[24/01, 6:49 PM] +91 91644 68888: 🔯 *ಓಂ ವಿನಾಯಕ ಶಾರದಾ ದೇವತಾಭ್ಯೋ ನಮಃ* 🔯 🕉️ *ಓಂ ಶ್ರೀ ಗುರುಭ್ಯೋ ನಮಃ* 🕉️ *ಶ್ರೀ ನಿತ್ಯ ಪಂಚಾಂಗ* 🪔🪔🪔🪔🪔🪔🪔🪔🪔🪔🪔 🎆 ದಿನದ ವಿಶೇಷ : *ಕುಂದ ಚತುರ್ಥೀ* 🪔🪔🪔🪔🪔🪔🪔🪔🪔🪔🪔. ದಿನಾಂಕ : *25/01/2023*
ವಾರ : *ಬುಧ ವಾರ* *ಶ್ರೀ ಶುಭಕೃತ್ ನಾಮ* : ಆಯನ : *ಉತ್ತರಾಯಣೇ* *ಶಿಶಿರ* ಋತೌ
*ಮಾಘ* ಮಾಸೇ *ಶುಕ್ಲ* : ಪಕ್ಷೇ *ಚತುರ್ಥ್ಯಾಂ* ತಿಥೌ (ಪ್ರಾರಂಭ ಸಮಯ *ಮಂಗಳ ಹಗಲು 03-21 pm* ರಿಂದ ಅಂತ್ಯ ಸಮಯ : *ಬುಧ ಹಗಲು 12-33 pm* ರವರೆಗೆ) *ಸೌಮ್ಯ* ವಾಸರೇ : ವಾಸರಸ್ತು *ಪೂರ್ವಾಭಾದ್ರ* ನಕ್ಷತ್ರೇ (ಪ್ರಾರಂಭ ಸಮಯ : *ಮಂಗಳ ರಾತ್ರಿ 09-56 pm* ರಿಂದ ಅಂತ್ಯ ಸಮಯ : *ಬುಧ ರಾತ್ರಿ 09-56 pm* ರವರೆಗೆ) *ಪರಿಘ* ಯೋಗೇ (ಬುಧ ಹಗಲು *06-13 pm* ರವರೆಗೆ) *ಭದ್ರ* ಕರಣೇ (ಬುಧ ಹಗಲು *12-33 pm* ರವರೆಗೆ) ಸೂರ್ಯ ರಾಶಿ : *ಮಕರ* ಚಂದ್ರ ರಾಶಿ : *ಕುಂಭ* 🌅 ಸೂರ್ಯೋದಯ - *06-47 am* 🌄ಸೂರ್ಯಾಸ್ತ - *06-16 pm*
*ರಾಹುಕಾಲ* *12-32 pm* ಇಂದ *01-58 pm ಯಮಗಂಡಕಾಲ*
*08-14 am* ಇಂದ *09-40 am* *ಗುಳಿಕಕಾಲ*
*11-06 am* ಇಂದ *12-32 pm* *ಅಭಿಜಿತ್ ಮುಹೂರ್ತ* : ಬುಧ ಹಗಲು *12-09 pm* ರಿಂದ *12-55 pm* ರವರೆಗೆ *ದುರ್ಮುಹೂರ್ತ* : ಬುಧ ಹಗಲು *12-09 pm* ರಿಂದ *12-55 pm* ರವರೆಗೆ *ವರ್ಜ್ಯ* ** *ಅಮೃತ ಕಾಲ* :
ಬುಧ ಹಗಲು *12-43 pm* ರಿಂದ *02-11 pm* ರವರೆಗೆ 🚩🚩🚩🚩🚩🚩🚩🚩🚩🚩 ಮರು ದಿನದ ವಿಶೇಷ : *ಶ್ರೀ ಪಂಚಮೀ*
🚩🚩🚩🚩🚩🚩🚩🚩🚩🚩 ಶುಭಮಸ್ತು...ಶುಭದಿನ
[24/01, 7:19 PM] +91 91644 68888: 🔯 ಆಧ್ಯಾತ್ಮಿಕ ವಿಚಾರ.🔯
*ಗೀತಾಂತರಂಗ - 200*
*ಯದ್ಯದಾಚರತಿ ಶ್ರೇಷ್ಠಃ*
*ತತ್ತದೇವೇತರೋ ಜನ*
*ಸಜನಾ ಸ ಯತ್ಪ್ರಮಾಣಂ ಕುರುತೇ*
*ಲೋಕಸ್ತದನುವರ್ತತೇ || (3-21)*
ಲೋಕದಲ್ಲಿ ಶ್ರೇಷ್ಠರಾದವರ ಆಚರಣೆಯನ್ನೇ ಇತರರೂ ಅನುಸರಿಸುತ್ತಾರೆ. ಅವರು ಮಂಡಿಸಿದ ಸಿದ್ಧಾಂತವನ್ನೇ ಸಮಾಜವು ಅನುಸರಿಸುತ್ತದೆ. ಶ್ರೇಷ್ಠರಾದವರ ನಡೆ-ನುಡಿಗಳನ್ನು ಉಳಿದವರು ಅನುಸರಿಸುವುದು ಸಮಾಜದ ರೂಢಿ. ಅವರು ಯಾವುದನ್ನು ಪ್ರಮಾಣವೆಂದು ಸ್ವೀಕರಿಸಿ, ಗೌರವಿಸುವರೋ, ಅದನ್ನೇ ಸಾಮಾನ್ಯ ಜನರೂ ಕೂಡ ಪ್ರಮಾಣವೆಂದು ಒಪ್ಪಿ ಗೌರವಿಸುತ್ತಾರೆ. ಇದನ್ನು ಗಮನಿಸಿ, ಜನಕಾದಿಗಳು ಲೋಕಕ್ಕೋಸ್ಕರವೇ ಕರ್ಮವನ್ನು ಮಾಡಿದರು. ಅಂದರೆ, `ಲೋಕದ ಜನರು ತನ್ನನ್ನು ನೋಡುತ್ತಾರೆ, ತನ್ನ ಹಾಗೆಯೇ ವರ್ತಿತ್ತಾರೆ, ಆದ್ದರಿಂದ ತಾನು ಸನ್ಮಾರ್ಗದಲ್ಲಿ ನಡೆಯಬೇಕು. ತಪ್ಪು ದಾರಿಯನ್ನು ಅನುಸರಿಸಬಾರದು. ಆದ್ದರಿಂದ ಕರ್ಮದಿಂದ ತನಗೆ ಏನೂ ಆಗಬೇಕಾಗಿಲ್ಲವಾದರೂ, ಲೋಕಕ್ಕೋಸ್ಕರ ತಾನು ಕರ್ಮವನ್ನು ಮಾಡಬೇಕು’ ಎಂಬ ಭಾವನೆಯಿಂದ ಪ್ರವರ್ತಿಸಿದರು. `ಯದ್ಯದಾಚರತಿ ಶ್ರೇಷ್ಠಃ’ ಎಂಬುದಕ್ಕೆ ಎರಡು ರೀತಿಯಲ್ಲಿ ಅರ್ಥ ಮಾಡಬಹುದು. ಶ್ರೇಷ್ಠರಾದವರು ಆಚರಿಸಿದಂತೆ ಲೋಕದ ಜನರೆಲ್ಲ ಆಚರಿಸುತ್ತಾರೆ ಎಂಬುದು ಒಂದು ಸಹಜವಾದ ಅರ್ಥ. ಇನ್ನೊಂದು ಅರ್ಥ- ಯಾರನ್ನು ಜನರು ಶ್ರೇಷ್ಠರೆಂದು ತಿಳಿದುಕೊಳ್ಳುತ್ತಾರೋ, ಅಂಥವರು ಹೇಗೆ ಆಚರಣೆ ಮಾಡುತ್ತಾರೋ, ಹಾಗೆಯೇ ಎಲ್ಲರೂ ಮಾಡುತ್ತಾರೆ. ಜನರು ಅವನಲ್ಲಿ ಶ್ರೇಷ್ಠತೆಯನ್ನು ಕಾಣುತ್ತಾರೆ. ಪ್ರಪಂಚದಲ್ಲಿ ನಿಜವಾಗಿ ಶ್ರೇಷ್ಠರಾದವರು ಯಾರು ಎಂಬುದನ್ನು ನಿರ್ಧರಿಸುವುದು ಅತ್ಯಂತ ಸೂಕ್ಷ್ಮ ಕೆಲಸ. ಎಷ್ಟೋ ಸಲ ಶ್ರೇಷ್ಠರು ಮತ್ತು ಪ್ರಸಿದ್ಧರು, ಈ ಇಬ್ಬರ ನಡುವೆ ಬಹಳಷ್ಟು ಅಂತರ ಇದ್ದು ಬಿಡುತ್ತದೆ. ಶ್ರೇಷ್ಠರೆಲ್ಲರೂ ಪ್ರಪಂಚದಲ್ಲಿ ಪ್ರಸಿದ್ಧರಾಗುತ್ತಾರೆ ಎಂದೂ ಹೇಳಲು ಬರುವುದಿಲ್ಲ. ಪ್ರಸಿದ್ಧರಾದವರೆಲ್ಲರೂ ಶ್ರೇಷ್ಠರಾಗಿರುತ್ತಾರೆ ಎಂದು ಹೇಳುವುದೂ ಕಷ್ಟ. ಕೆಲವೊಮ್ಮೆ ಶ್ರೇಷ್ಠತೆ ಮತ್ತು ಪ್ರಸಿದ್ಧಿಗಳೆರಡೂ ಒಂದೇ ವ್ಯಕ್ತಿಯಲ್ಲಿ ಇರುವುದೂ ಉಂಟು. ಒಟ್ಟಾರೆ ಮುಖ್ಯವಾಗಿ ಗಮನಿಸಬೇಕಾದದ್ದು ಶ್ರೇಷ್ಠತೆಯನ್ನು. ಅವರವರಲ್ಲಿರುವ ಸತ್ಪ್ರವೃತ್ತಿಗಳಿಂದಲೇ ಶ್ರೇಷ್ಠತೆಯನ್ನು ಗುರುತಿಸಿ, ಅವರ ಆಚರಣೆಯನ್ನು ಅನುಸರಿಸಿದರೆ ಮಾತ್ರ ಶ್ರೇಯಸ್ಸನ್ನು ಕಾಣಬಹುದು. ಇದರ ಹೊರತಾಗಿ, ಪ್ರಪಂಚದಲ್ಲಿ ಪ್ರಸಿದ್ಧರೆಂದು, ದುಷ್ಟ ಪ್ರವೃತ್ತಿಯುಳ್ಳವರ ಆಚರಣೆಯನ್ನು ಅನುಸರಿಸಿದರೆ ಅನರ್ಥವನ್ನೇ ಕಾಣಬೇಕಾಗುತ್ತದೆ.
*ವ್ಯಾಖ್ಯಾನ: ಶ್ರೀ ಶ್ರೀಮತ್ಪರಮಹಂಸಾದಿ ಬಿರುದಾಂಕಿತ ಶ್ರೀ ಶ್ರೀಮದ್ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ಶ್ರೀಸ್ವರ್ಣವಲ್ಲೀ ಮಹಾಸಂಸ್ಥಾನ*
*(ಇದರ ಸಂಪೂರ್ಣ ಆವೃತ್ತಿ ಗೀತಾಂತರಂಗ ೧,೨,೩ ಪುಸ್ತಕಗಳು ಶ್ರೀಮಠದ ಭಗವತ್ಪಾದ ಪ್ರಕಾಶನದಲ್ಲಿ ಲಭ್ಯವಿದ್ದು ಆಸಕ್ತರು ಕೊಂಡುಕೊಳ್ಳಬಹುದು.08384-279359)*
(©® *ಶ್ರೀಭಗವತ್ಪಾದ ಪ್ರಕಾಶನ*)
*ಸಂಗ್ರಹ:ಶ್ರೀಸ್ವರ್ಣವಲ್ಲೀ ಭಕ್ತವೃಂದ*
*ಹಿಂದೂ ಸಂಸ್ಕ್ರತಿಯಲ್ಲಿ ಪ್ರತಿಯೊಂದಕ್ಕೂ ಕಾರಣ ಇದೆ ಸ್ನೇಹಿತರೇ....ನಮ್ಮ ಸನಾತನ ಸಂಸ್ಕೃತಿ ಮರೆಯಬೇಡಿ*🙏
*!! ಶ್ರೀಕೃಷ್ಣಾರ್ಪಣಮಸ್ತು !!*
*ಅಡ್ಮಿನ್ ಬಳಗ .*
ಆಧ್ಯಾತ್ಮಿಕ ವಿಚಾರದ ಉಪಯುಕ್ತ ಮಾಹಿತಿ ನಿಮ್ಮಗೇ ಬೇಕಾದಲ್ಲಿ. ಸಂಪಾದಕೀಯ ಶಾಖೆ ಮಂಗಳೂರು.ಮೊಬೈಲ್ +919945295560 ಮುಖ್ಯ ಕಛೇರಿ ಯುರೋಪ್.
ಆಧ್ಯಾತ್ಮಿಕ ವಿಚಾರದ ಉಪಯುಕ್ತ ಮಾಹಿತಿ ನಿಮ್ಮಗೇ ಬೇಕಾದಲ್ಲಿ. WhatsApp:https://chat.whatsapp.com/ISbrOeVLYcP5M7irDdsxKc
⬆️ಇಲ್ಲಿ ಕ್ಲಿಕ್ ಮಾಡಿ.
