NIA ದಾಳಿ, ಮತ್ತಷ್ಟು ಮಾಹಿತಿ

ಹುಬ್ಬಳ್ಳಿ: ಪಿಎಫ್‌ಐ, ಎಸ್‌ಡಿಪಿಐ ಮೇಲೆ ಎನ್‌ಐಎ ಹಾಗೂ ಇಡಿ ದಾಳಿ ಮಾಡಿರುವುದನ್ನು ಖಂಡಿಸಿ ರಸ್ತೆಗಳಿದು ಪ್ರತಿಭಟನೆ ನಡೆಸುತ್ತಿದ್ದ ಪಿಎಫ್‌ಐ ಹಾಗೂ ಎಸ್‌ಡಿಪಿಐ ಕಾರ್ಯಕರ್ತರ ಮೇಲೆ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ, ೫೦ ಕ್ಕೂ ಹೆಚ್ಚು  ಕಾರ್ಯಕರ್ತರ  ವಶಪಡಿಸಿಕೊಂಡಿದ್ದಾರೆ.

ಇಲ್ಲಿಯ ಕೌಲಪೇಟೆಯಲ್ಲಿ ಪಿಎಫ್‌ಐ, ಎಸ್‌ಡಿಪಿಐ ಕಾರ್ಯಕರ್ತರು ಪ್ರತಿಭಟನೆ ಮಾಡುವ ವೇಳೆ ರಸ್ತೆ ತಡೆಯಲು ಮುಂದಾದರೂ ಈ ಸಂದರ್ಭದಲ್ಲಿ ವಾಹನ ಸವಾರರಿಗೆ ತೊಂದರೆ ಯಾಗಬಾರದು ಎಂದು ಪೊಲೀಸರು ತಡೆದರು. ಇದಕ್ಕೆ ಸ್ಪಂದಿಸದ ಕಾರ್ಯಕರ್ತರು ಬಿಜೆಪಿ ಸರ್ಕಾರ ವಿರುದ್ಧ ಘೋಷಣೆ ಕೂಗುತ್ತ ನುಕುನುಗ್ಗಲು ಮಾಡಿದರು.

ನಂತರ ಪೊಲೀಸರು ಕಾರ್ಯಕರ್ತರನ್ನು ಚದುರಿಸಲು ಲಘು ಲಾಠಿ ಪ್ರಹಾರ ನಡೆಸಿದರು. ಇದಕ್ಕೂ ಸ್ಪಂದಿಸದ ಕಾರಣ ೫೦ ಕ್ಕೂ ಪ್ರತಿಭಟನಾಕಾರರನ್ನು ವಶಕ್ಕೆ ಪಡೆದರು. ಈ ಸಂದರ್ಭದಲ್ಲಿ ಹು-ಧಾ ಪೊಲೀಸ್ ಆಯುಕ್ತ ಲಾಭೂರಾಮ, ಡಿಸಿಪಿ ಕ್ರೈಂ ಗೋಪಾಲ ಬ್ಯಾಕೋಡ, ಡಿಸಿಪಿ ಸಾಹಿಲ್ ಬಾಗ್ಲಾ ಇದ್ದರು.

ನಂತರ ಮಾಧ್ಯಮದವರೊಂದಿಗೆ ಹು-ಧಾ ಪೊಲೀಸ್ ಆಯುಕ್ತ ಲಾಭೂರಾಮ ಮಾತನಾಡಿ, ಎಸ್‌ಡಿಪಿಐ ಮತ್ತು ಪಿಎಫ್‌ಐ ನ ಕೆಲವು ಯುವಕರು ಪ್ರತಿಭಟನೆ ಮಾಡವ ವೇಳೆ ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸಲು ಮುಂದಾದರು. ಈ ಸಂದರ್ಭದಲ್ಲಿ ಪ್ರತಿಭಟನಾಕಾರರನ್ನ ಚದುರಿಸಿ, ಸುಗಮ ಸಂಚಾರಕ್ಕೆ ಅನುವು ಮಾಡಲಾಗಿದೆ. ಪ್ರತಿಭಟನೆಯಲ್ಲಿ ಭಾಗವಹಿಸಿದ ೫೦ ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನ ವಶಕ್ಕೆ ಪಡೆದಿದ್ದೇವೆ ಎಂದರು. 

