[04/01, 7:30 PM] +91 89713 62063: 🌸🌸🌸🌸🌸🌸🌸
*#ರಘೋತ್ತಮರು"*
🌸🌸🌸🌸🌸🌸🌸
ದೇವರು ನಮ್ಮನ್ನು ಹುಟ್ಟಿಸುವಾಗ ನಮ್ಮ ಮುಂದಿನ ಆಗುಹೋಗುಗಳನ್ನು , ಸಾಧನೆಯನ್ನು , ಆ ಸಾಧನೆಯಲ್ಲಿ ನಾವು ಕಾಣುವ ಏರಿಳಿತಗಳೆಲ್ಲವನ್ನೂ ಬರೆಯುತ್ತಾನೆ.ಯಾರಾದ್ರೂ ಆ ನಿಟ್ಟಿನಲ್ಲೇ ಸಾಗಬೇಕು.ಇಷ್ಟೆಲ್ಲದರ ಮಧ್ಯದಲ್ಲಿ ಎಲ್ಲದಕ್ಕೂ ಮಿಗಿಲಾದ ನಮ್ಮ ಕರ್ಮಗಳನ್ನು ನಮ್ಮ ಬದುಕಿನ ಜೊತೆಯಲ್ಲಿ ಹೆಣೆದಿಡುತ್ತಾನೆ.ನಾವು ಎಂತಹ ಕರ್ಮಗಳ ಪಾಲಾಗುತ್ತೇವೊ ಅಂತಹ ಫಲಗಳು ನಮ್ಮದಾಗುತ್ತವೆ.ಅಷ್ಟರಲ್ಲೂ ಯಾವ ವ್ಯಕ್ತಿಯ ಕರ್ಮವು ಯಾರನ್ನು ಎತ್ತರಕ್ಕೆ ಏರಿಸುತ್ತದೆ ಯಾರನ್ನು ಇಳಿಸುತ್ತದೆ ಎನ್ನುವದನ್ನು ಬಲ್ಲವನು ಆ ದೇವರು ಮಾತ್ರ.ಇಂದಿನ ಕಥಾನಾಯಕರಾದ ರಘುತ್ತಮರ ಕರ್ಮಗಳು ಹಾಗೂ ಅವರ ಯೋಗ್ಯತೆಯನ್ನು ಪೂರ್ಣವಾಗಿ ಅರಿತ ಆ ಭಗವಂತನು ಅವರಿಗೆ ತಮ್ಮ 7ನೇಯ ವರುಷಕ್ಕೇನೆ ಪೀಠಾಧಿಪತಿಯಾಗುವ ಮಹಾಭಾಗ್ಯವನ್ನು ಕೊಟ್ಟನು.
*"ಪುಟ್ಟ ಬಾಲಕನ ಸನ್ಯಾಸ"*
ಉತ್ತರಾದಿ ಮಠದ ಪರಂಪರೆಯಲ್ಲಿ ಬಾಲ್ಯಾವಸ್ಥೆಯಲ್ಲಿ ಆಶ್ರಮವನ್ನು ಕೊಡುವದು ಕಂಡು ಬಂದಿಲ್ಲ.ಆದರೆ ಅದೇ ಮೊಟ್ಟ ಮೊದಲ ಸನ್ಯಾಸಿಗಳು ಶ್ರೀರಘುತ್ತಮರು.ಶ್ರೀಶ್ರೀ1008ಶ್ರೀ ರಘುವರ್ಯ ತೀರ್ಥರಿಂದ ತಮ್ಮ7ನೇಯ ವರುಷದಲ್ಲಿಯೇ ಆಶ್ರಮವನ್ನು ಪಡೆದರು ಇಂದಿನ ಕಥಾನಾಯಕರಾದ ಶ್ರೀಶ್ರೀ1008ಶ್ರೀ ರಘುತ್ತಮ ತೀರ್ಥರು.ರಘುತ್ತಮರಿಗೆ ಸನ್ಯಾಸವಾಗಿ ಕೆಲವೇ ದಿನಗಳಲ್ಲಿ ಶ್ರೀ ರಘುವರ್ಯರು ವೃಂದವನಸ್ಥರಾದರು.ಮನೆಯಲ್ಲಿ ಎಲ್ಲಾ ಜನರಿದ್ದರೂ ತಾಯಿ ಇಲ್ಲದ ಮಗುವಿನ ಹಾಗೆ... ಮಠದ ಎಲ್ಲಾ ಪಂಡಿತರು ಹಾಗು ಸಿಬ್ಬಂದಿಗಳಿದ್ದರೂ ಗುರುಗಳು ಇಲ್ಲದೇನೇ ಏಕಾಕಿಯಾಗಿ ಉಳಿದರು ರಘುತ್ತಮರು.ಗುರುಗಳು ಪೀಠವನ್ನು ಕೊಟ್ಟು ಅನುಗ್ರಹವನ್ನು ಮಾಡಿದ್ದರೂ ಆ ಪೀಠದಲ್ಲಿ ಕೂತು ಆಳುವ ವಯಸ್ಸು ಅವರಿಗಿರಲಿಲ್ಲ.ಆದರೆ ಏನು ಮಾಡುವದು ಯೋಗ್ಯತೆಗೆ ಅನುಗುಣವಾದ ಹಾಗು ಕರ್ಮಕ್ಕೆ ತಕ್ಕ ಫಲವನ್ನು ಪಡೆಯಲೇಬೇಕು.