[25/01, 10:59 AM] Kpcc official: *ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಅವರ ಮಾಧ್ಯಮ ಪ್ರತಿಕ್ರಿಯೆ:*
ಕರ್ನಾಟಕದಲ್ಲಿ ಸಿಎಂ ಹುದ್ದೆಯ ಹೆಸರನ್ನು ಬದಲಿಸಬೇಕಿದೆ. ಮುಖ್ಯಮಂತ್ರಿಗಳು ಹಾಗೂ ಅವರ ಸಚಿವರು ರಾಜ್ಯದ ಯುವಕರ ಭವಿಷ್ಯವನ್ನು ಪ್ರತಿ ನಿತ್ಯ ಸರ್ವನಾಶ ಮಾಡುತ್ತಿದೆ.
ಬೊಮ್ಮಾಯಿ ಅವರು ರಾಜ್ಯದ ಯುವ ಜನರಿಗೆ 1 ಲಕ್ಷ ಉದ್ಯೋಗ ನೀಡುವ ಭರವಸೆ ನೀಡಿದ್ದರು. ಆದರೆ ಸರ್ಕಾರದ ಇಲಾಖೆಗಳಲ್ಲಿ ಒಟ್ಟು 2.50 ಲಕ್ಷ ಹುದ್ದೆಗಳು ಖಾಲಿ ಇದ್ದು, ಅವರ ಆಡಳಿತದಲ್ಲಿ 1300 ಕೈಗಾರಿಕಾ ಕೇಂದ್ರಗಳು ಬಂದ್ ಆಗಿದ್ದು ಇದರ ಪರಿಣಾಮವಾಗಿ 1 ಲಕ್ಷ ಉದ್ಯೋಗಗಳು ನಷ್ಟವಾಗಿವೆ.
ರಾಜ್ಯದಲ್ಲಿ ಸರ್ಕಾರಿ ಹುದ್ದೆಗಳನ್ನು ಹೆಚ್ಚು ಮೊತ್ತ ನೀಡಿದವರಿಗೆ ಹರಾಜು ಮಾಡಲಾಗುತ್ತಿದೆ. ಇದು ಸರ್ಕಾರಿ ಉದ್ಯೋಗಗಳ ಮಾರಾಟವಾಗುವ ಮಂಡಿ ಮಾರುಕಟ್ಟೆಯಂತಾಗಿದೆ. ಪಿಡಬ್ಲೂಡಿ AEE, JEE, ಸಹಾಯಕ ಪ್ರಾಧ್ಯಾಪಕರ ಹುದ್ದೆ, ಜಿಲ್ಲಾ ಸಹಕಾರಿ ಬ್ಯಾಂಕ್, ಕೆಪಿಟಿಸಿಎಲ್ ಹುದ್ದೆಗಳು ಸೇರಿದಂತೆ ಎಲ್ಲವೂ ಮಾರಾಟವಾಗುತ್ತಿದೆ. ಇನ್ನು ಆಘಾತಕಾರಿ ಸಂಗತಿ ಎಂದರೆ ಪಿಎಸ್ಐ ಹುದ್ದೆಗಳು ಕೂಡ ಮಾರಾಟವಾಗಿವೆ. ಆಮೂಲಕ ಕರ್ನಾಟಕದ ಯುವಕರು ತತ್ತರಿಸಿದ್ದಾರೆ.
54 ಸಾವಿರಕ್ಕೂ ಹೆಚ್ಚು ಯುವಕರು 545 ಹುದ್ದೆಗಳಿಗೆ ಪಿಎಸ್ಐ ಹುದ್ದೆಗಳಿಗೆ ಅರ್ಜಿ ಹಾಕಿದ್ದು, ಈ ನೇಮಕಾತಿಯಲ್ಲಿ ಪರೀಕ್ಷೆ ಕೇಂದ್ರದಲ್ಲಿ ಕ್ಯಾಮೆರಾ ಬಂದ್ ಮಾಡುವುದು, ಒಎಂ ಆರ್ ಉತ್ತರ ಪತ್ರಿಕೆ ತಿದ್ದುವುದು, ಬ್ಲೂಟೂತ್ ಸೇರಿದಂತೆ ಅಕ್ರಮ ಮಾಡಿ ಈ ಪ್ರತಿ ಹುದ್ದೆಯನ್ನು 80 ಲಕ್ಷಕ್ಕೂ ಹೆಚ್ಚು ಮೊತ್ತಕ್ಕೆ ಮಾರಾಟ ಮಾಡಲಾಗಿದೆ.
ಇದಕ್ಕೆ ಬಿಜೆಪಿ ಸರ್ಕಾರದ ಮುಖ್ಯಮಂತ್ರಿ ಬೊಮ್ಮಾಯಿ ಹಾಗೂ ಗೃಹಸಚಿವರು ಯಾವುದೇ ಅಕ್ರಮ ನಡೆದಿಲ್ಲ, ಎಲ್ಲವೂ ಸರಿಯಾಗಿದೆ ಎಂದರು. ಅಂತಿಮವಾಗಿ ಈ ಹಗರಣ ಬೆಳಕಿಗೆ ಬಂದ ನಂತರ ಸುಮಾರು 100 ಮಂದಿ ಬಂಧನವಾಗಿದೆ. ಬಿಜೆಪಿ ಶಾಸಕರು ಶಾಸಕರ ಭವನದಲ್ಲಿ ಈ ಹುದ್ದೆ ಮಾರಾಟಕ್ಕೆ ಮಧ್ಯವರ್ತಿಗಳಾಗಿದ್ದು, ಬಿಜೆಪಿ ಭ್ರಷ್ಟ ಜನತಾ ಪಕ್ಷವಾಗಿ ವಿಧಾನಸೌಧವನ್ನು ಹಣ ಪಡೆಯುವ ಭ್ರಷ್ಟಾಚಾರ ಕೇಂದ್ರವಾಗಿ ಮಾಡಿದ್ದಾರೆ.
ಈ ಹಗರಣದಲ್ಲಿ ಬಂಧನವಾಗಿದೆ ಎಡಿಜಿಪಿ ಅಧಿಕಾರಿ ನ್ಯಾಯಮೂರ್ತಿಗಳ ಮುಂದೆ ಹೇಳಿಕೆ ನೀಡಲು ಸಿದ್ಧರಾಗಿದ್ದು, ಸರ್ಕಾರ ಇದಕ್ಕೆ ಅವಕಾಶ ನೀಡುತ್ತಿಲ್ಲ. ಬಿಜೆಪಿ ಶಾಸಕ ಯತ್ನಾಳ್ ಅವರು ಈ ಹಗರಣದಲ್ಲಿ ಬಿಜೆಪಿಯ ಹಿರಿಯ ಸಚಿವರು, ನಾಯಕರು ಅವರ ಮಕ್ಕಳು ಈ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪ ಮಾಡಿದ್ದರೂ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ.