[24/01, 7:19 PM] +91 91644 68888: 🔯 ಆಧ್ಯಾತ್ಮಿಕ ವಿಚಾರ.🔯
15-ಗೀತಾ ಮಹಾತ್ಮೆ (.95) 24.01.2023
ಶೋತ್ರಂ ಚಕ್ಷುಃ ಸ್ಪರ್ಶನಂ ಚ
ರಸನಂ ಘ್ರಾಣಮೇವ ಚ।
ಅಧಿಷ್ಠಾಯ ಮನಶ್ಚಾಯಂ
ವಿಷಯಾನುಪಸೇವತೇ ॥
ಕಣ್ಣು, ಕಿವಿ, ಮೂಗು, ನಾಲಿಗೆ,ಚರ್ಮ ಎಂಬ ಪಂಚೇಂದ್ರಿಯಗಳನ್ನೂ, ಮನಸ್ಸೆಂಬ ಅಂತರಿಂದ್ರಿಯವನ್ನೂ ಆಶ್ರಯಿಸಿಕೊಂಡು ಈ ದೇಹದಲ್ಲಿ ವಾಸಮಾಡುತ್ತಿರುವ 'ಜೀವಾತ್ಮನು' ತನಗೆ ಬೇಕಾಗಿರುವ ವಿಷಯಗಳನ್ನು ಅನುಭವಿಸುತ್ತಾ ಇರುತ್ತಾನೆ. ಜೀವಾತ್ಮನಿಗೆ ವಾಸಸ್ಥಾನವೇ ದೇಹ. ಇಂದ್ರಿಯಗಳೆಂಬ ಕರಣಗಳನ್ನು ಬಳಸಿಕೊಳ್ಳುತ್ತಾ ವಿಷಯಗಳನ್ನು ಅನುಭವಿಸುತ್ತಾ ತನ್ನ ಜೀವನವನ್ನು ಸಾಗಿಸುತ್ತಿದ್ದಾನೆ. ಅಂದರೆ, ದೇಹವೆಂಬ ಗೃಹದಲ್ಲಿ ಜೀವಾತ್ಮನು ವಾಸ ಮಾಡಿಕೊಂಡಿರುತ್ತಾನೆ. ಜೀವಾತ್ಮನು ಕಿವಿಗಳಿಂದ ಶಬ್ದಗಳನ್ನೂ, ಕಣ್ಣುಗಳಿಂದ ರೂಪಗಳನ್ನೂ, ಚರ್ಮದಿಂದ ಸ್ಪರ್ಶ ಸುಖವನ್ನೂ, ನಾಲಿಗೆಯಿಂದ ರುಚಿಯನ್ನೂ, ಮೂಗಿನಿಂದ ವಾಸನೆಯನ್ನೂ ಅನುಭವಿಸುತ್ತಿದ್ದಾನೆ. ಮನಸ್ಸಿನ ಸಹಾಯದಿಂದ ಇಂದ್ರಿಯಗಳನ್ನು ಉಪಯೋಗಿಸುತ್ತಿದ್ದಾನೆ. ಪಂಚಭೂತಗಳಿಂದ ಸೃಷ್ಟಿಯಾದ ಶರೀರದಲ್ಲಿ ಕುಳಿತುಕೊಂಡು ಸುಖ, ದುಃಖ, ಭಯ, ಆಶ್ಚರ್ಯ, ಸಂತೋಷ ಮುಂತಾದ ಫಲಗಳನ್ನು ಅನುಭವಿಸುತ್ತಾನೆ.
ಅತ್ಯಂತ ಗುಹ್ಯವಾದ ವಿಚಾರವೆಂದರೆ, ನಿರ್ದೇಹಿಯಾದ ಜೀವಾತ್ಮನು ತನಗೆ ಸೂಕ್ತವಾದ ಭೌತಿಕ ಶರೀರವನ್ನು ಪ್ರವೇಶಿಸುವನು. ಬಳಿಕ, ಆ ಶರೀರದಲ್ಲಿರುವ ಇಂದ್ರಿಯಗಳ ಮೂಲಕ ಬಾಹ್ಯ ಪ್ರಪಂಚದ ವಿಷಯವಸ್ತುಗಳನ್ನು ಅನುಭವಿಸುವನು. ಇಂದ್ರಿಯಗಳ ಮೂಲಕ ದೇಹಕ್ಕೆ ಉಂಟಾಗುವ ಅನುಭವಗಳು, ಶರೀರದ ಒಳಗಿರುವ ಜೀವಾತ್ಮನಿಗೆ ಆಹಾರ. ಇವೆಲ್ಲ ಜೀವಾತ್ಮರುಗಳ ನಿತ್ಯಜೀವನದ ಕ್ರಮವಾಗಿದೆ ಎಂದು ಭಗವದ್ಗೀತೆಯ 15ನೇ ಅಧ್ಯಾಯದ ಒಂಬತ್ತನೇ ಶ್ಲೋಕದಲ್ಲಿದೆ. ಹರಿ ಓಂ.🙏
*ಹಿಂದೂ ಸಂಸ್ಕ್ರತಿಯಲ್ಲಿ ಪ್ರತಿಯೊಂದಕ್ಕೂ ಕಾರಣ ಇದೆ ಸ್ನೇಹಿತರೇ....ನಮ್ಮ ಸನಾತನ ಸಂಸ್ಕೃತಿ ಮರೆಯಬೇಡಿ*🙏
*!! ಶ್ರೀಕೃಷ್ಣಾರ್ಪಣಮಸ್ತು !!*
*ಅಡ್ಮಿನ್ ಬಳಗ .*
ಆಧ್ಯಾತ್ಮಿಕ ವಿಚಾರದ ಉಪಯುಕ್ತ ಮಾಹಿತಿ ನಿಮ್ಮಗೇ ಬೇಕಾದಲ್ಲಿ. ಸಂಪಾದಕೀಯ ಶಾಖೆ ಮಂಗಳೂರು.ಮೊಬೈಲ್ +919945295560 ಮುಖ್ಯ ಕಛೇರಿ ಯುರೋಪ್.
ಆಧ್ಯಾತ್ಮಿಕ ವಿಚಾರದ ಉಪಯುಕ್ತ ಮಾಹಿತಿ ನಿಮ್ಮಗೇ ಬೇಕಾದಲ್ಲಿ. WhatsApp:https://chat.whatsapp.com/ISbrOeVLYcP5M7irDdsxKc
⬆️ಇಲ್ಲಿ ಕ್ಲಿಕ್ ಮಾಡಿ.
[24/01, 7:19 PM] +91 91644 68888: 🔯 ಆಧ್ಯಾತ್ಮಿಕ ವಿಚಾರ.🔯 *ವಸಂತ ಪಂಚಮಿ - ೨*
ವಸಂತ ಪಂಚಮಿಯ ದಿನದಂದು ಸರಸ್ವತಿ ಪೂಜೆಗೆ ವಿಶೇಷ ಮಹತ್ವವಿದೆ. ಈ ದಿನ ಜನರು ಭಕ್ತಿಯಿಂದ ಸರಸ್ವತಿ ದೇವಿಯ ಆರಾಧನೆ ಮಾಡುತ್ತಾರೆ. ರಾಶಿಗೆ ಅನುಗುಣವಾಗಿ ಪೂಜೆ ಮಾಡಿದರೆ ಆಸೆಗಳು ಈಡೇರುತ್ತವೆ. ಅರ್ಧಕ್ಕೆ ನಿಂತ ಕೆಲಸ ಪೂರ್ಣಗೊಳ್ಳುತ್ತದೆ.
