ಮಹಾರಾಷ್ಟ್ರ ಸರ್ಕಾರ ವಿಧಾಸಭೆಯಲ್ಲಿ ಕರ್ನಾಟಕದ ವಿರುದ್ದ ನಿರ್ಣಯ ಅಂಗೀಕರಿಸಿ ಯಾವ ಸಂದೇಶ ನೀಡುತ್ತಿದೆ?ಅಮಿತ್ ಶಾ ಮಾತು ಕಸಕ್ಕೆ ಸಮಾನ ಎಂದೇ?@BSBommai ಅವರು ಕೈಲಾಗದವರು ಎಂದು ತೋರಿಸುವುದಕ್ಕಾ?

[27/12, 8:01 PM] Kpcc official: ಮಹಾರಾಷ್ಟ್ರ ಸರ್ಕಾರ ವಿಧಾಸಭೆಯಲ್ಲಿ ಕರ್ನಾಟಕದ ವಿರುದ್ದ ನಿರ್ಣಯ ಅಂಗೀಕರಿಸಿ ಯಾವ ಸಂದೇಶ ನೀಡುತ್ತಿದೆ?

ಅಮಿತ್ ಶಾ ಮಾತು ಕಸಕ್ಕೆ ಸಮಾನ ಎಂದೇ?
@BSBommai ಅವರು ಕೈಲಾಗದವರು ಎಂದು ತೋರಿಸುವುದಕ್ಕಾ?

ಗೃಹ ಸಚಿವ ಅಮಿತ್ ಶಾ ಅವರ ಮಾತಿಗೆ ಕಿಮ್ಮತ್ತು ಹೋದಮೇಲೂ ಪ್ರಧಾನಿ ಮೋದಿ ಗಡಿ ಸಂಗತಿಯ ಬಗ್ಗೆ ಮಾತಾಡುತ್ತಿಲ್ಲವೇಕೆ @BJP4Karnataka?
[27/12, 9:05 PM] Kpcc official: ಅಖಂಡ ಕರ್ನಾಟಕ ರೈತ ಸಂಘದ ನೇತೃತ್ವದಲ್ಲಿ  ಶಿವಾನಂದ ಹೊಳೇಹಡಗಲಿ, ಬೈಲಪ್ಪ ದಳವಾಯಿ, ಸಿದ್ದಣ್ಣ ಕಂಬಾರ, ಕಲ್ಲಪ್ಪ ಕುಗಟಿ, ಮಡಿವಾಳಪ್ಪ ವರಣ್ಣವರ ಸೇರಿದಂತೆ ಅನೇಕ ರೈತ ಮುಖಂಡರು ಬೆಳಗಾವಿ ಕಾಂಗ್ರೆಸ್ ಭವನದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಕಾರ್ಯಾಧ್ಯಕ್ಷರಾದ ಸಲೀಮ್ ಅಹ್ಮದ್, ಸತೀಶ್ ಜಾರಕಿಹೊಳಿ, ಮಾಜಿ ಸಚಿವ ಡಿ ಬಿ ಇನಾಂದಾರ್ ಮತ್ತಿತರರ ಮುಖಂಡರು ಉಪಸ್ಥಿತರಿದ್ದರು.

ಡಿ ಕೆ ಶಿವಕುಮಾರ್ ಅವರು ಇದೇ ಸಂದರ್ಭದಲ್ಲಿ ಮಾತನಾಡಿದರು.
[27/12, 9:21 PM] Kpcc official: ಬೆಳಗಾವಿಯ ಸೌಂದತ್ತಿ ಶ್ರೀ ಹರ್ಷಾ ಷುಗರ್ ಲಿ. ಮಂಗಳವಾರ ಏರ್ಪಡಿಸಿದ್ದ ಹಳದಿ ಕುಂಕುಮ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್, ಎಂ ಎಲ್ಸಿ ಚನ್ನರಾಜ್ ಹಟ್ಟಿಹೊಳಿ, ಮಹೇಶ ಬಾಬು ಸುಗನ್ನೆನವರ ಮತ್ತಿತರರು ಭಾಗವಹಿಸಿದ್ದರು.
[27/12, 10:06 PM] Kpcc official: ಹಳದಿ ಕುಂಕುಮ ಕಾರ್ಯಕ್ರಮದಲ್ಲಿ ಡಿ ಕೆ ಶಿವಕುಮಾರ್ ಅವರ ಮಾತುಗಳು...
[27/12, 10:20 PM] Kpcc official: ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಬೆಳಗಾವಿ ಗ್ರಾಮೀಣ ವಿಧಾನಸಭೆ ಕ್ಷೇತ್ರದ ಸೂಳೆಭಾವಿಯ ಗ್ರಾಮದೇವತೆ ಮಹಾಲಕ್ಷಿ ದೇಗುಲಕ್ಕೆ ಮಂಗಳವಾರ ರಾತ್ರಿ ತೆರಳಿ ಪೂಜೆ ಸಲ್ಲಿಸಿದರು.
[28/12, 12:27 PM] Kpcc official: ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಬೆಳಗಾವಿಯಲ್ಲಿ ಬುಧವಾರ ಕಿತ್ತೂರು ರಾಣಿ ಚನ್ನಮ್ಮ ಪ್ರತಿಮೆಗೆ ಪುಷ್ಪಮಾಲಾರ್ಪಣೆ ಮಾಡಿದರು.
[28/12, 12:28 PM] Kpcc official: ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಕಾಂಗ್ರೆಸ್ ಸಂಸ್ಥಾಪನೆ ದಿನಾಚರಣೆ ಅಂಗವಾಗಿ ಬೆಳಗಾವಿ ಕಾಂಗ್ರೆಸ್ ಭವನದಲ್ಲಿ ಧ್ವಜಾರೋಹಣ ಮಾಡಿ, ಸೇವಾದಳದವರಿಂದ ಧ್ವಜ ವಂದನೆ ಸ್ವೀಕರಿಸಿದರು. ಸೇವಾದಳ ರಾಜ್ಯ ಅಧ್ಯಕ್ಷ ರಾಮಚಂದ್ರ ಇದ್ದರು.
[28/12, 2:51 PM] Kpcc official: ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಕಾಂಗ್ರೆಸ್ ಸಂಸ್ಥಾಪನೆ ದಿನಾಚರಣೆ ಅಂಗವಾಗಿ ಬೆಳಗಾವಿ ಕಾಂಗ್ರೆಸ್ ಭವನದಲ್ಲಿ ಮಹಾತ್ಮ ಗಾಂಧೀಜಿ, ಬಾಬಾ ಸಾಹೇಬ್ ಅಂಬೇಡ್ಕರ್, ನೆಹರೂ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು. ಸೇವಾದಳ ರಾಜ್ಯ ಅಧ್ಯಕ್ಷ ರಾಮಚಂದ್ರ ಇದ್ದರು. ಎಂಎಲ್ಸಿ ಚನ್ನರಾಜ್ ಹಟ್ಟಿಹೊಳಿ ಮತ್ತಿತರರು ಇದ್ದರು.

ಡಿ ಕೆ ಶಿವಕುಮಾರ್ ಅವರು ಇದೇ ಸಂದರ್ಭದಲ್ಲಿ ಮಾಧ್ಯಮದವರ ಜತೆ ಮಾತನಾಡಿದರು.
[28/12, 2:52 PM] Kpcc official: ಗಡಿ ವಿವಾದ: ಸಿಎಂಗೆ ಡಿಕೆ ಶಿವಕುಮಾರ್‌ ಸವಾಲು

ಕರ್ನಾಟಕ-ಮಹಾರಾಷ್ಟ್ರ ಗಡಿವಿವಾದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬೊಮ್ಮಾಯಿ ಅವರು ನೀಡಿರುವ ಪೊಳ್ಳು ಹೇಳಿಕೆಯ ವಿರುದ್ಧ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಸರ್ಕಾರ ವಿಧಾನಸಭೆಯಲ್ಲಿ ಮಂಡಿಸಿರುವ ನಿರ್ಣಯವನ್ನು ಖಂಡಿಸುವುದಾಗಿ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿ, ಕರ್ನಾಟಕದ ಒಂದಿಂಚೂ ಜಾಗವನ್ನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ ಎಂಬ ಮಾತಿಗೆ ಡಿ.ಕೆ‌ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಡಿ.ಕೆ ಶಿವಕುಮಾರ್ "ಮುಖ್ಯಮಂತ್ರಿಗಳು ಈ ರೀತಿ ಪೊಳ್ಳು ಹೇಳಿಕೆಗಳನ್ನು ನೀಡುತ್ತಿರುವುದು ಆಶ್ಚರ್ಯಕರವೇನಲ್ಲ" ರಾಜ್ಯದ ಒಂದಿಂಚು ಜಾಗವನ್ನೂ ಬಿಟ್ಟುಕೊಡಲು ಮುಖ್ಯಮಂತ್ರಿ ಬೊಮ್ಮಾಯಿಯವರು ಸಿದ್ಧರಿಲ್ಲದಿದ್ದರೆ, ಇಷ್ಟರಲ್ಲಾಗಲೇ ಕ್ರಮ ಕೈಗೊಳ್ಳಬೇಕಿತ್ತು ಎಂದಿರುವ ಅವರು, "ರಾಜ್ಯದ ಒಂದಿಂಚು ಜಾಗವನ್ನು ಮಹಾರಾಷ್ಟ್ರಕ್ಕೆ ಬಿಟ್ಟುಕೊಡಲು ಅವರು ನಿಜಕ್ಕೂ ತಯಾರಿಲ್ಲದಿದ್ದರೆ ತಕ್ಷಣವೇ ಸರ್ವಪಕ್ಷ ನಿಯೋಗವನ್ನು ದಿಲ್ಲಿಗೆ ಕರೆದುಕೊಂಡು ಹೋಗಲಿ ಹಾಗೆಯೇ ಕೇಂದ್ರ ಗೃಹ ಸಚಿವರು ಈ ವಿಷಯದ ಬಗ್ಗೆ ಸಾರ್ವಜನಿಕ ಭರವಸೆ ನೀಡಲಿ" ಎಂದು ಸವಾಲೆಸೆದಿದ್ದಾರೆ.