ಇತ್ತೀಚಿನ ಬೆಳವಣಿಗೆಗಳು ಇನ್ನಷ್ಟು ಆಘಾತಕಾರಿಯಾಗಿವೆ. ಈ ಹಗರಣದ ಪ್ರಮುಖ ಆರೋಪಿ ಆರ್.ಡಿ ಪಾಟೀಲ್ ಪೊಲೀಸರನ್ನು ದಬ್ಬಿ ಬಂಧನದಿಂದ ತಪ್ಪಿಸಿಕೊಂಡಿದ್ದ. ಈಗ ಆತ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದ.
ಈಗ ಒಂದು ಪತ್ರ ಬೆಳಕಿಗೆ ಬಂದಿದ್ದು, ಇದರಲ್ಲಿ ಪ್ರಕರಣದ ತನಿಖಾಧಿಕಾರಿ 3 ಕೋಟಿ ಲಂಚದ ಬೇಡಿಕೆ ಇಟ್ಟಿದ್ದು, ಅದರಲ್ಲಿ 76 ಕೋಟಿ ಹಣವನ್ನು ನೀಡಿದ್ದೇನೆ ಎಂದು ಹೇಳಿದ್ದಾನೆ. ಇಡೀ ಹಗರಣವನ್ನು ಮುಚ್ಚಲು ಈ ಬೇಡಿಕೆ ಇಡಲಾಗಿತ್ತು ಎಂದು ಲೋಕಾಯುಕ್ತಕ್ಕೆ ಬರೆದ ಪತ್ರದಲ್ಲಿ ಆರೋಪಿಸಲಾಗಿದೆ.
ಸಿಎಂ ಬೊಮ್ಮಾಯಿ ಹಾಗೂ ಗೃಹಸಚಿವ ಅರಾಗ ಜ್ಞಾನೇಂದ್ರ ಅವರ ಮೂಗಿನ ಕೆಳಗೆ ಏನೆಲ್ಲಾ ಆಗುತ್ತಿದೆ? ಮೊದಲು ಹಗರಣ ನಡೆದಿಲ್ಲ ಎಂದರು, ನಂತರ ತನಿಖೆಗೆ ನಿರಾಕರಿಸಿದರು, ಪ್ರತಿಭಟನೆ ನಡೆದ ನಂತರ 100 ಮಂದಿ ಬಂಧನವಾಯಿತು. ಶಾಸಕ ಈ ಹಗರಣದಲ್ಲಿ ಮಧ್ಯವರ್ತಿಯಾಗಿದ್ದಾರೆ, ಬಿಜೆಪಿ ಶಾಸಕರು ಬಿಜೆಪಿ ನಾಯಕರು ಮತ್ತು ಮಕ್ಕಳ ಮೇಲೆ ಆರೋಪ ಮಾಡುತ್ತಾರೆ. ಬಂಧಿತ ಅಧಿಕಾರಿ ನ್ಯಾಯಾಲಯದಲ್ಲಿ ಹೇಳಿಕೆ ನೀಡಲು ಸಿದ್ಧರಿದ್ದಾರೆ, ಇಷ್ಟೆಲ್ಲಾ ಆದರೂ ಸರ್ಕಾರ ಸರಿಯಾದ ತನಿಖೆ ನಡೆಸಲು ಮುಂದಾಗುತ್ತಿಲ್ಲ. ಸರ್ಕಾರ ಮತ್ತೆ ಹೊಸ ತನಿಖೆಯನ್ನು ನಡೆಸುತ್ತಿಲ್ಲ.
ರಾಜ್ಯದಲ್ಲಿ ಎಲ್ಲಾ ಸರ್ಕಾರಿ ಹುದ್ದೆ ಮಾರಾಟವಾಗುತ್ತಿವೆ. ಮಾಜಿ ಗೃಹಮಂತ್ರಿ ಹಾಗೂ ಹಾಲಿ ಮುಖ್ಯಮಂತ್ರಿ ಅವರ ನೆರಳಲ್ಲಿ ಇಷ್ಟೆಲ್ಲಾ ಅಕ್ರಮ ನಡೆಯುತ್ತಿವೆ. ಯತ್ನಾಳ್ ಅವರು ಆರೋಪಿಸಿರುವಂತೆ ಇದೆಲ್ಲದರ ಹಿಂದೆ ಪ್ರಬಲ ರಾಜಕೀಯ ನಾಯಕರ ಪ್ರಭಾವವಿದೆ. ಈ ಪ್ರಕರಣ ಮುಚ್ಚಲು, ಪ್ರಮುಖ ಅಪರಾಧಿಗಳ ರಕ್ಷಣೆ ಮಾಡುವ ಷಡ್ಯಂತ್ರ ನಡೆಯುತ್ತಿದೆ ಎಂದು ಈ ಎಲ್ಲಾ ಬೆಳವಣಿಗೆಗಳು ಸ್ಪಷ್ಟಪಡಿಸುತ್ತವೆ.
ಹೀಗಾಗಿ ರಾಜ್ಯ ಸರ್ಕಾರದಿಂದ ನ್ಯಾಯಯುತ ತನಿಖೆ ಅಸಾಧ್ಯ. ಈ ಪ್ರಕರಣದ ತನಿಖಾಧಿಕಾರಿಗಳನ್ನು ತನಿಖೆ ನಡೆಸುವ ಅಗತ್ಯವಿರುವ ಹಿನ್ನೆಲೆಯಲ್ಲಿ ರಾಜ್ಯ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ನಡೆಯಬೇಕು ಎಂದು ಕಾಂಗ್ರೆಸ್ ಆಗ್ರಹಿಸುತ್ತದೆ.
ಗೃಹಸಚಿವರು ಈ ಹುದ್ದೆಯಲ್ಲಿ ಮುಂದುವರಿಯಲು ಯಾವುದೇ ನೈತಿಕತೆ ಹೊಂದಿಲ್ಲ. ಹೀಗಾಗಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಅಥವಾ ಅವರನ್ನು ವಜಾಗೊಳಿಸಬೇಕು.
2011ರ ಕೆಪಿಎಸ್ ಸಿ ನೇಮಕಾತಿ ಅಕ್ರಮವನ್ನು ಈ ಸರ್ಕಾರ ಮುಚ್ಚಿಹಾಕಲು ಪ್ರಯತ್ನಿಸಿದೆ.
