[15/11, 5:20 AM] vijayavitthala blr: *||ಪಿಬತ ಭಾಗವತಂ ರಸಮಾಲಯಂ||*
✍️ಆಟದಲ್ಲಿ ಸೋತ ಪ್ರಲಂಭಾಸುರ ಬಲರಾಮನನ್ನು ಸಂಹಾರ ಮಾಡಲು ಎತ್ತಿಕೊಂಡು ಹೊರಟಿದ್ದ.
*ಬಲರಾಮನಿಗೆ ಗಾಭರಿಯಾಗಿ "ಕೃಷ್ಣ! "ಕೃಷ್ಣ!" "ರಕ್ಷಿಸು" ಎಂದು ಜೋರಾಗಿ ಕೂಗಿದ.*
*ಅವಾಗ ಶ್ರೀ ಕೃಷ್ಣ ಪರಮಾತ್ಮನು ಬಲರಾಮನಿಗೆ ತನ್ನ ಸ್ವರೂಪವನ್ನು ಜ್ಞಾಪಕ ಮಾಡಿಕೊಳ್ಳಲು ಹೇಳಿದ್ದಾನೆ.
*ಆಗ ಬಲರಾಮನಿಗೆ ತನ್ನ ಶಕ್ತಿಯ ಅರಿವಾಗಿ ತನ್ನ ಮೂಲ ರೂಪದ ಬಲವನ್ನು ಆಕರ್ಷಣೆ ಮಾಡಿಕೊಂಡು ಆ ಪ್ರಲಂಭಾಸುರನೆಂಬ ದೈತ್ಯನ ಸಂಹಾರ ಮಾಡುತ್ತಾನೆ.*
ಇದರ ಸಾರಾಂಶ ಇಷ್ಟೇ.
*ಬಲರಾಮ ಹೇಗೆ ಶ್ರೀಕೃಷ್ಣ ನ ಮರೆತು ಆಟದಲ್ಲಿ ಇದ್ದಾಗ ರಾಕ್ಷಸ ನಿಂದ ಅಪಹರಣ ಗೊಂಡನೋ ಅದರಂತೆ ಈ ಜೀವ ಸಹ ಭಗವಂತನ ಮರೆತು ಸಂಸಾರ ಸುಖದಲ್ಲಿ ಲೌಕಿಕ ಜಂಜಾಟದಲ್ಲಿ ಮುಳುಗಿರುವ ಸಮಯದಲ್ಲಿ ದೈತ್ಯ ಶಕ್ತಿ ಅವನನ್ನು ಅಪಹರಿಸಿ ಅವನಿಂದ ದುಷ್ಟ ಕಾರ್ಯಗಳನ್ನು ಮಾಡಿಸುತ್ತದೆ.ಒಂದು ವೇಳೆ ಜೀವನಿಗೆ ಜನ್ಮಾಂತರದ ಪುಣ್ಯ ಬಲದಿಂದ ನಾನು ಅಸ್ವತಂತ್ರ ,ಭಗವಂತ ಸ್ವತಂತ್ರ. ಅವನೇ ಕಾಯಬೇಕು ಎನ್ನುವ ಎಚ್ಚರಿಕೆ ಜ್ಞಾನ ಬಂದಾಗ ಭಗವಂತನ ಅನುಗ್ರಹದಿಂದ ದೈತ್ಯ ಶಕ್ತಿ ನಾಶವಾಗುತ್ತದೆ.*
*ಪ್ರಳಂಬಾಸುರನ ಬಗ್ಗೆ ಬಲರಾಮ ಅರಿತಿದ್ದು ಬಹಳ ವಿಳಂಬವಾಗಿ.*
*ಅವನ ಜೊತೆ ಹೋರಾಟವನ್ನು ಮಾಡಿ ಇನ್ನೂ ಆಗದು ಎನ್ನುವ ಸಮಯದಲ್ಲಿ ಭಗವಂತನ ಸ್ಮರಣೆ ಮಾಡಿದ.*
*ಹೀಗೆ ವಿಳಂಬವಾಗಿ ಆದರು ಸರಿಯಾಗಿ ಅರಿತವರು ಶೇಷದೇವರಾದ ಬಲರಾಮರು.*
*ಅದೇ ನಮಗೆ ಮಾರ್ಗ ದರ್ಶನ ವಾಗಬೇಕು.*