ಈ‌ ಮೂಲಕ ಬೊಮ್ಮಾಯಿಯವರ ಪೊಳ್ಳು ಭರವಸೆಗಳ ಕುರಿತು ತೀವ್ರ ಅಸಮಾಧಾನ ಹೊರಹಾಕಿರುವ ಡಿ.ಕೆ ಶಿವಕುಮಾರ್, ಕೇಂದ್ರ ಗೃಹ ಸಚಿವರು ಸಾರ್ವಜನಿಕ‌ ಭರವಸೆ ನೀಡುವಂತೆ ಟ್ವೀಟ್ ಮಾಡಿ ಆಗ್ರಹಿಸಿದ್ದಾರೆ.
[28/12, 2:53 PM] Kpcc official: ಬಿಜೆಪಿ ಸರ್ಕಾರದ ಭ್ರಷ್ಟಾಚಾರ, ನಿಷ್ಕ್ರಿಯತೆ, ವೈಫಲ್ಯಗಳ ಬಗ್ಗೆ ಅವರದ್ದೇ ಪಕ್ಷದ ಶಾಸಕರು, ನಾಯಕರು ಹೇಳುತ್ತಿದ್ದಾರೆ.

ಇದು ಮ್ಯಾನೇಜ್ಮೆಂಟ್ ಸರ್ಕಾರ ಎಂದು ಬಿಜೆಪಿಯ ಮಾಜಿ ಸಿಎಂ ಶೆಟ್ಟರ್ ಅವರೇ ಹೇಳಿರುವಾಗ ಇನ್ಯಾವ ಸರ್ಟಿಫಿಕೇಟ್ ಬೇಕು @BJP4Karnataka?
@BSBommai ವಿಫಲ ಸಿಎಂ ಎಂಬುದು #BJPvsBJP ಕಿತ್ತಾಟದಲ್ಲಿ ಸಾಭೀತಾಗುತ್ತಲೇ ಇದೆ.
[28/12, 2:53 PM] Kpcc official: ಶ್ರೀ ಗುರು ರಾಘವೇಂದ್ರ ಬ್ಯಾಂಕ್ ಹಗರಣದಲ್ಲಿ ಸಂತ್ರಸ್ತರಿಗೆ ನ್ಯಾಯ ಕೊಡಿಸುವುದಕ್ಕೆ, ಹಗರಣದ ತನಿಖೆಗೆ ಸರ್ಕಾರಕ್ಕೆ ಆಸಕ್ತಿ ಇಲ್ಲ.
ಸಿಬಿಐಗೆ ವಹಿಸುವುದಕ್ಕೂ ಇಷ್ಟವಿಲ್ಲ.
ಬಿಜೆಪಿಯಲ್ಲಿನ ಪ್ರಭಾವಿ ನಾಯಕರೇ ಈ ಹಗರಣದಲ್ಲಿರುವುದೇ ಇದಕ್ಕೆ ಕಾರಣ.

ಸಿಐಡಿ ತನಿಖೆಯಲ್ಲಿ ಯಾವ ಪ್ರಗತಿಯಾಗಿದೆ ಎಂದು ಹೇಳುವುದಕ್ಕೆ ಸರ್ಕಾರ ಹಿಂದೇಟು ಹಾಕುವುದೇಕೆ?
[28/12, 3:15 PM] Kpcc official: *ಬೆಳಗಾವಿಯಲ್ಲಿ ಕಾಂಗ್ರೆಸ್ ಸಂಸ್ಥಾಪನಾ ದಿನ ಕಾರ್ಯಕ್ರಮದಲ್ಲಿ ಡಿ.ಕೆ. ಶಿವಕುಮಾರ್ ಅವರ ಮಾತುಗಳು*

ಕಾಂಗ್ರೆಸ್ ಈ ದೇಶವನ್ನು ಒಗ್ಗೂಡಿಸುವ ಕೆಲಸ ಮಾಡಿದೆ. ಕಾಂಗ್ರೆಸ್ ಇಲ್ಲದಿದ್ದರೆ ಇಂದು ಈ ದೇಶ ಛಿದ್ರವಾಗಿರುತ್ತಿತ್ತು. ಇದೇ ಕಾರಣಕ್ಕೆ ನಾನು ಕಾಂಗ್ರೆಸ್ ಶಕ್ತಿ ದೇಶದ ಶಕ್ತಿ, ಕಾಂಗ್ರೆಸ್ ಇತಿಹಾಸ, ದೇಶದ ಇತಿಹಾಸ ಎಂದು ಹೇಳುತ್ತಿರುತ್ತೇನೆ. ಇಂದು ನಾವಲ್ಲರೂ 138 ನೇ ವರ್ಷಕ್ಕೆ ಕಾಲಿಡುತ್ತಿದ್ದೇವೆ. ನಮ್ಮ ಇತಿಹಾಸ ಏನೆಂದರೆ ದೇಶದ ಜನರಿಗೆ ಧ್ವನಿ ನೀಡಿದ್ದೇವೆ, ಪ್ರಜಾಪ್ರಭುತ್ವ ವ್ಯವಸ್ಥೆ ನೀಡಿದ್ದೇವೆ. ಗಾಂಧೀಜಿ ಅವರ ಮಾರ್ಗದರ್ಶನದಲ್ಲಿ ಸಾಗುತ್ತಿದ್ದೇವೆ. ಯಾರು ಏನೇ ಟೀಕೆ ಮಾಡಿದರೂ ಆತ್ಮಸಾಕ್ಷಿ ಇದ್ದವರು ಕಾಂಗ್ರೆಸ್ ಕೊಟ್ಟ ಸ್ವಾತಂತ್ರ್ಯ, ಸಂವಿಧಾನ, ರಾಷ್ಟ್ರಧ್ವಜ, ರಾಷ್ಟ್ರಗೀತೆ, ಸಾಮಾಜಿಕ ನ್ಯಾಯ ಎಲ್ಲವನ್ನೂ ಸ್ಮರಿಸುತ್ತಾರೆ. 

ನಮಗೆ ಕೇಂದ್ರದಲ್ಲಿ ಈಗ ಸ್ವಲ್ಪ ಹಿನ್ನಡೆ ಆಗಿರಬಹುದು. ಇತಿಹಾಸದ ಪುಟಗಳಿಗೆ ಹೋದರೆ ಪ್ರತಿಯೊಂದು ಸಮಯದಲ್ಲಿ ಬಡವರ ಬಗ್ಗೆ ಚಿಂತನೆ ಮಾಡಿದ್ದು ಕಾಂಗ್ರೆಸ್ ಎಂಬುದು ಗೊತ್ತಾಗುತ್ತದೆ. ಉಳುವವನೆ ಭೂಮಿಯ ಒಡೆಯ ಯೋಜನೆ ಮೂಲಕ ಬಡವರಿಗೆ ಜಮೀನು, ನಿವೇಶನ ಹಂಚಿಕೆ, ಬ್ಯಾಂಕ್ ರಾಷ್ಟ್ರೀಕರಣದಂತಹ ನೀತಿಗಳನ್ನು ಕೊಟ್ಟಿದ್ದು ಕಾಂಗ್ರೆಸ್. ಇದನ್ನು ಬೇರೆ ಪಕ್ಷದವರು ಹೇಳಿಕೊಳ್ಳಲು ಸಾಧ್ಯವಿಲ್ಲ. ಮಹಾತ್ಮ ಗಾಂಧಿ ಅವರ ಹೆಸರಲ್ಲಿ ಉದ್ಯೋಗ ಖಾತ್ರಿ ಯೋಜನೆ ಮೂಲಕ ಹಳ್ಳಿಗಳ ಅಭಿವೃದ್ಧಿ ಜತೆಗೆ ಅಲ್ಲಿನ ಜನರಿಗೆ ಉದ್ಯೋಗ ನೀಡಿದ್ದೇವೆ. ಬಿಜೆಪಿಯವರಿಗೆ ಈ ಕಾರ್ಯಕ್ರಮ ನೀಡಲು ಆಗಲಿಲ್ಲ. ಎಲ್ಲರ ಹಸಿವು ನೀಗಿಸಲು ಆಹಾರ ಭದ್ರತೆ ಕಾಯ್ದೆ ಜಾರಿಗೆ ತಂದೆವು. ಆ ಮೂಲಕ ಕೇಂದ್ರ ಸರ್ಕಾರ 28 ರೂ.ಗೆ ಅಕ್ಕಿ ನೀಡಲು ಆರಂಭಿಸಿತು. ಉಳಿದ ಮೊತ್ತವನ್ನು ರಾಜ್ಯಗಳಿಗೆ ಬಿಡಲಾಯಿತು. ನಮ್ಮ ರಾಜ್ಯದಲ್ಲಿ ಉಳಿದ ಮೊತ್ತವನ್ನು ರಾಜ್ಯ ಸರ್ಕಾರವೇ ಭರಿಸಿ, ಉಚಿತವಾಗಿ ಅಕ್ಕಿ ನೀಡಲಾಯಿತು. ಇದು ಕಾಂಗ್ರೆಸ್ ಪಕ್ಷದ ನೀತಿ, ಸಿದ್ಧಾಂತ.