ಅವರ ಯೋಗ್ಯತೆ ಹಾಗೂ ಕರ್ಮವು ಇಂತಹ ಉತ್ತಮವಾದ ಸ್ಥಾನದಲ್ಲಿ ಅವರನ್ನು ಚಿಕ್ಕವಯಸ್ಸಿನಲ್ಲೇ ತಂದು ಕೂಡಿಸಿತು.ಗುರುಗಳಾದ ರಘುವರ್ಯರು ತಾವು ಇರುವಾಗಲೇ ತಮ್ಮ ಶಿಷ್ಯರಾದ ಆದ್ಯ ವರದರಾಜಾಚಾರ್ಯನ್ನು ಬಾಲ ಸನ್ಯಾಸಿಗಳಾದ ರಘುತ್ತಮರಿಗೆ ಪಾಠವನ್ನು ಹೇಳಿಕೊಡಲು ನಿಯಮಿಸಿದ್ದರು.ನಿತ್ಯವೂ ಶ್ರೀರಾಮದೇವರ ಪೂಜೆ ಹಾಗೂ ವರದರಾಜಾಚಾರ್ಯರಿಂದ ಮಣಿಮಂಜರಿಯೇ ಮೊದಲಾದ ಚಿಕ್ಕ ಗ್ರಂಥಗಳನ್ನು ಓದುತ್ತ ಬೆಳೆಯುತ್ತ ನಡೆದರು ರಘುತ್ತಮರು.
*"ಅನುಭವಿಸಿದ ಅವಮಾನಕ್ಕೆ ಉತ್ತರವಾದ ಗುರ್ವನುಗ್ರಹ"*
ಮನುಷ್ಯನಿಗೆ ಸಹಜವಾಗಿ ತಿಳುವಳಿಕೆ ಬಂದಮೇಲೆನೇ ಸರಿ ತಪ್ಪುಗಳ ಅರಿವಾದರೂ ಅಹಂಕಾರ,ಅವಮಾನಗಳ ಪರಿಚಯವು ಹುಟ್ಟಿದಾಗಲೇ ಆಗುತ್ತದೆ.ವಯಸ್ಸಿಗೆ ತಕ್ಕಂತೆ ಅವುಗಳು ಬೆಳೆದು ಬರುತ್ತವಷ್ಟೇ.ಅಂತೆಯೇ ನಾವು ಮಕ್ಕಳಿಗೆ ಏನಾದ್ರು ತಿದ್ದಲು ಹೊದರೆ ಅವುಗಳು ಸಿಟ್ಟಿಗೆ ಬಂದು ಅಳುವದನ್ನು ಆರಂಭಿಸುತ್ತವೆ.ಅಥವಾ ತಮ್ಮ ಮೃದುವಾದ ಮುದ್ದು ಕೈಗಳಿಂದ ಹೊಡೆಯಲು ಬರುತ್ತವೆ.ಇದು ಪ್ರತಿಯೊಬ್ಬ ಜೀವಿಯ ಅವಸ್ಥೆಯಾಗಿದೆ.ಹೀಗಿರುವಾಗ ಒಮ್ಮೆ ಒಬ್ಬ ಯಜಮಾನನು ರಘುತ್ತಮರನ್ನು ತಮ್ಮಲ್ಲೇ ಬಂದು ಭಿಕ್ಷೆಯನ್ನು ಸ್ವೀಕರಿಸುವಂತೆ ಪ್ರಾರ್ಥಿಸುತ್ತಾನೆ.ಸ್ವಾಮಿಗಳು ಆಗಲಿ ಎಂದು ಅನುಮೋದಿಸುತ್ತಾರೆ.ಮರುದಿನ ರಘುತ್ತಮರು ರಾಮದೇವರ ಪೂಜಾದಿಗಳನ್ನು ಮುಗಿಸಿ ಭೋಜನ ಶಾಲೆಗೆ ಬರಲು ತಡವಾಗುತ್ತದೆ.ಅಷ್ಟರಲ್ಲಿ ರಘುತ್ತಮರಿಗೆ ಪಾಠ ಹೇಳುವ ವರದರಾಜಾಚಾರ್ಯರು ಸ್ವಾಮಿಗಳಿಗಾಗಿ ಕಾಯದೇನೇ ಎಲ್ಲಾ ಶಿಷ್ಯರೊಡಗೂಡಿ ಊಟಕ್ಕೆ ಕುತ್ತು ರಘುತ್ತಮರನ್ನು ಅವಮಾನಿಸುತ್ತಾರೆ.(ಆ ರಘುತ್ತಮರಿಗಾಗಿ ಯಾರು ಕಾಯುವದು ಬೇಡ.. ಅವರು ನನ್ನ ಶಿಷ್ಯರು.ನಾವು ಊಟಕ್ಕೆ ಕುತ್ತುಬಿಡೋಣ) ಈ ವಿಷಯವನ್ನು ಅರಿತ ರಘುತ್ತಮರು "ನನಗೆ ಗೌರವ ಕೊಡಯುವದು ಬೇಡ... ಆದರೆ ಉತ್ತರಾದಿ ಮಠದ ಈ ಪೀಠಕ್ಕಾದರು ಅಗೌರವ ಮಾಡಬಾರದಿತ್ತು" ಎಂದು ಬಹಳ ಬೇಜಾರು ಮಾಡಿಕೊಳ್ಳುತ್ತಾರೆ.ಅಂದಿನ ದಿನ ತಮ್ಮ ಪೂಜೆಯನ್ನು ಹಾಗೂ ಜಪಾದಿಗಳನ್ನು ಮಾಡಿ ಹಾಗೆಯೇ ಉಪವಾಸದಿಂದ ಮಲಗುತ್ತಾರೆ.