ವಸಂತ ಪಂಚಮಿ ಎಂದರೆ ಜ್ಞಾನದಾತೆ ಸರಸ್ವತಿಯ ಆರಾಧನೆ. ವಸಂತ ಪಂಚಮಿಯನ್ನು ಪ್ರತಿ ವರ್ಷ ಮಾಘ ಶುಕ್ಲ ಪಂಚಮಿಯಂದು ಆಚರಿಸಲಾಗುತ್ತದೆ. ಇದು ಸಾಮಾನ್ಯವಾಗಿ ಜನವರಿ ಅಥವಾ ಫೆಬ್ರವರಿ ತಿಂಗಳಲ್ಲಿ ಬರುತ್ತದೆ. ವಸಂತ ಮಾಸದ ಆರಂಭದಲ್ಲಿ ನಡೆಯುವ ಈ ಹಬ್ಬವನ್ನು ಹೆಚ್ಚಾಗಿ ಪಂಜಾಬ್, ಬಿಹಾರದಲ್ಲಿ ಆಚರಿಸುತ್ತಾರೆ. *ವಸಂತ ಪಂಚಮಿ ಮುಹೂರ್ತ* ಗುರುವಾರ, 2023 ಜನವರಿ 26, ಮಾಘ ಶುದ್ಧ ಪಂಚಮಿ. ಪಂಚಮಿ ತಿಥಿ ಪ್ರಾರಂಭ : ಬುಧವಾರ, 2023 ಜನವರಿ 25 ಹಗಲು 12:33 ಗಂಟೆಯಿಂದ. ಪಂಚಮಿ ತಿಥಿ ಅಂತ್ಯ : ಗುರುವಾರ, 2023 ಜನವರಿ 26 ಹಗಲು 10:27 ಗಂಟೆಯವರೆಗೆ. ಪೂಜಾ ಸಮಯ : ಬೆಳಿಗ್ಗೆ 06:46 ರಿಂದ 12:32 ರವರೆಗೆ . ಅವರವರ ಜನ್ಮ ರಾಶಿಗಳಿಗೆ ಅನುಸಾರವಾಗಿ ಸರಸ್ವತಿಯ ಪೂಜೆಯನ್ನು ಮಾಡಿದರೆ ಎಲ್ಲಾ ಕಷ್ಟಗಳು ದೂರವಾಗುತ್ತದೆ. ಯಾವ ರಾಶಿಯವರು ಹೇಗೆ ಪೂಜೆ ಮಾಡಬೇಕು ಎಂಬುದನ್ನು ನೋಡಿ.
*ಮೇಷ ರಾಶಿ* : ಮೇಷ ರಾಶಿಯಲ್ಲಿ ಜನಿಸಿದವರು ಪೂಜೆ ಮಾಡುವಾಗ ಸರಸ್ವತಿ ಕವಚ ಸ್ತೋತ್ರ ಪಠಿಸಿ, ಹರಿದ್ರಾನ್ನ (ಅರಿಶಿನ ಬೆರೆಸಿದ ಅನ್ನ) ದ ನೈವೇದ್ಯವನ್ನು ನೀಡಿದರೆ ಅವರ ಆಸೆಗಳು ನೆರವೇರುತ್ತವೆ.
*ವೃಷಭ ರಾಶಿ* : ಈ ರಾಶಿಯಲ್ಲಿ ಹುಟ್ಟಿದವರು ವಸಂತ ಪಂಚಮಿಯಂದು ಪೂಜೆ ಮಾಡುವಾಗ ಶ್ವೇತ ಚಂದನ (ಬಿಳಿ ಶ್ರೀಗಂಧ) ಮತ್ತು ಶ್ವೇತ ಪುಷ್ಪ (ಬಿಳಿ ಹೂವನ್ನು) ದೇವರಿಗೆ ಅರ್ಪಿಸಬೇಕು. ಇದರಿಂದ ಅವರ ಎಲ್ಲಾ ಆಸೆಗಳು ನೆರವೇರಿ, ಕೆಲಸದಲ್ಲಿ ಏಳ್ಗೆಯಾಗುತ್ತದೆ.
*ಮಿಥುನ ರಾಶಿ* : ಸರಸ್ವತಿಯು ವಿದ್ಯಾದೇವತೆ ಆಗಿರುವುದರಿಂದ ಅಂದಿನ ದಿನ ಸರಸ್ವತಿ ದೇವಿಗೆ ಲೇಖನಿ ಇಟ್ಟು ಪೂಜೆ ಸಲ್ಲಿಸಿ. ಮಿಥುನ ರಾಶಿಯವರು ಹೀಗೆ ಮಾಡುವುದರಿಂದ ಅವರ ಜೀವನದಲ್ಲಿ ಉತ್ತಮ ಫಲ ಸಿಗುತ್ತದೆ.
*ಕಟಕ ರಾಶಿ* : ಕಟಕ ರಾಶಿಗೆ ಚಂದ್ರ ಅಧಿಪತಿಯಾದ್ದರಿಂದ ಈ ರಾಶಿಯವರು ವಸಂತ ಪಂಚಮಿಯಂದು ಸರಸ್ವತಿಗೆ ಹಳದಿ ಬಣ್ಣದ ಹೂವುಗಳನ್ನು ನೀಡಬೇಕು. ಖೀರ್ ಗೆ ಕೇಸರಿ ದಳಗಳನ್ನು ಸೇರಿಸಿ ನೈವೇದ್ಯ ಮಾಡಬೇಕು. ಇದರಿಂದ ಉತ್ತಮ ಫಲಿತಾಂಶ ಸಿಗುತ್ತದೆ.
*ಸಿಂಹ ರಾಶಿ*: ಸಿಂಹ ರಾಶಿಯವರಿಗೆ ಅಧಿಪತಿ ಸೂರ್ಯನಾಗಿರುವುದರಿಂದ ನೀವು ಸರಸ್ವತಿ ಪೂಜೆ ಮಾಡಿ ಗಾಯತ್ರಿ ಮಂತ್ರವನ್ನು ಪಠಿಸಬೇಕು. ಇದರಿಂದ ನಿಮಗೆ ನೌಕರಿಯಲ್ಲಿ ಬಡ್ತಿ ಸಿಗುತ್ತದೆ ಮತ್ತು ಧನ ಲಾಭವಾಗುತ್ತದೆ.
*ಕನ್ಯಾ ರಾಶಿ* : ವಸಂತ ಪಂಚಮಿಯಂದು ಈ ರಾಶಿಯವರು ಬಡ ಮಕ್ಕಳಿಗೆ ಪುಸ್ತಕ, ಪೆನ್ಸಿಲ್ ಅಥವಾ ಶಾಲೆ ಮಕ್ಕಳಿಗೆ ಬೇಕಾದ ಉಳಿದ ವಸ್ತುಗಳನ್ನು ದಾನಮಾಡಬೇಕು. ಬಡವರಿಗೆ ದಾನ ಮಾಡಿದರೆ ಹೆಚ್ಚಿನ ಫಲವನ್ನು ಪಡೆಯಬಹುದು.
*ತುಲಾ ರಾಶಿ* : ತುಲಾ ರಾಶಿಯ ಅಧಿಪತಿ ಶುಕ್ರನಾದ್ದರಿಂದ ಈ ರಾಶಿಯವರು ಸರಸ್ವತಿಗೆ ಬಿಳಿ ಬಣ್ಣದ ವಸ್ತುಗಳನ್ನು ನೀಡಬೇಕು. ಬಡವರಿಗೆ ಬಿಳಿ ಬಣ್ಣದ ವಸ್ತ್ರಗಳನ್ನು ದಾನ ಮಾಡಬೇಕು. ಇದರಿಂದ ನಿಮ್ಮ ಆಸೆಗಳೆಲ್ಲ ನೆರವೇರಿ ವಿಶೇಷ ಫಲ ಸಿಗುತ್ತದೆ.
*ವೃಶ್ಚಿಕ ರಾಶಿ* : ವಸಂತ ಪಂಚಮಿಯಂದು ಈ ರಾಶಿಯವರು ಸರಸ್ವತಿಗೆ ಕೆಂಪು ಹಳದಿ ಬಣ್ಣದ ದಾವಣಿಯನ್ನು ಅರ್ಪಿಸಿ ಕೆಂಪು ವಸ್ತುಗಳನ್ನು ದಾನ ಮಾಡಬೇಕು. ಇದರಿಂದ ನಿಮ್ಮ ಎಲ್ಲಾ ಕೆಲಸಗಳೂ ಯಶಸ್ವಿಯಾಗುತ್ತವೆ.
