ಸುವರ್ಣ ಸೌಧದ ಆವಣದಲ್ಲಿ ಡಿ.29ರಂದು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ಗಾಂಧೀಜಿ, ಅಂಬೇಡ್ಕರ್ ಪ್ರತಿಮೆಗೆ ಶಂಕುಸ್ಥಾಪನೆ*

[28/12, 7:56 PM] Cm Ps: *ಸುವರ್ಣ ಸೌಧದ ಆವಣದಲ್ಲಿ ಡಿ.29ರಂದು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ಗಾಂಧೀಜಿ, ಅಂಬೇಡ್ಕರ್ ಪ್ರತಿಮೆಗೆ ಶಂಕುಸ್ಥಾಪನೆ*

ಬೆಳಗಾವಿ, ಡಿಸೆಂಬರ್ 28-
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು (ಡಿಸೆಂಬರ್ 29 ರಂದು) ಬೆಳಿಗ್ಗೆ 10.15 ಗಂಟೆಗೆ ಸುವರ್ಣ ಸೌಧದ ಆವರಣದಲ್ಲಿ ಕಿತ್ತೂರ ರಾಣಿ ಚೆನ್ನಮ್ಮ, ಕ್ರಾಂತಿವೀರ ಸಂಗೊಳ್ಳಿ ರಾಯಣ, ಮಹಾತ್ಮಾ ಗಾಂಧಿ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆ ಸ್ಥಾಪನೆಗೆ ಗುದ್ದಲಿಪೂಜೆ ನೆರವೇರಿಸುವರು.
ಕಳೆದ ವರ್ಷದ ಬೆಳಗಾವಿ ವಿಧಾನಮಂಡಲ ಅಧಿವೇಶನ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಘೋಷಿಸಿದಂತೆ ಈ ಪ್ರತಿಮೆಗಳನ್ನು ಸ್ಥಾಪಿಸಲಾಗುತ್ತಿದೆ. 
ಕರ್ನಾಟಕ ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಉಭಯ ಸದನಗಳ ಪ್ರತಿ ಪಕ್ಷದ ನಾಯಕರಾದ ಸಿದ್ದರಾಮಯ್ಯ, ಬಿ.ಕೆ. ಹರಿಪ್ರಸಾದ್, ಸಚಿವ ಸಂಪುಟದ ಸದಸ್ಯರು ಹಾಗೂ ಶಾಸಕರು, ಸರ್ಕಾರದ ಹಿರಿಯ ಅಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸುವರು.
[28/12, 8:40 PM] Cm Ps: *ಮುಂದಿನ ಬಜೆಟ್ ನಲ್ಲಿ ರೈತರ ಪರವಾಗಿ ಇನ್ನಷ್ಟು ಕಾರ್ಯಕ್ರಮಗಳನ್ನು ರೂಪಿಸಲಾಗುವುದು*:  *ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ*

ಬೆಳಗಾವಿ, ಡಿಸೆಂಬರ್ 28: ಮುಂದಿನ ಆಯವ್ಯಯದಲ್ಲಿ ರೈತರ ಪರವಾಗಿ ಇನ್ನಷ್ಟು ಕಾರ್ಯಕ್ರಮಗಳನ್ನು ರೂಪಿಸಲಾಗುವುದು ಎಂದು  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. 

ಅವರು ಇಂದು ಶ್ರೀ ಶಿವಯೋಗೇಶ್ವರ ಗ್ರಾಮೀಣ ಆಯುರ್ವೇದಿಕ್ ವೈದ್ಯಕೀಯ ಮಹಾವಿದ್ಯಾಲಯದ  ರಜತ ಮಹೋತ್ಸವ ಹಾಗೂ ಯಾತ್ರಿ ನಿವಾಸ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು.  

