KPCC,, ಇಂದು

[29/12, 4:01 PM] Kpcc official: ಮನುಷ್ಯರ 108 ಆಂಬುಲೆನ್ಸ್ ಮಾತ್ರವಲ್ಲ, ಗೋಮಾತೆಯ ಆಂಬುಲೆನ್ಸ್‌ಗಳನ್ನು ಕೂಡ @BJP4Karnataka ಸರ್ಕಾರಕ್ಕೆ ನಿರ್ವಹಣೆ ಮಾಡಲಾಗುತ್ತಿಲ್ಲ!

ಬಾಯಲ್ಲಿ ಮಾತ್ರ ಗೋಮಾತೆ, ಗೋರಕ್ಷಣೆ ಎನ್ನುವ ಬಿಜೆಪಿಗರಿಗೆ ನೈಜ ಗೋರಕ್ಷಣೆಗೆ ಬೇಕಾದ ಯಾವ ಕೆಲಸವೂ ಮಾಡ್ತಿಲ್ಲ.

ಸಿಬ್ಬಂದಿ ನೇಮಿಸದೆ ಪಶು ಆಂಬುಲೆನ್ಸ್‌ಗಳನ್ನು ಮೂಲೆಗೆ ತಳ್ಳಿದೆ ಭ್ರಷ್ಟ ಸರ್ಕಾರ.
[29/12, 4:04 PM] Kpcc official: ರೈತರೆಂದರೆ ಬಿಜೆಪಿಗೆ ಅದೆಷ್ಟು ದ್ವೇಷ?

ಹಲವು ದಿನಗಳಿಂದ ಪ್ರತಿಭಟಿಸುತ್ತಿದ್ದ ರೈತರ ಬಳಿ ಅಹವಾಲು ಆಲಿಸದ ಸರ್ಕಾರ ಪೊಲೀಸರನ್ನು ಮುಂದೆ ಬಿಟ್ಟು ರೈತರನ್ನು ಹತ್ತಿಕ್ಕುತ್ತಿದೆ.

ರೈತರ ಮೇಲೆ ದೌರ್ಜನ್ಯ ಎಸಗಲು ಮೋದಿ ಮಾದರಿಯೇ @BSBommai ಅವರೇ?

ಗಾಂಧಿ, ಅಂಬೇಡ್ಕರ್‌ರವರ ಚಿತ್ರಗಳನ್ನ ಎಸೆದ ಬಿಜೆಪಿ ಸರ್ಕಾರ ಕೂಡಲೇ ರಾಜ್ಯದ ಕ್ಷಮೆ ಕೇಳಬೇಕು.
[29/12, 4:37 PM] Kpcc official: ಕಳಸ ಬಂಡೂರಿ DPRಗೆ ಕೇಂದ್ರ ಜಲ ಆಯೋಗ ಅನುಮತಿಸಿದ್ದು ಬಿಜೆಪಿಯ ಚುನಾವಣಾ ಗಿಮಿಕ್ ಅಷ್ಟೇ.

ನೀರಾವರಿ ಯೋಜನೆಗಳ ಅನುಷ್ಠಾನ ವಿಳಂಬದ ಕುರಿತು ಕಾಂಗ್ರೆಸ್ ಹಮ್ಮಿಕೊಂಡಿದ್ದ ಪ್ರತಿಭಟನೆಗೆ ವ್ಯಕ್ತವಾದ ಜನಬೆಂಬಲಕ್ಕೆ ಹೆದರಿದ ಬಿಜೆಪಿ ಸರ್ಕಾರ ತುರಾತುರಿಯಲ್ಲಿ DPR ಅನುಮತಿ ತಂದಿದೆ.

ಈ ಮೂಲಕ ಕಾಂಗ್ರೆಸ್ ಹೋರಾಟಕ್ಕೆ ಮೊದಲ ಜಯ ಸಿಕ್ಕಂತಾಗಿದೆ.
[29/12, 5:19 PM] Kpcc official: *Private Members Bill - Priyank Kharge*

ನೇಮಕಾತಿ ಪರೀಕ್ಷೇಗಳಲ್ಲಿನ ಭ್ರಷ್ಟಾಚಾರವನ್ನ ತಡೆಯಲು ಪ್ರಿಯಾಂಕ್ ಖರ್ಗೆಯವರು ಸದನದಲ್ಲಿಂದು ಖಾಸಗಿ ಮಸೂದೆಯನ್ನ ಜಾರಿಗೆ ತರಲು ಸಲ್ಲಿಸಿದ್ದಾರೆ. 

ಖಾಸಗಿ ಮಸೂದೆಯ ಪ್ರತಿ ಇಲ್ಲಿದೆ.
[29/12, 5:49 PM] Kpcc official: ನಮ್ಮ ಮೇಕೆದಾಟು ಪಾದಯಾತ್ರೆಗೆ ಹೆದರಿದ @BJP4Karnataka ಸರ್ಕಾರ ಪರಿಸರ ಇಲಾಖೆಯ ಅನುಮತಿ ತರಲಾಗದಿದ್ದರೂ ನೆಪ ಮಾತ್ರಕ್ಕೆ ಬಿಜೆಟ್‌ನಲ್ಲಿ ₹1000 ಕೋಟಿ ಘೋಷಿಸಿ ಮೂಗಿನ ಮೇಲೆ ತುಪ್ಪ ಸವರಿತ್ತು.

ಈಗ ನಮ್ಮ ಪ್ರತಿಭಟನೆಗೆ ಹೆದರಿ ಕಳಸ ಬಂಡೂರಿ DPRಗೆ ಅನುಮತಿಸಿದೆ.

ಮೇಕೆದಾಟು ವಿಚಾರದಲ್ಲಿ ಆಡಿದ ನಾಟಕವನ್ನೇ ಮಹದಾಯಿ ವಿಷಯದಲ್ಲೂ ಆಡುತ್ತಿದೆ.
[29/12, 5:49 PM] Kpcc official: ಅಧಿವೇಶನವನ್ನು ಕಾಟಾಚಾರಕ್ಕೆ ನಡೆಸಿದ ಸರ್ಕಾರಕ್ಕೆ ಜನರ ಸಮಸ್ಯೆಗಳನ್ನು ಚರ್ಚಿಸಲು ಆಸಕ್ತಿ ಇಲ್ಲ,
ಉತ್ತರ ಕೊಡಲಾಗದ ಸಚಿವರು ಗೈರು ಹಾಜರಿಯ ಮೊರೆ ಹೋಗಿದ್ದೆ ಹೆಚ್ಚು.

ಅಮಿತ್ ಶಾ ಕಾರ್ಯಕ್ರಮಕ್ಕಾಗಿ ಜನರ ಸಮಸ್ಯೆ ಮರೆತು ಅಧಿವೇಶನವನ್ನು ಮುಂಚಿತವಾಗಿ ಮೊಟಕುಗೊಳಿಸಿದ @BJP4Karnataka ಸರ್ಕಾರ ಜನಹಿತ ಮುಖ್ಯವಲ್ಲ ಎಂಬುದನ್ನು ಸಾಬೀತುಪಡಿಸಿದೆ.
[29/12, 5:49 PM] Kpcc official: ಹುಬ್ಬಳ್ಳಿಯ ನೆಹರು ಕ್ರೀಡಾಂಗಣದಲ್ಲಿ @INCKarnataka 2 ನೇ ಜನವರಿ 2023 ರಂದು ಹಮ್ಮಿಕೊಂಡಿದ್ದ ಮಹದಾಯಿ ಜಲ ರ್‍ಯಾಲಿಯು 8 ವರ್ಷಗಳ ಅಧಿಕಾರದ ಗಾಢ ನಿದ್ದೆಯಲ್ಲಿ ಮಲಗಿದ್ದ ಮೋದಿ ಸರ್ಕಾರವನ್ನು ಎಬ್ಬಿಸಿದೆ.

ಆದರೆ ಇದು ತುಂಬಾ ಕಡಿಮೆಯಾಯ್ತು ಜೊತೆಗೆ ತಡವಾಯಿತು ಕೂಡ.

ಹಾಗಾಗಿ ಬಿಜೆಪಿಯ ಈ ಮಹಾ ದ್ರೋಹವನ್ನು ಕನ್ನಡಿಗರು, ಅದರಲ್ಲೂ ಬೆಳಗಾವಿ, ಹುಬ್ಬಳ್ಳಿ-ಧಾರವಾಡದ ಜನತೆ ಎಂದಿಗೂ ಕ್ಷಮಿಸುವುದಿಲ್ಲ.
 