*ಧನಸ್ಸು ರಾಶಿ* : ಈ ರಾಶಿಯ ಅಧಿಪತಿ ಗುರುವಾದ್ದರಿಂದ ಈ ದಿನ ನೀವು ಹಳದಿ ಬಣ್ಣದ ವಸ್ತುಗಳನ್ನು ದೇವಿಗೆ ಅರ್ಪಿಸಬೇಕು ಹಾಗೂ ದಾನ ಮಾಡಬೇಕು. ಕಡಲೆಹಿಟ್ಟಿನ ಉಂಡೆಯನ್ನು ದೇವರಿಗೆ ನೈವೇದ್ಯ ಕೊಡಬೇಕು.
*ಮಕರ ರಾಶಿ* : ವಸಂತ ಪಂಚಮಿಯಂದು ಸರಸ್ವತಿಗೆ ಎಳ್ಳು ಮಿಶ್ರಿತ ಹರಿದ್ರಾನ್ನ ನೈವೇದ್ಯ ಮಾಡಿ ಹಳದಿ ಬಣ್ಣದ ವಸ್ತುಗಳನ್ನು ಬಡವರಿಗೆ ದಾನ ಮಾಡಬೇಕು. ಇದರಿಂದ ಎಲ್ಲಾ ಬಯಕೆಗಳೂ ಇಡೇರುವುದು ಖಂಡಿತ.
*ಕುಂಭ ರಾಶಿ* : ಕುಂಭ ರಾಶಿಯವರು ವಸಂತ ಪಂಚಮಿಯಂದು ಸರಸ್ವತಿಯ ಪೂಜೆ ಮಾಡಿ ಬಿಳಿ ಬಣ್ಣದ ವಸ್ತ್ರವನ್ನು ದಾನ ಮಾಡಬೇಕು. ಇದರಿಂದ ವಿದ್ಯೆ ಲಭಿಸುತ್ತದೆ ಮತ್ತು ಸರಸ್ವತಿಯ ಆಶೀರ್ವಾದ ಯಾವಾಗಲೂ ಇರುತ್ತದೆ.
*ಮೀನ ರಾಶಿ* : ಮೀನ ರಾಶಿಯವರು ವಸಂತ ಪಂಚಮಿಯಂದು ಕಡಲೆಹಿಟ್ಟಿನಿಂದ ತಯಾರಿಸಿದ ಹಲ್ವಾವನ್ನು ದೇವಿಗೆ ನೈವೇದ್ಯ ಮಾಡಬೇಕು.
*ಹಿಂದೂ ಸಂಸ್ಕ್ರತಿಯಲ್ಲಿ ಪ್ರತಿಯೊಂದಕ್ಕೂ ಕಾರಣ ಇದೆ ಸ್ನೇಹಿತರೇ....ನಮ್ಮ ಸನಾತನ ಸಂಸ್ಕೃತಿ ಮರೆಯಬೇಡಿ*🙏
*!! ಶ್ರೀಕೃಷ್ಣಾರ್ಪಣಮಸ್ತು !!*
*ಅಡ್ಮಿನ್ ಬಳಗ .*
ಆಧ್ಯಾತ್ಮಿಕ ವಿಚಾರದ ಉಪಯುಕ್ತ ಮಾಹಿತಿ ನಿಮ್ಮಗೇ ಬೇಕಾದಲ್ಲಿ. ಸಂಪಾದಕೀಯ ಶಾಖೆ ಮಂಗಳೂರು.ಮೊಬೈಲ್ +919945295560 ಮುಖ್ಯ ಕಛೇರಿ ಯುರೋಪ್.
ಆಧ್ಯಾತ್ಮಿಕ ವಿಚಾರದ ಉಪಯುಕ್ತ ಮಾಹಿತಿ ನಿಮ್ಮಗೇ ಬೇಕಾದಲ್ಲಿ. WhatsApp:https://chat.whatsapp.com/ISbrOeVLYcP5M7irDdsxKc
⬆️ಇಲ್ಲಿ ಕ್ಲಿಕ್ ಮಾಡಿ.
[24/01, 7:19 PM] +91 91644 68888: 🔯 ಆಧ್ಯಾತ್ಮಿಕ ವಿಚಾರ.🔯
*ಸ್ತ್ರೀಯರ ಕೂದಲಿನ ಬೈತಲೆ ಹೇಗಿರಬೇಕು?*
ಸ್ತ್ರೀಯರು ಕೇಶರಚನೆಯನ್ನು ಮಾಡುವಾಗ ತಮ್ಮ ಕೂದಲಿನ ಬೈತಲೆಯನ್ನು ಮಧ್ಯಭಾಗದಲ್ಲಿ ತೆಗೆದು ಅದರಿಂದ ಅಧ್ಯಾತ್ಮಿಕ ಸ್ತರದಲ್ಲಿ ಲಾಭವನ್ನು ಪಡೆಯಬೇಕು !
ಕೆಲವು ಸ್ತ್ರೀಯರು ಕೂದಲಿನ ಬೈತಲೆಯನ್ನು ಮಧ್ಯಭಾಗದಲ್ಲಿ ತೆಗೆಯದೇ ಅದನ್ನು ಎಡ ಅಥವಾ ಬಲ ಭಾಗಕ್ಕೆ ತೆಗೆಯುತ್ತಾರೆ. ಕೆಲವು ಸ್ತ್ರೀಯರು ಆಕರ್ಷಕ ಕೇಶರಚನೆಗಾಗಿ ಸ್ವಲ್ಪ ದೂರದ ವರೆಗೆ ನೇರವಾಗಿ ಬೈತಲೆಯನ್ನು ತೆಗೆಯುತ್ತಾರೆ. ನಂತರ ಬೈತಲೆಯ ದಿಕ್ಕನ್ನು ಬದಲಿಸುತ್ತಾರೆ. ಕೆಲವೊಮ್ಮೆ ಕೂದಲಿನ ಬೈತಲೆಯನ್ನು ಸರಿಯಾಗಿ ಮತ್ತು ಮಧ್ಯದಲ್ಲಿ ತೆಗೆಯದ ಕಾರಣ ಅದು ಕೊನೆಗೆ ನೇರವಾಗಿರದೆ ಓರೆಯಾಗುತ್ತದೆ. ಈ ರೀತಿಯಾಗಿ ಬೈತಲೆ ತೆಗೆದು ಕೇಶರಚನೆಯನ್ನು ಮಾಡುವುದರಿಂದ ಸ್ತ್ರೀಯರಲ್ಲಿನ ರಜ-ತಮ ಗುಣಗಳು ಹೆಚ್ಚಾಗುತ್ತವೆ ಮತ್ತು ಸ್ತ್ರೀಯರ ಮೇಲೆ ತೊಂದರೆದಾಯಕ (ಕಪ್ಪು) ಶಕ್ತಿಗಳ ಆವರಣವು ಬರುತ್ತದೆ. ಕೆಲವೊಮ್ಮೆ ಸ್ತ್ರೀಯರು ಕೆಟ್ಟ ಶಕ್ತಿಗಳ ಆಕ್ರಮಣಕ್ಕೂ ತುತ್ತಾಗಬಹುದು.