ಬಿಜೆಪಿ ಬಿ ಟೀಮ್ ವಿಚಾರವಾಗಿ ಕುಮಾರಸ್ವಾಮಿ ಅವರ ಹೇಳಿಕೆ ಬಗ್ಗೆ ಕೇಳಿದಾಗ, ' ಬಿಜೆಪಿ ಸರ್ಕಾರ ರೈತರ ವಿರುದ್ಧ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ತಂದಾಗ ಅದಕ್ಕೆ ಬೆಂಬಲ ನೀಡಿದವರು ಯಾರು? ಮೈಸೂರಿನಲ್ಲಿ ಬಿಜೆಪಿ ಮೊದಲ ಮೇಯರ್ ಆಯ್ಕೆ ಮಾಡಲು ಬೆಂಬಲ ನೀಡಿದವರು ಯಾರು? ಎಂಬ ಪ್ರಶ್ನೆಗೆ ಕುಮಾರಸ್ವಾಮಿ ಅವರು ಆತ್ಮಸಾಕ್ಷಿಯ ಉತ್ತರ ನೀಡಲಿ ' ಎಂದು ತಿರುಗೇಟು ನೀಡಿದರು.
[25/01, 12:31 PM] Kpcc official: ಪ್ರತಿ ಮತದಾರನಿಗೆ 6000 ರೂಪಾಯಿ ಲಂಚದ ಬಹಿರಂಗ ಆಮಿಷದ ಮೂಲಕ ರಾಜ್ಯದ 5 ಕೋಟಿ ಮತದಾರರನ್ನು 30 ಸಾವಿರ ಕೋಟಿ ಲಂಚದ ಮೂಲಕ ಖರೀದಿ ಮಾಡಲು ಸಂಚು ನಡೆಸಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹಾಗೂ ಬಿಜೆಪಿ ಸರಕಾರದ ಚುಕ್ಕಾಣಿ ಹಿಡಿದಿರುವ ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ ತನಿಖೆ ನಡೆಸುವಂತೆ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸರಿಗೆ ಬುಧವಾರ ದೂರು ನೀಡಿದ ನಂತರ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಠಾಣೆ ಬಳಿ ಮಾಧ್ಯಮಗಳ ಜತೆ ಮಾತನಾಡಿದ್ದು...
[25/01, 3:24 PM] Kpcc official: *ಮತದಾರರಿಗೆ ತಲಾ 6000 ರೂ. ಆಮಿಷ ಒಡ್ಡಿದ ರಮೇಶ್ ಜಾರಕಿಹೊಳಿ ವಿರುದ್ಧ ಕಾಂಗ್ರೆಸ್ ದೂರು*
*ಬೆಂಗಳೂರು:*
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಪ್ರತಿ ಮತದಾರರಿಗೆ 6 ಸಾವಿರ ರೂ. ನೀಡಿ ಮತ ಕೇಳಲಾಗುವುದು. ಎದುರಾಳಿ ಅಭ್ಯರ್ಥಿ ಎಷ್ಟೇ ದುಡ್ಡು ಖರ್ಚು ಮಾಡಿದರೂ ಅದಕ್ಕಿಂತ 10 ಕೋಟಿ ಹೆಚ್ಚಿನ ಹಣ ಖರ್ಚು ಮಾಡಲು ನಾವು ಸಿದ್ಧವಿದ್ದೇವೆ ಎಂಬ ಹೇಳಿಕೆ ನೀಡಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ನೇತೃತ್ವದ ನಿಯೋಗ ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ಬುಧವಾರ ದೂರು ದಾಖಲಿಸಿತು.
ರಮೇಶ್ ಜಾರಕಿಹೊಳಿ, ಪ್ರತಿ ಮತದಾರನಿಗೆ 6000 ರೂಪಾಯಿ ಲಂಚದ ಬಹಿರಂಗ ಆಮಿಷದ ಮೂಲಕ ರಾಜ್ಯದ 5 ಕೋಟಿ ಮತದಾರರನ್ನು 30 ಸಾವಿರ ಕೋಟಿ ಲಂಚದ ಮೂಲಕ ಖರೀದಿ ಮಾಡಲು ಸಂಚು ನಡೆಸಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಅವರಿಗೆ ಪ್ರೇರಣೆ ನೀಡಿರುವ ಸಿಎಂ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೇಲ್, ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡ ವಿರುದ್ಧ ತನಿಖೆ ನಡೆಸುವಂತೆ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸರಿಗೆ ಈ ನಿಯೋಗ ಬುಧವಾರ ದೂರು ದಾಖಲಿಸಿದೆ.
ದೂರು ದಾಖಲಿಸಿದ ನಂತರ ಮಾಧ್ಯಮಗಳ ಜತೆ ಮಾತನಾಡಿದ ಶಿವಕುಮಾರ್ ಅವರು ಹೇಳಿದ್ದಿಷ್ಟು;
‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬಿಜೆಪಿ ನಡೆಯನ್ನು ಎಲ್ಲರೂ ಗಮನಿಸುತ್ತಿದ್ದಾರೆ. ಮಾಜಿ ಮಂತ್ರಿಗಳು, ಬಿಜೆಪಿ ಶಾಸಕರು ನಾವು ಮುಂಬರುವ ಚುನಾವಣೆಯಲ್ಲಿ ಗೆಲ್ಲುವುದಿಲ್ಲ, ಆದರೂ ಸರ್ಕಾರ ರಚನೆ ಮಾಡುತ್ತೇವೆ ಎಂಬ ಸಂಕಲ್ಪ ಮಾಡಿಕೊಂಡು ಕೆಲಸ ಮಾಡುತ್ತಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಬಿಜೆಪಿಯ ಮೂರ್ನಾಲ್ಕು ಶಾಸಕರ ಹೇಳಿಕೆಗಳು, ರಾಜ್ಯದ ಮತದಾರರಿಗೆ ಆಮೀಷ ಒಡ್ಡುತ್ತಿರುವುದರ ಸ್ಪಷ್ಟ ಉದಾಹರಣೆ ಆಗಿವೆ. ಬಿಜೆಪಿ ಸರ್ಕಾರ 40% ಕಮಿಷನ್ ಮೂಲಕ ಸಾವಿರಾರು ಕೋಟಿ ಹಣ ಸಂಗ್ರಹಿಸಿದೆ. ಇತ್ತೀಚೆಗೆ ಮಾಜಿ ಮಂತ್ರಿ ರಮೇಶ್ ಜಾರಕಿಹೊಳಿ ಅವರು ಪ್ರತಿ ಮತಕ್ಕೆ 6 ಸಾವಿರ ನೀಡುತ್ತೇವೆ ಎಂದು ಹೇಳಿದ್ದಾರೆ. ಯಾವುದೇ ಎದುರಾಳಿ ಅಭ್ಯರ್ಥಿ ಎಷ್ಟೇ ಖರ್ಚು ಮಾಡಿದರೂ ಅದಕ್ಕಿಂತ 10ಕೋಟಿ ಹೆಚ್ಚಿನ ಮೊತ್ತವನ್ನು ಖರ್ಚು ಮಾಡುವುದಾಗಿ ಅವರು ಹೇಳಿರುವ ವಿಡಿಯೋ, ಮಾಧ್ಯಮ ವರದಿ ದಾಖಲೆಗಳಿವೆ.