ರಾಹುಲ್ ಗಂಧಿ ಅವರು ಈ ದೇಶದಲ್ಲಿ ಶಾಂತಿ ಸ್ಥಾಪಿಸಿ, ಸಾಮಾಜಿಕ ಸಾಮರಸ್ಯ ಮೂಡಿಸಲು, ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ನಡೆಯುತ್ತಿದ್ದಾರೆ. ನಮ್ಮ ರಾಜ್ಯದಲ್ಲಿ ಯಾತ್ರೆ ಯಶಸ್ವಿಯಾಗಲು ನೀವು ಶ್ರಮಿಸಿದ್ದಾರೆ. ಯಾತ್ರೆ ಸಂದರ್ಭದಲ್ಲಿ ಹಿರಿಯ ಮಹಿಳೆ ಬಂದು ರಾಹುಲ್ ಗಾಂಧಿ ಅವರಿಗೆ ತನ್ನ ಜಮೀನಿನಲ್ಲಿ ಬೆಳೆದ ಸೌತೇಕಾಯಿಯನ್ನು ಕೊಟ್ಟರು. ಅದನ್ನು ಕೊಡುವಾಗ ಇದು ನಿಮ್ಮ ಅಜ್ಜಿ ಕೊಟ್ಟ ಭೂಮಿಯಲ್ಲಿ ಬೆಳೆದಿದ್ದು ಎಂದು ಹೇಳಿದರು. ಇಂದು ಬ್ಯಾಂಕುಗಳು ನಿಮ್ಮ ಮನೆ ಬಾಗಿಲಿಗೆ ಬಂದು ಸಾಲ ನೀಡುತ್ತಿವೆ ಎಂದರೆ ಇಂದಿರಾ ಗಾಂಧಿ ಅವರು ತೆಗೆದುಕೊಂಡು ಬ್ಯಾಂಕ್ ರಾಷ್ಟ್ರೀಕರಣವೇ ಕಾರಣ. ಇನ್ನು ಪ್ರಜಾಪ್ರಭುತ್ವ ಗಟ್ಟಿಗೊಳಿಸಲು ಪಂಚಾಯತ್ ರಾಜ್ ವ್ಯವಸ್ಥೆ ಜಾರಿಗೆ ತಂದರು. ಆದರೆ ಸರ್ಕಾರ ಸೋಲುವ ಭಯದಲ್ಲಿ ಪಂಚಾಯ್ತಿಗಳ ಚುನಾವಣೆಯನ್ನೇ ಮಾಡಲಿಲ್ಲ. ಪ್ರಜಾಪ್ರಭುತ್ವದ 73, 74ನೇ ಪರಿಚ್ಛೆದಕ್ಕೆ ತಿದ್ದುಪಡಿ ತಂದು ಎಲ್ಲ ವರ್ಗದವವರಿಗೆ ಮೀಸಲಾತಿ ಕೊಟ್ಟು ಅವರ ರಕ್ಷಣೆಗೆ ಮುಂದಾಗಿದ್ದೇವೆ. ಇಂತಹ ಪಕ್ಷದ ಸದಸ್ಯರು ನೀವು. ನೀವು ನಿಮ್ಮನ್ನು ಸೇವಕರು ಎಂದು ಭಾವಿಸಬೇಡಿ. ನೀವೆಲ್ಲರೂ ಕಾಂಗ್ರೆಸ್ ಪಕ್ಷದ ನಾಯಕರು. 

ನನಗೆ ಅವಕಾಶ ಸಿಕ್ಕಿದ್ದ ಸಂದರ್ಭದಲ್ಲಿ ಎಲ್ಲರನ್ನು ಶಾಸಕರನ್ನಾಗಿ ಮಾಡಲು ಸಾಧ್ಯವಾಗದಿರಬಹುದು. ಆದರೆ ವಿವಿಧ ಸಮಿತಿಗಳಲ್ಲಿ ನಾಮನಿರ್ದೇಶನ ಮಾಡಿದ್ದೇನೆ. ರಾಮಚಂದ್ರ ಅವರು ಬೆಂಗಳೂರು ಜಿಲ್ಲಾ ಅಧ್ಯಕ್ಷರಾಗಿದ್ದರು. ನಿಮ್ಮನ್ನು ಪಕ್ಷ ಗುರುತಿಸಲಿದೆ. ನಿಮ್ಮ ಸೇವೆ ಅಚಲವಾಗಿದೆ. ಬಿ.ಕೆ. ಹರಿಪ್ರಸಾದ್ ಅವರು ಸೇವಾದಳದಿಂದ ಬೆಳೆದು ರಾಷ್ಟ್ರಮಟ್ಟದಲ್ಲಿ ಕೆಲಸ ಮಾಡಿ ಈಗ ಪರಿಷತ್ ನಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದಾರೆ. ಕಾಂಗ್ರೆಸ್ ಅನ್ನು ಯಾರೂ ಮುಗಿಸಲು ಸಾಧ್ಯವಿಲ್ಲ. ಇಡೀ ರಾಷ್ಟ್ರಕ್ಕೆ ನಿಮ್ಮ ಕೊಡುಗೆ ಅಪಾರ. ಖಾದರ್, ವಿನಯ್ ಅವರು ಸೇವಾದಳದವರು. ಮೂವರು ಜಿಲ್ಲಾಧ್ಯಕ್ಷರು ಸೇವಾದಳದವರಾಗಿದ್ದಾರೆ. ಈಗ ನಾವು ಚುನಾವಣೆಗೆ ಹೋಗುತ್ತಿದ್ದೇವೆ. ನಾವು ಯಾರಿಗೂ ಸುಳ್ಳು ಹೇಳುವ ಅಗತ್ಯವಿಲ್ಲ. ಪಕ್ಷದ ನೀತಿ, ಸಿದ್ಧಾಂತ, ಕಾರ್ಯಕ್ರಮವನ್ನು ಜನರಿಗೆ ತಿಳಿಸಿದರೆ ಸಾಕು. ಭಾರತ್ ಜೋಡೋ ಕಾರ್ಯಕ್ರಮದಂತೆ ಪ್ರತಿ ಹಳ್ಳಿ, ಬೂತ್ ಗಳಲ್ಲಿ ಕೈಗೆ ಕೈ ಜೋಡಿಸುವ ಕಾರ್ಯಕ್ರಮ ಮಾಡುತ್ತಿದೆ. ನೀವು ಜನವರಿಯಿಂದ ಪ್ರತಿ ಬೂತ್ ಗೆ ಹೋಗಿ ಕಾರ್ಯಕ್ರಮ ರೂಪಿಸಬೇಕು. 

ಡಿ. 30 ರಂದು ಕೃಷ್ಣಾ ನದಿ ನೀರಿನ ವಿಚಾರವಾಗಿ ವಿಜಯಪುರದಲ್ಲಿ, ಜ.2 ರಂದು ಮಹದಾಯಿ ಯೋಜನೆ ವಿಚಾರವಾಗಿ ಹುಬ್ಬಳ್ಳಿಯಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ. ಜ.8 ರಂದು ಚಿತ್ರದುರ್ಗದಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಸಮಾವೇಶ ಹಮ್ಮಿಕೊಂಡಿದ್ದೇವೆ. ನಂತರ 11ರಿಂದ ನಾವು ಯಾತ್ರೆ ಆರಂಭಿಸುತ್ತಿದ್ದೇವೆ.

*ನಂತರ ಮಾಧ್ಯಮಗಳಿಗೆ ನೀಡಿದ ಪ್ರತಿಕ್ರಿಯೆ:*

ಇಂದು ಕಾಂಗ್ರೆಸ್ ಸಂಸ್ಥಾಪನಾ ದಿನ. ಪಕ್ಷದ ಜನ್ಮದಿನ. ಈ ದಿನವನ್ನು ಸೇವಾದಳದ ಕಾರ್ಯಕರ್ತರ ಜತೆ ಆಚರಿಸಿದ್ದು, ನೀವು ಕೇವಲ ಸೇವಕರಲ್ಲ, ನಾಯಕರು ಎಂದು ಅವರಿಗೆ ಹೇಳಿದ್ದೇನೆ. ಇದು ಕಾಂಗ್ರೆಸ್ ಪಕ್ಷದ ಅಧ್ಯಕ್ಷರ ಸಂದೇಶ. ಸೇವಾದಳದವರಿಗೆ ರಾಜ್ಯ, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ನಾಯಕತ್ವದ ಸ್ಥಾನಮಾನ ನೀಡಬೇಕು ಎಂಬುದು ಪಕ್ಷದ ತೀರ್ಮಾನ. ಖರ್ಗೆ ಅವರು ಪಕ್ಷಕ್ಕೆ 50 ವರ್ಷಗಳ ಸೇವೆ ಮಾಡಿ ಇಂದು ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.  

ಭಾರತ ಜೋಡೋ ಯಾತ್ರೆ ಸಂದೇಶವನ್ನು ಪ್ರತಿ ಬೂತ್ ಮಟ್ಟದಲ್ಲಿ ತಲುಪಿಸಲು, ಸಂಘಟನೆ ಮಾಡಲು ಹಸ್ತಕ್ಕೆ ಹಸ್ತ ಜೋಡಿಸುವ ಕಾರ್ಯಕ್ರಮವನ್ನು ಮುಂದಿನ ಒಂದು ತಿಂಗಳ ಕಾಲ ಮಾಡಬೇಕು ಎಂದು ಎಐಸಿಸಿ ಆದೇಶ ಕೊಟ್ಟಿದೆ. ಎಲ್ಲರೂ ಒಟ್ಟಾಗಿ ಪ್ರತಿ ಹಳ್ಳಿಯಲ್ಲಿ ದುಡಿಯುವುದಾಗಿ ಜನರಿಗೆ ಆಶ್ವಾಸನೆ ನೀಡಬೇಕು ಎಂದು ಮಾರ್ಗದರ್ಶನ ನೀಡಿದ್ದೇನೆ. 

