[04/01, 6:18 PM] +91 91648 66863: *ಶ್ರೀ ಗುರುಭ್ಯೋ ನಮ:*
ಬ್ರಾಹ್ಮಣ ಅರ್ಚಕರ ಮತ್ತು ಪುರೋಹಿತರ ರಾಜ್ಯ ಮಟ್ಟದ ಬೃಹತ್ ಸಮಾವೇಶ ಹಾಗೂ ಶ್ರೀ ದತ್ತ ಮಹಾರಾಜರ ಮಹಾಯಾಗಕ್ಕೆ ಸರ್ವರಿಗೂ ಹಾರ್ದಿಕ ಸ್ವಾಗತ..
ಅಫಜಲಪುರ ತಾಲ್ಲೂಕಿನ ಶ್ರೀ ಕ್ಷೇತ್ರ ಗಾಣಗಾಪೂರನಲ್ಲಿ ದಿನಾಂಕ 9 - 01 - 2023 ರಂದು ಈ ಕಾರ್ಯಕ್ರಮ ನಡೆಯಲಿದೆ...
ಈ ಕಾರ್ಯಕ್ರಮ ಬೆಳಿಗ್ಗೆ 7 ಗಂಟೆಯಿಂದ ಶುರುವಾಗುವ ಮೂಲಕ *ಲೋಕ ಕಲ್ಯಾಣಾರ್ಥಕವಾಗಿ ಚತುರ್ವೇದ ಪಾರಯಾಣ, ದತ್ತ ಮಾಲಾ ಜಪ, ಹೋಮ, ಪುರ್ಣಾಹುತಿ, ಶೋಭಾಯಾತ್ರೆ, ಆಗಮಿಸುವಂತಹ ಭಕ್ತವೃಂದರಿಗೆ ತೀರ್ಥ ಪ್ರಸಾದ* ವ್ಯವಸ್ಥೆ ಮಾಡಲಾಗಿರುತ್ತದೆ.,
*( ದತ್ತಮಾಲಾ, ಹೋಮ ಹಾಗೂ ಚತುರ್ವೇದ ಪಾರಾಯಣ ಸಮಸ್ತ ಅರ್ಚಕರ ಮತ್ತು ಪುರೋಹಿತರ ನೇತೃತ್ವದಲ್ಲಿ ನಡೆಯಲಿದೆ )*
ಮಧ್ಯಾಹ್ನ 3 ಗಂಟೆಯಿಂದ ಸಭಾ ಕಾರ್ಯಕ್ರಮ ಪ್ರಾರಂಭವಾಗುವ ಜೊತೆಗೆ ಕಾರ್ಯಕ್ರಮದ ಉದ್ದೇಶ, ಸರ್ವ ವಿದ್ವಾಂಸರ ಸಂದೇಶ, ಸಂಘಟನೆ ಕುರಿತು ಎಲ್ಲ ಭಕ್ತವೃಂದರನ್ನು ಉದ್ದೇಶಿಸಿ ಮಾತಾನಾಡಲಿದ್ದಾರೆ..
ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಕಲಬುರಗಿ ಸೇರಿದಂತೆ ನಾಡಿನಾದ್ಯಂತ ಅರ್ಚಕರು ಮತ್ತು ಪುರೋಹಿತರ ಸಹಸ್ರಾರು ಸಂಖ್ಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ,,
ಬರುವಂತಹ *9 - 01 - 2023* ರಂದು ಸರ್ವ ವಿಪ್ರ ಬಾಂಧವರು ಇತಿಹಾಸ ಕಂಡರಿಯದ, ಅದ್ಭುತ, ಅನನ್ಯ, ಅಮೋಘ ಶ್ರೀ ದತ್ತ ಮಹಾರಾಜರ ಸನ್ನಿಧಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸಕಲ ಭಕ್ತವೃಂದರು ಪಾಲ್ಗೊಳ್ಳುವ ಮೂಲಕ ದತ್ತ ಮಹಾರಾಜರ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿ.,
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :
*ಶ್ರೀ ಗುಂಡಾಚಾರ್ಯ ಜೋಶಿ* ( ನರಿಬೋಳ ) 90080 41452
ಧನ್ಯವಾದಗಳು
*ಪ್ರಸನ್ನ ದೇಶಪಾಂಡೆ*
[04/01, 6:27 PM] +91 91644 68888: 🕉️ ಓಂ ಶ್ರೀ ಗುರುಭ್ಯೋ ನಮಃ 🕉️ *ಬನದ ಹುಣ್ಣಿಮೆಯಂದು ದೇವಿ ಬನಶಂಕರಿಯನ್ನು ಆರಾಧಿಸಿ*
ಹಿಂದೂ ಧರ್ಮದಲ್ಲಿ ಪ್ರತಿಯೊಂದು ಹುಣ್ಣಿಮೆಗಳಿಗಿರುವ ವಿಶೇಷತೆಯಂತೆ ಪುಷ್ಯ ಮಾಸದಲ್ಲಿ ಬರುವ ಹುಣ್ಣಿಮೆಗೂ ಅತ್ಯಂತ ಮಹತ್ವವನ್ನೂ ನೀಡಲಾಗುತ್ತದೆ. ಈ ಹುಣ್ಣಿಮೆಯಂದು ಯಾವ ಪೂಜೆ, ಪುನಸ್ಕಾರ, ವ್ರತಾಚರಣೆಯನ್ನು ಮಾಡಬೇಕು ಎನ್ನುವುದರ ಕುರಿತು ಮಾಹಿತಿ ಇಲ್ಲಿದೆ ನೋಡಿ.