ಈ ದಾಖಲೆಗಳ ಸಮೇತ ನಾನು, ಸಿದ್ದರಾಮಯ್ಯ ಹಾಗೂ ಪಕ್ಷದ ಇತರ ನಾಯಕರೆಲ್ಲರೂ ಸೇರಿ ಹೈಗ್ರೌಂಡ್ಸ್ ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇವೆ. ಬಿಜೆಪಿಯವರು ರಾಜ್ಯದ 5 ಕೋಟಿ ಮತದಾರರಿಗೆ ಪ್ರತಿಯೊಬ್ಬರಿಗೆ 6 ಸಾವಿರ ರೂ.ನಂತೆ ಒಟ್ಟು 30 ಸಾವಿರ ಕೋಟಿ ಹಣ ಹಂಚಲು ತಯಾರಿ ಮಾಡಿಕೊಂಡಿದ್ದಾರೆ. ಹೀಗಾಗಿ ಮತದಾರರಿಗೆ ಆಮಿಷ ಒಡ್ಡುತ್ತಿರುವ ಬಿಜೆಪಿ ವಿರುದ್ಧ ದಾಖಲೆ ಸಮೇತ ಐಪಿಸಿ ಸೆಕ್ಷನ್ 171ಬಿ, 506, ಜನಪ್ರತಿನಿಧಿ ಕಾಯ್ದೆ 123 ಪ್ರಕಾರ ದೂರು ದಾಖಲಿಸಿದ್ದೇವೆ.
ಅಧಿಕಾರಿಗಳು ಕೂಡಲೇ ಎಫ್ಐಆರ್ ದಾಖಲಿಸಬೇಕು. ಈ ದೇಶದ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು. ನಾವು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ, ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ರಮೇಶ್ ಜಾರಕಿಹೊಳಿ ಅವರ ವಿರುದ್ಧ ದೂರು ನೀಡಿದ್ದೇವೆ. ಅವರ ಪಕ್ಷದ ನಾಯಕರು ಇಂತಹ ಹೇಳಿಕೆ ಕೊಟ್ಟರು ಯಾವುದೇ ಶಿಸ್ತಿನ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ನಾವು ಆ ಪಕ್ಷದ ಮುಖ್ಯಸ್ಥರ ಮೇಲೂ ದೂರು ನೀಡುತ್ತಿದ್ದೇವೆ. ಮಾಜಿ ಸಚಿವರ ಹೇಳಿಕೆ ತಿರಸ್ಕರಿಸಿದ ಮಾತ್ರಕ್ಕೆ ಎಲ್ಲವೂ ಸರಿಯಾಗುವುದಿಲ್ಲ. ಅಗತ್ಯ ಕ್ರಮ ಆಗಲೇಬೇಕು, ರಮೇಶ್ ಜಾರಕಿಹೊಳಿ ಅವರ ಬಂಧನವಾಗಬೇಕು ಎಂಬುದು ನಮ್ಮ ಆಗ್ರಹ.
ನಾವು ರಾಜ್ಯ ಪ್ರವಾಸದಲ್ಲಿದ್ದ ಕಾರಣ ಕಳೆದ ಎರಡು ಮೂರು ದಿನಗಳಿಂದ ಬಂದು ದೂರು ನೀಡಲು ಸಾಧ್ಯವಾಗಲಿಲ್ಲ. ಅಲ್ಲದೆ ಇಂದು ರಾಷ್ಟ್ರೀಯ ಮತದಾರರ ದಿನ. ಈ ಮತದಾನದ ಹಕ್ಕಿಗೆ ಅದರದೇ ಆದ ಗೌರವ ಇದೆ. ಈ ಪವಿತ್ರವಾದ ಹಕ್ಕನ್ನು ಉಳಿಸಲು ಈ ದಿನ ಬಿಜೆಪಿಯ ಷಡ್ಯಂತ್ರದ ವಿರುದ್ಧ ದೂರು ನೀಡಿದ್ದೇವೆ. ನಾಳೆ ನಮ್ಮ ನಾಯಕರ ಸಭೆ ಇದ್ದು, ಪ್ರತಿ ಕ್ಷೇತ್ರದಲ್ಲಿ ನಿಗಾ ವಹಿಸಲು ಕಾರ್ಯಕರ್ತರಿಗೆ ತಿಳಿಸಲಾಗುವುದು.