ರೈತನ ಬದುಕು ಅನಿಶ್ಚಿತತೆ ಯಿಂದ ಕೂಡಿದೆ.  ಅವನ ಬದುಕಿಗೆ ನಿಶ್ಚಿತ ತೆ ತಂದುಕೊಡಲು ಸರ್ಕಾರ ಪ್ರಯತ್ನ ಮಾಡುತ್ತಿದೆ. ಬಡ್ಡಿ ರಹಿತ ಸಾಲ, ಯಶಸ್ವಿನಿ ಯೋಜನೆ ಮರುಪ್ರಾರಂಭವಾಗಿದೆ. ರೈತ ಶಕ್ತಿ, ಹಾಲು ಉತ್ಪಾದಕರಿಗೆ ವಿಶೇಷ ಪ್ರೋತ್ಸಾಹ ಧನ  ನೀಡಲಾಗುತ್ತಿದೆ. 10 ಹೆಚ್.ಪಿ ವರೆಗೆ ಉಚಿತವಾಗಿ ವಿದ್ಯುತ್ ನೀಡಲಾಗುತ್ತಿದೆ. ಇಷ್ಟೆಲ್ಲಾ ಇದ್ದರೂ ಅವರು ಸಂಕಷ್ಟದಲ್ಲಿದ್ದಾರೆ.  ರೈತರ ಮಕ್ಕಳ ವಿದ್ಯಾಭ್ಯಾಸದ ಭಾರವನ್ನು ಕಡಿಮೆ ಮಾಡಲು ನಾನು ಮುಖ್ಯಮಂತ್ರಿಯಾದ ಕೂಡಲೇ ರೈತ ವಿದ್ಯಾನಿಧಿ ಯೋಜನೆಯನ್ನು ಘೋಷಿಸಲಾಯಿತು ಎಂದರು. 

*ಉತ್ತರ ಕರ್ನಾಟಕದ 5700 ಕೋಟಿ ರೂ.ಗಳ ಯೋಜನೆಗಳಿಗೆ ಮಂಜೂರಾತಿ*
ರೈತನ ಹೊಲಕ್ಕೆ ನೀರು ಕೊಡುವ ಅಗತ್ಯವಿದೆ. ಅದಕ್ಕಾಗಿ ನೀರಾವರಿಗೆ ಅತಿ ಹೆಚ್ಚು ಒತ್ತು ನೀಡಲಾಗಿದೆ. ಮೊನ್ನೆ ನಡೆದ ಸಚಿವ ಸಂಪುಟದಲ್ಲಿ ಉತ್ತರ ಕರ್ನಾಟಕದ 5700 ಕೋಟಿ ರೂ.ಗಳ ಯೋಜನೆಗಳಿಗೆ ಮಂಜೂರಾತಿ ನೀಡಿದೆ. ಅದರಲ್ಲಿ ಈ ಭಾಗದಲ್ಲಿ ಚನ್ನ ವೃಷಬೇಂದ್ರ ಏತ ನೀರಾವರಿಗೆ 520 ಕೋಟಿ ರೂ.ಗಳ ಅನುಮೋದನೆಯಾಗಿದ್ದು, 31 ಹಳ್ಳಿಗಳಿಗೆ ಪ್ರಯೋಜನವಾಗಲಿದೆ. ಇದರಲ್ಲಿ ಇಂಚಲವೂ ಸೇರಿದೆ. ಸ್ವಾಮೀಜಿಗಳ ಬೇಡಿಕೆಯೂ ಆಗಿತ್ತು ಎಂದರು.  

*ಏತ ನೀರಾವರಿ ಯೋಜನೆಗಳು*
ಸತ್ತಿಗೆರೆ ಏತ ನೀರಾವರಿ ಯೋಜನೆ 530 ಕೋಟಿ ರೂ.ಗಳನ್ನು  ಮಂಜೂರು ಮಾಡಿದೆ. ಸವದತ್ತಿ, ಕಿತ್ತೂರು , ಬೈಲಹೊಂಗಲ ಕ್ಕೆ ಯಜುರ್ವಿ ಕುಡಿಯುವ ನೀರಿನ ಯೋಜನೆ 386 ಕೋಟಿ ರೂ,  ದೇವಗಾವ್ ಕುಡಿ ಯುವ ನೀರಿನ ಯೋಜನೆ, ಕಿತ್ತೂರು ಹಾಗೂ ಖಾನಾಪುರಕ್ಕೆ  ಅನುಕೂಲವಾಗಲಿದೆ. ಕಿತ್ತೂರು- ಖಾನಾಪುರ, ಕಿತ್ತೂರು- ಬೈಲಹೊಂಗಲ, ಮತ್ತು ಸವದತ್ತಿ ತಾಲ್ಲೂಕುಗಳಿಗೆ ಅನುಕೂಲ ವಾಗುವ ಯೋಜನೆ ಇದು. ಈ ಮೊತ್ತವನ್ನು  ಸರಿಯಾದ ರೀತಿಯಲ್ಲಿ ಕೆಲಸ ಮಾಡಿಸುವ ಜವಾಬ್ದಾರಿ ಶಾಸಕರದ್ದು ಎಂದರು. ಒಂದು ನಯಾ ಪೈಸೆಯೂ ಸೋರಿಹೋಗಬಾರದು. ನಿಗದಿತ ಸಮಯದಲ್ಲಿ ಪೂರ್ಣಗೊಳ್ಳಬೇಕು ಹಾಗೂ ಗುಣಮಟ್ಟವನ್ನು ಕಾಯ್ದುಕೊಳ್ಳಬೇಕು. ರೈತರ ಹೊಲಕ್ಕೆ ನೀರು ಮುಟ್ಟಬೇಕು ಎಂದರು. 

*ಕರ್ನಾಟಕದಲ್ಲಿ ಮಠಗಳು ಶೈಕ್ಷಣಿಕ ಕ್ರಾಂತಿಯನ್ನು  ಮಾಡಿವೆ*
ಶಾಲೆಯಿಂದ ಪ್ರಾರಂಭವಾಗಿ ಆಯುರ್ವೇದ ವೈದ್ಯಕೀಯ ಕಾಲೇಜಿನವರೆಗೆ ಶಿಕ್ಷಣ ಸಂಸ್ಥೆ ಬೆಳೆದಿದೆ.  ಸಾವಿರಾರು ವಿದ್ಯಾರ್ಥಿ ಗಳಿಗೆ ದಾರಿದೀಪ ವಾಗಿ ,ಸಮಾಜಕ್ಕೆ ಕಲ್ಯಾಣ, ಶೈಕ್ಷಣಿಕ ಅಭಿವೃದ್ಧಿಯ ಸೇವೆ ಅನನ್ಯ.  ಕರ್ನಾಟಕದಲ್ಲಿ ಉತ್ತರದ ನಿಪ್ಪಾಣಿಯಿಂದ ಹಿಡಿದು ದಕ್ಷಿಣದ ಕೊಳ್ಳೇಗಾಲದವರೆಗೂ ಮಠಗಳ ಕೆಲಸ, ಅನ್ನ, ವಿದ್ಯಾ ದಾಸೋಹವನ್ನು ನೂರಾರು ವರ್ಷಗಳ ಕಾಲ ಮಾಡಿಕೊಂಡು ಬಂದಿವೆ. ಕರ್ನಾಟಕದಲ್ಲಿ ಶೈಕ್ಷಣಿಕ ಕ್ರಾಂತಿಯನ್ನು ಮಠಗಳು ಮಾಡಿವೆ. ಗ್ರಾಮೀಣ ಪ್ರದೇಶಗಳಲ್ಲಿ ಕುಗ್ರಾಮ ಗಳಲ್ಲಿ ಶಾಲಾ ಕಾಲೇಜುಗಳನ್ನು ತೆಗೆಯುವುದು ಪುಣ್ಯದ ಕಾರ್ಯ.  ಗ್ರಾಮೀಣ ಪ್ರದೇಶದಲ್ಲಿ ಬಡತನವಿದೆ. ರೈತರ ಮಕ್ಕಳು ಪೂರ್ಣ ಪ್ರಮಾಣದಲ್ಲಿ ವಿದ್ಯಾಭ್ಯಾಸ ಮಾಡುವುದಿಲ್ಲ.  ವಿದ್ಯಾಭ್ಯಾಸಕ್ಕೆ ಒಟ್ಟು ನೀಡಿ ಶಿಕ್ಷಣ ಸಂಸ್ಥೆಗಳು ತೆರೆದಿರುವುದರಿಂದ ಊರಿನಲ್ಲಿಯೇ ಕಲಿಯುವಂತಾಗಿದೆ.  ಅನ್ನ, ವಿದ್ಯೆ ನೀಡಿ,  ಮನುಷ್ಯನನ್ನಾಗಿ ರೂಪಿಸಿ ಸಮಾಜಕ್ಕೆ ಕೊಡುಗೆ  ನೀಡಿವೆ. ಇಂಚಲ ಮಠ ಮಾಡಿರುವ ಕಾರ್ಯ ಅತ್ಯಂತ ಅನುಕರಣೀಯ ಎಂದರು. 

*ದುಡಿಮೆಯೇ ದೇವರು*
ದುಡಿಮೆಯೇ ದೇವರು ಎಂದು ನಂಬಿರುವ ಸರ್ಕಾರ ನಮ್ಮದು.  ಅದಕ್ಕಾಗಿ ಈ ಯೋಜನೆಗಳು. ಮಂಜೂರಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಆರ್ಥಿಕತೆ ಸುಧಾರಿಸಿದರೆ ಕರ್ನಾಟಕದ ಆರ್ಥಿಕತೆ ಸುಧಾರಣೆ ಆಗುತ್ತದೆ. ನಾಡಿನ ಜನತೆ ಶ್ರೀಮಂತರಾಗಬೇಕು.   ಸ್ತ್ರೀ ಸಾಮರ್ಥ್ಯ ಯೋಜನೆ , ಸ್ವಾಮಿ ವಿವೇಕಾನಂದ ಯುವ ಶಕ್ತಿ ಯೋಜನೆ,  ಕಾಯಕ ಯೋಜನೆಗಳನ್ನು ಜಾರಿಗೆ ತಂದು, ದುಡಿಯುವ ಜನರ ನೆರವಿಗೆ ನಿಂತು ಸಬಲೀಕರಣ ಮಾಡುತ್ತಿದೆ. ಗ್ರಾಮೀಣ ಭಾಗದಲ್ಲಿ ಶಿಕ್ಷಣ ಮತ್ತು ಉದ್ಯೋಗದಲ್ಲಿ ದೊಡ್ಡ ಕ್ರಾಂತಿಯ ನ್ನು ಮಾಡಬೇಕೆಂದು ನಮ್ಮ ಸರ್ಕಾರ  ಕೆಲಸ ಮಾಡುತ್ತಿದೆ. ಉತ್ತರ ಕರ್ನಾಟಕದಲ್ಲಿ ಅಚ್ಚುಕಟ್ಟಾಗಿ ಅನುಷ್ಠಾನ ಮಾಡುವ ಮೂಲಕ ದೊಡ್ಡ ಪ್ರಮಾಣದಲ್ಲಿ ಆರ್ಥಿಕ, ಸಾಮಾಜಿಕ ಬದಲಾವಣೆ ತರಲಾಗುವುದು.  ಸಮಾಜದ ಪರಿವರ್ತನೆಗೆ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ ಎಂದರು. 

*ಭಕ್ತನಾಗಿ ಬಂದಿದ್ದೇನೆ*
ಕಾರ್ಯಕ್ರಮದಲ್ಲಿ ಭಕ್ತನಾಗಿ ಭಾಗವಹಿಸಿದ್ದು, ಜಗದ್ಗುರುಗಳು ಶ್ರಮ ವಹಿಸಿ ಕಟ್ಟಿದ ಸಂಸ್ಥೆ ಎಲ್ಲರಿಗೂ ಪ್ರೇರಣೆ. ಉಪಕಾರ , ಪರೋಪಕಾರಗಳನ್ನು ನಿರಂತರವಾಗಿ ಮಾಡಿಕೊಂಡು ಬಂದವರು ಎಂದರು.

ಇಂಚಲದ ಶ್ರೀ ಶಿವಯೋಗೀಶ್ವರ ಸಾಧು ಸಂಸ್ಥಾನ ಮಠದ  ಡಾ.ಶ್ರೀ ಶಿವಾನಂದ ಭಾರತಿ ಸ್ವಾಮೀಜಿ , ಸಚಿವರಾದ ಗೋವಿಂದ ಕಾರಜೋಳ, ಶಶಿಕಲಾ ಜೊಲ್ಲೆ, ಶಾಸಕರಾದ ಮಹಾಂತೇಶ್ ದೊಡ್ಡ ಗೌಡರ್, ದುರ್ಯೋಧನ ಐಹೊಳೆ, ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ,  ಸಂಸದೆ ಮಂಗಳಾ ಅಂಗಡಿ ಉಪಸ್ಥಿತರಿದ್ದರು.
[28/12, 8:51 PM] Cm Ps: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ವಿಜಯ ಕರ್ನಾಟಕ ವತಿಯಿಂದ ಆಯೋಜಿಸಿದ್ದ ಸದನ ಶೂರರು - ಕಾಫಿ ಟೇಬಲ್ ಪುಸ್ತಕ ಬಿಡುಗಡೆ ಮಾಡಿದರು. 


 ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ವಿಜಯ ಕರ್ನಾಟಕದ ಸಂಪಾದಕ ಸುದರ್ಶನ್ ಚನ್ನಂಗಿಹಳ್ಳಿ  ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
[28/12, 9:50 PM] Cm Ps: ಸದನ ಶೂರರು- ಕಾಫಿ ಟೇಬಲ್ ಪುಸ್ತಕ ಬಿಡುಗಡೆ -

*ಕರ್ನಾಟಕ ವಿಧಾನಮಂಡಲ ಹಲವು ಪ್ರಥಮಗಳನ್ನು ದಾಖಲಿಸಿದೆ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ*

ಬೆಳಗಾವಿ, ಡಿಸೆಂಬರ್ 28 :

ಭೂ ಸುಧಾರಣೆ ಕಾಯ್ದೆಗಳಿಂದ ಹಿಡಿದು ಕ್ರಾಂತಿಕಾರಿ ಮಸೂದೆಗಳು, ಕರ್ನಾಟಕ ಜಿಲ್ಲಾ ಪಂಚಾಯತ್ ಅಧಿಕಾರ ವಿಕೇಂದ್ರೀಕರಣ ಕಾನೂನು ದೇಶದಲ್ಲಿಯೇ ಪ್ರಥಮವಾಯಿತು. ಈ ರೀತಿ ಕರ್ನಾಟಕದ ವಿಧಾನಮಂಡಲ ಹತ್ತು ಹಲವಾರು ಪ್ರಮಗಳನ್ನು ದಾಖಲಿಸಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ವಿಜಯ ಕರ್ನಾಟಕ ವತಿಯಿಂದ ಆಯೋಜಿಸಿದ್ದ ಸದನ ಶೂರರು - ಕಾಫಿ ಟೇಬಲ್ ಪುಸ್ತಕ ಬಿಡುಗಡೆ ಮಾಡಿದರು. 

 ರಾಜ್ಯದ ವಿಧಾನಮಂಡಲದಲ್ಲಿ ಕ್ರಾಂತಿಕಾರಿ ಮಸೂದೆಗಳು, ಬೇರೆ ರಾಜ್ಯಗಳಲ್ಲಿ ಇಂತಹ ಮಸೂದೆಗಳ ಚರ್ಚೆಯೂ ನಡೆದಿರಲಿಲ್ಲ. ಕರ್ನಾಟಕ ಪ್ರಗತಿಪರವಾದ ರಾಜ್ಯವಾದ್ದರಿಂದ ಪ್ರಮುಖ ಮಸೂದೆಗಳು ಬಂದವು. ಜಿಲ್ಲಾ ಪಂಚಾಯತ್ ಅಧಿಕಾರ ವಿಕೇಂದ್ರೀಕರಣ ಕಾನೂನು ನಂತರ ಸಂವಿಧಾನದ 73 ಮತ್ತು 74 ನೇ ತಿದ್ದುಪಡಿಗೆ ನಾಂದಿಯಾಯಿತು ಎಂದರು.

*ಹಿರಿಯರ ಹಾದಿಯಲ್ಲಿ ನಡೆಯಲು  ಸ್ಪೂರ್ತಿ :*
ಕರ್ನಾಟಕದಲ್ಲಿ ಸರ್ವಸ್ವತಂತ್ರ ಲೋಕಾಯುಕ್ತ  ಸಂಸ್ಥೆ ಸ್ಥಾಪಿಸಲಾಯಿತು. ಕರ್ನಾಟಕ ವಿಧಾನಮಂಢಲ 70 ವರ್ಷಗಳಲ್ಲಿ  ಹಲವು ಪ್ರಥಮಗಳನ್ನು ದಾಖಲಿಸಿದೆ. ಆದ್ದರಿಂದ ಕರ್ನಾಟಕದ ವಿಧಾನಮಂಡಲಕ್ಕೆ ದೇಶದಲ್ಲಿ ತನ್ನದೇ ಆದ ಮಹತ್ವವನ್ನು ಹೊಂದಿದೆ. ನಮ್ಮ ಹಿರಿಯರು ನಡೆದು ಬಂದ ದಾರಿಯಲ್ಲಿ ನಡೆದು, ಅವರ ಆದರ್ಶಗಳ ಹಾದಿಯಲ್ಲಿ ನಡೆಯಲು ಸ್ಪೂರ್ತಿ ತುಂಬುವಂತಹ ಕಾಫಿ ಟೇಬಲ್ ಪುಸ್ತಕವನ್ನು ವಿಜಯಕರ್ನಾಟಕ ಹೊರತಂದಿದೆ ಎಂದರು.