ಶಿಷ್ಯನ ದುಃಖದ ಆಕೂತವನ್ನು ಅರಿತ ರಘುವರ್ಯರು ಬೆಳಗಿನ ಅರುಣೋದಯದಿ ಸ್ವಪ್ನದಲ್ಲಿ ಬಂದು ಓಂಕಾರವನ್ನು ರಘುತ್ತಮರ ನಾಲಿಗೆಯ ತುದಿಯಲ್ಲಿ ಬರೆದು... ನಾಳೆಯಿಂದ ನೀವೇ ಪಾಠವನ್ನು ಹೇಳುವಿರಿ ಎಂದು ಅನುಗ್ರಹಿಸಿ ಹೋದರು.ಮರುದಿನ ಬೆಳಿಗ್ಗೆ ವರದರಾಜಾಚಾರ್ಯರು ಪಾಠಕ್ಕಾಗಿ ಮಠಕ್ಕೆ ಬಂದು ನೋಡಿದರೆ... ಯಾರನ್ನು ನಿನ್ನೆಯ ದಿನ ಕೇವಲ ಊಟಕ್ಕಾಗಿ ಅವಮಾನಸಿದ್ದರೋ... ಆ ಪುಟ್ಟ ಸನ್ಯಾಸಿಯೇ ಪೀಠದಲ್ಲಿ ಕುಳಿತು ಶ್ರೀಮನ್ನ್ಯಾಯಸುಧಾ ಗ್ರಂಥವನ್ನು ತಮ್ಮ ಪುಟ್ಟ ಕೈಗಳಲ್ಲಿ ಹೊತ್ತು... ಅದ್ಭುತವಾಗಿ ಪಾಠವನ್ನು ಹೇಳಲು ಆರಂಭಿಸಿದರು.ಮೈ ರೋಮಾಂಚನವಾಗಿ ಬೆರಗಾಗಿ ನಿಂತರು.ಆಗ ವರದರಾಜಾಚಾರ್ಯರಿಗೆ ತಮ್ಮ ತಪ್ಪಿನ ಅರಿವಾಗುತ್ತದೆ.
ರಘುತ್ತಮರಲ್ಲಿ ಬಂದು ಕ್ಷಮೆಯನ್ನು ಯಾಚಿಸುತ್ತಾರೆ.ರಘುತ್ತಮರು ಅನುಭವಿಸಿದ ಅವಮಾನಕ್ಕೆ ಉತ್ತರವಾಗಿ ಬಂತು ಗುರುಗಳ ಅನುಗ್ರಹ.
*"ಭಾವಬೋಧರ ಪಂಚಬೋಧಗಳು"*
(ರಘುತ್ತಮರ)
ಆ ದೇವರು ನಮ್ಮ ಪರಂಪರೆಯಲ್ಲಿ ಟಿಪ್ಪಣಿಕಾರರನ್ನು ನಮಗೆ ವರವನ್ನಾಗಿ,ಅಥವಾ ನಾವು ಟಿಪ್ಪಣಿಗಳನ್ನು ಓದಿ ಅವರಿಂದ ವರವನ್ನು ಪಡೆಯುವದಕ್ಕಾಗಿ ಕಳಿಸಿಹನು.ಅಂತಹ ಟಿಪ್ಪಣಿಕಾರರಲ್ಲಿ ಅತ್ತ್ಯುನ್ನತ ಸ್ಥಾನವನ್ನು ಪಡೆದವರು ಇಂದಿನ ಕಥಾನಾಯಕರಾದ ರಘುತ್ತಮರು.ಅದ್ಭುತವಾದ ಪಾಂಡಿತ್ಯವನ್ನು ಪಡೆದ,ಹಾಗು ಅದಕ್ಕೆ ತಕ್ಕಂತೆ ಲೇಖನ ಕೌಶಲವನ್ನು ಹೊಂದಿದ ಮಹಾನುಭಾವರು.ಅವರು ರಚಿಸಿದ ಟಿಪ್ಪಣಿಯ ಹೆಸರು ಭಾವಬೋಧ ಎಂಬುದಾಗಿ.ಅವರಿಂದ ರಚಿತವಾದ ಟಿಪ್ಪಣಿಗಳು ಐದು.1)ತತ್ವಪ್ರಕಾಶಿಕ ಭಾವಬೋಧ 2)ಬೃಹದಾರಣ್ಯಕ ಭಾವಬೋಧ 3)ತತ್ವನಿರ್ಣಯ ಭಾವಬೋಧ 4)ಗೀತಾಭಾಷ್ಯ ಭಾವಬೋಧ 5)ನ್ಯಾಯವಿವರಣ ಭಾವಬೋಧ ಎಂಬುದಾಗಿ.ಅದ್ಭೂತವಾದ ತತ್ವಗಳ ಆಕರವಾಗಿವೆ ಈ ಗ್ರಂಥಗಳು. ಉಳಿದ ಎಲ್ಲಾ ಟಿಪ್ಪಣಿಕಾರರಿಗೆ ಇವರ ಟಿಪ್ಪಣಿಗಳು ಅತ್ಯಂತ ಮಾನ್ಯವಾಗಿವೆ.