*ಪಿಎಸ್ಐ ನೇಮಕಾತಿ ಅಕ್ರಮ*
ಪಿಎಸ್ಐ ನೇಮಕಾತಿ ಹಗರಣದ ಪ್ರಮುಖ ಆರೋಪಿ ಆರ್.ಡಿ. ಪಾಟೀಲ ಅವರು, ತನಿಖಾಧಿಕಾರಿಯು ಈ ಪ್ರಕರಣವನ್ನು ಮುಚ್ಚಿಹಾಕಲು 3 ಕೋಟಿ ಲಂಚ ಕೇಳಿದ್ದು, ಅದರಲ್ಲಿ 76 ಲಕ್ಷ ರೂ. ನೀಡಲಾಗಿದೆ. ಉಳಿದ 2.24 ಕೋಟಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಪ್ರಕರಣದ ಹಿಂದೆ ಕೇವಲ ಎಸ್ಐ ಅಥವಾ ಅಧಿಕಾರಿಗಳು ಮಾತ್ರವಲ್ಲ, ಇಡೀ ವ್ಯವಸ್ಥೆಯೇ ಭಾಗಿಯಾಗಿದೆ. ಈ ನೇಮಕಾತಿಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ ಎಂದ ಅರಗ ಜ್ಞಾನೇಂದ್ರ, ಈಗ ಪ್ರಮುಖ ಆರೋಪಿಯೇ ಪ್ರಕರಣದ ತನಿಖಾಧಿಕಾರಿ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ. ಯಾರೆಲ್ಲಾ ಆರೋಪಿಗಳನ್ನು ಮುಕ್ತಗೊಳಿಸಲು ಎಷ್ಟು ವಸೂಲಿ ಮಾಡಲಾಗಿದೆ ಎಂಬುದರ ಬಗ್ಗೆ ಲೋಕಾಯುಕ್ತದಿಂದ ವಿಸ್ತೃತ ತನಿಖೆಯಾಗಬೇಕು. ಬೆಂಗಳೂರಿನಲ್ಲಿ ಅಭ್ಯರ್ಥಿಗಳಿಂದ ಹಣಪಡೆದು ನಂತರ ಅವುಗಳನ್ನು ಹಿಂದಿರುಗಿಸುವುದಾಗಿ ಕೆಲವು ನಾಯಕರು ಒಪ್ಪಿಕೊಂಡಿದ್ದಾರೆ. ಈ ಪ್ರಕರಣದಲ್ಲಿ ಕೆಲವರು ಮಂತ್ರಿಗಳ ಹೆಸರು ಹೇಳಿದರೆ, ಮತ್ತೆ ಕೆಲವರು ಗೃಹ ಸಚಿವರು, ಮುಖ್ಯಮಂತ್ರಿಗಳು, ಡಿಜಿಪಿ ಅವರ ಹೆಸರು ಹೇಳುತ್ತಿದ್ದಾರೆ. ಬಂಧನವಾಗಿರುವ ಐಪಿಎಸ್ ಅಧಿಕಾರಿಗೆ ನ್ಯಾಯಾಲಯದ ಮುಂದೆ ಹೇಳಿಕೆ ನೀಡಲು ಅವಕಾಶ ನೀಡುತ್ತಿಲ್ಲ.
ಇನ್ನು ಗೃಹಲಕ್ಷ್ಮೀ ಯೋಜನೆ ಕೂಡ ಆಮಿಷ ಎಂಬ ಮುಖ್ಯಮಂತ್ರಿಗಳ ಆರೋಪದ ಬಗ್ಗೆ ಕೇಳಿದಾಗ, ‘ನಾವು ಏನೇ ಮಾತನಾಡಿದ್ದರೂ ಕಾನೂನಿನ ಚೌಕಟ್ಟಿನಲ್ಲಿ ಮಾತನಾಡಿದ್ದೇವೆ’ ಎಂದರು.
ಭ್ರಷ್ಟಾಚಾರಕ್ಕೆ ಜನ್ಮ ಕೊಟ್ಟಿದ್ದು ಕಾಂಗ್ರೆಸ್ ಎಂಬ ಸಿಎಂ ಹೇಳಿಕೆ ಬಗ್ಗೆ ಕೇಳಿದಾಗ, ‘ಭ್ರಷ್ಟಾಚಾರದ ಪಿತಾಮಹಾ ಬಸವರಾಜ ಬೊಮ್ಮಾಯಿ ಹಾಗೂ ಅವರ ತಂಡ’ ಎಂದರು.
*ಇದಕ್ಕೂ ಮುನ್ನ ಕೆಪಿಸಿಸಿ ಕಚೇರಿ ಬಳಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು ಹೇಳಿದ್ದಿಷ್ಟು;*
ಬಿಜೆಪಿ ಸರ್ಕಾರ 40% ಕಮಿಷನ್ ಮೂಲಕ ಸಂಗ್ರಹಿಸಿರುವ ಸಾವಿರಾರು ಕೋಟಿ ಹಣವನ್ನು ಮುಂಬರುವ ಚುನಾವಣೆಯಲ್ಲಿ ಹಂಚಲು ಮುಂದಾಗಿದೆ. ಆದರೂ ಐಟಿ, ಇಡಿ ತನಿಖಾ ಸಂಸ್ಥೆಗಳು ಸುಮ್ಮನೆ ಕೂತಿವೆ. ನಾನು ನನ್ನ ಸ್ವಂತ ಹಣದಲ್ಲಿ ಸಂಸದರಿಗೆ ಸಣ್ಣ ಉಡುಗೊರೆ ನೀಡಿದ್ದಕ್ಕೆ ಆದಾಯ ತೆರಿಗೆ ಅಧಿಕಾರಿಗಳು ನನಗೆ ನೋಟೀಸ್ ಜಾರಿ ಮಾಡಿದ್ದಾರೆ. ಆದರೆ ಈ ವಿಚಾರದಲ್ಲಿ ಅವರು ಮೌನವಾಗಿರುವುದೇಕೆ?
ಬಿಜೆಪಿ ಚುನಾವಣೆ ಗೆಲ್ಲದಿದ್ದರೂ ಸರ್ಕಾರ ರಚಿಸುತ್ತೇವೆ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದಾರೆ. ಆ ಮೂಲಕ ಹಣಬಲದ ಮೂಲದ ಚುನಾವಣೆಯನ್ನು ನಿಯಂತ್ರಿಸಲು ಬಿಜೆಪಿ ಮುಂದಾಗಿದೆ.
[25/01, 4:36 PM] Kpcc official: *ಎಐಸಿಸಿ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥೆ ಸುಪ್ರಿಯಾ ಶ್ರಿನಾಟೆ ಅವರ ಮಾಧ್ಯಮಗೋಷ್ಠಿ ಮುಖ್ಯಾಂಶಗಳು*
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಭಾರತ ಜೋಡೋ ಯಾತ್ರೆ ಕಾಶ್ಮೀರವನ್ನು ತಲುಪಿದ್ದು, ಇದುವರೆಗೂ ಸುಮಾರು 3900 ಕಿ.ಮೀ ದೂರ ಈ ಯಾತ್ರೆಯಲ್ಲಿ ಹೆಜ್ಜೆ ಹಾಕಿದ್ದಾರೆ. ಯಾತ್ರೆ ತನ್ನ ಅಂತಿಮ ಘಟ್ಟ ತಲುಪಿದ್ದು, ಈ ಯಾತ್ರೆ ಸಮಾಜದಲ್ಲಿನ ಕೋಮು ಸೌಹಾರ್ದತೆ ಕಾಪಾಡುವುದು, ನಿರುದ್ಯೋಗ, ಬೆಲೆ ಏರಿಕೆ, ಆರ್ಥಿಕ ಅಸಮಾನತೆ ವಿಚಾರವಾಗಿ ಧ್ವನಿ ಎತ್ತುವ ಉದ್ದೇಶವನ್ನು ಪೂರ್ಣಗೊಳಿಸಿದೆ.