ಬೆಳಗಾವಿ ಮತ್ತು ಹುಬ್ಬಳ್ಳಿ-ಧಾರವಾಡದ 59 ಲಕ್ಷ ಜನರಿಗೆ ಮಹದಾಯಿಯ 3.9 ಟಿಎಂಸಿ ನೀರು ದೊರಕುವಂತೆ ಕಾಂಗ್ರೆಸ್ ಖಾತರಿಪಡಿಸುತ್ತದೆ.

ಇಷ್ಟಲ್ಲದೇ,

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ,

▪️ಮೊದಲನೇ ಕ್ಯಾಬಿನೆಟ್ ಸಭೆಯಲ್ಲಿ ಮಹದಾಯಿ ಯೋಜನೆಗಳಿಗಾಗಿ ₹500 ಕೋಟಿ ಅನ್ನು ಮಂಜೂರು ಮಾಡುತ್ತದೆ.

▪ ಮಹದಾಯಿ ನದಿ ತಿರುವು ಯೋಜನೆಗಳನ್ನು ಕಾರ್ಯಗತಗೊಳಿಸಲು ₹3000 ಕೋಟಿ ಹಣ ಮಂಜೂರು ಮಾಡುವುದರೊಂದಿಗೆ ಆ ಕಾಮಗಾರಿಗಳನ್ನು ನಿಗದಿತ ಸಮಯದಲ್ಲಿ ಪೂರ್ಣಗೊಳಿಸುತ್ತದೆ.

ಇದು ಕಾಂಗ್ರೆಸ್ ಒಟ್ಟಿಗೆ ಪ್ರಗತಿಯನ್ನು ಪ್ರಾರಂಭಿಸುವ ಸಮಯ.


ಶ್ರೀ.ರಣದೀಪ್ ಸಿಂಗ್ ಸುರ್ಜೆವಾಲಾ, ಎಐಸಿಸಿ ಪ್ರಧಾನ ಕಾರ್ಯದರ್ಶಿ - ಕರ್ನಾಟಕ ಉಸ್ತುವಾರಿ
[29/12, 6:04 PM] Kpcc official: ಉದ್ಯೋಗ ನೀಡುವಲ್ಲಿ ಸರ್ಕಾರದ ಜವಾಬ್ದಾರಿ ಬಹುದೊಡ್ಡದು. ಸುಗಮ ಆಡಳಿತ ಯಂತ್ರಕ್ಕೆ ಅಡ್ಡಿಯಾಗುತ್ತಿರುವ ಸಿಬ್ಬಂದಿ ಕೊರತೆ ನೀಗಿಸದ ಸರ್ಕಾರ ಹುದ್ದೆ ಮಾರಾಟದಲ್ಲಿ ಮಾತ್ರ ಮುಂದಿದೆ.

ದೊಡ್ಡ ಸಂಖ್ಯೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಮುಂದಾಗದ @BJP4Karnataka ಸರ್ಕಾರದಿಂದ ಉದ್ಯೋಗಾಕಾಂಕ್ಷಿಗಳ ಕನಸು ಛಿದ್ರವಾಗಿದೆ.
[29/12, 6:04 PM] Kpcc official: ಅಡಿಕೆ ಬೆಳೆಗೆ ಭವಿಷ್ಯವಿಲ್ಲ ಹಾಗಾಗಿ ಈ ಬೆಳೆಗೆ ಪ್ರೋತ್ಸಾಹ ನೀಡಬಾರದು ಎಂದ @JnanendraAraga ಅವರು ಅಡಿಕೆ ಬೆಳೆಗಾರರ ಬೆನ್ನಿಗೆ ಚೂರಿ ಹಾಕಿದ್ದಾರೆ.

ಕೇಂದ್ರ ಸರ್ಕಾರ ಅಡಿಕೆ ಆಮದಿಗೆ ನೀಡಿದ ಅನುಮತಿ ಪ್ರಶ್ನಿಸಲಿಲ್ಲ, ಎಲೆಚುಕ್ಕಿ ರೋಗ ನಿಯಂತ್ರಣಕ್ಕೆ ಪ್ರಯತ್ನಿಸಲಿಲ್ಲ.
ಈಗ ಅಡಿಕೆಯನ್ನೇ ಬೆಳೆಯಬೇಡಿ ಎನ್ನುವ ನಾಟಕ ಶುರು ಮಾಡಿದೆ ಬಿಜೆಪಿ.
[29/12, 6:47 PM] Kpcc official: ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಬೆಳಗಾವಿ ಸುವರ್ಣಸೌಧದ ಬಳಿ ಮಾಧ್ಯಮಗಳಿಗೆ ಗುರುವಾರ ನೀಡಿದ ಪ್ರತಿಕ್ರಿಯೆ...
[29/12, 6:48 PM] Kpcc official: *ಬೈಕ್ ಟ್ಯಾಕ್ಸಿ ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ರಾಮಲಿಂಗಾ ರೆಡ್ಡಿ ಅವರ ಮಾತುಗಳು:*

‘ಬೈಕ್ ಟ್ಯಾಕ್ಸಿ ವಿರೋಧಿಸಿ ಇಂದು ಹಲವು ಸಂಘಟನೆಗಳು ಪ್ರತಿಭಟನೆ ಮಾಡುತ್ತಿದ್ದಾರೆ. ಬೆಂಗಳೂರಿನಲ್ಲಿ ಈಗಾಗಲೇ 2.5 ಲಕ್ಷ, ರಾಜ್ಯದಲ್ಲಿ 3.5 ಲಕ್ಷ ಮಂದಿ ಆಟೋ ಚಾಲಕರಿದ್ದಾರೆ. ಬೈಕ್ ಟ್ಯಾಕ್ಸಿ ಬಂದರೆ ಆಟೋ ಚಾಲಕರಿಗೆ ತೊಂದರೆಯಾಗುತ್ತದೆ ಎಂದು ಇಲ್ಲಿ ಪ್ರತಿಭಟನೆ ಮಾಡಲಾಗುತ್ತಿದೆ. ಚಳಿಗಾಲದ ಅದಿವೇಶನ ನಿನ್ನೆ ಮುಕ್ತಾಯವಾಗಿದ್ದು, ಮುಂದಿನ ಜನವರಿ ಅಥವಾ ಫೆಬ್ರವರಿಯಲ್ಲಿ ವಿಧಾನ ಮಂಡಲ ಅಧಿವೇಶನ ಮತ್ತೆ ಪ್ರಾರಂಭವಾಗಲಿದೆ. ಈ ಸಂದರ್ಭದಲ್ಲಿ ನಾನು ಈ ವಿಚಾರವನ್ನು ಸದನದಲ್ಲಿ ಪ್ರಶ್ನಿಸುತ್ತೇನೆ. 

ಮುಂಬರುವ ಚುನಾವಣೆ ನಂತರ ಬಿಜೆಪಿ ಸರ್ಕಾರ ಇರುವುದಿಲ್ಲ. ನಮ್ಮ ಸರ್ಕಾರ ಅಧಿಕಾರದಲ್ಲಿ ಇರಲಿದೆ. ಆಗ ನಾವೇ ನಿಮಗೆ ಅನುಕೂಲವಾಗುವ ತೀರ್ಮಾನ ಕೈಗೊಳ್ಳುತ್ತೇವೆ. ನಾನು ಕೂಡ ಸಾರಿಗೆ ಸಚಿವನಾಗಿದ್ದೆ. ಆಗ ನೀವು 10 ಬೇಡಿಕೆ ಇಟ್ಟರೆ ಅವುಗಳಲ್ಲಿ ಒಂಬತ್ತು ಬೇಡಿಕೆಗಳನ್ನಾದರೂ ನಾನು ಈಡೇರಿಸುತ್ತಿದ್ದೆ. ಆಟೋ ಚಾಲಕರಿಗೆ ಪರವಾನಿಗೆಗೆ 8ನೇ ತರಗತಿ ಮಾನದಂಡವಿತ್ತು. ಅದನ್ನು ವಿನಾಯಿತಿಗೊಳಿಸಿದ್ದು ನಾವೇ. ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ಜನರಪರವಾಗಿ, ಬಡವರು, ಶ್ರಮಿಕ ವರ್ಗದ ಪರವಾಗಿದೆ. ನಿಮ್ಮ ಜತೆ ನಾವು ಸದಾ ಜತೆಗಿದ್ದೇವೆ ಎಂದು ಕೆಲಸದ ಮೂಲಕ ತೋರಿಸಿದ್ದೇವೆ.