*"ಪಾಕಕರ್ತೃ ಗ್ರಂಥಕರ್ತೃ"*
ಮೊದಲು ಸನ್ಯಾಸಿಗಳು ಮನೆ ಮನೆಗೆ ಹೋಗಿ ಭಿಕ್ಷಾಟನೆ ಮಾಡಿ... ಆ ಭಿಕ್ಷಾಟನೆಯಲ್ಲಿ ಬಂದ ಪದಾರ್ಥಗಳನ್ನು ತೊಳೆದು ಮತ್ತೆ ದೇವರಿಗೆ ಅರ್ಪಿಸಿ ತಿನ್ನುವ ಪದ್ಧತಿಯು ನಡೆದು ಬಂದಿತ್ತು.ಕಾಲವು ಬದಲಾದಂತೆ ಜನರ ಶುದ್ಧಿಯು ಬದಲಾಗುವದನ್ನು ಕಂಡ ರಘುತ್ತಮರು ಸ್ವಲ್ಪ ಬದಲಾಯಿಸಿದರು.ಭಿಕ್ಷೆಗೆ ಮನೆಗೆ ಬರುವುದೇನೋ ನಿಜ.ಆದರೆ ಅಡಿಗೆ(ಚಿಕ್ಕ ನೈವೇದ್ಯ)ಮಾಡಲು ಒಬ್ಬ ವ್ಯಕ್ತಿಯನ್ನು ನಿಯಮಿಸಿದರು.ಆ ಬದಲಾವಣೆ ಆದಾಗಲೇ ಮಠಕ್ಕೆ ಸೇರಿದವರು ವೆಂಕಣ್ಣ ಭಟ್ಟರು.ಇವರು ರಘುತ್ತಮರ ಊಟಕ್ಕಾಗಿ ರೊಟ್ಟಿ ಮಾಡುವ ವ್ಯಕ್ತಿ.ಅಂತೆಯೇ ಅವರಿಗೆ ರೊಟ್ಟಿ ವೆಂಕ್ಕಣ್ಣ ಭಟ್ಟರು ಎಂದು ಕರೆಯುವ ವಾಡಿಕೆ ಇತ್ತು.ಒಮ್ಮೆ ಮಠದಲ್ಲಿ ಯಾವುದೋ ಒಂದು ವಿಷಯವನ್ನು ಅವಲಂಬಿಸಿ ಚರ್ಚೆಯು ನಡೆದಿತ್ತು.ಅದನ್ನು ಕೇಳುವ ಜಿಜ್ಞಾಸೆಯಿಂದ ಆ ಭಟ್ಟರು ಬಾಗಿಲಿನ ಹಿಂಬದಿಯಲ್ಲಿ ಮರೆಯಾಗಿ ನಿಂತು ಕೇಳಲು ಬಂದರು.ಅವರನ್ನು ಗಮನಿಸಿದ ರಘುತ್ತಮರು ಏನಪ್ಪಾ ವೆಂಕಣ್ಣಾ ನಿನಗೇನು ಅರ್ಥವಾಗತ್ತೆ? ಬೇಗ ಹೋಗಿ ಅಡಿಗೆ ಮಾಡು ಎಂದು ಹೇಳಿ ಕಳಿಸಿದರು.ಚರ್ಚೆಯಲ್ಲಾ ಮುಗಿದು ರಮಾರಮಣನ ಪೂಜೆಯಲ್ಲಾ ಆದಮೇಲೆ ರಘುತ್ತಮರ ಊಟವೂ ಮುಗಿತು.ರೊಟ್ಟಿ ವೆಂಕಣ್ಣ ಭಟ್ಟರು ಮಂತ್ರಾಕ್ಷತೆಯ ಬುಟ್ಟಿಯನ್ನು ತಂದು ಗುರುಗಳ ಎದುರಲ್ಲಿ ಇಟ್ಟರು."ಸ್ವಾಮಿ ಮಂತ್ರಾಕ್ಷತೆ ಕೊಡಬೇಕು,ನಾನು ಆತ್ಮಹತ್ಯೆಯನ್ನು ಮಾಡುವ ನಿರ್ಧಾರ ಮಾಡಿದ್ದೇನೆ... ನಾನು ಹೋಗುತ್ತೇನೆ ಎಂದು ಗುರುಗಳಿಗೆ ಪ್ರಾರ್ಥಿಸಿದರು." ಕರುಣಾಳುಗಳಾದ ರಘುತ್ತಮರು ಅವರನ್ನು ಕರೆದು,"ಎಲ್ಲೂ ಹೋಗುವ ಅಗತ್ಯವಿಲ್ಲ.... ನೀನೂ ಧೋಡ್ಡ ವಿದ್ವಾಂಸನಾಗುವಿ" ಎಂದು ಹೇಳಿ ತಲೆಮೇಲೆ ಕೈಯಿಟ್ಟು ಅನುಗ್ರಹಿಸಿದರು.ಏನೂ ಅರಿಯದ,ಶಬ್ದಗಳ ಸಾಲಿನ ಸುಳಿವೂ ಇಲ್ಲದ ಭಟ್ಟರು*"ತತ್ವಸಂಖ್ಯಾನ ಟಿಪ್ಪಣಿ,ತತ್ವೋದ್ಯೋತ ಟಿಪ್ಪಣಿ,ಕರ್ಮನಿರ್ಣಯ ಟಿಪ್ಪಣಿ ಹಾಗು ದಿನತ್ರಯ ನಿರ್ಣಯ"*ಎಂಬ ಮಹಾಗ್ರಂಥಗಳಿಗೆ ಕರ್ತೃಗಳಾಗಿ ಮಿಂಚಿದರು.ಗುರುಗಳ ಅನುಗ್ರಹದಿಂದ ಒಬ್ಬ ಪಾಕಕರ್ತೃಗಳಾದ ವೆಂಕಣ್ಣ ಭಟ್ಟರು ಗ್ರಂಥಕರ್ತೃಗಳಾದರು.
