[21/09, 1:58 PM] Kpcc official: #40PercentSarkara ದ
ಸಹಾಯವಾಣಿಗಳು ಲಂಚದವಾಣಿಗಳಾಗಿ ಬದಲಾಗಿವೆ!
ಬೇಲಿಯೇ ಎದ್ದು ಹೊಲ ಮೆಯ್ದಂತೆ ಎಂಬುದಕ್ಕೆ ಸ್ಪಷ್ಟ ಉದಾಹರಣೆ ಇದು.
ಅಕ್ರಮಗಳ ಬಗ್ಗೆ ದೂರು ದಾಖಲಿಸಿಕೊಳ್ಳಬೇಕಾದ ಸಹಾಯವಾಣಿ ಕೇಂದ್ರಗಳು ಲಂಚ ವಸೂಲಿ ಕೇಂದ್ರಗಳಾಗಿರುವುದು @BJP4Karnataka ಸರ್ಕಾರಕ್ಕೆ ತಿಳಿದಿಲ್ಲವೇ?
ತಿಳಿದರೂ ಕಮಿಷನ್‌ಗಾಗಿ ಸುಮ್ಮನಿದೆಯೇ?
[21/09, 5:40 PM] Kpcc official: ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಬುಧವಾರ ನಡೆದ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ರಾಜ್ಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಸಮಿತಿ ರಾಷ್ಟ್ರೀಯ ಅಧ್ಯಕ್ಷೆ ಮೀನಾಕ್ಷಿ ನಟರಾಜನ್, ರಾಜ್ಯಾಧ್ಯಕ್ಷ ವಿ ನಾರಾಯಣಸ್ವಾಮಿ, ಕಾರ್ಯದರ್ಶಿ ವಿಜಯ್ ಸಿಂಗ್, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಮ್ ಅಹ್ಮದ್, ಎಐಸಿಸಿ ಕಾರ್ಯದರ್ಶಿ ಬಿ ಎಂ ಸಂದೀಪ್, ಮುಖಂಡರಾದ ಸಿ ನಾರಾಯಣಸ್ವಾಮಿ ಮತ್ತಿತರರು ಭಾಗವಹಿಸಿದ್ದರು.
[21/09, 5:57 PM] Kpcc official: ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಬುಧವಾರ ನಡೆದ ಕಾಂಗ್ರೆಸ್ ನಾನಾ ಘಟಕಗಳ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಎಐಸಿಸಿ ಕಾರ್ಯದರ್ಶಿಗಳಾದ ಅಭಿಷೇಕ್ ದತ್, ನಾನಾ ಘಟಕಗಳ ರಾಷ್ಟ್ರೀಯ ಮುಖಂಡರಾದ ಉದಿತ್ ರಾಜ್, ರಾಜೇಶ್ ಹಿಲೋತಿಯ, ಮೀನಾಕ್ಷಿ ನಟರಾಜ್, ಸಂದೀಪ್, ಶಿವರಾಜ್ ರಾವ್, ಆರಂಸ್ಟ್ರಾಂಗ್ ಫರ್ನಾಂಡೋ, ಬಿನಿತಾ, ಪುಷ್ಪರಾಜ್ ಮತ್ತಿತರರು ಭಾಗವಹಿಸಿದ್ದರು.
[21/09, 7:21 PM] Kpcc official: ತಮ್ಮ ಶಾಸಕರನ್ನೇ ನಿಭಾಯಿಸಲಾಗದ
#PayCM ಅವರಿಗೆ ರಾಜ್ಯ ನಿಭಾಯಿಸಲಾಗುವುದೇ!
'ಮದುವೆ ಗಂಡು' ಈಶ್ವರಪ್ಪನವರು ಮುನಿಸಿಕೊಂಡಿದ್ದಾರೆ, ಮತ್ತೊಂದಿಷ್ಟು ಮದುವೆ ಗಂಡುಗಳು ಅತೃಪ್ತರಾಗಿದ್ದಾರೆ!