*ರಾಜಕಾರಣಿಗಳ ಸಾಮಾಜಿಕ ಜವಾಬ್ದಾರಿಯನ್ನು ಮನವರಿಕೆ ಮಾಡಿಸುವುದೇ ನಿಜವಾದ ಪತ್ರಿಕೆ :*

ಒಂದು ಪತ್ರಿಕೆ 70 ವರ್ಷದ ವಿಧಾನಮಂಡಲದ ವಿಷಯಗಳನ್ನಾಧರಿಸಿ ಕಾಫಿ ಟೇಬಲ್ ಪುಸ್ತಕ ಮಾಡಿರುವುದು ಇದೇ ಪ್ರಥಮ ಎನಿಸುತ್ತದೆ.  ಸಂಸದೀಯ ವ್ಯವಹಾರಗಳ ಇಲಾಖೆಗಳಿಂದ ಇಂತಹ ಪುಸ್ತಕಗಳನ್ನು ಹೊರತರುತ್ತೇವೆ.  ಇಂದು ನಾವು ಆದರ್ಶ ಶಾಸಕರು ಎಂದು ಶ್ರೀ ಆರ್.ವಿ.ದೇಶಪಾಂಡೆಯವರಿಗೆ ನೀಡಲಾಗಿದೆ. ಪ್ರಜಾಪ್ರಭುತ್ವ ಗಟ್ಟಿಯಾಗಿ ನಿಲ್ಲಲು ನಾಲ್ಕನೇ ಸ್ತಂಭವೆನ್ನಲಾಗುವ ಮಾಧ್ಯಮ ಪ್ರಮುಖ ಪಾತ್ರ ವಹಿಸುತ್ತದೆ.  ರಾಜಕಾರಣಿಗಳ ನಿಲುವುಗಳನ್ನು ಜನಪರವನ್ನಾಗಿಸುವ ಶಕ್ತಿ ಪತ್ರಿಕೋದ್ಯಮಕ್ಕಿದೆ. ರಾಜಕಾರಣಿಗಳು ತಮ್ಮ ಭವಿಷ್ಯವನ್ನು ನೋಡಿಕೊಳ್ಳುವುದು ಸಹಜ ಪ್ರಕ್ರಿಯೆ.  ಆದರೆ ರಾಜಕಾರಣಿಗಳ ಸಾಮಾಜಿಕ ಜವಾಬ್ದಾರಿಯನ್ನು ಮನವರಿಕೆ ಮಾಡಿಸುವ ಪತ್ರಿಕೆ, ನಿಜವಾದ ಜನಪರ ಪತ್ರಿಕೆ ಎಂದರು.

*ನಮ್ಮ ನಡವಳಿಕೆ ಮುಂದಿನ ಪೀಳಿಗೆಗೆ ಮಾದರಿಯಾಗುವಂತಿರಬೇಕು:*
ವಿರೋಧಪಕ್ಷ ಹಾಗೂ ಆಡಳಿತ ಪಕ್ಷದಲ್ಲಿ ಕೆಲಸ ಮಾಡಿದವರು ಒಳ್ಳೆಯ ಶಾಸಕರಾಗಬಹುದು. ಒಟ್ಟು ಪ್ರಜಾಪ್ರಭುತ್ವದ ಆಯಾಮಗಳು ತಿಳಿಯುತ್ತದೆ. ಕರ್ನಾಟಕ ಪರಂಪರೆ ನಾವೆಲ್ಲರೂ ಉಳಿಸಿಕೊಂಡು ಹೋಗಲು ಕಾಫಿ ಟೇಬಲ್ ಬುಕ್ ಮಾರ್ಗದರ್ಶನ ನೀಡಲಿದೆ. ಪತ್ರಿಕಾ ರಂಗಕ್ಕೂ ರಾಜಕಾರಣಿಗಳಿಗೂ ಅವಿನಾಭಾವ ಸಂಬಂಧ.  ನಮ್ಮಿಬ್ಬರಿಗೂ ನಮ್ಮದೇ ಆದ ಮೌಲ್ಯಗಳಿದ್ದು, ಇಬ್ಬರೂ ಪರಸ್ಪರ ಅವಲಂಬಿತರಾಗಿದ್ದೇವೆ. ನಮ್ಮ ನಡವಳಿಕೆ ಮುಂದಿನ ಪೀಳಿಗೆಗೆ ಮಾದರಿಯಾಗುವಂತಿರಬೇಕು ಎಂದರು.

ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ವಿಜಯ ಕರ್ನಾಟಕದ ಸಂಪಾದಕ ಸುದರ್ಶನ್ ಚನ್ನಂಗಿಹಳ್ಳಿ  ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Post a Comment

Previous Post Next Post