*"यत् शिष्य शिष्य शिष्याद्या: टिप्पण्णाचार्य संज्ञिताः"*
ಸಾಮಾನ್ಯವಾಗಿ ಈ ಜಗತ್ತಿನಲ್ಲಿ ಕಂಡಿದ್ದು ಹೀಗಿದೆ... ಯಾರು ವಿಶೇಷವಾದ ಸಾಧನೆಯನ್ನು ಮಾಡುತ್ತಾರೋ ಅವರ ಮಕ್ಕಳು,ಮುಂಬರುವ ಶಿಷ್ಯರೂ ಕೂಡ ಸಾಧಕರಾಗುತ್ತಾರೆ ಎಂದು ಹೇಳುವುದು ಕಷ್ಟಕರವಾದದ್ದು.ಆದರೆ ರಘುತ್ತಮರು ತಾವು ವಿಶೇಷವಾಗಿ ಟಿಪ್ಪಣಿಗಳನ್ನು ಬರೆದು ನಮಗೆ ಅನುಗ್ರಹಿಸುವಸದಲ್ಲದೆ.ತಮ್ಮ ಶಿಷ್ಯ ಪ್ರಶಿಷ್ಯರೂ ಕೂಡಾ ಉತ್ತಮರಾದ ಟಿಪ್ಪಣಿಕಾರರಾಗಿ ಬೆಳಕಿಗೆ ಬಂದು,ನಮಗೂ ಜ್ಞಾನದ ಬೆಳಕು ಕೊಡುವಂತೆ ಮಾಡಿದರು.ಒಬ್ಬೊಬ್ಬರ ಹೆಸರು ಹೇಳಲೂ ಯೋಗ್ಯತೆ ಇಲ್ಲ ನನಗೆ... ಅಷ್ಟು ಮಹಾನುಭಾವರವರು.ಆದರೂ ಅವರ ಸಂಸ್ಮರಣೆಯಿಂದಲೇ ಪಾಪವು ಕಳೆಯುವುದು ಎಂದಮೇಲೆ ಆ ಭಾಗ್ಯವನ್ನು ಏಕೆ ಕಳಿದು ಕೊಳ್ಳಬೇಕು?
*"ರಘುತ್ತಮರ ಶಿಷ್ಯರು...
1) ವೇದವ್ಯಾಸ ತೀರ್ಥರು:- ಧರ್ಮಾಬ್ಧಿ ಎಂಬ ಗ್ರಂಥಕರ್ತೃಗಳು
2) ವೇದೇಶತೀರ್ಥರು :- ತತ್ವೋದ್ಯೋತ ಮೊದಲಾದ ಗ್ರಂಥಗಳಿಗೆ ಟಿಪ್ಪಣಿಕಾರರು.
3) ಅನಂದಚಾರ್ಯ ಪಾಂಡುರಂಗಿ(ವಿದ್ಯಾಧೀಶ ತೀರ್ಥರ ತಂದೆ) ನ್ಯಾಯಾಮೃತ ಕಂಠಕೊದ್ಧಾರ ಇತ್ಯಾದಿ.
"*ರಘುತ್ತಮರ ಪ್ರಶಿಷ್ಯರು....
1)ವಿದ್ಯಾಧೀಶ ತೀರ್ಥರು:- ಶ್ರೀಮನ್ನ್ಯಾಯಸುಧಾ ಟಿಪ್ಪಣಿ.
2)ಯಾದವಾರ್ಯರು:- ಭಾಗವತಕ್ಕೆ ಭಾಗವತ ಪ್ರಕಾಶಿಕಾ, ನ್ಯಾಯಸುಧಾ ಟಿಪ್ಪಣಿ,ಇನ್ನು ಹಲವಾರು ಗ್ರಂಥಗಳಿಗೆ ಟಿಪ್ಪಣಿ.