'ವಧು ದಕ್ಷಿಣೆ' ಹೆಚ್ಚು ಕೊಡುವವರಿಗೆ ಮಾತ್ರ ಮದುವೆಯೇ @BJP4Karnataka?!
#BJPvsBJP ಕಿತ್ತಾಟ,
#40PercentSarkara ದ ಚೆಲ್ಲಾಟ,
ಜನರಿಗೆ ಸಂಕಟ.
[21/09, 7:23 PM] Kpcc official: ಎಲ್ಲಾ ಇಲಾಖೆಯ ನಂತರ ಅಲ್ಪಸಂಖ್ಯಾತ ಇಲಾಖೆಗೂ 40% ಕಮಿಷನ್ ಸೋಂಕು ಹಬ್ಬಿದಂತಿದೆ.
ಶಾಲಾ ಕಟ್ಟಡ ತಯಾರಿದ್ದರೂ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಲು ತಯಾರಿಲ್ಲದೆ ಮತ್ತೊಂದು ಹೊಸ ಕಟ್ಟಡಕ್ಕೆ ಅಧಿಕಾರಿಗಳು ಆಸಕ್ತಿ ತೋರಿಸುತ್ತಿರುವುದೇಕೆ?
ಕಮಿಷನ್ ಆಸೆಗಾಗಿಯೇ?
#PayCM ಅವರೇ, ಈ ಎಲ್ಲಾ ಅವಾಂತರಗಳನ್ನು ಗಮನಿಸುವುದಿಲ್ಲವೇ?
#40PercentSarkara
[21/09, 7:40 PM] Kpcc official: ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಕಾಂಗ್ರೆಸ್ ಕಚೇರಿ ಹಾಗೂ ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ಬುಧವಾರ ನೀಡಿದ ಪ್ರತಿಕ್ರಿಯೆ...
[21/09, 8:07 PM] Kpcc official: *ಡಿ.ಕೆ. ಶಿವಕುಮಾರ್ ಅವರು ಬೆಂಗಳೂರಿನಲ್ಲಿ ಬುಧವಾರ ನೀಡಿದ ಮಾಧ್ಯಮ ಪ್ರತಿಕ್ರಿಯೆ:*
ಭಾರತ ಐಕ್ಯತಾ ಯಾತ್ರೆಯಲ್ಲಿ ಪಾದಯಾತ್ರಿಗಳನ್ನು ನಿಗದಿತ ದಿನ ಕರೆ ತರಲು ನಮ್ಮ ನಾಯಕರಿಗೆ ಸೂಚಿಸಲಾಗಿದೆ.
ನಾಡಿದ್ದು ಬೆಳಗ್ಗೆ ಯಾತ್ರೆಯ ಎಲ್ಲಾ ಸಮಿತಿ ಅಧ್ಯಕ್ಷರನ್ನು ರಾಷ್ಟ್ರೀಯ ನಾಯಕರಾದ ಕೆ.ಸಿ. ವೇಣುಗೋಪಾಲ್ ಹಾಗೂ ರಣದೀಪ್ ಸಿಂಗ್ ಸುರ್ಜೇವಾಲ ಅವರು ಭೇಟಿ ಮಾಡಿ ಸಭೆ ನಡೆಸಲಿದ್ದಾರೆ. ಯಾತ್ರೆಯ ತಯಾರಿ ಕುರಿತು ಈ ಸಭೆಯಲ್ಲಿ ಪರಿಶೀಲನೆ ನಡೆಸಲಿದ್ದಾರೆ. ನಂತರ ಸುರ್ಜೇವಾಲ ಅವರು ಗುಂಡ್ಲುಪೇಟೆಯಿಂದ ರಾಯಚೂರಿನವರೆಗೆ ಯಾತ್ರೆಯ ಮಾರ್ಗದ ಪ್ರದೇಶಗಳಿಗೆ ಭೇಟಿ ನೀಡಲಿದ್ದಾರೆ. ಅಲ್ಲಿನ ತಯಾರಿ ಕುರಿತು ಪರಿಶೀಲನೆ ಮಾಡಲಿದ್ದಾರೆ.
