ಡಿಸೆಂಬರ್ 28, 2022 | , | 8:24PM |
ಅಂಚೆ ಇಲಾಖೆಯು ಗ್ರಾಮೀಣ ಡಾಕ್ ಸೇವಕರಿಗಾಗಿ ಆನ್‌ಲೈನ್ ವಿನಂತಿ ವರ್ಗಾವಣೆ ಪೋರ್ಟಲ್ ಅನ್ನು ಪ್ರಾರಂಭಿಸಿದೆ

ಅಂಚೆ ಇಲಾಖೆಯು ಭಾರತದಾದ್ಯಂತ ಒಂದು ಲಕ್ಷ 56 ಸಾವಿರಕ್ಕೂ ಹೆಚ್ಚು ಅಂಚೆ ಕಛೇರಿಗಳನ್ನು ಒಳಗೊಂಡಿರುವ ವಿಶ್ವದ ಅತಿದೊಡ್ಡ ಅಂಚೆ ಕಛೇರಿಗಳ ಜಾಲವನ್ನು ಹೊಂದಿದೆ. ಆನ್‌ಲೈನ್ ವಿನಂತಿ ವರ್ಗಾವಣೆ ಪೋರ್ಟಲ್‌ನ ಪ್ರಾರಂಭವು ತಂತ್ರಜ್ಞಾನವನ್ನು ಬಳಸಿಕೊಳ್ಳುವ ಮೂಲಕ ಆಡಳಿತ ಪ್ರಕ್ರಿಯೆಗಳಿಗೆ ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ತರುವಲ್ಲಿ ಒಂದು ದೊಡ್ಡ ಹೆಜ್ಜೆಯಾಗಿದೆ.
ಆನ್‌ಲೈನ್ ಪ್ರಕ್ರಿಯೆಯು ಸಮಯ ಮತ್ತು ಸಂಪನ್ಮೂಲಗಳನ್ನು ಉಳಿಸುವಲ್ಲಿ ಸಹ ಕಾರಣವಾಗುತ್ತದೆ. ಆನ್‌ಲೈನ್ ಪೋರ್ಟಲ್ ಮೂಲಕ ಐದು ಸಾವಿರಕ್ಕೂ ಹೆಚ್ಚು ಗ್ರಾಮೀಣ ಡಾಕ್ ಸೇವಕರ ವರ್ಗಾವಣೆಗೆ ಇಂದು ಅನುಮೋದನೆ ನೀಡಲಾಗಿದೆ.
Post a Comment