2)ಶ್ರೀನಿವಾಸ ತೀರ್ಥರು:- ಸುಧಾ,ನ್ಯಾಯಾಮೃತಕ್ಕೆ ಟಿಪ್ಪಣಿ.ಇನ್ನು ಹಲವಾರು ಗ್ರಂಥಗಳಿಗೆ ಟಿಪ್ಪಣಿ ಬರೆದ ಮಹಾನುಭಾವರು ಇವರೆಲ್ಲರು. ಇಂತಹ ನೂರಾರು ಶಿಷ್ಯ ಪ್ರಶಿಷ್ಯರನ್ನು ಮಾಧ್ವ ಸಮಾಜಕ್ಕೆ ಕೊಟ್ಟು ಅನುಗ್ರಹಿಸಿದವರು ರಘುತ್ತಮರು.ಇದೆಲ್ಲದಕ್ಕೂ ಕಾರಣವಾದದ್ದು"नाल्पस्य तपस:फलं" ಎಂದು ಹೇಳಿದಂತೆ ಅವರ ತಪಸ್ಸು ಹಾಗು ಜ್ಞಾನದ ಭಂಡಾರವೇ ಕಾರಣವಾಗಿದೆ.ಅಂತಹ ಮಹಾನುಭಾವರು ತಮ್ಮ ಗ್ರಂಥಗಳನ್ನು ಓದುವಂತೆ ನಮ್ಮ ಮೇಲೂ ಅನುಗ್ರಹಿಸಬೇಕೆಂದು ಪ್ರಾರ್ಥಿಸೋಣ. 🙏🙏🙏
🙏
*Madhwa maahiti*
[04/01, 7:35 PM] +91 89713 62063: 🌺🌺🌺🌺🌺🌺🌺
*#Sri #Raghuttama #Tirtharu*
*#ಶ್ರೀ #ರಘೂತ್ತಮತೀರ್ಥರು*
🌺🌺🌺🌺🌺🌺🌺
ಭಾವಬೋಧಕೃತಂ ಸೇವೇ ರಘೂತ್ತಮಮಹಾಗುರುಂ |ಯಚ್ಚಿಷ್ಯಶಿಷ್ಯಶಿಷ್ಯಾದ್ಯಾಷ್ಟಪ್ಪಣ್ಣಾಚಾರ್ಯ ಸಂಜ್ಞಿತಾ:||
भावबोधकृतं सेवे रघूत्तममहागुरुं । यच्चिष्यशिष्यशिष्याद्याष्टप्पण्णाचार्य संज्ञिता:॥
ಯಾರ ಶಿಷ್ಯ, ಪ್ರಶಿಷ್ಯರೇ ಮೊದಲಾದವರೂ ಕೂಡ ಟಿಪ್ಪಣ್ಣಾ ಚಾರ್ಯರೆಂದು ಪ್ರಸಿದ್ಧರಾಗಿದ್ದಾರೋ, ಅಂತಹ ಮಹಾ ಮಹಿಮರಾದ “ಭಾವಭೋಧ” ಟಿಪ್ಪಣಿಗಳನ್ನು ರಚಿಸಿರುವ ಶ್ರೀ ರಘೂತ್ತಮತೀರ್ಥರನ್ನು ಆಶ್ರಯಿಸುವೆ
ಪ್ರಣಮತ್ಕಾಮಧೇನೂಂ ಚ ಭತಸುರತರೂಪಮಂ |
ಶ್ರೀ ಭಾವಬೋಧಕೃತ್ಪಾದ ಚಿಂತಾಮಣಿಮುಪಾಸ್ಮಹೇ |
ನಮಿಸುವವರಿಗೆ ಕಾಮಧೇನುಗಳಾದ, ಭಜಿಸುವವರಿಗೆ ಕಲ್ಪವೃಕ್ಷರಂತಿರುವ, ಆಚಾರ್ಯರ ಭಾವನೆಗಳನ್ನು ತಿಳಿದು ವಿವರವಾದ ಟಿಪ್ಪಣಿಗಳನ್ನು ರಚಿಸಿದ, ಚಿಂತಾಮಣಿಯಂತಿರುವ, ರಘೋತ್ತಮತೀರ್ಥರನ್ನು ಉಪಾಸಿಸುವೆ.
ಶ್ರೀ ರಘೂತ್ತಮ ತೀರ್ಥರು ದಕ್ಷಿಣ ಪಿನಾಕಿನಿ ನದಿಯ ದಡದಲ್ಲಿರುವ ತಿರುವಣ್ಣಾಮಲೈನಿಂದ 36 ಕಿಲೋಮೀಟರ್ ದೂರದಲ್ಲಿರುವ ಒಂದು ಸಣ್ಣ ಹಳ್ಳಿ ಮಾನಂಪೂಂಡಿ (ತಿರುಕೋಯಿಲೂರು ಸಮೀಪ) ನೆಲೆಸಿದ್ದಾರೆ. ಈ ಕ್ಷೇತ್ರವನ್ನು “ಪಂಚ ಕೃಷ್ಣಾರಣ್ಯ ಕ್ಷೇತ್ರ”ವೆಂದೂ ಕರೆಯುತ್ತಾರೆ. ಈ ಕ್ಷೇತ್ರದಲ್ಲಿ ಗಾಲವ ಋಷಿಗಳು ಕೆಲವು ಕಾಲ ತಂಗಿದ್ದರು ಎನ್ನಲಾಗಿದೆ.