ಹಿಂದೂ ಧರ್ಮವು ಪ್ರಾಚೀನ ಕಾಲದಿಂದಲೂ ಕೂದಲಿನ ಸಾತ್ತ್ವಿಕ ರಚನೆಯನ್ನು ಮಾಡಲು ಕಲಿಸಿದೆ. ಮಧ್ಯದಲ್ಲಿ ಬೈತಲೆಯನ್ನು ತೆಗೆದು ಕೂದಲಿನ ಸಾತ್ತ್ವಿಕ ರಚನೆಯನ್ನು ಮಾಡಿದ ಸ್ತ್ರೀಯರಿಗೆ ಆಧ್ಯಾತ್ಮಿಕ ಸ್ತರದಲ್ಲಿ ಲಾಭಗಳು ಖಂಡಿತ ಆಗುತ್ತವೆ, ಅಲ್ಲದೇ ಆ ಕೇಶ ರಚನೆಯಿಂದ ಸಾತ್ತ್ವಿಕ ಲಹರಿಗಳು ಪ್ರಕ್ಷೇಪಿತವಾಗಿರುವುದರಿಂದ ಆ ಕೇಶ ರಚನೆಯನ್ನು ನೋಡುವವರ ಮನಸ್ಸಿನ ಮೇಲೆಯೂ ಒಳ್ಳೆಯ ಪರಿಣಾಮವಾಗುತ್ತದೆ.
ಸ್ತ್ರೀಯರು ಕೇಶರಚನೆಯನ್ನು ಮಾಡುವಾಗ ಕೂದಲಿನ ಬೈತಲೆಯನ್ನು ಮಧ್ಯಭಾಗದಲ್ಲಿ ತೆಗೆಯುವುದರಿಂದ ಅವರಿಗೆ ಆಧ್ಯಾತ್ಮಿಕ ಸ್ತರದಲ್ಲಿ ಮುಂದಿನ ಲಾಭಗಳಾಗಬಹುದು.
೧. ಈಶ್ವರಿ ಚೈತನ್ಯವು ಗ್ರಹಿಸುವಂತಾಗಿ ಸಹಸ್ರಾರದ ಮೇಲಿನ ತೊಂದರೆದಾಯಕ ಶಕ್ತಿಯ ಆವರಣವು ದೂರವಾಗುವುದು.
೨. ಈಶ್ವರಿ ಚೈತನ್ಯವು ಗ್ರಸಿಸುವುದರಿಂದ ಕುಂಡಲಿನಿಚಕ್ರವು ಜಾಗೃತವಾಗಲು ಸಹಾಯವಾಗುತ್ತದೆ.
೩. ಈಶ್ವರಿ ಚೈತನ್ಯದಿಂದ ಅಂತರ್ಮುಖತೆಯು ನಿರ್ಮಾಣ ವಾಗುವುದು.
ಆದುದರಿಂದ ಸ್ತ್ರೀಯರು ಕೇವಲ ಬಾಹ್ಯ ಸೌಂದರ್ಯದ ವಿಚಾರವನ್ನು ಮಾಡದೆ ತಮ್ಮ ಕೇಶ ರಚನೆಯ ಆಧ್ಯಾತ್ಮಿಕ ಸ್ತರದಲ್ಲಿ ವಿಚಾರವನ್ನು ಮಾಡಬೇಕು. ‘ಕೂದಲಿನ ಬೈತಲೆಯನ್ನು ಮಧ್ಯಭಾಗದಲ್ಲಿ ತೆಗೆಯುವುದು’, ಇದು ಆಧ್ಯಾತ್ಮಿಕ ಉನ್ನತಿಗಾಗಿ ಪೂರಕವಾಗಿರುವುದರಿಂದ ಸ್ತ್ರೀಯರು ಕೂದಲಿನ ಮಧ್ಯಭಾಗದಲ್ಲಿ ಬೈತಲೆಯನ್ನು ತೆಗೆಯಬೇಕು. ಕೂದಲಿನ ಬೈತಲೆ ಸಾತ್ತ್ವಿಕ ಸ್ಪಂದನಗಳ ದೃಷ್ಟಿಯಿಂದ ‘ಮಧ್ಯಭಾಗದಲ್ಲಿ ಮತ್ತು ನೇರವಾಗಿ ಕೊನೆಯವರೆಗೂ ಬರುವಂತೆ’, ನೋಡಬೇಕು.
*ಹಿಂದೂ ಸಂಸ್ಕ್ರತಿಯಲ್ಲಿ ಪ್ರತಿಯೊಂದಕ್ಕೂ ಕಾರಣ ಇದೆ ಸ್ನೇಹಿತರೇ....ನಮ್ಮ ಸನಾತನ ಸಂಸ್ಕೃತಿ ಮರೆಯಬೇಡಿ*🙏
*!! ಶ್ರೀಕೃಷ್ಣಾರ್ಪಣಮಸ್ತು !!*
*ಅಡ್ಮಿನ್ ಬಳಗ .*
ಆಧ್ಯಾತ್ಮಿಕ ವಿಚಾರದ ಉಪಯುಕ್ತ ಮಾಹಿತಿ ನಿಮ್ಮಗೇ ಬೇಕಾದಲ್ಲಿ. ಸಂಪಾದಕೀಯ ಶಾಖೆ ಮಂಗಳೂರು.ಮೊಬೈಲ್ +919945295560 ಮುಖ್ಯ ಕಛೇರಿ ಯುರೋಪ್.
ಆಧ್ಯಾತ್ಮಿಕ ವಿಚಾರದ ಉಪಯುಕ್ತ ಮಾಹಿತಿ ನಿಮ್ಮಗೇ ಬೇಕಾದಲ್ಲಿ. WhatsApp:https://chat.whatsapp.com/ISbrOeVLYcP5M7irDdsxKc
⬆️ಇಲ್ಲಿ ಕ್ಲಿಕ್ ಮಾಡಿ.
[24/01, 7:19 PM] +91 91644 68888: 🔯 ಆಧ್ಯಾತ್ಮಿಕ ವಿಚಾರ.🔯
*ವಸಂತ ಪಂಚಮಿ : ಇಲ್ಲಿದೆ ಪೂಜಾ ವಿಧಾನ ಮತ್ತು ಮಹತ್ವ..!*
ಇದೇ ಜನವರಿ 26 ರ ಗುರುವಾರದಂದು ವಸಂತ ಪಂಚಮಿ ಹಬ್ಬವನ್ನು ಆಚರಿಸಲಾಗುತ್ತದೆ. ವಸಂತ ಪಂಚಮಿ ಹಬ್ಬವನ್ನು ಯಾಕೆ ಆಚರಿಸಬೇಕು..? ವಸಂತ ಪಂಚಮಿ ಹಬ್ಬವನ್ನು ಆಚರಿಸುವುದು ಹೇಗೆ..? ಇಲ್ಲಿದೆ ವಸಂತ ಪಂಚಮಿ ಪೂಜಾ ವಿಧಾನ ಮತ್ತು ಮಹತ್ವ..