ನಗರದಲ್ಲಿ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಹುಬ್ಬಳ್ಳಿ-ಧಾರವಾಡದಲ್ಲಿ  ಹೆಚ್ಚುವರಿ ಪೊಲೀಸರುನ್ನು ನಿಯೋಜಿಸಿಲಾಗಿದೆ. ವಶಕ್ಕೆ ಪಡೆದ ಪ್ರತಿಭಟನಾ ಕಾರರನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.
: ಎನ್ಐಎ ದಾಳಿ: ಮಡಿಕೇರಿಯಲ್ಲಿ ಪ್ರತಿಭಟನೆ
ಮಡಿಕೇರಿ: ರಾಜ್ಯದ ವಿವಿಧೆಡೆ ಪಿಎಫ್‌ಐ ಕಚೇರಿ ಮೇಲೆ ಎನ್‌ಐಎ ದಾಳಿ ನಡೆಸಿದ್ದು, ಇದನ್ನು ಖಂಡಿಸಿ ಮಡಿಕೇರಿಯ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಪಾಪ್ಯೂಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆ ಹಾಗೂ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷ ಪ್ರತಿಭಟನೆ ನಡೆಸಿದವು.
ಎನ್‌ಐಎ ಮತ್ತು ಇಡಿ ವಿರುದ್ಧ ಘೋಷಣೆಗಳನ್ನು ಕೂಗಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಆಧಾರ ರಹಿತ ಆರೋಪಗಳಡಿ ದಾಳಿ ನಡೆಸುವುದನ್ನು ನಿಲ್ಲಿಸಬೇಕೆಂದು ಒತ್ತಾಯಿಸಿದರು.
ನಗರಸಭಾ ಸದಸ್ಯ ಅಮೀನ್ ಮೊಹಿಸಿನ್, ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಕಲೀಲ್ ಮಡಿಕೇರಿ, ಪ್ರಮುಖರಾದ ಅಬ್ದುಲ್ ಅಡ್ಕರ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ಶ
ಶಿರಸಿರಸಿ : ರಾಜ್ಯದ ಹಲವು ಕಡೆ ದಾಳಿ ನಡೆದಂತೆ ಇಲ್ಲಿನ ಟಿಪ್ಪು ನಗರದಲ್ಲಿದ್ದ ಎಸ್ಡಿಪಿಐ ಕಾರ್ಯಕರ್ತನೋರ್ವನ್ನು ಬಂಧಿಸಿದ ಘಟನೆ ಗುರುವಾರ ಬೆಳಗ್ಗೆ ನಡೆದಿದೆ. 
ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಅಧಿಕಾರಿಗಳು ದಾಳಿ ನಡೆಸಿದ್ದು, ಎಸ್​​ಡಿಪಿಐ ಮುಖಂಡ ಅಜೀಜ್ ಅಬ್ದುಲ್ ಶುಕುರ್ ಹೊನ್ನಾವರ್ (45) ಎಂಬಾತನನ್ನು ಬಂಧಿಸಲಾಗಿದೆ.
ಬೆಳಗ್ಗೆ ನಸುಕಿನಲ್ಲಿ 3.30ರಿಂದಲೇ ಅಬ್ದುಲ್ ಮನೆಯ ಬಳಿ ಪೊಲೀಸರ ದಂಡೇ ನೆರೆದಿತ್ತು. ಸುಮಾರು 6 ಗಂಟೆಯ ವೇಳೆಗೆ ಈತನ ಮನೆಗೆ ಅಧಿಕಾರಿಗಳು ತೆರಳಿದ್ದು ಒಂದು ಲ್ಯಾಪ್ ಟಾಪ್, 2 ಮೊಬೈಲ್, ಪುಸ್ತಕಗಳು ಹಾಗೂ ಒಂದು ಸಿಡಿಯನ್ನು ಜಪ್ತಿ ಮಾಡಿದ್ದಾರೆ ಎಂಬ ಮಾಹಿತಿ ದೊರೆತಿದೆ.‌
ಅಬ್ದುಲ್ ಜೊತೆ ಅಲ್ಲೇ ಸಮೀಪದಲ್ಲಿದ್ದ ಆತನ ತಮ್ಮನ ಮನೆಯ ಮೇಲೂ ಶೋಧ ನಡೆದಿದೆ. ಆದರೆ ಆತ ಮನೆಯಲ್ಲಿ ಇಲ್ಲದ ಕಾರಣ ಅಬ್ದುಲ್ ಬಂಧನ ಮಾತ್ರ ಆಗಿದೆ ಎಂದು ಮೂಲಗಳು ತಿಳಿಸಿವೆ.
 *ಎಸ್ಡಿಪಿಐ,ಪಿಎಫ್ಐ ಯಿಂದ ಸುರತ್ಕಲ್  ಹೆದ್ದಾರಿ ತಡೆ ,ಕಾನೂನು ಕ್ರಮಕ್ಕೆ ಶಾಸಕರ ಸೂಚನೆ*

