vijayavitthala blr: *||ಪಿಬತ ಭಾಗವತಂ ರಸಮಾಲಯಂ||*Day# 27


[23/09, 7:36 AM] vijayavitthala blr: *||ಪಿಬತ ಭಾಗವತಂ ರಸಮಾಲಯಂ||*
Day# 27
✍️ತಮ್ಮ ಮುಂದೆ ಬಂದು ನಿಂತ ಭಗವಂತ ನನ್ನು ಶ್ರೀ ಸನಕಾದಿಗಳು ಬಹುವಾಗಿ ಸ್ತೋತ್ರ ಮಾಡಿದ್ದಾರೆ.
ಭಗವಂತ ಅವರ ಸ್ತೋತ್ರ ದಿಂದ ಪ್ರೀತನಾದನು..(ಅದು ಸಹ ಅವನ ಲೀಲೆ)
*"ಸನಕಾದಿ ಮುನಿವರ್ಯರೇ! ನನ್ನ ಮನೆಯ ದ್ವಾರಪಾಲಕರಾದ ಜಯ ವಿಜಯರು ಅಹಂಕಾರ ಮತ್ತು ಅಜ್ಞಾನದ ವರ್ತನೆ ತೋರಿ ನಿಮಗೆ ಅಪರಾಧ ಮಾಡಿದ್ದಾರೆ.ಪರಿವಾರದವರು ಅಥವಾ ಸೇವಕರು ತಪ್ಪು ಮಾಡಿದರೆ ಅದು ಮನೆಯ ಯಜಮಾನ ಮಾಡಿದಂತೆ.ಅದು ಅವನ ಕೀರ್ತಿ ನಾಶಕ.*
*ನನ್ನ ವೈಕುಂಠ ದ್ವಾರದ ಪ್ರಮುಖ್ಯರಾದ ಜಯ ವಿಜಯರು ನನ್ನನ್ನು ಲೆಕ್ಕಿಸದೇ ನಿಮಗೆ ಬಹುವಾಗಿ ಅಪರಾಧ ಮಾಡಿದ್ದಾರೆ.ಇವರಿಗೆ ನೀವಿತ್ತ ಶಾಪವನ್ನು ನಾನು ಅನುಮೋದನೆ ಮಾಡಿದ್ದೇನೆ.ಬ್ರಾಹ್ಮಣ ರೆಂದರೆ ಸರ್ವರಿಗು ದೈವ ಸ್ವರೂಪ ಎಂದೆನಿಸುವರು.ಅದರಲ್ಲೂ ಸಹ ನನ್ನ ಭಕ್ತರು ಸಹ ವಿಶೇಷ ಪೂಜನೀಯರು.ಆದಾಗ್ಯೂ ಸ್ವಕಿಂಕರು ಮಾಡಿದ ತಪ್ಪು ಯಜಮಾನನಿಗೆ ಅಪವಾದ ತರುವಂತೆ ನನ್ನ ಕಿಂಕರರು ಮಾಡಿದ ಅಪರಾಧದ ದಿಂದ ನೀವು ಪ್ರಸನ್ನ ರಾಗಬೇಕೆಂದು ಕೇಳಿಕೊಳ್ಳುವೆನು.*
*ಲೋಕದಲ್ಲಿ ಭೃತ್ಯನು ಮಾಡಿದ ಅಪರಾಧಕ್ಕೆ ಯಜಮಾನನ ಹೆಸರೆತ್ತಿ ನಿಂದಿಸುವರು.ಆ ಅಪವಾದವು ಆ ಯಜಮಾನನ ಕೀರ್ತಿ ಚಂದ್ರಿಕೆಯನ್ನು ಹೇಗೆ ಕುಷ್ಠರೋಗ ಚರ್ಮದ ಅಂದವನ್ನು ಕೆಡಿಸುವದೋ ಅದರಂತೆ ಆಗುವದು.*
*ನಾನು ಬ್ರಹ್ಮಣ್ಯ ದೇವನು.ಗೋ ಬ್ರಾಹ್ಮಣ ಹಿತಾಯಚ ಎಂದು ಬಲ್ಲವರು ಹೇಳುತ್ತಾರೆ. ಬ್ರಾಹ್ಮಣ ರಾದ ನಿಮಗೆ ಮಾಡಿದ ಅಪರಾಧವು ನನಗೆ ಮಾಡಿದಂತೆಯೆ ಆಯಿತು.*
*ಆಚಾರಶೀಲರಾದ ಬ್ರಾಹ್ಮಣ ರಲ್ಲಿ ಸಕಲ ದೇವತೆಗಳ ಸನ್ನಿಧಾನವು ಇರುವುದರಿಂದ ಬ್ರಹ್ಮಾದಿ ದೇವತೆಗಳಿಗೆ ಸಹ ಇವರು ಅಪರಾಧಿ ಗಳಾದರು.*