ಹಿಂದೂ ಧರ್ಮದಲ್ಲಿ ಹುಣ್ಣಿಮೆ ಹಾಗೂ ಅಮಾವಾಸ್ಯೆಗಳಿಗೆ ಬಹಳಷ್ಟು ಮಹತ್ವ ನೀಡಲಾಗುತ್ತದೆ. ವರ್ಷದಲ್ಲಿ ಬರುವಂತಹ 12 ಹುಣ್ಣಿಮೆಗಗಳಿಗೂ ಒಂದೊಂದು ವಿಶೇಷತೆ ಇರುವಂತೆ ಪುಷ್ಯ ಮಾಸದಲ್ಲಿ ಬರುವಂತಹ ಹುಣ್ಣಿಮೆಗೂ ಇದೆ. ಈ ಹುಣ್ಣಿಮೆಯನ್ನು ಬನದ ಹುಣ್ಣಿಮೆ ಅಥವಾ ಬನಶಂಕರಿ ಹುಣ್ಣಿಮೆ ಎಂದೂ ಕರೆಯುತ್ತಾರೆ.
ಈ ಬಾರಿ ಪುಷ್ಯಮಾಸದ ಹುಣ್ಣಿಮೆಯು *ಜನವರಿ 6 ರ ಶುಕ್ರವಾರ* ದಂದು ಅಂದರೆ ಹಿಂದೂ ಪಂಚಾಂಗದ ಪ್ರಕಾರ ಪುಷ್ಯ ಮಾಸದ ಶುಕ್ಲ ಪಕ್ಷದ ಪೂರ್ಣಿಮಾ ದಿನದಂದು ನಡೆಯಲಿದೆ. ಅತ್ಯಂತ ಪವಿತ್ರವಾದ ಈ ದಿನ ಪೌರ್ಣಮಿ ಉಪವಾಸ ಹಾಗೂ ಶ್ರೀ ಸತ್ಯನಾರಾಯಣ ಪೂಜೆಯನ್ನು ಮಾಡಿದರೆ ಶ್ರೇಷ್ಠವೆನ್ನುತ್ತಾರೆ. ಪುಷ್ಯ ಹುಣ್ಣಿಮೆಯ ಇನ್ನೊಂದು ವಿಶೇಷತೆಯೆಂದರೆ ಮಾಘ ಸ್ನಾನವು ಕೂಡಾ ಈ ಹುಣ್ಣಿಮೆಯಿಂದ ಆರಂಭವಾಗುತ್ತದೆ.
*ಹುಣ್ಣಿಮೆ ಪೂಜೆಯ ಸಮಯ*
ಹುಣ್ಣಿಮೆ ತಿಥಿ ಆರಂಭ: *ಜನವರಿ 5 ಗುರುವಾರ ರಾತ್ರಿ 02-13* ರಿಂದ
ಹುಣ್ಣಿಮೆ ತಿಥಿ ಅಂತ್ಯ: *ಜನವರಿ 6 ಶುಕ್ರವಾರ ರಾತ್ರಿ 04-36* ರವರೆಗೆ
ಹುಣ್ಣಿಮೆಯಂದು ಸತ್ಯನಾರಾಯಣ ಪೂಜೆ ಮಾಡಿದರೆ ಶ್ರೇಷ್ಠವೆಂದು ಹೇಳುತ್ತಾರೆ. ಸತ್ಯನಾರಾಯಣನು ಭಗವಾನ್ ಮಹಾವಿಷ್ಣುವಿನ ಪ್ರತಿರೂಪವೇ ಆಗಿರುವುದರಿಂದ ಕುಟುಂಬದ ಸಂತೋಷ ಹಾಗೂ ಸಮೃದ್ಧಿಗಾಗಿ ವಿಶೇಷವಾಗಿ ಸತ್ಯನಾರಾಯಣ ಪೂಜೆಯನ್ನು ಮಾಡಲಾಗುತ್ತದೆ. ಸತ್ಯನಾರಾಯಣ ಕಥೆಯನ್ನು ನೀವೇ ಪಠಿಸಬಹುದು ಅಥವಾ ಬ್ರಾಹ್ಮಣರಿಂದಲೂ ಪೂಜೆ ಮಾಡಿಸಬಹುದು.
