸ್ತು🙏
*ಹಾಳು ಹರಟೆಯಾಡಿ ಮನವ |*
*|ಬೀಳು ಮಾಡಿ ಕೊಳ್ಳಲು ಬೇಡಿ|*
*|ಏಳು ದಿನದ ಕಥೆಯು ಕೇಳಿ|ಏಳಿರೋ ವೈಕುಂಠಕೆ|*
🙏ಶ್ರೀ ಕಪಿಲಾಯ ನಮಃ🙏
[11/09, 5:20 AM] vijayavitthala blr: *|ಪಿಬತ ಭಾಗವತಂ ರಸಮಾಲಯಂ||*
Day 15
ನಿನ್ನೆಯ ದಿನ ಶ್ರೀಶುಕಮುನಿಗಳು ಪರೀಕ್ಷಿತ ರಾಜನಿಗೆ ಶ್ರೀಹರಿಯ ನಾಮ ಸ್ಮರಣೆಯ ಮಹತ್ವದ ಬಗ್ಗೆ ಹೇಳಿದ್ದಾರೆ. ನಂತರ ಮುಂದುವರಿಸುತ್ತಾರೆ.
*ಭಗವಂತನ ಅವಯವಗಳ ಬಗ್ಗೆ ಚಿಂತನೆ ಮಾಡುವದರಿಂದ ನಮ್ಮ ಒಳಗಡೆ ಇರುವ ತಮೋ ಗುಣ ಕಳೆಯುತ್ತದೆ.*
 ಬಲ್ಲವರಿಂದ ಇನ್ನೂ ಹೆಚ್ಚಿನ ವಿವರಣೆ ಇದರ ಬಗ್ಗೆ ತಿಳಿಯಬಹುದು.
 ಆನಂತರ ಶ್ರೀಶುಕಮುನಿಗಳು ಭಗವಂತನ ಗುಣಗಳನ್ನು ಹೇಳಿದ್ದಾರೆ.
*ಶ್ರೀ ಹರಿಯ ಗುಣಗಳು ಅನಂತ.ಅವನ ರೂಪಗಳು ಅನಂತ.ಅವನ ಮಹಿಮೆಯನ್ನು ತಿಳಿಯಲು ಶ್ರೀರಮಾ ದೇವಿಗು ಸಾಧ್ಯವಿಲ್ಲ.*
(ಬಗೆಬಗೆಯ ನೂತನವ ಕಾಣುತ ಮಿಗೆ ಹರುಷದಿಂ ಪೊಗಳಿ ಹಿಗ್ಗುವ ತ್ರಿಗುಣಮಾನಿನಿ ಮಹಾಲಕುಮಿ  ಸಂತೈಸಲು ಅನುದಿನವು.)
ಮತ್ತು 
(ಎನ್ನಮ್ಮ ಸಿರಿದೇವಿ ಇನ್ನೂ ಅರಿಯಲು ನಿನ್ನ ಮಹಿಮೆ.
ಕುನ್ನಿ ಮಾನವ ನಾನೇನು ಬಲ್ಲೆನೋ ಎನ್ನುವ ದಾಸರ ವಾಕ್ಯ..)