ರಾಜ್ಯ ಹಾಗೂ ಸ್ಥಳೀಯ ಮಟ್ಟದಲ್ಲಿ ಅನೇಕರು ಕಾಂಗ್ರೆಸ್ ಸೇರಲು ಉತ್ಸುಕರಾಗಿದ್ದಾರೆ. ಬೇರೆ ಪಕ್ಷದಿಂದ ಬರಲು ಇಚ್ಛಿಸುವವರಿಗೆ ಮುಕ್ತ ಆಹ್ವಾನ ನೀಡುತ್ತೇನೆ. ಯಾರೆಲ್ಲಾ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರ ಮುಖಂಡತ್ವದಲ್ಲಿ ನಂಬಿಕೆ ಇಟ್ಟು, ಪಕ್ಷದ ಸಿದ್ಧಾಂತ ಒಪ್ಪಿ ಬೇಷರತ್ತಾಗಿ ಸೇರಬಯಸುವರೋ ಅವರು ಅರ್ಜಿ ಹಾಕಬಹುದು. ಸ್ಥಳೀಯ ಮಟ್ಟದಲ್ಲಿ ಸೇರಲು ಅವಕಾಶ ಮಾಡಿಕೊಡಲಾಗುವುದು. ರಾಜ್ಯದಲ್ಲಿ ಬಲಿಷ್ಠ ಕಾಂಗ್ರೆಸ್ ಸರ್ಕಾರ ಬರಲಿದ್ದು, ಅದರ ಭಾಗವಾಗಿರಬೇಕು ಎಂದು ಬಯಸುವವರು ಪಕ್ಷ ಸೇರಬಹುದು.

ನಾವು ಯಾರನ್ನೂ ಬೇಡ ಎಂದು ತಿರಸ್ಕರಿಸುವುದಿಲ್ಲ. ನಮ್ಮಿಂದ ದೂರ ಹೋಗಿರುವ ಅನೇಕರು ಮತ್ತೆ ಪಕ್ಷ ಸೇರುವ ಇಚ್ಛೆ ವ್ಯಕ್ತಪಡಿಸುತ್ತಿದ್ದಾರೆ. ಹೀಗಾಗಿ ಅರ್ಜಿ ಹಾಕುವಂತೆ ತಿಳಿಸಿದ್ದೇನೆ. 

ಪಕ್ಷ ಸೇರುವವರಲ್ಲಿ ಈ ಹಿಂದೆ ಪಕ್ಷ ಬಿಟ್ಟು ಹೋಗಿದ್ದ 15 ಶಾಸಕರು ಇದ್ದಾರಾ ಎಂಬ ಪ್ರಶ್ನೆಗೆ, ‘ಈಗ ಆ ವಿಚಾರವನ್ನು ಬಹಿರಂಗಪಡಿಸುವುದಿಲ್ಲ. ಯಾರು ಬೇಕಾದರೂ ಅರ್ಜಿ ಹಾಕಬಹುದು. ಬಿಜೆಪಿ ಸರ್ಕಾರದ ಭ್ರಷ್ಟಾಚಾರ ನೋಡಿ ಇಲ್ಲಿಂದ ಹೋದವರು ಸೇರಿದಂತೆ ಎಲ್ಲರೂ ಬೇಸತ್ತಿದ್ದಾರೆ. ಕೆಲವರು ತಮ್ಮ ಬೇಸರ ವ್ಯಕ್ತಪಡಿಸಿದ್ದರೆ, ಮತ್ತೆ ಕೆಲವರು ವ್ಯಕ್ತಪಡಿಸಿಲ್ಲ. ಈಗ ಈ ವಿಚಾರವಾಗಿ ಹೆಚ್ಚು ಚರ್ಚೆ ಮಾಡುವುದಿಲ್ಲ’ ಎಂದರು.

ರಾಮನಗರದಲ್ಲಿ ರಾಮಮಂದಿರ ಕಟ್ಟುವ ಬಗ್ಗೆ ಸಚಿವ ಅಶ್ವತ್ ನಾರಾಯಣ್ ಹೇಳಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ‘ಕಟ್ಟಲಿ, ಅದನ್ನು ಬೇಡ ಎಂದು ತಡೆದಿರುವವರು ಯಾರು? ಅವರು ಜಿಲ್ಲಾ ಮಂತ್ರಿಗಳಾಗಿದ್ದು, ರಾಮಮಂದಿರ ಕಟ್ಟುತ್ತೇವೆ ಎಂದರೆ ಅದನ್ನು ತಡೆಯುತ್ತಿರುವವರು ಯಾರು? ಅವರು ರಾಮಮಂದಿರ, ಸೀತಾ ಮಂದಿರ, ಹನುಮಂತನ ಮಂದಿರ ಕಟ್ಟಲಿ, ಶಿವ ಮಂದಿರ ಕಟ್ಟಲಿ. ಬೇಕಾದರೆ ಅಶ್ವತ್ಥ್ ನಾರಾಯಣ ಅವರ ಮಂದಿರವನ್ನೂ ಕಟ್ಟಿಕೊಳ್ಳಲಿ. ನಾನು 35 ವರ್ಷಗಳಿಂದ ಅಲ್ಲಿ ಬಹಳ ಗಂಡುಗಳನ್ನು ನೋಡಿದ್ದೇನೆ’ ಎಂದರು. 

ಕೋವಿಡ್ ಸೋಂಕು ಹೆಚ್ಚುತ್ತಿದೆ ಎಂದು ಸರ್ಕಾರ ಹೇಳುತ್ತಿದೆಯಲ್ಲಾ ಎಂದು ಕೇಳಿದಾಗ, ‘ಸರ್ಕಾರ ಹವಾನಿಯಂತ್ರಿತ ಕೊಠಡಿಯಲ್ಲಿ ಮಾಸ್ಕ್ ಧರಿಸಿ ಎಂದು ಹೇಳಿದೆ. ಆರೋಗ್ಯ ಸಚಿವರು, ಮುಖ್ಯಮಂತ್ರಿಗಳು ಹಾಗೂ ಇತರೆ ಸಚಿವರು ಹಾಗೂ ನಾಯಕರು ಎಸಿ ಕೊಠಡಿಯಲ್ಲಿ ಸಭೆ ಮಾಡುತ್ತಿದ್ದಾರೆ. ಅಧಿವೇಶನದ ಸಮಯದಲ್ಲಿ ಅವರು ಯಾಕೆ ಮಾಸ್ಕ್ ಧರಿಸಿಲ್ಲ? ನಿನ್ನೆ ಮುಖ್ಯಮಂತ್ರಿಗಳು, ಗೃಹಸಚಿವರು ಸೇರಿದಂತೆ ಹಲವು ಮಂದಿ ಸದನದಲ್ಲಿ ಉತ್ತರ ನೀಡುವಾಗ ಮಾಸ್ಕ್ ಯಾಕೆ ಧರಿಸಿರಲಿಲ್ಲ? ಅವರು ಹಾಕದೇ ಬೇರೆಯವರಿಗೆ ಹಾಕಿ ಎಂದು ಹೇಳುತ್ತಿದ್ದಾರೆ’ ಎಂದು ತಿಳಿಸಿದರು.

ಬಾರ್ ಹಾಗೂ ರೆಸ್ಟೋರೆಂಟ್ ಗಳಿಗೆ ಸ್ಪೆಷಲ್ ಮಾಸ್ಕ್ ಬಂದಿದೆ ಎಂಬ ಸಚಿವ ಅಶೋಕ್ ಅವರ ಹೇಳಿಕೆ ಬಗ್ಗೆ ಕೇಳಿದಾಗ, ‘ಅವರು ಹಾಗೂ ಅವರ ಸ್ನೇಹಿತರು ಮಾಸ್ಕ್ ಗೆ ಪೈಪ್ ಅಳವಡಿಸಿಕೊಳ್ಳಲಿ. ಕೇಂದ್ರ ಮಂತ್ರಿಯಾಗಿದ್ದ ಸುರೇಶ್ ಅಂಗಡಿ ಅವರು ಕೋವಿಡ್ ನಿಂದ ಸತ್ತಾಗ ಅವರ ಪಾರ್ಥೀವ ಶರೀರವನ್ನು ಅವರ ಊರಿಗೆ ತಂದು ಕುಟುಂಬಕ್ಕೆ ನೀಡಲಿಲ್ಲ. ವಿಶೇಷ ವಿಮಾನದಲ್ಲಿ ಶವವನ್ನು ರವಾನಿಸಿ ಇಲ್ಲೇ ಅಂತ್ಯ ಸಂಸ್ಕಾರ ಮಾಡಬಹುದಾಗಿತ್ತು. ಆದರೆ ಮಾಡಲಿಲ್ಲ. ಅವರು ದೇಶದ ಸಂಸ್ಕೃತಿ, ಪರಪರೆ ಬಗ್ಗೆ ಮಾತನಾಡುತ್ತಾರೆ. ಈ ಘಟನೆ ನಾಚಿಕೆಗೇಡಿನ ವಿಚಾರ. ಬಿಜೆಪಿ ನಾಯಕರು ಈ ಬಗ್ಗೆ ಮಾತನಾಡುವ ಶಕ್ತಿ ಕಳೆದುಕೊಂಡಿದ್ದಾರೆ’ ಎಂದು ಟೀಕಿಸಿದರು.

ಅಮಿತ್ ಶಾ ಅವರ ಕಾರ್ಯಕ್ರಮಕ್ಕೆ 1 ಲಕ್ಷ ಜನ ಸೇರಿಸುತ್ತಾರಂತೆ ಎಂದು ಕೇಳಿದಾಗ, ‘ಅವರು 1 ಲಕ್ಷ ಜನರನ್ನಾದರೂ ಸೇರಿಸಲಿ, 3 ಕೋಟಿ ಜನರನ್ನಾದರೂ ಸೇರಿಸಲಿ. ಕೋವಿಡ್ ಇರುವಾಗ ಬೇಕಾದರೂ ಮಾಡಲಿ, ಇಲ್ಲದಿರುವಾಗ ಬೇಕಾದರೂ ಮಾಡಲಿ. ಅವರು ಬಂದು ಏನು ಹೇಳಬೇಕೋ ಹೇಳಲಿ. ತೀರ್ಮಾನ ಮಾಡುವವರು ಜನ’ ಎಂದರು.