ಬಿಜೆಪಿಯವರು ಬಣ್ಣ ಬಣ್ಣದ ಬಾಯಿ ಮಾತುಗಳನ್ನು ಹೇಳುತ್ತಾರೆ. ನಮ್ಮ ದೇಶದ ಜನ 9 ವರ್ಷಗಳಿಂದ ಅವರ ಮಾತು ನಂಬಿ ಯಾಮಾರಿದ್ದಾರೆ. ಇಲ್ಲೂ ಕಳೆದ 3 ವರ್ಷಗಳಿಂದ ಆಡಳಿತದಲ್ಲಿದ್ದಾರೆ. ಅಧಿಕಾರಕ್ಕೆ ಬಂದ ಮೇಲೆ ಅಧಿಕಾರಕ್ಕೆ ತಂದವರನ್ನು ಬಿಜೆಪಿ ಸರ್ಕಾರ ಮರೆತಿದೆ. ಬಿಜೆಪಿಯವರು ರೈತರ ಆದಾಯ ದುಪ್ಪಟ್ಟು ಮಾಡುತ್ತೇವೆ ಎಂದರು, ಮಾಡಲಿಲ್ಲ. ಕಾರ್ಮಿಕ ವರ್ಗಕ್ಕೆ ಅನ್ಯಾಯ ಮಾಡಿದ್ದಾರೆ.  

ಬೆಲೆ ಏರಿಕೆ ಹೆಚ್ಚಾಗಿದ್ದು, ಮಧ್ಯಮ ವರ್ಗದ ಜನರ ಜೀವನ ದುಸ್ಥರವಾಗಿದೆ. ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಸೇರಿದಂತೆ ಇಂಧನ ಬೆಲೆ ಏರಿಕೆ ಮಾಡಿದ ಪರಿಣಾಣ ಆಟೋ ಚಾಲಕರು ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದ್ದಾರೆ. ಇವರು ಬಂದ ಮೇಲೆ ನೋಟ್ ಬ್ಯಾನ್ ಮಾಡಿ ದೇಶದ ಆರ್ಥಿಕತೆಗೆ ದೊಡ್ಡ ಪೆಟ್ಟು ಕೊಟ್ಟರು.

ಚುನಾವಣೆಗೂ ಮುನ್ನ ವಿದೇಶದಲ್ಲಿನ ಕಪ್ಪು ಹಣ ತಂದು ಎಲ್ಲರ ಖಾತೆಗೂ 15 ಲಕ್ಷ ಹಾಕುವುದಾಗಿ ಹೇಳಿದ್ದರು. ನಿಮ್ಮಲ್ಲಿ ಯಾರಿಗಾದರೂ 15 ಲಕ್ಷ ಹಣ ಬಂತಾ? ಜಿಎಸ್ ಟಿ ಜಾರಿಗೆ ತಂದು ಎಲ್ಲ ವಸ್ತುಗಳ ಮೇಲೆ ಅಧಿಕ ತೆರಿಗೆ ಹಾಕಿ ದಿನ ನಿತ್ಯ ಬರೆ ಎಳೆಯುತ್ತಿದ್ದಾರೆ. ಬಿಜೆಪಿಯ ದುಬಾರಿ ದುನಿಯಾದಲ್ಲಿ ಬದುಕು ಸಾಗಿಸುವುದೇ ಕಷ್ಟವಾಗಿದೆ. 

ವರ್ಷಕ್ಕೆ 2 ಕೋಟಿ ಉದ್ಯೋಗ ನೀಡುವುದಾಗಿ ಹೇಳಿದ್ದರು. ಇವರು ಅಧಿಕಾರಕ್ಕೆ ಬಂದು 8 ವರ್ಷ ವಾಗಿದೆ ಅಂದರೆ 16 ಕೋಟಿ ಉದ್ಯೋಗ ನೀಡಬೇಕಿತ್ತು. 16 ಕೋಟಿ ಉದ್ಯೋಗ ನೀಡುವುದಿರಲಿ, ಇದ್ದ ಉದ್ಯೋಗಗಳನ್ನು ಕಸಿಯುತ್ತಿದ್ದಾರೆ. ದೇಶದ ಜನರಿಗೆ ಅಚ್ಛೇ ದಿನ ಕೊಡುತ್ತೇವೆ ಎಂದು ನರಕದ ಸ್ಥಿತಿ ನಿರ್ಮಾಣ ಮಾಡಿದ್ದಾರೆ. 

ಇನ್ನು ಬಿಜೆಪಿ ಸರ್ಕಾರದಲ್ಲಿ ಭ್ರಷ್ಟಾಚಾರ, ಕಮಿಷನ್ ದಂಧೆ ಹೆಚ್ಚಾಗಿದೆ. ಎಲ್ಲಾ ಸರ್ಕಾರಿ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ಮಾಡಿದ್ದಾರೆ. ರಾಜ್ಯದ ಸರ್ಕಾರಿ ಇಲಾಖೆಗಳಲ್ಲಿ 2.50 ಲಕ್ಷ ಹುದ್ದೆಗಳು ಖಾಲಿ ಇವೆ. ಆದರೂ ಅವುಗಳನ್ನು ಸರ್ಕಾರ ತುಂಬಲು ಸಾಧ್ಯವಾಗಿಲ್ಲ. ಮಾತೆತ್ತಿದರೆ ಡಬಲ್ ಇಂಜಿನ್ ಸರ್ಕಾರ ಎನ್ನುತ್ತಾರೆ. ಇವರ ಯೋಗ್ಯತೆಗೆ ಒಂದು ಹುದ್ದೆಯನ್ನು ಪ್ರಾಮಾಣಿಕವಾಗಿ ನೇಮಕ ಮಾಡಿಲ್ಲ. ಇನ್ನು ಗುತ್ತಿಗೆ ವಿಚಾರದಲ್ಲಿ 40% ಕಮಿಷನ್ ಲೂಟಿ ಮಾಡಿದ್ದಾರೆ.

ಇವರು ಚುನಾವಣೆ ಸಮಯದಲ್ಲಿ ಸುಳ್ಳು ಭರವಸೆಗಳನ್ನು ನೀಡಿ ಜನರಿಗೆ ಮೋಸ ಮಾಡುತ್ತಿದ್ದಾರೆ. ಕೇವಲ ಭಾವನಾತ್ಮಕ ವಿಚಾರಗಳನ್ನೇ ಮುಂದಿಟ್ಟುಕೊಂಡು ಜನರ ಸಮಸ್ಯೆಗಳನ್ನು ಮರೆಮಾಚುವ ಪ್ರಯತ್ನ ಮಾಡುತ್ತಿದ್ದಾರೆ.’
[29/12, 7:11 PM] Kpcc official: *ಬೆಳಗಾವಿಯ ಸುವರ್ಣಸೌಧದ ಆವರಣದಲ್ಲಿ ಡಿ.ಕೆ. ಶಿವಕುಮಾರ್ ಅವರು ಮಾಧ್ಯಮಗಳಿಗೆ ಗುರುವಾರ ನೀಡಿದ ಪ್ರತಿಕ್ರಿಯೆ:*

ಕಾಂಗ್ರೆಸ್ ಪಕ್ಷ ನಾಳೆ ವಿಜಯಪುರದಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆ ವಿಚಾರದಲ್ಲಿ ಆಗಿರುವ ಅನ್ಯಾಯದ ವಿರುದ್ಧ ಹಾಗೂ ಜ.2 ರಂದು ಮಹದಾಯಿ ಯೋಜನೆ ಜಾರಿ ವಿಚಾರವಾಗಿ ಹುಬ್ಬಳ್ಳಿಯಲ್ಲಿ ಪ್ರತಿಭಟನೆ ಹಮ್ಮಿಕೊಂಡಿದೆ.