*ಇಷ್ಟು ದಿನ ವಿಳಂಬವಾಗಿ ಸಮಯ ಮತ್ತು ಕಾಲವನ್ನು ಕಳೆದ ನಾವು ಇನ್ನಾದರು ಶ್ರೀ ಹರಿಯ ಬಗ್ಗೆ ತಿಳಿಯಲು ಪ್ರಯತ್ನ ಮಾಡೋಣವೇ..*
🙏🏻ಶ್ರೀ ಕೃಷ್ಣಾರ್ಪಣಮಸ್ತು🙏
*ಹಾಳು ಹರಟೆಯಾಡಿ ಮನವ* |
*|ಬೀಳು ಮಾಡಿ ಕೊಳ್ಳಲು ಬೇಡಿ|*
*|ಏಳು ದಿನದ ಕಥೆಯು ಕೇಳಿ|ಏಳಿರೋ ವೈಕುಂಠಕೆ|*
🙏ಶ್ರೀ ಕಪಿಲಾಯನಮಃ🙏
[15/11, 5:29 AM] vijayavitthala blr: *||ಪಿಬತ ಭಾಗವತಂ ರಸಮಾಲಯಂ||*

[15/11, 5:56 AM] vijayavitthala blr: || ಶ್ರೀನಾರಾಯಣತೀರ್ಥರು ||
ಕರ್ಣಾಟಕದ ನಂಜನಗೂಡಿನ ಸಮೀಪವಿರುವ ಕಳಲೆ ಗ್ರಾಮಸ್ಥರಾದ ಶ್ರೀರಾಮಚಂದ್ರರಾಯರು ಮತ್ತು ಶ್ರೀಮತಿ ಜಾನಕಿ ದಂಪತಿಗಳಿಗೆ ಬಹುಕಾಲದಿಂದ ಮಕ್ಕಳಾಗಲಿಲ್ಲ. ಶ್ರೀಶ್ರೀನಿವಾಸ ದೇವರನುಗ್ರಹದಿಂದ ತುಂಬು ಗರ್ಭಿಣಿಯಾದ ಜಾನಕಿಬಾಯಿಯು ಎತ್ತಿನಗಾಡಿಯಲ್ಲಿ ನಂಜನಗೂಡಿನಿಂದ ಕಳಲೆಗ್ರಾಮಕ್ಕೆ ಪ್ರಯಾಣಿಸುತ್ತಿರುವಾಗ 1887ರಂದು ದೇಹದಲ್ಲಿ ಚಲನವಿಲ್ಲದ ಮಗುವೊಂದು ಜನಿಸಿತು. ಮೃತಶಿಶುವೆಂದು ಭಾವಿಸಿ ಆ ಮಗುವನ್ನು ಕಂಬಳಿಯಲ್ಲಿಟ್ಟು, ಮುಂದಿನ ಕಾರ್ಯಕ್ರಮಕ್ಕೆಂದು ಮರುದಿನ ಆ ಮಗುವನ್ನು ನೋಡಲು, ಆ ದಂಪತಿಗಳಿಗಾದ ಆನಂದ ಅಪಾರ. ಕೇಕೆ ಹಾಕುತ್ತಾ ಕೈಕಾಲು ಬಡೆಯುತ್ತಿರುವ ಆ ಮಗುವನ್ನು ಕಂಡು ಎಲ್ಲವೂ ಆ ದೇವದೇವೋತ್ತಮನಾದ ಆ ಶ್ರೀನಿವಾಸದೇವರನುಗ್ರಹವೆಂದು ಭಾವಿಸಿ ಆ ಮಗುವಿಗೆ ಶ್ರೀನಿವಾಸಮೂರ್ತಿ ಎಂದೇ ಕರೆದರು. ನಿಮ್ಮ ಮೊಮ್ಮಗ ಮುಂದೆ ಮಹಾಪುರುಷನಾಗುತ್ತಾನೆಂದು ಓರ್ವಯತಿಗಳು, ರಾಮಚಂದ್ರರಾಯರ ತಾಯಿಯ ಸ್ವಪ್ನದಲ್ಲಿ ಹೇಳಲು, ರಾಮಚಂದ್ರರಾಯರು ಮಗನಿಗೆ ಉತ್ತಮ ಸಂಸ್ಕಾರವನ್ನಿತ್ತು ಬೆಳಿಸಿದರು.
