*|ಪಿಬತ ಭಾಗವತಂ ರಸಮಾಲಯಂ||*Day26.

[22/09, 6:12 AM] vijayavitthala blr: *|ಪಿಬತ ಭಾಗವತಂ ರಸಮಾಲಯಂ||*
Day26.
✍️ಶ್ರೀ ಸನಕಾದಿಗಳು ಕೊಟ್ಟ ಶಾಪವನ್ನು ಕೇಳಿ ಭಗವಂತ ಇಂದಿರೆಯ ಒಡಗೂಡಿ ಸಕಲ ದೇವತಾ ಪರಿವಾರದ ಜೊತೆಯಲ್ಲಿ ಏಳನೆಯ ಪ್ರಾಕಾರ ಕ್ಕೆ ನಡೆದು ಬಂದಿದ್ದಾನೆ.
ಭಗವಂತನ ದಿವ್ಯ ರೂಪವನ್ನು ಕಂಡು ಸನಕಾದಿಗಳು ಆನಂದ ಭರಿತರಾಗಿದ್ದಾರೆ.
ಶ್ರೀ ಹರಿಯನ್ನು ಸ್ತೋತ್ರ ಮಾಡುತ್ತಾ ಇದ್ದಾರೆ.
*"ಅನಂತಮಹಿಮನೆ,ಅನಂತ ಗುಣ ಪೂರ್ಣ, ಅನಂತ ರೂಪಿಯೇ,ಅನಂತ ಚೆಲುವಿನ ಖಣಿಯೇ,ಅನಂತ* *ನಾಮಕನಾಗಿ ಅನೇಕ ಜೀವರಾಶಿಗಳನ್ನು ಆಳುವ ದೊರೆಯೇ..ಜೀವಿಗಳ ಹೃದಯ ದಲ್ಲಿ ಇದ್ದು ದುರಾತ್ಮರಿಗೆ ಗೋಚರನಾಗದವ ನೀನು..ಇಂದು ನಮ್ಮ ನಯನಾನಂದಕರವಾಗಿ ಸಿರಿಯ ಒಡಗೂಡಿ ಬಂದು ನಿಂದಿರುವೆ.*
*ನಿನ್ನ ಸುತನಾದ ನಮ್ಮ ತಂದೆ ಯಾದ ಆ ಶ್ರೀಬ್ರಹ್ಮದೇವರು ನಮಗೆ ಗೋಪ್ಯವಾಗಿ ಉಪದೇಶಿಸಿದ ನಿನ್ನ ಗುಣ,ರೂಪ, ಇವುಗಳನ್ನು ನಮ್ಮ ಕರ್ಣದಿಂದ ಕೇಳಿ ನಮ್ಮ ಹೃದಯ ಕಮಲದಲ್ಲಿ ಇದ್ದ ನಿನ್ನನ್ನು ಇಂದು ಕಂಡು ಧನ್ಯರಾದೆವು..ನೀನು ಸುಜನರ ಪರ..ದುರ್ಜನರ ಸೇವೆಯನೊಲ್ಲದವ ,ಅಪ್ರತಿಮ ಮಲ್ಲ ನೀನು..ನಿನಗೆ ಹಿಂದೆ ಮುಂದೆ ಮತ್ತು ಇಂದು ಯಾರು ಪ್ರತಿಸ್ಪರ್ಧಿ ಗಳು ಇಲ್ಲ..ಕರುಣಾಸಾಗರ ನೀನು..ಶರಣೆಂದವರ ಪೊರೆವವ ಕರುಣಾ ಸಮುದ್ರ ನೀನು..*
*ನಿನ್ನ ಗುಣ ರೂಪಗಳನ್ನು ಎಣಿಸಲು ರಮಾ ಬ್ರಹ್ಮ ಆದಿ ದೇವತೆಗಳಿಗೆ ಸಹ ಶಕ್ಯವಿಲ್ಲ.*
*ನಿನ್ನ ಮಹಿಮೆಯನ್ನು ಕೇಳಿ ಅರಿಷಡ್ವರ್ಗ ಗಳನ್ನು ಬಿಟ್ಟು ನಿನ್ನ ಪಾದಕಮಲವನ್ನು ಚಿಂತೆ ಮಾಡುವವರೇ ಸುಜನರು..ನಿನ್ನ ನೋಡುವದೇ ಅವರ ಅಭಿಲಾಷೆ. ಯಾವ ಸಂಪತ್ತು ಪದವಿ ಸಹ ಬೇಡ ಅವರಿಗೆ*