ಈ ಪ್ರತಿಭಟನೆಯಿಂದ ಕಾಂಗ್ರೆಸ್ ಪಕ್ಷಕ್ಕೆ ಹೆಸರು ಬರುತ್ತದೆ ಎಂಬ ಕಾರಣಕ್ಕೆ ಸರಕಾರ ಇಂದು ಕಳಸಾ ಬಂಡೂರಿ ಯೋಜನಾ ವಿಸ್ತೃತ ವರದಿಗೆ ಅನುಮೋದನೆ ನೀಡಿದೆ. ಅವರು ಏನು ಬೇಕಾದರೂ ಮಾಡಲಿ. ನಾವು ನಮ್ಮ ವಿಚಾರವನ್ನು ಜನರ ಮುಂದೆ ಇಡುತ್ತೇವೆ.

ಸದನದಲ್ಲಿ ಸಿದ್ದರಾಮಯ್ಯ ಅವರ ವಿರುದ್ಧ ದಾಖಲೆ ಬಿಡುಗಡೆ ಮಾಡುವುದಾಗಿ ಆಡಳಿತ ಪಕ್ಷ ಹೇಳಿದ್ದರ ಬಗ್ಗೆ ಕೇಳಿದ ಪ್ರಶ್ನೆಗೆ, ' ಬ್ರಹ್ಮಾಂಡ ಭ್ರಷ್ಟಾಚಾರ, ಮತ ಕಳ್ಳತನ ವಿಚಾರ ಚರ್ಚೆಗೆ 2 ಗಂಟೆಗಳ ಅವಕಾಶ ನೀಡಿ, ರಾತ್ರಿ 8 ಗಂಟೆವರೆಗೂ ಅಧಿವೇಶನ ನಡೆಸಿ ಎಂದು ಮನವಿ ಮಾಡಿಕೊಂಡೆವು. ಆದರೆ ಈ ವಿಚಾರ ಪ್ರಸ್ತಾಪಿಸುತ್ತಿದ್ದಂತೆ ಅವರ ವರದಿ ಸಲ್ಲಿಸಿ ಓಡಿ ಹೋಗಿದ್ದಾರೆ. ಈ ವಿಚಾರ ಚರ್ಚೆಗೆ ಅವಕಾಶ ನೀಡಲಿಲ್ಲ. ಈ ವಿಚಾರವನ್ನು ನಾವು ಜನರ ಮುಂದೆ ತೆಗೆದುಕೊಂಡು ಹೋಗುತ್ತೇವೆ. ಜನರ ಧ್ವನಿಯನ್ನು ಎತ್ತಿ ಹಿಡಿಯುತ್ತೇವೆ ' ಎಂದು ತಿಳಿಸಿದರು.
[30/12, 11:41 AM] Kpcc official: ಮಹಾತ್ಮ ಗಾಂಧೀಜಿ ಅವರ ಅಧ್ಯಕ್ಷತೆಯಲ್ಲಿ 1924 ರಲ್ಲಿ ನಡೆದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 39 ನೇ ಮಹಾಧಿವೇಶನ ನಡೆದ ಬೆಳಗಾವಿಯ ವೀರಸೌಧಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಶುಕ್ರವಾರ ಭೇಟಿ ನೀಡಿ, ಗಾಂಧೀಜಿ ಅವರ ಪ್ರತಿಮೆಗೆ ನಮಿಸಿದರು. ಮಾಜಿ ಶಾಸಕ ಫಿರೋಜ್ ಸೇಠ್, ಡಿಸಿಸಿ ಅಧ್ಯಕ್ಷರಾದ ವಿನಯ್ ನವಲಗಟ್ಟಿ, ರಾಜಸೇಠ್ ಮತ್ತಿತರರು ಜತೆಗಿದ್ದರು.

ಕಾಂಗ್ರೆಸ್ ಬಸ್ ಯಾತ್ರೆ ವೀರಸೌಧದಿಂದ ಮುಂದಿನ ಜನವರಿ 11 ರಿಂದ ಆರಂಭವಾಗಲಿದೆ.
[30/12, 3:02 PM] Kpcc official: *ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ರಣದೀಪ್ ಸಿಂಗ್ ಸುರ್ಜೆವಾಲ ಅವರ ಮಾಧ್ಯಮ ಪ್ರತಿಕ್ರಿಯೆ:*

ಈ ಭಾಗದ ಜನರಿಗೆ ಈಗ ಸಂಘರ್ಷದ ಕಾಲವಾಗಿದೆ. ಕೃಷ್ಣಾ ಮೇಲ್ದಂಡೆ ಯೋಜನೆ 3ನೇ ಹಂತದಲ್ಲಿ 130 ಟಿಎಂಸಿ ನೀರಿನ ಪ್ರತಿ ಹನಿಯ ಬಳಕೆ ಮಾಡಿಕೊಳ್ಳಬೇಕು. ಈ ವಿಚಾರದಲ್ಲಿ ಕಳೆದ 8 ವರ್ಷಗಳಿಂದ ಬಿಜೆಪಿ ಸರ್ಕಾರ ಜನರಿಗೆ ಮೋಸ ಮಾಡುತ್ತಾ ಬಂದಿದೆ. ಇದರ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷದ ಎಲ್ಲ ನಾಯಕರು ಹೋರಾಡಲು ಸನ್ನದ್ಧರಾಗಿದ್ದಾರೆ. ಮುಂದಿನ ಮೂರು ತಿಂಗಳ ನಂತರ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದೆ. ಕೃಷ್ಣಾ ನದಿ ನೀರಿನ ಯೋಜನೆಯ ಮೊದಲ ಹಾಗೂ ಎರಡನೇ ಹಂತವನ್ನು ಕಾಂಗ್ರೆಸ್ ಸರ್ಕಾರಗಳೇ ಮಾಡಿದ್ದು, ಮೂರನೇ ಹಂತದ ಯೋಜನೆಯನ್ನು ಕಾಂಗ್ರೆಸ್ ಸರ್ಕಾರವೇ ಮಾಡಲಿದೆ. ಇದರಿಂದ 130 ಟಿಎಂಸಿ ನೀರು ಹೆಚ್ಚುವರಿಯಾಗಿ ಸಿಗಲಿದ್ದು, 6 ಲಕ್ಷ ಹೆಕ್ಟೇರ್ ಕೃಷಿ ಭೂಮಿಗೆ ನೀರಾವರಿ ಸೌಲಭ್ಯ ಸಿಗುತ್ತದೆ. 

ಕಳೆದ 8 ವರ್ಷಗಳಿಂದ ಕೇಂದ್ರದ ಮೋದಿ ಸರ್ಕಾರ ಹಾಗೂ ರಾಜ್ಯದ ಬಿಜೆಪಿ ಸರ್ಕಾರ ಈ ಯೋಜನೆಗೆ ತಡೆ ಹಿಡಿದಿದೆ. ಮುಂದೆ ಬರುವ ಕಾಂಗ್ರೆಸ್ ಸರ್ಕಾರ ಕೃಷ್ಣಾ ಯೋಜನೆ ಜಾರಿಗೆ ಪ್ರತಿ ವರ್ಷ ಬಜೆಟ್ ಅನುದಾನದಲ್ಲಿ 40 ಸಾವಿರ ಕೋಟಿಗೂ ಹೆಚ್ಚು ಅನುದಾನವನ್ನು ಮೀಸಲಿಡಲಿದೆ. ಈ ಯೋಜನೆ ಜಾರಿ ವಿಚಾರವಾಗಿ ಇಂದು ವಿಜಯಪುರದಲ್ಲಿ ಐತಿಹಾಸಿಕ ಸಮಾವೇಶವನ್ನು ಆಯೋಜಿಸಲಾಗಿದೆ. 

ಅಮಿತ್ ಶಾ ಅವರು ಕೂಡ ರಾಜ್ಯ ಪ್ರವಾಸ ಮಾಡಿದ್ದು, ಅವರು ಕೃಷ್ಣಾ ನದಿ ವಿಚಾರವಾಗಿ ನಿಮ್ಮ ಜತೆ ಮಾತನಾಡುವುದಿಲ್ಲ. ಮಹದಾಯಿ ನದಿ ವಿಚಾರವಾಗಿ ಮಾತನಾಡುವುದಿಲ್ಲ. ಕಾರಣ ಮೋದಿ ಹಾಗೂ ಅಮಿತ್ ಶಾ ಅವರು ರಾಜ್ಯದ ಜನರಿಗೆ ಈ ಎರಡು ನದಿಗಳಿಂದ ಸಿಗಬೇಕಾದ ನೀರನ್ನು ವಂಚಿಸಿದ್ದಾರೆ. ಈ ಕಾರಣಕ್ಕೆ ಅವರು ಮಾತನಾಡುವುದಿಲ್ಲ. ಅವರ ಜತೆ ನಿಂತಿರುವವರು ಕೂಡ ಈ ಭಾಗದ ಜನರಿಗೆ ಕೃಷ್ಣಾ ಹಾಗೂ ಮಹಾದಾಯಿ ನೀರು ಸಿಗದಂತೆ ಮಾಡಿದ್ದಾರೆ. ಮೂರು ತಿಂಗಳ ನಂತರ ನಡೆಯಲಿರುವ ಚುನಾವಣೆಯಲ್ಲಿ ಹೊಸ ಇತಿಹಾಸ ಬರೆಯಲಾಗುವುದು.

