ಡಿಸೆಂಬರ್ 30, 2022 | , | 1:26PM |
ತಪಾಸಣೆಯ ನಂತರ ಮರಿಯನ್ ಬಯೋಟೆಕ್‌ನ ನೋಯ್ಡಾ ಘಟಕದ ಎಲ್ಲಾ ಉತ್ಪಾದನಾ ಚಟುವಟಿಕೆಗಳನ್ನು ನಿಲ್ಲಿಸಲಾಗಿದೆ

ಸಿರಪ್ ಸೇವಿಸಿ ಉಜ್ಬೇಕಿಸ್ತಾನ್‌ನಲ್ಲಿ ಮಕ್ಕಳು ಸಾವನ್ನಪ್ಪಿದ ವರದಿಗಳ ಹಿನ್ನೆಲೆಯಲ್ಲಿ ಕೇಂದ್ರೀಯ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ (ಸಿಡಿಎಸ್‌ಸಿಒ) ತಂಡವು ತಪಾಸಣೆ ನಡೆಸಿದ ನಂತರ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ.ಮನ್ಸುಖ್ ಮಾಂಡವಿಯಾ ತಿಳಿಸಿದ್ದಾರೆ. ಮುಂದಿನ ತನಿಖೆ ನಡೆಯುತ್ತಿದೆ ಎಂದು ಅವರು ಹೇಳಿದರು.
ಇದಕ್ಕೂ ಮೊದಲು, ಸರ್ಕಾರವು ಮರಿಯನ್ ಬಯೋಟೆಕ್‌ನ ಕೆಮ್ಮಿನ ಸಿರಪ್‌ನ ಮಾದರಿಗಳನ್ನು ಚಂಡೀಗಢದ ಪ್ರಾದೇಶಿಕ ಔಷಧ ಪರೀಕ್ಷಾ ಪ್ರಯೋಗಾಲಯಕ್ಕೆ ಪರೀಕ್ಷೆಗಾಗಿ ಕಳುಹಿಸಿತ್ತು. ಮರಿಯನ್ ಬಯೋಟೆಕ್‌ನ ನೋಯ್ಡಾ ಸೌಲಭ್ಯದ ಜಂಟಿ ತಪಾಸಣೆಯನ್ನು ಯುಪಿ ಡ್ರಗ್ ಕಂಟ್ರೋಲ್ ಮತ್ತು ಸಿಡಿಎಸ್‌ಸಿಒ ತಂಡವು ನಡೆಸಿತು.
Post a Comment