ಬಿಜೆಪಿ ಸರ್ಕಾರ ಬಡತನ, ನಿರುದ್ಯೋಗ ವಿಚಾರವಾಗಿ ಮಾತನಾಡಲು ತಯಾರಿಲ್ಲ. ಹೀಗಾಗಿ ಈ ವಿಚಾರಗಳ ಬಗ್ಗೆ ಧ್ವನಿ ಎತ್ತಲು ಕಾಂಗ್ರೆಸ್ ಪಕ್ಷ ಈ ಯಾತ್ರೆ ನಡೆಸಿದೆ. ಆಮೂಲಕ ಸರ್ಕಾರಕ್ಕೆ ದೇಶದ ಸಮಸ್ಯೆಗಳ ಬಗ್ಗೆ ಪ್ರಶ್ನೆ ಎತ್ತಲಾಗಿದೆ.
ಈ ಭಾರತ ಜೋಡೋ ಯಾತ್ರೆ ಶಸ್ವಿಯಾಗಿ ಸಾಗಿದ್ದು, ಸಮಾಜದ ಎಲ್ಲ ವರ್ಗದ, ಎಲ್ಲಾ ಕ್ಷೇತ್ರದ ಜನರು ಈ ಯಾತ್ರೆಯಲ್ಲಿ ಭಾಗವಹಿಸಿ ಬೆಂಬಲ ಸೂಚಿಸಿದ್ದಾರೆ. ಈ ಯಾತ್ರೆಯಲ್ಲಿ ಶ್ರೀಮಂತರು, ಬಡವರು, ಜಾತಿ, ಧರ್ಮ, ಭಾಷೆ, ಲಿಂಗ ತಾರತಮ್ಯವಿಲ್ಲದೇ ನಡೆದಿದೆ. ಒಟ್ಟು 12 ರಾಜ್ಯಗಳು 2 ಕೇಂದ್ರಾಡಳಿತ ಪ್ರದೇಶಗಳಲ್ಲಿ ಈ ಯಾತ್ರೆ ಸಾಗಿದೆ.
ರಾಹುಲ್ ಗಾಂಧಿ ಅವರು ದ್ವೇಷದ ಮಾರುಕಟ್ಟೆಯಲ್ಲಿ ಪ್ರೀತಿಯ ಅಂಗಡಿ ತೆರೆಯುವುದಾಗಿ ಹೇಳಿದ್ದು, ಯಾತ್ರೆ ಸಂದರ್ಭದಲ್ಲಿ ಒಂದು ರಾಜ್ಯದಲ್ಲಿನ ಹವಾಗುಣಗಳ ಮಧ್ಯೆ, ಬಿರು ಬಿಸಿಲು, ಮಳೆ, ಚಳಿ ಲೆಕ್ಕಿಸದೇ ಎಲ್ಲ ವಯೋಮಾನದ ಜನರು ರಾಹುಲ್ ಗಾಂಧಿ ಅವರ ಜತೆ ಹೆಜ್ಜೆ ಹಾಕಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಇದು ನಮ್ಮ ಯಶಸ್ಸು.
ಮಹಾತ್ಮಾ ಗಾಂಧಿ ಅವರು ಪುಣ್ಯ ಸ್ಮರಣೆ ದಿನದಂದು ನಾವು ಈ ಯಾತ್ರೆ ಮುಕ್ತಾಯ ಮಾಡುತ್ತಿದ್, ಇದಾದನಂತರ ಈ ಯಾತ್ರೆಯ ಸಂದೇಶಗಳಾದ ಭ್ರಾತೃತ್ವ, ಪ್ರೀತಿ, ಶಾಂತಿ, ನಿರುದ್ಯೋಗದ ವಿರುದ್ಧ ಭಾರತ, ಬಡತನದ ವಿರುದ್ಧ ಭಾರತ ವಿಚಾರಗಳನ್ನು ಜನರಿಗೆ ತಲುಪಿಸಲು ಕೈ ಜತೆ ಕೈ ಜೋಡಿಸಿ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ.
ಈ ಕಾರ್ಯಕ್ರಮ ನಾಳೆಯಿಂದ ಆರಂಭವಾಗಲಿದ್ದು, ಮಾರ್ಚ್ 26ರವರೆಗೆ ಸಾಗಲಿದೆ. ಈ ದೇಶದ 6 ಲಕ್ಷ ಹಳ್ಳಿಗಳು, 2.50 ಗ್ರಾಮ ಪಂಚಾಯ್ತಿಗಳು, 10 ಲಕ್ಷ ಮತಗಟ್ಟೆಗಳನ್ನು ಈ ಕಾರ್ಯಕ್ರಮ ಮೂಲಕ ತಲುಪಿಸಲಾಗುವುದು.
ನಿರುದ್ಯೋಗದಿಂದ ಯುವಕರು ತತ್ತರಿಸಿದ್ದಾರೆ. ಬೆಲೆ ಏರಿಕೆ ಪರಿಣಾಮ ಪ್ರತಿಯೊಬ್ಬ ಮಧ್ಯಮ ವರ್ಗ ಹಾಗೂ ಬಡವರು ಪರದಾಡುತ್ತಿದ್ದಾರೆ. ಪಕೋಡಾ ಮಾಡುವ ಎಣ್ಣೆಯ ಬೆಲೆ 90ರಿಂದ 230ಕ್ಕೆ ಏರಿಕೆಯಾಗಿದೆ. ಹಾಲು, ಮೊಸರು, ಪನೀರ್ ಮೇಲೆ ಜಿಎಸ್ಟಿ ಹಾಕಲಾಗಿದೆ. ಹೊಟೇಲ್ ಗಳಲ್ಲಿ 1000 ರೂ ಬಾಡಿಗೆ ಕೊಠಡಿ ಪಡೆದರೆ ಶೇ.12ರಷ್ಟು ಜಿಎಸ್ಟಿ ಹಾಕಲಾಗಿದೆ.
ಆ ಸರ್ಕಾರ ಜನಸಾಮಾನ್ಯರ ಹೊಟ್ಟೆ ಮೇಲೆ ಹೊಡೆಯುತ್ತಿದೆ. ನಿರುದ್ಯೋಗಿದ ಸಮಸ್ಯೆ ಎದುರಿಸುತ್ತಿರುವ ದೇಶದಲ್ಲಿ ಬೆಲೆ ಏರಿಕೆ ಸಮಸ್ಯೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಇದರ ಮಧ್ಯೆ ದಿನಬಳಕೆ ವಸ್ತುಗಳ ಮೇಲೆ ಜಿಎಸ್ಟಿ ಹಾಕುವ ಮೂಲಕ ಸರ್ಕಾರ ಕಠೋರವಾಗಿ ವರ್ತಿಸುತ್ತಿದೆ.