ಮಹದಾಯಿ ಹಾಗೂ ಕೃಷ್ಣಾ ನದಿ ನೀರಿನ ವಿಚಾರದಲ್ಲಿ ಬಿಜೆಪಿ ಕಳೆದ 8 ವರ್ಷಗಳಿಂದ ಜನರನ್ನು ಮೂರ್ಖರನ್ನಾಗಿಸುತ್ತಿದೆ. ಜ.2ರಂದು ಹುಬ್ಬಳ್ಳಿಯ ನೆಹರೂ ಕ್ರೀಡಾಂಗಣದಲ್ಲಿ ಮಹದಾಯಿ ನೀರಾವರಿ ವಿಚಾರವಾಗಿ ಪ್ರತಿಭಟನೆ ಹಮ್ಮಿಕೊಂಡಿದೆ. ಇದರ ಪರಿಣಾಮವಾಗಿ ಬಿಜೆಪಿ ಸರ್ಕಾರ ಜನರ ಮೂಗಿಗೆ ತುಪ್ಪ ಸವರುವಂತೆ ಡಿಪಿಆರ್ ಗೆ ಅನುಮೋದನೆ ನೀಡಿದೆ.  ಮಹದಾಯಿ ಯೋಜನೆ ವಿಚಾರವಾಗಿ ಅರಣ್ಯ ಇಲಾಖೆ ಅನುಮತಿ ಪತ್ರ ಎಲ್ಲಿದೆ? ಪರಿಸರ ಇಲಾಖೆ ಅನುಮತಿ ಪತ್ರ ಎಲ್ಲಿದೆ? ಈ ಯೋಜನೆಗೆ ಸಂಬಂಧಿಸಿದ ಟೆಂಡರ್ ಎಲ್ಲಿ ಕರೆದಿದ್ದಾರೆ? ಕಳೆದ 8 ವರ್ಷಗಳಿಂದ ಇದ್ಯಾವುದನ್ನೂ ಮಾಡದವರು ಈಗ ಸರ್ಕಾರದ ಅವಧಿ ಮುಗಿಯುವ ಹಂತದಲ್ಲಿ ಈ ವಿಚಾರವಾಗಿ ಜನರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ.

ಮಹದಾಯಿ ಯೋಜನೆ ಜಾರಿಗೆ ಕಾಂಗ್ರೆಸ್ ಸರ್ಕಾರ 3 ಸಾವಿರ ಕೋಟಿ ಅನುದಾನವನ್ನು ನೀಡಲಿದ್ದು, ಮೊದಲ ಸಂಪುಟ ಸಭೆಯಲ್ಲಿ 500 ಕೋಟಿ ಅನುದಾನ ಬಿಡುಗಡೆ ಮಾಡಲಾಗುವುದು. ಇದು ಮಹದಾಯಿ ಯೋಜನೆ ಜಾರಿ ಮಾಡುವ ವಿಧಾನ. ಜನರು ಮೋಸಗಾರರ ವಿಚಾರದಲ್ಲಿ ಎಚ್ಚರಿಕೆಯಿಂದ ಇರಬೇಕು ಎಂದು ಮನವಿ ಮಾಡುತ್ತೇನೆ.
[30/12, 3:03 PM] Kpcc official: *ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಡಿ.ಕೆ. ಶಿವಕುಮಾರ್ ಅವರ ಮಾಧ್ಯಮ ಪ್ರತಿಕ್ರಿಯೆ:*

ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ರೈತರ ಆದಾಯವನ್ನು ಡಬಲ್ ಮಾಡುವುದಾಗಿ ಹೇಳಿದ್ದರು. ಯಾವ ರೈತರ ಆದಾಯ ಡಬಲ್ ಆಗಿದೆ ಎಂದು ಹೇಳಬೇಕು. ಹಾಲಿನ ದರದ ವಿಚಾರದಲ್ಲಿ ಪಶುಸಂಗೋಪನೆ ಮಾಡುವವರಿಗೆ ಯಾವ ನ್ಯಾಯ ಒದಗಿಸಿದ್ದಾರೆ ಎಂದು ಸರ್ಕಾರವೇ ಹೇಳಬೇಕು. ಈಗಾಗಲೇ ಪೂಜೆ ಮಾಡಿದ್ದರೂ ಈಗ ಮತ್ತೊಮ್ಮೆ ಬಂದು ಪೂಜೆ ಮಾಡುತ್ತಿದ್ದಾರೆ ಮಾಡಲಿ. ಸಹಕಾರ ಸಚಿವಾಲಯದಿಂದ ಹಾಲು ಉತ್ಪಾದಕರನ್ನು ಸೇರಿಸಿ ಇಂದು ಕಾರ್ಯಾಕ್ರಮ ಮಾಡುತ್ತಿದ್ದಾರೆ.

ಬಿಜೆಪಿ ಅವರು ಹಳೇ ಮೈಸೂರು ಭಾಗದ ಬಗ್ಗೆ ಹೆಚ್ಚು ಗಮನ ಹರಿಸುತ್ತಿದ್ದಾರೆ ಎಂಬ ಪ್ರಶ್ನೆಗೆ, ‘ಹಳೇ ಮೈಸೂರು ಭಾಗ ಇರಲಿ, ನಾವು ಧಾರವಾಡದಲ್ಲಿ ನಿಂತಿದ್ದು, ಮಹದಾಯಿ ವಿಚಾರವಾಗಿ ಹೋರಾಟ ಮಾಡುತ್ತಿದ್ದೇವೆ. ಕರ್ನಾಟಕ, ಗೋವಾ ಹಾಗೂ ಕೇಂದ್ರದಲ್ಲಿ ಒಟ್ಟು ತ್ರಿಬಲ್ ಇಂಜಿನ್ ಸರ್ಕಾರ ಇದ್ದರೂ ನಮ್ಮ ಜನರಿಗೆ ನ್ಯಾಯ ಒದಗಿಸಿಕೊಡಲು ಆಗಿಲ್ಲ. ನಾವು ಈ ವಿಚಾರವಾಗಿ ಹೋರಾಟಕ್ಕೆ ಮುಂದಾದಾಗ ನಮಗೆ ಹೆಚ್ಚಿನ ಜನಬೆಂಬಲ ಸಿಗಲಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಅವರು ಟ್ವೀಟ್ ಮಾಡಿದ್ದಾರೆ. ಅದರಲ್ಲಿ ಪ್ರಕಟಿಸಿರುವ ಆದೇಶಕ್ಕೆ ನಿರ್ದಿಷ್ಟ ದಿನಾಂಕವೂ ಇಲ್ಲ. ಇದರಲ್ಲಿ ಅಂತಿಮವಾಗಿ ಗೋವಾ ಹಾಗೂ ಮಹರಾಷ್ಟ್ರದ ತಕರಾರಿನ ಅರ್ಜಿ ವಿಚಾರಣೆ ನ್ಯಾಯಾಲಯದಲ್ಲಿ ಏನಾಗುತ್ತದೆ ಎಂದು ನೋಡಿಕೊಂಡು ಯೋಜನೆ ಮಾಡುವುದಾಗಿ ಹೇಳಿದ್ದಾರೆ. ಇವರು ಕೇವಲ ರಾಜಕೀಯವಾಗಿ ಚಾಕಲೇಟ್ ನೀಡುವ ಪ್ರಯತ್ನ ಮಾಡುತ್ತಿದ್ದಾರೆ. ಹಿಂದೆ ಯಡಿಯೂರಪ್ಪನವರು ಒಂದೇ ದಿನದಲ್ಲಿ ಯೋಜನೆ ಆರಂಭಿಸುವುದಾಗಿ ಹೇಳಿದ್ದರು. ಇವರು ಎಷ್ಟು ಸುಳ್ಳು ಹೇಳುತ್ತಾರೆ. ಪ್ರಹ್ಲಾದ್ ಜೋಷಿ ಅವರು ಉನ್ನತ ಸ್ಥಾನದಲ್ಲಿದ್ದು, ಇಷ್ಟೋಂದು ಸುಳ್ಳು ಯಾಕೆ ಹೇಳುತ್ತಿದ್ದಾರೆ? ಈ ಭಾಗದ ಜನರು ದಡ್ಡರಾ? ನಮ್ಮ ಹೋರಾಟ ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ. ಜನರ ಧ್ವನಿ, ಆಕ್ರೋಶ ನಮ್ಮ ಕಾರ್ಯಕ್ರಮದಲ್ಲಿ ವ್ಯಕ್ತವಾಗಲಿದೆ. ಸರ್ಕಾರ ನಿಮ್ಮನ್ನು ತಪ್ಪು ದಾರಿಗೆ ಎಳೆಯುವ ಪ್ರಯತ್ನ ಮಾಡುತ್ತಿದೆ. ಇಂದು ವಿಜಯಪುರದಲ್ಲಿ ಕೃಷ್ಣಾ ಮೇಲ್ದಂಡೆ 3ನೇ ಹಂತದ ಯೋಜನೆ ವಿಚಾರವಾಗಿ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ. ನಮ್ಮ ಪಕ್ಷದ ಎಲ್ಲ ನಾಯಕರು ಈಗ ಅಲ್ಲಿಗೆ ಪ್ರಯಾಣ ಬೆಳೆಸುತ್ತಿದ್ದೇವೆ. ಬಿಜೆಪಿ ಸರ್ಕಾರ ಗೋವಾ ಮತ್ತು ಮಹಾರಾಷ್ಟ್ರದ ತಕರಾರನ್ನು ತೆರವುಗೊಳಿಸಿ ಈ ಯೋಜನೆ ಮಾಡಲಿ. ಅದು ಯಾಕೆ ಸಾಧ್ಯವಾಗುತ್ತಿಲ್ಲ? ಗೋವಾದಲ್ಲಿ 1 ಸೀಟು ಮುಖ್ಯವೋ ಇಲ್ಲಿನ 27 ಕ್ಷೇತ್ರಗಳು ಮುಖ್ಯವೋ? ಇದು ಕರ್ನಾಟಕ ಜನತೆಗೆ ಆಗುತ್ತಿರುವ ಅನ್ಯಾಯದ ಪರಮಾವಧಿ. ಇದೆಲ್ಲವೂ ಜನರ ಕಣ್ಣೊರೆಸುವ, ತಪ್ಪು ದಾರಿಗೆ ಎಳೆಯುವ ತಂತ್ರವಾಗಿದೆ’ ಎಂದು ತಿಳಿಸಿದರು.