ಮಾಸ್ಕ್ ಕಡ್ಡಾಯ ವಿಚಾರವಾಗಿ ಜನಸಾಮಾನ್ಯರು ಟೀಕಿಸುತ್ತಿದ್ದಾರೆ ಎಂಬ ಪ್ರಶ್ನೆಗೆ, ‘ಮೊದಲು ನೀವುಗಳು ನಿಮ್ಮ ಸಭೆಗಳಲ್ಲಿ ಮಾಸ್ಕ್ ಧರಿಸಬೇಕು. ಮಾಸ್ಕ್ ಕಡ್ಡಾಯ ಎಂದು ಘೋಷಿಸಿದ ಮೇಲೆ ಸದನದಲ್ಲೇ ಅವರು ಧರಿಸಬೇಕಿತ್ತು. ಅದನ್ನು ಬಿಟ್ಟು ಬಾರಿನಲ್ಲಿ ಮಾಸ್ಕ್ ಹಾಕಬೇಕು ಎಂದು ಹೇಳುತ್ತಾರೆ’ ಎಂದು ಛೇಡಿಸಿದರು.

ಗಡಿ ವಿವಾದದ ಬಗ್ಗೆ ಕೇಳಿದ ಪ್ರಶ್ನೆಗೆ, ‘ಮಹಾರಾಷ್ಟ್ರ, ಕರ್ನಾಟಕದಲ್ಲಿ ಬಿಜೆಪಿ ಸರ್ಕಾರವಿದೆ. ಕೇಂದ್ರದಲ್ಲೂ ಅವರೇ ಇದ್ದಾರೆ. ಉದ್ದೇಶಪೂರ್ವಕವಾಗಿ ಈ ವಿಚಾರವಾಗಿ ಚರ್ಚೆ ಮಾಡುತ್ತಿದ್ದಾರೆ. ನಾವು ಯಾವ ಹಳ್ಳಿಯನ್ನೂ ಬಿಡುವುದಿಲ್ಲ, ಅವರ ಹಳ್ಳಿಗಳು ಬೇಡ. ಜನ ಅವರ ಪಾಡಿಗೆ ಅವರು ಬದುಕುತ್ತಿದ್ದಾರೆ. ನಾವು ಇಲ್ಲಿ ಸುರ್ವಣಸೌಧ ನಿರ್ಮಾಣ ಮಾಡಿರುವುದೇ ಇದು ನಮ್ಮ ಭಾಗ ಎಂಬ ಕಾರಣಕ್ಕೆ. ಕಾಂಗ್ರೆಸ್ ಪಕ್ಷ ಹಾಗೂ ರಾಜ್ಯ ಮಹರಾಷ್ಟ್ರದ ನಿರ್ಣಯವನ್ನು ಖಂಡಿಸುತ್ತದೆ. ಇದರ ಬಗ್ಗೆ ಚರ್ಚೆ ಬೇಡ. ಗೃಹ ಸಚಿವರು ಎರಡೂ ರಾಜ್ಯಗಳ ಮುಖ್ಯಮಂತ್ರಿಗಳನ್ನು ಕರೆಸಿ ಮಾತನಾಡಿದರು. ಆ ಸಭೆಯಲ್ಲಿ ಏನಾಯ್ತು? ನಿನ್ನೆ ಸಚಿವರೊಬ್ಬರು ಮುಂಬೈ ಅನ್ನು ಕೇಂದ್ರಾಡಳಿತ ಪ್ರದೇಶ ಮಾಡಬೇಕು ಎಂದು ಹೇಳಿದ್ದಾರೆ. ಅದನ್ನು ಮಾಡಲು ಇವರಿಂದ ಸಾಧ್ಯವೇ? ಪರಿಜ್ಞಾನ ಇಲ್ಲದೆ ಸುಮ್ಮನೆ ಮಾತನಾಡಬಾರದು. ಅವರು ಮಾನಸಿಕ ಸ್ಥಿಮಿತ ಕಳೆದುಕೊಂಡಿರುವಂತೆ ಕಾಣುತ್ತದೆ’ ಎಂದು ಹರಿಹಾಯ್ದರು.
[28/12, 3:21 PM] Kpcc official: 2014ರ ವರೆಗೆ ಭಾರತದ ಸಾಲ 49 ಲಕ್ಷ ಕೋಟಿ ಇತ್ತು, ಮೋದಿ ಸರ್ಕಾರ ಬಂದ ಕೇವಲ 8 ವರ್ಷದಲ್ಲಿ 98 ಲಕ್ಷ ಕೋಟಿ ಸಾಲ ಮಾಡಿ 147 ಲಕ್ಷ ಕೋಟಿಗೆ ದೇಶದ ಸಾಲ ಏರಿಕೆಯಾಗಿದೆ.

ಈ ಸಾಲ ಯಾವ ಜನಪರ ಯೋಜನೆಗಳಿಗೆ ಬಳಕೆಯಾಗಿದೆ ಎಂಬುದು ಮಾತ್ರ ಕಾಣುತ್ತಿಲ್ಲ.

ಸಾಲವೂ ಏರಿಕೆ, ತೆರಿಗೆಯೂ ಏರಿಕೆ, ಆ ಎಲ್ಲ ಹಣ ಹೋಗುತ್ತಿರುವುದು ಎಲ್ಲಿಗೆ @BJP4Karnataka?
[28/12, 3:50 PM] Kpcc official: ಅತಿಥಿ ಶಿಕ್ಷಕರನ್ನು ಅನಾಥ ಶಿಕ್ಷಕರನ್ನಾಗಿಸಿದೆ ಭ್ರಷ್ಟ @BJP4Karnataka ಸರ್ಕಾರ.

ಜೈಲಿನ ಖೈದಿಗಳ ಭತ್ಯೆ ಏರಿಕೆ ಮಾಡುವ ಸರ್ಕಾರಕ್ಕೆ ಅತಿಥಿ ಶಿಕ್ಷಕರಿಗೆ ಸಮರ್ಪಕ ವೇತನ ನೀಡುವ ಮನಸ್ಸಿಲ್ಲ.

ಬಿಜೆಪಿ ಸರ್ಕಾರದಿಂದ ಕಂಗೆಟ್ಟವರು ಕಾಂಗ್ರೆಸ್ ರೂಪಿಸಿದ ನರೇಗಾ ಯೋಜನೆಯ ಆಸರೆ ಪಡೆದಿದ್ದಾರೆ.
ಇದು ನಮ್ಮ ಜನಪರ ನೀತಿಯ ಸಾರ್ಥಕತೆಗೆ ಸಾಕ್ಷಿ.
[28/12, 4:25 PM] Kpcc official: ಬೆಳಗಾವಿ ಗ್ರಾಮೀಣ ವಿಧಾನಸಭೆ ಕ್ಷೇತ್ರದ ತಾರೀಹಾಳ ಗ್ರಾಮದಲ್ಲಿ ಬುಧವಾರ ಶ್ರೀ ರಾಮಲಿಂಗೇಶ್ವರ ದೇವಸ್ಥಾನದ ನೂತನ ಕಟ್ಟಡದ ಅಡಿಗಲ್ಲು, ಮುಖ್ಯರಸ್ತೆ, ಪೇವರ್ಸ್ ಅಳವಡಿಕೆ ಕಾಮಗಾರಿ ಆರಂಭ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಬಡೆಕೊಳ್ಳಮಠದ ಶ್ರೀ ನಾಗೇಂದ್ರ ಸ್ವಾಮೀಜಿ, ಶ್ರೀ ಅಡವೇಶ್ವರ ಮಠದ ಶ್ರೀ ಅಡವೇಶ್ವರ ದೇವರು, ಸ್ಥಳೀಯ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್, ಎಂಎಲ್ಸಿ ಚನ್ನರಾಜ್ ಹಟ್ಟಿಹೊಳಿ, ಮಾಜಿ ಶಾಸಕ ರಾಜು ಕಾಗೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ ಸಿ ಪಾಟೀಲ್ ಮತ್ತಿತರರು ಭಾಗವಹಿಸಿದ್ದರು.
[28/12, 6:02 PM] Kpcc official: *ಕಾಂಗ್ರೆಸ್ ಸಂಸ್ಥಾಪನಾ ದಿನ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನಾಯಕರ ಮಾತಿನ ಮುಖ್ಯಾಂಶಗಳು:*

*ಕೆ.ಎಚ್ ಮುನಿಯಪ್ಪ*

1885ರಲ್ಲಿ ದೇಶದ ಸ್ವಾತಂತ್ರ್ಯಕ್ಕಾಗಿ ಕಾಂಗ್ರೆಸ್ ಸ್ಥಾಪಿಸಲಾಗುತ್ತದೆ. ನಿವೃತ್ತ ಬ್ರಿಟೀಷ್ ಅಧಿಕಾರಿಯಾದ ಎ.ಓ ಹ್ಯೂಮ್ ಅವರು ಕಾಂಗ್ರೆಸ್ ಸಂಸ್ಥಾಪನೆ ಮಾಡಿ ಹೋರಾಟವನ್ನು ಹುಟ್ಟುಹಾಕುತ್ತಾರೆ. ಭಾರತದ ಜನರಿಗೆ ಅಗತ್ಯ ಹಕ್ಕು ಸಿಗಬೇಕು ಎಂದು ದೇಶದ 72 ಮುಖಂಡರನ್ನು ಸೇರಿಸಿ ಸ್ಥಾಪಿಸುತ್ತಾರೆ.

ಬಾಲಗಂಗಾಧರ್ ತಿಲಕ್, ಸರ್ದಾರ್ ಪಟೇಲ್, ಸುಭಾಷ್ ಚಂದ್ರ ಬೋಸ್, ಶ್ರೀನಿವಾಸ ಅಯ್ಯಂಗಾರ್ ಅವರು ಸೇರಿಕೊಳ್ಳುತ್ತಾರೆ. ಮಹಾತ್ಮ ಗಾಂಧಿ ಅವರು ದಕ್ಷಿಣ ಆಫ್ರಿಕಾದಲ್ಲಿ ವರ್ಣಬೇಧ ನೀತಿ ವಿರುದ್ಧ ಹೋರಾಟ ಮಾಡುತ್ತಾರೆ. 1915ರಲ್ಲಿ ಭಾರತಕ್ಕೆ ಆಗಮಿಸಿ ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕುತ್ತಾರೆ. ಬೆಳಗಾವಿ ಅಧಿವೇಶನದಲ್ಲಿ ಅಧ್ಯಕ್ಷರಾಗಿ ಸ್ವಾತಂತ್ರ್ಯ ಹೋರಾಟವನ್ನು ಅಹಿಂಸೆ ಮೂಲಕ ಹೋರಾಡಲು ತೀರ್ಮಾನಿಸುತ್ತಾರೆ. 