"ವಸಂತ ಪಂಚಮಿ" ಯನ್ನು ಪ್ರತಿವರ್ಷ ಮಾಘ ಮಾಸದ ಶುಕ್ಲಪಕ್ಷದ ಪಂಚಮಿ ತಿಥಿಯಲ್ಲಿ ಆಚರಿಸಲಾಗುತ್ತದೆ. ಈ ಬಾರಿ ಜನವರಿ 26 ರ ಗುರುವಾರದಂದು ವಸಂತ ಪಂಚಮಿ ಹಬ್ಬವನ್ನು ಅಚರಿಸಲಾಗುತ್ತದೆ. ವಸಂತ ಪಂಚಮಿಯಂದು ಜ್ಞಾನದ ಮಾತೃ ದೇವತೆಯಾದ ಸರಸ್ವತಿ ಆರಾಧನೆಯ ದಿನವೂ ಹೌದು. ಆದ್ದರಿಂದ ಇದನ್ನು ‘ಸರಸ್ವತಿ ಪೂಜೆ’ ಎಂದೂ ಕರೆಯುತ್ತಾರೆ. ಈ ಹಬ್ಬವನ್ನು ಆಚರಿಸುವುದರ ಹಿಂದಿನ ಉದ್ದೇಶವೇನು ಮತ್ತು ಸರಸ್ವತಿಯನ್ನು ಪೂಜಿಸುವ ಪ್ರಾಮುಖ್ಯತೆ ಏನು? ಇದನ್ನು ತಿಳಿದುಕೊಳ್ಳುವ ಮೊದಲು, ಸರಸ್ವತಿಯ ರೂಪ ಅಥವಾ ಆಕೆಯ ಪ್ರಭಾವದ ಬಗ್ಗೆ ತಿಳಿದುಕೊಳ್ಳೋಣ.
ವಸಂತ ಪಂಚಮಿ : ಇಲ್ಲಿದೆ ಪೂಜಾ ವಿಧಾನ ಮತ್ತು ಮಹತ್ವ..!
ಈಕೆಗೆ ಇತರ ಹೆಸರುಗಳಿವೆ, ಅವುಗಳಲ್ಲಿ ವಾಗ್ದೇವಿ, ವಾಣಿ, ಗೀರ್ವಾಣಿ, ಗಿರಾ, ಭಾಷಾ, ಶಾರದಾ, ವಾಚಾ, ಶ್ರೀಶ್ವರೀ, ವಾಗೀಶ್ವರಿ, ಬ್ರಾಹ್ಮಿ, ಗೌ, ಸೋಮಲತಾ, ವಾಗ್ದೇವತೆ ಹೆಸರುಗಳು ಹೆಚ್ಚು ಪ್ರಸಿದ್ಧವಾಗಿವೆ. ಸರಸ್ವತಿ ದೇವಿಯ ಮಹಿಮೆ ಮತ್ತು ಪ್ರಭಾವವೇ ಅಪಾರ. ಋಗ್ವೇದ 10/125 ಸೂಕ್ತದ ಎಂಟನೇ ಮಂತ್ರದ ಪ್ರಕಾರ, ವಾಗ್ದೇವಿ ಸೌಮ್ಯ ಗುಣಗಳ ಮಗಳು ಮತ್ತು ಎಲ್ಲಾ ದೇವರುಗಳ ರಕ್ಷಕ. ಬ್ರಹ್ಮಾಂಡದ ಸೃಷ್ಟಿ ಕೂಡ ವಾಗ್ದೇವಿಯ ಕೆಲಸ. ಅವರು ಇಡೀ ಪ್ರಪಂಚದ ಸೃಷ್ಟಿಕರ್ತ ಮತ್ತು ಅಧೀಕ್ಷಕರು. ವಾಗ್ದೇವಿಯನ್ನು ಸಂತೋಷಪಡಿಸಿದ ನಂತರ, ಮನುಷ್ಯನು ಪ್ರಪಂಚದ ಎಲ್ಲಾ ಸಂತೋಷಗಳನ್ನು ಅನುಭವಿಸುತ್ತಾನೆ. ಅವನ ಅನುಗ್ರಹದಿಂದ ಮನುಷ್ಯ ಜ್ಞಾನವುಳ್ಳವನು, ವಿಜ್ಞಾನಿ, ಶ್ರೇಷ್ಠ, ಮಹರ್ಷಿ ಮತ್ತು ಬ್ರಹ್ಮರ್ಷಿಯಾಗುತ್ತಾನೆ.
*ವಸಂತ ಪಂಚಮಿ ಪೂಜಾ ವಿಧಿ:*
ಭಗವತಿ ಸರಸ್ವತಿಯ ಆರಾಧನಾ ಪ್ರಕ್ರಿಯೆಯಲ್ಲಿ, ಮೊದಲನೆಯದಾಗಿ, ಆಚಮನ, ಪ್ರಾಣಾಯಾಮ ಇತ್ಯಾದಿಗಳ ಮೂಲಕ ನಿಮ್ಮ ಬಾಹ್ಯ ಪಾವಿತ್ರ್ಯವನ್ನು ಮಾಡಿಕೊಳ್ಳಿ. ನಂತರ ಸರಸ್ವತಿಯನ್ನು ಪೂಜಿಸುವ ಸಂಕಲ್ಪವನ್ನು ತೆಗೆದುಕೊಳ್ಳಿ. ವಸಂತ ಪಂಚಮಿ ಪೂಜೆಯ ನಂತರ 'ಯಥೋಪಲಬ್ಧಪೂಜನಸಾಮಾಗ್ರೀಭಿಃ ಭಗವತ್ಯಾಃ ಸರಸ್ವತ್ಯಾಃ ಪೂಜನಮಹಂ ಕರಿಷ್ಯೇ' ಈ ಮಂತ್ರವನ್ನು ಓದಿ ನಂತರ ನೀರನ್ನು ಬಿಡಿ. ಇದರ ನಂತರ, ಗಣೇಶನನ್ನು ಪೂಜಿಸಿ. ಒಂದು ಪೀಠವನ್ನು ಸ್ಥಾಪಿಸಿ ಮತ್ತು ಅದರಲ್ಲಿ ಸರಸ್ವತಿ ದೇವಿಯನ್ನು ಗೌರವದಿಂದ ಆಹ್ವಾನಿಸಿ ಮತ್ತು ವೇದ ಅಥವಾ ಪೌರಾಣಿಕ ಮಂತ್ರಗಳನ್ನು ಪಠಿಸುವಾಗ ಭಗವತಿಗೆ ಪ್ರಿಯವಾದ ವಸ್ತುಗಳನ್ನು ಅರ್ಪಿಸಿ. ಪೂಜೆಯ ಸಮಯದಲ್ಲಿ, 'ಶ್ರೀ ಹ್ರೀಂ ಸರಸ್ವತ್ಯೈ ಸ್ವಾಹಾ' ಎನ್ನುವ ಅಷ್ಟಾಕ್ಷರ ಮಂತ್ರದೊಂದಿಗೆ ಎಲ್ಲವನ್ನೂ ಶ್ರೀಸರಸ್ವತಿಗೆ ಅರ್ಪಿಸಿ. ಅಂತಿಮವಾಗಿ, ಸರಸ್ವತಿ ದೇವಿಗೆ ಆರತಿ ಮಾಡಿ ಮತ್ತು ಅವಳನ್ನು ಸ್ತುತಿಸಿ.