*ಸೇವಕರ ಆಯೋಗ್ಯ ನಡತೆಯು ಅವರ ಯಜಮಾನನ ಕೀರ್ತಿ ಯನ್ನು ನಾಶ ಮಾಡುತ್ತದೆ.*
*ಹರಿಕಥಾಮೃತ ಶ್ರವಣ ಮಾಡುವವರಿಗೆಲ್ಲ ಅವರನ್ನು ಪಾವನ ಮಾಡುವವನು  ಶ್ರೀ ಮನ್ ನಾರಾಯಣನು  ಎಂಬ ನನ್ನ ಈ ಕೀರ್ತಿಗೆ ಬ್ರಾಹ್ಮಣರೇ ಕಾರಣರು.ಆದ್ದರಿಂದಲೇ ನಾನು ಬ್ರಹ್ಮ ಜ್ಞಾನಿಗಳ ವಾಣಿ ಗೆ ಪ್ರತಿಕೂಲವಾಗಿ ಅಂದರೆ ವಿರುದ್ಧ ವಾಗಿ ವ್ಯಾಪಾರ ವನ್ನು ಮಾಡುವದೇ ಇಲ್ಲ..*
*ಹಾಗೇನಾದರು  ನನ್ನ ಬಾಹುಗಳು ಮಾಡಿದರೆ ಅದನ್ನು ಕತ್ತರಿಸಲು ಸಹ ಸಿದ್ದನಿರುವೆನು.ವಿಪ್ರರ ಪಾದ ಸೇವನೆಯಿಂದ ನಾನು ಐಶ್ವರ್ಯ ವಂತನಾದೆನು.ನಾನು ಸ್ವರಮಣ ನಾದರು ನನಗೆ ಪತ್ನಿ ವಿಯೋಗ ಎನ್ನುವದು ಇಲ್ಲದಂತಾಯಿತು.ವಿಪ್ರರಿಗೆ ಭೋಜನ ಮಾಡಿಸಿದರೆ ನಾನು ತೃಪ್ತನಾಗುವ ಹಾಗೆ ಯಜ್ಞ ದಲ್ಲಿ ಮಾಡಿದ ಹವಿರ್ಧಾನದಿಂದ ತೃಪ್ತನಾಗುವದಿಲ್ಲ.*
*ವಿಪ್ರರು ಕವಳ ಸಮಯದಲ್ಲಿ ಗೋವಿಂದ  ಎಂದು ನನ್ನ ನಾಮವನ್ನು ಸ್ಮರಣೆ ಮಾಡಿ,ಅದನ್ನು ನನಗೆ ಅರ್ಪಿಸಿ ಭುಂಜಿಸುವಾಗ ,ಪ್ರೀತ ನಾದಂತೆ,ಆ ಯಜಮಾನ ಮಾಡಿದ ಉತ್ತಮ ಯಜ್ಞ ದಿಂದಲು ಸಹ ನಾನು ಪ್ರೀತ ನಾಗುವದಿಲ್ಲ.*
*ನಾನು ಪಾವನ ತಮ ಮಂಗಳಕರನಾದರು ನಿಮ್ಮಂತಹ ವಿಪ್ರರ ಪಾದ ಧೂಳಿಯನ್ನು  ನನ್ನ ಕಿರೀಟ ದಲ್ಲಿ ಧರಿಸುವೆನೆಂದ ಬಳಿಕ ಯಾವನು ತಾನೇ  ನನ್ನ ಭಕ್ತರಾದ ವಿಪ್ರರನ್ನು ಒಲಿಸಿಕೊಳ್ಳಲು ಪ್ರಯತ್ನ ಪಡದೇ ಅವರನ್ನು ಪೂಜಿಸದೇ ಅಂತಹ ಅಪರಾಧವನ್ನು ಮಾಡದೇ ಇರುವವನು..??*
ಹೀಗೆ ಬಹುವಾಗಿ ಅನೇಕ ಆನಂದವನ್ನು ಉಂಟು ಮಾಡುವ ಮಾತುಗಳನ್ನು ಭಗವಂತ ಸನಕಾದಿಗಳಿಗೆ ಹೇಳುತ್ತಾನೆ.
ಮುಂದೆ ಭಗವಂತ ಏನು ಹೇಳಿದ. ಅದನ್ನು ನೋಡೋಣ.
ಮುಂದಿನ ಭಾಗ ನಂತರ.
🙏ಶ್ರೀ ಕೃಷ್ಣಾರ್ಪಣ ಮಸ್ತು🙏
ಹಾಳು ಹರಟೆಯಾಡಿ ಮನವ |
|ಬೀಳು ಮಾಡಿ ಕೊಳ್ಳಲು ಬೇಡಿ|
|ಏಳು ದಿನದ ಕಥೆಯು ಕೇಳಿ|ಏಳಿರೋ ವೈಕುಂಠಕೆ|
🙏ಶ್ರೀ ಕಪಿಲಾಯ ನಮಃ🙏

Post a Comment

Previous Post Next Post