*ಹೀಗೆ ಮಹಾಲಕ್ಷ್ಮಿ ದೇವಿಯು ನಿತ್ಯವೂ ಭಗವಂತನ ರೂಪ ಗುಣಗಳನ್ನು ಎಣಿಸುತ್ತಾ ಇರುವಳು ಎಂಬುದು ಹಿರಿಯರವಚನ.*
*ತದನಂತರ ನಾಲ್ಕು ಮುಖದ ಶ್ರೀಬ್ರಹ್ಮದೇವರು, ಸಾವಿರ ಮುಖ, ಎರಡುಸಾವಿರ ನಾಲಿಗೆಯುಳ್ಳ ಶ್ರೀಶೇಷದೇವರು,ಪಂಚ ಮುಖದ ಶ್ರೀ ರುದ್ರ ದೇವರು,ಸಾವಿರ ಕಣ್ಣಿನ ಶ್ರೀಇಂದ್ರದೇವ,ಆರು ಮುಖದ ಶ್ರೀಸ್ಕಂಧದೇವ,ದೇವ ಗುರುವಾದ,ವಾಚಸ್ಪತಿ ಎನಿಸಿದ ಶ್ರೀಬೃಹಸ್ಪತಿ ಆಚಾರ್ಯ ಇವರೆಲ್ಲರೂ ಒಟ್ಟಾಗಿ ಸರ್ವಕಾಲ ಗುಣಿಸಿದರು,ಎಣಿಸಿದರು ಶ್ರೀ ಹರಿಯ ಮಹಿಮೆ ಗುಣಗಳನ್ನು ತಿಳಿಯಲು ಅಸಾಧ್ಯ.*
ನಂತರ ಮುಂದೆ ಹೇಳುತ್ತಾರೆ.
*ಪ್ರಳಯಕಾಲದಲ್ಲಿ ಪರಮಾತ್ಮನು ಯೋಗ ನಿದ್ರೆ ಯಲ್ಲಿ ಇರುತ್ತಾನೆ. ಅದರಲ್ಲಿ ಶ್ರೀಬ್ರಹ್ಮ ದೇವರ 87.5ವರ್ಷ ಪ್ರಳಯ ಕಾಲ,೧೨.೫ವರ್ಷಗಳ ಕಾಲ ಸೃಷ್ಟಿ ಕಾರ್ಯ.*
*ಪ್ರಳಯ ಕಾಲ ಮುಗಿದ ಮೇಲೆ ಶ್ರೀಮಹಾಲಕ್ಷ್ಮಿ ದೇವಿಯರು ಭಗವಂತನಿಗೆ ಪ್ರಾರ್ಥನೆ ಮಾಡುತ್ತಾರೆ.*
*ಜಗತ್ತು ಸೃಷ್ಟಿಯ ಕಾರ್ಯ ಆರಂಭಿಸು ಎಂದು*.
ಅವಾಗ ಪರಮಾತ್ಮನು ಎಚ್ಚೆತ್ತಗೊಂಡವನಂತೆ ನಟಿಸಿ ಸೃಷ್ಟಿ ಕಾರ್ಯಪ್ರಾರಂಭ ಮಾಡುತ್ತಾನೆ.
*"ನಾನು ಅನೇಕ ರೂಪಗಳನ್ನು ಧಾರಣೆ ಮಾಡಬೇಕು.*
 *ಮತ್ತು ಚೇತನಪ್ರಪಂಚ ಸೃಷ್ಟಿ ಮಾಡಿ ಅದರೊಳಗೆ ಅದೇನಾಮದಿಂದ ಪ್ರವೇಶ ಮಾಡಬೇಕು. ಅದರದ್ದೇ ಆಕಾರ,ಅದೇ ಹೆಸರಿನಿಂದ ಒಳಗಡೆ ಪ್ರವೇಶ ಮಾಡಬೇಕು*. 