ನೀವು ಹಿಂದೆ ಜಲಸಂಪನ್ಮೂಲ ಸಚಿವರಾಗಿದ್ದು, ಡಿಪಿಆರ್ ನಲ್ಲಿ ಈಗ ಏನು ಬದಲಾವಣೆ ಆಗಿದೆ ಎಂದು ಕೇಳಿದಾಗ, ‘ನಾನು ಅನೇಕ ಸಭೆ ಮಾಡಿದ್ದೆ. ಇವರು ಇಳಿಜಾರಿರುವ ಕಡೆಗಳಲ್ಲಿ ನೀರನ್ನು ಮೇಲೆತ್ತುವುದಾಗಿ ಹೇಳಿದ್ದಾರೆ. ನೀರು ಸಂಪರ್ಕ ವಿಚಾರ ಒಂದು ಬಿಟ್ಟು, ಉಳಿದ ಕೆಲಸಗಳನ್ನು ಮಾಡಬಹುದಲ್ಲವೇ? ನಿಮ್ಮ ಕೆಲಸ ನೀವು ಮಾಡಿ. ನಿಮ್ಮ ಸರ್ಕಾರದ ಮೇಲೆ ಒತ್ತಡ ಹಾಕಿ ರಾಜ್ಯ ಜನರ ಹಿತ ಕಾಪಾಡಿ’ ಎಂದು ಹೇಳಿದರು.

ಮೀಸಲಾತಿ ವಿಚಾರವಾಗಿ ಕೇಳಿದಾಗ, ‘ಮೀಸಲಾತಿಯಲ್ಲಿ ಯಾವ ಸಮುದಾಯವೂ 2ಸಿ ಹಾಗೂ 2ಡಿಯನ್ನು ಕೇಳಿಲ್ಲ. ಸರ್ವರಿಗೂ ಸಮಬಾಳು, ಸಮಪಾಲು ಎಂಬ ನೀತಿ ಮೇಲೆ ಮೀಸಲಾತಿ ಕೇಳಿದ್ದಾರೆ. ನಾವು 2ಎ ವರ್ಗದವರಿಗೆ, ಪರಿಶಿಷ್ಟರಿಗೆ ಅನ್ಯಾಯ ಮಾಡಲು ಬಯಸುವುದಿಲ್ಲ. ಅವರವರ ಹಕ್ಕನ್ನು ಎಲ್ಲರೂ ಕೇಳಿದ್ದಾರೆ. ಈ ವಿಚಾರ ಶೇ.50 ಕ್ಕಿಂತ ಹೆಚ್ಚಾಗಬೇಕು ಎಂದು ತೀರ್ಮಾನವಾದ ಮೇಲೆಯೇ ಈಗ ಶೇ.10 ರ ಆರ್ಥಿಕ ದುರ್ಬಲರ ವರ್ಗದಲ್ಲಿ ಬದಲಾವಣೆ ಮಾಡಲು ಮುಂದಾಗಿದ್ದಾರೆ. ಮೂರು ತಿಂಗಳ ನಂತರ ಇದರ ಘೋಷಣೆ ಮಾಡುತ್ತಾರಂತೆ. ಮೂರು ತಿಂಗಳ ನಂತರ ಇವರಿಂದ ಘೋಷಣೆ ಮಾಡಲು ಸಾಧ್ಯವೇ? ಕೇವಲ ಕಣ್ಣೊರೆಸುವ ತಂತ್ರ ಮಾಡುತ್ತಿದ್ದಾರೆ. ನಾವುಗಳು ಯಾರೂ ಭಿಕ್ಷುಕರಲ್ಲ, ನಮ್ಮ ಹೋರಾಟ ಮುಂದುವರಿಯಲಿದೆ. ಜನರಿಗೆ ನ್ಯಾಯ ಒದಗಿಸಿ ಎಲ್ಲ ಸಮುದಾಯಗಳ ಬೇಡಿಕೆಗೂ ನಾವು ಬೆಂಬಲ ನೀಡುತ್ತೇವೆ. ಇಂದು ಸಂಜೆ ನಮ್ಮ ಮುಖಂಡರ ಜತೆ ಚರ್ಚೆ ಮಾಡಿ ಪಕ್ಷದ ಅಚಲ ನಿರ್ಧಾರವನ್ನು ತಿಳಿಸುತ್ತೇವೆ’ ಎಂದು ಹೇಳಿದರು.
[30/12, 3:03 PM] Kpcc official: ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳಿಗೆ ಶುಕ್ರವಾರ ನೀಡಿದ ಪ್ರತಿಕ್ರಿಯೆ...
[30/12, 3:50 PM] Kpcc official: *ಮಾಜಿ ಸಚಿವರಾದ ಪ್ರೊ. ಬಿ.ಕೆ ಚಂದ್ರಶೇಖರ್ ಅವರ ಮಾಧ್ಯಮಗೋಷ್ಠಿ ಮುಖ್ಯಾಂಶಗಳು*

ಕೇಂದ್ರ ಸರ್ಕಾರ ನ್ಯಾಯಾಂಗ ವ್ಯವಸ್ಥೆ ಮೇಲೆ ಸಂಪೂರ್ಣವಾಗಿ ದಾಳಿ ಮಾಡುವ ಕೆಲಸ ಮಾಡುತ್ತಿದೆ. ಆರಂಭದಲ್ಲಿ ಕಾನೂನು ಸಚಿವ ಕಿರಣ್ ರಿಜಿಜು ಅವರು ಸಾರ್ವಜನಿಕವಾಗಿ ಸುಪ್ರೀಂ ಕೋರ್ಟ್ ಹೇಗೆ ಕೆಲಸ ಮಾಡಬೇಕು ಎಂದು ಬುದ್ಧಿವಾದ ಹೇಳಿದರು. ಸರ್ಕಾರದಲ್ಲಿ ನ್ಯಾಯಾಂಗದ ಮೇಲೆ ಹೇಗೆ ದಾಳಿ ಮಾಡಬೇಕು ಎಂದು ಪೂರ್ವ ತಯಾರಿ ಮಾಡಿಕೊಂಡು ಈ ದಾಳಿ ಮಾಡುತ್ತಿದ್ದಾರೆ.