ಒಮ್ಮೆ ಶ್ರೀ ರಘುವರ್ಯತೀರ್ಥರು ಸಂಚಾರದಲ್ಲಿದ್ದಾಗ, ಸ್ವರ್ಣವಾಟೀ ಎಂಬ ಗ್ರಾಮಕ್ಕೆ ಬಂದಾಗ ಒಬ್ಬ ದಂಪತಿಗಳು ತಮಗೆ ಭಿಕ್ಷೆ ನೀಡಲು ಆಹ್ವಾನಿಸಿದಾಗ ಶ್ರೀ ರಘುವರ್ಯರು ಅವರನ್ನು “ಮುಂದೆ ಜನಿಸುವ ನಿಮ್ಮ ಮಗನನ್ನು ನಮ್ಮ ಮಠಕ್ಕೆ ನೀಡಬೇಕು” ಎಂದು ಕೇಳಿದಾಗ ಮಕ್ಕಳಿಲ್ಲದ ಆ ದಂಪತಿಗಳು ಒಪ್ಪುತ್ತಾರೆ. ಅದರಂತೆ ಆ ದಂಪತಿಗಳು ಹುಟ್ಟಿದ ಗಂಡು ಮಗುವನ್ನು ಶ್ರೀ ಮಠಕ್ಕೆ ಒಪ್ಪಿಸುತ್ತಾರೆ. ಶ್ರೀ ಮಠದ ಅಭಿಷೇಕದ ಹಾಲಿನಿಂದಲೇ ಬೆಳೆದ ಮಗುವಿಗೆ ರಾಮಾಚಾರ್ಯನೆಂಬ ಹೆಸರನ್ನಿಟ್ಟು ತಮ್ಮ ಶ್ರೀ ಮಠದಲ್ಲೇ ಅವನ ವಿದ್ಯಾಭ್ಯಾಸಕ್ಕೆ ವ್ಯವಸ್ಥೆ ಮಾಡುತ್ತಾರೆ.
ಕ್ರಿಸ್ತಶಕ ೧೫೫೬ರಲ್ಲಿ ಪರಮಪೂಜ್ಯ ಶ್ರೀ ರಘುವರ್ಯತೀರ್ಥ ರಿಂದ ತಮ್ಮ ಎಂಟನೇ ವಯಸ್ಸಿನಲ್ಲೇ ಆಶ್ರಮ ಸ್ವೀಕರಿಸಿ ಸುಮಾರು ೩೮ ವರ್ಷಕಾಲ ಪೀಠಾಧಿಪತ್ಯದಲ್ಲಿದ್ದು ಶ್ರೀ ರಘುಪತಿ ತೀರ್ಥರು, ಶ್ರೀ ವೇದವ್ಯಾಸತೀರ್ಥರು, ಶ್ರೀ ವೇದೇಶ ತೀರ್ಥರು, ತರಂಗಿಣಿ ರಾಮಾಚಾರ್ಯರು, ರೊಟ್ಟಿ ವೆಂಕಟಾದ್ರಿಭಟ್ಟರು, ಶ್ರೀ ಆನಂದ ಭಟ್ಟಾರಕರು ಮುಂತಾದ ಹಲವಾರು ವಿದ್ವನ್ಮಣಿಗಳನ್ನು ಮಧ್ವ ಶಾಸ್ತ್ರಕ್ಕೆ ನೀಡಿದ ಮಹಾನುಭಾವರೇ “ಭಾವಭೋಧಕಾರ”ರೆಂದು ಪ್ರಖ್ಯಾತರಾದ ರಘೂತ್ತಮತೀರ್ಥರು.
ಶ್ರೀ ರಘೋತ್ತಮರ ವೃಂದಾವನ ಸಾನ್ನಿಧ್ಯ – ಪೂರ್ವದಿಕ್ಕಿಗೆ ಫಲಭರಿತವಾದ ಧಾತ್ರಿಗಿಡವಿದೆ, ದಕ್ಷಿಣದಲ್ಲಿ ಜುಳು ಝುಳು ಹರಿಯುವ ಪಿನಾಕಿನಿ ನದೀತೀರದಲ್ಲಿ ತ್ರಿವಿಕ್ರಮದೇವರ ದೇವಸ್ಥಾನವಿದೆ. ಪಶ್ಚಿಮದಲ್ಲಿ ಬ್ರಹ್ಮ ವಿಷ್ಣು ಮಹೇಶ್ವರರ ಸಾನ್ನಿಧ್ಯವಿರುವ ಅಶ್ವತ್ತವೃಕ್ಷವಿದ್ದರೆ, ಉತ್ತರದಲ್ಲಿ ಹುಣಿಸೇಮರವಿದೆ.