ಬನದ ಹುಣ್ಣಿಮೆಯು ಪುಷ್ಯ ಮಾಸದಲ್ಲಿ ಬರುವ ಹುಣ್ಣಿಮೆಗಿರುವ ಇನ್ನೊಂದು ಹೆಸರು. ಈ ತಿಂಗಳಲ್ಲಿ ಕೆಲವೆಡೆ ಪುಷ್ಯ ಮಾಸದ ಶುಕ್ಲಪಕ್ಷದ ಅಷ್ಟಮೀ ದಿನದಿಂದ ಬನದ ಹುಣ್ಣಿಮೆಯ ನವರಾತ್ರಿಯನ್ನು ಆಚರಿಸುತ್ತಾರೆ. ಅಷ್ಟಮಿಯಿಂದ ಹುಣ್ಣಿಮೆಯವರೆಗೂ ದುರ್ಗೆಯ ವಿವಿಧ ಅವತಾರಗಳನ್ನು ಪೂಜಿಸಲಾಗುತ್ತದೆ. ಬನದ ಹುಣ್ಣಿಮೆಯಂದು ರಾಜ್ಯದ ಎಲ್ಲಾ ಬನಶಂಕರಿ ದೇವಾಲಯಗಳಲ್ಲಿ ಪೂಜೆ ಪುನಸ್ಕಾರಗಳು ಸೇರಿದಂತೆ ಬನಶಂಕರಿ ರಥೋತ್ಸವವೂ ನಡೆಯುತ್ತದೆ.
ಶುಕ್ರ ಹಾಗೂ ಚಂದ್ರ ಗ್ರಹಗಳ ದೋಷವನ್ನು ಬನಶಂಕರಿ ದೇವಿಯು ನಿವಾರಿಸುತ್ತಾಳೆ ಎನ್ನುವ ನಂಬಿಕೆ ಭಕ್ತರಲ್ಲಿರುವುದರಿಂದ ಈ ದಿನ ಶೀತಬಾಧೆ, ಕಿಡ್ನಿ ಸಮಸ್ಯೆ, ರಕ್ತಕ್ಕೆ ಸಂಬಂಧಪಟ್ಟ ತೊಂದರೆ ಇರುವವರು ಮಾನಸಿಕ ಸಮಸ್ಯೆ, ಹಣಕಾಸಿನ ಸಮಸ್ಯೆ ಇರುವವರ ಪುಷ್ಯ ಮಾಸದ ಹುಣ್ಣಿಮೆಯ ದಿನ ಬನಶಂಕರಿ ದೇವಿಯನ್ನು ಪೂಜಿಸಿದರೆ ಉತ್ತಮ ಫಲವನ್ನು ಪಡೆಯಬಹುದು.
ಶುಕ್ರವಾರ ಹುಣ್ಣಿಮೆಯ ಯೋಗದಲ್ಲಿ ಲಕ್ಷ್ಮೀ ಸಮೇತ ಮಹಾವಿಷ್ಣುವನ್ನು ಪೂಜಿಸಿ. ಅರ್ಚನೆಯನ್ನು ಮಾಡುವಾಗ ಕೇಸರಿ ಮಿಶ್ರಿತ ಹಾಲಿನಿಂದ ಶಂಖದಲ್ಲಿ ಅಭಿಷೇಕ ಮಾಡಿದರೆ ಒಳ್ಳೆಯದು. ಪೌರ್ಣಮಿಯ ದಿನದಂದು ಅಥವಾ ಪೌರ್ಣಮಿಯ ಹಿಂದಿನ ದಿನ ಅಂದರೆ ಚತುರ್ದಶಿಯು ಅಂತ್ಯವಾಗಿ ಹುಣ್ಣಿಮೆ ತಿಥಿಯು ಆರಂಭವಾಗುವಾಗ ಉಪವಾಸ ವ್ರತವನ್ನು ಕೈಗೊಳ್ಳಬಹುದು. ಪೌರ್ಣಮಿಯ ದಿನ ಬಾಲಗೋಪಾಲನನ್ನೂ ತುಳಸಿ ದಳಗಳಿಂದ ಆರಾಧಿಸಬಹುದು.
ಪೌರ್ಣಮಿಯ ದಿನ ಶುಕ್ರವಾರ ಆಂಜನೇಯ ದೇವಾಲಯದಲ್ಲಿ ದೀಪವನ್ನು ಬೆಳಗಿ ಹನುಮಾನ್ ಚಾಲೀಸವನ್ನು ಪಠಿಸಬಹುದು. ಸಮಯವಿದ್ದಲ್ಲಿ ಸುಂದರಕಾಂಡವನ್ನೂ ಓದಬಹುದು. ಜೊತೆಗೆ 'ಓಂ ಏಂ ಹನುಮತೇ ರಾಮದೂತಾಯ ನಮಃ' ಮಂತ್ರವನ್ನು ಹೇಳಿದರೆ ಒಳ್ಳೆಯದು.
Post a Comment