ಉಪ್ಪಿನ ಸತ್ಯಾಗ್ರಹ, ಕ್ವಿಟ್ ಇಂಡಿಯಾ ಚಳುವಳಿಯನ್ನು ಕ್ರಾಂತಿಕಾರಿಯಾಗಿ ಮಾಡಿದಾಗ ಬ್ರಿಟೀಷರಲ್ಲಿ ನಡುಕ ಹುಟ್ಟುತ್ತದೆ. ಆ ಮೂಲಕ ಭಾರತಕ್ಕೆ ಸ್ವಾತಂತ್ರ್ಯ ನೀಡಬೇಕಾದ ಆಲೋಚನೆ ಬ್ರಿಟೀಷರಲ್ಲಿ ಮೂಡುತ್ತದೆ. ಈಸಂದರ್ಭದಲ್ಲಿ ಗಾಂಧೀಜಿ ಅವರು ಸಬರಾಮತಿ ಆಶ್ರಮದಿಂದ ಪಾದಯಾತ್ರೆ ಸಾಗುತ್ತಾರೆ. ನಂತರ ಈ ಪಾದಯಾತ್ರೆ ಸಾಗಿದ ಮಾರ್ಗದಲ್ಲಿ ಮನಮೋಹನ್ ಸಿಂಗ್ ಅವರ ಸರ್ಕಾರದಲ್ಲಿ ಸಚಿವನಾಗಿದ್ದಾಗ ಅಲ್ಲಿ ರಸ್ತೆ ಮಾಡಿ ಅದರ ಶಂಕುಸ್ಥಾಪನೆ ಮಾಡುವ ಸೌಭಾಗ್ಯ ನನ್ನದಾಗುತ್ತದೆ. 

ಮಹಾತ್ಮ ಗಾಂಧಿ ಅವರು ಬುದ್ಧ ಹಾಗೂ ಬಸವಣ್ಣನವರಿಂದ ಸ್ಫೂರ್ತಿಗೊಂಡಿದ್ದರು. ಬಸವಣ್ಣನವರು 112ನೇ ಶತಮಾನದಲ್ಲಿ ಸಮಾಜದಲ್ಲಿ ಸಮಾನತೆ ಸ್ಥಾಪಿಸಲು ಮಾಡಿದ ಪ್ರಯತ್ನದಿಂದ ಪ್ರೇರಿತರಾಗಿ ಗಾಂಧೀಜಿ ಅವರು ಇಡೀ ಪ್ರಪಂಚದಲ್ಲಿ ನಾವೆಲ್ಲರೂ ಒಂದು, ಎಲ್ಲಾ ಮನುಷ್ಯರೂ ಒಂದೇ ಎಂದು ಹೇಳಿದ್ದಾರೆ. ಇಂತಹವರ ತ್ಯಾಗ ಬಲಿದಾನವನ್ನು ಸ್ಮರಿಸಬೇಕು.

ಬಿಜೆಪಿಯವರು ಇಂದು ಈ ದೇಶ ಒಂದು ಧರ್ಮದ ದೇಶವಾಗಬೇಕು ಎಂದು ಹೇಳುತ್ತಿದ್ದಾರೆ. ಅದು ಸರಿಯಲ್ಲ. ಭಾರತ ಜಾತ್ಯಾತೀತ ರಾಷ್ಟ್ರ. ಇಲ್ಲಿ ಎಲ್ಲ ಜಾತಿ, ಧರ್ಮದವರು ಭಾವೈಕ್ಯತೆಯಿಂದ ಅಣ್ಣ ತಮ್ಮಂದಿರಂತೆ ಬದುಕಿದಾಗ ಈ ರಾಷ್ಟ್ರದಲ್ಲಿ ಶಾಂತಿ ನೆಲೆಸಿ ಅಭಿವೃದ್ಧಿ ಸಾಧಿಸಬಹುದು ಎಂದು ಗಾಂಧಿಜಿ ಅವರು ಹೇಳಿದ್ದಾರೆ.

ನಮ್ಮ ತಂದೆ ಅವರು ಸ್ವಾತಂತ್ರ್ಯ ಹೋರಾಟಗಾರರು ಕಾರಾಗೃಹದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಜತೆ ಇದ್ದರು. ಇಂತಹ ಇತಿಹಾಸವುಳ್ಳ ಇರುವ ಪಕ್ಷದಲ್ಲಿ ನಾವೆಲ್ಲರೂ ಇರುವುದೇ ದೊಡ್ಡ ಗೌರವ. ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟು ಜ್ಯಾತ್ಯಾತೀತ ತತ್ವದ ಮೇಲೆ ನಾವೆಲ್ಲ ಒಂದಾಗಿರಬೇಕು ಎಂದು ಕಾಂಗ್ರೆಸ್ ಪ್ರತಿಪಾದಿಸಿದರೆ, ಈ ದೇಶವನ್ನು ಒಡೆದು ಆಳಬೇಕು ಎಂದು ಬಿಜೆಪಿ ಕೋಮು ಮನಸ್ಥಿತಿಯಲ್ಲಿದೆ. ಹಿಂದೂ ಮುಸಲ್ಮಾನರ ಮಧ್ಯೆ ದ್ವೇಷ ಬಿತ್ತುತ್ತಿದ್ದಾರೆ. ಇದರ ವಿರುದ್ಧ ಹೋರಾಡಿ ದೇಶವನ್ನು ಒಗ್ಗೂಡಿಸಲು ರಾಹುಲ್ ಗಾಂಧಿ ಅವರು ಭಾರತ ಜೋಡೋ ಯಾತ್ರೆ ಆರಂಭಿಸಿದ್ದಾರೆ. ಜಗತ್ತಿನ ಯಾವುದೇ ಭಾಗದಲ್ಲಿ ಇಷ್ಟು ದೊಡ್ಡ ಮಟ್ಟದ ಪಾದಯಾತ್ರೆ ಯಾರೂ ಮಾಡಿಲ್ಲ.

ಈ ದೇಶಕ್ಕೆ ಮೋತಿಲಾಲ್ ನೆಹಲೂ, ಪಂಡಿತ್ ಜವಾಹರ್ ಲಾಲ್ ನೆಹರೂ, ಇಂದಿರಾ ಗಾಂಧಿ, ಲಾಲ್ ಬಹದ್ದೂರ್ ಶಾತ್ರಿ, ರಾಜೀವ್ ಗಾಂಧಿ, ಸೋನಿಯಾ ಗಾಂಧಿ ಅವರ ತ್ಯಾಗ ಬಲಿದಾನ ಅಪಾರ. ಅವರಿಂದ ಪ್ರೇರೇಪಿತರಾಗಿ ರಾಹುಲ್ ಗಾಂಧಿ ಅವರು ಈ ಪಾದಯಾತ್ರೆ ಮಾಡುತ್ತಿದ್ದಾರೆ.

ಈ ರಾಷ್ಟ್ರದ ಯುವಕರಲ್ಲಿ ಬದಲಾವಣೆ ಆಗಬೇಕು. ದೇಶ ಛಿದ್ರ ಮಾಡಲಾಗುತ್ತಿದ್ದು, ಕಾರ್ಮಿಕರ ರಕ್ಷಣೆ ಆಗಬೇಕಿದೆ. ಬಿಜೆಪಿ ಸರ್ಕಾರ ಎಲ್ಲ ರಂಗದಲ್ಲೂ ವಿಫಲರಾಗಿದ್ದು, ದೇಶದ ಅನ್ನದಾತ ಕಣ್ಣೀರಿಡುವ ಪರಿಸ್ಥಿತಿ ಬಂದಿದೆ. ಕಷ್ಟಪಟ್ಟು ಬೆಳೆ ಬೆಳಿದರೂ ಬೆಂಬಲ ಬೆಲೆ ಸಿಗುತ್ತಿಲ್ಲ. ಹೀಗಾಗಿ ಅನ್ನದಾತ ಇಂದು ಕಣ್ಣೀರಿಡುತ್ತಿದ್ದಾನೆ. ಮನಮೋಹನ್ ಸಿಂಗ್ ಅವರ ಸರ್ಕಾರ ದೇಶದ ರೈತ ಕಣ್ಣೀರು ಒರೆಸಲು 72 ಸಾವಿರ ಕೋಟಿ ಸಾಲ ಮನ್ನಾ ಮಾಡಿದ್ದರು. ಆ ಮೂಲಕ 4 ಕೋಟಿ ಕುಟುಂಬಗಳ ರಕ್ಷಣೆ ಮಾಡಿದ್ದರು. ಆದರೆ ಬಿಜೆಪಿ ಸರ್ಕಾರ ಅನ್ನದಾತರ ರಕ್ಷಣೆ ಮಾಡುವಲ್ಲಿ ವಿಫಲರಾಗಿದ್ದಾರೆ. ನೆಹರೂ ಅವರು ದೊಡ್ಡ ಕೈಗಾರಿಕೆಗಳನ್ನು ತಂದರು. ಸಾರ್ವಜನಿಕ ಉದ್ದಿಮೆಗಳಿಂದ ಲಕ್ಷಾಂತರ ಮಂದಿಗೆ ಆಸರೆ ಆದರು. 