*ವಸಂತ ಪಂಚಮಿ ಪೂಜಾ ಸಾಮಗ್ರಿಗಳು:*
ಮಂತ್ರ ಪಠಣೆಯ ಹೊರತಾಗಿ, ಸಾಧ್ಯವಾದಷ್ಟು ಸಂಗೀತ ಸೇವೆಗಳನ್ನು ಮಾಡುವ ಮೂಲಕ, ಭಗವತಿಗೆ ಗಂಧ, ಪುಷ್ಪ, ಪತ್ರೆ ಮುಂತಾದವುಗಳನ್ನು ಅರ್ಪಿಸಿ. ಪುಸ್ತಕ ಮತ್ತು ಪೆನ್‌ನ್ನು ಸರಸ್ವತಿ ದೇವಿಯನ್ನು ವಾಸಸ್ಥಾನವೆಂದು ಪರಿಗಣಿಸಲಾಗುತ್ತದೆ ಆದ್ದರಿಂದ ಪುಸ್ತಕ ಮತ್ತು ಪೆನ್‌ನ್ನು ಪೂಜಿಸಬೇಕು. ಮಾಘ ಶುಕ್ಲ ಪಂಚಮಿಯನ್ನು ಅನಧ್ಯಾಯ ಎಂದೂ ಕರೆಯುತ್ತಾರೆ. ಸರಸ್ವತಿ ದೇವಿಯನ್ನು ಪೂಜಿಸುವಾಗ ಹೆಚ್ಚಿನ ವಸ್ತುಗಳು ಬಿಳಿ ಬಣ್ಣದಲ್ಲಿರಬೇಕು.
ಹಾಲು, ಮೊಸರು, ಬೆಣ್ಣೆ, ಅಕ್ಕಿ, ಬಿಳಿ ಎಳ್ಳಿನ ಲಡ್ಡುಗಳನ್ನು, ಕಬ್ಬು ಮತ್ತು ಕಬ್ಬಿನ ರಸ, ಮಾಗಿದ ಬೆಲ್ಲ, ಜೇನುತುಪ್ಪ, ಬಿಳಿ ಶ್ರೀಗಂಧದ ಮರ, ಬಿಳಿ ಹೂವುಗಳು, ಬಿಳಿ ಉಡುಗೆ, ಬಿಳಿ ಅಲಂಕಾರ, ಖೋವಾ, ಶುಂಠಿ, ಮೂಲಂಗಿ, ಸಕ್ಕರೆ, ಅಕ್ಷತೆ, ಮೋದಕ, ಧೃತ, ಮಾಗಿದ ಬಾಳೆಹಣ್ಣು, ದ್ವಿದಳ ಧಾನ್ಯ, ತೆಂಗಿನಕಾಯಿ, ತೆಂಗಿನ ನೀರು, ಶ್ರೀಫಲ, ಬದರಿಫಲ ಇತ್ಯಾದಿ ವಸ್ತುಗಳನ್ನು ಪೂಜೆಯಲ್ಲಿ ಬಳಸಲಾಗಿದೆ.
*ವಸಂತ ಪಂಚಮಿ ಪ್ರಾಮುಖ್ಯತೆ:*
ಧರ್ಮಗ್ರಂಥಗಳ ಪ್ರಕಾರ, ಭಗವಾನ್ ಶ್ರೀಮನ್ನಾರಾಯಣನು ವಾಲ್ಮೀಕಿಗೆ ಸರಸ್ವತಿಯ ಮಂತ್ರವನ್ನು ತಿಳಿಸಿದ್ದರು. ಮಹರ್ಷಿ ವಾಲ್ಮೀಕಿ, ವ್ಯಾಸ, ವಸಿಷ್ಠ, ವಿಶ್ವಾಮಿತ್ರ ಮುಂತಾದ ಋಷಿಮುನಿಗಳು ಅವರ ಆಧ್ಯಾತ್ಮಿಕ ಅಭ್ಯಾಸದಿಂದ ಮಾತ್ರ ಅವರಿಗೆ ಕೃತಜ್ಞತೆ ಸಲ್ಲಿಸಿದರು. ಭಗವತಿ ಸರಸ್ವತಿಯನ್ನು ಆಹ್ಲಾದಕರಗೊಳಿಸಿ, ವಿಶ್ವವಿಜಯ ಎಂಬ ಸರಸ್ವತಿ ರಕ್ಷಾಕವಚದ ರಕ್ಷಣೆಯ ವರವನ್ನು ಪಡೆದುಕೊಂಡರು. ಭಗವತಿ ಸರಸ್ವತಿಯ ಈ ಅದ್ಭುತ ವಿಶ್ವವಿಜಯ ರಕ್ಷಾಕವಚವನ್ನು ಧರಿಸಿ ಮುನಿಗಳು ಸಾಧನೆ ಮಾಡಿದರು. ಸಂಪತ್ತಿನ ಮೂಲವೇ ವಿದ್ಯೆ ಎಂದು ಹೇಳಲಾಗುತ್ತದೆ.
*ತಾಯಿ ಸರಸ್ವತಿ ವ್ರತದ ನಿಯಮ:*
1. ವೇದಗಳು, ಪುರಾಣಗಳು, ರಾಮಾಯಣ, ಗೀತೆ ಇತ್ಯಾದಿ ಪಠ್ಯಗಳನ್ನು ಗೌರವಿಸಬೇಕು. ದೇವಿಯ ದೈವಿಕ ವಿಗ್ರಹವನ್ನು ಪವಿತ್ರ ಸ್ಥಳದಲ್ಲಿ ಇಡಬೇಕು, ಅಪವಿತ್ರ ಸ್ಥಳದಲ್ಲಲ್ಲ.
2. ಇದನ್ನು ಮಣೆ, ಮಂಟಪ ಇತ್ಯಾದಿಗಳ ಮೇಲೆ ಇಡಬೇಕು. ಮುಂಜಾನೆ ಎದ್ದು ಸರಸ್ವತಿ ದೇವಿಯನ್ನು ಧ್ಯಾನಿಸಬೇಕು.
3. ವಿದ್ಯಾರ್ಥಿಗಳು ವಿಶೇಷವಾಗಿ ಸರಸ್ವತಿ ದೇವಿಯ ವ್ರತವನ್ನು ಅನುಸರಿಸಬೇಕು.
*ಹಿಂದೂ ಸಂಸ್ಕ್ರತಿಯಲ್ಲಿ ಪ್ರತಿಯೊಂದಕ್ಕೂ ಕಾರಣ ಇದೆ ಸ್ನೇಹಿತರೇ....ನಮ್ಮ ಸನಾತನ ಸಂಸ್ಕೃತಿ ಮರೆಯಬೇಡಿ*🙏
*!! ಶ್ರೀಕೃಷ್ಣಾರ್ಪಣಮಸ್ತು !!*
*ಅಡ್ಮಿನ್ ಬಳಗ .*
ಆಧ್ಯಾತ್ಮಿಕ ವಿಚಾರದ ಉಪಯುಕ್ತ ಮಾಹಿತಿ ನಿಮ್ಮಗೇ ಬೇಕಾದಲ್ಲಿ. ಸಂಪಾದಕೀಯ ಶಾಖೆ ಮಂಗಳೂರು.ಮೊಬೈಲ್ +919945295560 ಮುಖ್ಯ ಕಛೇರಿ ಯುರೋಪ್.
ಆಧ್ಯಾತ್ಮಿಕ ವಿಚಾರದ ಉಪಯುಕ್ತ ಮಾಹಿತಿ ನಿಮ್ಮಗೇ ಬೇಕಾದಲ್ಲಿ. WhatsApp:https://chat.whatsapp.com/ISbrOeVLYcP5M7irDdsxKc
⬆️ಇಲ್ಲಿ ಕ್ಲಿಕ್ ಮಾಡಿ.
Post a Comment