ನಾಗಾರ್ನೋ ಕಾರಬಾಕ್ ವಿಚಾರವಾಗಿ ಅರ್ಮೇನಿಯಾ ಹಾಗೂ ಅಜರ್ಬೈಜಾನ್ ದೇಶಗಳ ಮಧ್ಯೆ ಮತ್ತೆ ಸಂಘರ್ಷದ ವಾತವರಣ ಭುಗಿಲೆದ್ದಿದೆ.
ʻನಾಗಾರ್ನೋ ಕರಬಾಕ್‌ನಲ್ಲಿ ಅಜರ್ಬೈಜಾನ್ ದೌರ್ಜನ್ಯ ನಡೆಸ್ತಾ ಇದೆʼ ಅಂತ ಅರ್ಮೇನಿಯಾ ಆರೋಪ ಮಾಡಿದೆ. ಅಂದಹಾಗೆ ಈ ನಾಗಾರ್ನೋ ಕಾರಾಬಾಕ್ ಅನ್ನೋದು ಅರ್ಮೇನಿಯಾ ಹಾಗೂ ಅಜರ್ಬೈಜಾನ್ ದೇಶಗಳ ನಡುವಿನ ವಿವಾದಾತ್ಮಕ ಪ್ರದೇಶ. 1988ರ ಹೊತ್ತಿಗೆ ಅಂದ್ರೆ, ಎರಡೂ ದೇಶದವರು ಸೋವಿಯತ್ ಭಾಗವಾಗಿದ್ದಾಗ. ಅರ್ಮೇನಿಯನ್ ಪಡೆಗಳು ನಾಗೋರ್ನೊ-ಕರಾಬಖ್ ಭೂಪ್ರದೇಶವನ್ನು ವಶಪಡಿಸಿಕೊಂಡಿದ್ರು. ಆಗ ಮೊದಲ ಬಾರಿಗೆ ಘರ್ಷಣೆ ಪ್ರಾರಂಭವಾಗಿತ್ತು. ಅಂತಾರಾಷ್ಟ್ರೀಯ ಸಮುದಾಯ ನಾಗಾರ್ನೋ ಕಾರಬಾಕ್ ಅನ್ನ ಅಜೆರ್ಬೈಜಾನ್ ಗೆ ಸೇರಬೇಕು ಅಂತ ಹೇಳುತ್ತೆ. ಆದರೆ ಆ ಭಾಗದಲ್ಲಿ ದೊಡ್ಡ ಸಂಖ್ಯೆಯ ಅರ್ಮೇನಿಯನ್ ಜನ ಇಲ್ಲಿ ವಾಸ ಮಾಡ್ತಿದ್ದು ಇದು ಇಬ್ರ ಮಧ್ಯೆ ಸಂಘರ್ಷಕ್ಕೆ ಕಾರಣವಾಗಿದೆ. 2020ರಲ್ಲಿ ನಡೆದ ಯುದ್ದದಲ್ಲಿ ಅರ್ಮೆನಿಯಾ ಹಾಗೂ ಅಜರ್ಬೈಜಾನ್ ಕೆಲವು ಒಪ್ಪಂದಗಳನ್ನ ಮಾಡಿಕೊಂಡಿದ್ವು. ಅದರಂತೆ ಈ ವಿವಾದಿತ ನಾಗಾರ್ನೋ ಕಾರಬಾಕ್ ಅಜರ್‌ಬೈಜಾನ್‌ಗೆ ಹೋಗಿತ್ತು. ಆದ್ರೆ ಶಾಂತಿ ಮಾತ್ರ ನೆಲೆಯಾಗಿಲ್ಲ. ನಾಗಾರ್ನೋ ಕರಬಾಕ್ ಅನ್ನ ತನ್ನ ವಶಕ್ಕೆ ಪಡೆದುಕೊಂಡ ಮೇಲೆ ಅಲ್ಲಿ ಅಜರ್‌ಬೈಜಾನ್ ದೌರ್ಜನ್ಯ ಎಸಗ್ತಾ ಇದೆ ಅಂತ ಅರ್ಮೇನಿಯಾ ಆರೋಪ ಮಾಡಿದೆ. ಸುಮಾರು 1,20,000 ಜನರಿರುವ ಈ ಪ್ರದೇಶದಲ್ಲಿ ಆಹಾರ, ಔಷಧಗಳು ಮತ್ತು ಇಂಧನದ ಕೊರತೆ ಇದೆ. ಇದನ್ನೆಲ್ಲಾ ಅಜರ್ಬೈಜಾನ್ ಕೃತಕವಾಗಿ ಸೃಷ್ಟಿ ಮಾಡ್ತಾ ಇದೆ. ಅದ್ರಲ್ಲೂ ಖರಾಬಖ್‌ನಲ್ಲಿ ಪೂರ್ಣ ಪ್ರಮಾಣದ ಮಾನವೀಯ ಬಿಕ್ಕಟ್ಟನ್ನ ಅಜೆರ್ಬೈಜಾನ್ ಸೃಷ್ಟಿ ಮಾಡ್ತಾಯಿದೆ ಅಂತ ಅರ್ಮೇನಿಯನ್ ಅಧಿಕಾರಿಗಳು ಆರೋಪಿಸಿದ್ದಾರೆ. ಇನ್ನು ಅಜರ್ಬೈಜಾನ್ ನಮ್ಮ ಮೇಲೆ ದೌರ್ಜನ್ಯ ನಡೆಸ್ತಾ ಇದೆ ಅಂತ ವಿವಾದಿತ ಪ್ರದೇಶದಲ್ಲಿ ವಾಸ ಮಾಡ್ತಿರೋ ಜನ ಕೂಡ ಆರೋಪಿಸಿದ್ದಾರೆ ಅಂತ ಕೆಲ ಮಾಧ್ಯಮಗಳು ವರದಿ ಮಾಡಿವೆ. ಅಲ್ಲದೇ ಅರ್ಮೇನಿಯನ್ನರನ್ನ ನಾಗಾರ್ನೋ ಕರಬಾಕ್‌ನಿಂದ ಹೊರದೂಡೋಕೆ ಅಜರ್ಬೈಜಾನ್ ಈ ರೀತಿ ಮಾಡ್ತಿದೆ.. ಅಂತ ಅಲ್ಲಿನ ಸ್ಥಳೀಯರೊಬ್ರು ಹೇಳಿದ್ದಾರೆ. ಜೊತೆಗೆ ಈ ಭಾಗದಲ್ಲಿ ನಮ್ಮ ಪರಿಸ್ಥಿತಿ ತುಂಬಾ ಸಿರೀಯಸ್ ಆಗಿದೆ ಅಂತ ಹೇಳ್ಕೊಂಡಿದ್ದಾರೆ. ಇನ್ನೊಬ್ಬ ವ್ಯಕ್ತಿ ಮಾತನಾಡಿ ಅಜರ್‌ಬೈಜಾನ್ ಸಾಮಾನ್ಯ ಜನರ ಜೀವನದೊಂದಿಗೆ ಆಟ ಆಡ್ತಿದೆ. ಎಲ್ಲರನ್ನೂ ಹಸಿವಿಗೆ ದೂಡ್ತಾಯಿದೆ ಅಂತ ಹೇಳಿದ್ದಾರೆ. ಈ ರೀತಿಯ ವರದಿಗಳು ಈಗ ಅರ್ಮೇನಿಯಾವನ್ನ ಕೆರಳುವಂತೆ ಮಾಡಿದ್ದು ಅಜರ್ಬೈಜಾನ್ ವಿರುದ್ದ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಹೀಗಾಗಿ ಎರಡೂ ದೇಶದ ಮಧ್ಯೆ ಈಗ ಮತ್ತೊಮ್ಮೆ ಅಸಮಾಧಾನ ಭುಗಿಲೆದ್ದಿದೆ. ಇಲ್ಲಿ ತಿಕ್ಕಾಟಕ್ಕೆ ಇನ್ನೊಂದು ಕಾರಣ ಅಂದ್ರೆ ಕಳೆದ ಕೆಲದಿನಗಳ ಹಿಂದೆ ನಾಗಾರ್ನೋ ಕಾರಬಾಕ್‌ನಿಂದ ಅರ್ಮೇನಿಯಾಗೆ ಇರೋ ಏಕೈಕ ರಸ್ತೆ ಮಾರ್ಗವನ್ನ ಅಜರ್ಬೈಜಾನ್ ಮುಚ್ಚಿ ಹಾಕಿದೆ. ಈ ಭಾಗದಲ್ಲಿ ಇಲ್ಲೀಗಲ್ ಮೈನಿಂಗ್ ನಡೀತಾ ಇದೆ ಅಂತೇಳಿ ಅಜರ್ಬೈಜಾನ್ ಪರ ಇರೋರು ಈ ದಾರಿಯನ್ನ ಮುಚ್ಚಿದ್ದಾರೆ. ಹೀಗಾಗಿ ಇದು ಈಗಾಗಲೇ ಇದ್ದ ಅಸಮಾಧಾನದ ಬೆಂಕಿಗೆ ತುಪ್ಪಸುರಿಯೋ ರೀತಿ ಆಗಿದೆ. ಅರ್ಮೆನಿಯಾ ಒಂದು ಕ್ರಿಶ್ಚಿಯನ್ ಮೆಜಾರಿಟಿ ದೇಶವಾಗಿದ್ದು ಮುಸ್ಲಿಂ ರಾಷ್ಟ್ರವಾಗಿರೋ ಅಜರ್‌ಬೈಜಾನ್ ಜೊತೆಗೆ ಯಾವಾಗಲೂ ಗಡಿ ಸಂಘರ್ಷವನ್ನ ಎದುರಿಸ್ತಾನೇ ಇದೆ. ಅದ್ರಲ್ಲೂ ಅರ್ಮೇನಿಯಾ ಹಾಗೂ ಅಜರ್ಬೈಜಾನ್ ನಡುವೆ ಈ ನಾಗಾರ್ನೋ ಕರಬಾಕ್ ದೊಡ್ಡ ವಿವಾದಿತ ಭೂ ಭಾಗವಾಗಿ ಉಳಿದುಕೊಂಡಿದೆ. 2020ರ ಯುದ್ದದ ಬಳಿಕ ಈ ಎರಡೂ ದೇಶದ ಸೇನೆ ಇದ್ದಕ್ಕಿದ್ದಂತೆ ಹೊಡೆದಾಡಿಕೊಳ್ಳೋದು ತುಂಬಾ ಕಾಮನ್ ಆಗಿರುತ್ತೆ. ಹಾಗಾಗಿ ಈಗ ಅಜರ್ಬೈಜಾನ್ ಮೇಲೆ ಅರ್ಮೇನಿಯಾ ಮಾಡ್ತಿರೋ ಆರೋಪ ಹಾಗೂ ಅಜರ್‌ಬೈಜಾನ್ ಅರ್ಮೇನಿಯಾ ದಾರಿಯನ್ನ ಬಂದ್ ಮಾಡಿರೋದು ಆ ಎರಡೂ ದೇಶಗಳ ಮಧ್ಯೆ ಮತ್ತೊಂದು ಸಂಘರ್ಷಕ್ಕೆ ಕಾರಣವಾಗುತ್ತಾ ಅಂತ ಹಲವರು ಆತಂಕ ಹೊರಹಾಕಿದ್ದಾರೆ.
-masthmagaa.com
Post a Comment