ಮಂಗಳೂರು: ಎನ್ ಐ ಎ ನಿಂದ ಎಸ್ಡಿಪಿಐ ,ಪಿಎಫ್ಐ ಸದಸ್ಯರ ಮನೆಗೆ ದಾಳಿ, ವಶಕ್ಕೆ  ಪಡೆದಿರುವುದನ್ನು  ಖಂಡಿಸಿ  ಸುರತ್ಕಲ್ ನಲ್ಲಿ  ಏಕಾಏಕಿ ಹೆದ್ದಾರಿ ತಡೆ ಮಾಡಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತ ಪಡಿಸಿರುವ 
ಶಾಸಕ ಡಾ..ಭರತ್ ಶೆಟ್ಟಿ ವೈ. ಅವರು ತಪ್ಪಿತಸ್ಥರ ವಿರುದ್ದ ಎಫ್ ಐಆರ್ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ದೇಶದ್ರೋಹಿ ಕೃತ್ಯಗಳಲ್ಲಿ ಸಹಕರಿಸಿದ ವ್ಯಕ್ತಿಗಳ ವಿರುದ್ದ  ಮತ್ತು  ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ  ಎನ್ ಐ ಎ ತನಿಖೆ ನಡೆಸುತ್ತಿದೆ. ಆರೋಪಿಗಳ ವಿಚಾರಣೆ ತೀವ್ರಗೊಳಿಸಿದೆ. ಇಂತಹ ಸಂದರ್ಭದಲ್ಲಿ ಯಾರಾದರೂ ಪುಂಡಾಟಿಕೆ, ಕಾನೂನು ಉಲ್ಲಂಘನೆ ಮಾಡಿದಲ್ಲಿ ಮುಲಾಜಿಲ್ಲದೆ ಕೈಗೊಳ್ಳಬೇಕು. ಸುರಕ್ಷತಾ ಕ್ರಮವಾಗಿ ಪೊಲೀಸ್ ಕಣ್ಗಾವಲು ಹೆಚ್ಚಿಸಬೇಕು ಎಂದು ಶಾಸಕರು ಸೂಚಿಸಿದ್ದಾ

ಹುಬ್ಬಳ್ಳಿ: ಪಿಎಫ್‌ಐ, ಎಸ್‌ಡಿಪಿಐ ಮೇಲೆ ಎನ್‌ಐಎ ಹಾಗೂ ಇಡಿ ದಾಳಿ ಮಾಡಿರುವುದನ್ನು ಖಂಡಿಸಿ ರಸ್ತೆಗಳಿದು ಪ್ರತಿಭಟನೆ ನಡೆಸುತ್ತಿದ್ದ ಪಿಎಫ್‌ಐ ಹಾಗೂ ಎಸ್‌ಡಿಪಿಐ ಕಾರ್ಯಕರ್ತರ ಮೇಲೆ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ, ೫೦ ಕ್ಕೂ ಹೆಚ್ಚು  ಕಾರ್ಯಕರ್ತರ  ವಶಪಡಿಸಿಕೊಂಡಿದ್ದಾರೆ.