ನದಿ – ದಕ್ಷಿಣಪಿನಾಕಿನಿ
ಸಮಕಾಲೀನರು – ಶ್ರೀವಿಜಯೀಂದ್ರರು, ಶ್ರೀವಾದಿರಾಜರು
ಯದ್ವೃಂದಾವನಪೂರ್ವತ: ಫಲವತೀ ಧಾತ್ರೀ ಜಗತ್ಪಾವನೀ |
ಯಾಂಯ್ಯಾಯಾಂ ತು ಪಿನಾಕಿನೀ ಚಲದಲೋ ಮೂರ್ತಿತ್ರಯಾಧಿಷ್ಟಿತ: |
ವಾರುಣ್ಯಾಂ ದಿಶಿ ವಾಮತ: ಪ್ರತಿಕೃತೌ ಛಾಯಾ ಕೃತಾ ತಿಂತ್ರಿಣೀ |
ತದ್ವೃಂದಾವನಮಧ್ಯಗೋ ಗುರುವರೋ ಭೂಯನ: ಶ್ರೇಯಸೇ |
ನೋಡಿದೆ ಗುರುಗಳ ನೋಡಿದೆ ||ಪ||
ನೋಡಿದೆನು ಗುರುಗಳ ಪದಾಬ್ಜವ
ಪಾಡಿದೆನು ಸನ್ಮಹಿಮೆಗಳ ನಾ
ಬೇಡಿದೆನು ಮನದನಿಯೆ ವರಗಳ
ಈಡು ಇಲ್ಲದೆ ಕೊಡುವ ಪ್ರಭುಗಳ|| ಅ.ಪ.||
ಪಂಚಕೃಷ್ಣಾರಣ್ಯಕ್ಷೇತ್ರ ಪಿನಾಕಿನಿಯ ತೀರದಲ್ಲಿ ನಿಂತು |
ಮಿಂಚುತಿಹ ಕಾಷಯದಂಡ ಕಮಂಡಲವ ಧರಿಸುತ್ತ ಧರೆಯೊಳು |
ಪನ್ಚಬಾನನ ಪಿತನ ಗುನಗಲ ಅನ್ಚೆಯದೆ ಪೊಗಲುತ್ತ ಹರುಶದಿ |
ಸಂಚಿತಾಗಾಮಿಗಳ ಕಳೆದು ಪ್ರಪಂಚದಲಿ ಮೆರೆವಂಥ ಗುರುಗಳ | | ೧ ||
ಆಲವಬೊಧರ ಭಾಷ್ಯಟೀಕಾ ಭಾವವನು ಸುಜನರಿಗೆ ಬೋಧಿಸಿ
ಕಲುಶಮತಗಿರಿ ಸಮುದಯಂಗಳ ಕುಲಿಶದಂದದಿ ಖಂಡಿಸುತಲಿ |
ಮೂಲರಾಮ ದಿಗ್ವಿಜಯರಾಮರ ಪದಕಮಲಕೆ ಭೃಂಗನೆನಿಸುತ
ಶೀಲಭಕ್ತಿ ವಿರಕ್ತಿಮತಿಗಳ ಪಾಲಿಸುತ ಯತಿಮೌಲಿರತುನರ || ೨ ||
ಕಾಮಧೇನು ಸುಕಲ್ಪತರು ಚಿಂತಾಮನಿಯವೊಲ್ ಕಾಮಿತಾರ್ಥವ |
ಪ್ರೇಮದಲಿ ಬೀರುತ್ತ ಅಧ್ಯಾತ್ಮದಿ ತಾಪತ್ರಯ ಕಳೆಯುವ |
ಸ್ವಾಮಿ ಶ್ರೀಹರಿ ಶ್ರೀದವಿಠಲನ ದಾಸಾಗ್ರಣಿಯೆನಿಸಿ ಮೆರೆವರ
ನೇಮದಿಂದಲಿ ಶ್ರೀ ರಘೂತ್ತಮ ಮೌನಿವರ್ಯರ ಕರುಣ ಬಯಸುತ || ೩ ||
ರಘೂತ್ತಮತೀರ್ಥರ ಗ್ರಂಥಗಳು –
ಶ್ರೀ ರಘೋತ್ತಮತೀರ್ಥರ “ಭಾವಬೋಧ” ಗ್ರಂಥಗಳು ಆಚಾರ್ಯ ಮಧ್ವರ ಮತ್ತು ಟೀಕಾಚಾರ್ಯರ ಭಾವವನ್ನು ಸುಲಭವಾಗಿ ಅರ್ಥವಾಗುವಂತೆ ಮಾಡಿದ್ದಾರೆ.
ತತ್ವಪ್ರಕಾಶಿಕಾ ಭಾವಬೋಧ
ಬೃಹದಾರಣ್ಯಕೋಪನಿಶದ್ ಭಾವಬೋಧ
ವಿಷ್ಣು ತತ್ವ ನಿರ್ಣಯ ಟೀಕಾ ಭಾವಬೋಧ
ಗೀತಾ ಭಾಷ್ಯ ಪ್ರಮೇಯ ದೀಪಿಕ ಭಾವಬೋಧ
ಸನ್ಯಾಯವಿವೃತ್ತಿ ಭಾವಬೋಧ
ಅನುವ್ಯಾಖ್ಯಾನ ನ್ಯಾಯಾಮಾಲ ಬ್ರಹ್ಮಸೂತ್ರ ಸಂಬಂಧ ಪ್ರದೀಪ
ವಿವರಣೋದ್ದಾರ
ತಾರತಮ್ಯ ಸ್ತೋತ್ರಂ
ತಿಥಿತ್ರಯ ವಿನಿರ್ಣಯ
ಶ್ರವಣ ದ್ವಾದಶಿ ನಿರ್ಣಯ
sumadhwaseva
Post a Comment