ಇನ್ನು ಆರ್ಥಿಕ ಅಸಮಾನತೆ ವಿಚಾರವಾಗಿ ಮಾತನಾಡುವುದಾದರೆ, ದೇಶದ ಬಹುತೇಕ ಸಂಪತ್ತು ಕೇಲವೇ ವ್ಯಕ್ತಿಗಳ ನಿಯಂತ್ರಣದಲ್ಲಿದೆ. ಇತ್ತೀಚಿನ ವರದಿ ಪ್ರಕಾರ ದೇಶದ ಶೇ.1ರಷ್ಟು ಜನ ದೇಶದ ಶೇ.40ರಷ್ಟು ಸಂಪತ್ತನ್ನು ಹೊಂದಿದೆ. ಆಮೂಲಕ ದೇಶದಲ್ಲಿ ಆರ್ಥಿಕ ಅಸಮಾನತೆ ಬಹಳ ದೊಡ್ಡದಾಗಿದೆ. ಪ್ರತಿನಿತ್ಯ ಬಡವರು ಹಾಗೂ ಶ್ರೀಮಂತ್ರ ನಡುವಣ ಅಂತರ ಹೆಚ್ಚುತ್ತಲೇ ಇದೆ. ದೇಶದ ಸಂಪತ್ತು ಕೆಲವೇ ಮಂದಿ ಹತ್ತಿರ ಇರುವುದರ ವಿರುದ್ಧ ನಾವು ನಿಂತಿದ್ದೇವೆ. ಶೇ50ರಷ್ಟು ಕಡಿಮೆ ಆದಾಯ ಇರುವ ಜನರು ದೇಶದ ಶೇ.65ರಷ್ಟು ಜಿಎಸ್ಟಿ ಕಟ್ಟುತ್ತಿದ್ದಾರೆ. ಈ ಅಸಮಾನತೆ ತಪ್ಪು, ಇದು ಪಾಪ.
ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ ಭಾರತ ನೇಪಾಳ ಪಾಕಿಸ್ತಾನಕ್ಕಿಂತಲೂ ಕೆಳ ಸ್ಥಾನದಲ್ಲಿದೆ. ಮಕ್ಕಳ ಅಪೌಷ್ಠಿಕತೆ ವಿಚಾರದಲ್ಲಿ ಭಾರತ ವಿಶ್ವಕ್ಕೆ ರಾಜಧಾನಿಯಾಗಿದೆ. 2022ರ ವರ್ಷ ಬಹಳ ದೊಡ್ಡ ಭರವಸೆಯ ವರ್ಷವಾಗಿತ್ತು. ಈ ವರ್ಷ ಮುಗಿಯುವುದರ ಒಳ್ಗಾಗಿ ರೈತರ ಆದಾಯ ದುಪ್ಪಟ್ಟಾಗಬೇಕಿತ್ತು. ಈ ದೇಶದ ರೈತರ ಸರಾಸರಿ ಆದಾಯ 25 ರೂ. ಮಾತ್ರ. ಇದೇ ವರ್ಷ ಭಾರತದ ಆರ್ಥಿಕತೆ 5 ಟ್ರಿಲಿಯನ್ ನಷ್ಟು ತಲುಪಬೇಕಿತ್ತು.
ಮೋದಿ ಸರ್ಕಾರ ಮಧ್ಯಮ ವರ್ಗ, ಬಡವರು, ದಿನಗೂಲಿ ಕಾರ್ಮಿಕರ ಬದುಕಿಗೆ ಯಾವುದೇ ನೀತಿ, ಕಾರ್ಯಕ್ರಮ ನೀಡಿಲ್ಲ. ಈ ಸರ್ಕಾರ ಕಾರ್ಪೋರೇಟ್ ಕಂಪನಿಗಳಿಗೆ ಶೇ.5ರಷ್ಟು ತೆರಿಗೆ ವಿನಾಯಿತಿ ನೀಡಿದರೆ, ಬಡವರು ಬಳಸುವ ಮೊಸರು, ಹಿಟ್ಟಿನ ಮೇಲೆ ಜಿಎಸ್ಟಿ ಹಾಕಲಾಗಿದೆ. ಇದನ್ನು ಹೇಗೆ ಸಮರ್ಥಿಸಿಕೊಳ್ಳುತ್ತಾರೆ.
ಕಳೆದ 8.5 ವರ್ಷಗಳಲ್ಲಿ ಕೇಂದ್ರ ಗೃಹ ಸಚಿವಾಲಯದ ಅಂಕಿ ಅಂಶಗಳ ಪ್ರಕಾರ 1.64 ಲಕ್ಷ ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಪೈಕಿ ¼ ಭಾಗದಷ್ಟು ಜನ ದಿನಗೂಲಿ ಕಾರ್ಮಿಕರಾಗಿದ್ದಾರೆ.
ಇನ್ನು ಕೈ ಜತೆ ಕೈ ಜೋಡಿಸಿ ಕಾರ್ಯಕ್ರಮದಲ್ಲಿ ಭಾರತದ ಗಡಿಯೊಳಗೆ ಚೀನಾ ಅತಿಕ್ರಮಣದ ವಿಚಾರವನ್ನು ನಾವು ಜನರಿಗೆ ತಿಳಿಸುತ್ತಿದ್ದೇವೆ. ಇಂದಿನ ವರದಿ ಪ್ರಕಾರ ಲಡಾಕ್ ಪ್ರದೇಶದಲ್ಲಿ ನಮ್ಮ 65 ಗಸ್ತು ಕೇಂದ್ರಗಳ ಪೈಕಿ 26 ಗಸ್ತು ಕೇಂದ್ರಗಳ ಮೇಲೆ ಭಾರತ ನಿಯಂತ್ರಣ ಕಳೆದುಕೊಂಡಿದೆ. ಇಷ್ಟಾದರೂ ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ಮೋದಿ ಅವರು ದೇಶದ ಮೇಲೆ ಯಾರ ಅತಿಕ್ರಮಣವೂ ಆಗಿಲ್ಲ ಎಂದು ಹೇಳುತ್ತಾರೆ.