*ನಾರಾಯಣ ಸ್ವಾಮಿ*

ಇಂದು ರಾಷ್ಟ್ರದಾದ್ಯಂತ ಪಕ್ಷದ ಸಂಸ್ಥಾಪನಾ ದಿನ ಆಚರಿಸುತ್ತಿದ್ದೇವೆ. ನಮ್ಮ ಪಕ್ಷ ಆತಿಹಾಸಿಕ ಪಕ್ಷ. ಮಹಾತ್ಮ ಗಾಂಧಿ ಅವರು ದಕ್ಷಿಣ ಆಫ್ರಿಕಾದಿಂದ ಹಿಂದಿರುಗಿದ ನಂತರ ಸ್ವಾತಂತ್ರ್ಯ ಹೋರಾಟದ ನೇತೃತ್ವ ವಹಿಸಬೇಕು ಎಂದು ಮನವಿ ಮಾಡಲಾಯಿತು. ಇದನ್ನು ಒಪ್ಪಿದ ಅವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದರು. ಸ್ವಾತಂತ್ರ್ಯ ಹೋರಾಟದಲ್ಲಿ ಎಲ್ಲ ಸಮುದಾಯಗಳು ಒಗ್ಗಟ್ಟಾಗಿ ಹೋರಾಡಿದವು. ಶಾಂತಿ, ಅಹಿಂಸೆ, ಸತ್ಯಾಗ್ರಹದ ಸೂತ್ರದ ಮೇಲೆ ಹೋರಾಟ ಮಾಡುವಂತೆ ಗಾಂಧಿ ಅವರು ಮಾರ್ಗದರ್ಶನ ನೀಡಿದರು. 

ಇಂದು ಅಧಿಕಾರದಲ್ಲಿರುವ ಬಿಜೆಪಿ ಹಾಗೂ ಆರ್ ಎಸ್ಎಸ್ ದೇಶದ ಏಕತೆಯನ್ನು ಒಡೆಯಲು ಪ್ರಯತ್ನಿಸುತ್ತಿದ್ದಾರೆ. ಸಂವಿಧಾನವ ಹಾಗೂ ಸಂವಿಧಾನಾತ್ಮಕ ಸಂಸ್ಥೆಗಳನ್ನು ಬುಮೇಲು ಮಾಡಲು ಪ್ರಯತ್ನಿಸುತ್ತಿದ್ದಾರೆ. ಈ ಸಮಯದಲ್ಲಿ ಕಾಂಗ್ರಸ್ ಪಕ್ಷದವರಿಗೆ ಹೆಚ್ಚಿನ ಜವಾಬ್ದಾರಿ ಇದೆ. 

ದೇಶವನ್ನು ಒಗ್ಗೂಡಿಸಲು ರಾಹುಲ್ ಗಾಂಧಿ ಅವರು ಸ್ವಾತಂತ್ರ್ಯ ಭಾರತದ ಇತಿಹಾಸದಲ್ಲೇ ಅತಿ ದೊಡ್ಡ ಯಾತ್ರೆಯಾಗಿ ಭಾರತ ಜೋಡೋ ಯಾತ್ರೆ ಮಾಡುತ್ತಿದ್ದಾರೆ. 

*ಡಿ.ಆರ್ ಪಾಟೀಲ್:*

138 ವರ್ಷಗಳ ಹಿಂದೆ ಕಾಂಗ್ರೆಸ್ ಸಂಸ್ಥಾಪನೆಗೊಂಡು ಇದರ ನೇತೃತ್ವದಲ್ಲಿ ಸ್ವಾತಂತ್ರ್ಯ ಹೋರಾಟ ಆರಂಭವಾಯಿತು. ಮಹತಾಮ ಗಾಂಧಿ ಅವರ ನೇತೃತ್ವದಲ್ಲಿ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದೆ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಯಾರ ಪಾತ್ರ ಏನು ಎಂದು ಇತಿಹಾಸದಲ್ಲಿದೆ. ಆದರೆ ದುರ್ದೈವ ಹೊಸ ಪೀಳಿಗೆ ಯುವಕರಿಗೆ ಈ ಬಗ್ಗೆ ಗೊತ್ತಿಲ್ಲ. ಇವರು ಸಾಮಾಜಿಕ ಜಾಲತಾಣಗಳಲ್ಲಿ ತಪ್ಪು ಮಾಹಿತಿ ಪಡೆಯುತ್ತಿದ್ದಾರೆ.

ಎಲ್ಲ ವರ್ಗದ ಜನರಿಗೆ ಎಲ್ಲ ರಂಗದಲ್ಲಿ ಸಮಾನ ಅವಕಾಶ ನೀಡಿದೆ. ಈ ವಿಚಾರವಾಗಿ ನಾವು ನಮ್ಮ ಮುಂದಿನ ಪೀಳಿಗೆಗಳಿಗೆ ತಿಳಿಸಿ ಹೇಳಬೇಕಿದೆ. ಸಾಮಾಜಿಕ ಜಾಲತಾಣಗಳಲ್ಲಿ ಅಬ್ಬರದ ಅಪಪ್ರಚಾರದ ನಡುವೆ ಅರಿವು ಮೂಡಿಸಬೇಕಿದೆ. ನಾವು ಬೆಳವಣಿಗೆ ಕಾಣಬೇಕಾದರೆ ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ಆದರೆ ದುರ್ದೇವ ಎಂದರೆ ನಮ್ಮ ಒಗ್ಗಟ್ಟು ಮುರಿಯುವ ಶಕ್ತಿಗಳು ಪ್ರಬಲರಾಗುತ್ತಿದ್ದಾರೆ. ಧರ್ಮದ ಆಧಾರದ ಮೇಲೆ ಭಾರತೀಯರನ್ನು ಒಡೆದು ಆಳುವ ನೀತಿಯನ್ನು ಬಿಜೆಪಿ ಯಶಸ್ವಿಯಾಗಿ ಮಾಡುತ್ತಿದೆ. 

ಸ್ವಾತಂತ್ರ್ಯ ಹೋರಾಟದಲ್ಲಿ ಕೆಲವರು ಬ್ರಿಟೀಷರ ಜತೆ ಕೈಜೋಡಿಸಿ ಹೋರಾಟ ಹತ್ತಿಕ್ಕಲು ಪ್ರಯತ್ನಿಸಿದ್ದರು. ಅಂತಹವರ ಹಿಂಬಾಲಕರು ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಯಾರು ಗಾಂಧಿಜಿ ಅವರನ್ನು ಕೊಂದರೋ ಅಂತಹವರನ್ನು ಮುಂಚೂಣಿ ನಾಯಕರಂತೆ ಬಿಂಬಿಸಲಾಗುತ್ತಿರುವುದು ವಿಪರ್ಯಾಸ. ಇದನ್ನು ನಾವು ಅರಿಯಬೇಕು. 

ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗೆಲ್ಲಾ ನಮ್ಮ ಬದುಕಿನಲ್ಲಿ, ಬಡವರ ಬದುಕಿನಲ್ಲಿ ಬಹಳಷ್ಟು ಬದಲಾವಣೆ ತರಲಾಗಿದೆ. ಯಾವುದೇ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ತಲೆತಗ್ಗಿಸುವಂತಹ ಕೆಲಸವನ್ನು ಪೂರ್ವಜರು ಮಾಡಿಲ್ಲ. ಹೀಗಾಗಿ ನಾವೆಲ್ಲರೂ ಹೆಮ್ಮೆಯಿಂದ ನಾವು ನಮ್ಮ ಪಕ್ಷದ ಬಗ್ಗೆ, ಸಾಧನೆ ಬಗ್ಗೆ ಮಾತನಾಡಬಹುದು. ಈ ಕೆಲಸವನ್ನು ನಾವು ಈಗ ಮಾಡಬೇಕು.

ಮಾಡಿದ್ದನ್ನು ಹೇಳಿಕೊಂಡು ತಿರುಗಬಾರದು ಎಂಬ ಬಸವಣ್ಣನವರ ಸಂಸ್ಕೃತಿಯಲ್ಲಿ ನಾವು ಬೆಳೆದು ಬಂದಿದ್ದೇವೆ. ಆದರೆ ಇಂದು ನಮ್ಮ ವಿರೋಧಿಗಳು ತಪ್ಪು ಮಾಹಿತಿ ಮೂಲಕ ಯುವಕರ ತಲೆ ಕೆಡಿಸುತ್ತಿರುವ ಹಿನ್ನೆಲೆಯಲ್ಲಿ ನಾವು ಏನು ಮಾಡಿದ್ದೇವೆ ಎಂದು ಹೇಳಿಕೊಳ್ಳಬೇಕಾದ ಪರಿಸ್ಥಿತಿ ಇದೆ.  

*ಬಿ.ಎನ್ ಸಂದೀಪ್:*

ಕಾಂಗ್ರೆಸ್ ಪಕ್ಷ ಸಂಸ್ಥಾಪನೆಯಾದ ನಂತರ ದೇಶದಲ್ಲಿ ಹಲವು ನಾಯಕರನ್ನು ಸೃಷ್ಟಿ ಮಾಡಿದೆ. ದೇಶದ ಹಲವು ವಿಚಾರಗಳನ್ನು ಎತ್ತಿಕೊಂಡು ಸಾಮಾಜಿಕವಾಗಿ ಆರ್ಥಿಕವಾಗಿ ನಮ್ಮ ಜೀವನದಲ್ಲಿ ಬದಲಾವಣೆ ತಂದಿದೆ. ಸಾಮಾಜಿಕವಾಗಿ ಬಹುದಡ್ಡ ಬದಲಾವಣೆ ಆಗಿದ್ದರೆ ಅದು ಕಾಂಗ್ರೆಸ್ ನಿಂದ.

1916ರ ನಂತರ ಮಹಾತ್ಮಾ ಗಾಂಧಿ ಅವರು ಭಾರತಕ್ಕೆ ಬಂದು ಕಾಂಗ್ರೆಸ್ ಪಕ್ಷದ ನೇತೃತ್ವದ ಸ್ವಾತಂತ್ರ್ಯ ಹೋರಾಟದ ಮುಂಚೂಣಿ ನಾಯಕರಾದ ಬಳಿಕ ಹೋರಾಟಕ್ಕೆ ಮತ್ತೊಂದು ದಿಕ್ಸೂಚಿ ನೀಡಲಾಯಿತು. ಸತ್ಯ, ಅಹಿಂಸೆ, ಸತ್ಯಾಗ್ರಹ ಮೂಲಕ ಸ್ವಾತಂತ್ರ್ಯ ಹೋರಾಟ ಮಾಡಿತು. ಕಾಂಗ್ರೆಸ್ ನ ಹಲವು ನಾಯಕರು ತ್ಯಾಗ ಬಲಿದಾನ ಮಾಡಿದ್ದಾರೆ. ಇಂದು ದೇಶದಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಕಾಂಗ್ರೆಸ್ ನಾಯಕರ ಕೊಡುಗೆ ಸ್ಮರಿಸಬೇಕು. 