ಕಿರಣ್ ರಿಜಿಜು ಅವರ ನಂತರ ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿದ್ದ ಜಗದೀಪ್ ಧಂಕರ್ ಅವರು ರಾಜ್ಯಸಭೆಯ ಮೊದಲ ಭಾಷಣದಲ್ಲಿ ನ್ಯಾಯಾಂಗ ವ್ಯವಸ್ಥೆ ಮೇಲೆ ದಾಳಿ ನಡೆಸಿದರು. ನಮ್ಮ ಅಜೆಂಡಾಕ್ಕೆ ನ್ಯಾಯಾಂಗ ವ್ಯವಸ್ಥೆಯಿಂದ ಮುಜುಗರವಾಗುತ್ತಿದೆ ಎಂದಿದ್ದಾರೆ. ಹಿಂದುತ್ವದ ಪ್ರತಿಪಾದನೆಗೆ ನ್ಯಾಯಾಂಗ ಅಡ್ಡಬರುತ್ತಿದೆ ಎಂದು ಅವರ ಅಧಿಕಾರವನ್ನು ಕಡಿಮೆ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ.

ಕಿರಣ್ ರಿಜಿಜು ಅವರು ಕೋಟ್ಯಂತರ ಪ್ರಕರಣಗಳ ಇತ್ಯರ್ಥ ಬಾಕಿ ಉಳಿದಿವೆ. ಬಹಳಷ್ಟು ನ್ಯಾಯಾಧೀಶರು ಹೆಚ್ಚಿನ ರಜೆ ಹಾಕುತ್ತಿದ್ದಾರೆ ಎಂದು ಹೇಳಿದ್ದಾರೆ. ಬಾಕಿ ಉಳಿದಿರುವ ಪ್ರಕರಣಗಳ ಇತ್ಯರ್ಥಕ್ಕೆ ಸಾರ್ವಜನಿಕ ಹಿತಾಸಕ್ತಿ, ಎನ್ ಜಿಓ ವಿರುದ್ಧ ಪತ್ರಕರ್ತರ ವಿರುದ್ಧದ ಪ್ರಕರಣಗಳನ್ನು ನಿಲ್ಲಿಸಬೇಕು. 

ಸುಪ್ರೀಂ ಕೋರ್ಟ್ ಕಳೆದ ವರ್ಷ ಹೈಕೋರ್ಟ್ ನ್ಯಾಯಾಧೀಶರ ನೇಮಕಾತಿಗೆ 106 ಹೆಸರುಗಳನ್ನು ಕಳುಹಿಸಿತ್ತು. ಆದರೆ ಕೇಂದ್ರ ಸರ್ಕಾರ ನೇಮಕ ಮಾಡಿದ್ದು ಕೇವಲ 7 ನ್ಯಾಯಾಧೀಶರ ಹೆಸರು ಮಾತ್ರ. ಸುಪ್ರೀಂ ಕೋರ್ಟ್ ನಲ್ಲಿರುವ 34 ಹುದ್ದೆಗಳ ಪೈಕಿ 6 ಹುದ್ದೆ ಭರ್ತಿ ಮಾಡುತ್ತಿಲ್ಲ. ಹೈಕೋರ್ಟ್ ನಲ್ಲಿ 1108 ಹುದ್ದೆಗಳ ಪೈಕಿ 338 ಖಾಲಿ ಇವೆ. ಜಿಲ್ಲಾ ಹಾಗೂ ತಾಲೂಕು ನ್ಯಾಯಾಲಯಗಳಲ್ಲಿ 245220 ನ್ಯಾಯಾಧೀಶರ ಹುದ್ದೆಯಲ್ಲಿ 5200 ಹುದ್ದೆಗಳು ಖಾಲಿ ಇವೆ. ಇಷ್ಟಾದರೂ ಕಿರಣ್ ರಿಜಿಜು ಅವರು 4.84 ಕೋಟಿ ಪ್ರಕರಣಗಳು ಬಾಕಿ ಇವೆ ಎಂದು ಹೇಳುತ್ತಾರೆ. ಸುಪ್ರೀಂ ಕೋರ್ಟ ನಲ್ಲಿ 69 ಸಾವಿರ ಪ್ರಕರಣಗಳು, 59 ಲಕ್ಷ ಪ್ರಕರಣ ಹೈಕೋರ್ಟ್ ಗಳಲ್ಲಿ ಬಾಕಿ ಇವೆ. ಜಿಲ್ಲಾ ಹಾಗೂ ತಾಲೂಕು ಮಟ್ಟದ ನ್ಯಾಯಾಲಯಗಳಲ್ಲಿ 4.5 ಕೋಟಿ ಪ್ರಕರಣಗಳು ಬಾಕಿ ಇವೆ.

ಸ್ಥಳೀಯ ನ್ಯಾಯಾಲಯಗಳ ನ್ಯಾಯಾಧೀಶರ ನೇಮಕಾತಿಯನ್ನು ರಾಜ್ಯ ಸರ್ಕಾರ ಮಾಡಬೇಕೆ ಹೊರತು ಸುಪ್ರೀಂ ಕೋರ್ಟ್ ಕಕೊಲಿಜಿಯಂ ವ್ಯಾಪ್ತಿಗೆ ಬರುವುದಿಲ್ಲ. ಸುಪ್ರೀಂ ಕೋರ್ಟಿಗೂ ಇದಕ್ಕೂ ಸಂಬಂಧವಿಲ್ಲ. ಇದನ್ನು ಆಲೋಚನೆ ಮಾಡದೇ ಕಿರಣ್ ರಿಜಿಜು ಅವರು ಈ ರೀತಿ ಹೇಳಿಕೆ ನೀಡಿದ್ದಾರೆ. ಇನ್ನು ದೇಶದಲ್ಲಿ ಕೇಂದ್ರ ಸರ್ಕಾರ ಹಾಗೂ ಅದರ ಇಲಾಖೆಗಳು ಹೂಡಿರುವ ಪ್ರಕರಣಗಳ ಸಂಖ್ಯೆ 6 ಲಕ್ಷ ಪ್ರಕರಣಗಳು ಬಾಕಿ ಇವೆ.

ಬಿಜೆಪಿ ಅವರು ಎಲ್ಲ ಅಂಗಗಳ ಅಧಿಕಾರವನ್ನು ಕೇಂದ್ರೀಕರಿಸಲು ಈ ರೀತಿ ಪ್ರಯತ್ನ ಮಾಡುತ್ತಿದ್ದಾರೆ. ಉಪರಾಷ್ಟ್ರಪತಿಗಳು ಸಂಸತ್ತಿನ ಸರ್ವಾಧಿಕಾರದ ಬಗ್ಗೆ ಮಾತನಾಡುತ್ತಾರೆ. ಇದರ ಮೂಲಕ ಸಂಸತ್ತಿನ ಮುಂದೆ ಸುಪ್ರೀಂ ಕೋರ್ಟ ಸೇರಿದಂತೆ ಬೇರೆ ಯಾವುದೂ ನಿಲ್ಲಬಾರದು ಎಂಬ ಉದ್ದೇಶ ಅಡಗಿದೆ. ಆದರೆ ನಮ್ಮ ಸಂವಿಧಾನದಲ್ಲಿ ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗದ ಜವಾಬ್ದಾರಿಗಳನ್ನು ಸ್ಪಷ್ಟವಾಗಿ ವಿಭಾಗಿಸಲಾಗಿದೆ. ಆದರೆ ಇದನ್ನು ಮೀರಿ ಎಲ್ಲ ಅಂಗಗಳ ಮೇಲೆ ನಿಯಂತ್ರಣ ಸಾಧಿಸಲು ಪ್ರಯತ್ನಿಸಲಾಗುತ್ತಿದೆ. ಹೀಗೆ ಎಲ್ಲ ಅಧಿಕಾರಿಗಳು ಒಂದು ಕಡೆ ಕೇಂದ್ರೀಕೃತವಾದರೆ ಸರ್ವಾಧಿಕಾರಿ ವ್ಯವಸ್ಥೆ ಆಗುತ್ತದೆ.

