ಗುವಾಹಟಿಯಲ್ಲಿ ನಡೆದ ಮೂರು ಪಂದ್ಯಗಳ ಸರಣಿಯ ಮೊದಲ ಏಕದಿನ ಪಂದ್ಯದಲ್ಲಿ ಭಾರತ 67 ರನ್‌ಗಳಿಂದ ಶ್ರೀಲಂಕಾವನ್ನು ಸೋಲಿಸಿತು

ಜನವರಿ 11, 2023
11:27AM

ಗುವಾಹಟಿಯಲ್ಲಿ ನಡೆದ ಮೂರು ಪಂದ್ಯಗಳ ಸರಣಿಯ ಮೊದಲ ಏಕದಿನ ಪಂದ್ಯದಲ್ಲಿ ಭಾರತ 67 ರನ್‌ಗಳಿಂದ ಶ್ರೀಲಂಕಾವನ್ನು ಸೋಲಿಸಿತು

@BCCI
ಕ್ರಿಕೆಟ್‌ನಲ್ಲಿ, ಗುವಾಹಟಿಯ ಬರ್ಸಾಪರಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಮೂರು ಪಂದ್ಯಗಳ ಸರಣಿಯ ಮೊದಲ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಭಾರತ 67 ರನ್‌ಗಳಿಂದ ಶ್ರೀಲಂಕಾವನ್ನು ಸೋಲಿಸಿತು. 374 ರನ್‌ಗಳ ಗೆಲುವಿನ ಗುರಿ ಬೆನ್ನತ್ತಿದ ಪ್ರವಾಸಿ ತಂಡ ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 306 ರನ್‌ ಗಳಿಸಿತು. ದಸುನ್ ಶನಕ ಅಜೇಯ 108 ರನ್, ಪಾತುಮ್ ನಿಸ್ಸಾಂಕ 72 ಮತ್ತು ಧನಂಜಯ ಡಿಸಿಲ್ವಾ 47 ರನ್ ಗಳಿಸಿದರು. ಭಾರತದ ಪರ ಉಮ್ರಾನ್ ಮಲಿಕ್ ಮೂರು ಮತ್ತು ಮೊಹಮ್ಮದ್ ಸಿರಾಜ್ ಎರಡು, ಹಾರ್ದಿಕ್ ಪಾಂಡ್ಯ, ಮೊಹಮ್ಮದ್ ಶಮಿ ಮತ್ತು ಯುಜುವೇಂದ್ರ ಚಾಹಲ್ ತಲಾ ಒಂದು ವಿಕೆಟ್ ಪಡೆದರು. ಈ ಮೂಲಕ ಭಾರತ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

ಮೊದಲು ಬ್ಯಾಟ್ ಮಾಡಿದ ಭಾರತ ನಿಗದಿತ 50 ಓವರ್‌ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 373 ರನ್ ಗಳಿಸಿತು. ವಿರಾಟ್ ಕೊಹ್ಲಿ 113 ರನ್ ಗಳಿಸಿದರು, ಅವರ 73 ನೇ ಅಂತಾರಾಷ್ಟ್ರೀಯ ಶತಕ. ರೋಹಿತ್ ಶರ್ಮಾ 83 ಮತ್ತು ಶುಭಮನ್ ಗಿಲ್ 70 ರನ್ ಕೊಡುಗೆ ನೀಡಿದರು. ಶ್ರೀಲಂಕಾ ಪರ ಕಸುನ್ ರಜಿತಾ ಮೂರು ವಿಕೆಟ್ ಪಡೆದರು.

Post a Comment

Previous Post Next Post