ಸ್ವಾತಂತ್ರ್ಯದ ನಂತರವೂ ದೇಶಕ್ಕಾಗಿ ಕಾಂಗ್ರೆಸ್ ನಾಯಕರು ತ್ಯಾಗ ಬಲಿದಾನ ಮಾಡಿದ್ದಾರೆ. ಇಂದಿರಾ ಗಾಂಧಿ, ರಾಜೀವ್ ಗಾಂಧಿ ಅವರು ದೇಶದ ಐಕ್ಯತೆಗಾಗಿ ಪ್ರಾಣತ್ಯಾಗ ಮಾಡಿದ್ದಾರೆ. ನೆಹರೂ ಅವರು ಕೂಡ 3200 ದಿನಗಳ ಕಾಲ ಸೆರೆವಾಸ ಅನುಭವಿಸಿದ್ದರು. ಸ್ವಾತಂತ್ರ್ಯ ಬರುವ ಮುನ್ನ ದೇಶ 540 ರಾಜ ಸಂಸ್ಥಾನಗಳ ಮೂಲಕ ಛಿದ್ರವಾಗಿತ್ತು. ದೇಶಕ್ಕೆ ಒಂದು ಧ್ವಜ ಇರಲಿಲ್ಲ. ಎಲ್ಲ ಸಂಸ್ಥಾನ ತಮ್ಮದೇ ಕಾನೂನು ಹೊಂದಿತ್ತು. ಈ ಸಂದರ್ಭದಲ್ಲಿ ನೆಹರೂ ಹಾಗೂ ಸರ್ದಾರ್ ಪಟೇಲರು ದೇಶವನ್ನು ಒಂದುಗೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಆ ಮೂಲಕ ದೇಶಕ್ಕೆ ಒಂದು ಧ್ವಜ ನೀಡಿದ್ದು ಕಾಂಗ್ರೆಸ್. 

ದೇಶಕ್ಕೆ ಸಂವಿಧಾನ ಕೊಟ್ಟಿದ್ದು ಕಾಂಗ್ರೆಸ್. ನೆಹರೂ ಅವರಿಂದ ಮನಮೋಹನ್ ಸಿಂಗ್ ಅವರವರೆಗೂ ಎಲ್ಲ ಕಾಂಗ್ರೆಸ್ ನಾಯಕರು ಸಾಮಾಜಿಕವಾಗಿ, ರಾಜಕೀಯವಾಗಿ, ಆರ್ಥಿಕವಾಗಿ ದೇಶದ ನಾಗರೀಕರಿಗೆ ಶಕ್ತಿ ತುಂಬಿದ್ದಾರೆ. ಸಂವಿಧಾನದ 73-74ನೇ ತಿದ್ದುಪಡಿ ಮೂಲಕ ಪಂಚಾಯತ್ ರಾಜ್ ವ್ಯವಸ್ಥೆ, ಐಟಿ ಬಿಟಿ ಕ್ರಾಂತಿ, 18 ವರ್ಷದವರಿಗೆ ಮತದಾನದಂತಹ ಕಾರ್ಯಕ್ರಮ ನೀಡಿದೆ. 

ಕುವೆಂಪು ಅವರು ಕರ್ನಾಟಕವನ್ನು ಸರ್ವಜನಾಂಗದ ಶಾಂತಿಯ ತೋಟ ಎಂದು ಬರೆದಿದ್ದರು. ಇಂತಹ ಸುಂದರ ತೋಟವನ್ನು ಬಿಜೆಪಿ ಹಾಗೂ ಆರ್ ಎಸ್ಎಸ್ ನವರು ನಾಶ ಮಾಡುತ್ತಿದ್ದಾರೆ. ರಾಜ್ಯದ ಜನತೆ ಇದಕ್ಕೆ ಅವಕಾಶ ಮಾಡಿಕೊಡಬಾರದು. ಬಿಜೆಪಿಯವರು ಸೋನಿಯಾ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರ ಬಗ್ಗೆ ಹೇಗೆ ಮಾತನಾಡುತ್ತಿದ್ದಾರೆ ಎಂದು ನೋಡುತ್ತಿದ್ದೇವೆ. ನಾವದನ್ನು ಧಿಕ್ಕರಿಸಬೇಕು. ಸೋನಿಯಾ ಗಾಂಧಿ, ಖರ್ಗೆ ಅವರ ಕೊಡುಗೆ ಅಲ್ಲಗೆಳೆಯಲು ಸಾಧ್ಯವಿಲ್ಲ. ಇಂತಹ ಹೇಳಿಕೆಯನ್ನು ನಾವು ಖಂಡಿಸಬೇಕು. 

*ಪುಷ್ಪಾ ಅಮರನಾಥ್:*

ಈ ದೇಶದಲ್ಲಿ ಮಹಿಳೆಯರು ಹಾಗೂ ಮಹಿಳೆಯರ ಪ್ರಾತಿನಿಧ್ಯಕ್ಕಾಗಿ ಹೋರಾಟ ಮಾಡಿದ ಪಕ್ಷ ಕಾಂಗ್ರೆಸ್. ಈ ದೇಶಕ್ಕೆ ಉತ್ತಮ ಪ್ರಧಾನಿಯನ್ನಾಗಿ ಇಂದಿರಾ ಗಾಂಧಿ ಅವರನ್ನು ಕೊಟ್ಟ ಪಕ್ಷ ಕಾಂಗ್ರೆಸ್. ಇಂದು ದೇಶದ ಜನರಿಗೆ ಬೇಜಿಪೆ ಮೋಸ ಮಾಡುತ್ತಿದ್ದು, ಈ ಸಂದರ್ಭದಲ್ಲಿ ನಾವು ಹೇಗೆ ಕೆಲಸ ಮಾಡಬೇಕು ನಮ್ಮ ನಾಯಕರು ತಿಳಿಸಿದ್ದಾರೆ.

ದೇಶದಲ್ಲಿ ಸುಮಾರು ಅರ್ಧದಷ್ಟು ಮಹಿಳಾ ಮತದಾರರಿದ್ದು, ಅವರ ಮನಪರಿವರ್ತನೆ ಮಾಡಿ 2023ರ ಚುನಾವಣೆಯನ್ನು ಮಾಡು ಇಲ್ಲವೆ ಮಡಿ ಎಂಬ ಮನಸ್ಥಿತಿಯಲ್ಲಿ ಎದುರಿಸಬೇಕು. ನಾವೆಲ್ಲರೂ ನಾಯಕರಾಗಿದ್ದರೂ ಬೂತ್ ಮಟ್ಟದಲ್ಲಿ ಕಾರ್ಯಕರ್ತರಂತೆ ಕೆಲಸ ಮಾಡಬೇಕಿದೆ. ಕಾಂಗ್ರೆಸ್ ಪ್ರತಿ ಮನೆ ಮನದಲ್ಲಿ ಇದೆ. ಅವರ ಮನವೊಲಿಸುವ ಕೆಲಸವನ್ನು ನಾವು ಕೆಲಸ ಮಾಡಬೇಕಿದೆ. ನಾವು ಈ ಕೆಲಸ ಮಾಡಿದರೆ 2013ರಲ್ಲಿ ನಮ್ಮ ಪಕ್ಷವನ್ನು ಅಧಿಕಾರಕ್ಕೆ ತರುವುದರಲ್ಲಿ ಅನುಮಾನವಿಲ್ಲ.

ಅಂಬೇಡ್ಕರ್ ಅವರು ಹೇಳಿದಂತೆ ನಾವು ಶಿಕ್ಷಣ ಪಡೆದು, ಸಂಘಟಿತರಾಗಿ ಹೋರಾಟ ಮಾಡಬೇಕು. ನಾವು ಒಗ್ಗಟ್ಟಿನ ಶಿಕ್ಷಣ ಪಡೆದು ಸಂಘಟಿತರಾಗಬೇಕು. ಕಾಂಗ್ರೆಸ್ ಪಕ್ಷ ಕೇಂದ್ರ ಹಾಗೂ ರಾಜ್ಯದಲ್ಲಿ ನೀಡಿರುವಂತಹ ಕಾರ್ಯಕ್ರಮಗಳನ್ನು ಜನರಿಗೆ ತಿಳಿಸಬೇಕು.
[28/12, 6:05 PM] Kpcc official: ಅಂಗನವಾಡಿ ಕಾರ್ಯಕರ್ತೆಯರು,
ಅತಿಥಿ ಉಪನ್ಯಾಸಕರು,
ಆಶಾ ಕಾರ್ಯಕರ್ತೆಯರು,
ಪೌರ ಕಾರ್ಮಿಕರು,
ಸಾರಿಗೆ ನೌಕರರು,

ಇವರೆಲ್ಲ ಹೋರಾಟ ಮಾಡಿದರೂ ವೇತನ ಹೆಚ್ಚಳ ಮಾಡದ @BJP4Karnataka ಸರ್ಕಾರ ಖೈದಿಗಳ ಭತ್ಯೆಯನ್ನು ಮೂರು ಪಟ್ಟು ಹೆಚ್ಚಿಸಿದೆ!

ಹೊರಗೆ ರೌಡಿಗಳಿಗೆ ಮಣೆ, ಜೈಲೊಳಗಿನ ಖೈದಿಗಳಿಗೆ ಮನ್ನಣೆ,
ಇದು ಬಿಜೆಪಿಯ ಕ್ರಿಮಿನಲ್‌ಗಳ ಮೇಲಿನ ಪ್ರೇಮ!

Post a Comment

Previous Post Next Post