ಕಳೆದ ಮೂರು ವರ್ಷಗಳಲ್ಲಿ ಭಾರತವು ಚೀನಾ ಜತೆಗೆ ಅತಿ ಹೆಚ್ಚಿನ ವ್ಯಾಪಾರ ವ್ಯವಹಾರ ನಡೆಸಿರುವುದು, ಕೇಂದ್ರ ಸರ್ಕಾರ ನಮ್ಮ ಸೈನಿಕರ ತ್ಯಾಗ ಬಲಿದಾನವನ್ನು ಪರಿಗಣಿಸುತ್ತಿಲ್ಲ ಎಂಬುದಕ್ಕೆ ಸ್ಪಷ್ಟ ನಿದರ್ಶನವಾಗಿದೆ. ಚಿನಾ ಹೇಗೆ ನಮ್ಮ ದೇಶದ ನಂಬರ್ 1 ವ್ಯಾಪಾರ ರಾಷ್ಟ್ರವಾಗಲು ಸಾಧ್ಯ? ಚೀನಾ ಹಾಗೂ ಭಾರತದ ನಡುವಣ ವ್ಯಾಪಾರದ ವಿತ್ತೀಯ ಕೊರತೆಯು 100 ಬಿಲಿಯನ್ ಡಾಲರ್ ನಷ್ಟು ಹೆಚ್ಚಾಗಿದೆ. ಇದರಿಂದ ಚೀನಾ ಬಹುದೊಡ್ಡ ಲಾಭ ಪಡೆಯುತ್ತಿದೆ. ಇದು ಭಾರತದ ಆರ್ಥಿಕತೆಯ ಇತಿಹಾಸದಲ್ಲಿ ಚೀನಾ ಮೊದಲ ಬಾರಿಗೆ ಇಷ್ಟು ದೊಡ್ಡ ಮಟ್ಟದ ಲಾಭ ಪಡೆಯುತ್ತಿದೆ.
ನಮ್ಮ ಜತೆ ವ್ಯಾಪಾರ ಮಾಡಿ ಚೀನಾ ಹಣ ಮಾಡುತ್ತಿದೆ. ಅದೇ ಹಣವನ್ನು ತನ್ನ ಸೇನೆಗೆ ನೀಡಿ ನಮ್ಮ ಸೈನಿಕರ ಹತ್ಯೆ ಮಾಡಿಸುತ್ತಿದೆ.
ಇನ್ನು ಕಡೇಯದಾಗಿ ಕೋಮು ಸೌಹಾರ್ದತೆಯ ವಿಚಾರವಾಗಿ ಹೇಳುವುದಾದರೆ, ಕರ್ನಾಟಕ ರಾಜ್ಯ ಅತ್ಯಂತ ಸುಂದರ ರಾಜ್ಯವಾಗಿದ್ದು, ಬೆಂಗಳೂರು ವಿಶ್ವದ ಐಟಿ ರಾಜಧಾನಿಯಾಗಿದ್ದು, ಪೂರ್ವ ಭಾಗದ ಸಿಲಿಕಾನ್ ವ್ಯಾಲಿಯಾಗಿದೆ. ಆದಾಗ್ಯೂ ಬಿಜೆಪಿ ಈ ರಾಜ್ಯವನ್ನು ದ್ವೇಷ ಪಸರಿಸುವ ಪ್ರಯೋಗ ಶಾಲೆಯನ್ನಾಗಿ ಮಾಡಿಕೊಂಡಿದೆ. ಇದು ಕೇವಲ ಕರ್ನಾಟಕಕ್ಕೆ ಸೀಮಿತವಲ್ಲ. ದೇಶದೆಲ್ಲೆಡೆ ಹಬ್ಬಿದೆ. ಬಿಜೆಪಿ ಯಾಕೆ ದೇಶದ ಜನರ ಮಧ್ಯೆ ದ್ವೇಷ ಬಿತ್ತಿ ಪರಸ್ಪರ ಹೊಡೆದಾಡುವಂತೆ ಮಾಡುತ್ತಿದೆ?
ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದೆ, ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರವಿದೆ. ಆದರೂ ಕರ್ನಾಟಕ ಹಾಗೂ ಮಹಾರಾಷ್ಟ್ರ ಕಿತ್ತಾಟ ನಡೆಸುತ್ತಿದ್ದು, ಇದನ್ನು ಕೇಂದ್ರ ಸರ್ಕಾರ ಯಾಕೆ ಬಗೆಹರಿಸುತ್ತಿಲ್ಲ? ಅಸ್ಸಾಂ ಹಾಗೂ ಮಿಜೋರಾಮ್ ರಾಜ್ಯಗಳು ಪರಸ್ಪರ ಕಿತ್ತಾಡುತ್ತಿವೆ. ಈ ರೀತಿ, ಜಾತಿ, ಧರ್ಮ, ಭಾಷೆ ವಿಚಾರವಾಗಿ ದ್ವೇಷ ಬಿತ್ತಲಾಗಿದೆ. ವಿವಿಧತೆ ಇದ್ದರೂ ಏಕತೆ ಕಾಪಾಡಿಕೊಳ್ಳುವುದೇ ನಮ್ಮ ದೇಶದ ವೈಶಿಷ್ಟ್ಯತೆ. ಇದನ್ನು ನಾವು ಕಾಪಾಡಿಕೊಳ್ಳಬೇಕು. ಇದೇ ಕಾರಣಕ್ಕೆ ರಾಹುಲ್ ಗಾಂಧಿ ಅವರು ದ್ವೇಷದ ಮಾರುಕಟ್ಟೆಯಲ್ಲಿ ಪ್ರೀತಿಯ ಅಂಗಡಿ ತೆರೆಯುವ ಬಗ್ಗೆ ಮಾತನಾಡುತ್ತಿದ್ದಾರೆ.
ಈ ಎಲ್ಲ ವಿಚಾರವಾಗಿ ಕೈ ಜತೆ ಕೈ ಜೋಡಿಸಿ ಕಾರ್ಯಕ್ರಮದ ಮೂಲಕ ಜನರಿಗೆ ತಿಳಿಸಲಾಗುವುದು. ಇನ್ನು ಜ.30ರಂದು ಭಾರತ ಜೋಡೋ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಕಾಶ್ಮೀರದಲ್ಲಿ ಧ್ವಜಾರೋಹಣ ಮಾಡಲಾಗುವುದು. ಅದರ ಜತೆಗೆ ರಾಜ್ಯ, ಜಿಲ್ಲಾ ಹಾಗೂ ಬ್ಲಾಕ್ ಮಟ್ಟದಲ್ಲೂ ಧ್ವಜಾರೋಹಣ ಕಾರ್ಯಕ್ರಮ ಮಾಡಲಾಗುವುದು. ಆ ಮೂಲಕ ಭಾರತ ಜೋಡೋ ಯಾತ್ರೆಯನ್ನು ಅಂತ್ಯಗೊಳಿಸಲಾಗುವುದು.
Post a Comment