ರಾಷ್ಟ್ರಾಭಿಮಾನ ಅಪಾರವಾಗಿದ್ದ ಶ್ರೀನಿವಾಸಮೂರ್ತಿಯವರು, ತಮ್ಮ ವ್ಯಾಸಂಗದನಂತರ 1931ರಂದು ಮೈಸೂರು ಸೇನೆಯಲ್ಲಿ ಸೇರಿದರು. ಸೇನೆಯಲ್ಲಿರುವಾಗ ಅಂದು ನಡೆದ ದ್ವಿತೀಯ ಮಹಾಯುದ್ಧದಲ್ಲಿ ಮೈಸೂರ್ ರೆಜಿಮೆಂಟ್ ಆಂಗ್ಲೇಯರಪರ ವಹಿಸಿ ಜರ್ಮನ್ ದೇಶದ ತದ್ವಿರುದ್ಧ ನಡೆದ ಸಂಗ್ರಾಮದಲ್ಲಿ ಅತೀವ ಪರಾಕ್ರಮವನ್ನು ಪ್ರದರ್ಶಿಸಿದ ಶ್ರೀನಿವಾಸಮೂರ್ತಿಯವರಿಗೆ ಅಂದಿನ ಮೈಸೂರಿನ ಅರಸನಾದ ಶ್ರೀಜಯಚಾಮರಾಜೇಂದ್ರ ಒಡೆಯರು ಸುಬೇದಾರಪದವಿಯನ್ನಿತ್ತು ಗೌರವಿಸಿದರು. ಈ ಸಂದರ್ಭದಲ್ಲಿ ಒಂದು ಏಕಾದಶಿದಿವಸ ಬಹಳ ತಾಪಗೊಂಡಿದ್ದ ಶ್ರೀನಿವಾಸಮೂರ್ತಿಯವರು ಕಾರ್ಯನಿರ್ವಹಣೆಗೆ ಹೋಗಲಿಲ್ಲ. ಆ ಮರುದಿವಸ ದ್ವಾದಶಿ ಪಾರಣೆ ಮುಗಿಸಿ ಬಹು ಪ್ರಾಮಾಣಿಕತೆಯಿಂದ ಮೇಲಿನ ಅಧಿಕಾರಿಗಳಿಗೆ ತಮ್ಮ ರಜೆ ಪತ್ರವನ್ನು ಕೊಡಲು, ನಿನ್ನೆಯದಿವಸ ಬಂದು ಕಾರ್ಯನಿರ್ವಹಿಸಿದ್ದರೂ ರಜೆ ಪತ್ರ ಯಾಕೆ ಕೊಡುತ್ತಿದ್ದೀರೆಂದು ಮೇಲಿನ ಅಧಿಕಾರಿ ಕೇಳಲು, ಅವಾಕ್ಕಾದ ಶ್ರೀನಿವಾಸಮೂರ್ತಿಯವರು ನಡೆದ ವಿಚಾರವನ್ನು ಹೇಳಿದರು. ಹಾಜರಾತಿ ಪುಸ್ತಕದಲ್ಲಿ ಋಜುಹಾಕಿದ್ದುಸಹ ಮೇಲಿನ ಅಧಿಕಾರಿಯಾದ ರಾಣಾ ಜೋಗಿಂದರ್ ಸಿಂಗ್ ಇವರಿಗೆ ತೋರಿಸಲು, ಇದೆಲ್ಲವೂ ಪರಮಾತ್ಮನ ಲೀಲೆಯಂದು ಭಾವಿಸಿದರು. ಈ ಘಟನೆಯು ಶ್ರೀನಿವಾಸಮೂರ್ತಿಯವರ ಜೀವನವನ್ನೇ ಬದಲಾಗಿಸಿತು. ಕೂಡಲೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ ಶ್ರೀನಿವಾಸಮೂರ್ತಿಯವರು ತಮ್ಮ ಮಕ್ಕಳ ಜವಾಬ್ದಾರಿಯನ್ನು ಅಳಿಯಂದಿರಾದ ರಂಗರಾಯರಿಗೆ ಒಪ್ಪಿಸಿ, ಪರಮಾತ್ಮನ ಪಾದಕಮಲಗಳಲ್ಲಿ ಮನಸ್ಸುಳ್ಳವರಾಗಿರಲು, ಶ್ರೀಮನ್ಮಂತ್ರಾಲಯಪ್ರಭುಗಳ ಸ್ವಪ್ನಸೂಚನೆಯಂತೆ ತುರ್ಯಾಶ್ರಮ ಸ್ವೀಕರಿಸಲು ಸಿದ್ಧರಾದರು. ಅಂದಿನ ಕೂಡ್ಲಿ ಶ್ರೀಆರ್ಯ ಅಕ್ಷೋಭ್ಯತೀರ್ಥ ಮಠಾಧೀಶರಾದ ಶ್ರೀರಘುವೀರತೀರ್ಥರಿಂದ ಸನ್ಯಸ್ತರಾಗಿ ಶ್ರೀನಾರಾಯಣತೀರ್ಥರೆಂದು ಕರೆಯಲ್ಪಟ್ಟರು. ಅವರೇ ಇಂದಿನ ಕಥಾನಾಯಕರು.
ಶ್ರೀರಾಮಾಂಘ್ರಿಸರೋಜಯುಗ್ಮಮನಿಶಂ ಸಂಪೂಜಯಂತಂಮುದಾ |
ಶ್ರೀನಾರಾಯಣತೀರ್ಥನಾಮಕ ಮುನಿಶ್ರೇಷ್ಠವಿಶಿಷ್ಠಗುಣೈ: ||
ಭೂವೃಂದಾರಕವೃಂದನಂದದಮಲಂ ಮೃಷ್ಟಾನ್ನದಾನಾದಿಭಿ: |
ವಂದೇ ಶ್ರೀರಘುವೀರತೀರ್ಥಕರಜಂ ಭಕ್ತ್ಯಾವಿರಕ್ತ್ಯಾಯುತಂ ||
[15/11, 6:06 AM] vijayavitthala blr: || ಶ್ರೀನಾರಾಯಣತೀರ್ಥರು ||

Post a Comment