ಕಜಕಿಸ್ತಾನದ ಅಲ್ಮಾಟಿಯಲ್ಲಿ ನಡೆದ ವಿಶ್ವ ಬ್ಲಿಟ್ಜ್ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ ಕೊನೇರು ಹಂಪಿ ಭಾರತಕ್ಕೆ ಮೊದಲ ಬೆಳ್ಳಿ ಪದಕ ಗೆದ್ದರು.![]() ಹಂಪಿ 17ನೇ ಹಾಗೂ ಅಂತಿಮ ಸುತ್ತಿನಲ್ಲಿ ಚೀನಾದ ಝೊಂಗಿ ತಾನ್ ಅವರನ್ನು ಸೋಲಿಸಿ ಬೆಳ್ಳಿ ಗೆದ್ದರು. ನಾಲ್ಕನೇ ಶ್ರೇಯಾಂಕದ ಹಂಪಿ ಆಕರ್ಷಕ 12.5 ಪಾಯಿಂಟ್‌ಗಳನ್ನು ಗಳಿಸಿದರು, ಚಿನ್ನದ ಪದಕ ವಿಜೇತ ಕಜಕಸ್ತಾನದ ಬಿಬಿಸಾರ ಬಾಲಬಯೇವಾ ಅವರಿಗಿಂತ ಕೇವಲ ಅರ್ಧ ಪಾಯಿಂಟ್ ಹಿಂದೆ. ವಿಶ್ವನಾಥನ್ ಆನಂದ್ ನಂತರ ವಿಶ್ವ ಬ್ಲಿಟ್ಜ್‌ನಲ್ಲಿ ಪದಕ ಗೆದ್ದ ಎರಡನೇ ಭಾರತೀಯ ಎಂಬ ಹೆಗ್ಗಳಿಕೆಗೆ ಹಂಪಿ ಪಾತ್ರರಾಗಿದ್ದಾರೆ. ವಿಶ್ವ ಬ್ಲಿಟ್ಜ್ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಗೆದ್ದ ಹಂಪಿ ಅವರನ್ನು ಯುವ ವ್ಯವಹಾರ ಮತ್ತು ಕ್ರೀಡಾ ಸಚಿವ ಅನುರಾಗ್ ಸಿಂಗ್ ಠಾಕೂರ್ ಅಭಿನಂದಿಸಿದ್ದಾರೆ. ಟ್ವೀಟ್‌ನಲ್ಲಿ, ಶ್ರೀ ಠಾಕೂರ್ ಅವರು ಗ್ರ್ಯಾಂಡ್‌ಮಾಸ್ಟರ್‌ನ ಸುಪ್ರಸಿದ್ಧ ಕ್ಯಾಪ್‌ನಲ್ಲಿ ಇದು ಮತ್ತೊಂದು ಗರಿ ಎಂದು ಕರೆದಿದ್ದಾರೆ |
Post a Comment