ಇಲ್ಲಿಯ ಕೌಲಪೇಟೆಯಲ್ಲಿ ಪಿಎಫ್‌ಐ, ಎಸ್‌ಡಿಪಿಐ ಕಾರ್ಯಕರ್ತರು ಪ್ರತಿಭಟನೆ ಮಾಡುವ ವೇಳೆ ರಸ್ತೆ ತಡೆಯಲು ಮುಂದಾದರೂ ಈ ಸಂದರ್ಭದಲ್ಲಿ ವಾಹನ ಸವಾರರಿಗೆ ತೊಂದರೆ ಯಾಗಬಾರದು ಎಂದು ಪೊಲೀಸರು ತಡೆದರು. ಇದಕ್ಕೆ ಸ್ಪಂದಿಸದ ಕಾರ್ಯಕರ್ತರು ಬಿಜೆಪಿ ಸರ್ಕಾರ ವಿರುದ್ಧ ಘೋಷಣೆ ಕೂಗುತ್ತ ನುಕುನುಗ್ಗಲು ಮಾಡಿದರು.

ನಂತರ ಪೊಲೀಸರು ಕಾರ್ಯಕರ್ತರನ್ನು ಚದುರಿಸಲು ಲಘು ಲಾಠಿ ಪ್ರಹಾರ ನಡೆಸಿದರು. ಇದಕ್ಕೂ ಸ್ಪಂದಿಸದ ಕಾರಣ ೫೦ ಕ್ಕೂ ಪ್ರತಿಭಟನಾಕಾರರನ್ನು ವಶಕ್ಕೆ ಪಡೆದರು. ಈ ಸಂದರ್ಭದಲ್ಲಿ ಹು-ಧಾ ಪೊಲೀಸ್ ಆಯುಕ್ತ ಲಾಭೂರಾಮ, ಡಿಸಿಪಿ ಕ್ರೈಂ ಗೋಪಾಲ ಬ್ಯಾಕೋಡ, ಡಿಸಿಪಿ ಸಾಹಿಲ್ ಬಾಗ್ಲಾ ಇದ್ದರು.

ನಂತರ ಮಾಧ್ಯಮದವರೊಂದಿಗೆ ಹು-ಧಾ ಪೊಲೀಸ್ ಆಯುಕ್ತ ಲಾಭೂರಾಮ ಮಾತನಾಡಿ, ಎಸ್‌ಡಿಪಿಐ ಮತ್ತು ಪಿಎಫ್‌ಐ ನ ಕೆಲವು ಯುವಕರು ಪ್ರತಿಭಟನೆ ಮಾಡವ ವೇಳೆ ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸಲು ಮುಂದಾದರು. ಈ ಸಂದರ್ಭದಲ್ಲಿ ಪ್ರತಿಭಟನಾಕಾರರನ್ನ ಚದುರಿಸಿ, ಸುಗಮ ಸಂಚಾರಕ್ಕೆ ಅನುವು ಮಾಡಲಾಗಿದೆ. ಪ್ರತಿಭಟನೆಯಲ್ಲಿ ಭಾಗವಹಿಸಿದ ೫೦ ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನ ವಶಕ್ಕೆ ಪಡೆದಿದ್ದೇವೆ ಎಂದರು. 

ನಗರದಲ್ಲಿ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಹುಬ್ಬಳ್ಳಿ-ಧಾರವಾಡದಲ್ಲಿ  ಹೆಚ್ಚುವರಿ ಪೊಲೀಸರುನ್ನು ನಿಯೋಜಿಸಿಲಾಗಿದೆ. ವಶಕ್ಕೆ ಪಡೆದ ಪ್ರತಿಭಟನಾ ಕಾರರನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.

Post a Comment

Previous Post Next Post