ಸತೀಶ್ ಜಾರಕಿಹೊಳಿ ಬೆಂಬಲಿಗರಿಂದ ಈರಣ್ಣ ಕಡಾಡಿಯವರ ಕಾರಿಗೆ ಮುತ್ತಿಗೆ, ಹಲ್ಲೆ ಯತ್ನ -ರಾಜ್ಯ ರೈತ ಮೋರ್ಚಾ ಖಂಡನೆ

ಸತೀಶ್ ಜಾರಕಿಹೊಳಿ ಬೆಂಬಲಿಗರಿಂದ ಈರಣ್ಣ ಕಡಾಡಿಯವರ ಕಾರಿಗೆ ಮುತ್ತಿಗೆ, ಹಲ್ಲೆ ಯತ್ನ -ರಾಜ್ಯ ರೈತ ಮೋರ್ಚಾ ಖಂಡನೆ
ಬೆಂಗಳೂರು: ರೈತ ಮೋರ್ಚಾ ರಾಜ್ಯ ಅಧ್ಯಕ್ಷ ಹಾಗೂ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರು ತಮ್ಮ ಕೆಲಸದ ನಿಮಿತ್ತ ಕಲ್ಲೋಳ್ಳಿಗೆ ತೆರಳುತ್ತಿರುವ ಸಮಯದಲ್ಲಿ ಮಾರ್ಗದ ಮಧ್ಯೆ ಸತೀಶ್ ಜಾರಕಿಹೊಳಿ ಬೆಂಬಲಿತ ಗೂಂಡಾಗಳು ಈರಣ್ಣ ಕಡಾಡಿ ಅವರ ಕಾರಿಗೆ ಮುತ್ತಿಗೆ ಹಾಕಿ ಈರಣ್ಣ ಕಡಾಡಿ ಅವರಿಗೆ ಮತ್ತು ಬಿಜೆಪಿ ನಾಯಕರ ವಿರುದ್ಧ ಘೋಷಣೆಗಳನ್ನು ಕೂಗಿದರು. ಅಲ್ಲದೆ ಹಲ್ಲೆಗೆ ಮುಂದಾಗಿದ್ದರು. ಇದು ಖಂಡನೀಯ ಎಂದು ರೈತ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಪ್ರಸಾದ್ ಅವರು ತಿಳಿಸಿದ್ದಾರೆ.
ಈರಣ್ಣ ಕಡಾಡಿ ಅವರ ಕಾರನ್ನು ಅಡ್ಡಗಟ್ಟಿ ಸತೀಶ್ ಜಾರಕಿಹೊಳಿ ಬೆಂಬಲಿತ ಗೂಂಡಾಗಳು ಇಂತಹ ಕೃತ್ಯವನ್ನು ಮಾಡುವುದು ಸತೀಶ್ ಜಾರಕಿಹೊಳಿಗೆ ಶೋಭೆ ತರುವಂತದ್ದಲ್ಲ. ಭ್ರμÁ್ಟಚಾರವನ್ನು ಉಸಿರಾಗಿಸಿಕೊಂಡು ರಾಜಕೀಯ ಮಾಡುತ್ತಿರುವ, ವಿಚಾರವಾದಿ ಎಂಬ ಮುಖವಾಡ ಧರಿಸಿರುವ ಸತೀಶ್ ಜಾರಕಿಹೊಳಿ ದಲಿತ ಸಂಘಟನೆಗಳ ಹೆಸರಿನಲ್ಲಿ ಒಬ್ಬ ರಾಜ್ಯಸಭಾ ಸದಸ್ಯರ ಮೇಲೆ ಹಲ್ಲೆಗೆ ಯತ್ನಿಸಿರುವುದು ಖಂಡನಾರ್ಹ. ಪ್ರಜಾಪ್ರಭುತ್ವದ ಮೌಲ್ಯಗಳಲ್ಲಿ ನಂಬಿಕೆ ಇಲ್ಲದಿರುವ ಸತೀಶ್ ಜಾರಕಿಹೊಳಿ ಅಂತಹ ವ್ಯಕ್ತಿಗಳು ಮುಗ್ಧ ದಲಿತ ಮುಖಂಡರನ್ನು ಬಳಸಿಕೊಂಡಿರುವುದು ಇದು ದಲಿತರಿಗೆ ಮಾಡಿರುವ ಅಪಮಾನ ಎಂದು ಹೇಳಬೇಕಾಗುತ್ತದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾಂಗ್ರೆಸ್ ತನ್ನ ಗೂಂಡಾ ಸಂಸ್ಕøತಿಯಿಂದ ಪ್ರಜಾಪ್ರಭುತ್ವ ಹತ್ತಿಕ್ಕುವಂತಹ ಕೆಲಸವನ್ನು ನಿತ್ಯ ನಿರಂತರವಾಗಿ ಮಾಡುತ್ತಿದೆ. ಪ್ರಜಾಪ್ರಭುತ್ವದಲ್ಲಿ ಪ್ರತಿಭಟಿಸುವ ಹಕ್ಕು ಎಲ್ಲರಿಗೂ ಇರುತ್ತದೆ. ಪ್ರತಿಭಟನೆಗಳು ಜನ ಪರವಾಗಿರಬೇಕು. ಆದರೆ, ಧ್ವೇಷ ಸಾಧನೆಗೋಷ್ಕರ ಬಳಸಿಕೊಂಡಿರುವುದು ಜಾರಕಿಹೊಳಿ ಅವರ ಮನಸ್ಥಿತಿಯನ್ನು ತೋರಿಸುತ್ತದೆ ಎಂದು ಆಕ್ಷೇಪಿಸಿದ್ದಾರೆ.
ಪ್ರಜಾಪ್ರಭುತ್ವದಲ್ಲಿ ಇಂತಹ ಹೇಯ ಕೃತ್ಯವನ್ನು ಯಾವೊಬ್ಬ ಪ್ರಜೆಯೂ ಸಹಿಸುವುದಿಲ್ಲ. ತಮ್ಮ ಮನಸ್ಥಿತಿಯನ್ನು ಸರಿಪಡಿಸಿಕೊಳ್ಳದಿದ್ದರೆ ಹಾಗೂ ಇಂತಹ ಕೃತ್ಯಗಳು ಮುಂದಿನ ದಿನಗಳಲ್ಲಿ ನಡೆದರೆ ರಾಜ್ಯ ರೈತ ಮೋರ್ಚಾ ವತಿಯಿಂದ ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ ಉಗ್ರವಾದ ಹೋರಾಟಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.                                                          


                                                                    
  (ಕರುಣಾಕರ ಖಾಸಲೆ)
 ಮಾಧ್ಯಮ ಸಂಚಾಲಕರು
 ಬಿಜೆಪಿ ಕರ್ನಾಟಕ

Post a Comment

Previous Post Next Post