ಮುಖ್ಯಮಂತ್ರಿಗಳ ವಿರುದ್ಧ ಕಾಂಗ್ರೆಸ್ ಅಭಿಯಾನ ಕುರಿತು ಕೇಳಿದ ಪ್ರಶ್ನೆಗೆ, ' ಬಿಜೆಪಿ ನಾಯಕರು ಸಿದ್ದರಾಮಯ್ಯ ಅವರನ್ನು ನಿದ್ರಾಮಯ್ಯ ಎಂದು ಲೇವಡಿ ಮಾಡುತ್ತಿದ್ದರು. ನನ್ನನ್ನು ಕೊತ್ವಾಲ್ ರಾಮಚಂದ್ರನ ಶಿಷ್ಯ ಎಂದು ಕರೆಯುತ್ತಾರೆ. ರಾಜಕಾರಣದಲ್ಲಿ ಅಧಿಕಾರದಲ್ಲಿರುವವರು ಇವೆಲ್ಲವನ್ನೂ ಅರಗಿಸಿಕೊಳ್ಳಬೇಕು. ಈ ಸರ್ಕಾರ 40% ಕಮಿಷನ್ ಸರ್ಕಾರ ಎಂದು ನಾವು ಆರೋಪ ಮಾಡಿದ್ದೇವಾ? ಅಧಿಕಾರದಲ್ಲಿರುವವರು ಹಾಗೂ ಜವಾಬ್ದಾರಿ ಹೊತ್ತಿರುವವರ ಕಡೆ ಬೆಟ್ಟು ಮಾಡುವುದು ಸಹಜ. ವ್ಯಂಗಚಿತ್ರಗಳಲ್ಲಿ ಮುಖ್ಯಮಂತ್ರಿಗಳು, ಪ್ರಧಾನಮಂತ್ರಿಗಳನ್ನು ಕ್ರಿಯಾತ್ಮಕ ರೀತಿಯಲ್ಲಿ ಲೇವಡಿ ಮಾಡುತ್ತಾರೆ. ಭ್ರಷ್ಟಾಚಾರ ವಿಚಾರವಾಗಿ ಬೊಮ್ಮಾಯಿ ಅವರ ಸರ್ಕಾರದ ವಿರುದ್ಧ ವಿವಿಧ ರೀತಿಯಲ್ಲಿ ಪ್ರಶ್ನಿಸಲಾಗಿದೆ. ವಿವಿಧ ರೀತಿಯಲ್ಲಿ ಜನರಿಗೂ ಈ ವಿಚಾರ ಮುಟ್ಟಿಸಬೇಕಾಗುತ್ತದೆ. ಹೀಗಾಗಿ ಈ ರೀತಿ ಮಾಡಲಾಗಿದೆ. ಇದರಲ್ಲಿ ಯಾವುದೇ ತಪ್ಪಿಲ್ಲ. ಇದು ಆರೋಗ್ಯಕರ ರಾಜಕೀಯ' ಎಂದು ತಿಳಿಸಿದರು.
ಇದರ ವಿರುದ್ಧ ದೂರು ನೀಡಿ ಕ್ರಮ ಕೈಗೊಳ್ಳುತ್ತೇವೆ ಎಂಬ ಸಿಎಂ ಹೇಳಿಕೆ ಬಗ್ಗೆ ಕೇಳಿದಾಗ, ' ಅವರು ದೂರು ನೀಡಲಿ. ಅವರ ಬಗ್ಗೆ ವ್ಯಂಗ್ಯಚಿತ್ರಗಳು ಬಂದಾಗ ಯಾಕೆ ದೂರು ನೀಡಲಿಲ್ಲ? ಇದರಲ್ಲಿ ತಪ್ಪೇನು? ಸಾರ್ವಜನಿಕ ಜೀವನದಲ್ಲಿ ಇರುವಾಗ ಇದನ್ನು ಸ್ವೀಕರಿಸಬೇಕು ' ಎಂದು ತಿಳಿಸಿದರು.
Post a Comment