ಸಿಬಿಐ ಕೇಂದ್ರ ಸರ್ಕಾರದ ಕೈಗೊಂಬೆಯಾಗಿದೆ. ಇಡಿ, ಚುನಾವಣಾ ಆಯೋಗ, ಮಾಹಿತಿ ಆಯೋಗ, ಆದಾಯ ತೆರಿಗೆ ಇಲಾಖೆಗಳು ಕೇಂದ್ರದ ನಿರ್ದೇಶನದಂತೆ ನಡೆಯುತ್ತಿವೆ. ಹೀಗಾಗಿ ಅವರಿಗೆ ಬೇಕಾದವರ ಮೇಲೆ ದಾಳಿ ಮಾಡಿಸುವಂತಾಗಿದೆ. ಅದೇ ಕಾರಣಕ್ಕೆ ಡಿ.ಕೆ. ಶಿವಕುಮಾರ್ ಅವರ ಮೇಲೆ ನಿರಂತರ ದಾಳಿ ಮಾಡಿಸುತ್ತಿದ್ದಾರೆ. ಎಲ್ಲಿ ಚುನಾವಣೆ ನಡೆಯುತ್ತದೆಯೋ ಅಲ್ಲಿ ಚುನಾವಣೆಗೆ ಒಂದು ತಿಂಗಳ ಮುಂಚೆ ದಾಳಿಗಳು ನಡೆಯುತ್ತವೆ. ಈ ಎಲ್ಲ ಆಯೋಗಗಳು ಬೆನ್ನೆಲುಬು ಇಲ್ಲದ ಸಂಸ್ಥೆಗಳಾಗಿವೆ. ಸರ್ಕಾರದ ವಿರುದ್ಧ ಯಾರೇ ಮಾತನಾಡಿದರೂ ಅವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸುತ್ತಾರೆ.
[30/12, 3:57 PM] Kpcc official: ಮೂಲ ಬಿಜೆಪಿ vs ವಲಸೆ ಬಿಜೆಪಿ ಎಂಬ ವೈಮಸ್ಸು ಜೋರಾಗಿದೆ!
ಆಪರೇಷನ್ ಕಮಲ ನಡೆಸಿದ ಬಿಜೆಪಿಗೆ ಅದೇ ಆಪರೇಷನ್ ಸಂಕಟ ತಂದಿಡುವುದು ನಿಶ್ಚಿತ.

ಬಿಜೆಪಿ ಹಾಳು ಮಾಡಿ ಹೋಗಲು ಬಂದಿದ್ದಾರೆ ಎಂದು ನಿಮ್ಮದೇ ಕಾರ್ಯಕರ್ತರು ಆರೋಪಿಸಿದ್ದು ಯಾರಿಗೆ @BJP4Karnataka?

ತಾವು ಬಳಸಿ ಬಿಸಾಡುವವರು ಎಂದು ಬಿಜೆಪಿ ಕಾರ್ಯಕರ್ತರಿಗೆ ತಿಳಿಯುತ್ತಿದೆ.
#BJPvsBJP
[30/12, 3:57 PM] Kpcc official: ಜನರ ಹಣ, ಸರ್ಕಾರಿ ಆಸ್ಪತ್ರೆ, ಆದರೆ ಪ್ರಚಾರ ಮಾತ್ರ ಬಿಜೆಪಿಯದ್ದು.

ಯಶವಂತಪುರದ ಕೋವಿಡ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಬಿಜೆಪಿ ಪ್ರಚಾರದ ಬೋರ್ಡ್ ಹಾಕಿದ್ದೇಕೆ @BSBommai ಅವರೇ?
ಸರ್ಕಾರಿ ಆಸ್ತಿಗಳೆಲ್ಲವನ್ನು ಬಿಜೆಪಿ ಕಬಳಿಸಿತೇ ಹೇಗೆ?
ಇದು ಅಧಿಕಾರ ದುರ್ಬಳಕೆ ಅಲ್ಲದೆ ಇನ್ನೇನು?

ನೈತಿಕತೆ ಇದ್ದರೆ ಕೂಡಲೇ ಇದನ್ನು ತೆರವುಗೊಳಿಸಿ.
[30/12, 4:13 PM] +91 99000 09614: ಉತ್ತರ ಕರ್ನಾಟಕ ಭಾಗದ ನೀರಾವರಿಗಾಗಿ 6 ​​ಲಕ್ಷ ಹೆಕ್ಟೇರ್‌ಗಳಿಗೆ 130 ಟಿಎಂಸಿ ಕೃಷ್ಣಾ ನದಿ ನೀರು ಹರಿಸಲು ಬಿಜಾಪುರದ ಇಂದಿನ “ಕೃಷ್ಣಾ ಜನಾಂದೋಲನ” ಸಮಾವೇಶದಲ್ಲಿ ನಿರ್ಣಯ ಕೈಗೊಂಡು ಉತ್ತರ ಕರ್ನಾಟಕದಲ್ಲಿ ಅಭಿವೃದ್ಧಿಯ ನವ ಶಕೆಯನ್ನು ಆರಂಭಿಸಲಿದ್ದೇವೆ. 

ಬಿಜೆಪಿ ದ್ರೋಹ ಮಾಡುವ ಕೆಲಸ ಮಾಡಿದರೆ, ಕಾಂಗ್ರೆಸ್ ನಾಡನ್ನು ಕಟ್ಟುವ ಕೆಲಸ ಮಾಡುತ್ತದೆ.
 


ಶ್ರೀ ಅಮಿತ್ ಶಾ ಅವರು ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸುವ ಧೈರ್ಯ ತೋರಬೇಕು;

1. ಕೃಷ್ಣಾಗೆ ರಾಷ್ಟ್ರೀಯ ಯೋಜನೆಯ ಸ್ಥಾನಮಾನ ಏಕೆ ನೀಡಲಿಲ್ಲ?

2. ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಭರವಸೆ ನೀಡಿದಂತೆ ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ನೀವು ಏಕೆ ಪ್ರಾರಂಭಿಸಲಿಲ್ಲ?

3. ಕೃಷ್ಣಾ ಮೇಲ್ದಂಡೆ ಯೋಜನೆಗೆ ಭರವಸೆ ನೀಡಿದ  ₹ 1.50 ಲಕ್ಷ ಕೋಟಿಯಲ್ಲಿ ಒಂದೇ ಒಂದು ನಯಾ ಪೈಸೆಯನ್ನು ಸಹ ಏಕೆ ವಿನಿಯೋಗಿಸಲಿಲ್ಲ?


ಶ್ರೀ.ರಣದೀಪ್ ಸಿಂಗ್ ಸುರ್ಜೆವಾಲಾ, ಎಐಸಿಸಿ ಪ್ರಧಾನ ಕಾರ್ಯದರ್ಶಿ - ಕರ್ನಾಟಕ ಉಸ್ತುವಾರಿ
[30/12, 4:59 PM] Kpcc official: ಚುನಾವಣೆಗಾಗಿ ಕರ್ನಾಟಕದ ಕಡೆ 'ದಂಡ'ಯಾತ್ರೆ ಕೈಗೊಂಡಿದ್ದಾರೆ ಬಿಜೆಪಿಯ ದೆಹಲಿ ನಾಯಕರು!

ಗಡಿ ವಿವಾದ ಬಗೆಹರಿಸಾಲಾಗದ ಅಮಿತ್ ಶಾ ಅವರ ಮಾತಿಗೆ ಮಹಾರಾಷ್ಟ್ರ ಕಿಮ್ಮತ್ತು ನೀಡುತ್ತಿಲ್ಲ.
ಈ ಕಿಮ್ಮತ್ತಿಲ್ಲದ ವ್ಯಕ್ತಿಗೆ ಕರ್ನಾಟಕದ ಜನತೆ ಬೆಲೆ ಕೊಡುವುದು ಅಸಂಭವ!

ಬಿಜೆಪಿ ಅದೆಷ್ಟೇ ಸರ್ಕಸ್ ನಡೆಸಿದರೂ ಜನರ ತಿರಸ್ಕಾರ ಎದುರಿಸುವುದು ನಿಶ್ಚಿತ.

Post a Comment

Previous Post Next Post