*ಬ್ರಹ್ಮ ದೇವರ ಸೃಷ್ಟಿ ಮಾಡಿ ಅವರೊಳಗಡೆ ಅದೇ* *ಹೆಸರಿನಿಂದ ಪ್ರವೇಶಮಾಡಿ ಸೃಷ್ಟಿ ಕಾರ್ಯಗಳನ್ನು ಆರಂಭಿಸಬೇಕು..* ಎಂದು 
*ಆನಂತರದಲ್ಲಿ ಭಗವಂತ ೨೪ ತತ್ವಗಳನ್ನು ಸೃಷ್ಟಿ ಮಾಡುತ್ತಾನೆ.ಅದಕ್ಕೆ ಅಭಿಮಾನಿ ದೇವತೆಗಳ ಸೃಷ್ಟಿ ಸಹ ಆಗಿದೆ.ನಂತರದಲ್ಲಿ ಭಗವಂತನ ನಾಭಿಯಲ್ಲಿ ಕಮಲ ಸೃಷ್ಟಿ ಯಾಗಿದೆ.ಆ ಕಮಲದಲ್ಲಿ ಬ್ರಹ್ಮ ದೇವರು ಸೃಷ್ಟಿ ಯಾಗಿದ್ದಾರೆ.ಆ ಹದಿನಾಲ್ಕು ದಳದ ಕಮಲದಲ್ಲಿ ಬ್ರಹ್ಮ ದೇವರನ್ನು ಹುಟ್ಟಿಸಿದ ಭಗವಂತ*.ಅವಾಗ *ಬ್ರಹ್ಮ ದೇವರು ಸುತ್ತಲೂ ನೋಡಿದರು ಯಾರು ಕಾಣಲಿಲ್ಲ.*
*ನಾನೊಬ್ಬನೇ ಇದ್ದೀನಲ್ಲ ಎಂದು ಗಾಭರಿಗೊಂಡಂತೆ ನಟಿಸಿದರು. ಪರಮಾತ್ಮನ ದರುಶನ ಆಗಲಿಲ್ಲ. ನಾಲ್ಕು ಮುಖ ಮಾಡಿಕೊಂಡು ಎಲ್ಲಾ ಕಡೆ ಹುಡುಕಿದರು ಭಗವಂತ ಕಾಣಲಿಲ್ಲ*. ಆಗ ಅಶರೀರವಾಣಿ ಆಗಿದೆ.
*"ತಪ, ತಪ ,* ಅಂತ ಕೇಳಿಸಿದೆ..
*ಪರಮಾತ್ಮನ ಕಾಣಬೇಕಾದರೆ ತಪಸ್ಸು ಮಾಡಬೇಕು ಎಂದು ಸೂಚನೆ ಆಗಿದೆ.ನಂತರ ತಮ್ಮ ಆಯಸ್ಸು ಅರ್ಧಭಾಗ ೫೦ವರುಷಗಳ ಕಾಲ ತಪಸ್ಸು ಆಚರಣೆ ಮಾಡುತ್ತಾರೆ.ನಂತರ ಭಗವಂತನ ದರುಶನ ವಾಗಿ ಅವನಿಂದ ಉಪದೇಶ ಪಡೆಯುತ್ತಾರೆ.ಸೃಷ್ಟಿ ಕಾರ್ಯಮಾಡಲು ಭಗವಂತ ಆಜ್ಞೆಯನ್ನು ಮಾಡುತ್ತಾನೆ.* *ನನಗೆ ಬಂಧಕವಾಗುತ್ತದೆ ಈ ಸೃಷ್ಟಿಯ ಕಾರ್ಯ ಅಂತ ಬ್ರಹ್ಮ ದೇವರು ಅಂದಾಗ ಭಗವಂತ ಅವರಿಗೆ ನಾಲ್ಕು ಶ್ಲೋಕಗಳನ್ನು ಉಪದೇಶ ಮಾಡಿದ.ಅದೇ ಚತುಃಶ್ಲೋಕಿ ಭಾಗವತ ಅಥವಾ ಮೂಲ ಭಾಗವತ.*
ಮುಂದಿನ ಭಾಗ ನಾಳೆ.
🙏ಶ್ರೀ ಕೃಷ್ಣಾರ್ಪಣ ಮಸ್ತು🙏
*ಹಾಳು ಹರಟೆಯಾಡಿ ಮನವ |*
*|ಬೀಳು ಮಾಡಿ ಕೊಳ್ಳಲು ಬೇಡಿ|*
*|ಏಳು ದಿನದ ಕಥೆಯು ಕೇಳಿ|ಏಳಿರೋ ವೈಕುಂಠಕೆ|*
🙏ಶ್ರೀ ವಾಸುದೇವಾಯ 
ನಮಃ🙏
[11/09, 5:25 AM] vijayavitthala blr: *|ಪಿಬತ ಭಾಗವತಂ ರಸಮಾಲಯಂ||*

Post a Comment

Previous Post Next Post