*ಹೇ ಅನಂತನೇ!ಮುಕುಂದನೇ ..ನಿನ್ನ ಆಳುಗಳನ್ನು ನಾವು ಗಳು ಶಪಿಸಿದ್ದೇವೆ.*
*ಅದರಿಂದ ಪಾಪವು ಬಂದಿದ್ದರೆ ಅದಕ್ಕೆ ನರಕ ಸದೃಶವಾದ ದುಃಖ ನಮಗೆ ಬರುವದು.*
*ಇಂತಹ ದುಃಖ ವನ್ನು ನೀನು ಕೊಡುವವನಾಗಿದ್ದರೆ ಅದನ್ನು ಅನುಭವಿಸಲು ನಾವುಗಳು ಸಿದ್ದ.ಆವ ಯೋನಿಯಲ್ಲಿ ಇರಿಸು.ಆವ ಲೋಕದಲ್ಲಿ ಇರಿಸು..ಆವಾಗ ನಿನ್ನ ಕ್ಷಣ ಬಿಡದಂತೆ ನಿನ್ನ ನಾಮವು ಸದಾ ನಮ್ಮ ನಾಲಗೆ ಯಲ್ಲಿ ಬರುತ್ತಾ ಇರಲಿ.ನಮ್ಮ ಕರ್ಣಗಳು ನಿನ್ನ ನಾಮ ವನ್ನು ಕ್ಷಣ ಬಿಡದೇ ಸಹ ಕೇಳುತ್ತಾ ಇರಲಿ.ಮನಸ್ಸು ನಿನ್ನ ಪಾದ ಮತ್ತು ರೂಪವನ್ನು ಸ್ಮರಿಸುತ್ತಾ ಇರಲಿ.ಕಣ್ಣು ಗಳು ನಿನ್ನ ರೂಪವನ್ನು ನೋಡುತ್ತಾ ಇರಲಿ.ನಾಸಿಕವು ನಿನ್ನ ನಿರ್ಮಾಲ್ಯವನ್ನು ಅಘ್ರಾಣಿಸುತ್ತಾ ಇರಲಿ.*
*ಹೀಗಿದ್ದರೆ ಯಾವ ದುಃಖ ವನ್ನು ಸಹ ಅನುಭವಿಸಲು ನಾವು ಸಿದ್ದ.*
*ನಿನ್ನ ಈ ರೂಪವನ್ನು ನೋಡಿ ನಮ್ಮ ನೇತ್ರ, ಮನಸ್ಸು ಬಹಳ ಆನಂದ ಉಂಟಾಗಿದೆ.ಈ ಉಪಕಾರ ಕ್ಕೆ ನಾವು ಏನು ಸಹ ಕೊಡಲು ಸಾಧ್ಯವಿಲ್ಲ.* 
*ಪ್ರತಿಯಾಗಿ ಬಾರಿ ಬಾರಿಗೆ ನಿನಗೆ ನಮಸ್ಕಾರ ಮಾಡುವೆವು..ನಿನ್ನ ಈ ಸುಂದರ ರೂಪ ದುಷ್ಟ ಜನರಿಗೆ ದೊರಕದು.ಶಿಷ್ಟ ಜನರಿಗೆ ದೊರಕುವುದು.*.
ಎಂದು ಹೇಳಿ ಅವನ ಪಾದಕಮಲಗಳಿಗೆ ಶಿರ ಸಾಷ್ಟಾಂಗ ನಮಸ್ಕಾರ🙏 ಮಾಡಿದ್ದಾರೆ.
ಮುಂದಿನ ಭಾಗ ನಾಳೆ.
🙏ಶ್ರೀ ಕೃಷ್ಣಾರ್ಪಣ ಮಸ್ತು🙏
ಹಾಳು ಹರಟೆಯಾಡಿ ಮನವ |
|ಬೀಳು ಮಾಡಿ ಕೊಳ್ಳಲು ಬೇಡಿ|
|ಏಳು ದಿನದ ಕಥೆಯು ಕೇಳಿ|ಏಳಿರೋ ವೈಕುಂಠಕೆ|
🙏ಶ್ರೀ ಕಪಿಲಾಯ ನಮಃ🙏
[22/09, 6:14 AM] vijayavitthala blr: *|ಪಿಬತ ಭಾಗವತಂ ರಸಮಾಲಯಂ||*

Post a Comment

Previous Post Next Post